Tag: feet

  • ಪಾದ ಮುಟ್ಟಿ ನಮಸ್ಕರಿಸಿದ ಬಿಜೆಪಿ ನಾಯಕರಿಗೆ ಮೋದಿ ಹೇಳಿದ್ದೇನು ಗೊತ್ತಾ?

    ಪಾದ ಮುಟ್ಟಿ ನಮಸ್ಕರಿಸಿದ ಬಿಜೆಪಿ ನಾಯಕರಿಗೆ ಮೋದಿ ಹೇಳಿದ್ದೇನು ಗೊತ್ತಾ?

    ಲಕ್ನೋ: ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷರು ಚುನಾವಣಾ ರ್‍ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪಾದ ಮುಟ್ಟಿ ನಮಸ್ಕರಿಸಿದ್ದಾರೆ.

    ಭಾನುವಾರ ಮೋದಿ ಅವರು ರ್‍ಯಾಲಿಗೆ ಆಗಮಿಸುತ್ತಿದ್ದಂತೆ ಬಿಜೆಪಿಯ ಯುಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷ ಅವಧೇಶ್ ಕಟಿಯಾರ್ ಶ್ರೀರಾಮನ ವಿಗ್ರಹವನ್ನು ಮೋದಿ ಅವರಿಗೆ ನೀಡಿದರು. ಇದನ್ನೂ ಓದಿ: ಯುವಕನ ಬರ್ಬರ ಹತ್ಯೆ – ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ

    ಈ ವೇಳೆ ಅವಧೇಶ್ ಕಟಿಯಾರ್ ಅವರು ವಿಗ್ರಹವನ್ನು ನೀಡಿದ ಬಳಿಕ, ಕೆಳಗೆ ಬಾಗಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಆಗ ಕಟಿಯಾರ್ ಅವರನ್ನು ತಕ್ಷಣವೇ ಕಾಲಿಗೆ ಬೀಳುವುದನ್ನು ನಿಲ್ಲಿಸುವಂತೆ ಮೋದಿ ಸೂಚಿಸಿ, ನನ್ನ ಪಾದಗಳನ್ನು ಮುಟ್ಟಬೇಡಿ ಎಂದು ಅವಧೇಶ್ ಕಟಿಯಾರ್ ಅವರ ಕಾಲನ್ನು ಮೋದಿ ಅವರು ಸ್ಪರ್ಶಿಸಿದರು.

    ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಜೆಪಿಯಿಂದ ಉನ್ನಾವೊ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅವಧೇಶ್ ಕಟಿಯಾರ್ ಅವರು ಈ ಹಿಂದೆ ಉನ್ನಾವೊದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದನ್ನೂ ಓದಿ: ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ಗೆ ಕೊರೊನಾ ಸೋಂಕು – ಚೇತರಿಕೆಗೆ ಹಾರೈಸಿ ಪ್ರಧಾನಿ ಮೋದಿ ಟ್ವೀಟ್

    ಉನ್ನಾವೊ ಜಿಲ್ಲೆಯು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆಬ್ರವರಿ 23 ರಂದು ಉತ್ತರಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ನಡೆಯಲಿದೆ. ಭಾನುವಾರ ಉನ್ನಾವೊದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ ಅವರು, ನೀವು ನೋಡಿರಬೇಕು, ವೇದಿಕೆಯಿಂದ ತಳ್ಳಲ್ಪಟ್ಟ ಮುಲಾಯಂ ಸಿಂಗ್ ಯಾದವ್ ಅವಮಾನಕ್ಕೊಳಗಾದರು ಮತ್ತು ಪಕ್ಷವನ್ನು ವಶಪಡಿಸಿಕೊಂಡರು. ಕೊನೆಗೆ ಅಖಿಲೇಶ್ ಸ್ಥಾನವನ್ನು ಉಳಿಸಲು ಮುಲಾಯಂ ಅವರು ಕರ್ಹಾಲ್‍ನಲ್ಲಿ ಮನವಿ ಮಾಡಬೇಕಾಯಿತು ಎಂದು ವ್ಯಂಗ್ಯವಾಡಿದರು.

    ಉತ್ತರ ಪ್ರದೇಶದ 403 ಸದಸ್ಯ ಬಲದ ವಿಧಾನಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮಾರ್ಚ್ 7 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಮೆಟ್ರೋವನ್ನು ತಂದಿದ್ದು ಎಸ್‍ಪಿ ಸರ್ಕಾರ, ಉದ್ಘಾಟಿಸಿದ್ದು ಯೋಗಿ ಆದಿತ್ಯನಾಥ್: ಅಖಿಲೇಶ್ ಯಾದವ್

  • ನಿಮ್ಮ ಪಾದಗಳ ಅಂದ ಹೆಚ್ಚಿಸಲು ಈ ಮೆಹಂದಿ ಡಿಸೈನ್ ಸೂಕ್ತ

    ನಿಮ್ಮ ಪಾದಗಳ ಅಂದ ಹೆಚ್ಚಿಸಲು ಈ ಮೆಹಂದಿ ಡಿಸೈನ್ ಸೂಕ್ತ

    ದುವೆ ಎಂದ ಕೂಡಲೇ ಮಹಿಳೆಯರಿಗೆ ತಕ್ಷಣ ನೆನಪಾಗುವುದು ಸೀರೆ, ಆಭರಣ, ಮೇಕಪ್, ಹೇರ್ ಸ್ಟೈಲ್, ಮೆಹಂದಿ ಹೀಗೆ ಅನೇಕ ಅಲಂಕಾರ ವಸ್ತುಗಳು. ವಧು ಮದುವೆ ವೇಳೆ ಉಡುಪು, ಆಭರಣ, ಮೇಕಪ್‍ಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಅಷ್ಟೇ ಪ್ರಾಮುಖ್ಯತೆ ಮೆಹಂದಿಗೂ ನೀಡುತ್ತಾರೆ.

    Foot Mehndi Designs

    ಚಿಕ್ಕ-ಮಕ್ಕಳಿಂದ ದೊಡ್ಡವರವರೆಗೂ ಮೆಹಂದಿ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಮದುವೆ ಸಮಾರಂಭಗಳಲ್ಲಂತೂ ಮದುಮಗಳು ಮೆಹಂದಿ ಹಾಕದೇ ಇದ್ದರೆ ಮದುವೆ ಕಂಪ್ಲೀಟ್ ಆಗಿದೆ ಎಂದು ಎನಿಸುವುದೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ಮಹೆಂದಿ ಭಾರತದ ಹಳೆಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸೂಚಿಸುತ್ತದೆ.

    Foot Mehndi Designs

    ಮದುವೆ ಸಮಯದಲ್ಲಿ ವಧುವಿನ ಕೈಗಳಿಗೆ ಮೆಹಂದಿ ಎಷ್ಟು ಮುಖ್ಯವೋ ಕಾಲಿಗೂ ಸಹ ಅಷ್ಟೇ ಮುಖ್ಯ. ಮೆಹಂದಿ ವಧುವಿನ ಕೈಗಳನ್ನು ಎಷ್ಟು ಸುಂದವಾಗಿ ಕಾಣಿಸುವಂತೆ ಮಾಡುತ್ತದೆಯೋ ಪಾದಗಳನ್ನು ಕೂಡ ಅಷ್ಟೇ ಆಕರ್ಷಕವಾಗಿ ಕಾಣಿಸುವಂತೆ ಮಾಡುತ್ತದೆ. ಮೆಹಂದಿ ವಧುವಿನ ಅಂದವನ್ನು ಹೆಚ್ಚಿಸುತ್ತದೆ. ಎಷ್ಟೋ ಮಹಿಳೆಯರು ಕೈಗಳಿಗೆ ಸುಲಭವಾಗಿ ಮೆಹಂದಿ ಡಿಸೈನ್ ಸೆಲೆಕ್ಟ್ ಮಾಡಿ ಹಾಕಿಸಿಕೊಳ್ಳುತ್ತಾರೆ. ಆದರೆ ಕಾಲಿಗೆ ಯಾವ ರೀತಿಯ ಮೆಹಂದಿ ಡಿಸೈನ್ ಸೂಟ್ ಆಗುತ್ತದೆ ಎಂದು ಮಾತ್ರ ತಿಳಿದಿರುವುದಿಲ್ಲ. ಅಂತವರಿಗೆ ಪಾದಕ್ಕೆ ಹಾಕಬಹುದಾದ ಕೆಲವೊಂದು ಮೆಹಂದಿ ಡಿಸೈನ್‍ಗಳ ಕುರಿತ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದನ್ನೂ ಓದಿ:  ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ: ಮೋಹನ್ ಭಾಗವತ್

    ಟ್ರೆಡಿಶನಲ್ ಫೂಟ್ ಮೆಹಂದಿ ಡಿಸೈನ್:
    ಕಾಲ್ಬೆರಳುಗಳ ಮೇಲೆ ಬಿಡಿಸುವ ಮೆಹಂದಿ ಡಿಸೈನ್‍ಗಳು ಸಾಮಾನ್ಯವಾಗಿ ಎದ್ದು ಕಾಣಿಸುತ್ತದೆ. ಅದರಲ್ಲಿಯೂ ಪಾದಗಳ ಮೇಲೆ ನವಿಲಿನ ಆಕೃತಿ, ಎಲೆಗಳು, ಚುಕ್ಕೆಗಳು ಹಾಗೂ ಹೂವಿನ ಮಾದರಿಯ ಡಿಸೈನ್ ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಮೆಹಂದಿ ಡಿಸೈನ್‍ಗಳ ಜೊತೆಗೆ ಕೆಂಪು ಬಣ್ಣದ ನೈಲ್ ಪಾಲೀಷ್ ಪಾದಗಳಿಗೆ ಕಂಪ್ಲೀಟ್ ಲುಕ್ ನೀಡುತ್ತದೆ.

    ಫೂಟ್ ಮೆಹಂದಿ ವಿತ್ ಡಿಫರೆಂಟ್ ಫಿಗರ್ಸ್:
    ಮೆಹಂದಿ ಕಲಾವಿದರೊಬ್ಬರು ಇದರಲ್ಲಿ ವಿವಿಧ ರೀತಿಯ ಡಿಸೈನ್‍ಗಳನ್ನು ಬಿಡಿಸಿದ್ದಾರೆ. ತ್ರಿಕೋನಗಳು, ಹೃದಯಗಳು, ಹೂಗಳ ಡಿಸೈನ್, ಪಾದಗಳ ಜಿಗ್‍ಜಾಗ್ ರೀತಿಯಲ್ಲಿ ಚುಕ್ಕೆಗಳನ್ನು ಬಿಡಿಸಿದ್ದು, ಪಾದಗಳನ್ನು ಸುಂದರಗೊಳಿಸಿದ್ದಾರೆ.  ದನ್ನೂ ಓದಿ: ಶ್ರೀ ಕ್ಷೇತ್ರ ಕೈವಾರದಲ್ಲೊಂದು ಅಪರೂಪದ ಮದುವೆ

    Foot Mehndi with Different Figures

    ಅರೆಬಿಕ್ ಮೆಹಂದಿ ಡಿಸೈನ್ಸ್:
    ಇದೊಂದು ಸುಂದರವಾದ ಅರೇಬಿಕ್ ಮೆಹಂದಿ ಡಿಸೈನ್ ಆಗಿದ್ದು, ಬಹಳ ಸುಲಭವಾಗಿ ಬಿಡಿಸಬಹುದಾದ ಚಿಕ್ಕ ಡಿಸೈನ್ ಆಗಿದೆ. ಈ ಮೆಹಂದಿ ಡಿಸೈನ್‍ಗಳ ತುದಿಯಲ್ಲಿ ಎಲೆಗಳನ್ನು, ಹೂವುಗಳನ್ನು ಬಿಡಿಸಲಾಗಿದೆ. ಇದರ ವಿಶೇಷತೆ ಏನೆಂದರೆ ನೀವು ಬಯಸುವಂತಹ ಡಿಸೈನ್ ಅನ್ನು ಸಹ ಇದರ ಮಧ್ಯ, ಮಧ್ಯದಲ್ಲಿ ಸೇರಿಸಬಹುದಾಗಿದೆ.

    ಯೂನಿಕ್ ಫೂಟ್ ಮೆಹಂದಿ ಡಿಸೈನ್ಸ್:
    ಇದೊಂದು ಯೂನಿಕ್ ಲುಕ್ ನೀಡುವ ಮೆಹಂದಿ ಡಿಸೈನ್ ಆಗಿದ್ದು, ಚಿಕ್ಕ ಚಿಕ್ಕ ಹೂವು ಹಾಗೂ ಎಲೆಗಳ ಡಿಸೈನ್ ಅನ್ನು ಪಾದದ ಮುಂಭಾಗ ಮತ್ತು ಹಿಂಭಾಗ ಎರಡು ಕಡೆಗಳಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದರಲ್ಲಿಟ್ಟಿರುವ ಚುಕ್ಕೆಗಳು ಬಹಳ ಆಕರ್ಷಕವಾಗಿ ಕಾಣಿಸುತ್ತದೆ. ಇದನ್ನೂ ಓದಿ: ನನ್ನ ಆರೋಗ್ಯ ಸ್ಥಿರವಾಗಿದೆ, ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ: ಹಂಸಲೇಖ

    ಷೇಡೆಡ್ ಮೆಹಂದಿ ಡಿಸೈನ್‍ಗಳು:
    ಷೇಡೆಡ್ ಮೆಹಂದಿ ಡಿಸೈನ್‍ಗಳು ಶಾರ್ಟ್ ಆ್ಯಂಡ್ ಸ್ವೀಟ್ ಲುಕ್ ನೀಡುತ್ತದೆ. ಈ ಡಿಸೈನ್‍ಗಳು ಯಾವುದೇ ಸಮಾರಂಭಗಳಿಗೂ ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಮೆಹಂದಿ ಡಿಸೈನ್‍ಗಳನ್ನು ಸುಲಭವಾಗಿ ಬಿಡಿಸಬಹುದಾಗಿದೆ ಮತ್ತು ಇದು ನಿಮ್ಮ ಮುದ್ದಾದ ಪಾದಗಳನ್ನು ಮತ್ತಷ್ಟು ಅಂದಗೊಳಿಸುತ್ತದೆ.

    o

  • ಕಾಲಿನಲ್ಲಿ ಪರೀಕ್ಷೆ ಬರೆದು ಶೇ.70 ಅಂಕ ಪಡೆದ ಯುವಕ

    ಕಾಲಿನಲ್ಲಿ ಪರೀಕ್ಷೆ ಬರೆದು ಶೇ.70 ಅಂಕ ಪಡೆದ ಯುವಕ

    ಲಕ್ನೋ: ಹುಟ್ಟುತ್ತಲೇ ಅಂಗವಿಕಲನಾಗಿ ಬೆಳೆದ ಲಕ್ನೋ ಯುವಕ ಕಾಲಿನ ಮೂಲಕ ಪರೀಕ್ಷೆ ಬರೆದು ಶೇ.70 ಪಡೆದು ಪಾಸ್ ಆಗಿದ್ದಾರೆ.

    ತುಷಾರ್ ವಿಶ್ವಕರ್ಮ ಎಂಬವರು ಪೆನ್ನನ್ನು ಕಾಲಿನಲ್ಲಿ ಹಿಡಿದು ಬರೆಯುವುದಕ್ಕೆ ಅಭ್ಯಾಸ ಮಾಡಿಕೊಂಡಿದ್ದರು. ಇದೀಗ 12ನೇ ತರಗತಿ ಪರೀಕ್ಷೆಯನ್ನು ತಮ್ಮ ಕಾಲಿನ ಬೆರಳುಗಳ ಮೂಲಕ ಬರೆದು ಶೇ.70 ಪಡೆದು ಉತ್ತೀರ್ಣರಾಗಿದ್ದಾರೆ.

    ಸೃಜನಶೀಲ ಕಾನ್ವೆಂಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ತಾನು ಹುಟ್ಟಿನಿಂದಲೂ ಕೈಗಳನ್ನು ಕಳೆದುಕೊಂಡಿದ್ದೇನೆ. ಆದರೆ ಅದನ್ನು ನನ್ನ ಅಸಹಾಯಕತನ ಎಂದು ಭಾವಿಸಲಿಲ್ಲ. ನನ್ನ ಇಬ್ಬರು ಅಣ್ಣಂದಿರು ಶಾಲೆಗೆ ಹೋಗುವಾಗ, ನಾನು ಕೂಡ ಶಾಲೆಗೆ ಹೋಗಬೇಕೆಂದು ನಿರ್ಧರಿಸಿ ಪೋಷಕರಿಗೆ ಕೇಳಿಕೊಂಡೆ. ನಂತರ ನನ್ನ ಕೈಯಲ್ಲಿ ಬರೆಯಲು ಅಸಾಧ್ಯ ಎಂದು ನನ್ನ ಸಹೋದರರಿಗೆ ನನ್ನ ಬದಲಾಗಿ ಬರೆಯುವಂತೆ ಪೋಷಕರು ಹೇಳುತ್ತಿದ್ದರು. ಆಗ ನಾನು ನನ್ನ ಪಾದಗಳನ್ನು ನನ್ನ ಕೈಗಳಾಗಿ ಮಾಡಿಕೊಂಡು ಬರೆಯಲು ಆರಂಭಿಸಿದೆ ಎಂದು ಹೇಳಿದ್ದಾರೆ.

    ಪರೀಕ್ಷೆ ವೇಳೆ ತುಷಾರ್ ಬರೆಯಲು ಯಾರ ಸಹಾಯವನ್ನು ಪಡೆಯದೇ ಪರೀಕ್ಷೆಯನ್ನು ಪೂರ್ಣಗೊಳಿಸಲು ಕೊಂಚ ಹೆಚ್ಚು ಸಮಯ ನೀಡುವಂತೆ ಶಿಕ್ಷಕಗೆ ಮನವಿ ಮಾಡಿದ್ದಾರೆ. ಅಲ್ಲದೇ ಪರೀಕ್ಷೆ ಬರೆಯಲು ನಾನು ಕಪ್ಪು ಹಾಗೂ ನೀಲಿ ಬಣ್ಣದ ಪೆನ್ನುಗಳನ್ನು ಬಳಸಿರುವುದಾಗಿ ತಿಳಿಸಿದ್ದಾರೆ. ಸದ್ಯ ತುಷಾರ್ ತಂದೆ ಸಣ್ಣ ವ್ಯಾಪಾರವೊಂದನ್ನು ಮಾಡುತ್ತಿದ್ದು ಮಗನ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ ಹಾಗೂ ತುಷಾರ್ ಮುಂದೆ ಇಂಜಿನಿಯರ್ ಆಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

    ಸಾಧನೆ ಮಾಡಲು ಅಂಗವೈಕಲ್ಯತೆ ಅಡ್ಡಬರುವುದಿಲ್ಲ. ಕಲಿಕೆಯಲ್ಲಿ ಆಸಕ್ತಿವೊಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಇದೊಂದು ಸ್ಫೂರ್ತಿದಾಯಕ ಕಥೆ ಎಂದೇ ಹೇಳಬಹುದು. ಇದನ್ನೂ ಓದಿ:ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ

  • ಅತ್ಯುತ್ತಮ ಕೆಲಸ ಮಾಡಿದ ಉದ್ಯೋಗಿಗಳ ಪಾದ ತೊಳೆದ ಬಾಸ್ – ವಿಡಿಯೋ ವೈರಲ್

    ಅತ್ಯುತ್ತಮ ಕೆಲಸ ಮಾಡಿದ ಉದ್ಯೋಗಿಗಳ ಪಾದ ತೊಳೆದ ಬಾಸ್ – ವಿಡಿಯೋ ವೈರಲ್

    ಬೀಜಿಂಗ್: ಸಾಮಾನ್ಯವಾಗಿ ಕಂಪನಿಗಳಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ಮಾಲೀಕರು ನೌಕಕರನ್ನು ಉತ್ತೇಜಿಸುವ ಸಲುವಾಗಿ ಬೋನಸ್, ಬಡ್ತಿ ಅಥವಾ ಗಿಫ್ಟ್ ನೀಡುವುದನ್ನು ನೀವು ಕೇಳಿರಬಹುದು. ಆದರೆ ಚೀನಾದ ಕಂಪನಿಯೊಂದರಲ್ಲಿ ಮಾಲೀಕನೇ ಉದ್ಯೋಗಿಗಳ ಪಾದ ತೊಳೆದ ಪ್ರಸಂಗ ನಡೆದಿದೆ.

    ಈ ಘಟನೆ ನವೆಂಬರ್ 2ರಂದು ಚೀನಾದ ಶಂಡೊಂಗ್ ಪ್ರಾಂತ್ಯದಲ್ಲಿರುವ ಜಿನನ್ ನ 2ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಡೆದಿದೆ.

    ಮಾಲೀಕ ತಮ್ಮ ನೌಕರರ ಶ್ರಮವನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಪಾದಗಳನ್ನು ತೊಳೆಯುವ ಮೂಲಕ ಮತ್ತಷ್ಟು ಉತ್ತಮ ಕೆಲಸ ಮಾಡುವಂತೆ ಪ್ರೇರೇಪಿಸಿದ್ದಾರೆ. ಅಲ್ಲದೆ ಈ ಮೂಲಕ ಮಾಲೀಕ ಮತ್ತು ಉದ್ಯೋಗಿಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.

    ಇಬ್ಬರು ಹಿರಿಯ ಅಧಿಕಾರಿಗಳು ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಅವರನ್ನು ಕುಳಿತುಕೊಳ್ಳಿಸಿ, ಪಾದ ತೊಳೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

    ಕಾಸ್ಮೆಟಿಕ್ ಕಂಪನಿಯ ಅಧ್ಯಕ್ಷ ಹಾಗೂ ಹಿರಿಯ ಕಾರ್ಯನಿರ್ವಾಹಕರೊಬ್ಬರು ತಮ್ಮ ಎರಡೂ ಕೈಗಳನ್ನು ಜೋಡಿಸಿ ಕಠಿಣ ಶ್ರಮ ವಹಿಸಿ ಕೆಲಸ ಮಾಡಿದ ಉದ್ಯೋಗಿಗಳ ಮುಂದೆ ತಲೆಬಾಗಿದ್ದಾರೆ. ನಂತರ ಉದ್ಯೋಗಿಗಳನ್ನು ವೇದಿಕೆಗೆ ಕರೆದು, ಸಾಲಾಗಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಬಳಿಕ ಅವರ ಶೂ ಹಾಗೂ ಸಾಕ್ಸ್ ಬಿಚ್ಚಿದ್ದಾರೆ. ಆ ನಂತರ 8 ಮಂದಿ ನೌಕರರು ಕುರ್ಚಿಯಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಮಾಲೀಕರು ಕಚೇರಿ ಸಿಬ್ಬಂದಿ ಅಥವಾ ನೌಕರರ ಪಾದ ತೊಳೆದಿದ್ದಾರೆ. ಇದನ್ನೂ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಒಟ್ಟಿನಲ್ಲಿ ಮಾಲೀಕರು, ತಮ್ಮ ಶ್ರೇಯಸ್ಸಿಗೆ ಕಾರಣರಾದ ಉದ್ಯೋಗಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಲ್ಲದೇ ಮುಂದೆಯೂ ಉತ್ತಮ ಕೆಲಸ ನಿರ್ವಹಿಸುವಂತೆ ಆಶಿಸಿದ್ದಾರೆ.

    ಸದ್ಯ ವೈರಲಾಗುತ್ತಿರುವ ವಿಡಿಯೋಗೆ ಸಾಕಷ್ಟು ಕಮೆಂಟ್ ಗಳು ಬರುತ್ತಿದೆ. ಕೆಲವರು ಕಂಪನಿ ಮಾಲೀಕನ ಕೆಲಸವನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ತೆಗಳಿದ್ದಾರೆ. ಮತ್ತೆ ಕೆಲವರು ಉತ್ತಮ ಕೆಲಸ ಮಾಡಿದರೆ ನೌಕಕರಿಗೆ ಬೋನಸ್ ನೀಡಿದರೆ ಸಾಕು ಎಂದು ಸಲಹೆ ನೀಡಿದ್ದಾರೆ.

    ಇದು ಸರ್ವೇ ಸಾಮಾನ್ಯ. ನಮ್ಮಿಂದಾಗಿ ನೀವು ಸಾಕಷ್ಟು ಹಣ ಮಾಡಿದ್ದೀರಿ. ಹೀಗಾಗಿ ನೀವು ನಿಮ್ಮ ಪಾದ ತೊಳೆದರೆ ಏನೂ ಪ್ರಯೋಜವಾಗಲ್ಲ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಪಾದ ತೊಳೆಯುವ ಮೂಲಕ ಉದ್ಯೋಗಿಗಳು ಮತ್ತೆ ಬೋನಸ್ ಕೇಳದಂತೆ ಮಾಡುವ ಮಾಲೀಕನ ಕುತಂತ್ರ ಇದಾಗಿದೆ ಎಂದಿದ್ದಾರೆ. ಮಗದೊಬ್ಬರು, ಇದೂ ಒಂದು ಅವರ ಸಾಧನೆಯಾಗಿದೆ. ಮುಂದೆ ಅವರ ರೆಸ್ಯೂಮ್ ನಲ್ಲಿ ಬಳಸಿಕೊಳ್ಳಬಹುದೆಂದು ವ್ಯಂಗ್ಯವಾಡಿದ್ದಾರೆ.