Tag: Film Academy

  • Exclusive – ಬೆಂಗಳೂರು ಚಿತ್ರೋತ್ಸವ ಅವಾರ್ಡ್ 2021 : ಅತ್ಯುತ್ತಮ ಪಾಪ್ಯುಲರ್ ಚಿತ್ರ ಯುವರತ್ನ, ಅತ್ಯುತ್ತಮ ಕನ್ನಡ ಚಿತ್ರ ದೊಡ್ಡ ಹಟ್ಟಿ ಬೋರೇಗೌಡ

    Exclusive – ಬೆಂಗಳೂರು ಚಿತ್ರೋತ್ಸವ ಅವಾರ್ಡ್ 2021 : ಅತ್ಯುತ್ತಮ ಪಾಪ್ಯುಲರ್ ಚಿತ್ರ ಯುವರತ್ನ, ಅತ್ಯುತ್ತಮ ಕನ್ನಡ ಚಿತ್ರ ದೊಡ್ಡ ಹಟ್ಟಿ ಬೋರೇಗೌಡ

    ಏಳು ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭ ಇಂದು ಬೆಂಗಳೂರಿನ ಜೆ.ಎನ್.ಟಾಟಾ ಆಡಿಟೋರಿಯಂನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರೋತ್ಸವದಲ್ಲಿ ಭಾಗಿಯಾಗಿ, ನಾನಾ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಸಿನಿಮಾಗಳಿಗೆ  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಿದರು.

    ಮುಖ್ಯ ಅಥಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್. ಜೈರಾಜ್, ಚಿತ್ರೋತ್ಸವದ ಕಲಾತ್ಮಾಕ ನಿರ್ದೇಶಕ ನರಹರಿರಾವ್, ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಮುಂತಾದವರು ಭಾಗಿಯಾಗಿದ್ದರು.

    2021 ನೇ ಸಾಲಿನ ಪ್ರಶಸ್ತಿಗಳು

    ಕನ್ನಡ ಪಾಪ್ಯೂಲರ್ ಎಂಟರ್ ಟೇನ್ಮೆಂಟ್ : ಮೋಸ್ಟ್ ಪಾಪ್ಯುಲರ್ ಕನ್ನಡ ಸಿನಿಮಾ ಅವಾರ್ಡ್

    ಅತ್ಯುತ್ತಮ ಚಿತ್ರ : ಯುವರತ್ನ  ( ನಿರ್ದೇಶಕ ಸಂತೋಷ್ ಆನಂದರಾವ್)

    ಅತ್ಯುತ್ತಮ ಎರಡನೇ ಸಿನಿಮಾ : ರಾಬರ್ಟ್   ( ನಿರ್ದೇಶಕ ತರುಣ್ ಸುಧೀರ್)

    ಅತ್ಯುತ್ತಮ ಮೂರನೇ ಸಿನಿಮಾ : ಲವ್ ಕೋಟಿಗೊಬ್ಬ  ( ನಿರ್ದೇಶಕ ಶಿವಕಾರ್ತಿಕ್)

    ಪೊಗರು (ಸ್ಪೇಷಲ್ ಜ್ಯೂರಿ ಅವಾರ್ಡ್ )

     ಕನ್ನಡ ಸಿನಿಮಾ ಕಾಂಪಿಟೇಷನ್ : ಬೆಸ್ಟ್ ಫಿಲ್ಮ್ ಅವಾರ್ಡ್

    ಅತ್ಯುತ್ತಮ ಚಿತ್ರ : ದೊಡ್ಡ ಹಟ್ಟಿ ಬೋರೇಗೌಡ ( ನಿರ್ದೇಶಕ ರಘುಕೆ.ಎಂ)

    ಅತ್ಯುತ್ತಮ ಎರಡನೇ ಸಿನಿಮಾ : ದಂಡಿ  (ನಿರ್ದೇಶಕ ವಿಶಾಲ್ ರಾಜ್ )

    ಅತ್ಯತ್ತಮ ಮೂರನೇ ಸಿನಿಮಾ : ದೇವರ ಕಾಡು  ( ನಿರ್ದೇಶಕ ಅಮರ್ ಎಲ್)

    ಕೇಕ್ (ಸ್ಪೇಷಲ್ ಜ್ಯೂರಿ ಅವಾರ್ಡ್ )

  • ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಐದು ಕಾಂಟ್ರವರ್ಸಿಗಳು

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಐದು ಕಾಂಟ್ರವರ್ಸಿಗಳು

    ರ್ನಾಟಕ ಚಲನಚಿತ್ರ ಅಕಾಡಮಿ ಅಡಿಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಮಾ.3 ರಿಂದ ನಡೆದಿದೆ. ಹಲವು ದೇಶಗಳ ಸಿನಿಮಾ ತಯಾರಕರು ಮತ್ತು ಭಾರತೀಯ ಸಿನಿಮಾ ತಯಾರಕರ ಸಂಗಮವೇ ಬೆಂಗಳೂರಿನಲ್ಲಿ ಆಗಿದೆ. ಈ ಮಧ್ಯೆ ಕೆಲ ಕಾರಣಗಳಿಂದಾಗಿ ವಿವಾದಕ್ಕೂ ಚಿತ್ರೋತ್ಸವ ಕಾರಣವಾಗಿದೆ. ಪ್ರತಿ ವರ್ಷವೂ ಒಂದಿಲ್ಲೊಂದು ಕಾರಣದಿಂದಾಗಿ ಸಣ್ಣ ಎಡವಟ್ಟುಗಳು ಆಗುತ್ತವೆ. ಆದರೆ, ಈ ಬಾರಿ ಪ್ರತಿಭಟನೆಯನ್ನೂ ಮಾಡುವಷ್ಟರ ಮಟ್ಟಿಗೆ ವಿವಾದಗಳು ಮುಂದೆ ಸಾಗಿವೆ. ಇದನ್ನೂ ಓದಿ : ಅಂತಾರಾಷ್ಟ್ರೀಯ ಮಹಿಳಾ ದಿನ: ನಟಿಯ ವರ್ಕೌಟ್ ವಿಡಿಯೋ ಗಿಫ್ಟ್ ಕೊಡ್ತಾರಂತೆ ರಾಮ್ ಗೋಪಾಲ್ ವರ್ಮಾ

    ಉದ್ಘಾಟನಾ ಸಮಾರಂಭ

    ಬೆಂಗಳೂರಿನ ಜಿಕೆವಿಕೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಿತು. ಇದಕ್ಕಂದೇ ತಯಾರಾಗಿದ್ದ ಆಹ್ವಾನ ಪತ್ರಿಕೆಯ ತುಂಬಾ ಬರೀ ರಾಜಕಾರಣಿಗಳ ಹೆಸರೇ ತುಂಬಿದ್ದರಿಂದ ‘ಇದೋ ರಾಜಕೀಯ ಸಮಾವೇಶವೋ ಅಥವಾ ಚಿತ್ರೋತ್ಸವೋ?’ ಎಂಬ ಆಂದೋಲನ ಕೂಡ ಸೋಷಿಯಲ್ ಮೀಡಿಯಾದಲ್ಲಿ ನಡೆಯಿತು. ಚಿತ್ರೋದ್ಯಮದ ಮಂದಿ ಇದನ್ನು ನೇರವಾಗಿಯೇ ಟೀಕಿಸಿದರು. ನಂತರ ಈ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ನೃತ್ಯದಲ್ಲಿ ಸಾವರ್ಕರ್ ಕಟೌಟ್ ತಂದರು ಎನ್ನುವ ಕಾರಣಕ್ಕಾಗಿ ಮತ್ತೊಂದು ವಿವಾದ ಶುರುವಾಯಿತು. ಅಂಬೇಡ್ಕರ್ ಕಟೌಟ್ ಗೆ ಯಾಕೆ ಅವಕಾಶ ಕೊಡಲಿಲ್ಲ ಎನ್ನುವ ಕೂಗು ಎದ್ದಿತ್ತು. ಇದನ್ನೂ ಓದಿ : ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆ

    ರಿಷಬ್ ಶೆಟ್ಟಿ ಅಸಮಾಧಾನ

    ತಮ್ಮ ನಿರ್ಮಾಣದ ಪೆದ್ರೊ ಸಿನಿಮಾಗೆ ಜಾಗತಿಕ ಮನ್ನಣೆ ಸಿಕ್ಕಿದ್ದರೂ, ಅದು ಸಾಕಷ್ಟು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗಿಯಾಗಿದ್ದರೂ, ನಮ್ಮದೇ ನೆಲದಲ್ಲಿ ನಡೆಯುತ್ತಿರುವ ಚಿತ್ರೋತ್ಸವಕ್ಕೆ ಆಯ್ಕೆಯಾಗದೇ ಇರುವುದಕ್ಕೆ ನಿರ್ಮಾಪಕ ರಿಷಬ್ ಶೆಟ್ಟಿ ಅಸಮಾಧಾನಗೊಂಡಿದ್ದರು. ಅದನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಹೇಳಿದರು. ಅಲ್ಲದೇ, ಇನ್ನೂ ಎರಡು ಚಿತ್ರಗಳ ನಿರ್ಮಾಪಕರು ಕೂಡ ತಮಗೂ ಅನ್ಯಾಯವಾಗಿದೆ ಎಂದು ತಮ್ಮ ವಿರೋಧವನ್ನು ವ್ಯಕ್ತ ಪಡಿಸಿದರು. ಇದನ್ನೂ ಓದಿ : ಶಿವಣ್ಣ ನಟನೆಯ ‘ವೇದ’ ಚಿತ್ರದಲ್ಲಿ ರಾಘು ಶಿವಮೊಗ್ಗ : ನಟನೆಯಲ್ಲೂ ಬ್ಯುಸಿಯಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ

    ಕೊಡವ ಸಂಸ್ಕೃತಿ ಅಪಚಾರ

    ಈ ಬಾರಿಯ ಚಿತ್ರೋತ್ಸವದಲ್ಲಿ ‘ದೇವದ ಕಾಡು’ ಸಿನಿಮಾ ಪ್ರದರ್ಶನಕ್ಕಿತ್ತು. ಈ ಸಿನಿಮಾವನ್ನು ನೋಡಿದ ಕೊಡಗಿನವರಾದ ಪ್ರಕಾಶ್ ಕಾರ್ಯಪ್ಪ ತಮ್ಮ ಸಂಸ್ಕೃತಿಗೆ ಧಕ್ಕೆ ತರುವಂತ ಸಿನಿಮಾವಿದು ಎಂದು ಥಿಯೇಟರ್ ನಲ್ಲಿಯೇ ಆಕ್ಷೇಪ ವ್ಯಕ್ತ ಪಡಿಸಿದರು. ಈ ಸಿನಿಮಾವನ್ನು ಆಯ್ಕೆ ಮಾಡಿದ ಕಮೀಟಿಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.  ಇಂತಹ ಚಿತ್ರವನ್ನು ಅಕಾಡಮಿ ಹೇಗೆ ಆಯ್ಕೆ ಮಾಡಿತು ಎಂದು ಪ್ರಶ್ನಿಸಿದರು. ಇದು ಭಾರೀ ಗದ್ದಲಕ್ಕೆ ಕಾರಣವಾಯಿತು. ಇದನ್ನೂ ಓದಿ : ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

    ವಾಣಿಜ್ಯ ಮಂಡಳಿ ವಿರುದ್ಧ ಅಸಮಾಧಾನ

    ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗಿಯಾಗಲು ನಿಯಮಗಳಿವೆ. ಜ್ಯೂರಿ ಕಮೀಟಿ ಆಯ್ಕೆ ಮಾಡಿದ ಚಿತ್ರಗಳನ್ನಷ್ಟೇ ಚಿತ್ರೋತ್ಸವದಲ್ಲಿ ತೋರಿಸಲಾಗುತ್ತದೆ. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಳುಹಿಸಿದ ಚಿತ್ರಗಳನ್ನು ನೇರವಾಗಿ ಚಿತ್ರೋತ್ಸವದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಕೆಲ ನಿರ್ಮಾಪಕರು ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿರುವ ವಾಣಿಜ್ಯ ಮಂಡಳಿ, ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟ ಪಡಿಸಿದ್ದಾರೆ. ಯಾವುದೇ ಕಮೀಟಿ ಇಲ್ಲದೇ, ಯಾವ ಮಾನದಂಡದ ಮೇಲೆ ಸಿನಿಮಾಗಳನ್ನು ಆಯ್ಕೆ ಮಾಡುತ್ತೀರಿ ಎಂಬ  ಪ್ರಶ್ನೆ ನಿರ್ಮಾಪಕರದ್ದು. ಇದನ್ನೂ ಓದಿ : ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ

    ಕಿಟ್ ವಿತರಣೆ ಇಲ್ಲ

    ಪ್ರತಿ ಚಿತ್ರೋತ್ಸವದಲ್ಲೂ ಭಾಗವಹಿಸುವವರಿಗೆ ಒಂದು ಬ್ಯಾಗ್, ಸಿನಿಮಾ ಮಾಹಿತಿಯುಳ್ಳ ಪುಸ್ತಕ ಮತ್ತು ಸಿನಿಮಾ ಶ್ಕೆಡ್ಯೂಲ್ಡ್ ನೀಡಲಾಗುತ್ತಿತ್ತು. ಚಿತ್ರೋತ್ಸವ ಶುರುವಾಗಿ ವಾರ ಕಳೆದರೂ, ಇನ್ನೂ ಕಿಟ್ ನೀಡಿಲ್ಲ ಎನ್ನುವ ಆಕ್ರೋಶ ಕೆಲವರದ್ದು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟ ಪರ ವಿರೋಧದ ಮಾತುಗಳು ಕೇಳಿ ಬಂದಿವೆ. ಪೇಪರ್ ಲೆಸ್ ಚಿತ್ರೋತ್ಸವ ಮಾಡಬೇಕೆಂಬ ಸಂಕಲ್ಪದ ಮುನ್ನುಡಿಯಂತಿದೆ ಈ ವರ್ಷದ ಚಿತ್ರೋತ್ಸವ. ಹಾಗಾಗಿ ಸಹಕರಿಸಿ ಎಂದಿದೆ.

  • ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್

    ಮಾ.3 ರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂದು ಪುನೀತ್ ರಾಜ್ ಕುಮಾರ್ ಗಾಗಿಯೇ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಪುನೀತ್ ಸ್ಮರಣೆಯ ಜತೆಗೆ ಪುನೀತ್ ಅವರ ಜತೆ ಕೆಲಸ ಮಾಡಿದ ನಿರ್ದೇಶಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಲಾಗಿತ್ತು. ಇದನ್ನೂ ಓದಿ : ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್

    ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್, ಚೇತನ್ ಕುಮಾರ್ ಮತ್ತು ಹಿರಿಯ ನಿರ್ದೇಶಕ ಭಗವಾನ್, ಪುನೀತ್ ಅವರ ಜತೆಗಿನ ತಮ್ಮ ಒಡನಾಟವನ್ನು ಬಿಚ್ಚಿಟ್ಟರು. ಒಂದು ರೀತಿಯಲ್ಲಿ ಈ ಕಾರ್ಯಕ್ರಮ ಭಾವುಕತೆಯಿಂದಲೇ ಶುರುವಾಗಿ, ಭಾವುಕತೆಯಿಂದಲೇ ಮುಕ್ತಾಯವಾಯಿತು. ಇದನ್ನೂ ಓದಿ : ಸಾಯಿ ಪಲ್ಲವಿಗೆ ‘ಸಾಯಿ’ ಹೆಸರು ಬಂದಿದ್ದು ಹೇಗೆ?

    ಪುನೀತ್ ನಟನೆಯ ಚಿತ್ರಗಳನ್ನು ವಿಶ್ಲೇಷಿಸುವುದರ ಜತೆಗೆ ಅವರು ಪಾತ್ರಕ್ಕಾಗಿ ಮಾಡಿಕೊಳ್ಳುತ್ತಿದ್ದ ತಯಾರಿ, ಅವರಿಗಾಗಿಯೇ ಪಾತ್ರಗಳನ್ನು ಬರೆಯುತ್ತಿದ್ದ ರೀತಿ ಮತ್ತು ಅವರು ಶೂಟಿಂಗ್ ಸೆಟ್ ನಲ್ಲಿ ಹೇಗೆಲ್ಲ  ಇರುತ್ತಿದ್ದರು ಎನ್ನುವ ಕುರಿತು ನಿರ್ದೇಶಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕೂಡ ಉಪಸ್ಥಿತರಿದ್ದರು.