Tag: federal investigation agency

  • ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    ಇಸ್ಲಾಮಾಬಾದ್‌: ಉಡುಗೊರೆಯಾಗಿ ಪಡೆದ ಕೋಟ್ಯಂತರ ರೂ. ಮೌಲ್ಯದ ನೆಕ್ಲೆಸ್‌ನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವ ಆರೋಪದಡಿ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಪಾಕಿಸ್ತಾನ ಉನ್ನತ ತನಿಖಾ ಸಂಸ್ಥೆ ವಿಚಾರಣೆ ಆರಂಭಿಸಿದೆ.

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಅಧಿಕಾರವಧಿಯಲ್ಲಿ ದುಬಾರಿ ಮೌಲ್ಯದ ನೆಕ್ಲೆಸ್‌ ಉಡುಗೊರೆಯಾಗಿ ಬಂದಿತ್ತು. ಆದರೆ ಅವರು ಅದನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡದೇ ವ್ಯಾಪಾರಿಯೊಬ್ಬರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥರಿಗೆ ಅವಮಾನ – ಇಮ್ರಾನ್ ಖಾನ್ ಸಾಮಾಜಿಕ ಮಾಧ್ಯಮ ತಂಡ ಅರೆಸ್ಟ್

    ಖಾನ್ ಉಡುಗೊರೆಯಾಗಿ ಪಡೆದ ನೆಕ್ಲೆಸ್ ಅನ್ನು ತೋಶಾ-ಖಾನಾ (ರಾಜ್ಯ ಉಡುಗೊರೆ ಭಂಡಾರ)ಕ್ಕೆ ಕಳುಹಿಸಿಲ್ಲ. ಆದರೆ ಮಾಜಿ ವಿಶೇಷ ಸಹಾಯಕ ಜುಲ್ಫಿಕರ್ ಬುಖಾರಿಗೆ ನೀಡಿದ್ದರು. ಜುಲ್ಪಿಕರ್ ಅದನ್ನು ಲಾಹೋರ್‌ನ ಆಭರಣ ವ್ಯಾಪಾರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಿದ್ದರು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

    ಕಾನೂನಿನ ಪ್ರಕಾರ, ರಾಜ್ಯದ ಅಧಿಕಾರಿಗಳು ಗಣ್ಯರಿಂದ ಸ್ವೀಕರಿಸುವ ಉಡುಗೊರೆಗಳನ್ನು ತೋಶಾ-ಖಾನಾಗೆ ಸಲ್ಲಿಸಬೇಕಾಗುತ್ತದೆ. ಅವರು ಉಡುಗೊರೆಯನ್ನು ಸಲ್ಲಿಸಲು ವಿಫಲರಾದರೆ ಅಥವಾ ಉಡುಗೊರೆ ಮೌಲ್ಯದ ಅರ್ಧದಷ್ಟು ಮೊತ್ತವನ್ನು ಸಲ್ಲಿಸಿದರೆ, ಅದು ಕಾನೂನುಬಾಹಿರ ಕೃತ್ಯವಾಗಿದೆ. ಇದನ್ನೂ ಓದಿ: ಭಾರೀ ಮಳೆ- ಕೊಚ್ಚಿ ಹೋಯ್ತು ಆಫ್ರಿಕಾದಲ್ಲಿದ್ದ 70 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯ

    ವಿಪಕ್ಷಗಳ ಅವಿಶ್ವಾಸ ಮತದಿಂದಾಗಿ ಇಮ್ರಾನ್‌ ಖಾನ್‌ ಅವರು ಪಾಕಿಸ್ತಾನ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಈಗ ಶೆಹಬಾಜ್‌ ಶರೀಪ್‌ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಖಾನ್‌ ರಾಜೀನಾಮೆ ಬೆನ್ನಲ್ಲೇ ಅವರ ವಿರುದ್ಧ ಹಲವು ಆರೋಪಗಳು ವ್ಯಕ್ತವಾಗುತ್ತಿದ್ದು, ತನಿಖೆ ಕೈಗೊಳ್ಳಲಾಗಿದೆ.