Tag: Feroze Khan

  • ‘ತಂದೆ ಮಗನ ಜೊತೆ ಮಲಗಿದ್ದ ನಟಿ’ ವಿವಾದ: 3 ಸಾವಿರ ಕೇಸ್ ದಾಖಲಿಸಿದ ಸೆಲಿನಾ

    ‘ತಂದೆ ಮಗನ ಜೊತೆ ಮಲಗಿದ್ದ ನಟಿ’ ವಿವಾದ: 3 ಸಾವಿರ ಕೇಸ್ ದಾಖಲಿಸಿದ ಸೆಲಿನಾ

    ವಿವಾದಿತ ಬಾಲಿವುಡ್ ಸಿನಿಮಾ ವಿಮರ್ಶಕ ಉಮೈರ ಸಂಧು (Umaira Sandhu) ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಬಾಲಿವುಡ್ ಖ್ಯಾತ ನಟ ಸೆಲಿನಾ ಜೇಟ್ಲಿ(Celina Jaitley). ಕೇವಲ ಸಂಧು ವಿರುದ್ಧ ಮಾತ್ರವಲ್ಲ, ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧವೂ ಅವರು ದೂರು ದಾಖಲಿಸಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ದೂರು ದಾಖಲಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

    ಜನಶೀನ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಸೆಲಿನಾ ಜೇಟ್ಲಿ ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸಾಕಷ್ಟು ಚಿತ್ರಗಳನ್ನೂ ಇವರು ಮಾಡಿದ್ದಾರೆ. ಈ ನಟಿಯು ತಂದೆ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡುವ ಮೂಲಕ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದರು.

    ಜನಶೀನ್ ಬಾಲಿವುಡ್ ದಿಗ್ಗಜ ಫಿರೋಜ್ ಖಾನ್ (Feroze Khan) ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಈ ಸಿನಿಮಾವನ್ನು ತಮ್ಮ ಪುತ್ರ ಫರ್ದಿನ್ ಖಾನ್ (Fardeen Khan) ಗಾಗಿ ಮಾಡಿದ್ದರು ಎನ್ನುವ ಮಾತು ಇದೆ. ಈ ಸಿನಿಮಾ ಮೂಲಕವೇ ಸೆಲಿನಾ ಚಿತ್ರರಂಗ ಪ್ರವೇಶ ಮಾಡಿದ್ದರು. ಈ ಅವಕಾಶಕ್ಕಾಗಿ ಅವರು ತಂದೆ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡಿದ್ದ, ಈ ಟ್ವೀಟ್ ವೈರಲ್ ಕೂಡ ಆಗಿತ್ತು. ಇದನ್ನೂ ಓದಿ:ಕನ್ನಡದ ನಟಿ ವಿಶಾಖ ಸಿಂಗ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

    ಈ ಟ್ವೀಟ್ ಅನ್ನು ಗಮನಿಸಿರುವ ಸೆಲಿನಾ, ಖಾರವಾಗಿಯೇ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ಅಕ್ಷರಗಳ ಮೂಲಕವೇ ಉಮೈರ್ ಗೆ ಚಳಿ ಬಿಡಿಸಿದ್ದಾರೆ. ಉಮೈರ್ ಬರೆದ ಟ್ವೀಟ್ ಗೆ ಉತ್ತರ ನೀಡಿರುವ ಅವರು, ‘ಡಿಯರ್ ಸಂಧು, ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನಾನಾ ಮಾರ್ಗಗಳಿವೆ. ಅದಕ್ಕಾಗಿ ಬಿಡುವು ಮಾಡಿಕೊಂಡು ವೈದ್ಯರನ್ನು ಸಂಪರ್ಕಿಸು’ ಎಂದು ಮರುತ್ತರ ಕೊಟ್ಟಿದ್ದರು.

    ವಿದೇಶಗಳಲ್ಲಿ ರಿಲೀಸ್ ಮಾಡುವ ಸಿನಿಮಾಗಳ ಸೆನ್ಸಾರ್ ಬೋರ್ಡ್ ಸದಸ್ಯನೆಂದು ಹೇಳಿಕೊಳ್ಳುವ ಉಮೈರ್, ಸಿನಿಮಾ ರಿಲೀಸ್ ಗೂ ಮುನ್ನ ಆ ಚಿತ್ರದ ಬಗ್ಗೆ ಬರೆಯುತ್ತಾರೆ. ಕೆಲವೇ ಸಲ ಅವರ ವಿಮರ್ಶೆಗಳು ಪಾಸಿಟಿವ್ ಆಗಿರುತ್ತವೆ. ನೆಗೆಟಿವ್ ವಿಮರ್ಶೆ ಕೊಟ್ಟ ಚಿತ್ರಗಳು ಹಿಟ್ ಕೂಡ ಆಗಿವೆ. ಹಾಗಾಗಿ ತಲೆನೋವಿನ ಉಮೈರ್ ಎಂದೇ ಬಾಲಿವುಡ್ ಈತನನ್ನು ಕರೆಯುತ್ತದೆ.

  • ತಂದೆ-ಮಗನ ಜೊತೆ ಮಲಗಿದ್ದ ಏಕೈಕ ನಟಿ ಸೆಲಿನಾ ಜೇಟ್ಲಿ : ವಿಮರ್ಶಕನ ವಿರುದ್ಧ ನಟಿ ಗರಂ

    ತಂದೆ-ಮಗನ ಜೊತೆ ಮಲಗಿದ್ದ ಏಕೈಕ ನಟಿ ಸೆಲಿನಾ ಜೇಟ್ಲಿ : ವಿಮರ್ಶಕನ ವಿರುದ್ಧ ನಟಿ ಗರಂ

    ಭಾರತೀಯ ಸಿನಿಮಾ ರಂಗ ಕಂಡ ಅತ್ಯಂತ ವಿವಾದಿತ (Controversy) ಸಿನಿಮಾ ವಿಮರ್ಶಕ ಬಾಲಿವುಡ್ ನ ಉಮೈರ್ ಸಂಧು (Umair Sandhu) ಮಾಡಿರುವ ಟ್ವೀಟ್, ಇದೀಗ ಬಿಟೌನ್ ನಲ್ಲಿ ಭಾರೀ ಆವಾಂತರ ಸೃಷ್ಟಿ ಮಾಡಿದೆ. ತಮ್ಮ ವಿಮರ್ಶೆಗಳಿಂದ ನೋಡುಗರನ್ನು ಸದಾ ದಿಕ್ಕು ತಪ್ಪಿಸುವ ಉಮೈರ್ , ಈ ಬಾರಿ ಹೆಸರಾಂತ ನಟಿ ಸೆಲಿನಾ ಜೇಟ್ಲಿಯನ್ನು (Celina Jaitly) ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ.

    ಜನಶೀನ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಸೆಲಿನಾ ಜೇಟ್ಲಿ ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸಾಕಷ್ಟು ಚಿತ್ರಗಳನ್ನೂ ಇವರು ಮಾಡಿದ್ದಾರೆ. ಈ ನಟಿಯು ತಂದೆ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡುವ ಮೂಲಕ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

    ಜನಶೀನ್ ಬಾಲಿವುಡ್ ದಿಗ್ಗಜ ಫಿರೋಜ್ ಖಾನ್ (Feroze Khan) ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಈ ಸಿನಿಮಾವನ್ನು ತಮ್ಮ ಪುತ್ರ ಫರ್ದಿನ್ ಖಾನ್ (Fardeen Khan) ಗಾಗಿ ಮಾಡಿದ್ದರು ಎನ್ನುವ ಮಾತು ಇದೆ. ಈ ಸಿನಿಮಾ ಮೂಲಕವೇ ಸೆಲಿನಾ ಚಿತ್ರರಂಗ ಪ್ರವೇಶ ಮಾಡಿದ್ದರು. ಈ ಅವಕಾಶಕ್ಕಾಗಿ ಅವರು ತಂದೆ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಕೂಡ ಆಗಿದೆ.

    ಈ ಟ್ವೀಟ್ ಅನ್ನು ಗಮನಿಸಿರುವ ಸೆಲಿನಾ, ಖಾರವಾಗಿಯೇ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ಅಕ್ಷರಗಳ ಮೂಲಕವೇ ಉಮೈರ್ ಗೆ ಚಳಿ ಬಿಡಿಸಿದ್ದಾರೆ. ಉಮೈರ್ ಬರೆದ ಟ್ವೀಟ್ ಗೆ ಉತ್ತರ ನೀಡಿರುವ ಅವರು, ‘ಡಿಯರ್ ಸಂಧು, ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನಾನಾ ಮಾರ್ಗಗಳಿವೆ. ಅದಕ್ಕಾಗಿ ಬಿಡುವು ಮಾಡಿಕೊಂಡು ವೈದ್ಯರನ್ನು ಸಂಪರ್ಕಿಸು’ ಎಂದು ಮರುತ್ತರ ಕೊಟ್ಟಿದ್ದಾರೆ.

    ವಿದೇಶಗಳಲ್ಲಿ ರಿಲೀಸ್ ಮಾಡುವ ಸಿನಿಮಾಗಳ ಸೆನ್ಸಾರ್ ಬೋರ್ಡ್ ಸದಸ್ಯನೆಂದು ಹೇಳಿಕೊಳ್ಳುವ ಉಮೈರ್, ಸಿನಿಮಾ ರಿಲೀಸ್ ಗೂ ಮುನ್ನ ಆ ಚಿತ್ರದ ಬಗ್ಗೆ ಬರೆಯುತ್ತಾರೆ. ಕೆಲವೇ ಸಲ ಅವರ ವಿಮರ್ಶೆಗಳು ಪಾಸಿಟಿವ್ ಆಗಿರುತ್ತವೆ. ನೆಗೆಟಿವ್ ವಿಮರ್ಶೆ ಕೊಟ್ಟ ಚಿತ್ರಗಳು ಹಿಟ್ ಕೂಡ ಆಗಿವೆ. ಹಾಗಾಗಿ ತಲೆನೋವಿನ ಉಮೈರ್ ಎಂದೇ ಬಾಲಿವುಡ್ ಈತನನ್ನು ಕರೆಯುತ್ತದೆ.