Tag: Film Actress

  • ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ರಣಬೀರ್ ಕಪೂರ್, ಆಲಿಯಾ ಭಟ್‌ಗೆ ಆಹ್ವಾನ

    ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ರಣಬೀರ್ ಕಪೂರ್, ಆಲಿಯಾ ಭಟ್‌ಗೆ ಆಹ್ವಾನ

    ಅಯೋಧ್ಯೆ: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ (Ram Lalla Pran Pratishtha) ಅಯೋಧ್ಯೆ ನಗರ ಬಹುತೇಕ ಸಿಂಗಾರಗೊಂಡಿದೆ. ದೇಶದ ಮೂಲೆ ಮೂಲೆಯಿಂದ ಗಣ್ಯಾತಿಗಣ್ಯರ ಆಗಮನ ಫಿಕ್ಸ್‌ ಆಗಿದ್ದು, ಅಮಂತ್ರಣ ಪತ್ರಿಕೆ ಹಂಚಿಕೆ ಸಹ ನಡೆಯುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಈ ನಡುವೆ ಬಾಲಿವುಡ್‌ ಖ್ಯಾತ ನಟರು ಹಾಗೂ ದಂಪತಿಯೂ ಆಗಿರುವ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅವರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಜ.22ರಂದು ನಡೆಯುವ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ- ತಯಾರಾಗುತ್ತೆ 7 ಸಾವಿರ ಕೆ.ಜಿಯ ರಾಮ ಹಲ್ವಾ

    4000 ಸಂತರಿಗೆ ಆಹ್ವಾನ:
    ಜನವರಿ 22 ರಂದು ಪ್ರಾಣ ಪ್ರತಿಷ್ಠೆಗೆ 4000 ಸಂತರಿಗೆ ಆಹ್ವಾನಿಸಲಾಗಿದ್ದು, ಭಾರತದ ಎಲ್ಲಾ ಸಂಪ್ರದಾಯಗಳ ಸಂತರನ್ನು ಆಹ್ವಾನಿಸಲಾಗಿದೆ. ಅಂಡಮಾನ್ ನಿಕೋಬಾರ್ ಕರಾವಳಿಯಲ್ಲಿ ವಾಸಿಸುವ ಧಾರ್ಮಿಕ ಮುಖಂಡರು, ಜಾರ್ಖಂಡ್‌ನ ಬನವಾಸಿ ಪ್ರದೇಶದ ಧಾರ್ಮಿಕ ಮುಖಂಡರು ಮತ್ತು 125 ಸಂತ ಸಂಪ್ರದಾಯಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ.

    ಪ್ರಾಣ ತ್ಯಾಗ ಮಾಡಿದ ಕುಟುಂಬಗಳಿಗೆ ಆಹ್ವಾನ:
    ರಾಮ ಮಂದಿರ ಆಂದೋಲನದಲ್ಲಿ ಪ್ರಾಣ ತ್ಯಾಗ ಮಾಡಿದ ರಾಮಭಕ್ತನ ಕುಟುಂಬದ ಸದಸ್ಯರು, ಕೈಗಾರಿಕಾ ಲೋಕದ ಮುಖ್ಯಸ್ಥರು, ತಿರುಪತಿ, ವೈಷ್ಣೋದೇವಿ, ಕಾಶಿ ವಿಶ್ವನಾಥ ದೇಗುಲ ಪ್ರಮುಖರನ್ನು ಪ್ರಾಣ ಪ್ರತಿಷ್ಠೆಗೆ ಆಹ್ವಾನಿಸಲಾಗಿದೆ. 25 ಆರ್‌ಎಸ್‌ಎಸ್ ಕಾರ್ಯಕರ್ತರು, 100 ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಸಿಆರ್‌ಪಿಎಫ್ ಅಧಿಕಾರಿಗಳು ಮತ್ತು ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ಈ ದಿನಕ್ಕಾಗಿ ನಾವು ತಪಸ್ಸು ಮಾಡಿದ್ದೆವು: ರಾಮಮಂದಿರ ಉದ್ಘಾಟನೆ ಬಗ್ಗೆ ಮುಸ್ಲಿಂ ಕರಸೇವಕ ಮಾತು

    ಟಾಟಾ, ಅಂಬಾನಿ, ಅದಾನಿಗೂ ಆಹ್ವಾನ:
    ಲಾರ್ಸೆನ್ ಟೂಬ್ರೊ ಮುಖ್ಯಸ್ಥರ ಜೊತೆ, ರತನ್ ಟಾಟಾ ಅವರ ಉತ್ತರಾಧಿಕಾರಿ ಚಂದ್ರಶೇಖರನ್, ಅಂಬಾನಿ ಮತ್ತು ಅದಾನಿಗೂ ಆಹ್ವಾನ. ಇದನ್ನೂ ಓದಿ: ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?

    ಸಿನಿಮಾ, ಕ್ರೀಡೆಯ ಗಣ್ಯರು
    ತಮಿಳು ಚಲನಚಿತ್ರ ನಟ ರಜನಿಕಾಂತ್, ಬ್ಯಾಡ್ಮಿಂಟನ್ ಆಟಗಾರ ಗೋಪಿಚಂದ್, ಗಾಯಕ ಗುರುದಾಸ್ ಮನ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್, ಅರುಣ್ ಗೋವಿಲ್, ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್, ಮಹಾಭಾರತದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಿದ ನಿತೀಶ್ ಭಾರದ್ವಾಜ್, ಚಲನಚಿತ್ರ ಸೆನ್ಸಾರ್ ಮಂಡಳಿಯ ಪ್ರಸೂನ್ ಜೋಶಿಯನ್ನು ಆಹ್ವಾನಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ – AI ಕಣ್ಗಾವಲು ಸಾಧ್ಯತೆ, 11 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

  • ಕಾವೇರಿ ಹೋರಾಟಕ್ಕೆ ಬಂದಿಲ್ಲ ಅಂದ್ರೆ ಸ್ವಾಭಿಮಾನಿಯಲ್ಲ ಅಂತಲ್ಲ: ನಟ ಜಗ್ಗೇಶ್

    ಕಾವೇರಿ ಹೋರಾಟಕ್ಕೆ ಬಂದಿಲ್ಲ ಅಂದ್ರೆ ಸ್ವಾಭಿಮಾನಿಯಲ್ಲ ಅಂತಲ್ಲ: ನಟ ಜಗ್ಗೇಶ್

    ಬೆಂಗಳೂರು: ಸೆಪ್ಟೆಂಬರ್‌ 29ರಂದು ಕರ್ನಾಟಕ ಬಂದ್‌ ಭಾಗವಾಗಿ ನಡೆದ ಕಾವೇರಿ ಹೋರಾಟ (Cauvery Protest) ಪ್ರತಿಭಟನಾ ಸಭೆಯಲ್ಲಿ ಗೈರಾಗಿದ್ದ ಬಿಜೆಪಿ ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್‌ (Jaggesh) ಅನಾರೋಗ್ಯದ ನಡುವೆಯೂ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

    ಇಂದು (ಶನಿವಾರ) ದಿಢೀರ್‌ ಸುದ್ದಿಗೋಷ್ಠಿ ನಡೆಸಿದ ಜಗ್ಗೇಶ್‌ ಅವರು, ಕಾವೇರಿ ಹೋರಾಟದ ಪ್ರತಿಭಟನಾ ಸಭೆಗೆ ಬಾರದೇ ಇದ್ದಿದ್ದಕ್ಕೆ ಕ್ಷಮೆ ಇರಲಿ. ಕಾವೇರಿ ಹೋರಾಟಕ್ಕೆ ಬಂದಿಲ್ಲ ಅಂದ್ರೆ ಸ್ವಾಭಿಮಾನಿಯಲ್ಲ ಅಂತಲ್ಲ. ಮೊದಲು ಅದರ ಇತಿಹಾಸ ಎಲ್ಲರೂ ಅರಿಯಬೇಕು ಎಂದು ಹೇಳಿದರು. ಇದನ್ನೂ ಓದಿ: Karnataka Bandh: ಎಲ್ಲ ರಾಜ್ಯದ ರೈತರೂ ಒಂದೇ, ಸರಕಾರಗಳು ಕೂತು ಮಾತನಾಡಲಿ : ನಟ ಶಿವಣ್ಣ

    ಮಹಾರಾಜರು ಆಗ ನದಿಗೆ ಅಡ್ಡಲಾಗಿ ಚೆಕ್ ಪಾಯಿಂಟ್‌ ನಿರ್ಮಿಸಿದ್ದರು. ಕೊನೆಗೆ ಡ್ಯಾಮ್‌ ಕಟ್ಟಲು ಬಂದಾಗ ತಡೆಯಲು ಬಂದಿದ್ದರು. ಮೆಟ್ಟೂರು ಡ್ಯಾಂ 6 ವರ್ಷದಲ್ಲಿ ಕಟ್ಟಿಕೊಂಡರು. ಆದ್ರೆ ನಮಗೆ 20 ವರ್ಷ ಬೇಕಾಯಿತು. ಕಾವೇರಿ ಹುಟ್ಟೋದು ಕರ್ನಾಟಕದಲ್ಲೇ, ಹರಿಯೋದು ಕರ್ನಾಟಕದಲ್ಲೇ, ಆದ್ರೆ ಬಳಕೆ ಮಾತ್ರ ಅವರದ್ದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಒಂದು ಹನಿ ನೀರು ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ- ಪೂಜಾ ಗಾಂಧಿ

    ನಟ ಜಗ್ಗೇಶ್ ಅವರು CT ಸ್ಕ್ಯಾನ್ ಮಾಡಿಸುತ್ತಿದ್ದ ಕೆಲವು ಚಿತ್ರಗಳನ್ನ ನಿನ್ನೆ (ಶುಕ್ರವಾರ) ಟ್ಟಿಟ್ಟರ್‌ನಲ್ಲಿ ಹಂಚಿಕೊಂಡು ತಮ್ಮ ಆರೋಗ್ಯ ಸ್ಥಿತಿ (Jaggesh Health Condition) ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇತ್ತೀಚೆಗೆ ಕೇದಾರ್​ನಾಥ-ಬದ್ರಿನಾಥ​ ಯಾತ್ರೆಗೆ ಜಗ್ಗೇಶ್ ತೆರಳಿದ್ದರು. ಅಲ್ಲಿ ಬೆಟ್ಟ ಹತ್ತಿ ಇಳಿದ ಕಾರಣ ಹಾಗೂ ಸತತ ಪ್ರಯಾಣ, ನಡೆದಾಟದಿಂದ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಜಗ್ಗೇಶ್ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ಸಿಟಿಸ್ಕ್ಯಾನ್​ಗೆ ಒಳಗಾಗಿದ್ದರು. ಇದನ್ನೂ ಓದಿ: ಈವರೆಗೂ ಪರಿಹಾರ ಸಿಗದೇ ಇರೋ ಏಕೈಕ ಸಮಸ್ಯೆ ಕಾವೇರಿಯದ್ದು: ನಟ ಉಪೇಂದ್ರ

    ತಾವು ಸಿಟಿಸ್ಕ್ಯಾನ್​ಗೆ ಒಳಗಾಗುತ್ತಿರುವ ಚಿತ್ರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದ ಜಗ್ಗೇಶ್, L4L5 ಕಂಪ್ರೆಷನ್ ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಲಿಲ್ಲ. 2 ವಾರ ಫಿಸಿಯೋ ಚಿಕಿತ್ಸೆ ಹಾಗೂ ಬೆಡ್​ರೆಸ್ಟ್ ಕಡ್ಡಾಯ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ನಟ ಬರೆದುಕೊಂಡಿದ್ದರು. ಇದನ್ನೂ ಓದಿ: ನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡುವುದು ಹೇಗೆ- ನಟ ಶ್ರೀನಾಥ್

    ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಜಗ್ಗೇಶ್‌ ಅವರು ಶುಕ್ರವಾರ ದೆಹಲಿಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಶುಕ್ರವಾರ ತಡರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಣಕ್ಕಾಗಿ ನಡುರಸ್ತೆಯಲ್ಲಿ ಹಲ್ಲೆ ಮಾಡಿಸಿ, ಕಾರು-ಹಣ ದೋಚಿದ ಚಿತ್ರ ನಟಿ

    ಹಣಕ್ಕಾಗಿ ನಡುರಸ್ತೆಯಲ್ಲಿ ಹಲ್ಲೆ ಮಾಡಿಸಿ, ಕಾರು-ಹಣ ದೋಚಿದ ಚಿತ್ರ ನಟಿ

    ಬೆಂಗಳೂರು: ಮಹಿಳಾ ಸಂಘದ ಹಣಕ್ಕಾಗಿ ನಟಿಯೊಬ್ಬರು ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿಸಿ, ಕಾರು ಹಾಗೂ ಹಣವನ್ನು ಸುಲಿಗೆ ಮಾಡಿದ ಘಟನೆ ಬಸವೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ರಘು ಹಲ್ಲೆಗೊಳಗಾದ ಕಾರ್ಯಕರ್ತ. ಚಿತ್ರನಟಿ ಸುಷ್ಮಿತಾ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಆದಿಶಕ್ತಿ ಮಹಿಳಾ ಸಂಘವನ್ನು ಉದ್ಘಾಟನೆ ಮಾಡಿದ್ದರು. ಸಂಘದ ಹೆಸರಿನಲ್ಲಿ ರಾಜ್ಯಾದ್ಯಂತ ಶಾಖೆಗಳನ್ನು ತೆರೆಯಲು ಹಣವನ್ನು ಸಂಗ್ರಹ ಮಾಡುತ್ತಿದ್ದರು. ರಘು ತಾನೊಬ್ಬನೇ ಹಣ ಮಾಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿ ಕಳೆದ ಸೆಪ್ಟೆಂಬರ್ 2ನೇ ತಾರೀಖಿನಂದು ಬಸವೇಶ್ವರನಗರದ ಮುಖ್ಯರಸ್ತೆಯಲ್ಲಿ ರಘುವಿನ ಕಾರನ್ನು ಅಡ್ಡಗಡ್ಡಿ ಕಾರು, ಹಣ ಸೇರಿದಂತೆ ಲ್ಯಾಪ್‍ಟಾಪ್ ದೋಚಿಕೊಂಡು ಹೋಗಿದ್ದಲ್ಲದೇ ಪ್ರಾಣ ಬೆದರಿಕೆಯನ್ನು ಹಾಕಿದ್ದರು.

    ಹಲ್ಲೆಗೊಳಗಾದ ರಘು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಚಿತ್ರನಟಿ ಸುಷ್ಮಿತಾ ಸೇರಿದಂತೆ ಒಟ್ಟು 6 ಮಂದಿಯ ವಿರುದ್ಧ ದೂರನ್ನು ನೀಡಿದ್ದಾರೆ. ಸಂಘದ ಎಲ್ಲಾ ಹೊಣೆಯನ್ನು ನಾನೊಬ್ಬನೇ ಹೊತ್ತಿಕೊಳ್ಳಲು ಸಾಧ್ಯವಿಲ್ಲ, ಸಂಘಕ್ಕೆ ಬರುತ್ತಿದ್ದ ಹಣದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೆ. ಆದರೆ ಏಕಾಏಕಿ ಸುಷ್ಮಿತಾ ತಾವು ನೀಡಿದ್ದ ಹಣವನ್ನು ಹಿಂದಿರುಗಿಸು, ಇದರಲ್ಲಿ ನೀನೊಬ್ಬನೇ ಹಣ ಮಾಡಿಕೊಳ್ಳುತ್ತಿದ್ದೀಯಾ ಎಂದು ಆರೋಪಿಸಿ ನನ್ನ ಮೇಲೆ ಹಲ್ಲೆ ನಡೆಸಿ ಕಾರು, ಹಣ ಹಾಗೂ ಲ್ಯಾಪ್‍ಟಾಪ್ ಸೇರಿದಂತೆ ಇತರೆ ವಸ್ತುಗಳನ್ನು ದೋಚಿದ್ದಾರೆ. ನನಗೆ ಜೀವಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv