Tag: FDA Question Paper

  • FDA Exam Scam: ಓಎಂಆರ್ ಶೀಟ್ ದುರ್ಬಳಕೆ ಆಗಿಲ್ಲ – ಕೆಇಎ ಸ್ಪಷ್ಟನೆ

    FDA Exam Scam: ಓಎಂಆರ್ ಶೀಟ್ ದುರ್ಬಳಕೆ ಆಗಿಲ್ಲ – ಕೆಇಎ ಸ್ಪಷ್ಟನೆ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ವಿವಿಧ ನಿಗಮ ಮಂಡಳಿಗಳ ಎಫ್‌ಡಿಎ (FDA Exam Scam) ಪರೀಕ್ಷೆಯಲ್ಲಿ ಓಎಂಆರ್ ಶೀಟ್‌ಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ನಡೆದಿಲ್ಲ, ದುರ್ಬಳಕೆಯೂ ಆಗಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌‌. ರಮ್ಯಾ ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಲಬುರಗಿಯಲ್ಲಿ (Kalaburagi) ಪರೀಕ್ಷೆ ಬರೆಯುವಾಗ ಬ್ಲೂಟೂಥ್ ಬಳಸಲು ಯತ್ನಿಸಿದವರನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆದರೆ ಓಎಂಆರ್ ಶೀಟ್‌ನಲ್ಲಿ ಯಾವ ದುರ್ಬಳಕೆಯೂ ಕಂಡುಬಂದಿಲ್ಲ. ಈ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ – ಎಫ್‍ಡಿಎ ಪರೀಕ್ಷೆ ಮುಂದೂಡಿಕೆ

    ನಕಲು ಮಾಡುವುದು ಸೇರಿದಂತೆ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡದೆ ಕೆಇಎ ಕಟ್ಟೆಚ್ಚರ ವಹಿಸಿತ್ತು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ- ಹಾವೇರಿ ಪೊಲೀಸ್ ಪೇದೆ ಅರೆಸ್ಟ್

    ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸುವುದಕ್ಕಾಗಿ ಪಾರದರ್ಶಕ ವ್ಯವಸ್ಥೆಯಡಿ ಪರೀಕ್ಷೆ ನಡೆಸುವುದು ಕೆಇಎ ಗುರಿಯಾಗಿದೆ. ಯಾವುದೇ ಅಕ್ರಮ ಪತ್ತೆಯಾದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮವಹಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ – ಸರ್ಕಾರಕ್ಕೆ ಮಾಹಿತಿ ಇದ್ದರೂ ನಿರ್ಲಕ್ಷ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ- ಹಾವೇರಿ ಪೊಲೀಸ್ ಪೇದೆ ಅರೆಸ್ಟ್

    ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ- ಹಾವೇರಿ ಪೊಲೀಸ್ ಪೇದೆ ಅರೆಸ್ಟ್

    ಹಾವೇರಿ: ಕೆಪಿಎಸ್‍ಸಿಯ ಎಫ್‍ಡಿಎ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ತಾಲೂಕಿನ ಅಗಡಿ ಗ್ರಾಮದ ಪೊಲೀಸ್ ಪೇದೆಯನ್ನು ಸಿಸಿಬಿ ಪೊಲೀಸ್‍ರು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

    ಅಗಡಿ ಗ್ರಾಮದ ನಿವಾಸಿ ಮುಸ್ತಾಕ್ ಅಹ್ಮದ್ ಕ್ವಾಟಿ ನಾಯಕ್ ಬಂಧಿತ ಪೊಲೀಸ್ ಪೇದೆ. ಇಂದು ಪೇದೆಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸಿಟಿ ರಿಸರ್ವ್ ಪೊಲೀಸ್ ನಲ್ಲಿ ಕಾನ್‍ಸ್ಟೇಬಲ್ ಆಗಿ ಮುಸ್ತಾಕ್ ಅಹ್ಮದ್ ಕ್ವಾಟಿ ನಾಯಕ ಕೆಲಸ ಮಾಡುತ್ತಿದ್ದ, ಮಂಗಳವಾರ ತಡರಾತ್ರಿ ಅಗಡಿ ಗ್ರಾಮದ ಮನೆಯಿಂದ ವಶಕ್ಕೆ ಪಡೆದುಕೊಂಡು ಸಿಸಿಬಿ ಹೋಗಿದ್ದಾರೆ.

    ಬಂಧಿತ ಮುಸ್ತಾಕ್ ಪ್ರಶ್ನೆ ಪತ್ರಿಕೆ ಹಂಚಿಕೆಯ ಡೀಲ್ ಒಪ್ಪಿಕೊಂಡಿದ್ದ ಆರೋಪಗಳು ಕೇಳಿ ಬಂದಿವೆ. ಈಗಾಗಲೇ ಬಂಧನದಲ್ಲಿರುವ ರಮೇಶ್ ಜೊತೆ ಮುಸ್ತಾಕ್ ನಿಕಟ ಸಂಪರ್ಕದಲ್ಲಿದ್ದ ಎಂಬುದರ ಬಗ್ಗೆ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಜನವರಿ 24ರಂದು ನಿಗದಿಯಾಗಿದ್ದ ಎಫ್‍ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಜನವರಿ 23ರಂದು ಲೀಕ್ ಆಗಿತ್ತು.