Tag: film actor

  • ಮೈಸೂರು | ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ ನಟ ಪ್ರಭುದೇವ

    ಮೈಸೂರು | ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ ನಟ ಪ್ರಭುದೇವ

    ಮೈಸೂರು: ಬಹುಭಾಷಾ ನಟ ಪ್ರಭುದೇವ (Prabhu Deva) ಕೊನೆಗೂ ತಾಯಿ ಆಸೆಯಂತೆ ಹುಟ್ಟೂರಿನಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಮಾಡಿಸಿದ್ದಾರೆ. 25 ಲಕ್ಷ ರೂ. ವೆಚ್ಚದಲ್ಲಿ ಮಲೆ ಮಹದೇಶ್ವರ ದೇವಸ್ಥಾನದ (Mahadeshwara Temple) ಜೀರ್ಣೋದ್ಧಾರ ಮಾಡಿಸಿದ್ದಾರೆ.

    ಭಾರತದ ಮೈಕೆಲ್​ ಜಾಕ್ಸನ್​ ಎಂದೇ ಪ್ರಸಿದ್ಧಿ ಪಡೆದಿರುವ ಡ್ಯಾನ್ಸ್​ ಮಾಸ್ಟರ್​ ಪ್ರಭುದೇವ ಅವರು ಮೂಲತಃ ಮೈಸೂರು (Mysuru) ಜಿಲ್ಲೆಯ ದೂರ ಗ್ರಾಮದವರು. ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ ಹಲವು ರೀಲ್ಸ್‌ ಸ್ಟಾರ್‌ಗಳಿಂದ ಕ್ಷಮೆಯಾಚನೆ

    ನಂಜನಗೂಡು ತಾಲೂಕಿನ ಕೆಂಬಾಳು ಗ್ರಾಮದಲ್ಲಿ ಪ್ರಭುದೇವ ಅವರ ತಾಯಿ ಮಹದೇವಮ್ಮ ಅವರು ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಪಕ್ಕದಲ್ಲೇ ಇದ್ದ ಮಲೆ ಮಹದೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿತ್ತು. ಚೋಳರ ಕಾಲದ ದೇವಸ್ಥಾನ ಅತ್ಯಂತ ಪ್ರಖ್ಯಾತಿ ಪಡೆದಿತ್ತು. ಹಾಗಾಗಿ ಗ್ರಾಮಸ್ಥರು ಶಿಥಿಲಾವಸ್ಥೆಯಲ್ಲಿದ್ದ ಅದೇ ದೇವಾಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದರು. ಸದ್ಯ ತನ್ನ ತಾಯಿ ಆಸೆಯಂತೆ, ಗ್ರಾಮಸ್ಥರ ಬಯಕೆಯಂತೆ ನಟ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದಾರೆ.

    ಕಳೆದ ಎರಡು ದಿನಗಳಿಂದ ದೇವಸ್ಥಾನದಲ್ಲೇ ಉಳಿದುಕೊಂಡಿರುವ ನಟ, ಪತ್ನಿ ಹಿಮಾನಿ ಪ್ರಭುದೇವ ಜೊತೆಗೂಡಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಕಳಶ ಪೂಜೆ, ಹೋಮ, ಹವನ, ನವಗ್ರಹ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ಇದನ್ನೂ ಓದಿ: ಅಜಿತ್ ಸಿನಿಮಾ ವಿರುದ್ಧ ಇಳಯರಾಜ ಕಾನೂನು ಸಮರ- 5 ಕೋಟಿ ಪರಿಹಾರ ಕೋರಿ ನೋಟಿಸ್

    ಅಲ್ಲದೇ ಜೀರ್ಣೋದ್ಧಾರ ಕಾರ್ಯನಿಮಿತ್ತ ಇಡೀ ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನೂ ಸಹ ನಟ ಮಾಡಿದ್ದಾರೆ. ಹುಟ್ಟೂರು ಮರೆಯದ ನಟನ ಈ ಕಾರ್ಯಕ್ಕೆ ಸಾರ್ವಜನಿಕರು ಹೃದಯತುಂಬಿ ಹಾರೈಸಿದ್ದಾರೆ. ಇದನ್ನೂ ಓದಿ: ‘ಕುಬೇರ’ ಚಿತ್ರದ ಪೋಸ್ಟರ್ ಔಟ್- ಧನುಷ್ ಸಿನಿಮಾ ಬಗ್ಗೆ ಸಿಕ್ತು ಅಪ್‌ಡೇಟ್

  • ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತಿರಾ? – ಅಭಿಮಾನಿಗಳಿಗೆ ಬುದ್ಧಿ ಹೇಳಿದ ಶಿವಣ್ಣ

    ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತಿರಾ? – ಅಭಿಮಾನಿಗಳಿಗೆ ಬುದ್ಧಿ ಹೇಳಿದ ಶಿವಣ್ಣ

    ಮೈಸೂರು: ನಗರದಲ್ಲಿ ಜ್ವಾಲಾಮುಖಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ (Rajkumar Fans Association) ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ನಟ ಡಾ.ಶಿವರಾಜ್ ಕುಮಾರ್ (Shivarajkumar) 2023ರ ನೂತನ ವರ್ಷದ ಕ್ಯಾಲೆಂಡರ್ (Calendar 2023) ಬಿಡುಗಡೆಗೊಳಿಸಿದರು.

    ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಬಾಸ್ ಒಬ್ಬರೇ ಅದು ದೇವರು. ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತೀರಾ? ಎಂದು ಹೇಳಿದ್ದಾರೆ. ಇದನ್ನೂ ಓದಿ: `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್ ಇರ್ತಾನೆ. ಅಲ್ಲಿಗೆ ಅವನೇ ಬಾಸ್ ಆಗಿರ್ತಾನೆ. ಅದು ಬಿಟ್ಟು ನಾನೊಬ್ಬ ಬಾಸ್, ಇನ್ನೊಬ್ಬ ಬಾಸ್ ಅನ್ನೋದಲ್ಲ ಎಂದು ಅಭಿಮಾನಿಗಳಿಗೆ ತಿಳುವಳಿಕೆ ನೀಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    ಕಾರ್ಯಕ್ರಮ ಆಯೋಜಕರಾಗಿದ್ದ ಮೈಸೂರು ರಿಫ್ರೆಶ್‌ಮೆಂಟ್ ಮಾಲೀಕ ವಿಶ್ವ ಅವರನ್ನು ನಮ್ಮ ಬಾಸ್ ಅಂದ ಯುವಕನಿಗೆ ಸಲಹೆ ನೀಡುತ್ತಾ, ಅಭಿಮಾನಿಗಳಿಗೂ ಬುದ್ದಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೃದಯಾಘಾತದಿಂದ ಹಿರಿಯ ನಟಿ ತಬಸ್ಸುಮ್ ನಿಧನ

    ಹೃದಯಾಘಾತದಿಂದ ಹಿರಿಯ ನಟಿ ತಬಸ್ಸುಮ್ ನಿಧನ

    ಮುಂಬೈ: ಹಿರಿಯ ನಟಿ ತಬಸ್ಸುಮ್ (Tabassum) (78) ಅವರಿಂದು ಹೃದಯಾಘಾತದಿಂದ (HeartAttack) ನಿಧನರಾಗಿದ್ದಾರೆ.

    ಬಾಲ ಕಲಾವಿದೆಯಾಗಿ ಮತ್ತು ಜನಪ್ರಿಯ ದೂರದರ್ಶನ ಟಾಕ್ ಶೋ (Tv TalkShow) ನಿರೂಪಕಿಯಾಗಿ ಹೆಸರುವಾಸಿಯಾಗಿದ್ದ ತಬಸ್ಸುಮ್ ಹೃದಯಾಘಾತದಿಂದ (HeartAttack) ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ಹೋಶಾಂಗ್ ಗೋವಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ತೆರೆಯ ಮೇಲೆ ತರಲು ಪ್ಲ್ಯಾನ್ – ಸಿನಿಮಾ ನಿರ್ಮಾಣ ಘೋಷಿಸಿದ ನಿರ್ದೇಶಕ ಮನೀಶ್ ಸಿಂಗ್

    ಕೆಲ ದಿನಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಗ್ಯಾಸ್ಟ್ರೋ ಸಮಸ್ಯೆಯಿಂದ (ಗ್ಯಾಸ್ಟ್ರಿಕ್)‌ ತಪಾಸಣೆಗಾಗಿ ಆಸ್ಪತ್ರೆಗೆ ಹೋದಾಗ ಶುಕ್ರವಾರ ರಾತ್ರಿ 8:40 ಮತ್ತು 8:42ಕ್ಕೆ ಎರಡು ಬಾರಿ ಹೃದಯಾಘಾತದ ನಂತರ ಅವರು ಸಾವನ್ನಪ್ಪಿದ್ದಾಗಿ ಹೋಶಾಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ಗೆ ಹಾರಿದ ಹೊಂಬಾಳೆ ಫಿಲ್ಮ್ಸ್ : ಸದ್ಯದಲ್ಲೇ ಹಿಂದಿ ಸಿನಿಮಾ ಘೋಷಣೆ

    1947 ರಲ್ಲಿ ಬಾಲನಟಿಯಾಗಿ ತನ್ನ ವೃತ್ತಿಜೀವನ ಪ್ರಾರಂಭಿಸಿದ ತಬಸ್ಸುಮ್ ಬಾಲ ಕಲಾವಿದೆಯಾಗಿ ಬೇಬಿ ತಬಸ್ಸುಮ್ (Tabassum) ಎಂದೇ ಖ್ಯಾತರಾಗಿದ್ದರು. 1940ರ ದಶಕದ ಉತ್ತರಾರ್ಧದಲ್ಲಿ ನರ್ಗೀಸ್, ಮೇರಾ ಸುಹಾಗ್, ಮಂಜಧರ್ ಮತ್ತು ಬರಿ ಬೆಹೆನ್‌ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ದೂರದರ್ಶನದಲ್ಲಿ 1972 ರಿಂದ 1993 ರವರೆಗೆ ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್ ಎಂಬ ಪ್ರಸಿದ್ಧ ಟಾಕ್ ಶೋ ನಿರೂಪಕಿಯಾಗಿಯೂ ಹೆಸರು ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಚೆಲುವ ಚಾಮರಾಜನಗರದ ರಾಯಭಾರಿಯಾಗಲು ರೆಡಿ ಎಂದ `ಗಾಜನೂರು ಗಂಡು’ ಶಿವರಾಜ್‌ಕುಮಾರ್

    ಚೆಲುವ ಚಾಮರಾಜನಗರದ ರಾಯಭಾರಿಯಾಗಲು ರೆಡಿ ಎಂದ `ಗಾಜನೂರು ಗಂಡು’ ಶಿವರಾಜ್‌ಕುಮಾರ್

    ಚಾಮರಾಜನಗರ: ಜಿಲ್ಲೆ, ಸಂಸ್ಕೃತಿ ಹಾಗೂ ಪ್ರಕೃತಿಯ ಅದ್ಬುತ ಸಮಾಗಮ ಚೆಲುವ ಚಾಮರಾಜನಗರ. ಇಲ್ಲಿನ ಪ್ರಾಕೃತಿಕ ಸೌಂದರ್ಯದೊಂದಿಗೆ ಪ್ರವಾಸಿಗರ ಆಕರ್ಷಣೆಯನ್ನೂ ಹೆಚ್ಚಿಸಲೆಂದೇ ನಟ ದಿ. ಪುನೀತ್ ರಾಜ್‌ಕುಮರ್ ಅವರನ್ನು ರಾಯಭಾರಿಯನ್ನಾಗಿ ಮಾಡಲಾಗಿತ್ತು. ಇದಕ್ಕಾಗಿ ಪುನೀತ್ ರಾಜ್‌ಕುಮಾರ್ ಸಂದೇಶವಿರುವ ಪ್ರಮೋಷನ್ ವೀಡಿಯೋವನ್ನು ಜಿಲ್ಲಾಡಳಿತ ಸಿದ್ಧ ಮಾಡಿತ್ತು. ಪುನೀತ್ ನಿಧನದ ಬಳಿಕ ಇದೀಗ ಡಾ.ರಾಜ್ ಕುಟುಂಬದ ಮತ್ತೊಬ್ಬರನ್ನೂ ಬ್ರ‍್ಯಾಂಡ್ ಅಂಬಾಸಿಡರ್ ಆಗಿ ಮಾಡುವಂತೆ ಕೂಗು ಎದ್ದಿದೆ.

    ಇದು ಪೂರ್ವ ಪಶ್ಚಿಮ ಘಟ್ಟಗಳ ಬೆಸುಗೆಯ ವಿಶಿಷ್ಟ ತಾಣವಾದ ಚಾಮರಾಜನಗರ ಜಿಲ್ಲೆ ಪಾಕೃತಿಕವಾಗಿ ಶ್ರೀಮಂತ ಜಿಲ್ಲೆ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸ್ವತ್ತು ಹೊಂದಿರುವ ಕೆಲವೇ ಜಿಲ್ಲೆಗಳ ಪೈಕಿ ಚಾಮರಾಜನಗರವೂ ಒಂದು ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ, ಮಲೆಮಹದೇಶ್ವರ ವನ್ಯಧಾಮ, ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತ, ಮಲೆಮಹದೇಶ್ವರಬೆಟ್ಟ, ತಮಿಳುನಾಡು ಗಡಿಯಲ್ಲಿರುವ ಪುಣಜನೂರು ಸೂಕ್ಷ್ಮ ಅರಣ್ಯ ಪ್ರದೇಶದಂತಹ ಪ್ರಾಕೃತಿಕ ಸೊಬಗನ್ನು ಹೊಂದಿದೆ. ಜನಪದ ಸಂಸ್ಕೃತಿಯನ್ನೂ ಇಂದಿಗೂ ಜೀವಂತವಾಗಿರಿಸಿಕೊಂಡಿದ್ದು, ಹತ್ತಾರು ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳನ್ನೂ ತನ್ನ ತೆಕ್ಕೆಯಲ್ಲಿಟ್ಟುಕೊಂಡಿದೆ. ಇದನ್ನೂ ಓದಿ: ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ – ಸೇರಿಸಿದ್ರೆ ಗ್ರಾಹಕರೇ ದೂರು ಕೊಡ್ಬೋದು

    ಜಿಲ್ಲಾಡಳಿತ `ಚೆಲುವ ಚಾಮರಾಜನಗರ’ ಎಂಬ ಜಿಲ್ಲಾ ಪ್ರವಾಸಿ ತಾಣಗಳ ಕೈಪಿಡಿ ಹೊರತಂದು, ಇದೀಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚೆಲುವ ಚಾಮರಾಜನಗರದ ರಾಯಭಾರಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಸಂದೇಶ ಇರುವ ಪ್ರಮೋಷನ್ ವೀಡಿಯೋವೊಂದನ್ನು ಸಿದ್ದಪಡಿಸಿತ್ತು. ಆದ್ರೆ ಪುನೀತ್ ಅಕಾಲಿಕ ನಿಧನದಿಂದ ಈ ಯೋಜನೆ ಜಾರಿಗೆ ಹಿನ್ನಡೆಯಾಯಿತು. ಇದೀಗ ಮತ್ತೇ ಚಾಮರಾಜನಗರದಲ್ಲಿ ಡಾ.ರಾಜ್ ಕುಟುಂಬದ ಕುಡಿ ನಟ ಶಿವರಾಜ್ ಕುಮಾರ್ ಅವರನ್ನು ಚೆಲುವ ಚಾಮರಾಜನಗರ ರಾಯಭಾರಿ ಮಾಡುವಂತೆ ಅಭಿಮಾನಿಗಳಿಂದ ಕೂಗು ಎದ್ದಿದೆ. ಇದನ್ನೂ ಓದಿ: ಅಧಿಕಾರಿಗಳಿಂದಲೇ ದುರ್ಬಳಕೆ- ಕರ್ನಾಟಕ ಹೈಕೋರ್ಟ್ ಮೊರೆಹೋದ ಟ್ವಿಟ್ಟರ್

    ಇನ್ನೂ ಚಾಮರಾಜನಗರ ಡಾ.ರಾಜ್ ತವರೂರು. ತವರೂರಿನ ಋಣ ತೀರಿಸಲು ನಟ ಪುನೀತ್ ರಾಯಭಾರಿಯಾಗಲೂ ಮನಸ್ಸು ಮಾಡಿದರು. ಆದ್ರೆ ಅಕಾಲಿನ ನಿಧನದಿಂದ ಅವರ ಆಸೆಯೂ ಈಡೇರಲಿಲ್ಲ. ಇದೀಗ ಪುನೀತ್ ಬದಲು ಡಾ.ಶಿವರಾಜ್ ಕುಮಾರ್ ರಾಯಭಾರಿಯಾಗಲೂ ರೆಡಿ ಎಂದಿದ್ದಾರೆ. ಜಿಲ್ಲಾಡಳಿತ ಒಂದು ವೇಳೆ ಒಪ್ಪಿಗೆ ಕೊಟ್ರೆ ರಾಯಭಾರಿಯಾಗ್ತೀನಿ. ಅದು ನನ್ನ ಭಾಗ್ಯ. ನನ್ನ ತಮ್ಮನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

    ಒಟ್ಟಿನಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಚಾಮರಾಜನಗರದ ರಾಯಭಾರಿಯಾಗಲೂ ಶಿವಣ್ಣ ಒಪ್ಪಿಗೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿ ಶಿವಣ್ಣರನ್ನು ರಾಯಭಾರಿಯಾಗಿಸಲೂ ಮನಸ್ಸು ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಇಂದು ಬೆಳಗಿನ ಜಾವ ನಿಧನರಾದ ಹಿರಿಯ ನಟ ರಾಜೇಶ್ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡುವುದಾಗಿ ನಟ, ರಾಜೇಶ್ ಅವರ ಅಳಿಯ ಅರ್ಜುನ್ ಸರ್ಜಾ ತಿಳಿಸಿದ್ದಾರೆ. ಇದನ್ನೂ ಓದಿ : ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ


    ಕೋವಿಡ್ ಆತಂಕದ ನಡುವೆಯೂ ಸರಕಾರದ ನಿಯಮ ಪಾಲಿಸಿಕೊಂಡು ರಾಜೇಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕುರಿತು ಮಾತನಾಡಿರುವ ಅರ್ಜುನ್ ಸರ್ಜಾ, “ಕಳೆದ ಹತ್ತು ದಿನಗಳಿಂದ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಮೊದಲು ಕೋವಿಡ್ ನಂತರ ಸಿಕೆಡಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಗುರುವಾರವಷ್ಟೇ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ಮನೆಗೆ ಕರೆತಂದಿದ್ದೆವು. ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಅಂದುಕೊಂಡಿರಲಿಲ್ಲ’ ಎಂದರು.  ಇದನ್ನೂ ಓದಿ : ಕಲಾ ತಪಸ್ವಿ ರಾಜೇಶ್‌ ವಿಧಿವಶ


    ಸದ್ಯ ಪಾರ್ಥೀವ ಶರೀರ ರಾಜೇಶ್ ಅವರ ಸ್ವನಿವಾಸ ವಿದ್ಯಾರಣ್ಯಪುರದಲ್ಲಿದ್ದು ಕುಟುಂಬದ ಸದಸ್ಯರು ಪೂಜೆ ನಡೆಸಿದ ಬಳಿಕ 12 ಗಂಟೆಯ ಹೊತ್ತಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ.