Tag: Female Police Constable

  • ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ

    ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ

    ಮುಂಬೈ: ಕೇಂದ್ರ ರೈಲ್ವೆ (Central Railway) ವ್ಯಾಪ್ತಿಯ ಥಾಣೆ (Thane) ಮತ್ತು ಪನ್ವೇಲ್ (Panvel) ನಡುವಿನ ಲೋಕಲ್ ಟ್ರೈನ್‍ನಲ್ಲಿ ಕೆಲ ಮಹಿಳೆಯರ ನಡುವೆ ಮಾರಾಮಾರಿ ನಡೆದಿದೆ.

    ಮುಂಬೈ ಲೋಕಲ್ ಟ್ರೈನ್‍ಗಳಲ್ಲಿ (Local train) ಸಂಜೆ ಹೊತ್ತು ಒಂದು ಕೆಡೆಯಿಂದ ಮತ್ತೊಂದು ಕಡೆಗೆ ಹೋಗಲು ರೈಲಿನಲ್ಲಿ ವಿಪರೀತ ನೂಕುನುಗ್ಗಲು ಇರುತ್ತದೆ. ಈ ವೇಳೆ ಸೀಟ್ ಹಿಡಿದುಕೊಳ್ಳಲು ಜನ ಸಾಕಷ್ಟು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಈ ವಿಚಾರವಾಗಿ ಅನೇಕ ಜನ ಜಗಳ ಆಡಿರುವುದು ಕೂಡ ಇದೆ. ಸದ್ಯ ಗುರುವಾರ ಸಂಜೆ 7:45ಕ್ಕೆ ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಇದನ್ನೂ ಓದಿ: ಎಸ್‌.ಎಂ ಕೃಷ್ಣ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ ನಿಧನ

    ಹೌದು, ಸೆಂಟ್ರಲ್ ರೈಲ್ವೇ ವ್ಯಾಪ್ತಿಯ ಥಾಣೆ ಮತ್ತು ಪನ್ವೇಲ್ ನಡುವಿನ ಲೋಕಲ್ ರೈಲಿನಲ್ಲಿ ಕೆಲ ಮಹಿಳೆಯರ ನಡುವೆ ತೀವ್ರ ಜಗಳ ನಡೆದಿದೆ. ಮಹಿಳಾ ಕಂಪಾರ್ಟ್‍ಮೆಂಟ್‍ನಲ್ಲಿ ಸೀಟ್ ವಿಚಾರವಾಗಿ ಮೂವರು ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಮಹಿಳೆಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದಾರೆ. ವಿಷಯ ದೊಡ್ಡದಾಗುತ್ತಿದ್ದಂತೆ ಉಳಿದ ಇತರ ಕೆಲವು ಮಹಿಳೆಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗಂಡನನ್ನು ಕೊಲೆ ಮಾಡುವುದಾಗಿ ಹೆದರಿಸಿ ವೃದ್ಧೆ ಮೇಲೆ 1 ವರ್ಷ ನಿರಂತರ ಅತ್ಯಾಚಾರ

    ನಂತರ ನೆರೂಲ್‍ನಿಂದ ಜಗಳ ಬಿಡಿಸಲು ಬಂದ ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲೆ ಆರೋಪಿ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಮಹಿಳಾ ಪೊಲೀಸ್ ಪೇದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಸಂಬಂಧ ವಾಶಿಯ ಗ್ರಾ.ಪಂ ಪೊಲೀಸರು ಇಬ್ಬರು ಮಹಿಳೆಯರ ವಿರುದ್ಧ ಐಪಿಸಿ 353, 332, 504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಣೆಯಾಗಿದ್ದ ಮಹಿಳಾ ಪೊಲೀಸ್ ಪೇದೆ ಶವವಾಗಿ ಪತ್ತೆ

    ಕಾಣೆಯಾಗಿದ್ದ ಮಹಿಳಾ ಪೊಲೀಸ್ ಪೇದೆ ಶವವಾಗಿ ಪತ್ತೆ

    ಹಾಸನ: ನಾಪತ್ತೆಯಾಗಿದ್ದ ಮಹಿಳಾ ಪೊಲೀಸ್ ಪೇದೆ ಶವವಾಗಿ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

    ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸುಧಾ (39) ಮೃತ ಮಹಿಳಾ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ. ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206 ರ ಮೈಲನಹಳ್ಳಿ ಗ್ರಾಮದ ಬಳಿಯ ಪೊದೆಯೊಂದರಲ್ಲಿ ಸುಧಾ ಮೃತದೇಹ ಸಿಕ್ಕಿದೆ. ಇದನ್ನೂ ಓದಿ: ಮಕ್ಕಳಲ್ಲಿ ವಿಪರೀತ ಜ್ವರ – ಸೆ.25 ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ

    POLICE JEEP

    ಹುಳಿಯಾರು ಪೊಲೀಸ್ ಠಾಣೆಯಲ್ಲಿ ಸುಧಾ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇದೀಗ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಧಾರನ್ನು ಕಾರಿನಲ್ಲಿ ಕರೆದುಕೊಂಡು ಬಂದು ಅವರ ಚಿಕ್ಕಪ್ಪನ ಮಗ ಮಂಜುನಾಥ್ ಹತ್ಯೆಗೈದಿದ್ದಾನೆ ಎಂಬ ವಿಚಾರ ತಿಳಿದುಬಂದಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಲ್ಲಿ ವಿವಾದಾತ್ಮಕ ಪೋಸ್ಟ್ – ಆರೋಪಿಗಳ ವಿರುದ್ಧ ದೂರು

    ಸುಧಾ ಅವರನ್ನು ಕೊಲೆ ಮಾಡಿ, ಶುಕ್ರವಾರ ಸಂಜೆ ಶಿವಮೊಗ್ಗದ ಲಾಡ್ಜ್‌ವೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ಮಂಜುನಾಥ್ ನೇಣಿಗೆ ಶರಣಾಗಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಹಾಗೂ ತುಮಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಅರಸೀಕೆರೆ ತಾಲೂಕಿನ ಆಸ್ಪತ್ರೆಗೆ ರವಾನಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]