Tag: FIFA World Cup

  • FIFA: ಸೌದಿ ಅರೇಬಿಯಾದಲ್ಲಿ 2034 ರ ವಿಶ್ವಕಪ್‌

    FIFA: ಸೌದಿ ಅರೇಬಿಯಾದಲ್ಲಿ 2034 ರ ವಿಶ್ವಕಪ್‌

    ರಿಯಾದ್: 2034 ರ ಪುರುಷರ ಫಿಫಾ ವಿಶ್ವಕಪ್ (FIFA World Cup 2034) ಅನ್ನು ಆಯೋಜಿಸಲು ಸೌದಿ ಅರೇಬಿಯಾ (Saudi Arabia) ಸಿದ್ಧವಾಗಿದೆ. ಈ ಕ್ರಮವು ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಛಾಪು ಮೂಡಿಸಲು ಸೌದಿ ಅರೇಬಿಯಾವನ್ನು ಮುಂದಿರಿಸಿದೆ.

    2034 ರ FIFA ವಿಶ್ವಕಪ್‌ಗೆ ಸಂಭಾವ್ಯ ಆತಿಥೇಯ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಆಸ್ಟ್ರೇಲಿಯಾ ಹಠಾತ್ ಮತ್ತು ಅನಿರೀಕ್ಷಿತ ಘೋಷಣೆಯನ್ನು ಮಾಡಿದೆ. ಫುಟ್ಬಾಲ್ ಆಸ್ಟ್ರೇಲಿಯಾ ಒಕ್ಕೂಟವು ಆತಿಥ್ಯ ವಹಿಸಲು ಹಿಂದೇಟು ಹಾಕಿದೆ. 2034 ರ ಸ್ಪರ್ಧೆಗೆ ಬಿಡ್ ಮಾಡದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಬದಲಾಗಿ, ಆಸ್ಟ್ರೇಲಿಯಾವು 2026 ರಲ್ಲಿ ಮಹಿಳಾ ಏಷ್ಯನ್ ಕಪ್ ಮತ್ತು 2029 ರಲ್ಲಿ FIFA ಕ್ಲಬ್ ವಿಶ್ವಕಪ್‌ಗಾಗಿ ಹರಾಜಿಗೆ ಗಮನ ಕೇಂದ್ರೀಕರಿಸಿದೆ. ಇದನ್ನೂ ಓದಿ: ಕಿಂಗ್‌ ಕೊಹ್ಲಿ, ರೋಹಿತ್‌ ಬಯೋಪಿಕ್‌ನಲ್ಲಿ ನಟಿಸುತ್ತಾರಾ ಶಾಹಿದ್ ಕಪೂರ್?

    ಆಸ್ಟ್ರೇಲಿಯಾದ ಹಿಂದೆ ಸರಿದ ಬಳಿಕ, ಸೌದಿ ಅರೇಬಿಯಾ 2034 ರ FIFA ವಿಶ್ವಕಪ್‌ಗೆ ದೃಢಪಡಿಸಿದ ಬಿಡ್ಡರ್ ಆಗಿದೆ. FIFA, ಸೌದಿ ಅರೇಬಿಯಾದ ಸ್ಥಾನಮಾನವನ್ನು 2034 ಪಂದ್ಯಾವಳಿಗೆ ಏಕೈಕ ಬಿಡ್ಡರ್ ಎಂದು ದೃಢಪಡಿಸಿತು.

    ಸ್ಪೇನ್, ಪೋರ್ಚುಗಲ್ ಮತ್ತು ಮೊರಾಕೊ ಈಗಾಗಲೇ 2030 ರ ಪಂದ್ಯಾವಳಿಯನ್ನು ಸಹ-ಆತಿಥ್ಯ ವಹಿಸಲು ನಿರ್ಧರಿಸಲಾಗಿದೆ. ಆದರೆ ಉರುಗ್ವೆ, ಪರಾಗ್ವೆ ಮತ್ತು ಅರ್ಜೆಂಟೀನಾ ಆರಂಭಿಕ ಪಂದ್ಯಗಳನ್ನು ನಡೆಸುವ ಮೂಲಕ ಮೊದಲ ವಿಶ್ವಕಪ್‌ನ 100 ನೇ ವಾರ್ಷಿಕೋತ್ಸವವನ್ನು ನೆನಪಿಸಿಕೊಳ್ಳುತ್ತವೆ. ಇದನ್ನೂ ಓದಿ: ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್‌

    ಇತ್ತೀಚಿನ ವರ್ಷಗಳಲ್ಲಿ ಸೌದಿ ಅರೇಬಿಯಾ ಪ್ರಮುಖ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿದೆ. ಫಾರ್ಮುಲಾ ಒನ್ ಮತ್ತು ಬಾಕ್ಸಿಂಗ್‌ನಲ್ಲಿ ದೇಶವು ತನ್ನದೇ ಆದ ಛಾಪು ಮೂಡಿಸಿದೆ. ಇದಲ್ಲದೆ, LIV ಗಾಲ್ಫ್ ಟೂರ್ ಮತ್ತು ಸೌದಿ ಪ್ರೊ ಲೀಗ್‌ನಲ್ಲಿನ ಅವರ ಹೂಡಿಕೆಯು ಪ್ರಮುಖ ಸಾಕರ್ ತಾರೆಗಳನ್ನು ಸೌದಿ ಅರೇಬಿಯನ್ ಕ್ಲಬ್‌ಗಳಿಗೆ ಸ್ಥಳಾಂತರಿಸಲು ಆಕರ್ಷಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    ಬ್ರೆಸಿಲಿಯಾ: ಕ್ಯಾನ್ಸರ್ ಕಾಯಿಲೆ, ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಫುಟ್ಬಾಲ್ ದಂತಕತೆ (Football Legendary), ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರೆಜಿಲ್‌ನ (Brazil) ಪೀಲೆ (82) (Pele) ನಿಧನರಾಗಿದ್ದಾರೆ.

    ಮೂರು ಬಾರಿ ಫಿಫಾ ವಿಶ್ವಕಪ್ (FIFA World Cup) ವಿಜೇತ ಪೀಲೆ ಅವರು, ನ.29ರಂದು ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಇತ್ತೀಚೆಗೆ ಅವರಿಗೆ ಕೋವಿಡ್-19 (Covid) ಸೋಂಕು ತಗಲಿತ್ತು. ಇದನ್ನೂ ಓದಿ: ರಣಜಿಯಲ್ಲಿ ಬ್ಯಾಟಿಂಗ್ ಅಬ್ಬರ- ಮನೀಷ್ ದ್ವಿಶತಕ ಮಿಂಚಿಂಗ್, ಸೂರ್ಯನಿಗೆ ಶತಕ ಮಿಸ್ಸಿಂಗ್

    ತನ್ನ 16ನೇ ವಯಸ್ಸಿನಲ್ಲಿ ಬ್ರೆಜಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದ ಪೀಲೆ 1958, 1962 ಹಾಗೂ 1970ರಲ್ಲಿ ಬ್ರೆಜಿಲ್ ಫಿಫಾ ವಿಶ್ವಕಪ್ (FIFA World Cup) ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಈ ಸಾಧನೆ ಮಾಡಿದ ಏಕೈಕ ಆಟಗಾರನಾಗಿದ್ದಾರೆ. ಬ್ರೆಜಿಲ್ ಪರ 95 ಪಂದ್ಯಗಳಲ್ಲಿ ಅತಿಹೆಚ್ಚು 77 ಗೋಲುಗಳನ್ನು ಗಳಿಸಿರುವ ಸಾಧನೆ ಮಾಡಿದ್ದರು. ಆದ್ರೆ ಇತ್ತೀಚಿನ ವಿಶ್ವಕಪ್ ಟೂರ್ನಿಯಲ್ಲಿ ನೇಮ 124 ಪಂದ್ಯಗಳಲ್ಲಿ 77 ಗೋಲುಗಳನ್ನು ಬಾರಿಸುವ ಮೂಲಕ ಸಾಧನೆ ಸಮಬಲ ಸಾಧಿಸಿದ್ದಾರೆ.

    2021ರ ಸೆಪ್ಟೆಂಬರ್‌ನಲ್ಲಿ ಪೀಲೆ ಅವರಿಗೆ ಶ‌ಸ್ತ್ರಚಿಕಿತ್ಸೆ ಮಾಡಿ ದೊಡ್ಡ ಕರುಳಿನ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯಲಾಗಿತ್ತು. ಆದರೆ ಇತ್ತೀಚೆಗೆ ಅವರು ಕೋವಿಡ್‌ಗೆ ತುತ್ತಾಗಿದ್ದರಿಂದ ಮತ್ತೆ ಕ್ಯಾನ್ಸರ್ ಸಮಸ್ಯೆ ಕೂಡ ಮರುಕಳಿಸಿತ್ತು. ಮೂರು ಬಾರಿ ಮದುವೆಯಾಗಿರುವ ಪೀಲೆ ಅವರಿಗೆ 7 ಮಕ್ಕಳಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

    Live Tv
    [brid partner=56869869 player=32851 video=960834 autoplay=true]

  • ಫಿಫಾ ವಿಶ್ವಕಪ್ ತಬ್ಬಿಕೊಂಡು ಮಲಗಿದ ಮೆಸ್ಸಿ

    ಫಿಫಾ ವಿಶ್ವಕಪ್ ತಬ್ಬಿಕೊಂಡು ಮಲಗಿದ ಮೆಸ್ಸಿ

    ಬ್ಯೂನಸ್ ಐರಿಸ್: ಅರ್ಜೆಂಟಿನಾ (Argentina) ದಿಗ್ಗಜ ಫುಟ್‍ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯ (Lionel Messi) ಫಿಫಾ ವಿಶ್ವಕಪ್ (FIFA World Cup) ಗೆಲ್ಲುವ ಹಲವು ವರ್ಷಗಳ ಕನಸು 2022ರಲ್ಲಿ ನನಸಾಗಿದೆ. ಕತಾರ್‌ನಲ್ಲಿ (Qatar) ನಡೆದ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಮೆಸ್ಸಿ ಫಿಫಾ ವಿಶ್ವಕಪ್‍ಗೆ ಮುತ್ತಿಕ್ಕಿದ್ದರು. ಇದೀಗ ಮೆಸ್ಸಿ ಫಿಫಾ ವಿಶ್ವಕಪ್‍ನ್ನು ಎಷ್ಟರ ಮಟ್ಟಿಗೆ ಬಯಸಿದ್ದರೂ ಎಂಬುದಕ್ಕೆ ಕೆಲ ಫೋಟೋಗಳು ಸಾಕ್ಷಿಯಾಗಿದೆ.

    ಮೆಸ್ಸಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿದ್ದರೂ ಫಿಫಾ ವಿಶ್ವಕಪ್ ಮಾತ್ರ ಮರಿಚಿಕೆಯಾಗಿತ್ತು. ಈ ಬಾರಿ ತನ್ನ ಕೊನೆಯ ವಿಶ್ವಕಪ್ ಆಡಲು ಕಣಕ್ಕಿಳಿದ ಮೆಸ್ಸಿ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಬಯಕೆಯೊಂದಿಗೆ ಕತಾರ್‌ಗೆ ಕಾಳಿಟ್ಟಿದ್ದರು. ಆದರೆ ಅರ್ಜೆಂಟಿನಾಗೆ ಆರಂಭದಲ್ಲೇ ಶಾಕ್ ಎದುರಾಗಿತ್ತು. ಅಚ್ಚರಿ ಎಂಬಂತೆ ಅರ್ಜೆಂಟಿನಾ ತನ್ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರ ಬೀಳುವ ಇಕ್ಕಟ್ಟಿಗೆ ಸಿಲುಕಿತ್ತು. ಇದನ್ನೂ ಓದಿ: ಫಿಫಾ: ಮೆಸ್ಸಿ ಸೇರಿದಂತೆ ಕ್ರೀಡಾಪಟುಗಳ ಸಾರಿಗೆ ವ್ಯವಸ್ಥೆ ಮೇಲ್ವಿಚಾರಣೆ ವಹಿಸಿದ್ದು ಬೆಂಗಳೂರು ಮಹಿಳೆ

    ಆದರೆ ಛಲಬಿಡದ ಮೆಸ್ಸಿ ತನ್ನ ಮ್ಯಾಜಿಕ್ ಮುಂದುವರಿಸಿದರು. ಆ ಬಳಿಕ ಲೀಗ್ ಮತ್ತು ನಾಕೌಟ್, ಸೆಮಿಫೈನಲ್ ಸಹಿತ ಫೈನಲ್‍ನಲ್ಲಿ ಗೋಲು ಸಿಡಿಸುತ್ತ ಫೈನಲ್‍ನಲ್ಲಿ ಫ್ರಾನ್ಸ್‌ನ್ನು ಬಗ್ಗುಬಡಿದು ಪ್ರಶಸ್ತಿ ಗೆದ್ದು ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದರು. ಜೊತೆಗೆ ವಿಶ್ವಕಪ್ ಗೆಲ್ಲುವ ತಮ್ಮ ಕನಸನ್ನು ಈಡೇರಿಸಿಕೊಂಡರು.

     

    ಪ್ರಶಸ್ತಿ ಗೆಲ್ಲುತ್ತಿದ್ದಂತೆ ಮೆಸ್ಸಿಯ ಖುಷಿಗೆ ಪಾರವೇ ಇರಲಿಲ್ಲ. ಪ್ರಶಸ್ತಿ ಗೆದ್ದು 2 ದಿನ ಕಳೆದರೂ ಮೆಸ್ಸಿ ವಿಶ್ವಕಪ್ ಕೈಹಿಡಿದ ಸಂಭ್ರಮದಿಂದ ಹೊರ ಬರಲಾಗದಷ್ಟು ಮಾರು ಹೋಗಿದ್ದರೆ. ಇದಕ್ಕೆ ಸಾಕ್ಷಿ ಎಂಬಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ರೋಫಿಯನ್ನು ತಬ್ಬಿಕೊಂಡು ಮಲಗಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಮತ್ತೆ ಗುಡ್‌ನ್ಯೂಸ್ ಕೊಟ್ಟ ಮ್ಯಾಜಿಕ್ ಮೆಸ್ಸಿ – ಸದ್ಯಕ್ಕಿಲ್ಲ ನಿವೃತ್ತಿ

     

    View this post on Instagram

     

    A post shared by Leo Messi (@leomessi)

    ಈ ಮೂಲಕ ಮೆಸ್ಸಿ ನಿದ್ದೆಯಲ್ಲೂ ವಿಶ್ವಕಪ್ ಗಲುವಿನ ಗುಂಗಿನಲ್ಲಿದ್ದಾರೆ. ಈ ಫೋಟೋ ಕಂಡ ಅಭಿಮಾನಿಗಳು ಲೈಕ್ ಮತ್ತು ಕಾಮೆಂಟ್‍ನ ಸುರಿಮಳೆ ಗೈದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 7 ವರ್ಷಗಳ ಹಿಂದೆ ನುಡಿದ ಭವಿಷ್ಯ ನಿಜವಾಯ್ತು! – ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಮ್ಮನನ್ನು ತಬ್ಬಿಕೊಂಡು ಕಣ್ಣೀರಿಟ್ಟ ಮೆಸ್ಸಿ

    7 ವರ್ಷಗಳ ಹಿಂದೆ ನುಡಿದ ಭವಿಷ್ಯ ನಿಜವಾಯ್ತು! – ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಮ್ಮನನ್ನು ತಬ್ಬಿಕೊಂಡು ಕಣ್ಣೀರಿಟ್ಟ ಮೆಸ್ಸಿ

    ಕತಾರ್: 2015ರಲ್ಲಿ ಅಂದರೆ 7 ವರ್ಷಗಳ ಹಿಂದೆ ಅರ್ಜೆಂಟಿನಾ (Argentina) ತಂಡದ ಲಿಯೋನೆಲ್ ಮೆಸ್ಸಿ (Lionel Messi) 2022ರ ಫಿಫಾ ವಿಶ್ವಕಪ್ (FIFA World Cup 2022) ಗೆಲ್ಲುತ್ತಾರೆ ಎಂದು ವ್ಯಕ್ತಿಯೊಬ್ಬ ಮಾಡಿದ್ದ ಟ್ವೀಟ್ ಭವಿಷ್ಯ ಇದೀಗ ನಿಜವಾಗಿದ್ದು, ಮೆಸ್ಸಿ ಫಿಫಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಮ್ಮನನ್ನು (Mother) ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.

    ಮೆಸ್ಸಿ ತನ್ನ ಫುಟ್‍ಬಾಲ್ ವೃತ್ತಿ ಜೀವನದಲ್ಲಿ ಫಿಫಾ ವಿಶ್ವಕಪ್‍ನ ಕನಸು ಕಂಡಿದ್ದರು. ಆದರೆ ಈವರೆಗೆ ಆ ಕನಸು ಕನಸಾಗಿಯೇ ಉಳಿದಿತ್ತು. ಈ ನಡುವೆ ಜೋಸ್ ಮಿಗುಯೆಲ್ ಪೊಲಾಂಕ್ (José Miguel Polanco) ಎನ್ನುವ ಟ್ವಿಟ್ಟರ್ ಬಳಕೆದಾರರೊಬ್ಬರು 2015ರ ಮಾರ್ಚ್ 21ರಂದು ಅರ್ಜೆಂಟಿನಾ ವಿಶ್ವಕಪ್ ಗೆಲ್ಲುವ ಭವಿಷ್ಯ ನುಡಿದಿದ್ದರು. 2022ರ ಡಿಸೆಂಬರ್ 18 ರಂದು ಮೆಸ್ಸಿ ವಿಶ್ವಕಪ್ ಗೆಲ್ಲಲಿದ್ದಾರೆ. 7 ವರ್ಷಗಳ ಬಳಿಕ ನಾನು ಹೇಳಿದ್ದನ್ನು ನೆನಪು ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದರು. ಅದೇ ರೀತಿ ಆ ವ್ಯಕ್ತಿ ಹೇಳಿದ 2022ರ ಡಿ.18 ರಂದೇ ಮೆಸ್ಸಿ ವಿಶ್ವಕಪ್ ಗೆದ್ದಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: 10 ನಂಬರ್ ಜೆರ್ಸಿ ತಂದ ಅದೃಷ್ಟ – ಅಂದು ಸಚಿನ್‍, ಇಂದು ಮೆಸ್ಸಿಗಾಗಿ ವಿಶ್ವಕಪ್

    ಅರ್ಜೆಂಟಿನಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಈ ಟ್ವೀಟ್ ವೈರಲ್ ಆಗಿದೆ. ಸ್ವತಃ ಮೆಸ್ಸಿಗೂ ಕೂಡ 7 ವರ್ಷಗಳ ಹಿಂದೆ ಈರೀತಿ ಭವಿಷ್ಯ ನುಡಿದ ಟ್ವೀಟ್ ನೋಡಿ ಅಚ್ಚರಿ ಆಗಿದೆ. ಆದರೂ ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದ ಮೆಸ್ಸಿ ತನ್ನ ಕನಸು ನನಸು ಮಾಡಿಕೊಂಡ ಖುಷಿಯಲ್ಲಿ ಅಮ್ಮನನ್ನು ತಬ್ಬಿಕೊಂಡು ಆನಂದ ಬಾಷ್ಪ ಸುರಿಸಿದ್ದಾರೆ.

    ಫೈನಲ್‍ನಲ್ಲಿ ನಾಯಕ ಮೆಸ್ಸಿ ಅವರ ಅದ್ಭುತ ಆಟದಿಂದಾಗಿ ಅರ್ಜೆಂಟಿನಾ ಪೆನಾಲ್ಟಿ ಶೂಟೌಟ್‍ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೊನೆಯ ಪಂದ್ಯದಲ್ಲಿ ಮೆಸ್ಸಿ 2 ಗೋಲ್ ಹೊಡೆದು ತಂಡಕ್ಕೆ ಜಯ ತಂದು ಕೊಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ ಆಟದಲ್ಲಿ ಫ್ರಾನ್ಸ್ ಪರ ಎಂಬಾಪೆ 4 ಗೋಲು ಸಿಡಿಸಿದರೂ, ಜಯ ತಂದು ಕೊಡುವಲ್ಲಿ ವಿಫಲವಾದರು. ಆದರೆ 9 ಗೋಲು ಬಾರಿಸಿ ಗೋಲ್ಡನ್ ಬೂಟ್ ಗೆಲ್ಲುವಲ್ಲಿ 23ರ ಹರೆಯದ ಎಂಬಾಪೆ (Mbappe) ಯಶಸ್ವಿಯಾಗಿ ಅಭಿಮಾನಿಗಳಿಂದ ಶಬ್ಬಾಸ್‍ಗಿರಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

    https://twitter.com/jo9M24/status/1604538476656934913

    Live Tv
    [brid partner=56869869 player=32851 video=960834 autoplay=true]

  • ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

    ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

    ಲುಸೈಲ್‌: ಅರ್ಜೆಂಟೀನಾ(Argentina) ವಿರುದ್ಧದ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲು ಹೊಡೆದು ಕೊನೆಯವರೆಗೆ ಹೋರಾಡಿದ್ದ 23 ವರ್ಷದ ಕಿಲಿಯನಾ ಎಂಬಾಪೆಗೆ(Kylian Mbappe) ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಸಮಾಧಾನ ಮಾಡಿದ್ದಾರೆ.

    ಪಂದ್ಯ ಸೋತ ಬಳಿಕ ಎಂಬಾಪೆ ಮೈದಾನದಲ್ಲೇ ಕುಳಿತು ಅಳುತ್ತಿದ್ದರು. ಈ ವೇಳೆ ಎಂಬಾಪೆ ಬಳಿ ತೆರಳಿದ ಮ್ಯಾಕ್ರನ್‌(Emmanuel Macron) ಸಮಾಧಾನ ಹೇಳಿದ್ದಾರೆ. ಅರ್ಜೆಂಟೀನಾದ ಗೋಲ್‌ಕೀಪ‌ರ್‌ ಎಮಿಲಿಯಾನೋ ಮಾರ್ಟಿನೆಜ್ ಕೂಡ ಇದ್ದರು. ಪಂದ್ಯ ಮುಗಿದ ಬಳಿಕ ತಂಡದ ಡ್ರೆಸ್ಸಿಂಗ್‌ ರೂಮಿಗೆ ತೆರಳಿದ ಮ್ಯಾಕ್ರನ್‌ ನೋವಿನಲ್ಲಿದ್ದ ಆಟಗಾರರಿಗೆ ಸಮಾಧಾನ ಹೇಳಿ ನಿಮ್ಮ ಆಟದ ಬಗ್ಗೆ ನಮಗೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೆಸ್ಸಿ ಮ್ಯಾಜಿಕ್‌- ಮೂರನೇ ಬಾರಿ ಅರ್ಜೆಂಟೀನಾ ಚಾಂಪಿಯನ್‌

    ಎಂಬಾಪೆ 80, 82, 118 ನಿಮಿಷದಲ್ಲಿ ಗೋಲ್‌ ಹೊಡೆದಿದ್ದರು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಒಂದು ಗೋಲ್‌ ಬಾರಿಸಿದ್ದರು. ಈ ಟೂರ್ನಿಯಲ್ಲಿ 8 ಗೋಲು ಹೊಡೆದ ಎಂಬಾಪೆ ಗೋಲ್ಡನ್‌ ಬೂಟ್‌ ಪ್ರಶಸ್ತಿ ಜಯಿಸಿದರು.

    ವಿಶ್ವಕಪ್‌ ಫೈನಲ್‌ಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಎಂಬಾಪೆ ಪಾತ್ರರಾಗಿದ್ದಾರೆ. ಈ ಮೊದಲು 1966ರಲ್ಲಿ ಇಂಗ್ಲೆಂಡಿನ ಜಿಯೋಫ್ ಹರ್ಸ್ಟ್ ಜರ್ಮನಿ ವಿರುದ್ಧ ಹ್ಯಾಟ್ರಿಕ್‌ ಗೋಲ್‌ ಬಾರಿಸಿದ್ದರು. 2018ರಲ್ಲಿ ಫೈನಲ್‌ ಕ್ರೋಷಿಯಾ ವಿರುದ್ಧವೂ ಎಂಬಾಪೆ 1 ಗೋಲು ಹೊಡೆದಿದ್ದರು.

    120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್‌ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಗಿತ್ತು. ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್‌ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕಿತು. ವಿಶೇಷ ಏನೆಂದರೆ ಅರ್ಜೆಂಟೀನಾ ಮೊದಲ ಪಂದ್ಯಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಆಟದ ಮೂಲಕ ಫೈನಲ್‌ ಪ್ರವೇಶಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಕತಾರ್‌ನಲ್ಲಿ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗಲೇ ಮತ್ತೊಬ್ಬ ಪತ್ರಕರ್ತ ಸಾವು

    ಕತಾರ್‌ನಲ್ಲಿ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗಲೇ ಮತ್ತೊಬ್ಬ ಪತ್ರಕರ್ತ ಸಾವು

    ಕತಾರ್: ‘ಎಲ್‌ಜಿಬಿಟಿಕ್ಯು’ (ಸಲಿಂಗಕಾಮಿ ಅಥವಾ ತೃತೀಯಲಿಂಗಿ) ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲಿನ ಟೀ ಶರ್ಟ್ (Rainbow Shirt) ಧರಿಸಿದ್ದ ಅಮೆರಿಕದ ವರದಿಗಾರ (Journalist) ಕತಾರ್‌ನಲ್ಲಿ (Qatar) ಫಿಫಾ ವಿಶ್ವಕಪ್ (FIFA World Cup) ವರದಿಮಾಡುತ್ತಿದ್ದಾಗ ಸಾವನ್ನಪ್ಪಿದ್ದ. ಈ ಘಟನೆ ನಡೆದ ಕೇವಲ 2 ದಿನದ ಬಳಿಕ ಮತ್ತೊಬ್ಬ ವರದಿಗಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಕತಾರ್‌ನ ಫೋಟೋ ಜರ್ನಲಿಸ್ಟ್ (Photojournalist), ಅಲ್ ಕಾಸ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಖಾಲಿದ್ ಅಲ್-ಮಿಸ್ಲಾಮ್ ಭಾನುವಾರ ವಿಶ್ವಕಪ್ ವರದಿ ಮಾಡುತ್ತಿದ್ದ ಸಂದರ್ಭ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಅವರ ಸಾವಿಗೆ ಅಧಿಕೃತ ಕಾರಣ ಏನೆಂಬುದನ್ನು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ.

    ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದ ಸಂದರ್ಭ ಫೋಟೋ ಜರ್ನಲಿಸ್ಟ್ ಅಲ್-ಮಿಸ್ಲಾಮ್ ಸಾವನ್ನಪ್ಪಿದ್ದಾರೆ ಎಂದು ಗಲ್ಫ್ ಟೈಮ್ಸ್ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಅಲ್ ಕಾಸ್ ಟಿವಿ ಕೂಡಾ ನೇರ ಪ್ರಸಾರದಲ್ಲಿ ಈ ಘಟನೆಯನ್ನು ದೃಢಪಡಿಸಿದೆ. ಹೆಚ್ಚಿನ ವಿವರಗಳಿಗೆ ಕಾಯುತ್ತಿರುವುದಾಗಿ ಹೇಳಿದೆ. ಇದನ್ನೂ ಓದಿ: ಶರದ್ ಪವಾರ್‌ಗೆ ಜೀವ ಬೆದರಿಕೆ – ಕೇಸ್ ದಾಖಲು

    ಈ ಘಟನೆಗೂ 2 ದಿನ ಮೊದಲು ಶುಕ್ರವಾರ ವಿಶ್ವಕಪ್ ವೇಳೆ ವರದಿ ಮಾಡುತ್ತಿದ್ದ ಅಮೆರಿಕದ ಪತ್ರಕರ್ತ ಗ್ರಾಂಟ್ ವಾಲ್ ಅವರು ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದರು. ಗ್ರಾಂಟ್ ಅವರು ಕತಾರ್‌ನಲ್ಲಿ ವಿಶ್ವಕಪ್ ಪ್ರಾರಂಭವಾದ ದಿನ ಎಲ್‌ಜಿಬಿಟಿಕ್ಯು ಸಮುದಾಯವನ್ನು ಬೆಂಬಲಿಸಿ ಮಳೆಬಿಲ್ಲಿನ ಟೀಶರ್ಟ್ ಧರಿಸಿ ವರದಿ ಮಾಡಲು ಬಂದಿದ್ದರು. ಈ ಹಿನ್ನೆಲೆ ಕತಾರ್‌ನಲ್ಲಿ ಅಧಿಕಾರಿಗಳು ಗ್ರಾಂಟ್ ಅವರನ್ನು ವಶಕ್ಕೆ ಪಡೆದಿದ್ದರು. ಘಟನೆಯನ್ನು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲು ಮುಂದಾಗಿದ್ದಾಗ ಅವರ ಫೋನ್ ಅನ್ನು ಕಸಿದುಕೊಳ್ಳಲಾಗಿತ್ತು ಎಂದು ಗ್ರಾಂಟ್ ಬಳಿಕ ತಿಳಿಸಿದ್ದರು.

    ಈ ಎಲ್ಲಾ ಘಟನೆಯ ಬಳಿಕ ಭದ್ರತಾ ಅಧಿಕಾರಿಯೊಬ್ಬರು ಗ್ರಾಂಟ್ ಅವರನ್ನು ಸಂಪರ್ಕಿಸಿ, ಕ್ಷಮೆಯಾಚಿಸಿದ್ದರು. ಅವರಿಗೆ ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಅನುಮತಿಯನ್ನೂ ನೀಡಲಾಗಿತ್ತು. ಆದರೆ ಶುಕ್ರವಾರ ಅವರ ಹಠಾತ್ ನಿಧನವಾಗಿದೆ. ಅವರ ಸಾವಿನ ಹಿಂದೆ ಕತಾರ್ ಸರ್ಕಾರದ ಕೈವಾಡವಿದೆ ಎಂದು ಗ್ರಾಂಟ್ ಸಹೋದರ ಎರಿಕ್ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ: ಅಮಿತ್ ಶಾ

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಸಾಧನೆ ಎಲ್ಲರಿಗೂ ಗೊತ್ತು – ರೊನಾಲ್ಡೊಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ

    ನಿಮ್ಮ ಸಾಧನೆ ಎಲ್ಲರಿಗೂ ಗೊತ್ತು – ರೊನಾಲ್ಡೊಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ

    ಕತಾರ್‌: ಫಿಫಾ ವಿಶ್ವಕಪ್‍ನ (FIFA World Cup) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಪೋರ್ಚುಗಲ್ (Portugal) ತಂಡ ಸೋತ ಬಳಿಕ ಭಾವುಕರಾಗಿದ್ದ ಸ್ಟಾರ್ ಫುಟ್‍ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊಗೆ (Cristiano Ronaldo) ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ (Virat Kohli) ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

    ಕ್ವಾರ್ಟರ್ ಫೈನಲ್ ಸೋಲಿನೊಂದಿಗೆ ಪೋರ್ಚುಗಲ್‍ನ ಕತಾರ್ ಫಿಫಾ ವಿಶ್ವಕಪ್ ಅಭಿಯಾನ ಅಂತ್ಯವಾಗುತ್ತಿದ್ದಂತೆ ರೊನಾಲ್ಡೊ ಕಣ್ಣೀರಿಟ್ಟಿದ್ದರು. ಇದು ವಿರಾಟ್ ಕೊಹ್ಲಿ ಸಹಿತ ರೊನಾಲ್ಡೊ ಅವರ ಅಭಿಮಾನಿಗಳಿಗೆ ದುಃಖ ತರಿಸಿತ್ತು. ಇದೀಗ ಈ ಬಗ್ಗೆ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಟೆಸ್ಟ್‌ನಿಂದ ರೋಹಿತ್ ಹೊರಕ್ಕೆ – ಕನ್ನಡಿಗ ಕ್ಯಾಪ್ಟನ್

    ಕ್ರೀಡೆಗೆ ಹಾಗೂ ಕ್ರೀಡಾಭಿಮಾನಿಗಳಿಗಾಗಿ ನೀವು ಇಲ್ಲಿಯವರೆಗೂ ಮಾಡಿರುವ ಸಾಧನೆಯನ್ನು ಒಂದು ಪ್ರಶಸ್ತಿಯಿಂದ ನಿರ್ಧರಿಸಲು ಸಾಧ್ಯವಿಲ್ಲ. ನೀವು ಅಭಿಮಾನಿಗಳಿಗೆ ಬೀರಿರುವ ಪ್ರಭಾವವನ್ನು ಯಾವುದೇ ಶೀರ್ಷಿಕೆಯಿಂದ ವಿವರಿಸಲು ಸಾಧ್ಯವಿಲ್ಲ. ನನ್ನನ್ನು ಸೇರಿದಂತೆ ವಿಶ್ವದಾದ್ಯಂತ ಇರುವ ನಿಮ್ಮ ಅಭಿಮಾನಿಗಳು ನಿಮ್ಮ ಆಟವನ್ನು ನೋಡುವ ಮೂಲಕ ಆನಂದಿಸಿದ್ದೇವೆ. ನಿಮ್ಮ ಸಾಧನೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ನೀವು ದೇವರಿಂದ ಪಡೆದಿರುವ ವರ ಇದಾಗಿದೆ. ಪಂದ್ಯದ ಪ್ರತಿಯೊಂದು ಕ್ಷಣದಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡುವ ಆಟಗಾರ ನೀವಾಗಿದ್ದೀರಿ. ನಿಮ್ಮ ಕಠಿಣ ಪರಿಶ್ರಮ ಹಾಗೂ ಬದ್ಧತೆಯೇ ಇದಕ್ಕೆ ಕಾರಣ. ನೀವು ನನ್ನ ಪಾಲಿಗೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸೂಪರ್‌ ಓವರ್‌ನಲ್ಲಿ ಸಿಕ್ಸರ್‌, ಬೌಂಡರಿ – ಆಸೀಸ್‌ ವಿರುದ್ಧ ಭಾರತಕ್ಕೆ 4 ರನ್‌ ರೋಚಕ ಜಯ

    ಕಾರ್ಟರ್‍ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ 1-0 ಗೋಲುಗಳ ಅಂತರದಲ್ಲಿ ಸೋಲು ಕಂಡಿತ್ತು. ಈ ಮೂಲಕ 5 ಬಾರಿಯ ಬ್ಯಾಲನ್ ಡಿ’ಓರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಪೋರ್ಚುಗಲ್‍ನ ವಿಶ್ವಕಪ್ ಕನಸು ಭಗ್ನಗೊಂಡಿತು. ಅಲ್ಲದೇ ಈ ವಿಶ್ವಕಪ್ ರೊನಾಲ್ಡೊ ಪಾಲಿನ ಕೊನೆಯ ವಿಶ್ವಕಪ್ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಳೆಬಿಲ್ಲು ಬಣ್ಣದ ಶರ್ಟ್ ಧರಿಸಿ ಬಂಧನವಾಗಿದ್ದ ಅಮೆರಿಕದ ಪತ್ರಕರ್ತ ಕತಾರ್‌ನಲ್ಲಿ ನಿಧನ

    ಮಳೆಬಿಲ್ಲು ಬಣ್ಣದ ಶರ್ಟ್ ಧರಿಸಿ ಬಂಧನವಾಗಿದ್ದ ಅಮೆರಿಕದ ಪತ್ರಕರ್ತ ಕತಾರ್‌ನಲ್ಲಿ ನಿಧನ

    ಕತಾರ್: ಫಿಫಾ ವಿಶ್ವಕಪ್ (FIFA World Cup) ಪ್ರಾರಂಭದ ವೇಳೆ ಕತಾರ್‌ನಲ್ಲಿ (Qatar) ‘LGBTQ’ ಸಮುದಾಯವನ್ನು ಬೆಂಬಲಿಸಿ ಮಳೆಬಿಲ್ಲಿನ ಬಣ್ಣಹೊಂದಿದ್ದ ಶರ್ಟ್ (Rainbow Shirt) ಧರಿಸಿದ್ದಕ್ಕಾಗಿ ಬಂಧಿತರಾಗಿದ್ದ ಅಮೆರಿಕದ ಪತ್ರಕರ್ತ (American Journalist) ಗ್ರಾಂಟ್ ವಾಲ್ ಅವರು ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ಶನಿವಾರ ತಿಳಿಸಿದ್ದಾರೆ.

    ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅರ್ಜೆಂಟೀನಾ ಮತ್ತು ನೆದರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ವರದಿ ಮಾಡುತ್ತಿದ್ದ ವೇಳೆ ಗ್ರಾಂಟ್ ಕುಸಿದುಬಿದ್ದಿದ್ದಾರೆ ಎನ್ನಲಾಗಿದೆ. ಆದರೆ ಅವರ ಸಾವಿನ ಹಿಂದೆ ಕತಾರ್ ಸರ್ಕಾರ ಭಾಗಿಯಾಗಿದೆ ಎಂದು ಗ್ರಾಂಟ್ ಅವರ ಸಹೋದರ ಎರಿಕ್ ಆರೋಪಿಸಿದ್ದಾರೆ.

    ಈ ಬಗ್ಗೆ ತಿಳಿಸಿರುವ ಎರಿಕ್, ನಾನು ಸಲಿಂಗಕಾಮಿ ಎಂದು ಗ್ರಾಂಟ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೋವೊಂದರಲ್ಲಿ ಹೇಳಿದ್ದರು. ಅವರು ವಿಶ್ವಕಪ್‌ಗೆ ಮಳೆಬಿಲ್ಲಿನ ಶರ್ಟ್ ಧರಿಸಲು ನಾನೇ ಕಾರಣ. ನನ್ನ ಸಹೋದರ ಆರೋಗ್ಯವಾಗಿದ್ದ. ಆದರೆ ಅಲ್ಲಿ ನಡೆದಿರುವ ಘಟನೆಗಳ ಬಳಿಕ ಆತನಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ಆತ ನನಗೆ ಹೇಳಿದ್ದ. ಆತ ಸತ್ತಿದ್ದಾನೆ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಆತನ ಕೊಲೆಯಾಗಿದೆ ಎಂಬ ಶಂಕೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ

    ಇತ್ತೀಚೆಗೆ ವಿಶ್ವಕಪ್ ಆರಂಭದಲ್ಲಿ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ವೇಲ್ಸ್ ವಿರುದ್ಧ ಅಮೆರಿಕದ ಆರಂಭಿಕ ಪಂದ್ಯಕ್ಕೆ ವಿಶ್ವಕಪ್‌ನ ಭದ್ರತಾ ತಂಡ ನನ್ನನ್ನು ತಡೆದಿತ್ತು. ನಾನು ಧರಿಸಿದ್ದ ರೈನ್‌ಬೋ ಶರ್ಟ್ ಅನ್ನು ತೆಗೆಯುವಂತೆ ಕೇಳಿಕೊಳ್ಳಲಾಗಿತ್ತು. ಈ ಘಟನೆಯ ಬಗ್ಗೆ ಟ್ವೀಟ್ ಮಾಡಲು ಹೊರಟಾಗ ನನ್ನ ಫೋನ್ ಅನ್ನು ಕಿತ್ತುಕೊಳ್ಳಲಾಗಿತ್ತು ಎಂದು ಗ್ರಾಂಟ್ ಈ ಹಿಂದೆ ಆರೋಪಿಸಿದ್ದರು.

     

    ಈ ಘಟನೆಯ ಬಳಿಕ ಸ್ಥಳದಲ್ಲಿದ್ದ ಭದ್ರತಾ ಅಧಿಕಾರಿಯೊಬ್ಬರು ಅವರನ್ನು ಸಂಪರ್ಕಿಸಿ, ಕ್ಷಮೆಯಾಚಿಸಿದ್ದಾರೆ. ಹಾಗೂ ಕ್ರೀಡಾಂಗಣದೊಳಗೆ ಪ್ರವೇಶಿಸಲು ಅನುಮತಿ ನೀಡಲಾಯಿತು ಎಂದಿದ್ದರು. ಇದನ್ನೂ ಓದಿ: ಹಾದಿ ಬೀದಿಯಲ್ಲಿ ಹುಡುಗಿಯರನ್ನ ರೇಗಿಸಿದ್ರೆ 2 ವರ್ಷ ಜೈಲು..!

    Live Tv
    [brid partner=56869869 player=32851 video=960834 autoplay=true]

  • ಜರ್ಮನಿಗೆ 8.5 ಲಕ್ಷ ರೂ. ದಂಡ ವಿಧಿಸಿದ ಫಿಫಾ

    ಜರ್ಮನಿಗೆ 8.5 ಲಕ್ಷ ರೂ. ದಂಡ ವಿಧಿಸಿದ ಫಿಫಾ

    ಕತಾರ್‌: ಜರ್ಮನಿ ತಂಡಕ್ಕೆ ವಿಶ್ವ ಫುಟ್‌ಬಾಲ್‌ ಸಂಸ್ಥೆ ಫಿಫಾ(FIFA) 10 ಸಾವಿರ ಸ್ವಿಸ್‌ ಫ್ರಾಂಕ್‌(ಅಂದಾಜು 8.5 ಲಕ್ಷ ರೂ.) ದಂಡವನ್ನು ವಿಧಿಸಿದೆ.

    ಸ್ಪೇನ್‌(Spain) ಜೊತೆಗಿನ ಪಂದ್ಯ ನಡೆಯುವುದಕ್ಕೂ ಮೊದಲು ಸುದ್ದಿಗೋಷ್ಠಿಗೆ ಆಟಗಾರನನ್ನು ಜರ್ಮನಿ(Germany) ಕಳುಹಿಸಬೇಕಿತ್ತು. ಆದರೆ ಆಟಗಾರನನ್ನು ಕಳುಹಿಸದ ಹಿನ್ನೆಲೆಯಲ್ಲಿ ಫಿಫಾ ಜರ್ಮನಿ ತಂಡಕ್ಕೆ ದಂಡವನ್ನು ವಿಧಿಸಿದೆ. ಇದನ್ನೂ ಓದಿ: ಮೊರೊಕ್ಕೊ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ತಂಡದ ಕೋಚ್‌ ಹನ್ಸಿ ಫ್ಲಿಕ್‌ ಸೂಚನೆಯಂತೆ ಯಾವೊಬ್ಬ ಆಟಗಾರ ಪ್ರೆಸ್‌ ಮೀಟ್‌ಗೆ ಹಾಜರಾಗಿರಲಿಲ್ಲ. ಪಂದ್ಯದ ಮೇಲೆ ಗಮನ ನೀಡಲು ಆಟಗಾರನನ್ನು ಕೋಚ್‌ ಕಳುಹಿಸಿರಲಿಲ್ಲ. ಜರ್ಮನಿ ಮತ್ತು ಸ್ಪೇನ್‌ ನಡುವಿನ ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಮೊರೊಕ್ಕೊ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ಮೊರೊಕ್ಕೊ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ಬೆಲ್ಜಿಯನ್: ಫಿಫಾ ವಿಶ್ವಕಪ್‍ನಲ್ಲಿ (FIFA World Cup) ಮೊರೊಕ್ಕೊ (Morocco) ವಿರುದ್ಧ ಬೆಲ್ಜಿಯಂ (Belgium) ಸೋತ ಬೆನ್ನಲ್ಲೇ ಬೆಲ್ಜಿಯನ್‍ನಲ್ಲಿ ಅಭಿಮಾನಿಗಳು ರೊಚ್ಚಿಗೆದ್ದು ಹಿಂಸಾಚಾರಕ್ಕಿಳಿದಿದ್ದಾರೆ.

    ಬೆಲ್ಜಿಯಂ ವಿರುದ್ಧ ಮೊರೊಕ್ಕೊ 2-0 ಅಂತರದಲ್ಲಿ ಗೆದ್ದ ಬೆನ್ನಲ್ಲೇ ಇತ್ತ ಬೆಲ್ಜಿಯಂ ರಾಜಧಾನಿ ಬೆಲ್ಜಿಯನ್‍ನಲ್ಲಿ ಫುಟ್‍ಬಾಲ್ ಅಭಿಮಾನಿಗಳು ಹಿಂಸಾಚಾರಕ್ಕೆ ಇಳಿದಿದ್ದಾರೆ. ರಸ್ತೆಯಲ್ಲಿದ್ದ ಕಾರ್, ಬೈಕ್‍ಗಳಿಗೆ ಬೆಂಕಿ ಇಟ್ಟು ಮೊರೊಕ್ಕೊ ದೇಶದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    ಫುಟ್‍ಬಾಲ್ ಅಭಿಮಾನಿಗಳ ಕೋಪಕ್ಕೆ ಹಿಂಸಾಚಾರ ಹೆಚ್ಚುತ್ತಿದ್ದಂತೆ ಬೆಲ್ಜಿಯಂ ಪೊಲೀಸರು 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಡಿದ ವರುಣ – 2ನೇ ಏಕದಿನ ಪಂದ್ಯ 12 ಓವರ್‌ಗಳಿಗೆ ಅಂತ್ಯ

    ಹಿಂಸಾಚಾರಕ್ಕೆ ಇಳಿದ ಗುಂಪೊಂದು ರಾಷ್ಟ್ರೀಯ ಹೆದ್ದಾರಿಗಿಳಿದು ದಾಂಧಲೆಗೆ ಮುಂದಾಗಿದೆ. ಘಟನೆಯಲ್ಲಿ ಪತ್ರಕರ್ತರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು, ಪೊಲೀಸರು ಹಿಂಸಾಚಾರದ ಸ್ಥಳದಲ್ಲಿ ಟಿಯರ್ ಗ್ಯಾಸ್ ಹಾಗೂ ನೀರು ಸಿಂಪಡಿಸಿ ಜನರನ್ನು ಚದುರಿಸಿದ್ದಾರೆ. ಈಗಾಗಲೇ ಬೆಲ್ಜಿಯನ್‍ನಲ್ಲಿ ಹಲವು ನಿರ್ಬಂಧಗಳನ್ನು ಹೊರಡಿಸಲಾಗಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]