ಚಿಕ್ಕೊಡಿ: ಹೋಳಿ ಹಬ್ಬದ ನಿಮಿತ್ತ ಬಣ್ಣ ಆಡುವ ನೆಪದಲ್ಲಿ ಕೆಲ ಯುವಕರು ವಸೂಲಿ ದಂಧೆಗೆ ಇಳಿದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ರೋಡ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆದು ವಸೂಲಿಗೆ ಇಳಿದಿರುವ ಖದೀಮರು ಹೆದ್ದಾರಿಯ ಮೇಲೆ ಮರದ ದಿಂಬುಗಳನ್ನ ಅಳವಡಿಸಿ ಹಣ ವಸೂಲಿ ಮಾಡುತ್ತಿದ್ದರು. ಪ್ರತಿ ವಾಹನದಿಂದ 30 ರಿಂದ 50 ರೂಪಾಯಿವರೆಗೆ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದರೇ ಮಾತ್ರ ಮುಂದೆ ಹೋಗಲು ಅವಕಾಶ ಕಲ್ಪಿಸುತ್ತಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ
30ಕ್ಕೂ ಹೆಚ್ಚು ಜನರಿಂದ ಹೆದ್ದಾರಿ ಮೇಲೆ ಹಗಲು ದರೋಡೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಪೊಲೀಸರಿಗೆ ಮಾಹಿತಿ ನೀಡಿದರು ಸ್ಥಳಕ್ಕೆ ಬಾರದ ಪೊಲೀಸರ ವಿರುದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಶಿವರಾತ್ರಿಯಂದು ಮಹಾಮಂಗಳಾರತಿ ವೇಳೆ ಸೃಷ್ಠಿಕರ್ತ ಶಿವ, ಶಿರದ ಮೇಲೆ ಒಂದೂ ಹೂವನ್ನಿಟ್ಟುಕೊಳ್ಳದೆ ಮುಡಿಸಿದ್ದ ಎಲ್ಲಾ ಹೂವುಗಳನ್ನ ಪ್ರಸಾದದ ರೂಪದಲ್ಲಿ ಚೆಲ್ಲಿರುವ ಅಪರೂಪ ಹಾಗೂ ಪವಾಡ ಸದೃಶ್ಯದ ಘಟನೆಗೆ ವಿನಯ್ ಗುರೂಜಿ ದತ್ತಾಶ್ರಮ ಸಾಕ್ಷಿಯಾಗಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದಲ್ಲಿ, ವಿನಯ್ ಗುರೂಜಿ 24 ಗಂಟೆಗಳ ಕಾಲ ನಿರಂತರ ಶಿವರಾತ್ರಿ ಆಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಶಿವನಿಗೆ ವಿಶೇಷ ಅಲಂಕಾರ ಮಾಡಿ ವಿನಯ್ ಗೂರೂಜಿ ಪೂಜೆ ಮಾಡುವ ವೇಳೆ ಶಿವನಿಗೆ ಮುಡಿಸಿದ್ದ ಎಲ್ಲಾ ಹೂವಗಳು ಕೆಳಗೆ ಬಿದ್ದಿವೆ.
ಶಿವ ಶಿರದ ಮೇಲೆ ಒಂದೇ ಒಂದು ಹೂವನ್ನೂ ಇಟ್ಟುಕೊಳ್ಳದೆ ಎಲ್ಲಾ ಹೂವುಗಳನ್ನ ಚೆಲ್ಲಿದ್ದಾನೆ. ಈ ದೃಶ್ಯವನ್ನ ಕಣ್ಣಾರೆ ಕಂಡ ಭಕ್ತ ಸಮೂಹ ಉಘೇ ಶಂಕರ ಅಂತ ಕೈಮುಗಿದಿದ್ದಾರೆ. ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ 24 ಗಂಟೆಗಳ ಕಾಲ ನಿರಂತರ ಶಿವರಾತ್ರಿ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಶಿವರಾತ್ರಿ ಆಚರಣೆಗೆ ಆಶ್ರದಮದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆ ಆರು ಗಂಟೆಯಿಂದ ನಾಳೆ ಬೆಳಗ್ಗೆ ಆರು ಗಂಟೆವರೆಗೆ ನಿರಂತರ ಪೂಜಾ ಕೈಂಕರ್ಯ, ಹೋಮ-ಹವನ ನಡೆಯಲಿದೆ. ಇದನ್ನೂ ಓದಿ:ಅನ್ನ, ನೀರು, ಮೊಬೈಲ್ ಚಾರ್ಜಿಂಗ್ ಮಾಡಲಾಗದೆ ವಿದ್ಯಾರ್ಥಿಗಳ ಪರದಾಟ
24 ಗಂಟೆಗಳ ಕಾಲ ನಿರಂತರ ವಿಶೇಷ ಲಿಂಗ ಪೂಜೆ ಜೊತೆಗೆ ರುದ್ರಾಭಿಷೇಕ ಕೂಡ ನಡೆಯಲಿದೆ. ಜೊತೆಗೆ ಐದು ಯಾಮ ಪೂಜೆ ಕೂಡ ನಡೆಯಲಿದೆ. ಇಡೀ ರಾತ್ರಿ ಭಕ್ತ ಸಂಗೀತ, ಭಜನೆ ನಡೆಯಲಿದ್ದು, ಅವಧೂತ ವಿನಯ್ ಗುರೂಜಿ ಅವರಿಂದ ಪ್ರವಚನ ಆಶ್ರಮದ ಆವರಣದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಈಗಾಗಲೇ ಆಶ್ರದಲ್ಲಿರುವ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಆಶ್ರಮದ ಆವರಣದಲ್ಲಿರುವ ನೀಲಕಂಠನಿಗೂ ವಿಶೇಷವಾದ ಅಲಂಕಾರ ಮಾಡಿದ್ದಾರೆ. ಶಿವರಾತ್ರಿ ಅಂಗವಾಗಿ ಆಶ್ರಮದ ಆವರಣದಲ್ಲಿ ಕೃತಕ ಲಿಂಗನನ್ನೂ ಕೂಡ ನಿರ್ಮಿಸಿ ವಿಶೇಷ ಅಲಂಕಾರಗೈದು ಪೂಜೆ ನಡೆಸುತ್ತಿದ್ದಾರೆ.
ಇಂದು ಮಹಾಶಿವರಾತ್ರಿ ಹಬ್ಬವನ್ನು ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸೋಮವಾರ ಶಿವನಿಗೆ ಬಹಳ ಇಷ್ಟವಾದ ದಿನ. ಆದರೆ ಈ ಬಾರಿ ಹಬ್ಬ ಮಂಗಳವಾರ ಬಂದಿದೆ. ಈ ಹಬ್ಬದ ದಿನ ಸಿಹಿ ಅಡುಗೆಯನ್ನು ಮಾಡಬೇಕು ಎಂದು ನೀವೆನಾದ್ರೂ ಪ್ಲ್ಯಾನ್ ಮಾಡಿದ್ದರೆ, ಗಸಗಸೆ ಪಾಯಸವನ್ನು ಮಾಡಿ ಸವಿಯಿರಿ. ಬೆಲ್ಲವನ್ನು ಬಳಸಿಕೊಂಡು ಅತ್ಯಂತ ಸರಳವಾಗಿ ಈ ಪಾಯಸವನ್ನು ಮಾಡುವ ವಿಧಾನ ಈ ಕೆಳಗಿನಂತಿದೆ.
ಬೇಕಾಗುವ ಸಾಮಗ್ರಿಗಳು:
* ಗೋಡಂಬಿ-ಸ್ವಲ್ಪ
* ಬಾದಾಮಿ-ಸ್ವಲ್ಪ
* ಕಪ್ ತೆಂಗಿನಕಾಯಿ- 1ಕಪ್
* ಕಪ್ ಬೆಲ್ಲ- 1ಕಪ್
* ಏಲಕ್ಕಿ ಪುಡಿ- ಸ್ವಲ್ಪ
* ಗಸಗಸೆ- 2ಕಪ್
* ತುಪ್ಪ- ಅರ್ಧ ಕಪ್
* ಒಣದ್ರಾಕ್ಷಿ- ಸ್ವಲ್ಪ
ಮಾಡುವ ವಿಧಾನ:
* ಬಾಣಲೆಯಲ್ಲಿ ಗಸಗಸೆ, ಗೋಡಂಬಿ, ಬಾದಾಮಿ, ಗಸಗಸೆ ತುಪ್ಪವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
* ಹುರಿದ ಪದಾರ್ಥಗಳು, ತೆಂಗಿನಕಾಯಿ ತುರಿ ಸ್ವಲ್ಪ ನೀರನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ರವಾ ಬರ್ಫಿ ಮಾಡಿ ಸಖತ್ ಟೇಸ್ಟ್ ಆಗಿರುತ್ತೆ ಒಮ್ಮೆ ಟ್ರೈ ಮಾಡಿ
ಇಂದು ಮಹಾಶಿವರಾತ್ರಿ ಹಬ್ಬವನ್ನು ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸೋಮವಾರ ಶಿವನಿಗೆ ಬಹಳ ಇಷ್ಟವಾದ ದಿನ. ಆದರೆ ಈ ಬಾರಿ ಹಬ್ಬ ಮಂಗಳವಾರ ಬಂದಿದೆ.
ಶಿವನ ಪೂಜೆ ಮಾಡುವುದು ಹೇಗೆ:
ಮಹಾಶಿವರಾತ್ರಿ ದಿನ ಹಸುವಿನ ತುಪ್ಪದ ಜೊತೆ ಕರ್ಪೂರವನ್ನು ಬೆರೆಸಿ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಈ ದಿನ ರುದ್ರಾಕ್ಷಿಯ ಮಾಲೆ ಧರಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಹಸಿ ಹಾಲಿನಲ್ಲಿ ಗಂಗಾ ಜಲವನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ನಂತರ ಚಂದನ, ಹೂ, ದೀಪ ಹಾಗೂ ಧೂಪ ಹಚ್ಚಿ ಪೂಜೆ ಮಾಡಬೇಕು.
ವ್ರತದ ಮಹತ್ವ:
ಮಹಾಶಿವರಾತ್ರಿ ಹಬ್ಬದಂದು ವ್ರತ ಮಾಡುವುದರಿಂದ ಪಾಪ ದೂರ ಆಗುತ್ತದೆ ಹಾಗೂ ಆತ್ಮ ಶುದ್ಧ ಆಗುತ್ತದೆ. ಎಲ್ಲೆಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗುತ್ತದೋ ಅಲ್ಲಿ ಶಿವ ಖಂಡಿತವಾಗಿಯೂ ಇರುತ್ತಾನೆ ಎಂಬುದು ಜನರ ನಂಬಿಕೆ. ಮಹಾಶಿವರಾತ್ರಿ ಇಡೀ ದಿನ ಶ್ರದ್ಧೆಯಿಂದ ವ್ರತ ಮಾಡಿದರೆ, ಶಿವ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಮಹಾಶಿವರಾತ್ರಿ ದಿನ ಮಾಡುವ ವ್ರತ ಪ್ರಭಾವಶಾಲಿ ಎಂದು ಹಿರಿಯರು ಹೇಳುತ್ತಾರೆ.
ಶಿವನನ್ನು ಪ್ರಸನ್ನಗೊಳಿಸಲು ಮಹಾಶಿವರಾತ್ರಿ ಇಡೀ ದಿನ ಜನರು ಉಪವಾಸವಿರುತ್ತಾರೆ. ಕೆಲವರು ಇಡೀ ದಿನ ಅನ್ನ ಹಾಗೂ ನೀರು ಸೇವಿಸದೇ ಉಪವಾಸ ಮಾಡಿದರೆ, ಮತ್ತೆ ಕೆಲವರು ಹಣ್ಣು, ಡ್ರೈ ಫ್ರೂಟ್ಸ್ ಮಾತ್ರ ಸೇವಿಸುತ್ತಾರೆ.
ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೋರ್ವನಿಗೆ ಹೋರಿ ತಿವಿದು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ನಿವಾಸಿ ರಾಕೇಶ್ (25) ಎಂದು ಗುರುತಿಸಲಾಗಿದೆ. ಜಿಲ್ಲೆಯ ಹಲವೆಡೆಗಳಲ್ಲಿ ದೀಪಾವಳಿ ಹಬ್ಬದ ನಂತರ ಹೋರಿ ಬೆದರಿಸುವ ಸ್ಪರ್ಧೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಕೋವಿಡ್-19 ಭೀತಿ ಹಾಗೂ ಕಳೆದ ಎರಡು ವರ್ಷದ ಹಿಂದೆ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಮೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈಗಾಗಿಯೇ ಜಿಲ್ಲಾಡಳಿತ ಹೋರಿ ಬೆದರಿಸುವ ಸ್ಪರ್ಧೆಗೆ ಬ್ರೇಕ್ ಹಾಕಿತ್ತು. ಇದನ್ನೂ ಓದಿ: ಒಂದೇ ಕುಟುಂಬದ ಮೂವರಿಗೆ ಕಚ್ಚಿದ ಹಾವು- 3 ತಿಂಗಳ ಮಗು ಸಾವು
ಈ ಬಾರಿ ಜಿಲ್ಲೆಯ ಕೆಲವೆಡೆಗಳಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದರೆ, ಇನ್ನು ಕೆಲವೆಡೆಗಳಲ್ಲಿ ಜಿಲ್ಲಾಡಳಿತದ ಗಮನಕ್ಕೆ ಬಾರದೆ ಗ್ರಾಮಸ್ಥರು ಸ್ಪರ್ಧೆ ಆಯೋಜಿಸುತ್ತಿದ್ದಾರೆ. ಶಿಕಾರಿಪುರದ ದೊಡ್ಡಕೇರಿ ಬಡಾವಣೆಯಲ್ಲಿ ಸಹ ಇಂದು ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲೆಯಿಂದ ಅಷ್ಟೇ ಅಲ್ಲದೇ ಹೊರ ಜಿಲ್ಲೆಯಿಂದಲೂ ಸಹ ಸ್ಪರ್ಧೆಯಲ್ಲಿ ಹೋರಿಗಳು ಭಾಗವಹಿಸಿದ್ದವು. ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಬಂದಿದ್ದ ಯುವಕ ರಾಕೇಶ್‍ನಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಯೊಂದು ಹಿಂಬದಿಯಿಂದ ತಿವಿದಿದೆ. ಹೋರಿ ತಿವಿತಕ್ಕೆ ಒಳಗಾದ ಯುವಕ ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಕುರಿತು ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು 6.5 ನಿಮಿಷದಲ್ಲಿ ಏರಿದ್ದ ಅಪ್ಪು
ಶಿವಮೊಗ್ಗ: ನಾಡಿನಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ. ಈ ಸಂಭ್ರಮದಲ್ಲಿ ಭಾಗಿಯಾದ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಗ್ರಾಮದ ಮನೆ ಮನೆಗೆ ತೆರಳಿ ದೀಪಾವಳಿ ಶುಭಾಶಯ ಕೋರಿ, ಸಿಹಿ ಹಂಚಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪದ ನಿವಾಸದಲ್ಲಿ ಹಬ್ಬ ಆಚರಣೆ ಮಾಡಿದ ಅರಗ ಜ್ಞಾನೇಂದ್ರ ಹಲವು ವರ್ಷಗಳಿಂದ ಹಬ್ಬದ ದಿನ ಗ್ರಾಮದ ಪ್ರತಿ ಮನೆ ಮನೆಗು ತೆರಳಿ ಹಬ್ಬದ ಶುಭಾಶಯ ಕೋರಿ, ಸಿಹಿ ವಿತರಣೆ ನಡೆಸುತ್ತಾರೆ. ಗೃಹ ಸಚಿವರೇ ತಿಳಿಸಿರುವ ಹಾಗೆ ಕಳೆದ 30 ವರ್ಷಗಳಿಂದ ಇಂತಹ ಅಭ್ಯಾಸ ರೂಢಿಸಿಕೊಂಡು ಬಂದಿದ್ದಾರೆ. ಈ ರೂಢಿಯನ್ನು ಈ ವರ್ಷವು ಮುಂದುವರಿಸಿದ್ದಾರೆ. ಇದನ್ನೂ ಓದಿ: ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್
ದೀಪಾವಳಿಯ ದಿನ ನನ್ನ ಹುಟ್ಟೂರು ಹಿಸಣ ಹೊಸ್ಕೇರಿಯ ಪ್ರತಿ ಮನೆಗೂ ಭೇಟಿ ನೀಡಿ, ಸಿಹಿ ಕೊಟ್ಟು ಶುಭಾಶಯ ಹೇಳಿ ಬರುವುದು ಕಳೆದ ಮೂರು ದಶಕಗಳಿಂದ ನಾನು ಮಾಡಿಕೊಂಡು ಬಂದಿರುವ ಪದ್ಧತಿ. ಈ ಬಾರಿಯೂ ಈ ಪರಂಪರೆಯನ್ನು ಮುಂದುವರೆಸಿ ಗ್ರಾಮಸ್ಥರಿಗೆ ಸಿಹಿ ಹಂಚಿ ಶುಭ ಕೋರಲಾಯಿತು.#Deepavalipic.twitter.com/7q92ujyTgV
ಬೆಂಗಳೂರು: ದಸರಾ ಮಹೋತ್ಸವಕ್ಕೆ ಪೂಜೆ ಮಾಡಲು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಉದ್ಘಾಟಕರು. ಎಸ್.ಎಂ ಕೃಷ್ಣರಿಂದ ಈ ಬಾರಿ ದಸರಾ ಉದ್ಘಾಟನೆ ನಡೆಯಲಿದೆ. ಈ ಕುರಿತು ಇಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ನೇತೃತ್ವದಲ್ಲಿ ಮೈಸೂರು ದಸರಾ ಆಚರಣೆ ಕುರಿತ ಸಭೆ ನಡೆಯಿತು. ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ದಸರಾ ಉನ್ನತ ಮಟ್ಟದ ಸಮಿತಿ ಸದಸ್ಯರು ಭಾಗಿಯಾಗಿದ್ದರು. ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಅನ್ನೋ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಗೆ ಎಷ್ಟು ಜನ ಆಸಕ್ತರು ಎಂದು ಹೇಳಲ್ಲ: ಡಿಕೆಶಿ
ಎಸ್.ಎಂ ಕೃಷ್ಣ ಕೇವಲ ಸಿಎಂ ಆಗಿದ್ದವರು ಮಾತ್ರ ಅಲ್ಲ, ಅವರ ಯೋಗದಾನ ಬಹಳ ಇದೆ. ಅವರು ಹಲವು ಉತ್ತಮ ಸೇವೆಗಳನ್ನು ಮಾಡಿದ್ದಾರೆ. ಎಸ್.ಎಂ ಕೃಷ್ಣ ಒಬ್ಬ ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್‍ನದ್ದು ಮಿಷನ್ 123, ಬಿಜೆಪಿ 150, ನಮ್ಮದು 224: ಡಿಕೆಶಿ
ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ಕೊಡಲು ನಿರ್ಧಾರ ಮಾಡಿದ್ದೆವು. ಆ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಘೋಷಣೆ ಮಾಡಿದಂತೆ 1 ಲಕ್ಷ ರೂ ಪರಿಹಾರ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮುಂಬೈ: ಗಣಪತಿ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಹೀಗಾಗಿ ಗಣೇಶ ಚತುರ್ಥಿಯಂದು (Ganesh festival) ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಆದರೆ ಈ ಮೋದಕದ ಬೆಲೆಯನ್ನು ಕೇಳಿದವರು ಆಶ್ಚರ್ಯವಾಗುವುದರ ಜೊತೆಗೆ ವಿಶೇಷತೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಸುಮಾರು 10 ದಿನಗಳ ಕಾಲ ಗಣೇಶ ಚತುರ್ಥಿ ಸಂಭ್ರಮ, ಹಾಡು, ಪೂಜೆ ಇದ್ದೇ ಇರುತ್ತದೆ. ಇದೀಗ ಈ ವರ್ಷ ನಾಸಿಕ್‌ನಲ್ಲಿರುವ ಒಂದು ಸಿಹಿತಿಂಡಿಯ ಅಂಗಡಿಯಲ್ಲಿ ಈ ಮೋದಕ ವಿಶೇಷವಾಗಿ ಗ್ರಾಹಕರನ್ನು ಸೆಳೆಯುತ್ತಿದೆ. ಮೋದಕ ಎಷ್ಟು ದುಬಾರಿಯೆಂದರೆ, ಒಂದು ಕೆಜಿ ಮೋದಕದ ಬೆಲೆ ಬರೋಬ್ಬರಿ 12,000 ರೂಪಾಯಿ ಆಗಿದೆ. ಇದನ್ನೂ ಓದಿ: ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಮೀಟೂ ಆರೋಪ!
Mumbai | Ganesh idol of Mumbaicha Raja Mandal in Ganesh Galli being taken for immersion pic.twitter.com/fn2FQiM5ax
ಮೋದಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲೀಕ ದೀಪಕ್ ಚೌಧರಿ, ಈ ಬಂಗಾರದ ಮೋದಕಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಭರ್ಜರಿ ಮಾರಾಟವಾಗುತ್ತಿದೆ. ಉಳಿದ 25 ವಿಧದ ಮೋದಕಕ್ಕಿಂತಲೂ ಇದೇ ಸಿಕ್ಕಾಪಟೆ ಸೇಲ್ ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ರಸ್ತೆ ಬದಿಯ ಹೋಟೆಲ್‍ನಲ್ಲಿ ಟೀ ಸವಿದ ಸಿಎಂ-ವೀಡಿಯೋ ವೈರಲ್
ಗಣಪ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಗಣೇಶ ಚತುರ್ಥಿಯಂದು ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಗಣೇಶನಿಗಾಗಿ ಕೇಸರಿ, ಕಾಜು, ಮೋತಿಚೂರ್ ಮತ್ತು ಖೋಯಾ ಮೋದಕಗಳು ತಯಾರಾಗುತ್ತವೆ. ಆದರೆ ಸಾಗರ್ ಸ್ವೀಟ್ಸ್ ಎಂಬ ಅಂಗಡಿ ಮಾರುತ್ತಿರುವ ಮೋದಕದ ಹೆಸರು ಗೋಲ್ಡನ್ ಮೋದಕ (Golden Modaks). ಈ ಅಂಗಡಿಯಲ್ಲಿ ಸುಮಾರು 26 ವಿಧದ ಮೋದಕಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಅದರಲ್ಲಿ ಬಂಗಾರದ ಮೋದಕ ಹೆಚ್ಚಿನ ಹಣ ಗಳಿಸುತ್ತಿದೆ. ಈ ಬಂಗಾರದ ಮೋದಕವನ್ನು ಜನರು ತುಂಬ ಖುಷಿಯಿಂದ ಖರೀದಿಸುತ್ತಿದ್ದಾರೆ. ಬೆಳ್ಳಿ ಮೋದಕವೂ ಸಹ ಈ ಅಂಗಡಿಯಲ್ಲಿ ಮಾರಾಟಕ್ಕಿದ್ದು, ಅದರ ಬೆಲೆ ಕೆಜಿಗೆ 1460 ರೂಪಾಯಿ ಆಗಿದೆ.
ಬೆಂಗಳೂರು: ಮುಂಬರುವ ದಸರಾ ಹಾಗೂ ದೀಪಾವಳಿ ಹಿನ್ನೆಲೆ ರೈಲ್ವೆ ಇಲಾಖೆಯಿಂದ ಹಬ್ಬಕ್ಕಾಗಿ ಊರಿಗೆ ಹೋಗುವವರಿಗಾಗಿಯೇ ಗುಡ್ ನ್ಯೂಸ್ ಒಂದನ್ನ ನೀಡಿದೆ.
ಹಬ್ಬದ ವಿಶೇಷವಾಗಿ ಹೆಚ್ಚವರಿ ರೈಲುಗಳ ವ್ಯವಸ್ಥೆಯನ್ನ ಮಾಡಿದೆ. ಸೌತ್ ಸೆಂಟ್ರಲ್ ರೈಲ್ವೇ ಹಬ್ಬದ ಸಂಭ್ರಮಕ್ಕೆ 18 ವಿಶೇಷ ರೈಲು ಸೇವೆ ನೀಡುವ ಬಗ್ಗೆ ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ದೀಪಾವಳಿ ಮತ್ತು ದಸಾರ ಹಬ್ಬಗಳಿಗೆ ಊರಿಗೆ ಹೋಗುವವರಿಗೆ ತೊಂದರೆಯಾಗಬಾರದು ಎಂಬ ಕಾರಣಗಳಿಂದ ಹೆಚ್ಚುವರಿ ರೈಲು ಸೇವೆಯನ್ನ ಒದಗಿಸಲು ಸೌತ್ ಸೆಂಟ್ರಲ್ ರೈಲ್ವೇ ಸಿದ್ಧತೆ ನಡೆಸಿದೆ. ಒಟ್ಟು ವಿಶೇಷ 18 ರೈಲುಗಳು ಸಂಚಾರ ಮಾಡಲಿವೆ. ಇದನ್ನೂ ಓದಿ: 7 ಕೋಟಿ ಮೊತ್ತದ ಅಡಿಕೆಯ ಜೊತೆ 7 ಲಾರಿ ಜಪ್ತಿ – 7 ಮಂದಿ ಅರೆಸ್ಟ್
ಬಹುತೇಕ ರೈಲುಗಳು ಸೆಪ್ಟೆಂಬರ್ 28ರಿಂದ ಆರಂಭವಾಗಿ ಈ ವರ್ಷದ ಅಂತ್ಯದ ವರೆಗೂ ಸಂಚಾರ ನಡೆಸಲಿವೆ. ಈ ಎಲ್ಲಾ ರೈಲು ಸೇವೆಗಳು ಸಂಪೂರ್ಣ ರಿಸರ್ವ್ಡ್ ಆಗಿರಲಿವೆ. ಈ ಬಗ್ಗೆ ಸೌತ್ ಸೆಂಟ್ರಲ್ ರೈಲ್ವೇ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಯಾವ ಸ್ಥಳಗಳಿಗೆ ವಿಶೇಷ ರೈಲು ಸೇವೆ?
ಹೌರಾ- ಹೈದರಾಬಾದ್, ಹೈದರಾಬಾದ್- ಹೌರಾ, ಶಾಲಿಮಾರ್- ಸಿಕಂದರಾಬಾದ್, ಸಿಕಂದರಾಬಾದ್- ಶಾಲಿಮಾರ್, ಹಟಿಯಾ- ಯಶವಂತಪುರ, ಯಶವಂತಪುರ- ಹಟಿಯಾ, ಹೌರಾ- ಮೈಸೂರು, ಮೈಸೂರು- ಹೌರಾ, ಹೌರಾ- ಯಶವಂತಪುರ, ಯಶವಂತಪುರ- ಹೌರಾ, ಹೌರಾ- ವಾಸ್ಕೊ ಡ ಗಾಮ, ವಾಸ್ಕೊ ಡ ಗಾಮ- ಹೌರಾ, ಹೌರಾ- ಪುದುಚೆರಿ, ಪುದುಚೆರಿ- ಹೌರಾ, ಹೌರಾ- ಎರ್ನಾಕುಲಂ, ಎರ್ನಾಕುಲಂ- ಹೌರಾ, ಹಟಿಯಾ- ಬೆಂಗಳೂರು ಕಂಟೋನ್ಮೆಂಟ್, ಬೆಂಗಳೂರು ಕಂಟೋನ್ಮೆಂಟ್- ಹಟಿಯಾ.
ನವದೆಹಲಿ: ವಿವಿಧ ರಾಜ್ಯಗಳಲ್ಲಿ ಒಟ್ಟು 6 ಜನ ಉಗ್ರರನ್ನು ಬಂಧಿಸಲಾಗಿದ್ದು, ಇದರಲ್ಲಿ ಇಬ್ಬರು ಪಾಕಿಸ್ತಾನ ಮೂಲದ ಐಎಸ್‍ಐನಿಂದ ತರಬೇತಿ ಪಡೆದ ಉಗ್ರರಾಗಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಗ್ರರು ಗಣೇಶ ಚತುರ್ಥಿ, ನವರಾತ್ರಿ ಹಾಗೂ ರಾಮಲೀಲಾ ಹಬ್ಬಗಳ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಬಂಧಿರನ್ನು ಜಾನ್ ಮೊಹಮ್ಮದ್ ಶೇಖ್ ಅಲಿಯಾಸ್ ಸಮೀರ್(47), ಒಸಾಮಾ(22), ಮೂಲ್‍ಚಂದ್(47), ಝೀಶನ್ ಖಮರ್(28), ಮೊಹಮ್ಮದ್ ಅಬುಬಕರ್(23) ಹಾಗೂ ಮೊಹಮ್ಮದ್ ಅಮಿರ್ ಜಾವೇದ್(31) ಎಂದು ಗುರುತಿಸಲಾಗಿದೆ. ಅಲ್ಲದೆ ಆರೋಪಿಗಳಿಂದ ಎರಡು ಹ್ಯಾಂಡ್ ಗ್ರೆನೇಡ್‍ಗಳು, ಎರಡು ಸುಧಾರಿತ ಸ್ಫೋಟಕ ಸಾಧನಗಳು(ಐಇಡಿ), 1 ಕೆ.ಜಿ.ಆರ್‍ಡಿಎಕ್ಸ್ ಹಾಗೂ ಇಟಲಿ ನಿರ್ಮಿತ ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ? – ಶುಕ್ರವಾರದ ಸಭೆಯಲ್ಲಿ ಮಹತ್ವದ ಚರ್ಚೆ
ಒಸಾಮಾ ಹಾಗೂ ಖಮರ್ ಪಾಕಿಸ್ತಾನದವರಾಗಿದ್ದು, ಐಎಸ್‍ಐ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಐಎಸ್‍ಐನಿಂದಲೇ ತರಬೇತಿ ಪಡೆದಿದ್ದಾರೆ. ಎಕೆ-47 ಸೇರಿದಂತೆ ಸ್ಫೋಟಕ ಹಾಗೂ ಬಂದೂಕುಗಳ ಬಳಕೆ ಕುರಿತು ತರಬೇತಿ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಪಾಕಿಸ್ತಾನದಿಂದ ತರಬೇತಿ ಪಡೆದವರು ಸೇರಿ ಒಟ್ಟು 6 ಜನರನ್ನು ಬಂಧಿಸಿದ್ದೇವೆ. ಒಸಾಮಾ ಹಾಗೂ ಖಮರ್ ಇದೇ ವರ್ಷ ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದುಕೊಂಡು ಬಂದಿದ್ದಾರೆ ಎಂದು ಪೊಲೀಸ್ ವಿಶೇಷ ಆಯುಕ್ತ ನೀರಜ್ ಕುಮಾರ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಶೇಖ್‍ನನ್ನು ರಾಜಸ್ಥಾನದ ಕೋಟಾ ಬಳಿ ಬಂಧಿಸಲಾಗಿದೆ, ಒಸಾಮಾನನ್ನು ದೆಹಲಿಯ ಓಖ್ಲಾ, ಬಕರ್‍ನನ್ನು ಸರಾಯಿ ಕಾಳೆ ಖಾನ್‍ನಿಂದ, ಖಮರ್‍ನನ್ನು ಅಲಹಬಾದ್, ಜಾವೇದ್‍ನನ್ನು ಲಕ್ನೋದಿಂದ ಹಾಗೂ ಮೂಲ್‍ಚಂದ್‍ನನ್ನು ರಾಯಬರೇಲಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಶೇಷ ವಿಭಾಗದ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾ ಈ ಕುರಿತು ವಿವರಿಸಿ, ಪಾಕಿಸ್ತಾನದ ಐಎಸ್‍ಐ ಪ್ರಯೋಜಿತ ಮತ್ತು ತರಬೇತಿ ಪಡೆದ ಭಯೋತ್ಪಾದಕ ಘಟಕಗಳೊಂದಿಗೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಅಲ್ಲದೆ ಅಂಡರ್‍ವಲ್ರ್ಡ್ ನೀಮತ ಇವರನ್ನು ನಿಯಂತ್ರಿಸಲಾಗುತ್ತಿತ್ತು. ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸರಣಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.