Tag: fights

  • ‘ಜವಾನ್’ ಚಿತ್ರದಲ್ಲಿ 6 ಹೆಸರಾಂತ ಸಾಹಸ ನಿರ್ದೇಶಕರು

    ‘ಜವಾನ್’ ಚಿತ್ರದಲ್ಲಿ 6 ಹೆಸರಾಂತ ಸಾಹಸ ನಿರ್ದೇಶಕರು

    ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ (Jawaan) ಚಿತ್ರವು ಮುಂದಿನ ತಿಂಗಳು ಮೊದಲ ವಾರದಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಜಗತ್ತಿನ ಆರು ಅತ್ಯುತ್ತಮ ಮತ್ತು ಜನಪ್ರಿಯ ನಿರ್ದೇಶಕರು ಈ ಚಿತ್ರಕ್ಕಾಗಿ ಸಾಹಸ ಸಂಯೋಜನೆ ಮಾಡಿದ್ದಾರೆ.

    ಮೂಲಗಳ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದ ಸಾಹಸ (Fights) ನಿರ್ದೇಶಕರಾದ ಸ್ಪೈರೋ ರಾಝಾಟೋಸ್, ಯಾನಿಕ್ ಬೆನ್, ಕ್ರೇಗ್ ಮೆಕ್ರೆ, ಕೆಚಾ ಕೆಂಪಾಕ್ಡಿ, ಸುನೀಲ್ ರಾಡ್ರಿಗ್ಸ್ ಮತ್ತು ಅನಲ್ ಅರಸ್ ಅವರು ‘ಜವಾನ್’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಫೈಟ್, ಚೇಸ್, ಪಾರ್ಕರ್  ಸೇರಿದಂತೆ ವಿಭಿನ್ನ ರೀತಿಯ ಸಾಹಸ ದೃಶ್ಯಗಳಿದ್ದು, ಆ ಪ್ರಕಾರದಲ್ಲಿ ಪರಿಣಿತಿ ಹೊಂದಿರುವ ಒಬ್ಬೊಬ್ಬ ಸಾಹಸ ನಿರ್ದೇಶಕರು ಈ ಚಿತ್ರಕ್ಕೆ ಕೆಲಸ ಮಾಡಿರುವುದು ವಿಶೇಷ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ಈ ಸಾಹಸ ನಿರ್ದೇಶಕರು ಬರೀ ಹಾಲಿವುಡ್ ಅಷ್ಟೇ ಅಲ್ಲ, ಹಲವು ಅಂತಾರಾಷ್ಟ್ರೀಯ ಸಿನಿಮಾಗಳಿಗೆ ಕೆಲಸ ಮಾಡಿ ತಮ್ಮ ಛಾಪನ್ನೊತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ವಿಭಾಗದಲ್ಲಿ ಪರಿಣಿತಿ ಹೊಂದಿದ್ದಾರೆ. ಜಗತ್ತಿನ ಜನಪ್ರಿಯ ಆಕ್ಷನ್ ಚಿತ್ರಗಳಲ್ಲಿ ಮೈ ಜುಂ ಎನಿಸುವಂತಹ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

    ಈ ಪೈಕಿ ಸ್ಪೈರೋ ರಾಝಾಟೋಸ್, ‘ಫಾಸ್ಟ್ ಅಂಡ್ ಫ್ಯೂರಿಯಸ್’, ‘ಕ್ಯಾಪ್ಟೇನ್ ಅಮೇರಿಕಾ’ ಮುಂತಾದ ಚಿತ್ರಗಳಿಗೆ ಕೆಲಸ ಮಾಡಿದ್ದರು. ಈ ಹಿಂದೆ, ಶಾರುಖ್ ಅಭಿನಯದ ‘ರಾ ಒನ್’ ಚಿತ್ರಕ್ಕೂ ಅವರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ಯಾನಿಕ್ ಬೆನ್ ಅವರು ಪಾರ್ಕರ್ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಜನಪ್ರಿಯರು. ಇನ್ನು, ಸುನೀಲ್ ರಾಡ್ರಿಗ್ಸ್, ಅನಲ್ ಅರಸು ಮುಂತಾದವರು ಭಾರತದ ಬೇರೆಬೇರೆ ಭಾಷೆಯ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡುವ ಮೂಲಕ ಖ್ಯಾತಿ ಗಳಿಸಿದವರು.

    ಈ ಸಾಹಸ ದೃಶ್ಯಗಳನ್ನು ಸಾಕಷ್ಟು ಅಧ್ಯಯನ ನಡೆಸುವುದಷ್ಟೇ ಅಲ್ಲ, ರೋಚಕವಾಗಿ ಸೆರೆಹಿಡಿಯಲಾಗಿದ್ದು, ಒಟ್ಟಾರೆ ಸಾಹಸ ಭಾಗವೇ ಚಿತ್ರವನ್ನು ಇನ್ನೊಂದು ಮಟ್ಟಕ್ಕೆ ಕರೆದೊಯ್ಯಲಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯಗಳು ಕಥೆಗೆ ಪೂರಕವಾಗಿರುವುದಷ್ಟೇ ಅಲ್ಲ, ನೈಜವಾಗಿ ಮೂಡಿಬಂದಿದ್ದು, ಚಿತ್ರದ ಬಗೆಗಿನ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಾಗಿಸಿದೆ.

     

    ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಡಿ ಗೌರಿ ಖಾನ್ (Gauri Khan) ನಿರ್ಮಿಸಿದರೆ, ಗೌರವ್ ವರ್ಮ ಸಹ ನಿರ್ಮಾಪಕರಾಗಿದ್ದಾರೆ. ಅಟ್ಲಿ (Atlee) ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನ ಬಂಧನ, ಬಿಡುಗಡೆ

    ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನ ಬಂಧನ, ಬಿಡುಗಡೆ

    ಹಾಸನ: ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಪಡಿಸಿದ ಆರೋಪದಡಿ ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನನ್ನು ಬಂಧಿಸಲಾಗಿದ್ದು, ಬಳಿಕ ಅವರನ್ನು ಬಿಡುಗಡೆ ಮಾಡಿರುವ ಘಟನೆ ಪಟ್ಟಣದ ಭುವನೇಶ್ವರಿ ರಸ್ತೆಯಲ್ಲಿ ನಡೆದಿದೆ.

    ಸಯ್ಯದ್ ಮುಫಿಜ್ ಬಂಧಿಸಲ್ಪಟ್ಟಿದ್ದ ಪುರಸಭೆ ಮಾಜಿ ಅಧ್ಯಕ್ಷ. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. 9ನೇ ವಾರ್ಡಿನಿಂದ ಮುಫಿಜ್ ಪತ್ನಿ ಹಾಗೂ ಅದೇ ವಾರ್ಡ್ ನ ದಸ್ತಗಿರಿ ಎಂಬವರ ಪತ್ನಿ ಪುರಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಗೆಲುವು-ಸೋಲಿನ ಲೆಕ್ಕಾಚಾರದ ವೇಳೆ ಇಬ್ಬರ ನಡುವೆ ಆರೋಪ-ಪ್ರತ್ಯಾರೋಪ ಜರುಗಿ ಅದು ವಿಕೋಪಕ್ಕೆ ತಿರುಗಿದೆ. ಹೀಗಾಗಿ ಭಾನುವಾರ ಸಂಜೆ ಪೊಲೀಸರು ನಡುಬೀದಿಯಲ್ಲಿ ಸಯ್ಯದ್ ಮುಫೀಜ್ ಅವರನ್ನು ಹಿಡಿದು ಠಾಣೆಗೆ ಎಳೆದೊಯ್ದಿದ್ದರು.

    ಘಟನೆ ಸಂಬಂಧ 20 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗಳೂರು ಜೈಲಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ: ಪೊಲೀಸರಿಂದ ಲಾಠಿಚಾರ್ಜ್

    ಮಂಗಳೂರು ಜೈಲಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ: ಪೊಲೀಸರಿಂದ ಲಾಠಿಚಾರ್ಜ್

    ಮಂಗಳೂರು: ಕೇಂದ್ರ ಕಾರಾಗೃಹದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

    ಟ್ಯೂಬ್ ಲೈಟ್, ಕಲ್ಲು, ಅಲ್ಯೂಮಿನಿಯಂ ಫ್ರೇಂ ನಿಂದ ಕೈದಿಗಳು ಬಡಿದಾಡಿಕೊಂಡಿದ್ದು, ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಕೈದಿಗಳ ದಾಳಿ ನಡೆಸಿದ್ದಾರೆ. 5 ಜನ ಕೈದಿಗಳಿಗೆ ಗಂಭೀರ ಗಾಯಗೊಂಡಿದ್ದರೆ, 6 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೈ ಮುರಿದಿದೆ.

    ಗಲಾಟೆ ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮನವಿಗೂ ಕ್ಯಾರೇ ಎನ್ನದೇ ಕೈದಿಗಳು ಬಡಿದಾಟ ಮುಂದುವರಿಸಿದ್ದಕ್ಕೆ ಪೊಲೀಸರು ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆಯ ಬಳಿಕ ಜೈಲಿನೊಳಗೆ ಡಿಸಿಪಿ ಹನುಮಂತರಾಯ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

  • ಸಿಗರೇಟ್ ಸೇದೋ ವಿಚಾರದಲ್ಲಿ ಜಗಳ -ಮನೆ ಮಾಲೀಕನನ್ನು ಡ್ರ್ಯಾಗರ್‍ನಿಂದ ಇರಿದು ಕೊಲೆಗೈದ್ರು

    ಸಿಗರೇಟ್ ಸೇದೋ ವಿಚಾರದಲ್ಲಿ ಜಗಳ -ಮನೆ ಮಾಲೀಕನನ್ನು ಡ್ರ್ಯಾಗರ್‍ನಿಂದ ಇರಿದು ಕೊಲೆಗೈದ್ರು

    ಬೆಂಗಳೂರು: ಸಿಗರೇಟ್ ಸೇದುವ ವಿಚಾರದಲ್ಲಿ ನಡೆದ ಜಗಳದಲ್ಲಿ ಮನೆ ಮಾಲೀಕನನ್ನೆ ಡ್ರ್ಯಾಗರ್ ನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶಾಂತಿನಗರ ಪುಡ್ ಗೋಡೌನ್ ಬಳಿ ಶನಿವಾರ ತಡರಾತ್ರಿ ನಡೆದಿದೆ.

    ಹರೀಶ್ ಕೊಲೆಯಾದ ದುರ್ದೈವಿ. ತಡರಾತ್ರಿ 12 ಗಂಟೆ ಸುಮಾರಿಗೆ ಹರೀಶ್ ಮನೆಯ ಬಳಿ ನಾಲ್ವರ ಗುಂಪು ಸಿಗರೇಟು ಸೇದುತ್ತಾ ಕುಡಿದು ಗಲಾಟೆ ಮಾಡಿದ್ದಾರೆ. ಮನೆಯಿಂದ ಹೊರಬಂದ ಹರೀಶ್ ಎಲ್ಲರನ್ನೂ ದೂರ ಹೋಗುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ನಾಲ್ವರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಮತ್ತೆ ಸುಮಾರು 20 ಜನರನ್ನು ಕರೆಸಿಕೊಂಡ ದುಷ್ಕರ್ಮಿಗಳು ಹರೀಶ್ ಕುತ್ತಿಗೆಗೆ ಡ್ರ್ಯಾಗರ್ ನಿಂದ ಇರಿದು ಕೊಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರೀಶ್ ಕಾಂಟ್ರಾಕ್ಟರ್ ಆಗಿ ಮತ್ತು ಸ್ಥಳೀಯ ಮುಖಂಡರಾಗಿದ್ದರು.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸ್ ನಲ್ಲಿ ಮಹಿಳಾ ಪೇದೆ ಹಾಗೂ ಕಂಡಕ್ಟರ್ ಜಟಾಪಟಿ ವೈರಲ್ ವಿಡಿಯೋ

    ಬಸ್ ನಲ್ಲಿ ಮಹಿಳಾ ಪೇದೆ ಹಾಗೂ ಕಂಡಕ್ಟರ್ ಜಟಾಪಟಿ ವೈರಲ್ ವಿಡಿಯೋ

    ತೆಲಂಗಾಣ: ಟಿಕೆಟ್ ವಿಚಾರದಲ್ಲಿ ಮಹಿಳಾ ಪೇದೆ ಮತ್ತು ಮಹಿಳಾ ಕಂಡಕ್ಟರ್ ನಡುವೆ ಮೆಹಬೂಬ್ ನಗರದಲ್ಲಿ ನಡೆದ ಜಗಳದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪೇದೆಯೊಬ್ಬರು ನಾನು ಕರ್ತವ್ಯದಲ್ಲಿರುವ ಕಾರಣ ಉಚಿತವಾಗಿ ಪ್ರಯಾಣಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪದ ಕಂಡಕ್ಟರ್ ಮೊದಲು ಟಿಕೆಟ್ ಪಡೆದುಕೊಳ್ಳಿ ನಂತರ ಪ್ರಯಾಣಿಸಿ ಎಂದು ತಿಳಿಸಿದ್ದಾರೆ.

    ಮಹಿಳಾ ಪೊಲೀಸ್ ಪೇದೆಗೆ 15 ರೂ. ಟಿಕೆಟ್ ಪಡೆದುಕೊಳ್ಳುವಂತೆ ಕಂಡಕ್ಟರ್ ಹೇಳಿದ್ದಾರೆ. ಇದಕ್ಕೆ ಒಪ್ಪದ ಪೇದೆ ನಾನು ಸರ್ಕಾರ ಕೆಲಸಕ್ಕೆ ಹೊರಟಿದ್ದೇನೆ. ನಮಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ ಎಂದು ಹೇಳಿ ವಾದ ನಡೆಸಲು ಆರಂಭಿಸಿದ್ದಾರೆ.

    ಹಣ ನೀಡದ್ದಕ್ಕೆ ಆರಂಭದಲ್ಲಿ ಮಾತಿನಲ್ಲೇ ಇಬ್ಬರು ಚಕಮಕಿ ನಡೆಸಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಬಸ್ ಕಂಡಕ್ಟರ್ ಮಹಿಳಾ ಪೇದೆ ಮೇಲೆ ಕೈ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪೇದೆಯೂ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಬಸ್ಸಿನಲ್ಲಿದ್ದ ಪ್ರಯಾಣಿಕರು ಇಬ್ಬರ ಜಗಳವನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ ಒಬ್ಬರು ಪ್ರಯಾಣಿಕರು ಇಬ್ಬರು ಮಹಿಳಾಮಣಿಗಳ ಗಲಾಟೆಯ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವೈರಲ್ ಆಗಿದೆ.

    ಜಗಳದ ನಂತರ ಕಂಡಕ್ಟರ್, ನವಾಬಪೇಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ನಡೆಸುವಂತೆ ಮಹಬೂಬ್ ನಗರ ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

    https://youtu.be/uQTZ9ZsFMmQ