Tag: Fighter Jets

  • ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ ನೌಕಾಪಡೆಗೆ ಅಧಿಕೃತ ಸೇರ್ಪಡೆ

    ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ ನೌಕಾಪಡೆಗೆ ಅಧಿಕೃತ ಸೇರ್ಪಡೆ

    ನವಹದೆಲಿ: ದೇಶವು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ‘ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ವಿಮಾನವಾಹಕ ಯುದ್ಧನೌಕೆ ‘ವಿಕ್ರಾಂತ್‌’ ಅನ್ನು ಸೆಪ್ಟೆಂಬರ್‌ 2ರಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಿದ್ದಾರೆ.

    ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್‌ಎಲ್) 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾದ ಯುದ್ಧ ನೌಕೆ ವಿಕ್ರಾಂತ್‌ ಅನ್ನು ಈಗಾಗಲೇ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದ್ದು, ಅಂದು ಪ್ರಧಾನಿ ಅಧೀಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸ್ಥಾನವನ್ನು ಗಮನಾರ್ಹವಾಗಿ ಬಲಪಡಿಸುವ ನಿಟ್ಟಿನಲ್ಲಿ ಈ ನೌಕೆ ಕಾರ್ಯ ನಿರ್ವಹಿಸಲಿದೆ. ವಿಕ್ರಾಂತ್‌ ಕಳೆದ ಜುಲೈನಲ್ಲಿ ತನ್ನ ಅಂತಿಮ ಹಂತದ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ವಿಕ್ರಾಂತ್ ನಿರ್ಮಾಣವನ್ನು 2009ರ ಫೆಬ್ರವರಿ 28ರಿಂದ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಪ್ರಾರಂಭಿಸಲಾಯಿತು. 2020ರ ಡಿಸೆಂಬರ್ ನಲ್ಲಿ ಸಿಎಸ್ಎಲ್ ನಡೆಸಿದ ಜಲಾನಯನ ಪ್ರಯೋಗಗಳಲ್ಲಿ ವಿಮಾನವಾಹಕ ನೌಕೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. 40 ಸಾವಿರ ಟನ್ ತೂಕದ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ವಿಕ್ರಾಂತ್ ಎಲ್ಲಾ 4 ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲ ಪರೀಕ್ಷೆಯು ಕಳೆದ ವರ್ಷ ಆಗಸ್ಟ್ 21ರಂದು ಪೂರ್ಣಗೊಂಡಿತು. 2ನೇಯದು ಅಕ್ಟೋಬರ್ 21ರಂದು ಮತ್ತು 3ನೇ ಪರೀಕ್ಷೆಯು ಈ ವರ್ಷ ಜನವರಿ 22 ರಂದು ಪೂರ್ಣಗೊಂಡಿತು. ವಿಕ್ರಾಂತ್ ಕೊನೆಯ ಮತ್ತು 4ನೇ ಸಮುದ್ರ ಪ್ರಯೋಗಗಳು ಮೇ ತಿಂಗಳಲ್ಲಿ ಪ್ರಾರಂಭವಾಗಿದ್ದು ಇದು ಈ ತಿಂಗಳ ಆರಂಭದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

    ಇದು MiG-29K ಫೈಟರ್ ಜೆಟ್‌ಗಳು, Kamov-31, MH-60R ಬಹು-ಪಾತ್ರ ಹೆಲಿಕಾಪ್ಟರ್‌ಗಳ ಜೊತೆಗೆ ಸ್ಥಳೀಯವಾಗಿ ನಿರ್ಮಿಸಲಾದ ಲಘು ಹೆಲಿಕಾಪ್ಟರ್‌ಗಳು (ALH) ಮತ್ತು ಲಘು ಯುದ್ಧ ವಿಮಾನ (LCA) ಸೇರಿದಂತೆ ಸುಮಾರು 30 ವಿಮಾನಗಳನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದು Kamov Ka-31 ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಅನ್ನು ಅಳವಡಿಸಲಾಗಿದೆ. ವಿಕ್ರಾಂತ್‌ ಅನ್ನು ಸೇನೆಗೆ ಸೇರಿಸುವ ಮೂಲಕ ಭಾರತವು ಸ್ಥಳೀಯವಾಗಿ ವಿಮಾನನೌಕೆ ವಿನ್ಯಾಸಗೊಳಿಸುವ ಮತ್ತು ಸ್ಥಾಪಿಸುವ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದೆ.

    ವಿಕ್ರಾಂತ್‌ ವಿಶೇಷತೆ ಏನು?

    • ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಓಆರ್) ಭಾರತದ ಸ್ಥಾನವನ್ನು ಮತ್ತು ನೀಲಿಜಲ ನೌಕಾಪಡೆಯ ಅನ್ವೇಷಣೆಯನ್ನು ಹೆಚ್ಚಿಸಲು‌ ಕಾರ್ಯನಿರ್ವಹಿಸುತ್ತದೆ.
    • 2,300 ವಿಭಾಗಗಳನ್ನು ಹೊಂದಿದ್ದು, ಮಹಿಳಾ ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳನ್ನು ಒಳಗೊಂಡಂತೆ 1,700 ಸಿಬ್ಬಂದಿಗಾಗಿ ವಿನ್ಯಾಸ ಮಾಡಲಾಗಿದೆ.
    • ನೌಕೆಯು 262 ಮೀಟರ್‌ ಉದ್ದ, 62 ಮೀಟರ್‌ ಅಗಲ ಮತ್ತು 59 ಮೀಟರ್ ಎತ್ತರವಿದೆ. ಇದರ ನಿರ್ಮಾಣಕಾರ್ಯ 2009ರಲ್ಲಿ ಆರಂಭಗೊಂಡಿತ್ತು.
    • 8 ಪವರ್‌ ಜನರೇಟರ್‌ಗಳನ್ನು ಒಳಗೊಂಡಿದ್ದು, ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಆಸ್ಪತ್ರೆಯನ್ನೂ ಇದೇ ಸಂಕಿರ್ಣದಲ್ಲಿ ನಿರ್ಮಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    ತೈಪೆ: ಚೀನಾ ಹಾಗೂ ತೈವಾನ್ ನಡುವಣ ಸಂಘರ್ಷ ಶಮನಗೊಳ್ಳುತ್ತಿದೆ ಅಂದುಕೊಳ್ಳುತ್ತಿರುವಾಗಲೇ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

    ಉಕ್ರೇನ್ ಯುದ್ಧದ ನಂತರ ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿರುವ ವಿಶ್ವದ ಹಲವು ದೇಶಗಳು ಮತ್ತೊಂದು ಸಂಘರ್ಷ ಬೇಡ ಎನ್ನುವ ನಿಲುವಿಗೆ ಬಂದಿವೆ. ಈ ನಡುವೆ ಸಮರಾಭ್ಯಾಸದ ನೆಪದಲ್ಲಿ ತೈವಾನ್ ಕೊಲ್ಲಿಯಲ್ಲಿ ಚೀನಾ ಗಸ್ತು ಹೆಚ್ಚಿಸಿದ್ದು, ಇಡೀ ದ್ವೀಪಕ್ಕೆ ದಿಗ್ಬಂಧನ ಹಾಕುವ ತಾಲೀಮು ಮುಂದುವರಿಸಿದೆ. ಇದನ್ನೂ ಓದಿ: ಮಡಕೆ ಒಡೆಯುವ ಜಾನ್ ಸಿನಾ ಫೋಟೋ ಹಂಚಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಶುಭಕೋರಿದ WWE

    ತೈವಾನ್ ಸುತ್ತಲೂ 21 ಯುದ್ಧವಿಮಾನಗಳು ಹಾಗೂ 5 ರಕ್ಷಣಾ ಹಡಗುಗಳಿಂದ ತೈವಾನ್‌ನನ್ನು ಸುತ್ತುವರಿದಿದೆ. ಅವುಗಳಲ್ಲಿ ಚೀನಾದ ಮಿಲಿಟರಿಯಿಂದ 17 ವಿಮಾನಗಳು ಹಾಗೂ 5 ಹಡಗುಗಳನ್ನು ಸುತ್ತುರವರಿದಿರುಬವುದನ್ನು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಟ್ರ್ಯಾಕ್‌ ಮಾಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    17 ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ (ಪಿಎಲ್‌ಎಎಎಫ್) ಯುದ್ಧ ವಿಮಾನಗಳಲ್ಲಿ 8 ತೈವಾನ್ ಜಲಮಾರ್ಗದ ಮಧ್ಯ ಗಡಿಯನ್ನು ದಾಟಿವೆ. ಕ್ಸಿಯಾನ್ ಜೆಎಚ್-7 ಫೈಟರ್-ಬಾಂಬರ್‌ಗಳು, ಎರಡು ಸುಖೋಯ್ ಎಸ್‌ಯು-30 ಫೈಟರ್‌ಗಳು ಹಾಗೂ ಎರಡು ಶೆನ್ಯಾಂಗ್ ಎ-11 ಜೆಟ್‌ಗಳನ್ನು ಒಳಗೊಂಡಿವೆ. ಚೀನಾದ ಈ ಎಲ್ಲ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ತೈವಾನ್ ಯುದ್ಧ ವಾಯುಪಡೆಗಳು, ನೌಕಾಪಡೆಯ ಹಡಗುಗಳು ಹಾಗೂ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಗಡಿ ಬಳಿ ಯುದ್ಧ ವಿಮಾನ ಹಾರಿಸಿ ಭಾರತವನ್ನು ಕೆಣಕುತ್ತಿದೆ ಚೀನಾ

    ಗಡಿ ಬಳಿ ಯುದ್ಧ ವಿಮಾನ ಹಾರಿಸಿ ಭಾರತವನ್ನು ಕೆಣಕುತ್ತಿದೆ ಚೀನಾ

    ನವದೆಹಲಿ: ಒಂದು ಕಡೆ ಶಾಂತಿ ಮಾತುಕತೆ ನಡೆಸುತ್ತಿರುವ ಡ್ರ್ಯಾಗನ್ ದೇಶ ಚೀನಾ, ಮತ್ತೊಂದು ಕಡೆ ಕಾಲ್ಕೇರದು ಜಗಳಕ್ಕೆ ಬರುತ್ತಿದೆ. ಭಾರತವನ್ನು ಪ್ರಚೋದಿಸಲು ಚೀನಾ ವಾಯುಸೇನೆ ಪ್ರಯತ್ನ ನಡೆಸುತ್ತಿದ್ದು ಎಲ್‌ಎಸಿ(ವಾಸ್ತವ ಗಡಿ ನಿಯಂತ್ರಣ ರೇಖೆ) ಬಳಿ ಯುದ್ಧ ವಿಮಾನಗಳನ್ನು ಹಾರಿಸಲಾಗುತ್ತಿದೆ.

    ಚೀನಾದ ವಾಯುಪಡೆಯ ಯುದ್ಧ ವಿಮಾನಗಳು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ಎಲ್‌ಎಸಿ ತುಂಬಾ ಹತ್ತಿರದಲ್ಲಿ ಹಾರುತ್ತಿವೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ. ಚೀನಾದ ಚಟುವಟಿಕೆಗಳನ್ನು ಭಾರತೀಯ ವಾಯು ಸೇನೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಚೀನಾದ ಯುದ್ಧ ವಿಮಾನಗಳ ಸಂಭವನೀಯ ಬೆದರಿಕೆಯನ್ನು ನಿಭಾಯಿಸಲು ಸುಧಾರಿತ ನೆಲೆಗಳಲ್ಲಿ ಅನೇಕ ಯುದ್ಧ ವಿಮಾನಗಳನ್ನು ಸಿದ್ದವಾಗಿರಿಸಿದೆ ಎಂದು ಹಿರಿಯ ಸೇನಾ ಅಧಿಕಾರಿಗಳು ಹೇಳಿದ್ದಾರೆ.

    ಜೂನ್ ತಿಂಗಳ ಕಡೆಯ ವಾರದಲ್ಲೂ ಚೀನಾ ಇಂತಹದೇ ಪ್ರಯತ್ನ ಮಾಡಿ ಭಾರತವನ್ನು ಕೆಣಕುವ ಪ್ರಯತ್ನ ಮಾಡಿತ್ತು. ಎಲ್‌ಎಸಿ ಬಳಿ ಯುದ್ಧ ವಿಮಾನ ಹಾರಾಟ ನಡೆಸಿತ್ತು, ಇದಕ್ಕೆ ಪ್ರತಿಯಾಗಿ ಭಾರತ ತನ್ನ ಯುದ್ಧ ವಿಮಾನಗಳ ಹಾರಾಟ ನಡೆಸಿದ ಬಳಿಕ ಚೀನಾ ತೆಪ್ಪಾಗಾಗಿತ್ತು. ಇದನ್ನೂ ಓದಿ: ಬ್ಯಾಂಕ್ ಮುಂದೆ ಪ್ರತಿಭಟನೆ – ಜನರನ್ನು ಚದುರಿಸಲು ಯುದ್ಧ ಟ್ಯಾಂಕರ್ ನಿಲ್ಲಿಸಿದ ಚೀನಾ

    ಭಾರತ ಮತ್ತು ಚೀನಾದ ನಡುವೆ ಗಡಿಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ 16 ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಗಳು ನಡೆಯುತ್ತಿರುವ ಹೊತ್ತಲ್ಲೇ ಚೀನಾ ಈ ಉದ್ಧಟತನ ಮಾಡಿದೆ.

    Live Tv
    [brid partner=56869869 player=32851 video=960834 autoplay=true]