Tag: Fighter

  • ವಿಜಯ್ ದೇವರಕೊಂಡ ಜೊತೆ ನಟಿಸಲ್ಲ ಎಂದ ದಿಶಾ ಪಠಾಣಿ

    ವಿಜಯ್ ದೇವರಕೊಂಡ ಜೊತೆ ನಟಿಸಲ್ಲ ಎಂದ ದಿಶಾ ಪಠಾಣಿ

    ಮುಂಬೈ: ಬಾಲಿವುಡ್ ಬೆಡಗಿ ದಿಶಾ ಪಠಾಣಿ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ನಟಿಸಲು ನಿರಾಕರಿಸಿದ್ದಾರೆ ಎನ್ನುವ ಮಾತುಗಳು ಟಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ವಿಜಯ್ ಈ ನಡುವೆ ತಮ್ಮ ಮುಂಬರುವ ‘ಫೈಟರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದ್ದು, ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಅನನ್ಯ ಪಾಂಡೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನನ್ಯ ಪಾಂಡೆ ಅವರಿಗೆ ಅವಕಾಶ ನೀಡುವ ಮೊದಲು ದಿಶಾ ಪಠಾಣಿಗೆ ಆಫರ್ ಮಾಡಲಾಗಿತ್ತು. ಆದರೆ ದಿಶಾ ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

    ಈ ಮೊದಲು ದಿಶಾ ತೆಲುಗಿನಲ್ಲಿ ‘ಲೋಫರ್’ ಚಿತ್ರದಲ್ಲಿ ನಟಿಸಿದ್ದಳು. ಈ ಚಿತ್ರವನ್ನು ಕೂಡ ಪೂರಿ ಜಗನ್ನಾಥ್ ನಿರ್ದೇಶಿಸಿದ್ದು, ಮೆಗಾ ಪ್ರಿನ್ಸ್ ವರುಣ್ ತೇಜ್ ನಾಯಕನಾಗಿ ನಟಿಸಿದ್ದರು. ದಿಶಾ ಅವರನ್ನು ಪೂರಿ ಜಗನ್ನಾಥ್ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದರು. ಇದೀಗ ದಿಶಾ ಬಾಲಿವುಡ್‍ನಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಿಶಾ ಈ ಚಿತ್ರ ನಿರಾಕರಿಸಿದ ಕಾರಣ ಅನನ್ಯ ಅವರಿಗೆ ಆಫರ್ ನೀಡಲಾಗಿತ್ತು.

    ಸದ್ಯ ವಿಜಯ್ ಫೈಟರ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಈ ಚಿತ್ರದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿತ್ತು. ಫೋಟೋದಲ್ಲಿ ವಿಜಯ್ ಬೈಕ್ ಚಲಾಯಿಸುತ್ತಿದ್ದರೆ, ಅನನ್ಯ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದರು. ಚಿತ್ರತಂಡ ಮುಂಬೈನ ಬೀದಿಯಲ್ಲಿ ವಿಜಯ್ ಹಾಗೂ ಅನನ್ಯ ಅವರ ರೊಮ್ಯಾಂಟಿಕ್ ದೃಶ್ಯವನ್ನು ಚಿತ್ರೀಕರಿಸುತ್ತಿತ್ತು. ಈ ಫೋಟೋ ನೋಡಿ ನೆಟ್ಟಿಗರು ಅಸಭ್ಯವಾಗಿ ಕಾಣುತ್ತಿದ್ದೀರಾ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದರು.

    ಫೈಟರ್ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಟಾಲಿವುಡ್ ನಟಿ ಚಾರ್ಮಿ ಕೌರ್ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ ಅನನ್ಯ ಪಾಂಡೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಅವರ ಜೊತೆಗಿದ್ದ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ, “ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಖುಷಿಯಾಗುತ್ತಿದೆ. ಅಲ್ಲದೆ ಪೂರಿ ಜಗ್ಗನಾಥ್ ಹಾಗೂ ವಿಜಯ್ ದೇವರಕೊಂಡ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ” ಎಂದು ಬರೆದು ಪೋಸ್ಟ್ ಮಾಡಿದ್ದರು.

  • ಬಿಟೌನ್ ಸುಂದರಿ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

    ಬಿಟೌನ್ ಸುಂದರಿ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

    ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಬಾಲಿವುಡ್ ನಟಿಯೊಂದಿಗೆ ರೊಮ್ಯಾನ್ಸ್ ಮಾಡಲಿದ್ದು, ನಟಿಯೊಂದಿಗೆ ವಿಜಯ್ ಇರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸದ್ಯ ವಿಜಯ್ ಹಾಗೂ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್‍ನಲ್ಲಿ ಸಿನಿಮಾವೊಂದು ಸೆಟ್ಟೇರಿರುವುದು ಗೊತ್ತಿರುವ ವಿಷಯ. ಆದರೆ ಈಗ ಈ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟ ಅನನ್ಯಾ ಪಾಂಡೆ ವಿಜಯ್ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಹೀಗಾಗಿ ವಿಜಯ್, ಅನನ್ಯಾ ಸಿನಿಮಾ ತಂಡದ ಜೊತೆಗಿರುವ ಫೋಟೋಗಳು ಸದ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

    ವಿಜಯ್ ಹಾಗೂ ಪೂರಿ ಕಾಂಬಿನೇಷನ್‍ನಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ‘ಫೈಟರ್’ ಎಂದು ಹೆಸರಿಡಲಾಗಿದ್ದು, ಈ ಚಿತ್ರ ಹಿಂದಿ, ತೆಲುಗು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಗೊಳ್ಳಲಿದೆ. ‘ಫೈಟರ್’ ಚಿತ್ರವನ್ನು ಬಾಲಿವುಡ್‍ನಲ್ಲಿ ಕರಣ್ ಜೋಹರ್ ನಿರ್ಮಿಸುತ್ತಿದ್ದು, ತೆಲುಗಿನಲ್ಲಿ ಪೂರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ಹಣ ಹೂಡಿದ್ದಾರೆ.

    https://www.instagram.com/p/B8xwjk7hmFd/

    ಈ ಹಿಂದೆ ‘ಫೈಟರ್’ ಚಿತ್ರದಲ್ಲಿ ವಿಜಯ್‍ಗೆ ಜಾಹ್ನವಿ ಕಪೂರ್ ಜೋಡಿಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಕೊನೆಗೆ ಅನನ್ಯಾರನ್ನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದು, ಚಿತ್ರದಲ್ಲಿ ವಿಜಯ್‍ಗೆ ಅನನ್ಯಾ ಸಾಥ್ ಕೊಡಲಿದ್ದಾರೆ.

    ಈ ಚಿತ್ರದಲ್ಲಿ ಬಾಕ್ಸ್‌ರ್‌ ಆಗಿ ವಿಜಯ್ ಅಭಿನಯಿಸಲಿದ್ದು, ಇದಕ್ಕಾಗಿ ಸದ್ಯ ನಟ ಟ್ರೈನಿಂಗ್ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ವಿಜಯ್ ನಟನೆಯ ‘ಡಿಯರ್ ಕಾಮ್ರೇಡ್’ ಹಾಗೂ ‘ವರ್ಲ್ಡ್ ಫೇಮಸ್ ಲವ್ವರ್’ ಸಿನಿಮಾ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿವೆ. ಆದರೆ ಫೈಟರ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಈ ಚಿತ್ರವಾದರೂ ವಿಜಯ್‍ಗೆ ಯಶಸ್ಸು ತಂದುಕೊಡುತ್ತಾ ಎಂದು ಕಾದು ನೋಡಬೇಕಿದೆ.

  • ರೈತ ಬಂಧು ಕೆಎಸ್ ಪುಟ್ಟಣ್ಣಯ್ಯ ಬದುಕಿನ ಪುಟಗಳ ಒಂದಿಷ್ಟು ಮಾಹಿತಿ ಇಲ್ಲಿದೆ

    ರೈತ ಬಂಧು ಕೆಎಸ್ ಪುಟ್ಟಣ್ಣಯ್ಯ ಬದುಕಿನ ಪುಟಗಳ ಒಂದಿಷ್ಟು ಮಾಹಿತಿ ಇಲ್ಲಿದೆ

    ಬೆಂಗಳೂರು: ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಕರ್ನಾಟಕ ರೈತ ಸಂಘ ಕಂಡಂತಹ ಧೀಮಂತ ಹೋರಾಟಗಾರ. ರಾಜಕಾರಣಿಯಾಗಿದ್ದರೂ ಸರಳ ಜೀವಿಯಾಗಿ ಬದುಕನ್ನು ಸವೆಸಿದವರು. ಸ್ವತಃ ಕಬಡ್ಡಿ ಆಟಗಾರರಾಗಿದ್ದ ಪುಟ್ಟಣ್ಣಯ್ಯ ಅದನ್ನೇ ನೋಡುತ್ತಾ ಕೊನೆಯುಸಿರೆಳೆದಿದ್ದಾರೆ. ಅವರ ಬದುಕಿನ ಪುಟಗಳು ಇಲ್ಲಿದೆ.

    ರೈತ ಚಳವಳಿಯ ಕೊಂಡಿಯೊಂದು ಅಸ್ತಂಗತವಾಗಿದೆ. ಶಾಸಕನಾಗಿದ್ದರೂ ಸರಳಜೀವಿಯಾಗಿಯೇ ಬದುಕ ಸವೆಸಿದ ಮಾಣಿಕ್ಯವೊಂದು ನಮ್ಮನ್ನಗಲಿದೆ. ರೈತ ನಾಯಕನೆಂದೇ ಚಿರಪರಿಚಿತವಾಗಿದ್ದ ಪುಟ್ಟಣ್ಣಯ್ಯ, ಮಂಡ್ಯದ ಕ್ಯಾತನಹಳ್ಳಿಯಲ್ಲಿ ಜನಿಸಿದ್ರು. ಹುಟ್ಟೂರಿನಲ್ಲಿಯೇ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಪಡೆದ ಬಳಿಕ ಮೈಸೂರಿನಲ್ಲಿರುವ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣ, ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.

    ರೈತರ ಬಗ್ಗೆ ಕಾಳಜಿಯಳ್ಳವರಾಗಿದ್ದ ಪುಟ್ಟಣ್ಣಯ್ಯ, ಎಸ್.ಡಿ. ಜಯರಾಂರ ಮಾರ್ಗದರ್ಶನದಲ್ಲಿ 1983ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಪಾದಾರ್ಪಣೆ ಮಾಡಿದರು. ಬಳಿಕ ಪಾಂಡವಪುರ ತಾಲೂಕು ರೈತ ಸಂಘದ ಅಧ್ಯಕ್ಷರಾಗಿ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಹಾಗೂ ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಯಾದ್ರು. ನಂತರ 1999 ರಿಂದ 2012ರವರೆಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ ದುಡಿದರು. ಬಳಿಕ `ಸರ್ವೋದಯ ಕರ್ನಾಟಕ ಪಕ್ಷ’ದಿಂದ ಪಾಂಡವಪುರ ಶಾಸಕರಾಗಿ ಆಯ್ಕೆಯಾದರು.

    ಪ್ರೊಫೆಸರ್ ನಂಜುಂಡಸ್ವಾಮಿಯ ಚಿಂತನೆಗಳು ಕೆ.ಎಸ್. ಪುಟ್ಟಣ್ಣಯ್ಯರನ್ನು ಆಕರ್ಷಿಸಿತ್ತು. ಇನ್ನು ಏಕಾಏಕಿ ಸಾಲಗಾರರ ಮನೆಗಳನ್ನು ಜಪ್ತಿಮಾಡುವ ಪ್ರಕ್ರಿಯೆಗೆ ನಿರ್ಬಂಧ, ಕಬ್ಬಿಗೆ ಬೆಂಬಲ ಬೆಲೆ, ಕಾವೇರಿ ಹೋರಾಟದಲ್ಲೂ ಪುಟ್ಟಣ್ಣಯ್ಯ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಪುಟ್ಟಣ್ಣಯ್ಯ ರೈತ ನಾಯಕ ಮಾತ್ರವಲ್ಲದೇ ಉತ್ತಮ ಕಬಡ್ಡಿ, ಕುಸ್ತಿಪಟುವಾಗಿದ್ದರು. ಇನ್ನು ಶಾಸಕರಾಗಿ ಎಲ್ಲರೂ ಆಡಂಬರದ ಓಡಾಟ ಇಟ್ಟುಕೊಂಡಿದ್ದರೆ, ಪುಟ್ಟಣ್ಣಯ್ಯ ಮಾತ್ರ ರಾಜ್ಯದೆಲ್ಲೆಡೆ ಮಾತ್ರವಲ್ಲದೇ ವಿಧಾನಸಭೆಯೊಳಗೆ ಹಸಿರು ಶಾಲು ಧರಿಸಿಕೊಂಡೇ ಓಡಾಡುತ್ತಿದ್ದರು. ಕಾರ್ಯಕರ್ತರು, ರೈತರ ಮನೆಗೆ ಭೇಟಿ ನೀಡಿದರೆ ಸಾಮಾನ್ಯರಂತೆ ಮಜ್ಜಿಗೆ ಕುಡಿದು ತೆರಳುತ್ತಿದ್ದ ಆದರ್ಶ ರಾಜಕಾರಣಿಯಾಗಿದ್ದರು. ಇಂತಹ ರೈತ ನಾಯಕ ಇಹಲೋಕ ತ್ಯಜಿಸಿದ್ದು, ಅನ್ನದಾತರೇ ಒಂಟಿಯಾದಂತಾಗಿದೆ.

    https://www.youtube.com/watch?v=TuaPJAz2Uyw&feature=youtu.be

    https://www.youtube.com/watch?v=9Mk5JbCzl0I&feature=youtu.be