Tag: festival

  • Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?

    Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?

    ನಾಗರಪಂಚಮಿ (Nagara Panchami) ಹಬ್ಬವನ್ನು ಭಾರತದ ಬಹುತೇಕ ಭಾಗಗಳಲ್ಲಿ ಆಚರಿಸುತ್ತಾರೆ. ಈ ಹಬ್ಬದಲ್ಲಿ ವಿಶೇಷವಾಗಿ ನಾಗ ದೇವರನ್ನು ಪೂಜಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ (Maharashtra) ಈ ಹಬ್ಬವನ್ನು ಮಳೆಗಾಲದ ಸಮಯದಲ್ಲಿ ಅಂದರೆ ಶ್ರಾವಣ ಮಾಸದ 5ನೇ ದಿನದಂದು ಆಚರಿಸಲಾಗುತ್ತದೆ. ಹಾವುಗಳನ್ನು ಪೂಜಿಸುವ ಮೂಲಕ ಅವುಗಳಿಂದ ರಕ್ಷಣೆ ಪಡೆಯುವುದೇ ಈ ಹಬ್ಬದ ಮಹತ್ವ. ಹಾಗಿದ್ರೆ ಮಹಾರಾಷ್ಟ್ರದಲ್ಲಿ ಇದನ್ನು ಯಾವ ರೀತಿ ಆಚರಿಸುತ್ತಾರೆ ಎಂಬುದರ ಬಗ್ಗೆ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಮಹಾರಾಷ್ಟ್ರದಲ್ಲಿ ನಾಗರಪಂಚಮಿಗೆ ತನ್ನದೇ ಆದ ಐತಿಹ್ಯವಿದೆ. ದ್ವಾಪರಯುಗದಲ್ಲಿ ಭಗವಾನ್ ಕೃಷ್ಣ ಐದು ತಲೆಯನ್ನು ಹೊಂದಿದ್ದ ಅತ್ಯಂತ ವಿಷಕಾರಿ ಕಾಳಿಂಗ ಹಾವನ್ನು ಸೋಲಿಸಿ, ಆ ಗ್ರಾಮದ ಜನರಿಗೆ ಅದರ ಕಾಟದಿಂದ ಮುಕ್ತಿ ಕೊಡಿಸಿದ ಬಳಿಕ ನಾಗರ ಪಂಚಮಿ ಹಬ್ಬವನ್ನು ಪ್ರಾರಂಭಿಸಲಾಯಿತು ಎಂದು ಪುರಾಣಗಳು ಹೇಳುತ್ತವೆ. ಇದನ್ನೂ ಓದಿ: Nagara Panchami : ವಾಸುಕಿಯನ್ನು ಹಿಡಿದು ಎಳೆದಾಡಿದ ದೇವತೆಗಳು, ರಾಕ್ಷಸರು!

    ನಾಗರ ಪಂಚಮಿ ಹಬ್ಬದ ದಿನದಂದು ಮಹಾರಾಷ್ಟ್ರದ ಜನರು ಹಾವುಗಳಿಗೆ ಜೇನುತುಪ್ಪ ಮತ್ತು ಕುಂಕುಮವನ್ನು ಬೆರೆಸಿದ ಹಾಲನ್ನು ಎರೆದು ಪೂಜೆ ಮಾಡುತ್ತಾರೆ. ಶಿರಾಲೆ (Shirale) ಎಂಬ ಸ್ಥಳದಲ್ಲಿ ನಾಗರಪಂಚಮಿ ಹಬ್ಬ ಪ್ರಾರಂಭವಾಗುವ ಒಂದು ವಾರದ ಮೊದಲೇ ಜನರು ಕಾಡಿನಿಂದ ಹಾವುಗಳನ್ನು ಹಿಡಿದು ತಂದು ಹಬ್ಬದ ದಿನದಂದು ಹಾವುಗಳಿಗೆ ಹಾಲೆರೆಯುತ್ತಾರೆ. ಇನ್ನೊಂದು ವಿಶೇಷವೇನೆಂದರೆ ನಾಗರಪಂಚಮಿ ದಿನದಂದು ಜನರು ಹಾವಿನೊಂದಿಗೆ ಮನೆ ಮನೆಗೆ ತೆರಳಿ ಭಿಕ್ಷೆ ಕೇಳುತ್ತಾರೆ.

    ನಾಗರಪಂಚಮಿ ಹಬ್ಬವನ್ನು ಮುಖ್ಯವಾಗಿ ಎರಡು ಕಾರಣಗಳಿಗೆ ಆಚರಿಸಲಾಗುತ್ತದೆ. ಮೊದಲನೆಯದಾಗಿ ಕುಟುಂಬದ ಯೋಗಕ್ಷೇಮಕ್ಕಾಗಿ ನಾಗದೇವರ ಆಶೀರ್ವಾದವನ್ನು ಪಡೆಯಲಾಗುತ್ತದೆ. ಎರಡನೆಯದಾಗಿ ನಾಗಗಳು ರೈತರು ಬೆಳೆದ ಬೆಳೆಗಳನ್ನು ಕ್ರಿಮಿ, ಕೀಟಗಳು ಹಾಗೂ ಇಲಿಗಳಿಂದ ರಕ್ಷಿಸುತ್ತವೆ. ಆದ್ದರಿಂದ ರೈತರು ನಾಗದೇವರನ್ನು ಪೂಜಿಸಿ ಕೃತಜ್ಞತೆಯನ್ನು ಸಲ್ಲಿಸುವ ದಿನವೇ ಈ ನಾಗರಪಂಚಮಿ ಹಬ್ಬ. ಈ ದಿನದಂದು ಹಾವಾಡಿಗರು ತಮ್ಮ ಬುಟ್ಟಿಗಳಲ್ಲಿ ಹಾವುಗಳನ್ನು ಕೊಂಡೊಯ್ದು ಬೀದಿ ಬದಿಯಲ್ಲಿ ಹಾವನ್ನು ಕುಣಿಸುವುದರ ಮೂಲಕ ಜನರಿಂದ ಹಣವನ್ನು ಗಳಿಸುತ್ತಾರೆ. ನಾಗದೇವರು ಶಿವನೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದರಿಂದ ನಾಗರಪಂಚಮಿ ದಿನದಂದು ನಾಗದೇವಾಲಯಗಳು ಹಾಗೂ ಶಿವನ ದೇವಸ್ಥಾನಗಳಿಗೆ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

    ಶಿರಾಲೆಯಲ್ಲಿ ಹಬ್ಬಕ್ಕೂ ಮೊದಲೇ ಹಾವನ್ನು ಹಿಡಿದು ತಂದು ಅವುಗಳಿಗೆ ಆಹಾರವನ್ನು ನೀಡಿ ಪೋಷಿಸುತ್ತಾರೆ. ನಾಗರಪಂಚಮಿಯ ಮುನ್ನಾ ದಿನದಂದು ಗ್ರಾಮದ ಯುವಕರು ತಮ್ಮ ತಲೆಯ ಮೇಲೆ ಮಡಕೆಗಳನ್ನು ಹೊತ್ತುಕೊಂಡು ಅಂಬಾ ದೇವಸ್ಥಾನಕ್ಕೆ ತೆರಳುತ್ತಾರೆ. ಬಳಿಕ ಹಾವುಗಳನ್ನು ದೇವಾಲಯದ ಅಂಗಳಕ್ಕೆ ಬಿಡುವ ಮೊದಲು ಅವುಗಳಿಗೆ ಪೂಜೆ ಸಲ್ಲಿಸಿ, ಅರಶಿನ ಸಿಂಪಡಿಸಿ, ಜೇನುತುಪ್ಪ ಮತ್ತು ಹಾಲನ್ನು ಅರ್ಪಿಸಲಾಗುತ್ತದೆ. ಇದನ್ನೂ ಓದಿ: Naga Panchami: ಚಂದನವನದಲ್ಲಿ ನಾಗಾರಾಧನೆ: ಹಿರಿತೆರೆಗೂ ಹರಿದು ಬಂದ ಹಾವು!

    ದೇವಾಲಯದಲ್ಲಿ ಉತ್ಸವ ಅಥವಾ ಪೂಜೆ ಮುಗಿದ ಬಳಿಕ ಮತ್ತೆ ಹಾವುಗಳನ್ನು ಹಿಡಿದು ಮೆರವಣಿಗೆ ಹೊರಡುತ್ತಾರೆ. ಈ ಉತ್ಸವವನ್ನು ನೋಡಲು ಮಹಿಳೆಯರು ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿರುತ್ತಾರೆ. ಮೆರವಣಿಗೆ ಸಂದರ್ಭದಲ್ಲಿಯೇ ಅನೇಕರು ಹಾವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಇದಾದ ಬಳಿಕ ಹಬ್ಬದ ಮರುದಿನ ಹಾವುಗಳನ್ನು ಕಾಡಿಗೆ ಬಿಡಲಾಗುತ್ತದೆ.

    ಬತ್ತೀಸ್ ಶಿರಾಲೆ ಕೊಲ್ಲಾಪುರ ಜಿಲ್ಲೆಯಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿದ್ದು, ನಾಗರಪಂಚಮಿಯನ್ನು ಆಚರಿಸುವ ಜನಪ್ರಿಯ ಸ್ಥಳವಾಗಿದೆ. ಈ ಗ್ರಾಮವು ವಿಶಾಲವಾದ ಅರಣ್ಯ ಪ್ರದೇಶವನ್ನು ಹೊಂದಿದ್ದು, ವಿಭಿನ್ನ ಮತ್ತು ದೊಡ್ಡ ಜಾತಿಯ ಸರ್ಪಸಂಕುಲವನ್ನು ಹೊಂದಿದೆ. ಈ ಗ್ರಾಮದಲ್ಲಿ ನಾಗರಪಂಚಮಿ ಹಬ್ಬವನ್ನು 8ರಿಂದ 10 ದಿನಗಳ ಕಾಲ ಆಚರಿಸುತ್ತಾರೆ. ಮಳೆಗಾಲದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಹಾವಿನ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲದೇ ಹಾವುಗಳನ್ನು ತಮ್ಮ ಸ್ನೇಹಿತ ಎಂದು ಅಲ್ಲಿನ ರೈತರು ನಂಬುತ್ತಾರೆ. ಇದನ್ನೂ ಓದಿ: Naga Panchami 2023: ಬಾಯಲ್ಲಿ ನೀರೂರಿಸುವ ಅಳ್ಳಿಟ್ಟು, ಅರಿಶಿನ ಎಲೆ ಕಡುಬು ಮಾಡಿ ನೋಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಕೃತಿಯ ಆರಾಧನೆಯ ಭಾಗವಾಗಿ ಮಲೆನಾಡ ನಾಗರ ಪಂಚಮಿ

    ಪ್ರಕೃತಿಯ ಆರಾಧನೆಯ ಭಾಗವಾಗಿ ಮಲೆನಾಡ ನಾಗರ ಪಂಚಮಿ

    ಳೆ ಬಂದು ನಾಗರ ಕಲ್ಲು ತೊಳೆದು ಆಯ್ತು ಇನ್ನೂ ಪೂಜೆ ಆಗಿಲ್ಲ! ಹೀಗೆ ಹಣ್ಣು ಕಾಯಿ ತಯಾರಿ ಮಾಡ್ಕೊಳ್ತ ಹಿರಿಕರು ನಾಗರ ಪಂಚಮಿಯಂದು (Nagara Panchami) ಸಾಮಾನ್ಯವಾಗಿ ಹೇಳುವ ಮಾತಿದು.

    ಹೀಗೆ ಮಲೆನಾಡಿನಲ್ಲಿ (Malnad) ನಾಗರ ಪಂಚಮಿಯ ದಿನ ಮಳೆ ಬಂದೇ ಬರುತ್ತೆ. ಮಳೆ ನಾಗರಕಲ್ಲನ್ನು ತೊಳೆದ ಬಳಿಕ ಪೂಜೆ ನಡೆಸಲಾಗುತ್ತದೆ. ಈ ನಂಬಿಕೆ ನಮ್ಮ ಜನರ ಮತ್ತು ಪ್ರಕೃತಿಯ ನಡುವಿನ ಆಳವಾದ ಸಂಬಂಧ ಯಾವ ಮಟ್ಟದ್ದು ಎಂಬುದಕ್ಕೆ ಸಾಕ್ಷಿ ಕೂಡ ಹೌದು. ಊರ ಹೊರಗಿನ ಕಾಡಿನ ಭಾಗದಲ್ಲಿರುವ ನಾಗರ ಕಟ್ಟೆಗೆ ಅಥವಾ ಅರಳಿ ಮರದ ಕೆಳಗಿನ ನಾಗರ ಮೂರ್ತಿಗೆ ಪೂಜೆ ಮಾಡಲಾಗುತ್ತದೆ. ಈ ಹಬ್ಬ ಪ್ರಕೃತಿಯ ಆರಾಧನೆ ಒಂದು ಭಾಗವಾಗಿ ಮಲೆನಾಡಲ್ಲಿ ಕಂಡು ಬರುತ್ತದೆ. ಇದನ್ನೂ ಓದಿ: ಹಿಂದೂಗಳಿಗೆ ಮುನ್ನುಡಿ ಹಬ್ಬ ನಾಗರ ಪಂಚಮಿ – ಪುರಾಣ, ಇತಿಹಾಸದಲ್ಲಿ ಸರ್ಪದ ಬಗ್ಗೆ ಇರುವ ಉಲ್ಲೇಖಗಳೇನು?

    ಹಾಗೆ ನಾಗನಿಗೆ ಮಲೆನಾಡಿನ ಭಾಗದಲ್ಲಿ ಗುಡಿಗಳು ಕಡಿಮೆ. ಹಾಗೆ ನೆಲದ ಮೇಲೋ, ಅಥವ ಕಟ್ಟೆಯ ಮೇಲೆ ನಾಗರ ಕಲ್ಲುಗಳಿರುತ್ತವೆ. ಶತಶತಮಾನದ ನಾಗರ ಕಲ್ಲುಗಳು ಮಲೆನಾಡಿನ ಮೂಲೆ ಮೂಲೆಯಲ್ಲೂ ಕಾಣ ಸಿಗುತ್ತವೆ. ಅವು ಎಷ್ಟರ ಮಟ್ಟಿಗೆ ಹಳೆಯದ್ದು ಎಂದರೆ ಸವೆದು ಪೆನ್ಸಿಲ್‍ನ ಗೆರೆಯಂತೆ ಕಾಣುವ ಕಲ್ಲುಗಳು ಇವೆ! ಅವುಗಳನ್ನು ಯಾವುದೇ ರೀತಿಯ ಪುನರ್‍ನಿರ್ಮಾಣ ಮಾಡಲಾಗುವುದಿಲ್ಲ. ಅವು ಇದ್ದಂತೆಯೇ ಪೂಜೆಗಳು ನಡೆಯುತ್ತವೆ. ನಾಗರ ಪಂಚಮಿ ಬಳಿಕ ದೀಪಾವಳಿಗೆ ಇದೇ ನಾಗರ ಕ್ಲಲುಗಳಿಗೆ ಪೂಜೆ ನಡೆಯುತ್ತದೆ. ಬಳಿಕ ಒಂದು ವರ್ಷದ ವರೆಗೂ ಯಾವ ಪೂಜೆಗಳನ್ನು ಇವುಗಳಿಗೆ ಮಾಡಲಾಗುವುದಿಲ್ಲ. ಮತ್ತೆ ನಾಗರ ಪಂಚಮಿಗೆ ಅವುಗಳಿಗೆ ಪೂಜೆ ಮತ್ತು ನೈವೇದ್ಯ!

    ಆದಿನದ ವಿಶೇಷವಾಗಿ ಪೂಜೆಗೆ ಹೂವು, ಹಣ್ಣು, ಹಾಲು ಹಾಗೂ ನೈವೇದ್ಯಕ್ಕೆ ರವೆ ಉಂಡೆ ಇಡಲಾಗುತ್ತದೆ. ಕೇದಿಗೆ ಹೂವು ವಿಶೇಷವಾಗಿ ಪೂಜೆಗೆ ಬಳಕೆ ಆಗುತ್ತದೆ. ಇನ್ನೂ ಹುತ್ತದ ಆರಾಧನೆ ಎಲ್ಲೂ ಕಂಡು ಬರುವುದಿಲ್ಲ. ಆ ದಿನ ರಾತ್ರಿ ಕೈಗೆ ಮದರಂಗಿ ಹಚ್ಚುವಂಥಹ ಪದ್ಧತಿ ಇದೆ. ಈ ಬಗ್ಗೆ ಒಂದು ಮಾತಿದೆ, ಹಾವಿನ ಹಬ್ಬದಲ್ಲಿ ಹಚ್ಚಿದ ಮದರಂಗಿ ಗೋವಿನ ಹಬ್ಬದ ತನಕ ಇರಬೇಕು ಎನ್ನಲಾಗುತ್ತದೆ. ಗೋವಿನ ಹಬ್ಬ ಎಂದರೆ ದೀಪಾವಳಿ, ಮಲೆನಾಡಲ್ಲಿ ದೀಪಾವಳಿಯ ದಿನ ಗೋವಿನ ಪೂಜೆ ಮಾಡಲಾಗುತ್ತದೆ.

    ನಾಗ ದೇವರನ್ನು ವಿಶೇಷವಾಗಿ ಮಕ್ಕಳಿಲ್ಲದವರು ಪ್ರಾರ್ಥಿಸಿದರೆ ಸಂತಾನ ಭಾಗ್ಯ ಸಿಗಲಿದೆ ಎಂಬ ನಂಬಿಕೆ ಜನರಲ್ಲಿದೆ. ಮನೆಯ ಒಳಗಡೆ ನಾಗನನ್ನು ಪ್ರಾರ್ಥಿಸಲಾಗುತ್ತದೆ. ಆದರೆ ವಿಶೇಷವಾಗಿ ಮನೆಯ ಒಳಭಾಗದಲ್ಲಿ ನಾಗನನ್ನು ಪೂಜಿಸುವ ಪದ್ಧತಿ ಇಲ್ಲ. ಇದನ್ನೂ ಓದಿ: ‘ನಾಗರಪಂಚಮಿ’ ವಿಶೇಷತೆ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾನ್ಸ್ ಫೆಸ್ಟಿವೆಲ್ ವಿರುದ್ಧ ಗರಂ ಆದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

    ಕಾನ್ಸ್ ಫೆಸ್ಟಿವೆಲ್ ವಿರುದ್ಧ ಗರಂ ಆದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

    ಪ್ರತಿಷ್ಠಿತ ಕಾನ್ಸ್ (Cannes Festival) ಚಿತ್ರೋತ್ಸವದ ವಿರುದ್ಧ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಗರಂ ಆಗಿದ್ದಾರೆ. ಕಾನ್ಸ್ ಅದೊಂದು ಹೆಮ್ಮೆಯ ಚಿತ್ರೋತ್ಸವ, ಅದರ ಬದಲು ಅದನ್ನು ಫ್ಯಾಶನ್ ಶೋ ಆಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ. ಕಾನ್ಸ್ ಚಿತ್ರೋತ್ಸವದ ಪ್ರತಿಷ್ಠೆಯನ್ನು ಉಳಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

    ನಟಿಯರ ವಿವಿಧ ರೀತಿಯ ಕಾಸ್ಟ್ಯೂಮ್ ಗಳಿಂದಾಗಿ ಕಾನ್ಸ್ ಸಾಕಷ್ಟು ಸುದ್ದಿ ಆಗುತ್ತದೆ. ಅದರ ಹೊರತಾಗಿ ಚಿತ್ರೋತ್ಸವದಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದು ಜಗತ್ತಿಗೆ ಗೊತ್ತೇ ಆಗುವುದಿಲ್ಲ. ರೆಡ್ ಕಾರ್ಪೆಟ್ ನಲ್ಲಿ ನಡೆಯುವ ಫ್ಯಾಷನ್ ಶೋ ಮಾತ್ರ ಹೆಚ್ಚು ಸದ್ದು ಮಾಡುತ್ತದೆ. ಇದೇ ವಿವೇಕ್ ಅಗ್ನಿಹೋತ್ರಿ ಕೋಪಕ್ಕೆ ಕಾರಣವಾಗಿದೆ. ಒಳ್ಳೊಳ್ಳೆ ಚಿತ್ರಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ:ದಿ ಕೇರಳ ಸ್ಟೋರಿ: ಮುಸ್ಲಿಂ ಹುಡುಗಿಯ ಪಾತ್ರ ಮಾಡಿದ್ದ ನಟಿಗೆ ಕೊಲೆ ಬೆದರಿಕೆ

    ಈ ಬಾರಿಯ ಕಾನ್ಸ್ ನಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಬಾಲಿವುಡ್ ನಟಿ ಐಶ್ವರ್ಯ ರೈ (Aishwarya Rai) ಅವರ ವಿಚಿತ್ರ ಕಾಸ್ಟ್ಯೂಮ್. ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ನಾನಾ ದೇಶಗಳು ಕೂಡ ಅದಕ್ಕೆ ಮಹತ್ವ ನೀಡಿದ್ದವು. ಹೀಗಾಗಿ ಪರೋಕ್ಷವಾಗಿ ಐಶ್ವರ್ಯ ವಿರುದ್ಧವೂ ವಿವೇಕ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ಇಂದಿನಿಂದ ರಂಜಾನ್ ಉಪವಾಸ ಆಚರಣೆ – ಪ್ರಧಾನಿ ಮೋದಿ ವಿಶ್

    ಇಂದಿನಿಂದ ರಂಜಾನ್ ಉಪವಾಸ ಆಚರಣೆ – ಪ್ರಧಾನಿ ಮೋದಿ ವಿಶ್

    ನವದೆಹಲಿ: ಶುಕ್ರವಾರದಿಂದ ಎಲ್ಲೆಡೆ ಮುಸ್ಲಿಮರ (Muslim) ಪವಿತ್ರ ರಂಜಾನ್ (Ramadan) ಉಪವಾಸ ವೃತ ಆರಂಭವಾಗಿದೆ. ಈ ಪವಿತ್ರ ತಿಂಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಶುಭ ಹಾರೈಸಿದ್ದಾರೆ.

    ರಂಜಾನ್ ಹಿನ್ನೆಲೆ ಟ್ವೀಟ್ ಮಾಡಿರುವ ಮೋದಿ, ಹಬ್ಬಕ್ಕೆ ಶುಭಾಶಯ ತಿಳಿಸುತ್ತಾ, ಈ ಪವಿತ್ರ ತಿಂಗಳು ನಮ್ಮ ಸಮಾಜದಲ್ಲಿ ಹೆಚ್ಚಿನ ಏಕತೆ ಹಾಗೂ ಸಾಮರಸ್ಯ ತರಲಿ. ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ ಎಂದಿದ್ದಾರೆ. ಇದನ್ನೂ ಓದಿ: ‘ಪರಿಮಳಾ ಡಿಸೋಜಾ’ ಚಿತ್ರದ 2ನೇ ಹಾಡು ರಿಲೀಸ್ ಮಾಡಿದ ಜಿ.ಟಿ ದೇವೇಗೌಡ

    ಇಸ್ಲಾಂ ಸಮುದಾಯದ ಅತಿ ದೊಡ್ಡ ಹಬ್ಬವಾದ ರಂಜಾನ್ ತಿಂಗಳಲ್ಲಿ ಹೆಚ್ಚಿನವರು ಉಪವಾಸ (Fasting) ಮಾಡುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಈ ಪವಿತ್ರ ತಿಂಗಳಲ್ಲಿ ದೇಶಾದ್ಯಂತ ಮುಸ್ಲಿಮರು ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಈ ತಿಂಗಳ ಉಪವಾಸದ ಬಳಿಕ ಈದ್-ಉಲ್-ಫಿತರ್ ಅನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: ಭದ್ರತಾ ಕಾರಣಕ್ಕೆ TikTok ಬ್ಯಾನ್ ಮಾಡಿದ ಬ್ರಿಟಿಷ್ ಸಂಸತ್ತು

  • ನಾಡಿನ ಸಮಸ್ತ ಜನತೆಗೆ ಕನ್ನಡದಲ್ಲೇ ಯುಗಾದಿ ಶುಭಾಶಯ ತಿಳಿಸಿದ ಮೋದಿ

    ನಾಡಿನ ಸಮಸ್ತ ಜನತೆಗೆ ಕನ್ನಡದಲ್ಲೇ ಯುಗಾದಿ ಶುಭಾಶಯ ತಿಳಿಸಿದ ಮೋದಿ

    ನವದೆಹಲಿ: ಭಾರತದಲ್ಲಿ ಯುಗಾದಿ (Ugadi) ಎಂದರೆ ಹೊಸ ಯುಗದ ಆರಂಭ ಎಂದರ್ಥ. ಇಂದು (ಮಾ.22) ಭಾರತದೆಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ-ಮನಗಳಲ್ಲಿ ಸಂಭ್ರಮವೋ ಸಂಭ್ರಮ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಾಡಿನ ಜನತೆಗೆ ಕನ್ನಡದಲ್ಲೇ ಟ್ವೀಟ್ (Tweet) ಮಾಡಿ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

    ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯಗಳು. ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಜನರಿಗೆ ಶಾಕ್ – ಹೂವು, ಹಣ್ಣಿನ ಬೆಲೆ ದುಪ್ಪಟ್ಟು

    ದೇಶದೆಲ್ಲೆಡೆ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ. ಆಂಧ್ರಪ್ರದೇಶ (Andhra Pradesh) ಮತ್ತು ಕರ್ನಾಟಕದ (Karnataka) ಜನರು ಯುಗಾದಿಯನ್ನು ಹೊಸ ವರ್ಷವೆಂದು ಪರಿಗಣಿಸುತ್ತಾರೆ. ಈ ದಿನ ಬೇವು-ಬೆಲ್ಲವನ್ನು ಎಲ್ಲರಿಗೂ ಹಂಚಲಾಗುತ್ತದೆ. ಇದು ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟ ಹಂತವನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರುತ್ತದೆ. ಅಲ್ಲದೇ ವಸಂತ ಋತುವನ್ನು ಸ್ವಾಗತಿಸುವ ದಿನವೂ ಇದಾಗಿದೆ. ಇದನ್ನೂ ಓದಿ: ಯುಗಾದಿಗೆ ಮಾಡಿ ದೇಹಕ್ಕೆ ತಂಪೆನಿಸುವ ಪಾನಕ, ಮಜ್ಜಿಗೆ

    ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ನಾಯಕರು, ಸಿನಿ ತಾರೆಯರು ಜನತೆಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿ ಸಂದೇಶ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗಗನಕ್ಕೇರಿದ Gold Rate – 60 ಸಾವಿರ ಗಡಿ ದಾಟಿದ ಚಿನ್ನ

  • ದೇಗುಲ ಉತ್ಸವದ ವೇಳೆ ನೆಲಕ್ಕಪ್ಪಳಿಸಿದ ಕ್ರೇನ್ – ನಾಲ್ವರ ದುರ್ಮರಣ

    ದೇಗುಲ ಉತ್ಸವದ ವೇಳೆ ನೆಲಕ್ಕಪ್ಪಳಿಸಿದ ಕ್ರೇನ್ – ನಾಲ್ವರ ದುರ್ಮರಣ

    ಚೆನ್ನೈ: ದೇವಾಲಯದ ಉತ್ಸವದ (Temple Festival) ವೇಳೆ ಕ್ರೇನ್ (Crane) ಒಂದು ಕುಸಿದು ಬಿದ್ದು ನಾಲ್ವರು ದುರ್ಮರಣ ಹೊಂದಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.

    ತಮಿಳುನಾಡಿನ ರಾಣಿಪೇಟೆಯಲ್ಲಿರುವ ದ್ರೌಪತಿ ದೇವಾಲಯದಲ್ಲಿ ಅಪಘಾತ ವರದಿಯಾಗಿದೆ. ಭಾನುವಾರ ಸಂಜೆ ಕ್ರೇನ್ ಕುಸಿದು ಬಿದ್ದಿದ್ದರಿಂದ ನೆರೆದಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. 5 ಜನರು ಗಾಯಗೊಂಡಿದ್ದಾರೆ.

    ವರದಿಗಳ ಪ್ರಕಾರ, ಪೊಂಗಲ್ ಬಳಿಕ ನಡೆಯುವ ದ್ರೌಪತಿ ಅಮ್ಮನವರ ಹಬ್ಬದ ಅಂಗವಾಗಿ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ದೇವಿಯ ವಿಗ್ರಹವನ್ನು ಹೊತ್ತಿದ್ದ ಕ್ರೇನ್ ಏಕಾಏಕಿ ಕುಸಿದು ಬಿದ್ದಿದೆ. ಕ್ರೇನ್ ನೆಲಕ್ಕಪ್ಪಳಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ. ಇದನ್ನೂ ಓದಿ: ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ

    ಕ್ರೇನ್‌ನ ಒಂದು ಭಾಗ ಎತ್ತರದ ಪ್ರದೇಶದಲ್ಲಿದ್ದು, ನೆಲದ ಅಸಮತೋಲನದಿಂದಲೇ ಅದು ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕ್ರೇನ್ ನಿರ್ವಾಹಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ರಾಣಿಪೇಟೆ ಜಿಲ್ಲಾಧಿಕಾರಿ ಭಾಸ್ಕರ ಪಾಂಡಿಯನ್ ತಿಳಿಸಿದ್ದಾರೆ.

    ದೇವಾಲಯದ ಉತ್ಸವದಲ್ಲಿ ಕ್ರೇನ್ ಬಳಸಲು ಯಾವುದೇ ಅನುಮತಿ ಅಥವಾ ಸೂಚನೆ ಇರಲಿಲ್ಲ. ಇದು ಖಾಸಗಿ ದೇವಾಲಯವಾಗಿದೆ ಎಂದು ಪಾಂಡಿಯನ್ ಹೇಳಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿ ತ್ರಿ ಸದಸ್ಯ ಪೀಠದಲ್ಲಿ ಹಿಜಬ್ ಪ್ರಕರಣದ ವಿಚಾರಣೆ ನಡೆಸಲಾಗುವುದು: ಸಿಜೆಐ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಟುಂಬದ ಜೊತೆ ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಿಸಿದ ರಾಕಿಂಗ್ ಸ್ಟಾರ್ ಯಶ್ ದಂಪತಿ

    ಕುಟುಂಬದ ಜೊತೆ ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಿಸಿದ ರಾಕಿಂಗ್ ಸ್ಟಾರ್ ಯಶ್ ದಂಪತಿ

    ‘ಕೆಜಿಎಫ್’ ಸ್ಟಾರ್ ಯಶ್ (Yash) ಅವರು ಪಕ್ಕಾ ಫ್ಯಾಮಿಲಿ ಮೆನ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಎಷ್ಟೇ ಕೆಲಸವಿದ್ದರೂ ಕುಟುಂಬಕ್ಕೆ ಅಂತಾ ಒಂದಿಷ್ಟು ಸಮಯಾವಕಾಶ ಕೊಡುತ್ತಾರೆ‌. ಇದೀಗ ಯಶ್, ಸಂಕ್ರಾಂತಿ ಹಬ್ಬವನ್ನು (Makar Sankranti) ಸಂಭ್ರಮದಿಂದ ಕುಟುಂಬ ಜೊತೆ ಆಚರಿಸಿದ್ದಾರೆ.

    ಹೊಸ ಪ್ರಾಜೆಕ್ಟ್‌ಗಳ ಕೆಲಸ ಸದ್ಯಕ್ಕೆ ಪಕ್ಕಕ್ಕೆ ಇಟ್ಟು ಹಬ್ಬ-ಹರಿದಿನಗಳಲ್ಲಿ ಮಿಸ್ ಇಲ್ಲದೇ ಕುಟುಂಬದ ಜೊತೆಗೆ ಯಶ್ ಕಾಲ ಕಳೆದಿದ್ದಾರೆ. ಅಂತೆಯೇ ಈ ಬಾರಿಯೂ ಕೂಡ ಸಂಕ್ರಾಂತಿ ಹಬ್ಬವನ್ನು ಅವರು ಸಡಗರದಿಂದ ಕುಟುಂಬದ ಜೊತೆಗೆ ಆಚರಿಸಿದ್ದಾರೆ. ಹಾಸನದಲ್ಲಿರುವ (Hassan) ತಮ್ಮ ಫಾರ್ಮ್‌ಹೌಸ್‌ನಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ತಂದೆ, ತಾಯಿ ಹಾಗೂ ಪತ್ನಿ ರಾಧಿಕಾ ಪಂಡಿತ್ (Radhika Pandit), ಮಕ್ಕಳಾದ ಆಯ್ರಾ ಮತ್ತು ಯಥರ್ವ್‌ ಜೊತೆಗೆ ಯಶ್ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಹಬ್ಬದ ಸಂಭ್ರಮದ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಸಂಕ್ರಾಂತಿಯಂದು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ರಾಮ್ ಚರಣ್ ಪತ್ನಿ ಉಪಾಸನಾ

     

    View this post on Instagram

     

    A post shared by Yash (@thenameisyash)

    ಇನ್ನೂ ಈ ಫೋಟೋದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡದಲ್ಲಿ ಯಶ್​ ಕುಟುಂಬದವರು ಸಂಕ್ರಾಂತಿ ಹಬ್ಬ ಆಚರಿಸೋದನ್ನ ನೋಡಬಹುದಾಗಿದೆ. ಅವರು ಹೊಸ ಮನೆ ಕಟ್ಟಿಸುತ್ತಿದ್ದಾರೆ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಹೊಸ ಮನೆ ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

    ‘ಕೆಜಿಎಫ್ 2’ ಸಕ್ಸಸ್ ನಂತರ ಯಶ್ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಯಶ್ ಮುಂದಿನ ನಡೆಯ ಬಗ್ಗೆ ನೆಟ್ಟಿಗರು ಕ್ಯೂರಿಯಸ್ ಆಗಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಸೆಲೆಬ್ರೆಟಿಗಳ ಸಂಭ್ರಮ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಕ್ರಾಂತಿ ಹಬ್ಬಕ್ಕೆ ಮಾಡಿ ಎಳ್ಳಿನ ಲಡ್ಡು

    ಸಂಕ್ರಾಂತಿ ಹಬ್ಬಕ್ಕೆ ಮಾಡಿ ಎಳ್ಳಿನ ಲಡ್ಡು

    ರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಅಂತ ದೊಡ್ಡವರು ಹೇಳ್ತಾರೆ. ಎಳ್ಳು ಬೆಲ್ಲಕೆ ನಂಟು, ರುಚಿಯ ಗಂಟು ಎಂದೆಲ್ಲ ಹಿರಿಯರು ಹೇಳಿತ್ತಾರೆ. ಇದೆ ಎಳ್ಳು, ಬೆಲ್ಲವನ್ನು ಬಳಸಿಕೊಂಡು ಹಬ್ಬಕ್ಕೆ ವಿಶೇಷ ಅಡುಗೆಯನ್ನು ತಯಾರಿಸಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಬಿಳಿ ಎಳ್ಳು – 2 ಕಪ್
    * ಶೇಂಗಾ- ಅರ್ಧ ಕಪ್
    * ತೆಂಗಿನ ತುರಿ- ಅರ್ಧ ಕಪ್
    * ಬೆಲ್ಲ – 1 ಕಪ್
    * ಏಲಕ್ಕಿ ಪುಡಿ- ಸ್ವಲ್ಪ
    * ದ್ರಾಕ್ಷಿ, ಗೋಡಂಬಿ

    ಮಾಡುವ ವಿಧಾನ:
    * ಎಳ್ಳನ್ನು ಚೆನ್ನಾಗಿ ಹುರಿಯಿರಿದಿಟ್ಟು ಕೊಳ್ಳಬೇಕು.
    * ಶೇಂಗಾವನ್ನು ಕೆಂಪುಬಣ್ಣಕ್ಕೆ ಬರುವಂತೆ ಹುರಿಯಿರಿದುಕೊಳ್ಳಿ. ಸಿಹಿಯಾದ ಬಾದಾಮ್ ಪುರಿ ಮಾಡುವ ಸರಳ ವಿಧಾನ

    * ತೆಂಗಿನ ತುರಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ತೆಂಗಿನ ತುರಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಾಗ ತಣ್ಣಗಾಗಲು ತಟ್ಟೆಯಲ್ಲಿ ಹಾಕಿಡಿ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
    * ಈಗ ಎಳ್ಳು, ನೆಲಗಡಲೆ, ತೆಂಗಿನ ತುರಿ  ಹಾಕಿ ರುಬ್ಬಿ ತೆಗೆದುಕೊಂಡಿರಬೇಕು.

    * ನಂತರ ಬೆಲ್ಲವನ್ನು ಪುಡಿ ಮಾಡಿ. ಒಂದು ಬೌಲ್‍ಗೆ ಬೆಲ್ಲ, ರುಬ್ಬಿದ ಮಿಶ್ರಣ, ದ್ರಾಕ್ಷಿ, ಗೋಡಂಬಿ ಹಾಕಿ, ಏಲಕ್ಕಿ ಪುಡಿ ಮಿಕ್ಸ್ ಮಾಡಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಚಿಕ್ಕ-ಚಿಕ್ಕ ಉಂಡೆ ಕಟ್ಟಿದರೆ ಎಳ್ಳು ಲಡ್ಡು ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    Live Tv 
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನ ಐದು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ

    ಬೆಂಗಳೂರಿನ ಐದು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ

    ಬೆಂಗಳೂರು: ನೈರುತ್ಯ ರೈಲ್ವೆ ನಗರದ ಐದು ರೈಲು ನಿಲ್ದಾಣಗಳಲ್ಲಿ(Bengaluru Railway Stations) ಪ್ಲಾಟ್‌ಫಾರ್ಮ್ ಟಿಕೆಟ್(Platform Ticket) ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ.

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕಂಟೋನ್ಮೆಂಟ್, ಯಶವಂತಪುರ, ಕೃಷ್ಣರಾಜಪುರ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣಗಳಲ್ಲಿ 10 ರೂ. ಇದ್ದ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು 20 ರೂ.ಕ್ಕೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ದಸರಾ, ದೀಪಾವಳಿಗೆ ಬೆಂಗಳೂರಿನಿಂದ ವಿಶೇಷ ರೈಲು – ಎಲ್ಲೆಲ್ಲಿಗೆ ಒಮ್ಮೆ ನೋಡಿ

    ದಸರಾ ಹಬ್ಬ(Dasara) ಮತ್ತು ರಜಾ ದಿನಗಳಲ್ಲಿ ಜನದಟ್ಟಣೆ ತಪ್ಪಿಸಲು ಮತ್ತು ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್ ಗಳಲ್ಲಿ ಓಡಾಟಕ್ಕೆ ಅನುಕೂಲಕ್ಕೆ ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂಬರುವ ಹಬ್ಬಗಳಲ್ಲಿ ಖಾದಿ ಉತ್ಪನ್ನಗಳನ್ನೇ ಗಿಫ್ಟ್ ಕೊಡಿ – ಜನರಿಗೆ ಮೋದಿ ಕರೆ

    ಮುಂಬರುವ ಹಬ್ಬಗಳಲ್ಲಿ ಖಾದಿ ಉತ್ಪನ್ನಗಳನ್ನೇ ಗಿಫ್ಟ್ ಕೊಡಿ – ಜನರಿಗೆ ಮೋದಿ ಕರೆ

    ನವದೆಹಲಿ: ಮುಂಬರುವ ಹಬ್ಬಗಳಲ್ಲಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಖಾದಿ ಉತ್ಪನ್ನಗಳನ್ನೇ ಉಡುಗೊರೆಯಾಗಿ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದಾರೆ.

    ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಖಾದಿ ಮಹತ್ವವನ್ನು ನೆನಪಿಸಿಕೊಳ್ಳುವ ಸಲುವಾಗಿ ಸಾಬರಮತಿ ನದಿ ತೀರದಲ್ಲಿಂದು ಆಯೋಜಿಸಿದ್ದ `ಖಾದಿ ಉತ್ಸವ’ದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಅಲ್ಲದೇ ಪ್ರಧಾನಿ ಅವರೊಂದಿಗೆ ಖಾದಿ ಉತ್ಸವದಲ್ಲಿ ಸುಮಾರು 7,500 ಮಹಿಳೆಯರು ಏಕಕಾಲಕ್ಕೆ ಚರಕದಲ್ಲಿ ನೂಲುವ ಮೂಲಕ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: 2 ಮಕ್ಕಳ ತಾಯಿಯೊಂದಿಗೆ ಪರಾರಿಯಾಗಿ ಜೀವನಕ್ಕೆ ಗಾರೆ ಕೆಲಸ ಮಾಡ್ತಿದ್ದ BE ಗ್ರ್ಯಾಜುಯೆಟ್‌ – ಪೊಲೀಸರ ಅತಿಥಿ

    ನಾನು ದೇಶದ ಜನತೆಗೆ ಒಂದು ಮನವಿ ಮಾಡುತ್ತೇನೆ. ಮುಂಬರುವ ಹಬ್ಬಗಳಲ್ಲಿ ಈ ಬಾರಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಖಾದಿ ಉತ್ಪನ್ನಗಳನ್ನೇ ಉಡುಗೊರೆಯಾಗಿ ಕೊಡಿ. ನೀವು ಹಲವು ರೀತಿಯ ಬಟ್ಟೆಗಳನ್ನು ಹೊಂದಿರಬಹುದು. ಆದರೆ ಖಾದಿಗೆ ಸ್ಥಾನ ನೀಡಿದರೆ `ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ಮನವಿ ಮಾಡಿದ್ದಾರೆ.

    ಮುಂದುವರಿದು, ಇದೇ ಮೊದಲ ಬಾರಿಗೆ ಭಾರತದ ಖಾದಿ ಗ್ರಾಮೋದ್ಯೋಗದ ವಹಿವಾಟು 1 ಲಕ್ಷ ಕೋಟಿ ರೂ. ದಾಟಿದೆ. ಇದಕ್ಕೆ ಕಾರಣ ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಖಾದಿ ಮಾರಾಟ 4 ಪಟ್ಟು ಅಧಿಕವಾಗಿದೆ. ಈ ಬೆಳವಣಿಗೆಯಿಂದ ಹಳ್ಳಿ-ಹಳ್ಳಿಗಳಲ್ಲೂ ಆದಾಯ ಹರಿದುಬಂದಿದೆ. ಜನರಿಗೂ ಉದ್ಯೋಗಾವಕಾಶ ಸಿಕ್ಕಿದ್ದು, ಸ್ವಾವಲಂಬಿಗಳಾಗಿದ್ದಾರೆ. ಸರಿ ಸುಮಾರು ಎರಡೂವರೆ ಕೋಟಿ ಉದ್ಯೋಗ ಈ ಖಾದಿ ಉದ್ಯಮದಿಂದ ಸೃಷ್ಟಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಖಾದಿ ಸಹ ಸ್ವಾತಂತ್ರ‍್ಯ ಚಳವಳಿಯಲ್ಲಿ ಪ್ರಮುಖ ಶಕ್ತಿಯಾಗಿತ್ತು. ಬ್ರಿಟಿಷರ ಗುಲಾಮಗಿರಿಯನ್ನು ಅಂದಿನ ಕಾಲದಲ್ಲೇ ಮುರಿದಿತ್ತು. ಇದೀಗ ಅದೇ ಖಾದಿ ಭಾರತದ ಅಭಿವೃದ್ಧಿಯ ಪಥದಲ್ಲೂ ಪ್ರಮುಖ ಪಾತ್ರ ವಹಿಸಿದೆ. ಅಷ್ಟೇ ಅಲ್ಲ ಸ್ವಾವಲಂಬಿ ಭಾರತದ ಕನಸಿಗೆ ಖಾದಿ ಪ್ರಮುಖ ಶಕ್ತಿಯಾಗಿದೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಇಂಡೋ-ಪಾಕ್‌ ಕದನಕ್ಕೆ ಕ್ಷಣಗಣನೆ – ಟ್ವಿಟ್ಟರ್‌ನಲ್ಲಿ ಶುರುವಾಗಿದೆ ಟ್ರೆಂಡ್ ಹವಾ

    ಒಂದು ಕಾಲದಲ್ಲಿ ಸಣ್ಣ-ಸಣ್ಣ ಸಾಲಗಳಿಗೂ ಬ್ಯಾಂಕ್‌ಗೆ ಅಲೆದಾಡುವ ಪರಿಸ್ಥಿತಿ ಇತ್ತು. ಇದೀಗ 50 ಸಾವಿರದಿಂದ 10 ಲಕ್ಷ ರೂಪಾಯಿ ಸಾಲ ಯಾವುದೇ ಅಡತಡೆ ಇಲ್ಲದೆ ಪಡೆಯಲು ಸಾಧ್ಯವಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರ ಖಾದಿ ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡು ಸಬಲೀಕರಣರಾಗಿದ್ದಾರೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]