Tag: FIFA World Cup

  • ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    ಕತಾರ್: ಫಿಫಾ ವಿಶ್ವಕಪ್ (FIFA World Cup)  ಇತಿಹಾಸದಲ್ಲಿ ನಿನ್ನೆ ನಡೆದ ಅರ್ಜೆಂಟೀನಾ (Argentina) ಮತ್ತು ಮೆಕ್ಸಿಕೋ (Mexico) ನಡುವಿನ ಪಂದ್ಯದಲ್ಲಿ ಬರೋಬ್ಬರಿ 88,966 ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸಿ ಪಂದ್ಯ ನೋಡಿ ದಾಖಲೆ ಬರೆದಿದ್ದಾರೆ.

    ಶನಿವಾರ ರಾತ್ರಿ 12:30ಕ್ಕೆ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯಕ್ಕೆ ಅಭಿಮಾನಿಗಳು ಕಿಕ್ಕಿರಿದು ಆಗಮಿಸಿದರು. ವಿಶ್ವಕಪ್‍ನಲ್ಲಿ ಅಳಿವು ಉಳಿವಿನ ಪರಿಸ್ಥಿತಿಯೊಂದಿಗೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಒತ್ತಡದಲ್ಲಿತ್ತು. ಹಾಗಾಗಿ ಅರ್ಜೆಂಟೀನಾ ಮತ್ತು ಮೆಸ್ಸಿ (Lionel Messi) ಅಭಿಮಾನಿಗಳು ಒಟ್ಟಿಗೆ ತಂಡಕ್ಕೆ ಚಿಯರ್ ಅಪ್ ಮಾಡಲು ಕ್ರೀಡಾಂಗಣಕ್ಕೆ ಆಗಮಿಸಿದರು. ಇದನ್ನೂ ಓದಿ: ಡು ಆರ್ ಡೈ ಪಂದ್ಯದಲ್ಲಿ ಮಿಂಚಿದ ಮೆಸ್ಸಿ – ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡ ಅರ್ಜೆಂಟೀನಾ

    ಲುಸೈಲ್ ಕ್ರೀಡಾಂಗಣದಲ್ಲಿ ಬರೋಬ್ಬರಿ 88,966 ಜನ ಕಿಕ್ಕಿರಿದು ತುಂಬಿದರು. ಇದು ಕಳೆದ 28 ವರ್ಷಗಳ ವಿಶ್ವಕಪ್ ಇತಿಹಾದಲ್ಲಿ ಅತೀ ಹೆಚ್ಚಿನ ಪ್ರೇಕ್ಷಕರು ಪಂದ್ಯ ವೀಕ್ಷಿಸಿದ ದಾಖಲೆ ಬರೆಯಿತು. ಸ್ಟೇಡಿಯಂನ ಹೊರ ಭಾಗದಲ್ಲೂ ಜನ ಮುಗಿಬಿದ್ದಿದ್ದರು. ವಿಶ್ವದಾದ್ಯಂತ ಫ್ಯಾನ್ಸ್ ಅಲ್ಲಲ್ಲಿ ಫ್ಯಾನ್ಸ್‌ ಆರ್ಮಿ ಸೇರಿ ಪಂದ್ಯ ವೀಕ್ಷಿಸಿದವರು. ಇದನ್ನೂ ಓದಿ: ಕಾಡಿದ ವರುಣ – 2ನೇ ಏಕದಿನ ಪಂದ್ಯ 12 ಓವರ್‌ಗಳಿಗೆ ಅಂತ್ಯ

    ಪಂದ್ಯದಲ್ಲಿ 64 ನಿಮಿಷದಲ್ಲಿ ಅರ್ಜೆಂಟೀನಾ ಪರ ನಾಯಕ ಮೆಸ್ಸಿ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಅರ್ಜೆಂಟೀನಾ ಎಲ್ಲಾ ವಿಭಾಗದಲ್ಲೂ ಮೆಕ್ಸಿಕೋ ವಿರುದ್ಧ ಪ್ರಬಲವಾಗಿ ಕಂಡಿತು. ಪರಿಣಾಮ 87ನೇ ನಿಮಿಷದಲ್ಲಿ ಎಂಝೋ ಫೆರ್ನಾಂಡಿಸ್ ಮತ್ತೊಂದು ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಕರಿಸಿದರು. ಬಳಿಕ ಮೆಕ್ಸಿಕೋ ಗೋಲು ಸಿಡಿಸಲು ಶತಪ್ರಯತ್ನಿಸಿದರೂ ಅರ್ಜೆಂಟೀನಾ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.

    ಅಂತಿಮವಾಗಿ ಫುಲ್‍ಟೈಮ್ ಮುಕ್ತಾಯದ ವೇಳೆಗೆ 2-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದ್ದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ನೋವು ಮರೆಸಿತು.

    Live Tv
    [brid partner=56869869 player=32851 video=960834 autoplay=true]

  • ಡು ಆರ್ ಡೈ ಪಂದ್ಯದಲ್ಲಿ ಮಿಂಚಿದ ಮೆಸ್ಸಿ – ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡ ಅರ್ಜೆಂಟೀನಾ

    ಡು ಆರ್ ಡೈ ಪಂದ್ಯದಲ್ಲಿ ಮಿಂಚಿದ ಮೆಸ್ಸಿ – ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡ ಅರ್ಜೆಂಟೀನಾ

    ಕತಾರ್: ಫಿಫಾ ವಿಶ್ವಕಪ್‍ನಲ್ಲಿ (FIFA World Cup) ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೆಕ್ಸಿಕೋ (Mexico) ವಿರುದ್ಧ 2-0 ಅಂತರದ ಗೋಲುಗಳಿಂದ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ (Argentina) ಗೆಲುವು ದಾಖಲಿಸಿ ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡಿದೆ.

    ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಮೆಸ್ಸಿ (Lionel Messi) ಬಳಗ ಎದುರಾಳಿಗೆ ಎಲ್ಲಾ ವಿಭಾಗದಲ್ಲೂ ಕಂಟಕವಾಗಿ ಕಾಡಿತು. ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 64 ನಿಮಿಷದಲ್ಲಿ ಅರ್ಜೆಂಟೀನಾ ಪರ ನಾಯಕ ಮೆಸ್ಸಿ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಇದನ್ನೂ ಓದಿ: ಭಾರತಕ್ಕೆ ವಿಶ್ವಕಪ್ ಟೂರ್ನಿ ಬಹಿಷ್ಕರಿಸೋ ಬೆದರಿಕೆ ಹಾಕಿದ ಪಾಕ್

    ಬಳಿಕ ರೋಚಕವಾಗಿ ಸಾಗಿದ ಕಾದಾಟದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನಿಂದ ಕಾದಾಡಿದವು. ಅರ್ಜೆಂಟೀನಾ ಎಲ್ಲಾ ವಿಭಾಗದಲ್ಲೂ ಮೆಕ್ಸಿಕೋ ವಿರುದ್ಧ ಪ್ರಬಲವಾಗಿ ಕಂಡಿತು. ಪರಿಣಾಮ 87ನೇ ನಿಮಿಷದಲ್ಲಿ ಎಂಝೋ ಫೆರ್ನಾಂಡಿಸ್ ಮತ್ತೊಂದು ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಕರಿಸಿದರು. ಬಳಿಕ ಮೆಕ್ಸಿಕೋ ಗೋಲು ಸಿಡಿಸಲು ಶತಪ್ರಯತ್ನಿಸಿದರೂ ಅರ್ಜೆಂಟೀನಾ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ. ಇದನ್ನೂ ಓದಿ: ಜಡೇಜಾ ಟೀಂ ಇಂಡಿಯಾ ಪರ ಆಡಲು ಅನ್‍ಫಿಟ್ – ಬಿಜೆಪಿ ಪರ ಪ್ರಚಾರಕ್ಕೆ ಫಿಟ್

    ಅಂತಿಮವಾಗಿ ಫುಲ್‍ಟೈಮ್ ಮುಕ್ತಾಯದ ವೇಳೆಗೆ 2-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದ್ದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ನೋವು ಮರೆಸಿತು. ಜೊತೆಗೆ ನಾಕೌಟ್‍ಗೇರುವ ಅವಕಾಶವನ್ನು ಉಳಿಸಿಕೊಂಡಿತು.

    ಅತ್ತ ಗೆಲುವಿನ ಹೀರೋ ಆಗಿ ಅರ್ಜೆಂಟೀನಾ ದಿಗ್ಗಜ ಆಟಗಾರ ಮೆಸ್ಸಿ ಮೆರೆದಾಡಿದರು. ಮೆಕ್ಸಿಕೋ ವಿರುದ್ಧ ಏಕೈಕ ಗೋಲು ಸಿಡಿಸಿದ ಮೆಸ್ಸಿ ವಿಶ್ವಕಪ್‍ನಲ್ಲಿ ಈವರೆಗೆ ಅರ್ಜೆಂಟೀನಾ ಪರ 8 ಗೋಲು ಸಿಡಿಸಿದ ಸಾಧನೆ ಮಾಡಿದರು. ಈ ಸಾಧನೆಯೊಂದಿಗೆ ಫುಟ್‍ಬಾಲ್ ದಂತಕಥೆ ಅರ್ಜೆಂಟೀನಾದ ಮಾಜಿ ಆಟಗಾರ ಡಿಯಾಗೋ ಮರಡೋನಾ ಅವರ 8 ಗೋಲುಗಳ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ. ಇವರಿಬ್ಬರೂ ಕೂಡ ತಾವಾಡಿದ 21 ಪಂದ್ಯಗಳಲ್ಲಿ 8 ಗೋಲು ಸಿಡಿಸಿ ಮಿಂಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರ್ಜೆಂಟೀನಾಗೆ ಮಾಡು ಇಲ್ಲವೇ ಮಡಿ ಪಂದ್ಯ – ಕತಾರ್ ಕಥೆ ಮುಗಿಯಿತು

    ಅರ್ಜೆಂಟೀನಾಗೆ ಮಾಡು ಇಲ್ಲವೇ ಮಡಿ ಪಂದ್ಯ – ಕತಾರ್ ಕಥೆ ಮುಗಿಯಿತು

    ಕತಾರ್: ಅರಬ್ಬರ ನಾಡಲ್ಲಿ ಫಿಫಾ ವಿಶ್ವಕಪ್ (FIFA World Cup) ಆರಂಭಕ್ಕೂ ಮುನ್ನ ಲಿಯೋನೆಲ್ ಮೆಸ್ಸಿ (Lionel Messi) ಸಾರಥ್ಯದ ಅರ್ಜೆಂಟೀನಾ (Argentina) ತಂಡದ ಪರ ನಿರೀಕ್ಷೆ ಹೆಚ್ಚಿತ್ತು. ಆದರೆ ಇದೀಗ ಅರ್ಜೆಂಟೀನಾ ಮಾಡು ಇಲ್ಲವೇ ಮಡಿ ಹಂತಕ್ಕೆ ತಲುಪಿದೆ.

    ಫುಟ್‍ಬಾಲ್‍ನ ದಿಗ್ಗಜ ಆಟಗಾರ ಮೆಸ್ಸಿ ಮುಂದಾಳತ್ವದಲ್ಲಿ ಫಿಫಾ ವಿಶ್ವಕಪ್ ಆಡಲು ಕತಾರ್‌ಗೆ ಬಂದಿಳಿಯುತ್ತಿದ್ದಂತೆ ಅರ್ಜೆಂಟೀನಾ ಫುಟ್‍ಬಾಲ್ ಪ್ರಿಯರ ಅಚ್ಚುಮೆಚ್ಚಿನ ತಂಡವಾಗಿತ್ತು. ಆದರೆ ತನ್ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ (Saudi Arabia) ವಿರುದ್ಧ ಅಚ್ಚರಿ ಎಂಬಂತೆ ಅರ್ಜೆಂಟೀನಾ ಸೋತು ತನ್ನ ನಾಕೌಟ್ ಹಾದಿಯನ್ನು ದುರ್ಬಲಗೊಳಿಸಿಕೊಂಡಿದೆ. ಇದೀಗ ಎರಡನೇ ಪಂದ್ಯವಾಡಲು ಸಜ್ಜಾಗಿದ್ದು, ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಗೆಲುವು – ಸೌದಿ ಅರೇಬಿಯಾ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್ ಘೋಷಿಸಿದ ಸರ್ಕಾರ

    ಸೌದಿ ಅರೇಬಿಯಾ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾದ ಅರ್ಜೆಂಟೀನಾ, ವಿಶ್ವಕಪ್‍ನ ನಾಕೌಟ್ ರೇಸ್‍ನಲ್ಲಿ ಉಳಿಯಬೇಕಿದ್ದರೆ ಮೆಕ್ಸಿಕೋ ವಿರುದ್ಧದ ಎರಡನೇ ಪಂದ್ಯ ಗೆಲ್ಲಲೇಬೇಕಿದೆ. ಹಾಗಾಗಿ ಮೆಸ್ಸಿ ಚಿತ್ತ ಗೆಲುವಿನತ್ತ ನೆಟ್ಟಿದೆ.

    ಆದರೆ ಅರ್ಜೆಂಟೀನಾಗೆ ಪ್ರಬಲ ಪೈಪೋಟಿ ನೀಡಲು ಮೆಕ್ಸಿಕೋ (Mexico) ಸಿದ್ಧವಾಗಿದೆ. ಇದಕ್ಕಾಗಿ ರಣತಂತ್ರವನ್ನು ಹೆಣೆದಿದ್ದು, 2014-16ರ ವರೆಗೆ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದ ಗೆರಾರ್ಡೊ ಮಾರ್ಟಿನೋ ಈಗ ಮೆಕ್ಸಿಕೋ ಕೋಚ್ ಆಗಿದ್ದಾರೆ. ಎದುರಾಳಿಯ ತಂತ್ರಗಾರಿಕೆಯನ್ನು ಸರಿಯಾಗಿ ಅರಿತಿದ್ದಾರೆ. ಹೀಗಾಗಿ ಅರ್ಜೆಂಟೀನಾ ಹೊಸ ಹಾಗೂ ವಿಭಿನ್ನ ರಣತಂತ್ರಗಳೊಂದಿಗೆ ಮೈದಾನಕ್ಕಿಳಿಯಬೇಕಿದೆ. ವಿಶ್ವಕಪ್‍ನಲ್ಲಿ ಅರ್ಜೆಂಟೀನಾ ವಿರುದ್ಧ ಮೆಕ್ಸಿಕೋ 3 ಬಾರಿ ಸೆಣಸಾಡಿದ್ದು ಒಮ್ಮೆಯೂ ಗೆದ್ದಿಲ್ಲ. ಇದನ್ನೂ ಓದಿ: ಬ್ರೆಜಿಲ್‌ಗೆ ಆಘಾತ – ಮುಂದಿನ ಪಂದ್ಯಗಳಲ್ಲಿ ಆಡಲ್ಲ ನೇಮರ್

    ಇಂದು ಲುಸೈಲ್ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 12:30ಕ್ಕೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮೆಸ್ಸಿ ಮ್ಯಾಜಿಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

    ಕತಾರ್ ಕಥೆ ಮುಗಿಯಿತು:
    ಆತಿಥೇಯ ಕತಾರ್ ಹಾಗೂ ಸೆನೆಗಲ್ ನಡುವಿನ ಪಂದ್ಯದಲ್ಲಿ 1-3 ಗೋಲುಗಳಲ್ಲಿ ಕತಾರ್ ಸೋಲುಂಡಿತು. 41ನೇ ನಿಮಿಷದಲ್ಲಿ ಬೌಲಾಯೆ ಡಿಯಾ, 48ನೇ ನಿಮಿಷದಲ್ಲಿ ಫಮಾರಾ ಡೈಡಿಯೊ, 84ನೇ ನಿಮಿಷದಲ್ಲಿ ಬಂಬಾ ಡಿಯೆಂಗ್ ಸೆನೆಗಲ್ ಪರ ಗೋಲು ಬಾರಿಸಿದರೆ, ಕತಾರ್ ಪರ 78ನೇ ನಿಮಿಷದಲ್ಲಿ ಮೊಹಮದ್ ಮುಂಟಾರಿ ಏಕೈಕ ಗೋಲು ದಾಖಲಿಸಿದರು. ಹೀಗಾಗಿ ಕತಾರ್‌ ಸೋಲು ಕಾಣಬೇಕಾಯಿತು. ಈ ಮೂಲಕ ಕತಾರ್ ಗುಂಪು ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ವಿವಾದ – ಫಿಫಾ ವಿಶ್ವಕಪ್‍ನಲ್ಲಿ ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್

    ಹಿಜಬ್ ವಿವಾದ – ಫಿಫಾ ವಿಶ್ವಕಪ್‍ನಲ್ಲಿ ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್

    ಕತಾರ್: ಅರಬ್ಬರ ನಾಡಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಫುಟ್‍ಬಾಲ್ (FootBall) ಟೂರ್ನಿ ವಿವಾದಗಳಿಂದ ಸದ್ದು ಮಾಡುತ್ತಿದೆ. ಇದೀಗ ಇರಾನ್ (Iran) ತಂಡ ತಮ್ಮ ದೇಶದ ರಾಷ್ಟ್ರಗೀತೆಯನ್ನು (National Anthem) ಹಾಡಲು ನಿರಾಕರಿಸಿ ಹೊಸ ವಿವಾದ ಹುಟ್ಟು ಹಾಕಿದೆ.

    ಫಿಫಾ ವಿಶ್ವಕಪ್ ಕತಾರ್‌ನಲ್ಲಿ (Qatar) ಬಹಳ ಅದ್ಧೂರಿಯಾಗಿ ಆರಂಭ ಕಂಡಿದೆ. ಫುಟ್‍ಬಾಲ್ ಪಂದ್ಯದ ನಡುವೆ ಆನ್‍ಫೀಲ್ಡ್‌ನಲ್ಲಿ ಕಿತ್ತಾಟ ಸಾಮಾನ್ಯ ಆದರೆ ಕತಾರ್‌ನಲ್ಲಿ ಆನ್‍ಫೀಲ್ಡ್ ಮತ್ತು ಆಫ್‍ದೀಫೀಲ್ಡ್‌ನಲ್ಲಿ ಕೆಲ ವಿವಾದ ಹೆಚ್ಚು ಪ್ರಚಾರ ಕಂಡಿದೆ. ಇದೀಗ ಈ ವಿವಾದಕ್ಕೆ ಹೊಸ ಸೇರ್ಪಡೆ ಎಂಬಂತೆ ಇಂಗ್ಲೆಂಡ್ (England) ಹಾಗೂ ಇರಾನ್ ನಡುವಿನ ಪಂದ್ಯಕ್ಕೂ ಮೊದಲು ರಾಷ್ಟ್ರಗೀತೆ ವಿವಾದ ಹುಟ್ಟಿಕೊಂಡಿದೆ. ಇರಾನ್ ಆಟಗಾರರು ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದಾರೆ. ಫುಟ್‍ಬಾಲ್ ಪಂದ್ಯ ಆರಂಭಕ್ಕೂ ಮುನ್ನ ಎರಡೂ ತಂಡಗಳ ರಾಷ್ಟ್ರಗೀತೆ ಹಾಡಿಸುವುದು ನಿಯಮ. ಆದರೆ ಇರಾನ್ ಆಟಗಾರರು ತಮ್ಮ ದೇಶದ ರಾಷ್ಟ್ರಗೀತೆ ಹಾಡದೇ ಪ್ರತಿಭಟಿಸಿದ್ದಾರೆ. ಇದನ್ನೂ ಓದಿ: ಹಿಂದಿನ ಎಲ್ಲ ಆದಾಯದ ದಾಖಲೆಗಳನ್ನು ಮುರಿಯಲಿದೆ ಈ ಬಾರಿಯ ಫಿಫಾ ಫುಟ್ಬಾಲ್ ವಲ್ಡ್ ಕಪ್

    ಇರಾನ್‍ನಲ್ಲಿ ನಡೆಯುತ್ತಿರುವ ಹಿಜಬ್ (Hijab) ವಿರುದ್ಧ ಪ್ರತಿಭಟನೆ ಬೆಂಬಲಿಸಿ ಇರಾನ್ ಫುಟ್‍ಬಾಲ್ ತಂಡ ಈ ನಿರ್ಧಾರ ತೆಗೆದುಕೊಂಡಿದೆ. ತಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡದೇ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ಫುಟ್‍ಬಾಲ್ ತಂಡದ ನಾಯಕ ಅಲಿರೆಜಾ ಜಹಾನ್‍ಬಕ್ಷ್, ನಾವು ರಾಷ್ಟ್ರಗೀತೆ ಹಾಡದಿರಲು ನಿರ್ಧರಿಸಿದ್ದೇವೆ. ಇರಾನ್‍ನಲ್ಲಿ ನಡೆಯತ್ತಿರುವ ಹಿಜಬ್ ವಿರುದ್ಧದ ಪ್ರತಿಭಟನೆ ಬೆಂಬಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್

    ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕೆ ಸೆ.16 ರಂದು ಮಹ್ಸಾ ಅಮಿನಿ ಅವರನ್ನು ಬಂಧಿಸಲಾಗಿತ್ತು. ನಂತರ ಆಕೆ ಸಾವಿಗೀಡಾದಳು. ಇರಾನ್‍ನ ನೈತಿಕ ಪೊಲೀಸ್‍ಗಿರಿಗೆ ಯುವತಿ ಬಲಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂತು. ಇದರ ಬೆನ್ನಲ್ಲೇ ಯುವತಿ ಸಾವು ಹಾಗೂ ಹಿಜಬ್ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ತೀವ್ರ ಸ್ವರೂಪ ಪಡೆದಿದ್ದು, ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿನ ಎಲ್ಲ ಆದಾಯದ ದಾಖಲೆಗಳನ್ನು ಮುರಿಯಲಿದೆ ಈ ಬಾರಿಯ ಫಿಫಾ ಫುಟ್ಬಾಲ್ ವಲ್ಡ್ ಕಪ್

    ಹಿಂದಿನ ಎಲ್ಲ ಆದಾಯದ ದಾಖಲೆಗಳನ್ನು ಮುರಿಯಲಿದೆ ಈ ಬಾರಿಯ ಫಿಫಾ ಫುಟ್ಬಾಲ್ ವಲ್ಡ್ ಕಪ್

    ನವದೆಹಲಿ: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫಿಫಾ ವಿಶ್ವಕಪ್ (FIFA World Cup) ಈ ಬಾರಿ ಕತಾರ್‌ನಲ್ಲಿ ಆರಂಭಗೊಂಡಿದೆ. ಡಿಸೆಂಬರ್ 18ರವರೆಗೂ ಪಂದ್ಯಗಳು ನಡೆಯಲಿದ್ದು, ಎಂಟು ಕ್ರೀಡಾಂಗಣದಲ್ಲಿ 64 ಪಂದ್ಯಗಳು ಆಯೋಜನೆಗೊಂಡಿದೆ.

    ಈ ಬಾರಿ ಫಿಫಾ ವಿಶ್ವಕಪ್‍ನಿಂದ ಬರುವ ಆದಾಯ ನಿರೀಕ್ಷೆಯ ಪ್ರಮಾಣ ಮೀರಲಿದೆ ಎಂದು ಹೇಳಲಾಗುತ್ತಿದೆ. ಜಾಗತಿಕ ಹಣಕಾಸು ಮಾಹಿತಿ ಮತ್ತು ವಿಶ್ಲೇಷಣಾ ಸೇವೆಗಳ ಪೂರೈಕೆದಾರ ಎಸ್ ಆ್ಯಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ನ ಹೊಸ ವಿಶ್ಲೇಷಣೆಯ ಪ್ರಕಾರ, ಜಾಗತಿಕ ಪ್ರೇಕ್ಷಕರು ಈ ಬಾರಿ ಮೈದಾನದಲ್ಲಿ ಭಾರೀ ಪ್ರಮಾಣದಲ್ಲಿ ನೆರೆಯಲಿದ್ದಾರೆ. ಇತ್ತ ಮೈದಾನದ ಹೊರಗೆ ಇಡೀ ತಂತ್ರಜ್ಞಾನ, ಮಾಧ್ಯಮ ಮತ್ತು ದೂರಸಂಪರ್ಕ ವಲಯದಲ್ಲಿ ಹೆಚ್ಚು ಆದಾಯದ ಅವಕಾಶಗಳಿದೆ ಎಂದು ಹೇಳಿದೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್ – CBIಗೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ

    ವಿಶ್ಲೇಷಣೆಯ ಪ್ರಕಾರ ಕತಾರ್ ಫಿಫಾ ವಿಶ್ವಕಪ್ USD 6.5 ಶತಕೋಟಿ ಗಳಿಸುವ ನಿರೀಕ್ಷೆಯಿದೆ. ಇದು ಹಿಂದಿನ ಎಲ್ಲಾ ಪಂದ್ಯಾವಳಿಗಳನ್ನು ಮೀರಿಸುತ್ತದೆ ಮತ್ತು 2002ರಲ್ಲಿ ಕೊರಿಯಾ ಮತ್ತು ಜಪಾನ್‍ನಲ್ಲಿ ಕಂಡುಬಂದ ಅಂಕಿ ಅಂಶಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ರಷ್ಯಾದಲ್ಲಿ 2018ರಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ, USD 5.2 ಶತಕೋಟಿ ಮೌಲ್ಯದ ಆದಾಯವನ್ನು ಗಳಿಸಿತ್ತು, ಫಿಫಾದ ಆದಾಯದ ಅರ್ಧದಷ್ಟು ಆದಾಯವು ಪ್ರಸಾರ ಹಕ್ಕುಗಳ ಶುಲ್ಕದಿಂದ ಬಂದಿತ್ತು. ಇದನ್ನೂ ಓದಿ: ಚುನಾವಣಾ ಅಭ್ಯರ್ಥಿಗಳನ್ನ ಘೋಷಣೆ ಮಾಡೋ ಹಕ್ಕು ಸಿದ್ದರಾಮಯ್ಯಗಿಲ್ಲ: ಡಿಕೆಶಿ

    ಈ ಬಾರಿಯ ವಿಶ್ವಕಪ್ ಪಂದ್ಯಗಳನ್ನು ಜೂನ್ ಜುಲೈನಲ್ಲಿ ನಡೆಸಬೇಕಿತ್ತು. ಆದರೆ ಹವಾಮಾನ ವೈಫರಿತ್ಯಗಳಿಂದ ನವೆಂಬರ್‌ನಲ್ಲಿ ನಡೆಸಲಾಗುತ್ತಿದೆ. ವರ್ಷದ ಕೊನೆಯಲ್ಲಿ ಪಂದ್ಯಗಳು ನಡೆಯುತ್ತಿರುವ ಹಿನ್ನೆಲೆ ಜಾಹೀರಾತು ದರದಲ್ಲಿ ಭಾರೀ ಏರಿಕೆ ಇರಲಿದೆ. ಇದರಿಂದ ಫಿಫಾ ವಿಶ್ವ ಕಪ್ ಆದಾಯ ಹೆಚ್ಚಲಿದೆ ಎಂದು ವಿಶ್ಲೇಷಿಸಿದೆ.

    Live Tv
    [brid partner=56869869 player=32851 video=960834 autoplay=true]

  • 2026ರ ಫಿಫಾ ವಿಶ್ವಕಪ್‌ಗೆ ಮೂರು ರಾಷ್ಟ್ರಗಳ ಆತಿಥ್ಯ – 32 ರಾಷ್ಟ್ರಗಳ 48 ತಂಡಗಳು ಭಾಗಿ

    2026ರ ಫಿಫಾ ವಿಶ್ವಕಪ್‌ಗೆ ಮೂರು ರಾಷ್ಟ್ರಗಳ ಆತಿಥ್ಯ – 32 ರಾಷ್ಟ್ರಗಳ 48 ತಂಡಗಳು ಭಾಗಿ

    ವಾಷಿಂಗ್ಟನ್: 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯಲಿದೆ. ಈಗಾಗಲೇ ಫಿಫಾ ಅಧ್ಯಕ್ಷ ಗಿಲಾನಿ ಇನ್ ಫ್ಯಾಂಟಿನೊ 2026ರ ವಿಶ್ವಕಪ್ ಟೂರ್ನಿಗೆ ಸಿದ್ಧತೆಗಳನ್ನು ಆರಂಭಿಸುವಂತೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊಗೆ ಸೂಚಿಸಿದ್ದಾರೆ.

    ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯುವುದರಿಂದ ಈ ಬಾರಿ ವಿಶ್ವಕಪ್ ಟೂರ್ನಿಯ ತಂಡಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಈ ಬಾರಿ 32 ರಾಷ್ಟ್ರಗಳಿಂದ 48 ತಂಡಗಳು ಪಾಲ್ಗೊಳ್ಳಲಿದ್ದು, 1994ರ ಫೈನಲಿಸ್ಟ್ ಉತ್ತರ ಅಮೆರಿಕ ತಂಡ ಇದೇ ಮೊದಲ ಬಾರಿ ವಿಶ್ವಕಪ್ ಅಖಾಡಕ್ಕೆ ಇಳಿಯಲಿದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

    ಅಮೆರಿಕದ 11, ಮೆಕ್ಸಿಕೊದ 3, ಕೆನಡಾದ 2 ಮೈದಾನಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಒಟ್ಟಾರೆ 80 ಪಂದ್ಯಗಳ ಪೈಕಿ 60 ಪಂದ್ಯಗಳು ಅಮೆರಿಕದಲ್ಲಿ, ಮೆಕ್ಸಿಕೊ ಹಾಗೂ ಕೆನಡಾದಲ್ಲಿ ತಲಾ 10 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಫೈನಲ್, ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯಗಳೂ ಸೇರಿವೆ.

    Live Tv

  • ದೂರದರ್ಶನದಲ್ಲೂ ಪ್ರಸಾರ ಆಗುತ್ತಾ ವಿದೇಶಿ ಕ್ರಿಕೆಟ್ ಟೂರ್ನಿ?

    ದೂರದರ್ಶನದಲ್ಲೂ ಪ್ರಸಾರ ಆಗುತ್ತಾ ವಿದೇಶಿ ಕ್ರಿಕೆಟ್ ಟೂರ್ನಿ?

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್, ಫಿಫಾ ವಿಶ್ವಕಪ್ ಹಾಗೂ ಒಲಿಂಪಿಕ್ ಕ್ರೀಡೆಗಳ ಲೈವ್ ಪ್ರಸಾರ ಮಾಡಿದ್ದ ದೂರದರ್ಶನ ಸದ್ಯ ವಿದೇಶಿ ನೆಲದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ಕೂಡ ಪ್ರಸಾರ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

    ಹೌದು. ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಟೂರ್ನಿಗಳ ಪ್ರಸಾರದ ಹಕ್ಕು ಪಡೆಯುವ ಕುರಿತು ದೂರದರ್ಶನ ಚಿಂತನೆ ನಡೆಸಿದೆ. ಇದರಂತೆ ಭಾರತ ಸರ್ಕಾರದ ತನ್ನ ಪ್ರಸಾರ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

    ಐಪಿಎಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳ ನೇರ ಪ್ರಸಾರಕ್ಕೆ ಅವಕಾಶ ಪಡೆದಿದ್ದ ಡಿಡಿ ಸದ್ಯ ನಡೆಯುತ್ತಿರುವ ಆಸೀಸ್ ವಿರುದ್ಧದ ಟೂರ್ನಿಯನ್ನು ಏಕೆ ಪ್ರಸಾರ ಮಾಡುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ. ಈ ಸಂಬಂಧ ಡಿಡಿ ಕ್ರೀಡಾ ಪ್ರಸಾರ ಸಿಗ್ನಲ್ ಕಾಯ್ದೆಯ ಅನ್ವಯ ಜಾಹೀರಾತು ರಹಿತ ಲೈವ್ ಪ್ರಸಾರ ಮಾಡುವ ಕುರಿತಂತೆ ಪ್ರಸಾರ ಭಾರತಿಯೊಂದಿಗೆ ಚರ್ಚೆ ನಡೆಸಿದೆ.

    ಆಸೀಸ್ ಟೂರ್ನಿಯ ಟೆಸ್ಟ್ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 5 ಗಂಟೆಗೆ ಆರಂಭವಾಗುತ್ತದೆ. ಈಗಲೂ ಭಾರತದ ಗ್ರಾಮೀಣ ವಲಯ ಹಾಗೂ ಹಲವು ಪಟ್ಟಣಗಳಲ್ಲಿ ಡಿಡಿ ವಾಹಿನಿಯನ್ನೇ ಜನರು ನೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಕ್ರಿಕೆಟ್ ಟೂರ್ನಿಯ ಪ್ರಸಾರದ ಕುರಿತು ಡಿಡಿ ಚಿಂತನೆ ನಡೆಸಿದೆ.

    ಈ ವರ್ಷ ನಡೆದ 11ನೇ ಆವೃತ್ತಿಯ ಐಪಿಎಲ್ ಟಿ20 ಟೂರ್ನಿ ಡಿಡಿಯಲ್ಲಿ ಪ್ರಸಾರ ಆಗಿತ್ತು. ನಂತರ ನಡೆದ ಇಂಗ್ಲೆಂಡ್ ನಲ್ಲಿ ನಡೆದ ಟೂರ್ನಿಯನ್ನು ಪ್ರಸಾರ ಮಾಡಿರಲಿಲ್ಲ. ಈಗ ಐಪಿಎಲ್ ಟೂರ್ನಿ ಹತ್ತಿರವಾಗುತ್ತಿರುವುದರಿಂದ ಆಸೀಸ್ ಸರಣಿಯ ಹಕ್ಕುಗಳನ್ನು ಹೊಂದಿರುವ ಸೋನಿ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಆದರೆ ಈ ಕುರಿತು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಮತ್ತು ಡಿಡಿ ನಡುವೆ ಭಿನ್ನಭಿಪ್ರಾಯ ಮೂಡಿತ್ತು. ಆದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶದ ಮಾಡಿದ ಕಾರಣ ಖಾಸಗಿ ವಾಹಿನಿ ಒಪ್ಪಂದದ ಮೇರೆಗೆ ಪ್ರಸಾರ ದೃಶ್ಯಗಳನ್ನು ಹಂಚಿಕೆ ಮಾಡಲು ಸಮ್ಮತಿ ಸೂಚಿಸಿತ್ತು. ಸದ್ಯ ಇಂತಹ ಗೊಂದಲಗಳಿಗೆ ತೆರೆ ಎಳೆಯಲು ಕೇಂದ್ರ ಸರ್ಕಾರ ಈಗ ಕ್ರೀಡಾ ಪ್ರಸಾರ ಸಿಗ್ನಲ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

    ವಿಶೇಷವೆಂದರೆ ಡಿಡಿ ವಾಹಿನಿ ಪ್ರೋ ಕಬಡ್ಡಿ ಕ್ರೀಡಾಕೂಟದ ಪ್ರಸಾರ ಹಕ್ಕುಗಳನ್ನ ಪಡೆಯಲು ಇದುವರೆಗೂ ಸ್ಟಾರ್ ವಾಹಿನಿಯನ್ನು ಸಂಪರ್ಕ ಮಾಡಿರಲಿಲ್ಲ. ಕಬಡ್ಡಿಗೆ ಭಾರತದ ಗ್ರಾಮೀಣ ಭಾಗದಲ್ಲೇ ಹೆಚ್ಚು ಜನ ಪ್ರೇಕ್ಷಕರು ಹೊಂದಿದ್ದರೂ ಈ ಕುರಿತು ಚಿಂತನೆ ನಡೆಸದಿರುವುದು ಅಚ್ಚರಿ ಮೂಡಿಸಿದೆ. ಫುಟ್ಬಾಲ್ ಲೀಗ್ ಪ್ರಸಾರದಲ್ಲೂ ಡಿಡಿ ಇದೇ ನಡೆಯನ್ನು ತೋರಿದೆ.

    ತಡವಾಗಿ ಐಪಿಎಲ್ ಪ್ರಸಾರ:
    ಭಾರತದಲ್ಲಿ ನಡೆಯುವ ಪಂದ್ಯಗಳನ್ನು ಜನರ ಅನುಕೂಲಕ್ಕಾಗಿ ಐಪಿಎಲ್ ಪ್ರಸಾರ ಮಾಡಲು ಅವಕಾಶ ಮಾಡಿಕೊಡಬೇಕೆಂಬ ದೂರದರ್ಶನದ ಮನವಿ ಮಾಡಿತ್ತು. ಡಿಡಿ ವಾಹಿನಿಗೆ ಆದಾಯ ಸೃಷ್ಟಿ ಮಾಡುವ ಉದ್ದೇಶದಿಂದ ವಾರ್ತಾ ಸಚಿವಾಲಯದ ಅಭಿಪ್ರಾಯದ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಈ ಮನವಿಯನ್ನು ಸ್ಟಾರ್ ಸಂಸ್ಥೆಯ ಮುಂದೆ ಪ್ರಸ್ತುತ ಪಡಿಸಿತ್ತು.

    ಈ ಮನವಿಗೆ ಸ್ಪಂದಿಸಿದ ಸ್ಟಾರ್ ನೆಟ್‍ವರ್ಕ್ ಐಪಿಎಲ್ ನ ಭಾನುವಾರ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಪ್ರಸಾರ ಮಾಡಲು ಅನುಮತಿ ನೀಡಿದೆ. ಅಲ್ಲದೇ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾದ ಬಳಿಕ ಒಂದು ಗಂಟೆ ತಡವಾಗಿ ದೂರದರ್ಶನ ಚಾನೆಲ್ ನಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗಲಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ಪಂದ್ಯಗಳಿಂದ ಗಳಿಸುವ ಆದಾಯದಲ್ಲಿ ಶೇ.50 ಆಧಾರ ಮೇಲೆ ಹಂಚಿಕೆ ಮಾಡಲಾಗಿದೆ.

    2017ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಐಪಿಎಲ್ ನೇರ ಪ್ರಸಾರದ ಮಾರಾಟ ಹಕ್ಕುಗಳನ್ನು ಸ್ಟಾರ್ ವಾಹಿನಿ ಪಡೆದುಕೊಂಡಿತ್ತು. ಸದ್ಯ ಇದರ ಜೊತೆಗೆ ಭಾರತದಲ್ಲಿ ನಡೆಯುವ ಎಲ್ಲಾ ದ್ವಿಪಕ್ಷೀಯ ಸರಣಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಸಂಸ್ಥೆ 6,138 ಕೋಟಿ ರೂ. ಗೆ ಪಡೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಗ್ಲೆಂಡಿನ ಹ್ಯಾರಿ ಕೇನ್‍ಗೆ ಗೋಲ್ಡನ್ ಬೂಟ್: ಯಾವ ತಂಡಗಳಿಗೆ ಎಷ್ಟು ಕೋಟಿ ನಗದು ಬಹುಮಾನ ಸಿಕ್ಕಿದೆ?

    ಇಂಗ್ಲೆಂಡಿನ ಹ್ಯಾರಿ ಕೇನ್‍ಗೆ ಗೋಲ್ಡನ್ ಬೂಟ್: ಯಾವ ತಂಡಗಳಿಗೆ ಎಷ್ಟು ಕೋಟಿ ನಗದು ಬಹುಮಾನ ಸಿಕ್ಕಿದೆ?

    ಮಾಸ್ಕೋ: ತೀವ್ರ ಹಣಾಹಣಿ ಮೂಲಕ ಒಂದು ತಿಂಗಳ ಕಾಲ ನಡೆದ ಫಿಫಾ ವಿಶ್ವಕಪ್‍ಗೆ ತೆರೆಕಂಡಿದ್ದು, ಫೈನಲ್‍ನಲ್ಲಿ ಫ್ರಾನ್ಸ್ ತಂಡ ಪ್ರಶಸ್ತಿ ಗೆದ್ದು ಬೀಗಿದೆ. ಇತ್ತ ಟೂರ್ನಿಯಲ್ಲಿ ನೀಡಲಾಗುವ ಪ್ರತಿಷ್ಠಿತ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು 6 ಗೋಲು ಹೊಡೆದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಪಡೆದಿದ್ದು, ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಕ್ರೊವೇಷಿಯಾದ ಲೂಕ ಮೋಡ್ರಿಚ್ ಪಡೆದಿದ್ದಾರೆ.

    ಟೂರ್ನಿಯ ಉತ್ತಮ ಆಟಗಾರರ ಪಟ್ಟಿಯಲ್ಲಿ ಬೆಲ್ಜಿಯಂ ಆಟಗಾರ ಈಡನ್ ಹರ್ಝಡ್, ಫ್ರಾನ್ಸ್ ನ ಆಂಟೊನಿ ಗ್ರಿಯೇಜ್ಮನ್ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನವನ್ನು ಪಡೆದಿದ್ದಾರೆ. ಉಳಿದಂತೆ ಯುವ ಉದಯೋನ್ಮುಕ ಆಟಗಾರ ಪ್ರಶಸ್ತಿಗೆ ಫ್ರಾನ್ಸ್ ಆಟಗಾರ ಕೈಲ್ಯಾನ್ ಪಾತ್ರರಾಗಿದ್ದಾರೆ.

    ಟೂರ್ನಿಯ ಉತ್ತಮ ಗೋಲ್ ಕೀಪರ್ ಗೆ ನೀಡುವ ಗೋಲ್ಡನ್ ಗ್ಲೌಸ್ ಪ್ರಶಸ್ತಿಯನ್ನು ಬೆಲ್ಜಿಯಂ ಆಟಗಾರ ಥೈಬೌಟ್ ಕೋರ್ಟಿಸ್ ಪಡೆದಿದ್ದಾರೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಒಟ್ಟಾರೆ 169 ಗೋಲು ದಾಖಲಾಗಿದ್ದು, ವಿಶೇಷವಾಗಿ ಪೆನಾಲ್ಟಿ ಕಿಕ್ ಮೂಲಕ 21 ಗೋಲು ಬಾರಿಸಲಾಗಿದೆ.

    ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದ ಎರಡನೇ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದು, ಈ ಹಿಂದೆ 1986 ರಲ್ಲಿ ಗ್ಯಾರಿ ಲೈಕರ್ 6 ಗೋಲ್ ಬಾರಿಸಿ ಮೊದಲಿಗಾರಾಗಿ ಹೊರ ಹೊಮ್ಮಿದ್ದರು. ಗೋಲ್ಡನ್ ಬೂಟ್ ಪ್ರಶಸ್ತಿಯನ್ನು 2010 ರ ವಿಶ್ವಕಪ್ ಬಳಿಕ ನೀಡಲಾಗುತ್ತಿದ್ದು, ಇದಕ್ಕೂ ಮುನ್ನ ಟೂರ್ನಿಯ ಅತೀ ಹೆಚ್ಚು ಗೋಲ್ ಗಳಿಸಿದ ಆಟಗಾರ ಎಂದು ಪ್ರಕಟಿಸಲಾಗುತ್ತಿತ್ತು. ವಿಶೇಷವಾಗಿ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದ ಹಲವು ಆಟಗಾರರು ಟೂರ್ನಿಯಲ್ಲಿ 6 ಗೋಲ್ ಗಳಿಸಿ ಅಚ್ಚರಿ ಮೂಡಿಸಿದ್ದಾರೆ.

    ಪ್ರಶಸ್ತಿಯ ಮೊತ್ತ:
    ಚಾಂಪಿಯನ್ ತಂಡ – 260 ಕೋಟಿ ರೂ.
    ರನ್ನರ್-ಅಪ್ ತಂಡ – 191 ಕೋಟಿ ರೂ.
    ಮೂರನೇ ರನ್ನರ್ ಅಪ್ – 164 ಕೋಟಿ ರೂ.
    ನಾಲ್ಕನೇ ರನ್ನರ್ ಅಪ್ _ 150 ಕೋಟಿ ರೂ.
    ಕ್ವಾಟರ್ ಫೈನಲ್ 01 – 109 ಕೋಟಿ ರೂ.
    ಗ್ರೂಪ್ 16 ತಂಡ – 82 ಕೋಟಿ ರೂ.
    ಆರಂಭಿಕ ಲೀಗ್ – 54 ಕೋಟಿ ರೂ.

     

  • ಫಿಫಾ ವಿಶ್ವಕಪ್ ಫೈನಲ್: ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಗೆ ಜಯ- ಎರಡು ತಂಡಗಳಿಗೆ ಸಿಕ್ತು ಭರ್ಜರಿ ಮೊತ್ತ

    ಫಿಫಾ ವಿಶ್ವಕಪ್ ಫೈನಲ್: ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಗೆ ಜಯ- ಎರಡು ತಂಡಗಳಿಗೆ ಸಿಕ್ತು ಭರ್ಜರಿ ಮೊತ್ತ

    ಮಾಸ್ಕೋ: ತೀವ್ರ ಹಣಾಹಣಿಯಿಂದ ಕೂಡಿದ್ದ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಮಾಸ್ಕೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ 4-2 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಫ್ರಾನ್ಸ್ 4-2 ಗೋಲುಗಳಿಂದ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಚಾಂಪಿಯನ್ ಫ್ರಾನ್ಸ್ ತಂಡ ಬರೋಬ್ಬರಿ 260 ಕೋಟಿ ಜೇಬಿಗಿಳಿಸಿತು. ರನ್ನರ್-ಅಪ್ ತಂಡ ಕ್ರೊವೇಷಿಯಾ 191 ಕೋಟಿ ಬಹುಮಾನ ಪಡೆಯಿತು.

    ಈ ಮೂಲಕ 1998ರ ಬಳಿಕ ಎರಡನೇ ಬಾರಿ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಕ್ರೋವೇಷಿಯಾ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಇಡೀ ಫ್ರಾನ್ಸ್ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಸಾಕರ್ ಅಭಿಮಾನಿಗಳು ವಿಶ್ವದಾದ್ಯಂತ ಸಂಭ್ರಮದಲ್ಲಿದ್ದಾರೆ.

    ಮೊದಲಾರ್ಧದಲ್ಲಿ 2-1 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿದ್ದ ಫ್ರಾನ್ಸ್ ದ್ವಿತಿಯಾರ್ಧದಲ್ಲೂ 2 ಗೋಲು ಗಳಿಸಿ ಮಿಂಚಿತು. ಕ್ರೊವೇಷಿಯಾದ ಮಾರಿಯೋ ಮಂಡ್ವೋಕಿಚ್ ಸೆಲ್ಫ್ ಗೋಲ್ ಕಾರಣ 18ನೇ ನಿಮಿಷದಲ್ಲೇ ಫ್ರಾನ್ಸ್‍ಗೆ 1-0 ಮುನ್ನಡೆ ಸಿಕ್ಕಿತು. ಗ್ರೀಜ್‍ಮನ್ ಮಾಡಿದ ಫ್ರೀ ಕಿಕ್ ತಡೆಯೋ ಭರದಲ್ಲಿ ಮಂಡ್ವೋಕಿಚ್ ಫುಟ್ಬಾಲನ್ನ ಹೆಡ್ ಮಾಡಿದ್ರು. ಅದು ನೇರ ಗೋಲು ಪೆಟ್ಟಿಗೆ ಸೇರಿತು. ಇದಾದ ಕೇವಲ 10 ನಿಮಿಷದಲ್ಲಿ ತಿರುಗೇಟು ನೀಡಿದ ಕ್ರೊವೇಷಿಯಾ 1-1ರಿಂದ ಸಮಬಲ ಸಾಧಿಸಿತು.

    28ನೇ ನಿಮಿಷದಲ್ಲಿ ಇವಾನ್ ಪೆರಿಸಿಕ್ ಈಸಿಯಾಗಿ ಗೋಲ್ ಬಾರಿಸಿದ್ರು. ಇದಾದ ಬೆನ್ನಲ್ಲೇ ಅಂದ್ರೆ 38 ನಿಮಿಷದಲ್ಲಿ ಪೆನಾಲ್ಟಿ ಗೋಲ್ ಬಾರಿಸಿದ ಗ್ರೀಜ್‍ಮನ್ ಫ್ರಾನ್ಸ್‍ಗೆ 2-1ರಿಂದ ಮುನ್ನಡೆ ತಂದುಕೊಟ್ರು.. ದ್ವಿತಿಯಾರ್ಧದಲ್ಲಿ, ಪಂದ್ಯದ ಒಟ್ಟಾರೆ 59 ನಿಮಿಷದಲ್ಲಿ ಫ್ರಾನ್ಸ್ ಮಿಡ್‍ಫೀಲ್ಡರ್ ಪೌಲ್ ಪೋಗ್ಬಾ ತಂಡಕ್ಕೆ ಮೂರನೇ ಗೋಲು ತಂದಿತ್ತರು. ಇದಾದ ಕೇವಲ 5 ನಿಮಿಷದಲ್ಲಿ ಕಿಲಿಯನ್ ಎಂಬಾಪೆ ಮತ್ತೊಂದು ಗೋಲು ಗಳಿಸಿದ್ರು.

    ಈ ಮೂಲಕ ಫ್ರಾನ್ಸ್ 4-1 ಗೋಲುಗಳಿಂದ ಮುನ್ನಡೆ ಸಾಧಿಸಿತು. ಇದಾದ 4 ನಿಮಿಷದಲ್ಲೇ ಮಂಡ್ವೋಕಿಚ್ ಕ್ರೊವೇಶಿಯಾಗೆ 2ನೇ ಗೋಲು ತಂದಿಟ್ಟರು. ಆದ್ರೆ ಫ್ರಾನ್ಸ್ ಮುನ್ನಡೆಯನ್ನು ತಡೆಯಲು ಆಗಲಿಲ್ಲ. ಹೆಚ್ಚುವರಿ ಅವಧಿಯಲ್ಲೂ ಯಾವುದೇ ಗೋಲು ಬರಲಿಲ್ಲ.

  • ಹಿಂದೂ, ಮುಸ್ಲಿಂ ಎಂದು ಆಡುವುದನ್ನು ನಿಲ್ಲಿಸಿ – ಭಾರತೀಯರಿಗೆ ಹರ್ಭಜನ್ ಸಿಂಗ್ ಆಗ್ರಹ

    ಹಿಂದೂ, ಮುಸ್ಲಿಂ ಎಂದು ಆಡುವುದನ್ನು ನಿಲ್ಲಿಸಿ – ಭಾರತೀಯರಿಗೆ ಹರ್ಭಜನ್ ಸಿಂಗ್ ಆಗ್ರಹ

    ನವದೆಹಲಿ: ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯ ಎಂದು ಉಂಟಾಗುತ್ತಿರುವ ವಿವಾದಗಳ ಕುರಿತು ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದು, ಫಿಫಾ ಫುಟ್ಬಾಲ್ ಫೈನಲ್ ಪ್ರವೇಶಿಸಿರುವ ಕ್ರೊವೇಷಿಯಾ ದೇಶವನ್ನು ಉದಾಹರಣೆಯಾಗಿ ನೀಡಿ ಚಿಂತನೆ ಬದಲಾಯಿಲು ಹೇಳಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ಕೇವಲ 50 ಲಕ್ಷ ಜನಸಂಖ್ಯೆ ಹೊಂದಿರುವ ಕ್ರೊವೇಷಿಯಾ ಫಿಫಾ ಫುಟ್ಬಾಲ್ ಫೈನಲ್ ಆಡುತ್ತಿದ್ದು, 135 ಕೋಟಿ ಜನಸಂಖ್ಯೆ ಹೊಂದಿರುವ ನಾವು ಹಿಂದೂ, ಮುಸ್ಲಿಂ ಎಂದು ಆಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹರ್ಭಜನ್ ತಮ್ಮ ಟ್ವೀಟ್ ನಲ್ಲಿ ನಿಮ್ಮ ಯೋಚನೆಯನ್ನು ಬದಲಾಯಿಸಿ, ದೇಶ ಬದಲಾಗುತ್ತದೆ ಎಂಬ ಹ್ಯಾಷ್ ಟ್ಯಾಗನ್ನು ಬಳಸಿದ್ದಾರೆ.

    ಸದ್ಯ ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನಲ್ಲಿ ಫ್ರಾನ್ಸ್ ಹಾಗೂ ಕ್ರೊವೇಷಿಯಾ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸೆಣಸಲಿದೆ. ಇನ್ನು ಫಾನ್ಸ್ ಎರಡನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಪುನರಾವರ್ತನೆ ಮಾಡಲು ಸಿದ್ಧವಾಗಿದ್ದರೆ, ಕ್ರೊವೇಷಿಯಾ ತಂಡ ಮೊದಲ ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.

    ಅಂದಹಾಗೇ 1998 ರ ಫಿಫಾ ವಿಶ್ವಕಪ್ ಫೈನಲ್ ನಲ್ಲೂ ಫ್ರಾನ್ಸ್, ಬ್ರೆಜಿಲ್  ತಂಡವನ್ನು ಮಣಿಸಿ ವಿಶ್ವಕಪ್ ಗೆದ್ದಿತ್ತು, ಈ ವೇಳೆ ಪ್ರಾನ್ಸ್ ತಂಡದ ನಾಯಕರಾಗಿದ್ದ ಡೈಡಿಯರ್ ದೆಶ್ಚಾಂಪ್ಸ್ ಇಂದು ತಂಡದ ಕೋಚ್ ಆಗಿದ್ದರೆ.