Tag: Fengal Cyclone

  • ಸೈಕ್ಲೋನ್ ಎಫೆಕ್ಟ್; ತರಕಾರಿ ಬೆಲೆ ಗಗನಕ್ಕೆ – ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

    ಸೈಕ್ಲೋನ್ ಎಫೆಕ್ಟ್; ತರಕಾರಿ ಬೆಲೆ ಗಗನಕ್ಕೆ – ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

    – ಬೆಳ್ಳುಳಿಗೆ 600 ರೂ., ನುಗ್ಗೆಕಾಯಿ ಕೆಜಿಗೆ 500 ರೂ.!

    ಬೆಂಗಳೂರು: ಫೆಂಗಲ್ ಚಂಡಮಾರುತದಿಂದಾಗಿ ವಿಪರೀತ ಮಳೆಯಾದ ಪರಿಣಾಮ ತರಕಾರಿಗಳ ಬೆಲೆ ಗಗನಕ್ಕೇರಿದೆ.

    ಕರ್ನಾಟಕ ಸೇರಿದಂತೆ ತಮಿಳುನಾಡು, ಚೆನ್ನೈನಲ್ಲಿ ಭಾರೀ ಮಳೆಯಾದ ಹಿನ್ನೆಲೆ ಬೆಳೆ ಹಾನಿಯಾಗುವುದರ ಜೊತೆಗೆ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮ ತರಕಾರಿ ಬೆಲೆ ಹೆಚ್ಚಾಗಿದೆ.ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವಣ್ಣ ದಂಪತಿ

    ಬೆಳ್ಳುಳ್ಳಿ ಕೆ.ಜಿಗೆ 600 ರೂ. ಗಡಿ ದಾಟಿದ್ದು, ನುಗ್ಗೆಕಾಯಿ ಕೆ.ಜಿಗೆ 500ರೂ. ತಲುಪಿದೆ. ಒಂದು ಪೀಸ್ ನುಗ್ಗೆಕಾಯಿ 60ರೂ. ಆಗಿದೆ. ಈರುಳ್ಳಿ ಸೆಂಚುರಿಯಾದರೆ, ಟೊಮೆಟೋ ಅರ್ಧ ಸೆಂಚುರಿ ಬಾರಿಸಿದೆ. ಒಟ್ಟಾರೆ ತರಕಾರಿ ದರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.

    ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಗಳಲ್ಲಿ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗದ ಕಾರಣ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.

    ಬೆಂಗಳೂರಿನಲ್ಲಿ ತರಕಾರಿ ಬೆಲೆ ಎಷ್ಟಿದೆ?
    ಟೊಮೆಟೊ – ಕೆ.ಜಿಗೆ 60-70ರೂ.
    ಬೆಳ್ಳುಳ್ಳಿ – ಕೆ.ಜಿಗೆ 550-600ರೂ.
    ಈರುಳ್ಳಿ – ಕೆ.ಜಿಗೆ 70-80.ರೂ.
    ನುಗ್ಗೆಕಾಯಿ – ಕೆ.ಜಿಗೆ 500ರೂ.
    ಬಟಾಣಿ- ಕೆ.ಜಿಗೆ 180-200 ರೂ.
    ಮೆಣಸಿನಕಾಯಿ – ಕೆ.ಜಿಗೆ 40-50 ರೂ.
    ಆಲೂಗಡ್ಡೆ- ಕೆ.ಜಿಗೆ 35-40 ರೂ.
    ಬೀನ್ಸ್- ಕೆ.ಜಿಗೆ 60 ರೂ.
    ಕ್ಯಾರೆಟ್- ಕೆ.ಜಿಗೆ 60-80ರೂ.
    ಗ್ರೀನ್ ಕ್ಯಾಪ್ಸಿಕಂ – ಕೆ.ಜಿಗೆ 50ರೂ.
    ಯೆಲ್ಲೋ, ರೆಡ್ ಕ್ಯಾಪ್ಸಿಕಂ – ಕೆ.ಜಿಗೆ 150-180ರೂ.
    ಬಿಟ್ ರೋಟ್- ಕೆ.ಜಿಗೆ 60ರೂ.ಇದನ್ನೂ ಓದಿ:ಕಡ್ಲೆಪುರಿಗಿಂತಲೂ ಕಡೆಯಾಯ್ತು ಮೈಸೂರಿನ ಸೈಟ್‌ಗಳು – ಕೇವಲ 3 ಸಾವಿರಕ್ಕೆ 60*40 ಸೈಟ್ ಬರೆದುಕೊಟ್ಟ ಮುಡಾ

  • Kolar| ಜಡಿ ಮಳೆಯಿಂದ ಲಕ್ಷಾಂತರ ಮೌಲ್ಯದ ಬೆಳೆ ಹಾನಿ – ಜಂಟಿ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಕ್ರಮ

    Kolar| ಜಡಿ ಮಳೆಯಿಂದ ಲಕ್ಷಾಂತರ ಮೌಲ್ಯದ ಬೆಳೆ ಹಾನಿ – ಜಂಟಿ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಕ್ರಮ

    ಕೋಲಾರ: ಫೆಂಗಲ್ ಚಂಡಮಾರುತ (Fengal Cyclone) ಹಿನ್ನೆಲೆ ಕೋಲಾರದಲ್ಲಿ (Kolar) ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು  ಹಾನಿಯಾಗಿದೆ.

    ಜಡಿ ಮಳೆಯಿಂದಾಗಿ (Rain) ರೈತರು ಬೆಳೆದಿದ್ದ ರಾಗಿ, ಅವರೆಕಾಯಿ, ಹೂಕೋಸು, ಹೂವು ಸೇರಿದಂತೆ ಸಾಕಷ್ಟು ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಇದರಿಂದ ರೈತರು ಕಂಗಾಲಾಗಿದ್ದರಲ್ಲದೆ, ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದರು. ಮಳೆ ಹಾನಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದರು. ಇದರಿಂದ ಎಚ್ಚೆತ್ತ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ (Akram Pasha) ಕೂಡಲೇ ಬೆಳೆ ಹಾನಿ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನದಿಂದ ಬೆಂಗಳೂರು ನೀರಿನ ಬವಣೆಗೆ ಮುಕ್ತಿ: ಹೆಚ್‌.ಡಿ ದೇವೇಗೌಡ

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ, ಕಂದಾಯ ಇಲಾಖೆ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳಿಗೆ ಬೆಳೆ ಸಮೀಕ್ಷೆಗೆ ತಿಳಿಸಲಾಗಿದೆ. ಮಳೆ ನಿಂತ ತಕ್ಷಣ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿ ರಾಜ್ಯ ಸರ್ಕಾರಕ್ಕೆ ಬೆಳಹಾನಿ ಮಾಹಿತಿ ಒದಗಿಸಲಾಗುವುದು, ನಂತರ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ, ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಲಾಗುವುದು ಎಂದು  ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿಪಿವೈ ಗೆದ್ರೆ ಡಿಕೆಶಿ ಸಿಎಂ ಆಗ್ತಾರೆ ಅಂದ್ರು ಈಗೇನು ಮಾಡ್ತಾರೆ: ಛಲವಾದಿ ಪ್ರಶ್ನೆ

  • ಬಿಸಿಲನಾಡಿಗೆ ತಟ್ಟಿದ ಫೆಂಗಲ್ ಚಂಡಮಾರುತದ ಎಫೆಕ್ಟ್; ನೆಲಕ್ಕಚ್ಚಿದ ಸಾವಿರಾರು ಎಕರೆ ಭತ್ತ

    ಬಿಸಿಲನಾಡಿಗೆ ತಟ್ಟಿದ ಫೆಂಗಲ್ ಚಂಡಮಾರುತದ ಎಫೆಕ್ಟ್; ನೆಲಕ್ಕಚ್ಚಿದ ಸಾವಿರಾರು ಎಕರೆ ಭತ್ತ

    ರಾಯಚೂರು: ಫೆಂಗಲ್ ಚಂಡಮಾರುತದ (Fengal Cyclone) ಪರಿಣಾಮ ಬಿಸಿಲನಾಡು ರಾಯಚೂರು (Raichuru) ಜಿಲ್ಲೆಗೂ ತಟ್ಟಿದೆ. ಜಿಲ್ಲೆಯಲ್ಲಿ ಜೋರಾಗಿ ಮಳೆಯಾಗದಿದ್ದರೂ ಕೂಡ ಜಿಟಿಜಿಟಿ ಮಳೆ, ಶೀತಗಾಳಿ ರೈತರನ್ನು ಕಂಗಾಲಾಗಿಸಿದೆ. ಕಣ್ಣುಮುಂದಿದ್ದ ಭತ್ತದ ಉತ್ತಮ ಫಸಲು ಕಟಾವಿಗೆ ಮುನ್ನವೇ ಸಂಪೂರ್ಣ ನೆಲಕ್ಕಚ್ಚಿದೆ.

    ಜಿಲ್ಲೆಯ ರಾಯಚೂರು, ಸಿರವಾರ, ಮಾನ್ವಿ, ದೇವದುರ್ಗ, ಲಿಂಗಸುಗೂರು ತಾಲೂಕಿನಲ್ಲಿ ಹೆಚ್ಚು ಬೆಳೆಹಾನಿಯಾಗಿದ್ದು ರೈತರ ನಿರಾಸೆಗೆ ಕಾರಣವಾಗಿದೆ. ಜಿಟಿಜಿಟಿ ಮಳೆ, ಶೀತಗಾಳಿಗೆ ನೂರಾರು ಎಕರೆ ಭತ್ತದ ಬೆಳೆ ನೆಲಕ್ಕಚ್ಚಿದ್ದು, ರೈತರು ಕೋಟ್ಯಾಂತರ ರೂಪಾಯಿ ಹಾನಿಗೊಳಗಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಭತ್ತ ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸುವ ಸಿದ್ಧತೆಯಲ್ಲಿದ್ದ ರೈತರಿಗೆ ಫೆಂಗಲ್ ಚಂಡಮಾರುತ ಆಘಾತವನ್ನುಂಟು ಮಾಡಿದೆ.ಇದನ್ನೂ ಓದಿ: ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ರಾಯಚೂರಲ್ಲಿ ಪ್ರತಿಭಟನೆ

    ನೆಲಕ್ಕಚ್ಚಿದ ಭತ್ತವನ್ನು ಕಟಾವು ಮಾಡುವುದು ರೈತರಿಗೆ ಸಾಹಸದ ಕೆಲಸವಾಗಿದ್ದು, ಕಟಾವು ಮಾಡುವ ಯಂತ್ರಗಳು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ನೆಲಕ್ಕಚ್ಚಿದ ಭತ್ತವನ್ನ ಕಟಾವು ಮಾಡಲು ಯಂತ್ರಗಳ ಮಾಲೀಕರು ದುಪ್ಪಟ್ಟು ಹಣ ಕೇಳುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಈಗ ಬೆಳೆಗೆ ಖರ್ಚು ಮಾಡಿದ ಹಣವೇ ಮರಳಿ ಬಾರದ ಪರಸ್ಥಿತಿ ಉಂಟಾಗಿದ್ದು, ಕಟಾವಿಗೆ ಮತ್ತೇ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

    ಎಕರೆಗೆ 30 ರಿಂದ 40 ಸಾವಿರ ರೂ. ಖರ್ಚು ಮಾಡಿ ಬೆಳೆದಿದ್ದ ಭತ್ತದ ಬೆಳೆ ಈ ಬಾರಿ ಉತ್ತಮ ಫಸಲಿನೊಂದಿಗೆ ರೈತರಲ್ಲಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಕಳೆದ ಎರಡು, ಮೂರು ದಿನಗಳಿಂದ ಬದಲಾದ ವಾತಾವರಣ ಬೆಳೆಯನ್ನ ನೆಲಕ್ಕಚ್ಚುವಂತೆ ಮಾಡಿದೆ. ನೆಲಕ್ಕೆ ಬಿದ್ದ ಭತ್ತವನ್ನ ಪುನಃ ಕಟ್ಟಿನಿಲ್ಲಿಸುವ ಸಾಹಸಕ್ಕೆ ಮುಂದಾಗಿರುವ ರೈತರು, ಇರುವ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

    ಭತ್ತ ನೆಲಕ್ಕಚ್ಚಿದ್ದರಿಂದ ಕಟಾವು ಮಾಡುವ ಯಂತ್ರಕ್ಕೆ ದಿನಕ್ಕೆ 8 ರಿಂದ 10 ಸಾವಿರ ರೂ. ಹೆಚ್ಚು ಹಣ ಕಟ್ಟಬೇಕಾಗಿದೆ. ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಇಲ್ಲದಿರುವುದರಿಂದ ಸರ್ಕಾರ ಕೂಡಲೇ ಸರ್ವೇ ಕಾರ್ಯ ಆರಂಭಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಹಾಸನ ಸಮಾವೇಶ ಪಕ್ಷದ ಸಮಾವೇಶ, ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ: ಸುಧಾಕರ್

  • ಫೆಂಗಲ್ ಎಫೆಕ್ಟ್ – ರಾಜ್ಯದಲ್ಲಿ ಈ ವಾರವೂ ಮುಂದುವರಿಯಲಿದೆ ಮಳೆ

    ಫೆಂಗಲ್ ಎಫೆಕ್ಟ್ – ರಾಜ್ಯದಲ್ಲಿ ಈ ವಾರವೂ ಮುಂದುವರಿಯಲಿದೆ ಮಳೆ

    – ಇಂದು ಕರಾವಳಿ ಕರ್ನಾಟಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಬೆಂಗಳೂರು: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ (Fenal Cyclone) ಪರಿಣಾಮ ಕರ್ನಾಟಕದಲ್ಲಿ (Karnataka) ಈ ವಾರವೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಇಂದು ಕರಾವಳಿ ಕರ್ನಾಟಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಮುಂದಿನ ಐದು ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಒಳನಾಡಿನ ಜಿಲ್ಲೆಗಳಿಗೂ ಸಾಧಾರಣ ಮಳೆಯಾಗುವ ಸಂಭವವಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆ ಹೊರತುಪಡಿಸಿ ಉಳಿದಂತೆ ಯಾವುದೇ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಿಲ್ಲ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್‌ – ರಾಜ್ಯಪಾಲರ ಅಂಗಳದಲ್ಲಿ ಬಿಎಸ್‌ವೈ ಭವಿಷ್ಯ

    ಇನ್ನು ಗುರುವಾರದಿಂದ ಫೆಂಗಲ್ ಚಂಡಮಾರುತದ ಎಫೆಕ್ಟ್ ತಗ್ಗಲಿದೆ. ಈ ಹಿನ್ನೆಲೆ ಯಾವುದೇ ಜಿಲ್ಲೆಗಳಿಗೆ ಮಳೆ ಅಲರ್ಟ್ ನೀಡಿಲ್ಲ. ಈ ವಾರ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಹಾಗೂ ಕೆಲ ಪ್ರದೇಶದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಅಲ್ಲದೇ ರಾಜ್ಯದೆಲ್ಲೆಡೆ ಚಳಿಯ ವಾತಾವರಣ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದನ್ನೂ ಓದಿ: ಯತ್ನಾಳ್ ತಂಡದಿಂದ ಜೆಪಿಸಿ ಅಧ್ಯಕ್ಷರಿಗೆ ವಕ್ಫ್ ವರದಿ ಸಲ್ಲಿಕೆ

    ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ಹಗರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ವಾರವಿಡೀ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಚಳಿಯ ಪ್ರಮಾಣವೂ ತುಸು ಇಳಿಕೆಯಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: MUDA Scam Exclusive | ಸಿದ್ದರಾಮಯ್ಯಗೆ ಇಡಿ ಶಾಕ್ – ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ

  • ಫೆಂಗಲ್ ಚಂಡಮಾರುತಕ್ಕೆ ರೈತರು ಕಂಗಾಲು – ಜಡಿಮಳೆಗೆ ತೊಗರಿ, ಭತ್ತ ಹಾನಿ

    ಫೆಂಗಲ್ ಚಂಡಮಾರುತಕ್ಕೆ ರೈತರು ಕಂಗಾಲು – ಜಡಿಮಳೆಗೆ ತೊಗರಿ, ಭತ್ತ ಹಾನಿ

    ಕೊಪ್ಪಳ: ಫೆಂಗಲ್ ಚಂಡಮಾರುತದಿಂದ (Fengal Cyclone) ಜಿಲ್ಲೆಯಲ್ಲಿ ಕಳೆದೆರಡು ದಿನದಿಂದ ಮೋಡ ಕವಿದ ವಾತಾವರಣ ಮತ್ತು ಜಡಿಮಳೆ ಶುರುವಾಗಿದ್ದು, ರೈತರು ಕಂಗಾಲಾಗಿದ್ದಾರೆ.

    ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬಹುತೇಕ ರೈತರು ಭತ್ತ ಕಟಾವು ಮಾಡಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ, ಮೆಕ್ಕೆಜೋಳ ಸೇರಿ ನಾನಾ ಬೆಳೆಗಳು ಹಾನಿಯಾಗಿವೆ. ಮತ್ತೊಂದೆಡೆ ನಗರ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ.ಇದನ್ನೂ ಓದಿ: ದರ್ಶನ್‌ ಸೂಚನೆ ಮೇರೆಗೆ ಕಿಡ್ನಾಪ್‌ – ಕೊಲೆಯಲ್ಲಿ ಪವಿತ್ರಾ ಪಾತ್ರವಿಲ್ಲ: ವಕೀಲರ ವಾದ

    ಕೊಪ್ಪಳ ಜಿಲ್ಲೆಯಲ್ಲಿ ಭತ್ತ ಮತ್ತು ತೊಗರಿ ಕಟಾವು ಮಾಡಿದ ರೈತರು ಫಸಲು ಒಣಗಿಸಲು ಪರದಾಡುತ್ತಿದ್ದಾರೆ. ಕಟಾವು ಮಾಡದ ರೈತರು ಇನ್ನೊಂದು ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕಟಾವು ಮಾಡದ ಭತ್ತ ಗಾಳಿ ಸಹಿತ ಜಡಿಮಳೆಗೆ ನೆಲಕ್ಕೆ ಉರುಳಿದ್ದು, ಕಟಾವು ಮಾಡುವ ಯಂತ್ರಕ್ಕೆ ಹೆಚ್ಚುವರಿ ಹಣ ನೀಡಬೇಕಿದೆ. ಇನ್ನು ತೊಗರಿ ಬೆಳೆ ಮಳೆಯಿಂದ ನಿಂತಲ್ಲೇ ಮೊಳಕೆಯೊಡೆದು, ಫಸಲು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ.

    ಭತ್ತ ನೀರು ಪಾಲು:
    ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ರಸ್ತೆಯಲ್ಲಿ ಭತ್ತ ಒಣಗಿಸುತ್ತಿದ್ದಾರೆ. ಮಳೆಯಿಂದ ರೈತರು ದೊಡ್ಡ ತಾಡಪಲ್ ಹಾಕಿ, ಭತ್ತ ಸುರಕ್ಷಿತವಾಗಿಡಲು ಹರಸಾಹಸ ಪಡುತ್ತಿದ್ದಾರೆ. ಆದಾಗ್ಯೂ ಭತ್ತ ಮಳೆಯಿಂದಾಗಿ ನೀರಿಗೆ ಕೊಚ್ಚಿ ಹೋಗಿದೆ. ಕೆಲಕಡೆ ಭತ್ತ ನೀರಿನಲ್ಲಿ ತೊಯ್ದಿದ್ದರಿಂದ ಮೊಳಕೆ ಒಡೆಯುವ ಸ್ಥಿತಿಯಲ್ಲಿದೆ.

    ಗಂಗಾವತಿ, ಕಾರಟಗಿ ಮತ್ತು ಕೊಪ್ಪಳ ತಾಲೂಕಿನ ಹಿಟ್ನಾಳ್ ಸೇರಿ ನಾನಾ ಕಡೆ ಇಂತಹ ಸ್ಥಿತಿ ಸಹಜವಾಗಿದೆ. ಜಿಲ್ಲೆಯಲ್ಲಿ ಸುಮಾರು 69 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದು, ಬಹುತೇಕ ರೈತರಿಗೆ ಸಮಸ್ಯೆಯಾಗಿದೆ. ಈ ಬಾರಿ ನೀರಿನ ಸಮಸ್ಯೆ ಇಲ್ಲದ್ದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಸೈಕ್ಲೋನ್ ಮತ್ತೊಂದು ಚಿಂತೆಗೆ ದೂಡಿದೆ. ರಸ್ತೆ ಮೇಲಿನ ನೀರು ಭತ್ತದ ರಾಶಿಗೆ ಹೋಗಿದ್ದರಿಂದ ಸಾಕಷ್ಟ ಭತ್ತ ಕೊಚ್ಚಿಕೊಂಡು ಹೋಗಿದೆ.

    ಖುಷ್ಕಿ ಪ್ರದೇಶದಲ್ಲೂ ಹಾನಿ:
    ಮೋಡ ಕವಿದ ವಾತಾವರಣ ಮತ್ತು ಜಡಿಮಳೆಯಿಂದ ಮಳೆಯಾಶ್ರಿತ ಪ್ರದೇಶದಲ್ಲೂ ಭಾರಿ ಪ್ರಮಾಣದಲ್ಲಿ ತೊಗರಿ ಬೆಳೆ ನಾಶವಾಗಿದೆ. ಒಟ್ಟಿನಲ್ಲಿ ಫೆಂಗಲ್ ಚಂಡಮಾರುತ ಕೊಪ್ಪಳ ಜಿಲ್ಲೆಯ ರೈತರಿಗೆ ದೊಡ್ಡ ಮಟ್ಟದ ಶಾಕ್ ನೀಡುತ್ತಿದೆ. ಇನ್ನೂ ಮಳೆ ಇದೇ ರೀತಿ ಮುಂದುವರಿದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕಿದೆ.ಇದನ್ನೂ ಓದಿ: ಯತ್ನಾಳ್ ಉಚ್ಛಾಟನೆಗೆ ಒಕ್ಕೊರಲ ಒತ್ತಾಯ – ಬಿಜೆಪಿ ಸರಣಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

  • PUBLiC TV Impact; ರಾಮನಗರದಲ್ಲಿ ನಿರಂತರ ಮಳೆಗೆ ಕುಸಿದಿದ್ದ ತಾತ್ಕಾಲಿಕ ಸೇತುವೆ ದುರಸ್ತಿ

    PUBLiC TV Impact; ರಾಮನಗರದಲ್ಲಿ ನಿರಂತರ ಮಳೆಗೆ ಕುಸಿದಿದ್ದ ತಾತ್ಕಾಲಿಕ ಸೇತುವೆ ದುರಸ್ತಿ

    ರಾಮನಗರ: ಫೆಂಗಲ್ ಚಂಡಮಾರುತದ (Fengal Cyclone) ಎಫೆಕ್ಟ್ ರಾಮನಗರ (Ramanagara) ಜಿಲ್ಲೆಗೂ ತಟ್ಟಿದ್ದು, ಕಳೆದ ಎರಡು ದಿನಗಳಿಂದ ಸುರಿಯುತ್ತಿರೋ ನಿರಂತರ ಮಳೆಗೆ ಮಂಚನಬೆಲೆ ಜಲಾಶಯದ ಸಮೀಪದ ತಾತ್ಕಾಲಿಕ ಸೇತುವೆ (Bridge) ಬಿರುಕು ಬಿಟ್ಟಿದೆ.

    ಎರಡು ವರ್ಷಗಳ ಹಿಂದೆ ಭಾರೀ ಮಳೆಗೆ ಸೇತುವೆ ಕೊಚ್ಚಿ ಹೋಗಿದ್ದ ಹಿನ್ನೆಲೆ ಪರ್ಯಾಯವಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ನಿರಂತರ ಮಳೆ ಹಿನ್ನೆಲೆ ತಾತ್ಕಾಲಿಕ ಸೇತುವೆ ಕೂಡಾ ಬಿರುಕು ಬಿಟ್ಟಿದೆ. ಅಪಾಯಕಾರಿ ಸೇತುವೆ ಮೇಲೆ ವಾಹನಗಳು ಸಂಚಾರ ಮಾಡುತ್ತಿವೆ. ಇನ್ನೂ ಈ ಬಗ್ಗೆ ‘ಪಬ್ಲಿಕ್ ಟಿವಿ’ಯಲ್ಲಿ ವರದಿ ಬಂದ ಹಿನ್ನೆಲೆ ಎಚ್ಚೆತ್ತ ನೀರಾವರಿ ಇಲಾಖೆ ಅಧಿಕಾರಿಗಳು ಬಿರುಕು ಬಿಟ್ಟ ತಾತ್ಕಾಲಿಕ ಸೇತುವೆಯನ್ನ ದುರಸ್ತಿ ಮಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡು| ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಸಚಿವರ ಮೇಲೆ ಕೆಸರೆರಚಿ, ಕಲ್ಲು ತೂರಿ ಜನಾಕ್ರೋಶ

    ಕುಸಿದಿದ್ದ ಭಾಗಗಳಿಗೆ ಜೆಸಿಬಿ ಯಂತ್ರದ ಮೂಲಕ ಮಣ್ಣು ಹಾಕಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನೂ ಈ ಭಾಗದಲ್ಲಿ ಶಾಶ್ವತ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಯಚೂರು | ರಸ್ತೆ ದಾಟುವಾಗ ಸರ್ಕಾರಿ ಬಸ್ ಹರಿದು ಪಾದಚಾರಿ ಸಾವು

  • ಕೋಲಾರದಲ್ಲಿ ಮಳೆಯಬ್ಬರ – ನೆಲಕಚ್ಚಿದ ಬೆಳೆ, ರೈತರು ಕಂಗಾಲು

    ಕೋಲಾರದಲ್ಲಿ ಮಳೆಯಬ್ಬರ – ನೆಲಕಚ್ಚಿದ ಬೆಳೆ, ರೈತರು ಕಂಗಾಲು

    – ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಕೋಲಾರ: ಫೆಂಗಲ್ ಚಂಡಮಾರುತದ (Fengal Cyclone) ಪರಿಣಾಮ ಬಯಲುಸೀಮೆ ಕೋಲಾರ (Kolar) ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಳೆಯ ಹಿನ್ನೆಲೆ ರೈತರು ಬೆಳೆದ ವಿವಿಧ ಬೆಳೆಗಳು (Crop) ನೆಲಕಚ್ಚಿದೆ.

    ನಿರಂತರ ಮಳೆಯ ಪರಿಣಾಮ ಜಿಲ್ಲೆಯಲ್ಲಿ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿದೆ. ರಾಗಿ, ಅವರೆ, ಟೊಮ್ಯಾಟೊ, ಹಾಗೂ ಹೂವು ಬೆಳೆಗಳಿಗೆ ಹಾನಿಯಾಗಿದೆ. ಮಳೆಯಿಂದ ರೋಗಕ್ಕೆ ತುತ್ತಾಗಿರುವ ಹೂವು ಕೊಳೆಯುವ ಸ್ಥಿತಿಯಲ್ಲಿದ್ದರೆ, ಟೊಮ್ಯಾಟೊ ಬೆಳೆಗೆ ವಿವಿಧ ರೋಗಗಳು ಕಾಣಿಸಿಕೊಂಡಿದೆ. ಅವರೆ ಹೂವು ಉದುರಿ ಹೋಗುತ್ತಿದ್ದು, ಈ ಬಾರಿ ಅವರೆಕಾಯಿ ದುಬಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ರಾಗಿ ತೆನೆ ಹೊಲದಲ್ಲೇ ನೆನೆದು ಮೊಳಕೆಯೊಡೆಯುತ್ತಿದೆ. ಸದ್ಯ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದನ್ನೂ ಓದಿ: ಹೊಸೂರು ಹೈವೇಯಲ್ಲಿ ತುಂಬಿ ಹರಿದ ಮಳೆ ನೀರು – ವಾಹನ ಸವಾರರು ಪರದಾಟ

    ಫೆಂಗಲ್ ಚಂಡಮಾರುತದ ಪರಿಣಾಮ ಕೋಲಾರ ಜಿಲ್ಲೆಯಲ್ಲಿ ರಾತ್ರಿಯಿಡೀ ಜಡಿ ಮಳೆಯಾಗಿದೆ. ಇಂದು ಸಹ ಬೆಳ್ಳಗ್ಗೆಯಿಂದ ಜಿಟಿ ಜಿಟಿ ಮಳೆಯಾಗುತ್ತಿದೆ. ಮಳೆಯಿಂದ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಶೀತಗಾಳಿಗೆ ಜನರು ಆತಂಕಪಡುವಂತಾಗಿದೆ. ಶೀತಗಾಳಿ ಮತ್ತು ಮಳೆಗೆ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ ದಂಧೆ ಪ್ರಕರಣ – ಕಿಂಗ್‌ಪಿನ್ ಸೇರಿ 10 ಮಂದಿ ಅರೆಸ್ಟ್

    ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಕೂಡಾ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಎರಡನೇ ದಿನವು ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ಅಕಾಲಿಕ ಮಳೆಗೆ ವಾಹನ ಸವಾರರು ಪರದಾಡುವಂತಾಗಿದೆ. ಇದನ್ನೂ ಓದಿ: ಡಿ.22 ರಂದು ಹಸೆಮಣೆ ಏರಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

  • ಚಿತ್ರದುರ್ಗದಲ್ಲಿ ವ್ಯಾಪಕ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಚಿತ್ರದುರ್ಗದಲ್ಲಿ ವ್ಯಾಪಕ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಚಿತ್ರದುರ್ಗ: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ (Fengal Cyclone) ಪರಿಣಾಮ ಚಿತ್ರದುರ್ಗದಲ್ಲಿ (Chitradurga) ವ್ಯಾಪಕ ಮಳೆಯಾಗುತ್ತಿದೆ. ಸೋಮವಾರ ರಾತ್ರಿಯಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಎಲ್ಲಾ ಅಂಗನವಾಡಿ, ಶಾಲೆಗಳು ಹಾಗೂ ಪಿಯುಸಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಿ ಚಿತ್ರದುರ್ಗ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ – ಇಂದು ‘ಲೋಕಾ’ ವಿಚಾರಣೆಗೆ ಹಾಜರಾಗ್ತಾರಾ ಜಮೀರ್?

    ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ಮೇರೆಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತಾ ಹಿತದೃಷ್ಟಿಯಿಂದ ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಿಸಿದೆ. ಇದನ್ನೂ ಓದಿ: ನಟ ದರ್ಶನ್‌ಗೆ ಜಾಮೀನು ಜೊತೆ ಆಪರೇಷನ್ ಟೆನ್ಷನ್

  • ರಾಜ್ಯದ ವಿವಿಧೆಡೆ ಮುಂದಿನ 3 ಗಂಟೆಯ ಒಳಗೆ ಭಾರೀ ಮಳೆಯ ಎಚ್ಚರಿಕೆ

    ರಾಜ್ಯದ ವಿವಿಧೆಡೆ ಮುಂದಿನ 3 ಗಂಟೆಯ ಒಳಗೆ ಭಾರೀ ಮಳೆಯ ಎಚ್ಚರಿಕೆ

    – 9 ಜಿಲ್ಲೆಯ ಶಾಲೆಗಳಿಗೆ ಇಂದು ರಜೆ

    ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ ಮೂರು ಗಂಟೆಗಳ ಕಾಲ ಭಾರೀ ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ದಾವಣಗೆರೆ, ಕೋಲಾರ ಹಾಗೂ ರಾಮನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ತಿರುವಣ್ಣಾಮಲೈನಲ್ಲಿ ಭೂಕುಸಿತಕ್ಕೆ 7 ಮಂದಿ ಬಲಿ – ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ

    ತಮಿಳುನಾಡಿನಲ್ಲಿ ಫೆಂಗಲ್ ಚಂಡುಮಾರುತದ ಪರಿಣಾಮ ಸೋಮವಾರ ತಡರಾತ್ರಿ 1:30ವರೆಗೂ ಸಿಲಿಕಾನ್ ಸಿಟಿ ಬೆಂಗಳೂರಿನ ಅನೇಕ ಕಡೆ ಮಳೆಯಾಗಿತ್ತು. ಜೋರು ಮಳೆಯಾದ ಪರಿಣಾಮ ರಸ್ತೆಗಳು ಕೆರೆಯಂತಾಗಿದೆ. ಇಂದು ಸಹ ರಾಜ್ಯದ ಅನೇಕ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಮುಂದುವರೆಯಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಲಕ್ಷಣಗಳು ಹೆಚ್ಚಾಗಿದೆ. ಇನ್ನೂ ಮಳೆಯ ಹಿನ್ನೆಲೆ ರಾಜ್ಯದ 9 ಜಿಲ್ಲೆಯ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಒಟ್ಟು 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: We Have An Agreement – ಸಿಎಂ ಹುದ್ದೆ ಒಪ್ಪಂದದ ಬಗ್ಗೆ ಡಿಕೆಶಿ ಮೌನ ಮುರಿದ್ರಾ?

  • Fengal Cyclone| ತಮಿಳುನಾಡು-ಪುದುಚ್ಚೆರಿಯಲ್ಲಿ ಜಲ ಪ್ರಳಯ – ಕೊಚ್ಚಿ ಹೋಯ್ತು ವಾಹನಗಳು

    Fengal Cyclone| ತಮಿಳುನಾಡು-ಪುದುಚ್ಚೆರಿಯಲ್ಲಿ ಜಲ ಪ್ರಳಯ – ಕೊಚ್ಚಿ ಹೋಯ್ತು ವಾಹನಗಳು

    ಚೆನ್ನೈ: ಫೆಂಗಲ್ ತೂಫಾನ್ (Fengal Cyclone) ತಮಿಳುನಾಡು-ಪುದುಚ್ಚೆರಿಯಲ್ಲಿ (Tamilnadu Puducherry) ಜಲ ಪ್ರಳಯವನ್ನೇ ಸೃಷ್ಟಿಸಿದೆ. ಶನಿವಾರ ಅರ್ಧರಾತ್ರಿಯೇ ಪುದುಚ್ಚೇರಿ ಸಮೀಪ ತೀರ ದಾಟಿದ ಫೆಂಗಲ್, ಹವಾಮಾನ ಇಲಾಖೆಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿತು.

    ಭಾನುವಾರ ಮಧ್ಯಾಹ್ನದವರೆಗೂ ಅಂದರೆ ಬರೋಬ್ಬರಿ 17 ಗಂಟೆ ಸಮಯ ಅಲ್ಲೇ ಕೇಂದ್ರೀಕೃತವಾದ ಫೆಂಗಲ್‌ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಗಂಟೆಗೆ 90 ಕಿಮೀ ವೇಗದಲ್ಲಿ ಬೀಸಿದ ರಣಗಾಳಿಗೆ ಮಳೆ ಜೊತೆಯಾದ ಪರಿಣಾಮ ಪುದುಚ್ಚೆರಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕರ್ನಾಟಕ, ಕೇರಳದತ್ತ ಫೆಂಗಾಲ್ ಸೈಕ್ಲೋನ್- ಕೊಡಗಿಗೆ ರೆಡ್‌, ಯಾವ ಜಿಲ್ಲೆಗಳಿಗೆ ಯಾವ ಅಲರ್ಟ್‌?

     

    510 ಮಿಲಿಮೀಟರ್ ಮಳೆಗೆ ರಸ್ತೆಗಳು, ಕಾಲನಿಗಳು ಜಲಾವೃತವಾಗಿವೆ. ವಾಹನಗಳು ಮುಳುಗಡೆ ಆಗಿವೆ. ರಕ್ಷಣಾ ಪಡೆಗಳು ಸಂತ್ರಸ್ತರ ರಕ್ಷಣೆ ಮಾಡಿವೆ. ನೆರೆಯ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿಯೇ ಕಂಡುಕೇಳರಿಯದ ರೀತಿಯಲ್ಲಿ ದಾಖಲೆಯ ಮಳೆಯಾಗಿದೆ. ಇದನ್ನೂ ಓದಿ: ರಾಜ್ಯದ 4 ಜಿಲ್ಲೆಗಳ ಶಾಲೆ, ಕಾಲೇಜುಗಳಿಗೆ ಮಂಗಳವಾರ ರಜೆ

    ಚೆನ್ನೈ, ತಿರುವಣ್ಣಮಲೈ, ಕೃಷ್ಣಗಿರಿ, ಕಲ್ಲಕುರಿಚ್ಚಿ, ವಿಲ್ಲುಪ್ಪುರಂ, ಕಡಲೂರು, ಕಾಂಚಿಪುರಂ, ವೆಲ್ಲೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತಿರುವಣ್ಣಾಮಲೈನಲ್ಲಿ ಗುಡ್ಡ ಕುಸಿದು ಏಳು ಮಂದಿ ಕಣ್ಮರೆಯಾಗಿದ್ದಾರೆ. ಅವರ ಪತ್ತೆಗೆ ಕಳೆದ ರಾತ್ರಿಯಿಂದ ನಿರಂತರ ಕಾರ್ಯಚರಣೆ ನಡೆದಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ.

    ಸದ್ಯ ತೀವ್ರ ವಾಯುಭಾರ ಕುಸಿತವಾಗಿ ಬದಲಾಗಿರುವ ಫೆಂಗಲ್ ತುಂಬಾ ನಿಧಾನವಾಗಿ ಪಶ್ಚಿಮ ದಿಕ್ಕಿನತ್ತ ಚಲಿಸುತ್ತಿದೆ. ಇಂದು ಮಧ್ಯರಾತ್ರಿಯವರೆಗೂ ಪುದುಚ್ಚೆರಿ, ಉತ್ತರ ತಮಿಳುನಾಡಿನಲ್ಲೇ ಕೇಂದ್ರೀಕೃತವಾಗಿ ಇರಲಿದೆ. ಮಳೆ ಸಂಬಂಧಿ ಅವಘಡಗಳಿಂದ ತಮಿಳುನಾಡು-ಪುದುಚ್ಚೆರಿಯಲ್ಲಿ ಈವರೆಗೂ ಕನಿಷ್ಠ 11 ಮಂದಿ ಬಲಿ ಆಗಿದ್ದಾರೆ.

    ಎಲ್ಲೆಲ್ಲಿ ಏನಾಗಿದೆ?
    ಪುದುಚ್ಚೆರಿ ಜಲಮಯವಾಗಿದ್ದು ಮನೆಗಳ ಬಳಿ ಪ್ರವಾಹದಂತೆ ನೀರು ಹರಿಯುತ್ತಿದೆ. ತಿರುವಣ್ಣಾಮಲೈಯಲ್ಲಿ ಮನೆಗಳ ಮೇಲೆ ಬಂಡೆ ಉರುಳಿದರೆ ದೇವಸ್ಥಾನದ ಗೋಡೆಗಳು ಕುಸಿದಿವೆ. ಎರ್ಕಾಡ್ ಮುಖ್ಯರಸ್ತೆಯಲ್ಲಿ ಭೂಕುಸಿತವಾಗಿದೆ.

    ಕೃಷ್ಣಗಿರಿಯಲ್ಲಿ ಕೆರೆ ಕೋಡಿ ಒಡೆದು ಮನೆಗಳು ಜಲಾವೃತವಾಗಿದ್ದು ನಿಂತಿದ್ದ ವಾಹನಗಳು ನೀರುಪಾಲಾಗಿವೆ. ಪೊಲೀಸ್‌ ಠಾಣೆಯ ಮುಳುಗಿದೆ.

    ವಿಳ್ಳುಪುರಂ-ವೇಲೂರು ಹೆದ್ದಾರಿ ಮುಳುಗಡೆಯಾಗಿದೆ. ಬೋಟ್ ಮೂಲಕ ಸಂತ್ರಸ್ತರ ರಕ್ಷಣೆ ಮಾಡಲಾಗುತ್ತಿದೆ.