Tag: FBI

  • ಟ್ರಂಪ್ ನಿವಾಸದ ಮೇಲೆ ಎಫ್‍ಬಿಐ ದಾಳಿ

    ಟ್ರಂಪ್ ನಿವಾಸದ ಮೇಲೆ ಎಫ್‍ಬಿಐ ದಾಳಿ

    ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್ ಎ ಲಾಗೊ ಎಸ್ಟೇಟ್ ಮೇಲೆ ಎಫ್‍ಬಿಐ ದಾಳಿ ಮಾಡಿದೆ.

    2020ರಲ್ಲಿ ಚುನಾವಣೆಯ ಸೋಲಿನ ಬಳಿಕ ಟ್ರಂಪ್ ಶ್ವೇತಭವನವನ್ನು ತೊರೆದು, ತಮ್ಮ ಫ್ಲೊರಿಡಾ ನಿವಾಸಕ್ಕೆ ವರ್ಗೀಕೃತ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ವರದಿಯಾಗಿದೆ.

    ಈ ಬಗ್ಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ಇದು ನಮ್ಮ ರಾಷ್ಟ್ರಕ್ಕೆ ಕರಾಳ ಸಮಯವಾಗಿದೆ. ಏಕೆಂದರೆ ಫ್ಲೊರಿಡಾದ ಪಾಮ್ ಬೀಚ್‍ನಲ್ಲಿರುವ ನನ್ನ ಮನೆ ಮೇಲೆ ದಾಳಿ ನಡೆದಿದೆ. ಎಫ್‍ಬಿಐ ಅಧಿಕಾರಿಗಳು ಮನೆಯನ್ನು ಆಕ್ರಮಿಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಸರ್ಕಾರಿ ತನಿಖಾ ಏಜೆನ್ಸಿಗಳೊಂದಿಗೆ ಸಹಕರಿಸಿದ ನಂತರವೂ, ನನ್ನ ಮನೆಯ ಮೇಲೆ ಈ ಅಘೋಷಿತ ದಾಳಿ ಅಗತ್ಯವಿರಲಿಲ್ಲ. ಹಾಗೂ ಅದು ಸೂಕ್ತ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಎಫ್‍ಬಿಐ ಅಧಿಕಾರಿಗಳು ತಮ್ಮ ಸುರಕ್ಷಿತ ನೆಲೆಯ ಬಾಗಿಲನ್ನು ಒಡೆದು ತೆರೆದಿದ್ದಾರೆ. ಈ ರೀತಿಯ ದಾಳಿ ತೃತೀಯ ಜಗತ್ತಿನ ದೇಶಗಳಲ್ಲಿ ಮಾತ್ರ ನಡೆಯುತ್ತದೆ ಎಂದ ಅವರು, ತಮ್ಮ ಮನೆಗೆ ಎಫ್‍ಬಿಐ ಮುತ್ತಿಗೆ ಹಾಕಿದೆ ಎಂದು ಕಿಡಿಕಾರಿದರು.

    ವಾಟರ್‍ಗೇಟ್ ಪ್ರಕರಣಕ್ಕೂ ಇದಕ್ಕೂ ಏನು ವ್ಯತ್ಯಾಸ? ಇಲ್ಲಿ ಡೆಮೆಕ್ರಾಟಿಕ್‍ಗಳು ಅಮೆರಿಕದ 45ನೇ ಅಧ್ಯಕ್ಷರ ಮನೆಗೆ ನುಗ್ಗಿದ್ದಾರೆ. ನಾನು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆಸುತ್ತಿದ್ದ ಸಮಯದಲ್ಲಿ ಎಫ್‍ಬಿಐ ದಾಳಿ ನಡೆದಿದೆ ಎಂದು ಟ್ರಂಪ್ ದೂರಿದ್ದಾರೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಘಟನೆಗೆ ಸಂಬಂಧಿಸಿ ವಾಷಿಂಗ್ಟನ್‍ನಲ್ಲಿರುವ ಎಫ್‍ಬಿಐನ ಪ್ರಧಾನ ಕಚೇರಿ ಮತ್ತು ಮಿಯಾಮಿಯಲ್ಲಿರುವ ಅದರ ಉಪ ಕಚೇರಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಇದನ್ನೂ ಓದಿ: ಮಲೆಮಹದೇಶ್ವರನ ಭಕ್ತರಿಗೆ ಗುಡ್ ನ್ಯೂಸ್ – ಮಾದಪ್ಪನ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ

    Live Tv
    [brid partner=56869869 player=32851 video=960834 autoplay=true]

  • ಹ್ಯಾಕರ್ ಶ್ರೀಕಿಗೂ ಅಮೆರಿಕದ ಬಿಟ್‍ಫಿನೆಕ್ಸ್ ಹ್ಯಾಕ್ ಪ್ರಕರಣಕ್ಕೂ ನಂಟಿನ ಅನುಮಾನ?

    ಹ್ಯಾಕರ್ ಶ್ರೀಕಿಗೂ ಅಮೆರಿಕದ ಬಿಟ್‍ಫಿನೆಕ್ಸ್ ಹ್ಯಾಕ್ ಪ್ರಕರಣಕ್ಕೂ ನಂಟಿನ ಅನುಮಾನ?

    ಬೆಂಗಳೂರು: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿ ಸೈಲೆಂಟ್ ಆಗಿದ್ದ ಬಿಟ್‍ಕಾಯಿನ್ ಹಗರಣ ಮತ್ತೆ ಸುದ್ದಿಗೆ ಬಂದಿದೆ. ಬಿಜೆಪಿಯ ಧರ್ಮರಾಜಕಾರಣಕ್ಕೆ ಕಾಂಗ್ರೆಸ್ ಮತ್ತೆ ಬಿಟ್‍ಕಾಯಿನ್ ಪ್ರತ್ಯಸ್ತ್ರ ಪ್ರಯೋಗಿಸಿದೆ.

    2016ರಲ್ಲಿ ಬಿಟ್‍ಫಿನೆಕ್ಸ್ ಎಕ್ಸ್‌ಚೇಂಚ್  ಹ್ಯಾಕ್ ಪ್ರಕರಣ ಸಂಬಂಧ ಅಮೆರಿಕದ ಗುಪ್ತಚರ ಸಂಸ್ಥೆ (ಎಫ್‍ಬಿಐ) (Federal Bureau Of Investigation) (FBI) ತನಿಖೆ ಚುರುಕು ಮಾಡಿದೆ. ಈ ಪ್ರಕರಣದಲ್ಲಿ ಬಂಧಿತ ದಂಪತಿಗೆ ಭಾರತದ ನಂಟು ಇರೋದು ದೃಢವಾಗಿದೆ. ಹಾಗಾಗಿ, ಕರ್ನಾಟಕ ಹ್ಯಾಕರ್ ಶ್ರೀಕಿಗೂ ಅಮೆರಿಕದ ಬಿಟ್‍ಫಿನೆಕ್ಸ್ ಹ್ಯಾಕ್ ಪ್ರಕರಣಕ್ಕೂ ನಂಟಿನ ಅನುಮಾನ ಮೂಡಿದೆ. ಈ ಸಂಬಂಧ ಎಫ್‍ಬಿಐ ಅಧಿಕಾರಿಗಳು ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರಾ? ಈ ಟೀಮ್ ಕರ್ನಾಟಕಕ್ಕೂ ಬರುತ್ತಾ? ಎಂಬ ಚರ್ಚೆ ಎದ್ದಿದೆ. ಇದನ್ನೂ ಓದಿ: ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ

    ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು, ಕೇಂದ್ರ ಗೃಹ ಸಚಿವರು, ಕರ್ನಾಟಕದ ಮುಖ್ಯಮಂತ್ರಿಗಳು ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ. ಕರ್ನಾಟಕದ ಬಿಜೆಪಿ ಸರ್ಕಾರದ ಅಡಿಯಲ್ಲಿ ನಡೆದ ಭಾರತದ ಅತಿದೊಡ್ಡ ಬಿಟ್‍ಕಾಯಿನ್ ಹಗರಣದ ತನಿಖೆ ಮಾಡಲು ಎಫ್‍ಬಿಐ ಭಾರತದಲ್ಲಿದೆಯೇ? ತನಿಖೆಯ ಹಾಗೂ ರಾಜಕೀಯ ವ್ಯಕ್ತಿಗಳು ಸೇರಿದಂತೆ ಶಂಕಿತರ ವಿವರಗಳನ್ನು ಬಿಡುಗಡೆ ಮಾಡ್ತೀರಾ? ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಬಂಧನದಲ್ಲಿದ್ದಿದ್ದು, ಪರಸ್ಪರ ಸಂಬಂಧವಿದೆಯೇ? 17 ಏಪ್ರಿಲ್ 2021ರಂದು ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಶ್ರೀಕಿ ಬಿಡುಗಡೆಗೊಂಡಿದ್ದರು ಕೂಡ 5 ತಿಂಗಳ ಬಳಿಕ ಇಂಟರ್‌ಪೋಲ್‌ಗೆ ಬಿಜೆಪಿ ಸರ್ಕಾರ ಈ ಬಗ್ಗೆ ಮಾಹಿತಿ ನೀಡಿದೆ. ಈ ಪ್ರಕರಣದ ಬಗ್ಗೆ ಕರ್ನಾಟಕ ಸರ್ಕಾರ ಯಾಕೆ ಎನ್‍ಐಎ, ಎಸ್‍ಎಫ್‍ಐಒ, ಇಡಿ ತನಿಖೆಗೆ ವಹಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್

  • ತಾಲಿಬಾನ್‍ನಲ್ಲಿ ಸರ್ಕಾರ ಘೋಷಣೆ – ಮೋಸ್ಟ್ ವಾಂಟೆಡ್ ಉಗ್ರ ಈಗ ಆಂತರಿಕ ಸಚಿವ

    ತಾಲಿಬಾನ್‍ನಲ್ಲಿ ಸರ್ಕಾರ ಘೋಷಣೆ – ಮೋಸ್ಟ್ ವಾಂಟೆಡ್ ಉಗ್ರ ಈಗ ಆಂತರಿಕ ಸಚಿವ

    ಕಾಬೂಲ್: ಅಧಿಕಾರಕ್ಕಾಗಿ ತಾಲಿಬಾನಿಗಳ ನಡುವೆ ಕಿತ್ತಾಟ, ಅಸಮಾಧಾನದ ನಡುವೆಯೇ ಹೊಸ ಸರ್ಕಾರದ ಘೋಷಣೆ ಆಗಿದೆ. ತಾಲಿಬಾನ್ ಸರ್ಕಾರದ ಹಂಗಾಮಿ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್, ಉಪಪ್ರಧಾನಿಯಾಗಿ ಮುಲ್ಲಾ ಬರಾದರ್ ನೇಮಕವಾಗಿದ್ದಾರೆ.

    ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹೆದ್ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ರಚನೆಯ ಮಾಹಿತಿಯನ್ನು ನೀಡಿದ್ದಾರೆ. ಎರಡನೇ ಉಪಪ್ರಧಾನಿಯಾಗಿ ಮುವಾಲ್ವಿ ಹನ್ನಾಪಿ, ರಕ್ಷಣಾ ಸಚಿವರಾಗಿ ಮುಲ್ಲಾ ಯಾಕೂಬ್, ಆಂತರಿಕ ಸಚಿವರಾಗಿ ಹಕ್ಕಾನಿ ನೆಟ್‍ವರ್ಕ್‍ನ ಅಂತಾರಾಷ್ಟ್ರೀಯ ಉಗ್ರ ಸಿರಾಜುದ್ದೀನ್ ಹಕ್ಕಾನಿ ಸೇರಿ 33 ಮಂದಿಯನ್ನು ನೇಮಕ ಮಾಡಲಾಗಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಎಫ್‍ಬಿಐ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ತಾಲಿಬಾನ್‍ನ ಅತ್ಯುನ್ನತ ಮಂಡಳಿ `ರೆಹಬರಿ ಷುರಾ’ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಾಕ್ ಆಪೇಕ್ಷೆಯಂತೆ ಬರಾದಾರ್ ಹೆಸರನ್ನು ಪ್ರಧಾನಿ ಹುದ್ದೆಗೆ ಪರಿಗಣಿಸಿಲ್ಲ. ಜೊತೆಗೆ ಉಗ್ರರ ಸರ್ಕಾರದಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸಿಲ್ಲ. ಇದನ್ನೂ ಓದಿ: ಪತಿ, ಮಕ್ಕಳ ಮುಂದೆಯೇ 8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯ ಹತ್ಯೆಗೈದ್ರು! 

    ಸೆಪ್ಟೆಂಬರ್ 11ರಂದು ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. 2001 ಇದೇ ದಿನ ಅಮೆರಿಕ ಮೇಲೆ ಅಲ್‍ಕೈದಾ ದಾಳಿ ನಡೆಸಿತ್ತು. ಕಳೆದ ಶುಕ್ರವಾರ ನಡೆದ ಗದ್ದುಗೆ ಗಲಾಟೆಯಲ್ಲಿ ತಾಲಿಬಾನ್ ಸಹಸಂಸ್ಥಾಪಕ ಮುಲ್ಲಾ ಬರಾದಾರ್ ಮೇಲೆ ಹಕ್ಕಾನಿ ಗುಂಪು ಹಲ್ಲೆ ಮಾಡಿ ಗಾಯಗೊಳಿಸಿದೆ ಎಂದು ವರದಿಯಾಗಿತ್ತು. ಪರಿಸ್ಥಿತಿ ಮೀರಬಹುದು ಎಂದು ಅಂದಾಜಿಸಿದ ಪಾಕಿಸ್ತಾನದ ಐಎಸ್‍ಐ ಮುಖ್ಯಸ್ಥ ಫಯಾಜ್ ಹಮೀದ್ ಕೂಡಲೇ ಕಾಬೂಲ್‍ಗೆ ತೆರಳಿದ್ದರು. ಇದನ್ನೂ ಓದಿ: ಅಂದು ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ – ಇಂದು ಅಮೆರಿಕದ ವಿರುದ್ಧ ಸಿಟ್ಟು

  • ಎಫ್‍ಬಿಐನ ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ಭಾರತೀಯನ ಹೆಸರು

    ಎಫ್‍ಬಿಐನ ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ಭಾರತೀಯನ ಹೆಸರು

    ವಾಷಿಂಗ್ಟನ್: ಎಫ್‍ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ಈಗ ಭಾರತೀಯ ಮೂಲದ ಆರೋಪಿಯೊಬ್ಬನ ಹೆಸರು ಸೇರಿದೆ.

    ತನ್ನ ಹೆಂಡತಿಯನ್ನು ಅಮೆರಿಕದ ರೆಸ್ಟೊರೆಂಟ್‍ವೊಂದರಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾದ 26 ವರ್ಷದ ಭದ್ರೇಶ್‍ಕುಮಾರ್ ಚೇತನ್‍ಭಾಯ್ ಪಟೇಲ್ 2 ವರ್ಷದ ಹಿಂದೆ ಪರಾರಿಯಾಗಿದ್ದು, ಮಂಗಳವಾರದಂದು ಆತನ ಹೆಸರನ್ನು ಎಫ್‍ಬಿಐಗೆ ಬಹು ಮುಖ್ಯವಾಗಿ ಬೇಕಿರುವ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ ಭದ್ರೇಶ್ ಕುಮಾರ್ ಬಗ್ಗೆ ಸುಳಿವು ಕೊಟ್ಟವರಿಗೆ 1 ಲಕ್ಷ ಡಾಲರ್(ಅಂದಾಜು 65 ಲಕ್ಷ ರೂ) ಬಹುಮಾನ ನೀಡುವುದಾಗಿ ಹೇಳಿದೆ.

    ಭದ್ರೇಶ್ ಕುಮಾರ್ ಹಾಗೂ ಪತ್ನಿ ಪಲಕ್ ಪಟೇಲ್ ಒಂದೇ ರೆಸ್ಟೊರೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದರು. 2015ರ ಏಪ್ರಿಲ್ 12ರಂದು ಮೆರಿಲ್ಯಾಂಡ್‍ನ ಹ್ಯಾನೋವರ್‍ನಲ್ಲಿ ರೆಸ್ಟೊರೆಂಟ್‍ನ ಅಡುಗೆಮನೆಯಲ್ಲಿ ಭದ್ರೇಶ್ ಕುಮಾರ್‍ ಪತ್ನಿಯನ್ನ ದೊಡ್ಡ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಲಾಗಿತ್ತು.

    ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಕಾರಣ ಭದ್ರೇಶ್ ಕುಮಾರ್ ಹೆಸರು ಈಗ ಎಫ್‍ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿದೆ ಎಂದು ಎಫ್‍ಬಿಐನ ವಿಶೇಷ ಏಜೆಂಟ್ ಜಾರ್ಡನ್ ಬಿ. ಜಾನ್ಸನ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಬಿಐ ರೆಸ್ಟೊರೆಂಟಿನ ಸಿಸಿಟಿವಿ ದೃಶ್ಯಾವಳಿಯನ್ನ ಬಿಡುಗಡೆ ಮಾಡಿತ್ತು. ಕೊಲೆ ನಡೆದ ದಿನ ಭದ್ರೇಶ್ ಕುಮಾರ್ ಹಾಗೂ ಆತನ ಪತ್ನಿ ಪಲಕ್ ರೆಸ್ಟೊರೆಂಟ್‍ನ ಅಡುಗೆಮನೆಯಲ್ಲಿ ಒಟ್ಟಿಗೆ ನಡೆದುಕೊಂಡು ಹೋಗಿದ್ದಾರೆ. ನಂತರ ಭದ್ರೇಶ್ ಮಾತ್ರ ಹೊರಬಂದಿದ್ದು ಓವನ್ ಆಫ್ ಮಾಡಿ ಅಲ್ಲಿಂದ ಹೊರಟುಹೋಗಿದ್ದಾನೆ.

    ಭದ್ರೇಶ್ ಕುಮಾರ್ ವಿರುದ್ಧ ಹಲ್ಲೆ, ಕೊಲೆ ಹಾಗೂ ಅಸ್ತ್ರ ಹೊಂದಿದ್ದ ಆರೋಪದಡಿ ಪ್ರಕರಣ ದಾಖಲಾಗಿದೆ. 2015ರ ಏಪ್ರಿಲ್ 13ರಂದು ಬೆಳಿಗ್ಗೆ 10 ಗಂಟೆ ವೇಳೆಯಲ್ಲಿ ಭದ್ರೇಶ್, ನ್ಯೂ ಜೆರ್ಸಿಯ ನೇವಾರ್ಕ್ ಪೆನ್ ಸ್ಟೇಷನ್‍ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಎಂದು ವರದಿಯಾಗಿದೆ. ಭದ್ರೇಶ್ ಕುಮಾರ್ ಮೂಲತಃ ಗುಜರಾತ್‍ನವನಾಗಿದ್ದು, ಅಮೆರಿಕದಲ್ಲಿರಲು ವೀಸಾ ಹೊಂದಿದ್ದ. ಆದ್ರೆ ಆತನ ವೀಸಾ ಅವಧಿ ಮುಗಿದಿದ್ದು, ಕಾನೂನುಬದ್ಧವಾಗಿ ದೇಶ ಬಿಟ್ಟು ಹೋಗಿರೋ ಸಾಧ್ಯತೆಗಳಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

    ಪಲಕ್ ಭಾರತಕ್ಕೆ ಹಿಂದಿರುಗಬೇಕೆಂದಿದ್ದರು. ಆದ್ರೆ ಇದಕ್ಕೆ ಭದ್ರೇಶ್‍ನ ವಿರೋಧವಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಭದ್ರೇಶ್ ಪತ್ತೆಗಾಗಿ ಈವರೆಗೆ ಸಾಕಷ್ಟು ಪ್ರಯತ್ನ ನಡೆಸಲಾಗಿದ್ದು, ಯಾವುದೂ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    https://www.youtube.com/watch?v=UZX6VXi9KkE