ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut), ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪೋಸ್ಟ್ ಹಾಕಿ ಬೆಂಕಿ ಹಾಕುತ್ತಲೇ ಇರುತ್ತಾರೆ. ಒಂದೊಂದು ಸಲ ಆ ಬೆಂಕಿ ಯಾರಿಗೋ ತಟ್ಟುತ್ತದೆ. ಮತ್ತೊಂದು ಸಾರಿ ತಟ್ಟದೇ ಆರುತ್ತದೆ. ಈ ಬಾರಿಯೂ ಟ್ವಿಟರ್ (Twitter) ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಅವರು, ಅದನ್ನು ಯಾರಿಗೆ ಹೇಳಿದ್ದಾರೆ ಎನ್ನುವುದನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದಾರೆ.
ಕೆಲವು ವಿಚಾರಗಳಲ್ಲಿ ಕಂಗನಾ ರಣಾವತ್ ನೇರ, ದಿಟ್ಟ. ಯಾರಿಗೆ ತಮ್ಮ ಮಾತು ತಲುಪಬೇಕಿತ್ತೋ ಅದನ್ನು ನೇರವಾಗಿಯೇ ತಲುಪಿಸುತ್ತಾರೆ. ಅದರಲ್ಲೂ ಕರಣ್ ಜೋಹಾರ್ ಬಗ್ಗೆ ನೇರವಾಗಿಯೇ ರಣಕಣಕ್ಕೆ ಆಹ್ವಾನಿಸುತ್ತಾರೆ. ಆದರೆ, ಕೆಲವರ ವಿಚಾರದಲ್ಲಿ ಪರೋಕ್ಷವಾಗಿ ವಿಷಯ ಪ್ರಸ್ತಾಪ ಮಾಡುತ್ತಾರೆ. ಹಾಗಾಗಿ ಇವತ್ತು ಬರೆದ ಬೆಡ್, ಹಾಸಿಗೆ, ಲೈಂಗಿಕ ವಿಚಾರ ಯಾರ ಮೇಲಿನ ಪ್ರಸ್ತಾಪ ಎನ್ನುವುದು ಗೊತ್ತಾಗಿಲ್ಲ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ
ಹೆಣ್ಣು (Female) ಗಂಡು (Male) ತಾರತಮ್ಯದ ಬಗ್ಗೆಯೂ ಮಾತನಾಡಿದ ಅವರು, ನಮ್ಮ ವೃತ್ತಿಯ ಮೇಲೆಯೇ ನಮ್ಮ ಐಡೆಂಟಿಟಿ ನಿರ್ಧಾರವಾಗುತ್ತದೆ. ಯಾರೂ ಈಗ ನಟಿ, ನಿರ್ದೇಶಕಿ ಎಂದು ಕರೆಯುವುದಿಲ್ಲ. ಕಲಾವಿದರು ಮತ್ತು ನಿರ್ದೇಶಕರು ಎನ್ನುತ್ತಾರೆ. ಜಗತ್ತು ನೀವು ಏನು ಮಾಡುತ್ತೀರಿ ಎನ್ನುವುದರ ಮೇಲೆ ನಿಮ್ಮನ್ನು ನಿರ್ಧರಿಸುತ್ತದೆ ಹೊರತು, ನೀವು ಬೆಡ್ ಮೇಲೆ ಏನು ಮಾಡಿದ್ದೀರಿ ಎನ್ನುವುದರ ಮೇಲಲ್ಲ’ ಎಂದು ಬರೆದುಕೊಂಡಿದ್ದಾರೆ.
ಲೈಂಗಿಕ ಆದ್ಯತೆಗಳು ಅವು ಕೇವಲ ಹಾಸಿಗೆಗೆ ಮಾತ್ರ ಸೀಮಿತವಾಗಿರಲಿ. ಅದೇ ನಿಮ್ಮ ಗುರುತಾಗಬಾರದು ಎಂದು ಮಾರ್ಮಿಕವಾಗಿ ಕಂಗನಾ ಬರೆದುಕೊಂಡಿದ್ದಾರೆ. ಈ ಕುರಿತಂತೆ ಹಲವರು ಹಲವು ರೀತಿಯಲ್ಲಿ ಕಂಗನಾಗೆ ಪ್ರಶ್ನೆ ಮಾಡಿದ್ದಾರೆ. ಏನನ್ನು ನೀವು ನೇರವಾಗಿ ಹೇಳುವುದಕ್ಕೆ ಹೊರಟಿದ್ದೀರೋ, ಅದನ್ನು ನೇರವಾಗಿ ಹೇಳಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಹೈದರಾಬಾದ್: ಹೇರ್‌ವಾಶ್‍ಗೆ (Hair Wash) ಅಂತ ಬ್ಯೂಟಿಪಾರ್ಲರ್‌ಗೆ (Beauty Parlour) ತೆರಳಿದ್ದ 50 ವರ್ಷದ ಮಹಿಳೆಯೊಬ್ಬರು ಪಾರ್ಶ್ವವಾಯುಗೆ ತುತ್ತಾದ ಘಟನೆ ಹೈದ್ರಾಬಾದ್‍ನಲ್ಲಿ (Hyderabad) ನಡೆದಿದೆ.
ಬ್ಯೂಟಿಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‍ಗೆ (Stroke Syndrom) ತುತ್ತಾಗಿರುವ ಮಹಿಳೆಯನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯೂಟಿಪಾರ್ಲರ್‌ನಲ್ಲಿ ಕತ್ತನ್ನು ಹಿಂದಕ್ಕೆ ಬಾಗಿಸಿ ಬೇಸ್‍ನಲ್ಲಿಟ್ಟುಕೊಂಡು ತಲೆಗೂದಲು ತೊಳೆಯಲಾಗುತ್ತದೆ. ಕೆಲವೊಮ್ಮೆ ಒತ್ತಡದಿಂದಾಗಿ ಕತ್ತಿನ ಅಪಧಮನಿಗೆ ಏಟು ಬಿದ್ದು, ಅದು ರಕ್ತ ಹೆಪ್ಪುಗಟ್ಟುವಿಕೆ ಅಥವಾ ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ. ಇದನ್ನೇ ಬ್ಯೂಟಿಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಎನ್ನಲಾಗುತ್ತದೆ. ಇದರಿಂದಾಗಿ ತಕ್ಷಣ ತಲೆಸುತ್ತುವುದು, ವಾಕರಿಕೆ ಅಥವಾ ವಾಂತಿಯಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಹೈದರಾಬಾದ್‍ನ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ATM ಕಳ್ಳರ ಖತರ್ನಾಕ್ ಪ್ಲಾನ್- ಯೂಟ್ಯೂಬ್‍ನಲ್ಲಿ ವೀಡಿಯೋ ನೋಡಿ ಟ್ರೈನಿಂಗ್
ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವೈದ್ಯರು, ಆರಂಭದಲ್ಲಿ ಮಹಿಳೆಯನ್ನು ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗೆ ಕರೆದೊಯ್ಯಲಾಯಿತು. ಆದರೂ ರೋಗಲಕ್ಷಣಗಳು ಸುಧಾರಿಸಲಿಲ್ಲ. ಅಲ್ಲದೇ ಮರುದಿನ ಮಹಿಳೆ ನಡೆಯುವಾಗ ಸ್ವಲ್ಪ ಅಸಮತೋಲನವನ್ನು ಕಾಣಿಸಿಕೊಂಡಿತು. ನಂತರ ಅವರನ್ನು ನರವಿಜ್ಞಾನಿಗಳ ಅಭಿಪ್ರಾಯಕ್ಕಾಗಿ ಉಲ್ಲೇಖಿಸಲಾಯಿತು, ಅವರು ಸೌಮ್ಯವಾದ ಬಲ ಸೆರೆಬೆಲ್ಲಾರ್ ಚಿಹ್ನೆಗಳನ್ನು ಹೊಂದಿದ್ದಾರೆಂದು ತಿಳಿಸಿದರು. ಎಂಆರ್‍ಐ ಮೆದುಳಿನ ಬಲ ಹಿಂಭಾಗದ ಕೆಳಮಟ್ಟದ ಸೆರೆಬೆಲ್ಲಾರ್ ಪ್ರದೇಶದಲ್ಲಿ ಇನ್ಫಾಕ್ರ್ಟ್ ಅನ್ನು ಬಹಿರಂಗಪಡಿಸಿತು. ಎಂಆರ್ ಆಂಜಿಯೋಗ್ರಾಮ್ ಎಡ ಕಶೇರುಖಂಡಗಳ ಹೈಪೋಪ್ಲಾಸಿಯಾವನ್ನು ತೋರಿಸಿದೆ. ಬಲ ಪಿಐಸಿಎ ಪ್ರದೇಶವನ್ನು ಒಳಗೊಂಡಿರುವ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‍ನ ರೋಗನಿರ್ಣಯವನ್ನು ಮಾಡಲಾಯಿತು. ಮಹಿಳೆ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಯ ಲಕ್ಷಣಗಳನ್ನು ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.
1. I recently saw a 50-year old woman with symptoms of dizziness, nausea & vomiting, which started during her hair wash with shampoo in a beauty parlor. Initially, she was taken to a gastroenterologist, who treated her symptomatically.#Medtwitter
— Dr Sudhir Kumar MD DM???????? (@hyderabaddoctor) October 30, 2022
ಕೂದಲನ್ನು ಶಾಂಪೂವಿನಿಂದ ತೊಳೆಯುವಾಗ ನಮ್ಮ ತಲೆಯನ್ನು ವಾಶ್-ಬೇಸಿನ್ ಕಡೆಗೆ ಹಿಂದಕ್ಕೆ ತಿರುಗಿಸಲಾಗುತ್ತದೆ. ಈ ವೇಳೆ ಕುತ್ತಿಗೆಯ ಹೈಪರ್ ಎಕ್ಸ್‌ಟೆನ್ಶನ್ ಮೆದುಳಿನಲ್ಲಿ ಆಮ್ಲಜನಕದ ಪರಿಚಲನೆಯನ್ನು ಬದಲಾಯಿಸಬಹುದು. ಈ ವೇಳೆ ಕುತ್ತಿಗೆಯಲ್ಲಿರುವ ಬೆನ್ನುಮೂಳೆ ಅಪಧಮನಿಗಳು ಮೆದುಳು ಮತ್ತು ಬೆನ್ನುಮೂಳೆಗೆ ರಕ್ತ ಪೂರೈಕೆಗೆ ಅಡ್ಡಿಯುಂಟಾಗುವುದು ಸಿಂಡ್ರೋಮ್‍ಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.
ಹಿಂದಿನ 1993 ರಲ್ಲಿ, ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಅನ್ನು ಜರ್ನಲ್ ಆಫ್ ದಿ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್‍ನಲ್ಲಿ ಡಾ ಮೈಕೆಲ್ ವೈಂಟ್ರಾಬ್ ಅವರು, ಹೇರ್ ಸಲೂನ್‍ಗಳಲ್ಲಿನ ಶಾಂಪೂಗಳನ್ನು ಬಳಸಿದ್ದರಿಂದ ಗಂಭೀರವಾದ ಪಾರ್ಶ್ವವಾಯು ರೋಗಲಕ್ಷಣಗಳನ್ನು ಹೊಂದಿದ್ದ ಐವರು ಮಹಿಳೆಯರು ಅನುಭವಿಸಿರುವುದನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ.
ಸ್ಟ್ರೋಕ್ ಸಿಂಡ್ರೋಮ್ ಗುಣಲಕ್ಷಣಗಳು
ಅಸ್ಥಿರತೆ, ಮೈಗ್ರೇನ್-ರೀತಿಯ ತಲೆನೋವು, ದೃಷ್ಟಿ ಕಳೆದುಕೊಳ್ಳುವುದು ಅಥವಾ ಮಸುಕಾಗಿರುವ ದೃಷ್ಟಿ, ಕುತ್ತಿಗೆ ಊತ ಮತ್ತು ರುಚಿಯ ಬದಲಾವಣೆಯನ್ನು ಹೊಂದಿರುತ್ತದೆ. ಅದರ ನಂತರ, ರೋಗಲಕ್ಷಣಗಳು ಸಾಮಾನ್ಯ ಸ್ಟ್ರೋಕ್‍ಗೆ ಹೊಂದಿಕೆಯಾಗುತ್ತವೆ. ಇವುಗಳಲ್ಲಿ ಮರಗಟ್ಟುವಿಕೆ, ಸಮತೋಲನದ ನಷ್ಟ, ಅಸ್ಪಷ್ಟ ಮಾತು, ದೌರ್ಬಲ್ಯ, ಮೂರ್ಛೆ ಮತ್ತು ಹಠಾತ್ ವರ್ತನೆಯ ಬದಲಾವಣೆಗಳು ಸೇರಿವೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಮಹಿಳೆಯೊಬ್ಬಳ ಜುಟ್ಟು ಹಿಡಿದು ನರ್ಸ್ ಆಕೆಯನ್ನು ಹಾಸಿಗೆ ಮೇಲೆ ಎಳೆದುಕೊಂಡು ಹೋಗಿ ಕೂರಿಸಿರುವ ಹಿಂಸಾತ್ಮಕ ಘಟನೆ ಉತ್ತರ ಪ್ರದೇಶದ (Uttar Pradesh) ಜಿಲ್ಲಾ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಸೀತಾಪುರ ಜಿಲ್ಲಾ ಆಸ್ಪತ್ರೆಯ ಮಹಿಳಾ ವಾರ್ಡ್‍ನಲ್ಲಿ ನಡೆದ ಗಲಾಟೆಯ ವೀಡಿಯೋದಲ್ಲಿ, ನರ್ಸ್ ಒಬ್ಬರು ಮಹಿಳೆಯ ಕೂದಲನ್ನು ಹಿಡಿದುಕೊಂಡು ಖಾಲಿ ಹಾಸಿಗೆ ಮೇಲೆ ತಳ್ಳಿರುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಹಾಸಿಗೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ವ್ಯಕ್ತಿ ಆಕೆಯನ್ನು ಬೆಡ್ ಮೇಲೆ ಸರಿಯಾಗಿ ಮಲಗಿಸುತ್ತಾನೆ. ಇದನ್ನೂ ಓದಿ: ಬೈಕ್ ಸವಾರನೊಂದಿಗೆ ಜಗಳ – ಸಿಟ್ಟಿನಿಂದ ಜನರ ಮೇಲೆ ಕಾರು ಹರಿಸಿದ
ಈ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸೀತಾಪುರದ ಮುಖ್ಯ ವೈದ್ಯಾಧಿಕಾರಿ ಡಾ ಆರ್‌ಕೆ ಸಿಂಗ್, ಮಹಿಳೆಯನ್ನು ಅಕ್ಟೋಬರ್ 18 ರಂದು ದಾಖಲಿಸಲಾಯಿತು. ಮರುದಿನ ರಾತ್ರಿ ಆಕೆಯ ಕುಟುಂಬಸ್ಥರು ಹೊರ ಹೋದ ಬಳಿಕ, 12 ಅಥವಾ 1 ಗಂಟೆ ಸುಮಾರಿಗೆ ವಾಶ್ ರೂಮ್‍ಗೆ ಹೋಗಬೇಕೆಂದು ಹೋದಳು. ಈ ವೇಳೆ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದಳು. ಕೈಯಲ್ಲಿ ಬಳೆಗಳನ್ನು ಒಡೆದು, ಬಟ್ಟೆಯನ್ನು ಹರಿದುಕೊಳ್ಳಲು ಆರಂಭಿಸಿದಳು. ಇದರಿಂದ ವಾರ್ಡ್‍ನಲ್ಲಿದ್ದ ಇತರ ಮಹಿಳೆಯರಲ್ಲಿ ಗಾಬರಿಯುಂಟಾಯಿತು. ಈ ನಡುವೆ ಮಹಿಳೆಯನ್ನು ನಿಯಂತ್ರಣಕ್ಕೆ ತರಲು ಆಸ್ಪತ್ರೆಯ ಸಿಬ್ಬಂದಿ ಮಧ್ಯ ಪ್ರವೇಶಿಸಬೇಕಾಯಿತು.
ಬಳಿಕ ಈ ಬಗ್ಗೆ ನರ್ಸ್ ಪೊಲೀಸರಿಗೆ ಮಾಹಿತಿ ನೀಡಿದರು ಮತ್ತು ಇದೇ ವೇಳೆ ಇತರ ನರ್ಸ್‍ಗಳು ಸಹಾಯಕ್ಕೆ ಧಾವಿಸಿದರು. ನಂತರ ನರ್ಸ್ ಚುಚ್ಚುಮದ್ದು ನೀಡಿದ್ದರಿಂದ ಮಹಿಳೆ ಶಾಂತಳಾದಳು ಮತ್ತು ಆಕೆಯ ಕುಟುಂಬಸ್ಥರು ಬಂದ ಬಳಿಕ ಡಿಸ್ಚಾರ್ಜ್ ಮಾಡಲಾಯಿತು ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: 19 ವರ್ಷದ ಯುವತಿಗೆ ಬಲವಂತವಾಗಿ ಚುಂಬಿಸಿದ 42 ವರ್ಷದ ಫುಡ್ ಡೆಲಿವರಿ ಏಜೆಂಟ್‍ನನ್ನು (Food Delivery Agent) ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 17 ರಂದು ಪುಣೆಯ ಯೆವಾಲೆವಾಡಿಯಲ್ಲಿ (Pune’s Yewalewadi) ಯುವತಿಯೊಬ್ಬಳೆ ಮನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಇದೀಗ ಈ ಸಂಬಂಧ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ (Kondhwa police station) ಯುವತಿ ಪ್ರಕರಣ ದಾಖಲಿಸಿದ್ದು, ಶನಿವಾರ ಫುಡ್ ಆರ್ಡರ್ (Food Order) ಮಾಡಿರುವುದಾಗಿ ಬಹಿರಂಗಪಡಿಸಿದ್ದಾಳೆ. ಇದನ್ನೂ ಓದಿ: ಹೊಟ್ಟೆಯಲ್ಲಿ 1 ಕೆ.ಜಿ ಚಿನ್ನ ಬಚ್ಚಿಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಫುಡ್ ಡೆಲಿವರಿ ಮಾಡಲೆಂದು ಮನೆಗೆ ಬಂದ ಡೆಲಿವರಿ ಏಜೆಂಟ್ ಒಂದು ಗ್ಲಾಸ್ ನೀರು ನೀಡುವಂತೆ ಕೇಳಿದ್ದಾನೆ. ನಂತರ ಆರೋಪಿ ಮನೆಗೆ ಬಂದಿದ್ದಾನೆ. ಬಳಿಕ ಯುವತಿಯೊಂದಿಗೆ ಸ್ನೇಹದಿಂದ ಮಾತನಾಡಲು ಆರಂಭಿಸಿ ಮನೆಯಲ್ಲಿರುವ ಕುಟುಂಬಸ್ಥರ ಬಗ್ಗೆ ವಿಚಾರಿಸಿದ್ದಾನೆ. ಇದನ್ನೂ ಓದಿ : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ APMC ಕಾಯ್ದೆ ರದ್ದು ಮಾಡೋದಿಲ್ಲ- ಎಸ್.ಟಿ ಸೋಮಶೇಖರ್
ಈ ವೇಳೆ ಯುವತಿ ತಾನು ತನ್ನ ರೂಮ್‍ಮೇಟ್‍ಗಳೊಂದಿಗೆ (Roommate) ವಾಸಿಸುತ್ತಿದ್ದೇನೆ ಆದರೆ ಅವರು ಪ್ರಸ್ತುತ ಮನೆಯಲ್ಲಿಲ್ಲ ಎಂದು ಹೇಳಿದಾಗ ಈ ಪರಿಸ್ಥಿತಿಯನ್ನೇ ಲಾಭವಾಗಿ ಮಾಡಿಕೊಂಡು ನೀರು ತರಲು ಯುವತಿಯನ್ನು ಕೇಳಿದ್ದಾನೆ. ಆಹ ಯುವತಿ ನೀರು ತರಲು ತಿರುಗುತ್ತಿದ್ದಂತೆಯೇ ಆರೋಪಿ ಆಕೆಯನ್ನು ಹಿಂದಿನಿಂದ ಹಿಡಿದುಕೊಂಡು ಕೆನ್ನೆಗೆ ಎರಡು ಬಾರಿ ಮುತ್ತಿಟ್ಟಿದ್ದಾನೆ. ನಂತರ ಮನೆಯಿಂದ ಹೊರಡುವ ಮುನ್ನ ಆರೋಪಿ, ನಾನು ನಿನ್ನ ಚಿಕ್ಕಪ್ಪನಿದ್ದಂತೆ ಎಂದು ಹೇಳಿ ಬೇಕಿದ್ದರೆ ತನ್ನನ್ನು ಸಂಪರ್ಕಿಸುವಂತೆ ಹೇಳಿದ್ದಾನೆ.
ಆರಂಭದಲ್ಲಿ ಯುವತಿ ಆರೋಪಿ ವಿರುದ್ಧ ಯಾವುದೇ ದೂರು ದಾಖಲಿಸಿರಲಿಲ್ಲ. ಆದರೆ ಯಾವಾಗ ಆತ ಆಕೆಗೆ ವಾಟ್ಸಾಪ್‍ನಲ್ಲಿ ಮೆಸೇಜ್ ಮಾಡಲು ಆರಂಭಿಸಿದನೋ ಆಗ ಯುವತಿ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದೀಗ ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸರ್ದಾರ್ ಪಾಟೀಲ್ (Senior Police Inspector Sardar Patil ) ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮಹಿಳೆಯ ಸಾವಿಗೆ ನಿಖರ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಆದರೆ ವೈದ್ಯಕೀಯ ಶಿಕ್ಷಣ ನಿರ್ದೇಶಕ ರಮೇಶ್ ರೆಡ್ಡಿ ಪೆಟ್ಲಾ ಬುರ್ಜ್ ಆಸ್ಪತ್ರೆಗೆ ಧಾವಿಸಿ ಸೂಪರಿಂಟೆಂಡೆಂಟ್ ಮತ್ತು ಇತರ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿದರು. ಮಹಿಳೆ ಸಾವಿಗೆ ಕಾರಣವೇನು ಎಂಬುವುದರ ಬಗ್ಗೆ ಅಧಿಕಾರಿಗಳು ಕೂಡ ಇಲ್ಲಿಯವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
ರಂಗಾ ರೆಡ್ಡಿ ಜಿಲ್ಲೆಯ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಡಬಲ್ ಪಂಕ್ಚರ್ ಲ್ಯಾಪರೊಸ್ಕೋಪಿ (ಡಿಪಿಎಲ್)ಗೆ ಒಳಗಾಗಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ. ಇನ್ನೂ ಮೂವತ್ತು ಮಹಿಳೆಯರು ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಒಳ ಉಡುಪು ಖರೀದಿಸಲು ದೆಹಲಿಗೆ ಹೋಗಿದ್ದೆ- ಜಾರ್ಖಂಡ್ ಸಿಎಂ ಸಹೋದರನ ವಿವಾದಾತ್ಮಕ ಹೇಳಿಕೆ
ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹಿಂ ಪಟ್ಟಣಂನಲ್ಲಿರುವ ಸಿವಿಲ್ ಆಸ್ಪತ್ರೆಯಲ್ಲಿ ಆಗಸ್ಟ್ 25 ರಂದು ನಡೆದ ಸ್ತ್ರೀ ಸಂತಾನ ಹರಣ ಶಿಬಿರದಲ್ಲಿ ಮಹಿಳೆಯರು ಡಿಪಿಎಲ್ ಮಾಡಿಸಿಕೊಂಡಿದ್ದರು. ನಾಲ್ವರು ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್‍ನಿಂದ ಬಳಲುತ್ತಿದ್ದರು ಮತ್ತು ಇದಕ್ಕೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಸಾವನ್ನಪ್ಪಿದ್ದರು.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಪರವಾನಿಗೆಯನ್ನು ಸರ್ಕಾರ ಅಮಾನತುಗೊಳಿಸಿದೆ. ಇದು ಆಸ್ಪತ್ರೆಯ ಅಧೀಕ್ಷಕರನ್ನು ಜೀವಮಾನದ ಅಮಾನತುಗೊಳಿಸಿದೆ. ಈ ಕುರಿತಂತೆ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ಜಿ.ಶ್ರೀನಿವಾಸರಾವ್ ಅವರಿಂದಲೂ ತನಿಖೆಗೆ ಸರ್ಕಾರ ಆದೇಶಿಸಿದೆ. ಗರಿಷ್ಠ ಎಫ್‍ಪಿ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮೂಲಕ ದಾಖಲೆ ಸೃಷ್ಟಿಸುವ ಪ್ರಯತ್ನಗಳು ಸಾವಿಗೆ ಕಾರಣವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಅಗ್ನಿಪಥ್ ಯೋಜನೆಯಡಿ ಕರ್ನಾಟಕದಲ್ಲಿ ನವೆಂಬರ್ 1ರಿಂದ 3ರವರೆಗೆ ಮಿಲಿಟರಿ ಪೊಲೀಸರ ಸಾಮಾನ್ಯ ಕರ್ತವ್ಯ ವರ್ಗದ ಮಹಿಳಾ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
ಈ ನೇಮಕಾತಿ ಪ್ರಕ್ರಿಯೆಯು ಪ್ರಧಾನ ಕಛೇರಿ ನೇಮಕಾತಿ ವಲಯದ ಆಶ್ರಯದಲ್ಲಿ ಬೆಂಗಳೂರಿನ ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ನಡೆಯಲಿದೆ ರಕ್ಷಣಾ ಇಲಾಖೆ ತಿಳಿಸಿದೆ. ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಮತ್ತು ಮಾಹೆಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆಗಳೇನು?
ಅರ್ಜಿ ಸಲ್ಲಿಸುವವರು 17 ವರ್ಷ 5 ತಿಂಗಳು ಮೀರಿರಬೇಕು ಮತ್ತು 23 ವರ್ಷದ ಒಳಗಿನವರಾಗಿರಬೇಕು. ಅಭ್ಯರ್ಥಿಗಳು 162 ಮೀಟರ್ ಎತ್ತರ ಹೊಂದಿರಬೇಕು. 10ನೇ ತರಗತಿ ಪರೀಕ್ಷೆಯನ್ನು ಶೇ.45 ಅಂಕದೊಂದಿಗೆ ಉತ್ತೀರ್ಣರಾಗಿಬೇಕು ಮತ್ತು ಎಲ್ಲ ವಿಷಯದಲ್ಲಿ ಶೇ.35 ಅಂಕ ಪಡೆದಿರಬೇಕು. ಆಗಸ್ಟ್ 9 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 7ಕ್ಕೆ ಕೊನೆಯಾಗಲಿದೆ. ಇದನ್ನೂ ಓದಿ: ಅಗ್ನಿವೀರರಿಗೆ ಆರಂಭಿಕ ಸಂಬಳ ಎಷ್ಟಿರುತ್ತೆ?
ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳು 1.6 ಕಿ.ಮೀ ಓಡಬೇಕಾಗುತ್ತದೆ. 10 ಅಡಿ ಉದ್ದ ಜಿಗಿತ, 3 ಅಡಿ ಎತ್ತರ ಜಿಗಿತದಲ್ಲಿ ತೇರ್ಗಡೆಯಾದವರಿಗೆ ಮೆಡಿಕಲ್ ಪರೀಕ್ಷೆ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ www.joinindianarmy.nic.in ಭೇಟಿ ನೀಡಬಹುದು.
Live Tv
[brid partner=56869869 player=32851 video=960834 autoplay=true]
ಚಂಡೀಗಢ: ಯುವತಿಯೊಬ್ಬಳ ಮಾಜಿ ಲವ್ವರ್ ಮತ್ತು ಹಾಲಿ ಪ್ರಿಯಕರ ನಡುವೆ ಜಗಳ ನಡೆದಿದ್ದು, ಪರಿಣಾಮ ಮಾಜಿ ಪ್ರಿಯಕರ ತನ್ನ ಪ್ರೇಯಸಿಯ ಲವ್ವರ್ ನನ್ನು ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಮೊಹಾಲಿಯಲ್ಲಿ ನಡೆದಿದೆ.
ಈ ಘಟನೆ ಸೋಮವಾರ ರಾತ್ರಿ ನಾಯಗಾಂವ್ ನಲ್ಲಿ ನಡೆದಿದ್ದು ಮೋಹಿತ್(20) ಮುಖ್ಯ ಆರೋಪಿ ಎಂದು ಗುರುತಿಸಲಾಗಿದೆ. ಈತನ ಜೊತೆ ಇಬ್ಬರು ಸ್ನೇಹಿತರಾದ ಗೌರವ್ ಅಲಿಯಾಸ್ ಗೊಟಾ (21) ಮತ್ತು ರಣಜೀತ್ ಸಿಂಗ್ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಸೋಮವಾರ ರಾತ್ರಿ ಆರೋಪಿ ಮೋಹಿತ್ ತನ್ನ ಹುಟ್ಟುಹಬ್ಬವನ್ನು ಆಚರಿಸಲು ಕೇಕ್ ತೆಗೆದುಕೊಂಡು ಇಬ್ಬರು ಸ್ನೇಹಿತರಾದ ಗೌರವ್ ಮತ್ತು ರಂಜಿತ್ ಸಿಂಗ್ ಜೊತೆ ಮಾಜಿ ಪ್ರಿಯತಮೆಯ ಮನೆಗೆ ಹೋಗಿದ್ದನು. ಆಗ ಆಕೆಯ ಹಾಲಿ ಪ್ರಿಯತಮ ರಾಕೇಶ್ ಅಲ್ಲಿದ್ದನು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಮೋಹಿತ್ ಸ್ನೇಹಿತರ ಸಹಾಯದಿಂದ ಚಾಕುವಿನಿಂದ ರಾಕೇಶ್ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಮೃತ ರಾಕೇಶ್ ಬಾಲೋಂಗಿಯಲ್ಲಿರುವ ತನ್ನ ಮನೆಗೆ ಹಿಂದಿರುಗಲಿಲ್ಲ ಎಂದು ಕುಟುಂಬದವರು ಯುವತಿಯ ಮನೆಗೆ ಬಂದಾಗ ಈ ಕೊಲೆ ಬೆಳಕಿಗೆ ಬಂದಿದೆ. ಆಗ ರಾಕೇಶ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಮೃತ ರಾಕೇಶ್ ಕಳೆದೆರಡು ದಿನಗಳಿಂದ ಯುವತಿಯ ಮನೆಯಲ್ಲಿದ್ದನು. ಈ ಘಟನೆ ನಡೆದ ಸಮಯದಲ್ಲಿ ಯುವತಿ ಮನೆಯಲ್ಲಿ ಇರಲಿಲ್ಲ. ಸೋಮವಾರ ಸಂಜೆ ಬರ್ತ್ ಡೇ ಆಚರಿಸಿಕೊಳ್ಳಲು ಆರೋಪಿ ಮೋಹಿತ್ ಮತ್ತು ಸ್ನೇಹಿತರ ಜೊತೆ ಬಂದು ಆತನನ್ನು ಹತ್ಯೆಗೈದಿದ್ದಾನೆ ಎಂದು ನಯಾಗಾಂವ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಗುರ್ವಂತ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಐಪಿಸಿ ಸೆಕ್ಷನ್ 302 ಮತ್ತು 34 ರ ಅಡಿಯಲ್ಲಿ ಪ್ರಕರಣವನ್ನು ನಾಯಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.