Tag: FBI

  • ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ಶುರು

    ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ಶುರು

    – ಪಂಜಾಬ್‌ನಾದ್ಯಂತ 16 ಕಡೆ ಬಾಂಬ್‌ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಪಾಸಿಯಾ

    ನವದೆಹಲಿ: ಪಂಜಾಬ್‌ನಾದ್ಯಂತ ಕನಿಷ್ಠ 16 ಭಯೋತ್ಪಾದಕ ದಾಳಿಗಳ ಪ್ರಮುಖ ಆರೋಪಿ ಖಲಿಸ್ತಾನಿ ಉಗ್ರ (Khalistani Terrorist) ಹ್ಯಾಪಿ ಪಾಸಿಯಾನನ್ನು (Happy Passia) ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲು ಪ್ರಕ್ರಿಯೆ ಶುರುವಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಭಾರತೀಯ ಭದ್ರತಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ಲಭಿಸಿದ್ದು, ಈ ಕಾರ್ಯಾಚರಣೆ ಯಶಸ್ವಿಗೊಳಿಸಲು ಶತ ಪ್ರಯತ್ನಗಳು ನಡೆಯುತ್ತಿವೆ.

    ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಜೊತೆಗೆ ಮತ್ತು ಭಯೋತ್ಪಾದಕ ಗುಂಪು ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್ (BKI)ನಲ್ಲಿ ಗುರುತಿಸಿಕೊಂಡಿದ್ದ ಹ್ಯಾಪಿ ಪಾಸಿಯಾ 2016-17ರ ಸಮಯದಲ್ಲಿ ಪಂಜಾಬ್‌ನಾದ್ಯಂತ ನಡೆದ 16 ಬಾಂಬ್‌ ಸ್ಫೋಟಕ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ. ಆ ಸಂದರ್ಭದಲ್ಲಿ ಗುರ್ದಾಸ್‌ಪುರ, ದಿನಾನಗರ ಮತ್ತು ಇತರ ಕಡೆಗಳಲ್ಲಿ ನಡೆದ ಗ್ರೆನೇಡ್ ದಾಳಿಗಳ ರುವಾರಿಯೂ ಈತನಾಗಿದ್ದ. ಈ ದಾಳಿಗಳು ಭಾರತದ ಭದ್ರತೆಗೆ ಧಕ್ಕೆಯನ್ನುಂಟುಮಾಡಿದ್ದವು. ಈತನ ವಿರುದ್ಧ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ, ಮತ್ತು ಇಂಟರ್‌ಪೋಲ್‌ನಿಂದ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಲ್ಲಿದೆ.

    ಮೂಲಗಳ ಪ್ರಕಾರ, ಅಮೆರಿಕ ಪಾಸಿಯಾನನ್ನು ಗುರುತಿಸಲಾಗಿದ್ದು, ಭಾರತೀಯ ಗುಪ್ತಚರ ಸಂಸ್ಥೆಗಳ ಸಹಕಾರದೊಂದಿಗೆ ಈತನನ್ನು ವಶಕ್ಕೆ ತೆಗೆದುಕೊಂಡಿವೆ. ಪಂಜಾಬ್‌ನ ಅಮೃತಸರದ ನಿವಾಸಿಯಾದ ಪಾಸಿಯಾನನ್ನು ಕಳೆದ ಏಪ್ರಿಲ್ 18 ರಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಮತ್ತು ICE ತಂಡಗಳು ಬಂಧಿಸಿರುವುದಾಗಿ FBI ನಿರ್ದೇಶಕ ಕಾಶ್ ಪಟೇಲ್ ತಿಳಿಸಿದ್ದರು. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾರಿಂದ ಬೆಂಗಳೂರು ನೀರುಕರಡಿ ಪ್ರಯೋಗ ಪೂರ್ಣ

    ಇದೀಗ ಗಡೀಪಾರು ಪ್ರಕ್ರಿಯೆಯು ಈಗ ರಾಜತಾಂತ್ರಿಕ ಮತ್ತು ಕಾನೂನಾತ್ಮಕ ಹಂತದಲ್ಲಿ ಮುಂದುವರೆದಿದೆ. ಭಾರತ ಮತ್ತು ಅಮೆರಿಕ ನಡುವಿನ ಗಡೀಪಾರು ಒಪ್ಪಂದದ ಅಡಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಈತನನ್ನು ಭಾರತಕ್ಕೆ ಕರೆತರುವ ಸಾಧ್ಯತೆ ಇದೆ. ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್‌ ವಿರುದ್ಧ ಮೋದಿ ಕಟು ವಾಗ್ದಾಳಿ – ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ

    ಈ ಬೆಳವಣಿಗೆಯನ್ನು ಭಾರತೀಯ ಭದ್ರತಾ ಸಂಸ್ಥೆಗಳು ಒಂದು ಪ್ರಮುಖ ಯಶಸ್ಸಾಗಿ ಪರಿಗಣಿಸಿವೆ. ಹ್ಯಾಪಿ ಪಾಸಿಯಾನಂತಹ ಆರೋಪಿಗಳನ್ನು ನ್ಯಾಯಂಗದ ಮುಂದೆ ತಂದು ನಿಲ್ಲಿಸೋದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಭದ್ರತಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

  • ಕೃಷಿ ಬೆಳೆಯನ್ನೇ ಧ್ವಂಸ ಮಾಡೋ ಅಪಾಯಕಾರಿ  ಶಿಲೀಂಧ್ರ ಕಳ್ಳ ಸಾಗಾಣೆ-ಅಮೆರಿಕದಲ್ಲಿ ಇಬ್ಬರು ಚೀನಿಯರು ಅರೆಸ್ಟ್‌

    ಕೃಷಿ ಬೆಳೆಯನ್ನೇ ಧ್ವಂಸ ಮಾಡೋ ಅಪಾಯಕಾರಿ ಶಿಲೀಂಧ್ರ ಕಳ್ಳ ಸಾಗಾಣೆ-ಅಮೆರಿಕದಲ್ಲಿ ಇಬ್ಬರು ಚೀನಿಯರು ಅರೆಸ್ಟ್‌

    ವಾಷಿಂಗ್ಟನ್‌: ಕೃಷಿ ಬೆಳೆಯನ್ನೇ ಹಾಳು ಮಾಡಬಹುದಾದ ಅಪಾಯಕಾರಿ ಶಿಲೀಂಧ್ರವನ್ನು ಕಳ್ಳ ಸಾಗಾಣೆ ಮಾಡಿದ ಆರೋಪದ ಅಡಿ ಇಬ್ಬರು ಚೀನೀ ಪ್ರಜೆಗಳನ್ನು (China Citizen) ಅಮೆರಿಕದಲ್ಲಿ (USA) ಬಂಧಿಸಲಾಗಿದೆ

    ಎಫ್‌ಬಿಐ (FBI) ನಿರ್ದೇಶಕ ಕಾಶ್ ಪಟೇಲ್ (Kash Patel) ಮಂಗಳವಾರ ಇಬ್ಬರು ಚೀನಿ ಸಂಶೋಧಕರನ್ನು(Chinese Researcher) ಬಂಧಿಸಿದ್ದನ್ನು ದೃಢಡಪಡಿಸಿದ್ದಾರೆ. ಎಕ್ಸ್‌ ಖಾತೆಯಲ್ಲಿ ವಿವರವಾದ ಪೋಸ್ಟ್‌ ಪ್ರಕಟಿಸಿ ಇಬ್ಬರ ಕೃತ್ಯವನ್ನು ಬಹಿರಂಗಪಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ದೇಶಕ್ಕೆ ಅಪಾಯಕಾರಿ ಜೈವಿಕ ರೋಗಕಾರಕವನ್ನು (Hazardous Biological Pathogen) ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ  ಚೀನಿ ಸಂಶೋಧಕಿಯನ್ನು ಎಫ್‌ಬಿಐ ಬಂಧಿಸಿದೆ.

     

    ಯುನ್‌ಕಿಂಗ್ ಜಿಯಾನ್ “ಫ್ಯುಸಾರಿಯಮ್ ಗ್ರಾಮಿನೇರಮ್” ಎಂಬ ಅಪಾಯಕಾರಿ ಶಿಲೀಂಧ್ರವನ್ನು ತಾನು ಕೆಲಸ ಮಾಡುವ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗಾಗಿ ಅಮೆರಿಕಕ್ಕೆ ಕಳ್ಳಸಾಗಣೆ ಮಾಡಿದ್ದಾಳೆ. ಈ ಶಿಲೀಂಧ್ರವು ಗೋಧಿ, ಬಾರ್ಲಿ, ಜೋಳ ಮತ್ತು ಭತ್ತ ಬೆಳೆಗೆ ಬರುವ ಹೆಡ್ ಬ್ಲೈಟ್(ಏಕದಳ ಬೆಳೆಗಳ ಮೇಲೆ ಪರಿಣಾಮ ಬೀರುವ ಶಿಲೀಂಧ್ರ ರೋಗ. ಈ ರೋಗ ಬಂದರೆ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ) ರೋಗಕ್ಕೆ ಕಾರಣವಾಗಬಹುದು. ಈ ಬೆಳೆಯನ್ನು ಸೇವಿಸಿದರೆ ಜನರ ಮತ್ತು ಜಾನುವಾರುಗಳ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಈ ಅಪಾಯಕಾರಿ ಶಿಲೀಂಧ್ರದಿಂದಾಗಿ ಪ್ರತಿ ವರ್ಷ ವಿಶ್ವಾದ್ಯಂತ ಶತಕೋಟಿ ಡಾಲರ್‌ ಆರ್ಥಿಕ ನಷ್ಟವಾಗುತ್ತಿದೆ.

    ಚೀನೀ ಕಮ್ಯುನಿಸ್ಟ್ ಪಕ್ಷಕ್ಕೆ ತಾನು ನಿಷ್ಠೆಯನ್ನು ಹೊಂದಿರುವುದಾಗಿ ಜಿಯಾನ್ ಹೇಳಿದ್ದಾಳೆ. ಚೀನಾದಲ್ಲಿ ಈ ರೋಗಕಾರಕದ ಮೇಲೆ ಇದೇ ರೀತಿಯ ಕೆಲಸಕ್ಕಾಗಿ ಚೀನಾ ಸರ್ಕಾರದಿಂದ ಹಣವನ್ನು ಪಡೆದಿದ್ದಕ್ಕೆ  ಈಕೆಯ ಬಳಿ ಪುರಾವೆಗಳು ಸಿಕ್ಕಿದೆ. ಇದನ್ನೂ ಓದಿ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು – ಕಾರಣ ಏನು?

    ಹೆಡ್ ಬ್ಲೈಟ್ ರೋಗಕ್ಕೆ ತುತ್ತಾದ ಗೋಧಿ ಬೆಳೆ

    ಜಿಯಾನ್‌ ಗೆಳೆಯ ಜುನ್ಯೊಂಗ್ ಲಿಯು ಇದೇ ರೋಗಕಾರಕದ ಬಗ್ಗೆ ಸಂಶೋಧನೆ ನಡೆಸುವ ಚೀನೀ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆ. ಆರಂಭದಲ್ಲಿ ತನ್ನ ಮೇಲೆ ಬಂದ ಆರೋಪಗಳನ್ನು ಅಲ್ಲಗೆಳೆದಿದ್ದ. ನಂತರ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮಿಚಿಗನ್ ವಿಶ್ವವಿದ್ಯಾಲಯಲ್ಲಿ ಸಂಶೋಧನೆ ನಡೆಸಲು ಡೆಟ್ರಾಯಿಟ್ ಮೆಟ್ರೋಪಾಲಿಟನ್ ವಿಮಾನ ನಿಲ್ದಾಣದ ಮೂಲಕ ಅಮೆರಿಕಕ್ಕೆ ಫ್ಯುಸಾರಿಯಮ್ ಗ್ರಾಮಿನೇರಮ್ ಅನ್ನು ಕಳ್ಳಸಾಗಣೆ ಮಾಡಿರುವುದಾಗಿ ಹೇಳಿದ್ದಾನೆ.

    ಇಬ್ಬರ ಮೇಲೆ ಪಿತೂರಿ, ವಸ್ತುಗಳ ಕಳ್ಳ ಸಾಗಾಣೆ, ಸುಳ್ಳು ಹೇಳಿಕೆ ಮತ್ತು ವೀಸಾ ವಂಚನೆ ಎಸಗಿದ ಆರೋಪವನ್ನು ಹೊರಿಸಲಾಗಿದೆ. ಅಮೆರಿಕದ ಆಹಾರ ಪೂರೈಕೆ ವ್ಯವಸ್ಥೆಯನ್ನು ಹಾಳು ಮಾಡಲು ಚೀನಾ ತನ್ನ ಕಾರ್ಯಕರ್ತರು ಮತ್ತು ಸಂಶೋಧಕರನ್ನು ನಿಯೋಜಿಸಿರುವುದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ. ಅಮರಿಕದ ಜನರು ಮತ್ತು ಆರ್ಥಿಕತೆಯನ್ನು ಗುರಿಯಾಗಿಸಿಕೊಂಡು ಚೀನಾ ಕೆಲಸ ಮಾಡುತ್ತಿದೆ. ಈ ಪ್ರಕರಣವನ್ನು ಬಯಲಿಗೆಳೆಯುವ ಮೂಲಕ ನಮ್ಮ ಎಫ್‌ಬಿಐ ತಂಡ ಅತ್ಯುತ್ತಮ ಕೆಲಸ ಮಾಡಿದೆ.

  • ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

    ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

    ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಕಾಶ್ ಪಟೇಲ್ (Kash Patel) ಅವರಿಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI)ನ 9ನೇ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ ಅಮೆರಿಕದಲ್ಲೂ ಹಿಂದೂ ಸಂಸ್ಕೃತಿ ಮರೆಯದ ಕಾಶ್‌ ಪಟೇಲ್ ಭಗವದ್ಗೀತೆ (Bhagavad Gita) ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ್ದಾರೆ.

    ಶ್ವೇತಭವನದ ಕ್ಯಾಂಪಸ್‌ನಲ್ಲಿರುವ ಐಸೆನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಭವನದಲ್ಲಿ (EEOB) ಪ್ರಮಾಣ ವಚನ ಸ್ವೀಕರಿಸಿದರು. ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಅವರು ಪ್ರಮಾಣ ವಚನ ಬೋಧಿಸಿದರು. ಇದನ್ನೂ ಓದಿ: ಅಮೆರಿಕದ ಎಫ್‌ಬಿಐಗೆ ಗುಜರಾತ್‌ ಮೂಲದ ಕಾಶ್‌ ಪಟೇಲ್‌ ಬಾಸ್‌ – ನೇಮಕವಾದ ಬೆನ್ನಲ್ಲೇ ಬಿಗ್‌ ವಾರ್ನಿಂಗ್‌

    ಪಟೇಲ್ ಪ್ರಮಾಣ ವಚನ ಸ್ವೀಕರಿಸುವಾಗ ಅವರ ಗೆಳತಿ ಮತ್ತು ಕುಟುಂಬ ಸದಸ್ಯರು ಅವರ ಪಕ್ಕದಲ್ಲಿ ನಿಂತಿದ್ದರು ಮತ್ತು ಕುಟುಂಬ ಇತರ ಸದಸ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಇದೀಗ ಎಫ್‌ಬಿಐನ ನಿರ್ಗಮಿತ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಅವರ ನಂತರ ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್‌ ಪಟೇಲ್‌ ಮುಂದುವರಿಯಲಿದ್ದಾರೆ.

    ಟ್ರಂಪ್‌ ಶ್ಲಾಘನೆ:
    ಇನ್ನೂ ಕಾಶ್‌ ಪಟೇಲ್‌ ಅವರ ನೇಮಕಾತಿಯನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ನಾನು ಕಾಶ್‌ ಪಟೇಲ್‌ರನ್ನ ಗೌರವಿಸುತ್ತೇನೆ. ಎಫ್‌ಬಿಐನ ಸಿಬ್ಬಂದಿ ಅವರ ಮೇಲೆ ಗೌರವ ಹೊಂದಿದ್ದರಿಂದಲೇ, ಹಾಗಾಗಿಯೇ ಅವರ ಆಯ್ಕೆಯನ್ನು ಸಮ್ಮತಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ

    ಪ್ರಮಾಣ ಸ್ವೀಕಾರಕ್ಕೂ ಮುನ್ನವೇ ಬಿಗ್‌ ವಾರ್ನಿಂಗ್‌:
    ಎಫ್‌ಬಿಐ ನಿರ್ದೇಶಕರಾಗಿ ನೇಮಕ ಮಾಡಿ ಟ್ರಂಪ್‌ ಆದೇಶದ ಬೆನ್ನಲ್ಲೇ ಕಾಶ್‌ ಪಟೇಲ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಎಚ್ಚರಿಕೆಯೊಂದನ್ನ ನೀಡಿದ್ದರು. ಎಫ್‌ಬಿಐ ಒಂದು ಪರಂಪರೆಯನ್ನು ಹೊಂದಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಮ್ಮ ನ್ಯಾಯ ವ್ಯವಸ್ಥೆಯು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದೆ, ಈ ಬೆಳವಣಿಗೆ ಇಂದೇ ಕೊನೆಗೊಳ್ಳಬೇಕು. ಅಮೆರಿಕನ್ನರು (American people) ಹೆಮ್ಮೆ ಪಡುವಂತೆ ಎಫ್‌ಬಿಐ ಅನ್ನು ಮರುನಿರ್ಮಾಣ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ. ಅಲ್ಲದೇ ಇದನ್ನು ನಮ್ಮ ಎಚ್ಚರಿಕೆ ಎಂದೇ ಭಾವಿಸಿ ಅಮೆರಿಕನ್ನರಿಗೆ ಹಾನಿ ಮಾಡಲು ಬಯಸುವವರು ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ಎಚ್ಚರಿಸಿದ್ದರು.

    ಕಾಶ್ ಪಟೇಲ್ ಯಾರು?
    ಕಾಶ್ ಪಟೇಲ್ ತಂದೆ-ತಾಯಿ ಗುಜರಾತ್ ಮೂಲದವರು. ಪಟೇಲ್ ಪೋಷಕರು ಅಮೆರಿಕದಲ್ಲಿ ನೆಲೆಸುವುದಕ್ಕಿಂತ ಮೊದಲು ಉಗಾಂಡದಲ್ಲಿದ್ದರು. ಅಲ್ಲಿಂದ ಕೆನಡಾಗೆ ಬಂದರು. ಈ ವೇಳೆ ಕಾಶ್ ಪಟೇಲ್ ತಂದೆಗೆ ಅಮೆರಿಕ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿ ಕೆಲಸ ಸಿಕ್ಕಿದ್ದರಿಂದ ಅವರು ಕುಟುಂಬ ಸಮೇತರಾಗಿ ಅಮೆರಿಕಾಗೆ ಬಂದು ನೆಲೆಸಿದರು.

    ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ 1980ರಲ್ಲಿ ಕಾಶ್ ಪಟೇಲ್ ಜನಿಸಿದರು. ಇಲ್ಲಿಯೇ ಅವರು ಕಾಲೇಜು ಶಿಕ್ಷಣ ಪಡೆದರು. ನಂತರ ರಿಚ್ಚಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ನಲ್ಲಿ ಪದವಿ ಪಡೆದರು. ಸಾರ್ವಜನಿಕ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಅವರು ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ಇದನ್ನೂ ಓದಿ: ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್‌ ಮಾಡಲು ಅನ್ನಿ ನೈಟ್ ತಯಾರಿ

    ಕಾಶ್ ಪಟೇಲ್‌ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯ ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ. ಪಟೇಲ್‌ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವಾರ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರ ಹತ್ಯೆ ಸೇರಿದಂತೆ ಅಮೆರಿಕದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದ್ದಾರೆ.

  • ಅಮೆರಿಕದ ಎಫ್‌ಬಿಐಗೆ ಗುಜರಾತ್‌ ಮೂಲದ ಕಾಶ್‌ ಪಟೇಲ್‌ ಬಾಸ್‌ – ನೇಮಕವಾದ ಬೆನ್ನಲ್ಲೇ ಬಿಗ್‌ ವಾರ್ನಿಂಗ್‌

    ಅಮೆರಿಕದ ಎಫ್‌ಬಿಐಗೆ ಗುಜರಾತ್‌ ಮೂಲದ ಕಾಶ್‌ ಪಟೇಲ್‌ ಬಾಸ್‌ – ನೇಮಕವಾದ ಬೆನ್ನಲ್ಲೇ ಬಿಗ್‌ ವಾರ್ನಿಂಗ್‌

    ವಾಷಿಂಗ್ಟನ್‌: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್‌ ಬ್ಯುರೋ ಆಫ್‌ ಇನ್‌ವೆಸ್ಟಿಗೇಷನ್ (FBI) ನಿರ್ದೇಶಕರಾಗಿ ಭಾರತ ಮೂಲದ ಕಾಶ್‌ ಪಟೇಲ್‌ ನೇಮಕಗೊಂಡಿದ್ದಾರೆ. ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್‌ ಪಟೇಲ್‌ ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಮಾಹಿತಿಯನ್ನು‌ ಶ್ವೇತಭವನದ ಅಧಿಕಾರಿ ಡಾನ್ ಸ್ಕ್ಯಾವಿನೋ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಆದೇಶದ ಬೆನ್ನಲ್ಲೇ ಭಾರತೀಯ ಮೂಲದ (Indian-origin) ಕಾಶ್‌ ಪಟೇಲ್‌, ಟ್ರಂಪ್‌ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಎಫ್‌ಬಿಐನ 9ನೇ ನಿರ್ದೇಶಕನಾಗಿದ್ದಕ್ಕೆ ನನಗೆ ಗೌರವವಿದೆ. ನಿಮ್ಮ ಅಚಲವಾದ ವಿಶ್ವಾಸ ಮತ್ತು ಬೆಂಬಲಕ್ಕಾಗಿ‌ ಟ್ರಂಪ್‌ ಹಾಗೂ ಅಟಾರ್ನಿ ಜನರಲ್ ಬೋಂಡಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ

    ಮುಂದುವರಿದು.. ಎಫ್‌ಬಿಐ ಒಂದು ಪರಂಪರೆಯನ್ನು ಹೊಂದಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಮ್ಮ ನ್ಯಾಯ ವ್ಯವಸ್ಥೆಯು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದೆ, ಈ ಬೆಳವಣಿಗೆ ಇಂದೇ ಕೊನೆಗೊಳ್ಳಬೇಕು. ಅಮೆರಿಕನ್ನರು (American people) ಹೆಮ್ಮೆ ಪಡುವಂತೆ ಎಫ್‌ಬಿಐ ಅನ್ನು ಮರುನಿರ್ಮಾಣ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ. ಅಲ್ಲದೇ ಇದನ್ನು ನಮ್ಮ ಎಚ್ಚರಿಕೆ ಎಂದೇ ಭಾವಿಸಿ ಅಮೆರಿಕನ್ನರಿಗೆ ಹಾನಿ ಮಾಡಲು ಬಯಸುವವರು ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ.

    ಕಾಶ್ ಪಟೇಲ್ ಯಾರು?
    ಕಾಶ್ ಪಟೇಲ್ ತಂದೆ-ತಾಯಿ ಗುಜರಾತ್ ಮೂಲದವರು. ಪಟೇಲ್ ಪೋಷಕರು ಅಮೆರಿಕದಲ್ಲಿ ನೆಲೆಸುವುದಕ್ಕಿಂತ ಮೊದಲು ಉಗಾಂಡದಲ್ಲಿದ್ದರು. ಅಲ್ಲಿಂದ ಕೆನಡಾಗೆ ಬಂದರು. ಈ ವೇಳೆ ಕಾಶ್ ಪಟೇಲ್ ತಂದೆಗೆ ಅಮೆರಿಕ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿ ಕೆಲಸ ಸಿಕ್ಕಿದ್ದರಿಂದ ಅವರು ಕುಟುಂಬ ಸಮೇತರಾಗಿ ಅಮೆರಿಕಾಗೆ ಬಂದು ನೆಲೆಸಿದರು. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ 1980ರಲ್ಲಿ ಕಾಶ್ ಪಟೇಲ್ ಜನಿಸಿದರು. ಇಲ್ಲಿಯೇ ಅವರು ಕಾಲೇಜು ಶಿಕ್ಷಣ ಪಡೆದರು. ನಂತರ ರಿಚ್ಚಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ನಲ್ಲಿ ಪದವಿ ಪಡೆದರು. ಸಾರ್ವಜನಿಕ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಅವರು ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳಲ್ಲಿ ಕೆಲಸ ಮಾಡಿದರು.

    ಕಾಶ್ ಪಟೇಲ್‌ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯ ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ. ಪಟೇಲ್‌ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವಾರ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರ ಹತ್ಯೆ ಸೇರಿದಂತೆ ಅಮೆರಿಕದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದ್ದಾರೆ. ಇದನ್ನೂ ಓದಿ: ಪನಾಮದಲ್ಲಿ ಬಂಧಿಯಾಗಿರುವ ಭಾರತೀಯ ವಲಸಿಗರು ಸೇಫ್‌ – ರಾಯಭಾರ ಕಚೇರಿ ಮಾಹಿತಿ

    ಇದಕ್ಕೂ ಮುನ್ನ ಫ್ಲೋರಿಡಾದಲ್ಲಿ ವಕೀಲರಾಗಿ ಕೆಲಸ ಮಾಡಿದ್ದರು, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದರು. ನಂತರ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ ಆಗಿ ಸೇರಿಕೊಂಡರು. ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಡೆಯುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳನ್ನು ನಿರ್ವಹಿಸಿದ್ದರು.

  • ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷಾಗಿ 2ನೇ ಬಾರಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ ಭಾರತ (Indian American) ಮೂಲದ ಕಶ್ಯಪ್ ʻಕಶ್ʼ ಪಟೇಲ್ ಅವರನ್ನ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (FBI) ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಈ ಮೂಲಕ ಟ್ರಂಪ್‌ ಸಂಪುಟಕ್ಕೆ ಆಯ್ಕೆಯಾದ ಭಾರತೀಯ ಮೂಲದ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆ ಕಶ್ಯಪ್ ಅವರದ್ದಾಗಿದೆ.

    ಈ ಮಾಹಿತಿಯನ್ನು ಟ್ರಂಪ್‌ (Donald Trump) ತಮ್ಮ ಟ್ರೂಥ್‌ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕನ್‌ ಪ್ರಜೆ ಕಶ್‌, ನಮ್ಮ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಎಫ್‌ಬಿಐಗೆ ಇನ್ನಷ್ಟು ಸಮಗ್ರತೆಯನ್ನು ತರಲಿದ್ದಾರೆ. ಕಶ್ ಪಟೇಲ್ ಅವರು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ನ ಮುಂದಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬುದನ್ನು ಪ್ರಕಟಿಸಲು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.

    ಯಾರು ಈ ಕಶ್‌?
    ಕಾಶ್ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯವನ್ನು ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ರಷ್ಯಾದ ಹುಸಿ ಬೆದರಿಕೆ ಅನಾವರಣಗೊಳಿಸುವಲ್ಲಿ ಕಶ್ಯಪ್‌ ಅವರ ಪಾತ್ರ ದೊಡ್ಡದಿದೆ. ಸತ್ಯದ ಪರ ವಕೀಲರಾಗಿ, ಬದ್ಧತೆ ಮತ್ತು ಸಂವಿಧಾನದ ಪರವಾಗಿ ಸದಾ ನಿಂತವರು. ನನ್ನ ಮೊದಲ ಅವಧಿಯಲ್ಲಿ ಕಶ್ ರಕ್ಷಣಾ ವಿಭಾಗದ ಸಿಬ್ಬಂದಿ ಮುಖ್ಯಸ್ಥರಾಗಿ, ರಾಷ್ಟ್ರೀಯ ಗುಪ್ತಚರ ವಿಭಾಗದ ಉಪ ನಿರ್ದೇಶಕರಾಗಿ ಮತ್ತು ಭಯೋತ್ಪಾದೆ ವಿರೋಧಿ ವಿಭಾಗದ ಹಿರಿಯ ನಿರ್ದೇಶಕರಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಸಾಧಾರಣ ಕೆಲಸ ಮಾಡಿದ್ದಾರೆ ಎಂದು ಟ್ರಂಪ್‌ ಗುಣಗಾನ ಮಾಡಿದ್ದಾರೆ.

    ಬರಾಕ್ ಒಬಾಮಾ ಅವರ ಅವಧಿಯಲ್ಲಿ ನ್ಯಾಯ ವಿಭಾಗದಲ್ಲಿ ಅಲ್ಪಕಾಲ ಸೇವೆ ಸಲ್ಲಿಸಿದ್ದ ಕಶ್ಯಪ್‌ ಅವರು 2 ವರ್ಷಗಳ ಕಾಲ ಡೆವಿನ್ ನ್ಯೂನ್ಸ್, ಆರ್-ಕ್ಲಿಫ್ ಪರ ಹಿರಿಯ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. 2017 ಮತ್ತು 2018ರಲ್ಲಿ ಹೌಸ್ ಇಂಟೆಲಿಜೆನ್ಸ್ ಕಮಿಟಿ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ, ಎಫ್‌ಬಿಐ ರಷ್ಯಾ ತನಿಖೆಗೆ ನೆರವಾಗಿದ್ದರು.

    44 ವರ್ಷದ ಕಶ್ಯಪ್‌ ಪಟೇಲ್‌ ಪೂರ್ವ ಆಫ್ರಿಕಾದಿಂದ ವಲಸೆ ಬಂದ ಗುಜರಾತಿ ಮೂಲದ ದಂಪತಿಗೆ ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಜನಿಸಿದರು. ಕಾನೂನು ಪದವಿ ಪಡೆದ ನಂತರ ಫ್ಲೋರಿಡಾದಲ್ಲಿ ವಕೀಲರಾಗಿ ಕೆಲಸ ಮಾಡಿದರು, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದರು. ನಂತರ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ ಆಗಿ ಸೇರಿಕೊಂಡರು. ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಡೆಯುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳನ್ನು ನಿರ್ವಹಿಸಿದ್ದರು.

  • ಉಗ್ರ ಪನ್ನು ಹತ್ಯೆಗೆ ಸಂಚು – ಭಾರತದ ಮಾಜಿ ʻರಾʼ ಅಧಿಕಾರಿ ಮೋಸ್ಟ್‌ ವಾಂಟೆಡ್‌ ಎಂದು ಘೋಷಿಸಿದ FBI

    ಉಗ್ರ ಪನ್ನು ಹತ್ಯೆಗೆ ಸಂಚು – ಭಾರತದ ಮಾಜಿ ʻರಾʼ ಅಧಿಕಾರಿ ಮೋಸ್ಟ್‌ ವಾಂಟೆಡ್‌ ಎಂದು ಘೋಷಿಸಿದ FBI

    ವಾಷಿಂಗ್ಟನ್‌: ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಹತ್ಯೆಗೆ ‌ಸಂಚು ರೂಪಿಸಿದ ಪ್ರಕರಣ ಸಂಬಂಧ ಭಾರತದ ನಿವೃತ್ತ ಗುಪ್ತಚರ ಅಧಿಕಾರಿಯೊಬ್ಬರನ್ನ (RAW Officer) ಮೋಸ್ಟ್‌ ವಾಂಟೆಡ್‌ ಎಂದು ಅಮೆರಿಕದ ಎಫ್‌ಬಿಐ (FBI) ಆಪಾದಿಸಿದೆ.

    ಈ ಪ್ರಕರಣದಲ್ಲಿ ಭಾರತದ ನಿವೃತ್ತ ʻರಾʼ ಅಧಿಕಾರಿ ವಿಕಾಸ್‌ ಯಾದವ್‌ನನ್ನ (39) ಮೋಸ್ಟ್‌ ವಾಂಟೆಡ್‌ (Most Wanted) ಎಂದು ಹೆಸರಿಸಿದೆ. ಅಲ್ಲದೇ ವಿಕಾಸ್‌ ಯಾದವ್‌ನ ಮೂರು ಚಿತ್ರಗಳನ್ನ ಮೋಸ್ಟ್‌ ವಾಂಟೆಡ್‌ ಎನ್ನುವ ಪೋಸ್ಟರ್‌ ಸಹ ಬಿಡುಗಡೆ ಮಾಡಿದ್ದು, ಇದೇ ತಿಂಗಳ ಅಕ್ಟೋಬರ್‌ 10 ರಂದು ಬಂಧನದ ವಾರಂಟ್‌ ಜಾರಿಗೊಳಿಸಿದೆ.

    ಅಮೆರಿಕ (USA) ಹಾಗೂ ಕೆನಡಾದ ದ್ವಿಪೌರತ್ವ ಹೊಂದಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಮಾಡಲು ಈ ನಿವೃತ್ತ ಅಧಿಕಾರಿ ಹಣ ನೀಡಿ ಹಂತಕರನ್ನು ನಿಯೋಜಿಸಿದ್ದರು ಎಂದು ಎಫ್‌ಬಿಐ ಆಪಾದಿಸಿದೆ. ಜೊತೆಗೆ ವಿಕಾಸ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನೂ ದಾಖಲು ಮಾಡಿದೆ. ಈ ಕುರಿತು ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ (DOJ) ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಕ್ರಿಮಿನಲ್ ಆರೋಪಗಳನ್ನು ಪ್ರಕಟಿಸಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ (Christopher Wray) ಅವರು, ಅಮೆರಿಕ ನೆಲದಲ್ಲಿ ಈ ರೀತಿಯ ಕೃತ್ಯ ಎಸಗುವ ಪ್ರಯತ್ನವನ್ನ ಎಫ್‌ಬಿಐ ಸಹಿಸೋದಿಲ್ಲ ಎಂದಿದ್ದಾರೆ. ನಮ್ಮ ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ನಾವು ಸರ್ವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಅಲ್ಲದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಹವರ್ತಿ ನಿಖಿಲ್ ಗುಪ್ತಾ ಎಂಬಾತನನ್ನ ಜೆಕ್ ರಿಪಬ್ಲಿಕ್‌ನಲ್ಲಿ ಬಂಧಿಸಲಾಗಿದೆ ಎಂದು ಸಹ ಕ್ರಿಸ್ಟೋಫರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌, ಜಗತ್ತಿಗೆ ಇದು ಒಳ್ಳೆಯ ದಿನ: ಹಮಾಸ್‌ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಸಂತಸ

    ಅಮೆರಿಕ ಎಫ್‌ಬಿಐ ಆಪಾದನೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಪ್ರತಿಕ್ರಿಯೆ ನೀಡಿದ್ದು, ವಿಕಾಸ್‌ ಯಾದವ್‌ ಎಂಬವರು ಭಾರತ ಸರ್ಕಾರದ ಉದ್ಯೋಗಿಯಲ್ಲ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಮುಖ್ಯಸ್ಥನ ಕೊನೆ ಕ್ಷಣಗಳ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್

    ಏನಿದು ಪ್ರಕರಣ?
    ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ನೆಲೆಸಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಕಳೆದ ವರ್ಷ ಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ಭಾರತ ಸರ್ಕಾರದ ನಿವೃತ್ತ ರಾ ಉದ್ಯೋಗಿಯನ್ನು ವಿಕಾಸ್‌ನನ್ನ ಸಿಸಿ-1 (ಸಹ ಸಂಚುಕೋರ) ಆರೋಪಿ ಎಂದು ಹೆಸರಿಸಲಾಗಿದೆ.

    18 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಹಲವು ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ನ್ಯೂಯಾರ್ಕ್‌ನಲ್ಲಿ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಡಾಲರ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ಚಿತ್ರವನ್ನೂ ಸಹ ನಮೂದಿಸಲಾಗಿದೆ. ಇದು ಆರೋಪಿ ನಿಖಿಲ್ ಗುಪ್ತಾ ಮತ್ತು ವಿಕಾಸ್ ಯಾದವ್ ಅವರ ಪರವಾಗಿ ಕೊಲೆಗಾರನಿಗೆ ಹತ್ಯೆ ಮಾಡಲು ವ್ಯಕ್ತಿಯೊಬ್ಬರು ಪಾವತಿಸುತ್ತಿದ್ದಾರೆ ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಇದನ್ನೂ ಓದಿ: ಹಮಾಸ್‌ ಈ ಕೆಲಸ ಮಾಡಿದ್ರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ – ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

  • 14ರ ಬಾಲಕಿ ಪಕ್ಕದಲ್ಲಿ ಕುಳಿತು ಹಸ್ತಮೈಥುನ – ಭಾರತೀಯ ಅಮೆರಿಕನ್ ಡಾಕ್ಟರ್‌ ಅರೆಸ್ಟ್‌!

    14ರ ಬಾಲಕಿ ಪಕ್ಕದಲ್ಲಿ ಕುಳಿತು ಹಸ್ತಮೈಥುನ – ಭಾರತೀಯ ಅಮೆರಿಕನ್ ಡಾಕ್ಟರ್‌ ಅರೆಸ್ಟ್‌!

    ವಾಷಿಂಗ್ಟನ್‌: ಯುಎಸ್‌ನ ವಿಶೇಷ ವಿಮಾನದಲ್ಲಿ (US Boston Flight) 14 ವರ್ಷದ ಬಾಲಕಿ ಪಕ್ಕದಲ್ಲಿ ಕುಳಿತು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ 33 ವರ್ಷದ ಭಾರತೀಯ ಅಮೆರಿಕನ್ ವೈದ್ಯನನ್ನ (Indian-American Doctor) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಬಂಧಿಸಿರುವ ಘಟನೆ ಅಮೆರಿಕದ ಮಸಾಚುಸೆಟ್ಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕಳೆದ ಮೇ ತಿಂಗಳಲ್ಲಿ ಬೋಸ್ಟನ್‌ಗೆ (Boston) ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಮಸಾಚುಸೆಟ್ಸ್‌ನ ಡಾ. ಸುದೀಪ್ತ ಮೊಹಾಂತಿ ವೈದ್ಯನನ್ನ ಗುರುವಾರ ಬಂಧಿಸಲಾಗಿದೆ. ಇದನ್ನೂ ಓದಿ: ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್‍ಡಿಕೆ

    ಆ ದಿನ ವಿಮಾನದಲ್ಲಿ ಏನಾಯ್ತು?
    ಬೋಸ್ಟನ್‌ನ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್‌ನಲ್ಲಿ ವೈದ್ಯನಾಗಿರುವ ಡಾ.ಮೊಹಾಂತಿ ಅಂದು ಯುಎಸ್‌ನ ವಿಶೇಷ ವಿಮಾನದಲ್ಲಿ ಮಹಿಳಾ ಸಹಚರರೊಂದಿಗೆ ಪ್ರಯಾಣ ಬೆಳೆಸಿದ್ದ. ವಿಮಾನದಲ್ಲಿ 14ರ ಬಾಲಕಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ವಿಮಾನ ಅರ್ಧದಷ್ಟು ದೂರಕ್ಕೆ ತಲುಪಿತ್ತು. ಆಗ ತನ್ನ ಕುತ್ತಿಗೆವರೆಗೆ ಕಂಬಳಿಯಿಂದ ಮುಚ್ಚಿಕೊಂಡಿದ್ದ ವೈದ್ಯ ಅವನ ಕಾಲು ಮೇಲಕ್ಕೆ ಕೆಳಕ್ಕೆ ಆಡುತ್ತಿರುವುದನ್ನ ಹುಡುಗಿ ಗಮನಿಸಿದಳು.

    ಸ್ವಲ್ಪ ಸಮಯದ ಬಳಿಕ ಕಂಬಳಿ ಕೆಳಗೆ ಬಿದ್ದಿತು. ಆಗ ವೈದ್ಯ ಹಸ್ತಮೈಥುನ ಮಾಡಿಕೊಳ್ಳುವುದನ್ನ ಹುಡುಗಿ ಗಮನಿಸಿದಳು. ನಂತರ ಅವನು ಕಂಬಳಿಯನ್ನೂ ಮುಚ್ಚಿಕೊಳ್ಳದೇ ಹಾಗೇ ಕುಳಿತಿದ್ದ. ಬಳಿಕ ಬಾಲಕಿ ತನ್ನ ಸೀಟಿನಿಂದ ಬೇರೆ ಸೀಟಿಗೆ ತೆರಳಿದಳು. ಬೋಸ್ಟನ್‌ನಲ್ಲಿ ವಿಮಾನದಿಂದ ಇಳಿದ ನಂತರ ಬಾಲಕಿ ತನ್ನ ಕುಟುಂಬದವರಿಗೆ ಘಟನೆ ಬಗ್ಗೆ ತಿಳಿಸಿದ್ದಾಳೆ. ಆದ್ರೆ ಬಾಲಕಿಯ ಆರೋಪ ವೈದ್ಯ ತಿರಸ್ಕರಿಸಿದ್ದಾನೆ. ನನಗೆ ಯಾವುದೂ ನೆನಪಿಲ್ಲ ಎಂದು ಜಾರಿಕೊಳ್ಳಲು ಪ್ರಯತ್ನಿಸಿದ್ದಾನೆ.

    ವೈದ್ಯ ಮೊಹಾಂತಿಯನ್ನು ಬಂಧಿಸಿದ ಎಫ್‌ಬಿಐ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ವಿಚಾರಣೆ ಬಳಿಕ ಆರೋಪ ಸಾಬೀತಾಗಿ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ಡಾಲರ್‌ (4,14,783 ರೂ.) ದಂಡ ವಿಧಿಸಲಾಯಿತು. ಇದನ್ನೂ ಓದಿ: ಭಾರತದ ಚಂದ್ರಯಾನ-3 V/S ರಷ್ಯಾದ ಲೂನಾ-25: ಚಂದ್ರನ ಮೇಲೆ ಮೊದಲು ಹೆಜ್ಜೆ ಇಡೋದು ಯಾರು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೈಡನ್‌ಗೆ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಎಫ್‌ಬಿಐ

    ಬೈಡನ್‌ಗೆ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಎಫ್‌ಬಿಐ

    ವಾಷಿಂಗ್ಟನ್: ಅಮೆರಿಕ (America) ಅಧ್ಯಕ್ಷ ಜೋ ಬೈಡನ್ (Joe Biden), ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಇತರ ಕೆಲವು ಅಧಿಕಾರಿಗಳಿಗೆ ಆನ್‌ಲೈನ್ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿರುವುದಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ತಿಳಿಸಿದೆ.

    ಬೈಡನ್ ಬುಧವಾರ ಉತಾಹ್‌ಗೆ ಭೇಟಿ ನಿಗದಿಯಾಗಿತ್ತು. ಈ ಭೇಟಿ ಹಿನ್ನೆಲೆ ಕ್ರೇಗ್ ರಾಬರ್ಟ್ಸನ್ ಎಂಬ ವ್ಯಕ್ತಿ ಆನ್‌ಲೈನ್‌ನಲ್ಲಿ ಬೈಡನ್ ಹಾಗೂ ಇತರ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ. ಆತನ ಪೋಸ್ಟ್‌ನಲ್ಲಿ ಬೈಡನ್ ಆಗಮಿಸುತ್ತಿರುವ ವಿಚಾರ ತಿಳಿದಿದೆ. ಎಂ24 ಸ್ನೈಪರ್ ರೈಫಲ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ದೂರನ್ನು ದಾಖಲಿಸಲಾಗಿತ್ತು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರೀ ಮಳೆ – ಮನೆಯೊಳಗೆ ಸಿಲುಕ್ಕಿದ್ದ 50 ಜನರ ರಕ್ಷಣೆ

    ತಕ್ಷಣ ಎಚ್ಚೆತ್ತುಕೊಂಡ ಎಫ್‌ಬಿಐ ತಂಡ ಬುಧವಾರ ಮುಂಜಾನೆ ಸ್ಟಾಲ್ ಲೇಕ್ ಸಿಟಿಯ ದಕ್ಷಿಣದ ಪ್ರೊವೊದಲ್ಲಿನ ರಾಬರ್ಟ್ಸನ್ ಮನೆಗೆ ಬಂಧನದ ವಾರೆಂಟ್ ಜೊತೆ ಬಂದಿದ್ದಾರೆ. ಬಳಿಕ ಆತನ ಮನೆ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಈ ವೇಳೆ ರಾಬರ್ಟ್ಸನ್ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: BJP ಸಂಸದರಿಗೆ ರಾಗಾ ಫ್ಲೈಯಿಂಗ್ ಕಿಸ್ – ಅದು ಪ್ರೀತಿಯ ಸನ್ನೆ ಎಂದು ಶಿವಸೇನೆ ಸಂಸದೆ ಸಮರ್ಥನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರ ಮದುವೆ- ಸ್ವಘೋಷಿತ ಪ್ರವಾದಿ ಅರೆಸ್ಟ್

    ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರ ಮದುವೆ- ಸ್ವಘೋಷಿತ ಪ್ರವಾದಿ ಅರೆಸ್ಟ್

    ವಾಷಿಂಗ್ಟನ್: ತನ್ನ ಸ್ವಂತ ಮಗಳು ಸೇರಿದಂತೆ 20ಕ್ಕೂ ಹೆಚ್ಚು ಯುವತಿಯರನ್ನ ಮದುವೆಯಾಗಿರುವ (Marriage) ಆರೋಪದ ಮೇಲೆ ಯುಎಸ್‌ನ (US) ಸ್ವಯಂ ಘೋಷಿತ ಪ್ರವಾದಿಯನ್ನು (Prophet) ಎಫ್‌ಬಿಐ (FBI) (ಫೆಡರಲ್ ಬ್ಯೂರೋ ಇನ್ವೆಷ್ಟಿಗೇಷನ್) ಬಂಧಿಸಿದೆ. ಯುಎಸ್ (US) ಮೂಲದ ಆಧ್ಯಾತ್ಮಿಕ ನಾಯಕನ ಬಹುಪತ್ನಿತ್ವ ಬೆಚ್ಚಿಬೀಳಿಸುವಂತೆ ಮಾಡಿದೆ.

    ಲೇಟರ್ ಡೇ ಸೇಂಟ್ಸ್ ಜೀಸಸ್ ಕ್ರೈಸ್ಟ್ ಚರ್ಚ್ನಲ್ಲಿ ಬಹುಪತ್ನಿತ್ವವಾದಿ `ಮೊರನ್ಸ್’ ಗುಂಪಿನ ಆರಾಧಕನಾಗಿದ್ದ ಸ್ಯಾಮ್ಯುಯೆಲ್ ರಾಪ್ಪಿಲೀ ಬೇಟ್‌ಮ್ಯಾನ್ (46) ತನ್ನ ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರನ್ನ ಮದುವೆಯಾಗಿದ್ದಾನೆ. ಅವರಲ್ಲಿ ಬಹುತೇಕರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ ಎಂದು ಎಫ್‌ಬಿಐ ಹೇಳಿದೆ. ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿದ ಸುಂದರ್‌ಗೆ ಕೆಟ್ಟದಾಗಿ ಬೈದ ರೋಹಿತ್ – ನೆಟ್ಟಿಗರ ಆಕ್ರೋಶ

    2019ರಲ್ಲಿ ಸಣ್ಣ ಗುಂಪಿನ ಅನುಯಾಯಿಗಳ ನಿಯಂತ್ರಣ ವಹಿಸಿಕೊಂಡ ಬೇಟ್‌ಮ್ಯಾನ್ ನಂತರದಲ್ಲಿ ತನ್ನನ್ನೇ ತಾನು ಪ್ರವಾದಿ ಎಂದು ಘೋಷಿಸಿಕೊಂಡನು. ಆಮೇಲೆ ಹದಿಹರೆಯದ ಮಗಳನ್ನು ಮದುವೆಯಾಗುವುದಾಗಿ ಘೋಷಿಸಿದನು. ನಂತರ ಅನೇಕ ಅಪ್ರಾಪ್ತೆಯರನ್ನೂ ವಿವಾಹವಾದನು. ಎಫ್‌ಬಿಐ (FBI) ಕೊಲೊರಾಡೋ ನಗರದಲ್ಲಿನ ಬೇಟ್‌ಮ್ಯಾನ್ ಎರಡೂ ಮನೆಗಳ ಮೇಲೆ ದಾಳಿ ನಡೆಸಿದಾಗ ಈ ಸತ್ಯ ಬಹಿರಂಗವಾಗಿದೆ.

    ಸದ್ಯ ದಾಖಲೆಗಳ ಸಮೇತ ಆರೋಪಿಯನ್ನ ಬಂಧಿಸಿ ಜೈಲಿನಲ್ಲಿಡಲಾಗಿದೆ. ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿದ ಸುಂದರ್‌ಗೆ ಕೆಟ್ಟದಾಗಿ ಬೈದ ರೋಹಿತ್ – ನೆಟ್ಟಿಗರ ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ಎಫ್‌ಬಿಐ ಕಚೇರಿ ಮೇಲೆ ದಾಳಿಗೆ ಮುಂದಾದ ಬಂದೂಕುಧಾರಿ ಹತ್ಯೆಗೈದ ಪೊಲೀಸರು

    ಎಫ್‌ಬಿಐ ಕಚೇರಿ ಮೇಲೆ ದಾಳಿಗೆ ಮುಂದಾದ ಬಂದೂಕುಧಾರಿ ಹತ್ಯೆಗೈದ ಪೊಲೀಸರು

    ವಾಷಿಂಗ್ಟನ್‌: ಓಹಿಯೋದಲ್ಲಿ ಎಫ್‌ಬಿಐ ಕಚೇರಿ ಮೇಲೆ ದಾಳಿ ಮಾಡಲು ಮುಂದಾದ ಬಂದೂಕುಧಾರಿಯನ್ನು ಪೊಲೀಸರು ಕೊಂದಿದ್ದಾರೆ.

    ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಸಿನ್ಸಿನಾಟಿ ಫೀಲ್ಡ್ ಕಚೇರಿ ಮೇಲೆ ದಾಳಿಗೆ ಶಸ್ತ್ರಸಜ್ಜಿತ ವ್ಯಕ್ತಿ ಯತ್ನಿಸಿದ್ದ. ಕೂಡಲೇ ಎಚ್ಚೆತ್ತುಕೊಂಡ ಓಹಿಯೋ ಪೊಲೀಸ್ ಅಧಿಕಾರಿಗಳು ಆತನನ್ನು ಹತ್ಯೆಗೈದಿದ್ದಾರೆ. ಇದನ್ನೂ ಓದಿ: ಬಾಂಬ್‌ ಸ್ಫೋಟಿಸಿ ತಾಲಿಬಾನ್‌ ಧರ್ಮಗುರು ಹತ್ಯೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ಯೆಯಾದ ಶಸ್ತ್ರಸಜ್ಜಿತ ವ್ಯಕ್ತಿಗೆ, ಜನವರಿ 6 ರಂದು ರಾಜಧಾನಿ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದ ಉಗ್ರಗಾಮಿ ಗುಂಪುಗಳೊಂದಿಗೆ ಸಂಬಂಧವಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

    ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ಮನೆಯನ್ನು ಫೆಡರಲ್ ಏಜೆಂಟ್‌ಗಳು ಶೋಧಿಸಿದ ಕೆಲವೇ ದಿನಗಳಲ್ಲಿ ಎಫ್‌ಬಿಐ ಉದ್ಯೋಗಿಗಳನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಫೆಡರಲ್ ಕಾನೂನು ಜಾರಿ ವಿರುದ್ಧ ಆನ್‌ಲೈನ್ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಎಫ್‌ಬಿಐ ನಿರ್ದೇಶಕರು ವರದಿಗಾರರಿಗೆ ತಿಳಿಸಿದ ಒಂದು ದಿನದ ನಂತರ ಸಿನ್ಸಿನಾಟಿಯಲ್ಲಿ ಈ ದಾಳಿ ನಡೆದಿದೆ. ಇದನ್ನೂ ಓದಿ: ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    Live Tv
    [brid partner=56869869 player=32851 video=960834 autoplay=true]