Tag: fibre cylinder

  • ಗೃಹಿಣಿಯರಿಗೆ ಸಿಹಿ ಸುದ್ದಿ: ಈ ಸಿಲಿಂಡರ್ ಸ್ಫೋಟವಾಗಲ್ಲ, ಭಾರವೂ ಇರಲ್ಲ- ಬರ್ತಿದೆ ಲೈಟ್‍ ವೇಯ್ಟ್ ಗೋಗ್ಯಾಸ್ ಸಿಲಿಂಡರ್

    ಗೃಹಿಣಿಯರಿಗೆ ಸಿಹಿ ಸುದ್ದಿ: ಈ ಸಿಲಿಂಡರ್ ಸ್ಫೋಟವಾಗಲ್ಲ, ಭಾರವೂ ಇರಲ್ಲ- ಬರ್ತಿದೆ ಲೈಟ್‍ ವೇಯ್ಟ್ ಗೋಗ್ಯಾಸ್ ಸಿಲಿಂಡರ್

    ಬೆಂಗಳೂರು: ಗೃಹಿಣಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಎಲ್ಲಿ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗುತ್ತೋ, ಸಿಲಿಂಡರ್ ಖಾಲಿಯಾದ್ರೆ ಮತ್ತೆ ಭಾರದ ಸಿಲಿಂಡರ್ ಹೇಗಪ್ಪ ಹೊರೋದು ಅನ್ನೋ ಚಿಂತೆ ಬಿಡಿ. ಇನ್ಮೇಲೆ ಯಾವುದೇ ಟೆಕ್ಷನ್ ಇಲ್ಲದೆ ನೀವು ಗ್ಯಾಸ್ ಬಳಸಬಹುದು. ಅಷ್ಟೇ ಅಲ್ಲ ಗ್ಯಾಸ್ ಎಲ್ಲಿ ಬೇಕೆಂದರಲ್ಲಿ ನೀವೇ ಕೊಂಡೊಯ್ಯಬಹುದು.

    ಅಯ್ಯೋ ಈ ಗ್ಯಾಸ್ ಎಷ್ಟು ಬೇಗ ಖಾಲಿ ಆಗುತ್ತೋ ಏನೋ ಗೊತ್ತೆ ಆಗಲ್ಲ. ಖಾಲಿ ಗ್ಯಾಸ್ ಸಿಲಿಂಡರನ್ನ ಹೊರೋದಕ್ಕೆ ಆಗಲ್ಲ. ಇನ್ನು ರೀಫಿಲ್ಲಿಂಗ್ ಹೇಗಪ್ಪಾ? ಅಂತ ಹೆಂಗಸರು ಗೋಳಾಡೋದು ನಮಗೆ ಗೊತ್ತೇ ಇದೆ. ಆದರೆ ಇನ್ಮುಂದೆ ಈ ಟೆಕ್ಷನ್ ಇರಲ್ಲ. ಹೌದು. ಭಾರತದಲ್ಲಿ ಇದೇ ಮೊದಲ ಬಾರಿಗೆ ಕಾನ್ಫಿಡೆನ್ಸ್ ಪೆಟ್ರೋಲಿಯಂ ಲಿಮಿಟೆಡ್ ವತಿಯಿಂದ ಗೋ ಗ್ಯಾಸ್ ಇಲೈಟ್ ಬಿಡುಗಡೆಯಾಗಿದ್ದು, ನಾಗ್ಪುರ್ ನಂತರ ಈ ಫೈಬರ್ ಸಿಲಿಂಡರ್‍ಗಳು ಕರ್ನಾಟಕದಲ್ಲೂ ಇನ್ಮುಂದೆ ಲಭ್ಯವಾಗಲಿದೆ.

    ಎಷ್ಟು ಗ್ಯಾಸ್ ಬಾಕಿ ಇದೆ ನೋಡಬಹುದು: ಈ ಎಲ್‍ಪಿಜಿ ಸಿಲಿಂಡರ್‍ಗಳು ಫೈಬರ್‍ನಿಂದ ಮಾಡಲ್ಪಟ್ಟಿವೆ ಅನ್ನೋದು ಒಂದು ವಿಶೇಷವಾದ್ರೆ, ನಿಮ್ಮ ಸಿಲಿಂಡರ್‍ನಲ್ಲಿ ಎಷ್ಟು ಗ್ಯಾಸ್ ಬಾಕಿ ಇದೆ ಅಂತಾನೂ ತಿಳಿಸುವ ಪಾರದರ್ಶಕತೆ ಇದರ ಇನ್ನೊಂದು ವಿಶೇಷ. ಅಷ್ಟೇ ಅಲ್ಲ ಇವುಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಎತ್ಕೊಂಡು ಹೋಗುವಷ್ಟು ಲೈಟ್ ವೇಯ್ಟ್ ಆಗಿದ್ದು, ಕಂಪೆನಿಯಿಂದ ಮನೆ ಬಾಗಿಲಿಗೆ ಬಂದು ರೀಫಿಲ್ಲಿಂಗ್ ಮಾಡಿಕೊಡುವ ವ್ಯವಸ್ಥೆಯೂ ಇದೆ.

     

    ಸಿಲಿಂಡರ್ ಸ್ಫೋಟಗೊಳ್ಳಲ್ಲ: ರಾಕೆಟ್‍ನಲ್ಲಿ ಉಪಯೋಗಿಸುವ ನೋರೀಲ್ ಮೆಟೀರಿಯಲ್‍ನಿಂದ ಈ ಸಿಲಿಂಡರ್ ತಯಾರಿಸಲ್ಪಟ್ಟಿದೆ. ಇನ್ನು ಸಾಮಾನ್ಯವಾಗಿ ನಾವು ಗಮನಿಸುವ ಸಿಲಿಂಡರ್ ಸ್ಫೋಟ ಕೂಡ ಇದರಿಂದ ಉಂಟಾಗುವುದಿಲ್ಲ. ಒಂದು ವೇಳೆ ಗ್ಯಾಸ್ ಲೀಕ್ ಆದ್ರೂ ಹೊರಭಾಗದ ಫೈಬರ್ ಬಾಡಿ ಮೆಲ್ಟ್ ಆಗುತ್ತದೆಯೇ ವಿನಃ ಸ್ಫೋಟಗೊಳ್ಳುವುದಿಲ್ಲ.

    ಬೆಲೆ ಎಷ್ಟು?: 2 ಕೆಜಿ, 5, 10, 20 ಕೆಜಿ ಗೋ ಗ್ಯಾಸ್ ಇಲೈಟ್ ಗ್ಯಾಸ್ ಸಿಲಿಂಡರ್‍ಗಳು ಲಭ್ಯವಿದ್ದು, ಇವುಗಳ ಬೆಲೆ ಈಗಾಗಲೇ ಬಳಕೆಯಲ್ಲಿರುವ ಲೋಹದ ಅನಿಲ ಸಿಲಿಂಡರ್‍ಗಳ ಬೆಲೆಯಷ್ಟೇ ಇರುತ್ತದೆ. ಹೀಗಾಗಿ ಸಿಲಿಕಾನ್ ಸಿಟಿ ಗ್ರಾಹಕರಿಗೆ ಸುರಕ್ಷಿತ ಮತ್ತು ನಿಗದಿತ ದರದ ಸಿಲಿಂಡರ್ ಬಳಸುವ ಭಾಗ್ಯ ಇನ್ಮುಂದೆ ಲಭ್ಯವಾಗಲಿದೆ.