Tag: Fazil

  • Mangaluru | ಕರಾವಳಿಯಲ್ಲಿ ನಿಲ್ಲದ ಪ್ರತೀಕಾರದ ಹತ್ಯೆ

    Mangaluru | ಕರಾವಳಿಯಲ್ಲಿ ನಿಲ್ಲದ ಪ್ರತೀಕಾರದ ಹತ್ಯೆ

    ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ (Mangaluru) ಮತ್ತೆ ಪ್ರತೀಕಾರದ ಹತ್ಯೆ ನಡೆದಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಪ್ರತೀಕಾರಕ್ಕಾಗಿ ಹತ್ಯೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಸುಪಾರಿ ಹಂತಕರು 5 ಲಕ್ಷಕ್ಕಾಗಿ ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತನನ್ನ (Hindu Worker) ಬರ್ಬರವಾಗಿ ಕೊಂದಿದ್ದಾರೆ. ಹಾಗಾದ್ರೆ ಸುಪಾರಿ ಕೊಟ್ಟವರು, ಹತ್ಯೆ ನಡೆದಿದ್ದು ಯಾಕೆ? ಅನ್ನೋದರ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

    Suhas Shetty Murder Case - 8 Arrested

    ಕಳೆದ ಮೇ 1 ರಂದು ರಾತ್ರಿ 8.30ರ ಸುಮಾರಿಗೆ ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು (Suhas Shetty) ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ 7 ಮಂದಿ ಹಾಗೂ ಸುಪಾರಿ ಕೊಟ್ಟ ಓರ್ವ ಸೇರಿ ಒಟ್ಟು 8 ಮಂದಿಯನ್ನ ಮಂಗಳೂರು ಪೊಲೀಸರು (Mangaluru Police) ಬಂಧಿಸಿದ್ದಾರೆ. ಇದು ಪ್ರತೀಕಾರಕ್ಕೆ ನಡೆದ ಹತ್ಯೆ ಅನ್ನೋದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇದನ್ನೂ ಓದಿ: ಸುಹಾಸ್ ಹತ್ಯೆ ಕೇಸ್ – ಫಾಝಿಲ್ ಸಹೋದರನೇ ಪ್ರಮುಖ ಆರೋಪಿ

    ನಿಲ್ಲದ ಪ್ರತೀಕಾರದ ಹತ್ಯೆಗಳು
    ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ನಿಷೇಧಿತ ಉಗ್ರ ಸಂಘಟನೆ ಪಿಎಫ್‌ಐನ ಕಾರ್ಯಕರ್ತರೇ ಈ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದು ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಿತ್ತು. ಈ ಪ್ರಕರಣದಿಂದಲೇ ಪಿಎಫ್‌ಐ ಅನ್ನು ಕೆಂದ್ರ ಸರ್ಕಾರ ನಿಷೇಧಿಸಿತ್ತು. ಈ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿಯೇ ನಡೆದಿದ್ದು ಸುರತ್ಕಲ್‌ನ ಫಾಝಿಲ್ ಹತ್ಯೆ.  ಇದನ್ನೂ ಓದಿ: ಕರಾವಳಿಯಲ್ಲಿ ಕೋಮುಗಲಭೆ ನಿಗ್ರಹ ಪಡೆ ರಚನೆ: ಸಚಿವ ಪರಮೇಶ್ವರ್ ಘೋಷಣೆ

    Mangaluru Suhas Shetty Murder

    2022ರ ಮೇ 28ರ ರಾತ್ರಿ ಸುರತ್ಕಲ್ ಮಾರ್ಕೆಟ್ ಬಳಿ ಫಾಝಿಲ್ ನನ್ನು ಬರ್ಬರವಾಗಿ ಕತ್ತರಿಸಿ ಹತ್ಯೆ ನಡೆಸಲಾಗಿತ್ತು. ಈ ಹತ್ಯೆಯ ಪ್ರಮುಖ ಆರೋಪಿಯಾಗಿದ್ದವನು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ. ಹೀಗಾಗಿ ಫಾಝಿಲ್ ಹತ್ಯೆಗೆ ರಿವೇಂಜ್ ಹತ್ಯೆ ಮಾಡಬೇಕೆಂದು ಪಣತೊಟ್ಟ ಫಾಝಿಲ್‌ನ ತಮ್ಮ ಆದಿಲ್ ಸುಪಾರಿ ಕೊಟ್ಟಾದ್ರೂ ತನ್ನ ಅಣ್ಣನನ್ನು ಕೊಂದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ಮುಗಿಸಲು ಪ್ಲ್ಯಾನ್‌ ಮಾಡಿದ್ದ. ಅದಕ್ಕೆ ಸಹಕಾರ ನೀಡಿ ಮುಂದೆ ಬಂದ ನಟೋರಿಯಸ್ ಸಫ್ವಾನ್‌ಗೆ 5 ಲಕ್ಷದ ಸುಫಾರಿ ನೀಡಿ ಅದರಲ್ಲಿ ಮೂರು ಲಕ್ಷ ರೂಪಾಯಿಯನ್ನ ಅಡ್ವಾನ್ಸಾಗಿ ನೀಡಿದ್ದ. ಸಫ್ವಾನ್ ತನ್ನ ತಂಡದೊಂದಿಗೆ ಮೇ 1 ರ ರಾತ್ರಿ ಸುಹಾಸ್ ಶೆಟ್ಟಿಯನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ನಡೆಸಿದ್ದಾರೆ.

    ಕರಾವಳಿಯಲ್ಲಿ ಪ್ರತೀಕಾರದ ಹತ್ಯೆಗಳು ನಡೆಯೋದು ಇದೇನು ಹೊಸತಲ್ಲ. ಈ ಹಿಂದೆಯೂ ಒಂದಾದ ಮೇಲೊಂದು ಪ್ರತಿಕಾರದ ಹತ್ಯೆಗಳು ನಡೆದಿದೆ. ಅದರಲ್ಲೂ ಓರ್ವ ಹಿಂದೂವಿನ ಹತ್ಯೆ ಆದ್ರೆ ಅದಕ್ಕೊಬ್ಬ ಮುಸ್ಲಿಮನ ಹತ್ಯೆ ನಡೆಯುತ್ತಲೇ ಇತ್ತು. ಇದೀಗ ಈ ಹತ್ಯೆಯೂ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಇದನ್ನೂ ಓದಿ: ಜೂ.10ರ ಒಳಗೆ ಸಿದ್ದರಾಮಯ್ಯ ಒಳಮೀಸಲಾತಿ ಘೋಷಣೆ ಮಾಡಬೇಕು: ಗೋವಿಂದ ಕಾರಜೋಳ

  • ಸುಹಾಸ್ ಹತ್ಯೆ ಕೇಸ್ – ಫಾಝಿಲ್ ಸಹೋದರನೇ ಪ್ರಮುಖ ಆರೋಪಿ

    ಸುಹಾಸ್ ಹತ್ಯೆ ಕೇಸ್ – ಫಾಝಿಲ್ ಸಹೋದರನೇ ಪ್ರಮುಖ ಆರೋಪಿ

    – ಫಾಝಿಲ್ ಕೊಲೆ ಪ್ರತೀಕಾರಕ್ಕೆ ಸುಹಾಸ್ ಹತ್ಯೆ; ಆದಿಲ್ ಬಂಧನ

    ಮಂಗಳೂರು: ಫಾಝಿಲ್ ಕೊಲೆಯ ಪ್ರತೀಕಾರಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಆಗಿದೆ ಎನ್ನಲಾಗುತ್ತಿದೆ. ಸುಹಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಫಾಝಿಲ್ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

    ಆದಿಲ್ ಮೆಹರೂಫ್ ಕೊಲೆ ಆರೋಪಿಯಾಗಿದ್ದು, ಈತ ಫಾಝಿಲ್‌ನ ಸಹೋದರ. ಫಾಝಿಲ್ ಅಮಾಯಕ, ಆದರೂ ಆತನ ಹತ್ಯೆ ಮಾಡಿದ್ರು. ಹತ್ಯೆ ಮಾಡಿ ಜೈಲಿಗೆ ಹೋಗಿ ಬಂದವರೆಲ್ಲಾ ಜಾಮೀನು ಮೇಲೆ ಇದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಮಾಡಿದವರು ಇನ್ನೂ ಜೈಲಲ್ಲಿ ಇದ್ದಾರೆ. ಸುಹಾಸ್‌ನ ಕೊಲ್ಲೋ ಮೂಲಕ ಸಂದೇಶ ಕೊಡ್ಬೇಕು ಎಂದು ಆದಿಲ್ ಗುಂಪು ಕಟ್ಟಿಕೊಂಡು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಕೋಮುಗಲಭೆ ನಿಗ್ರಹ ಪಡೆ ರಚನೆ: ಸಚಿವ ಪರಮೇಶ್ವರ್ ಘೋಷಣೆ

    ಫಾಝಿಲ್‌ನ ಸಹೋದರ ಆದಿಲ್ ಮೆಹರೂಫ್. ಈತ ಸಫ್ವಾನ್ ಗ್ಯಾಂಗ್‌ಗೆ 5 ಲಕ್ಷ ರೂ. ಸುಪಾರಿ ನೀಡಿದ್ದ. ಸುಹಾಸ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ 8 ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

  • ಫಾಝಿಲ್ ಸ್ಮರಣಾರ್ಥ ರಕ್ತದಾನ ಶಿಬಿರ – ಜಿಲ್ಲೆಯ 4 ಕಡೆ ಬ್ಲಡ್ ಡೊನೇಟ್

    ಫಾಝಿಲ್ ಸ್ಮರಣಾರ್ಥ ರಕ್ತದಾನ ಶಿಬಿರ – ಜಿಲ್ಲೆಯ 4 ಕಡೆ ಬ್ಲಡ್ ಡೊನೇಟ್

    ಮಂಗಳೂರು: ಸುರತ್ಕಲ್‍ನಲ್ಲಿ ಹತ್ಯೆಯಾದ ರಕ್ತದಾನಿ ಫಾಝಿಲ್ ಸ್ಮರಣಾರ್ಥ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.

    ಹಲವಾರು ಜೀವಕ್ಕೆ ರಕ್ತವನ್ನು ಪೂರೈಸುವಂತಹ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯ ಸದಸ್ಯರಾದ ಮರ್ಹೂಂ ಫಾಝಿಲ್ ಮಂಗಳಪೇಟೆರವರ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲೆಯ ಉಳಾಯಿಬೆಟ್ಟು, ಅಮ್ಮುಂಜೆ, ಉಳ್ಳಾಲ ಮತ್ತು ಪುತ್ತೂರಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು. ಇದನ್ನೂ ಓದಿ: ಯುಪಿಯಲ್ಲಿ ಮತ್ತೆ ಜೆಸಿಬಿ ಘರ್ಜನೆ – ಬಿಜೆಪಿ ನಾಯಕನ ಅಕ್ರಮ ಕಟ್ಟಡ ನೆಲಸಮ

    ಕರಾವಳಿಯ ಕೋಮು ವೈಷಮ್ಯಕ್ಕೆ ಬಲಿಯಾಗಿದ್ದ ಅಮಾಯಕ ಫಾಝಿಲ್ ಅವರು ಬದುಕಿದ್ದಾಗ 14 ಬಾರಿ ರಕ್ತದಾನ ಮಾಡಿದ್ದರು. ಮಂಗಳಪೇಟೆಯ 23 ವರ್ಷ ವಯಸ್ಸಿನ ಫಾಝಿಲ್, ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯ ಸದಸ್ಯರಾಗಿದ್ದರು. ಇದೀಗ ಬ್ಲಡ್ ಹೆಲ್ಪ್‌ಲೈನ್ ಸಂಸ್ಥೆಯ 6ನೇ ವಾರ್ಷಿಕೋತ್ಸವದಲ್ಲಿ ಶಹೀದ್ ಫಾಝಿಲ್ ಸ್ಮರಣಾರ್ಥ ಫಾಝಿಲ್‍ಗಾಗಿ ನೂರಾರು ಮಂದಿಯಿಂದ ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ: 500ಮೀ. ದೂರದವರೆಗೆ ಕಾರನ್ನು ಎಳೆದೊಯ್ದ ಟ್ರಕ್- ಸಮಾಜವಾದಿ ಮುಖಂಡನಿದ್ದ ಕಾರು ಜಖಂ

    Live Tv
    [brid partner=56869869 player=32851 video=960834 autoplay=true]

  • ಫಾಝಿಲ್ ಕೊಲೆ ಪ್ರಕರಣ- 3 ದಿನಕ್ಕೆ 15 ಸಾವಿರ ಬಾಡಿಗೆಗೆ ಕಾರು ಖರೀದಿಸಿದ್ದ ಗ್ಯಾಂಗ್: ಎನ್. ಶಶಿಕುಮಾರ್ ಸುದ್ದಿಗೋಷ್ಠಿ

    ಫಾಝಿಲ್ ಕೊಲೆ ಪ್ರಕರಣ- 3 ದಿನಕ್ಕೆ 15 ಸಾವಿರ ಬಾಡಿಗೆಗೆ ಕಾರು ಖರೀದಿಸಿದ್ದ ಗ್ಯಾಂಗ್: ಎನ್. ಶಶಿಕುಮಾರ್ ಸುದ್ದಿಗೋಷ್ಠಿ

    – ಫಾಝಿಲ್‌ನನ್ನೇ ಟಾರ್ಗೆಟ್‌ ಮಾಡಿದ್ದು ಯಾಕೆ..?

    ಮಂಗಳೂರು: ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಇಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಝಿಲ್ (23) ಹತ್ಯೆಯಾಗಿದ್ದ ಯುವಕನಾಗಿದ್ದು, ಈತ ಬುಲೆಟ್ ಟ್ಯಾಂಕರ್ ನಲ್ಲಿ ಪಾರ್ಟ್ ಟೈಮ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಏಳೆಂಟು ತಂಡಗಳಲ್ಲಿ ಪ್ರಕರಣ ಪತ್ತೆ ಮಾಡಲು ಕಾರ್ಯಾಚರಣೆ ನಡೆಸಲಾಗಿತ್ತು. ಮೂರು ದಿನಕ್ಕೆ 15 ಸಾವಿರ ಬಾಡಿಗೆ ಕೊಡ್ತೇವೆ ಎಂದು ಹಂತಕರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಜಿತ್ ಕ್ರಾಸ್ತಾ ಎಂಬ ಕಾರಿನ ಮಾಲೀಕ ಹಣದ ಆಸೆಗೆ ಕಾರು ಕೊಟ್ಟಿದ್ದ ಎಂದು ಶಶಿಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಜಿರಳೆ ಔಷಧಿ ಸಿಂಪಡಿಸಿದ್ದರಿಂದ ಉಸಿರುಗಟ್ಟಿ ಬಾಲಕಿ ದುರ್ಮರಣ

    ಮಾಲೀಕನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಗಾಡಿ ಪಡೆದವರು ಯಾರೆಂದು ಗೊತ್ತಾಗುತ್ತೆ. ಒಟ್ಟು 6 ಮಂದಿಯನ್ನು ಪ್ರಕರಣದಲ್ಲಿ ಬಂಧಿಸಿದ್ದೇವೆ. ಬಂಧಿತರನ್ನು ಶ್ರೀನಿವಾಸ ಕಾಟಿಪಳ್ಳ(23), ಅಭಿಷೇಕ್(23) ದೀಕ್ಷಿತ್ ಕಾಟಿಪಳ್ಳ(21), ಸುಹಾಸ್ ಶೆಟ್ಟಿ( 29), ಮೋಹನ್(23) ಮತ್ತು ಗಿರೀಶ್(27) ಎಂದು ಗುರುತಿಸಲಾಗಿದೆ. ಜುಲೈ 26 ರಂದು ರಾತ್ರಿ ಬಜ್ಪೆ ನಿವಾಸಿ ಸುಹಾಸ್, ಅಭಿಷೇಕ್‍ಗೆ ಕರೆ ಮಾಡುತ್ತಾನೆ. 27 ರಂದು ಮಧ್ಯಾಹ್ನದ ಒಳಗೆ ಯಾರನ್ನಾದರು ಹೊಡೀಬೇಕು ಎಂದು ಪ್ಲ್ಯಾನ್ ಮಾಡಿದ್ದಾನೆ. ಅಂತೆಯೇ ಸುಹಾಸ್, ಅಭಿಷೇಕ್, ಶ್ರೀನಿವಾಸ್ ಹಾಗೂ ದೀಕ್ಷಿತ್ ಪ್ಲಾನ್ ಮಾಡುತ್ತಾರೆ. ಮಹಮ್ಮದ್ ಫಾಝಿಲ್ ಹೊಡಿಬೇಕು ಎಂದು ಸ್ಕೆಚ್ ಹಾಕುತ್ತಾರೆ. 28 ರಂದು ಸುಹಾಸ್ ಮಾರಕಾಸ್ತ್ರದ ಜೊತೆ ಕಾರಿನಲ್ಲಿ ತೆರಳುತ್ತಾನೆ ಎಂದರು.

    ಈ‌ ಮಧ್ಯೆ ಆರೋಪಿಗಳು 3-4 ಮಂಕಿ ಕ್ಯಾಪ್ ಖರೀದಿಸುತ್ತಾರೆ. ಮಂಕಿಕ್ಯಾಪ್ ರೆಡಿ ಮಾಡಿ ಸುರತ್ಕಲ್ ಹೊರವಲಯದ ಕ್ಯಾಂಟೀನ್ ನಲ್ಲಿ ಸೇರುತ್ತಾರೆ. ನಂತರ ಕಿನ್ನಿಗೋಳಿ ಬಾರ್ ನಲ್ಲಿ ಊಟ ಮಾಡಿ ಹತ್ಯೆಗೆ ಸಿದ್ಧತೆ ಮಾಡುತ್ತಾರೆ. ಹತ್ಯೆಗೂ ಮುನ್ನ ಸುರತ್ಕಲ್ ಹತ್ಯೆ ಜಾಗದಲ್ಲಿ ಮೂರು ಬಾರಿ ಓಡಾಟ ನಡೆಸುತ್ತಾರೆ. ಬಳಿಕ‌ ರಾತ್ರಿ ಶ್ರೀನಿವಾಸ್, ಮೋಹನ್ ಮತ್ತು ಸುಹಾಸ್ ಮಾರಕಾಸ್ತ್ರ ಹಿಡಿದು ಕಾರಿನಿಂದ ಇಳಿದು ಫಾಝಿಲ್ ಮೇಲೆ ದಾಳಿ ಮಾಡುತ್ತಾರೆ.

    ಗಿರಿಧರ್ ಕಾರು ಚಾಲಕನಾಗಿದ್ದು, ದೀಕ್ಷಿತ್ ಕಾರಿನಲ್ಲೇ ಇದ್ದ ಹಾಗೂ ಅಭಿಷೇಕ್ ಕಾರಿನಿಂದ ಇಳಿದು ಸುತ್ತಮುತ್ತ ಅಲರ್ಟ್ ಮಾಡುತ್ತಾನೆ. 6 ಜನ ಆರೋಪಿಗಳೂ ಒಂದೇ ಇಯಾನ್ ಕಾರ್ ನಲ್ಲಿ ಬಂದಿದ್ರು. ಹತ್ಯೆ ಮಾಡಿ ಆರೂ ಜನರು ಇನ್ನಾ ಭಾಗಕ್ಕೆ ತೆರಳಿ ಕಾರು ನಿಲ್ಲಿಸುತ್ತಾರೆ. ಬಳಿಕ ಸ್ನೇಹಿತನ ಮೂಲಕ ಮತ್ತೊಂದು ಕಾರು ತರಿಸಿ ಎಸ್ಕೇಪ್ ಆಗುತ್ತಾರೆ.

    ಉಡುಪಿಯ ಉದ್ಯಾವರ ಬಳಿ ಆರು ಆರೋಪಿಗಳನ್ನ ಬೆಳಗ್ಗೆ ಬಂಧಿಸಲಾಗಿದೆ. ಸದ್ಯ ಆರೂ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರೇಮ ಪ್ರಕರಣ ಮತ್ತು ಮುಸ್ಲಿಂ ಪಂಗಡಗಳ ಬಗ್ಗೆ ಸುದ್ದಿ ಹರಡಿತ್ತು. ಆದರೆ ಇದು ಅವನ ವೈಯಕ್ತಿಕ ವಿಚಾರಕ್ಕೆ ನಡೆದ ಹತ್ಯೆ ಅಲ್ಲ. ಪ್ರೇಮ ಪ್ರಕರಣ ಅಥವಾ ಒಳಪಂಗಡದ ಗಲಾಟೆಗೆ ನಡೆದ ಹತ್ಯೆ ಅಲ್ಲ. ಪ್ರಕರಣ ನಡೆದ ಬಳಿಕ ಕೆಲ ರೌಡಿಶೀಟರ್ ಗಳು ನಾವೇ ಅಂತ ಹೇಳಿಕೊಂಡು ತಿರುಗಾಡಿದ್ದಾರೆ. ಇವರ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಹೇಳಿದರು.

    ಇತ್ತ ಫಾಝಿಲ್‌, ಹತ್ಯೆಗೂ ಮೊದಲು ಗೆಳೆಯನ ಜೊತೆ ಶಾಪಿಂಗ್ ಮಾಡಿದ್ದಾನೆ. ಸುರತ್ಕಲ್ ನ ಮೊಬೈಲ್ ಶಾಪ್ ಮತ್ತು ಪಕ್ಕದ ಅಂಗಡಿಗೂ ಹೋಗಿದ್ದಾನೆ. ಒಟ್ಟಿನಲ್ಲಿ ನಮ್ಮ ತನಿಖೆಯಲ್ಲಿ ಇದು ಫಾಝಿಲ್ ಮೇಲೆ ನಡೆದ ಪ್ಲಾನ್ ಅನ್ನೋದು ಸ್ಪಷ್ಟವಾಗಿದೆ ಎಂದು ಎನ್ ಶಶಿಕುಮಾರ್ ಮಾಹಿತಿ ನೀಡಿದರು.

    ಸದ್ಯ ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳುತ್ತೇವೆ. ಆರೋಪಿಗಳ ಹಿನ್ನೆಲೆ ಏನು ಎಂಬ ಬಗ್ಗೆ ತನಿಖೆಯಲ್ಲಿ ಪತ್ತೆ ಹಚ್ಚುತ್ತೇವೆ. ಅಲ್ಲದೆ ಫಾಝಿಲ್ ನನ್ನೇ ಯಾಕೆ ಟಾರ್ಗೆಟ್ ಮಾಡಿದ್ರು ಅಂತಾ ತನಿಖೆಯಲ್ಲಿ ತಿಳಿಯಬೇಕು ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಫಾಝಿಲ್ ಹತ್ಯೆ ಪ್ರಕರಣ – ನಾಲ್ವರು ಹಂತಕರು ಅರೆಸ್ಟ್

    ಫಾಝಿಲ್ ಹತ್ಯೆ ಪ್ರಕರಣ – ನಾಲ್ವರು ಹಂತಕರು ಅರೆಸ್ಟ್

    ಮಂಗಳೂರು: ಸುರತ್ಕಲ್‍ನಲ್ಲಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಂತಕರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಬೆಂಗಳೂರು, ಉತ್ತರ ಕನ್ನಡ ಸೇರಿದಂತೆ ವಿವಿಧ ಕಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಹಂತಕರನ್ನು ಸೋಮವಾರ ರಾತ್ರಿ ಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಇಂದು ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮತ್ತು ಆರೋಪಿಗಳ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬ್ಲಾಕ್‍ಮೇಲ್ – ಪೊಲೀಸಪ್ಪನ ಮೂಗು, ಕಿವಿ, ತುಟಿ ಕಟ್

    ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರೌಡಿಶೀಟರ್ ಸುಹಾಸ್ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿಯೂ ಮೂವರು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಯುವಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಫಾಝಿಲ್ ಹತ್ಯೆ ನಂತರ ಮಂಗಳೂರು ಸಿಟಿ ಹೊರವಲಯದ ಕಾರ್ಕಾಳದಲ್ಲಿ ಕಾರನ್ನು ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳ ಜಾಡು ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರಿಗೆ ಆರೋಪಿಗಳು ಇರುವ ಸ್ಥಳದ ಬಗ್ಗೆ ಮಾಹಿತಿ ದೊರೆತಿತ್ತು. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

    ಒಂದು ಸ್ಥಳದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ನಿಲ್ಲದ ಆರೋಪಿಗಳ ಜಾಡನ್ನು ಪತ್ತೆ ಹಚ್ಚಿದ ಪೊಲೀಸರು, ಸೋಮವಾರ ಸಂಜೆ 6:30ರ ಸರಿ ಸುಮಾರಿಗೆ ಆರೋಪಿಗಳಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಅಲ್ಲಿಂದಲೂ ಆರೋಪಿಗಳು ಎಸ್ಕೇಪ್ ಆಗಿದ್ದರು. ಬಳಿಕ ಅವರಿಗಾಗಿ ಮತ್ತೆ ಹುಡುಕಾಟ ನಡೆಸಿದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತಂಡ, ಮಿಸ್ ಆಗಿದ್ದ ಸ್ಥಳದಿಂದ 15 ಕಿಲೋ ಮೀಟರ್ ದೂರದಲ್ಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಮೂವರು ಆರೋಪಿಗಳನ್ನು ಸುರತ್ಕಲ್‍ಗೆ ಕರೆ ತಂದಿದ್ದಾರೆ.

    ಮೂವರು ಆರೋಪಿಗಳ ಜೊತೆ ಇನ್ನಿಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇವರೆಲ್ಲರೂ ಕೋಡಿಕೆರೆ ಲೋಕಿ ಗ್ಯಾಂಗ್ ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಅಧಿಕೃತ ಆದೇಶಕ್ಕೆ ಮೊದ್ಲೇ NIA ತನಿಖೆ

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಅಧಿಕೃತ ಆದೇಶಕ್ಕೆ ಮೊದ್ಲೇ NIA ತನಿಖೆ

    ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳ ತನಿಖೆಯನ್ನು ಹಸ್ತಾಂತರಿಸುವ ಮೊದಲೇ ಎನ್‍ಐಎಗೆ ತನಿಖೆಯನ್ನು ಪ್ರಾರಂಭಿಸಿದ್ದು, ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ.

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್‍ಐಎ ಟೀಂ ಬೆಳ್ಳಾರೆಗೆ ಭೇಟಿ ನೀಡಿ ಸಹ ಕೆಲ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಆದರೆ, ಇನ್ನೂ ಅಧಿಕೃತವಾಗಿ ಪ್ರಕರಣ ಎನ್‍ಐಎ ವರ್ಗವಾಗಿಲ್ಲ. ಸದ್ಯದಲ್ಲೇ ಹಸ್ತಾಂತರ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕಾಗಿದ್ದು, ಹೊಸ ಹೊಸ ವಿಚಾರಗಳು ಬಯಲಾಗುತ್ತಿವೆ. ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಲ್ಲಿ ಇಬ್ಬರನ್ನು, ಕೇರಳದಲ್ಲಿ ಒಬ್ಬರನ್ನು ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ. ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಳ್ಯ ಮೂಲದ ಅಲ್ತಾಫ್ ಮತ್ತು ಇರ್ಫಾನ್‍ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇವರು ಪ್ರವೀಣ್ ಹತ್ಯೆಯ ದಿನ ಬೆಳ್ಳಾರೆಯಲ್ಲಿಯೇ ಇದ್ದರು ಎಂಬುದು ತಿಳಿದುಬಂದಿದೆ. ಪ್ರವೀಣ್ ಕೊಲೆಯಲ್ಲಿ ಇವರ ಪಾತ್ರ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಝಾಕೀರ್ ವಿರುದ್ಧ ಕೊಲೆಗಡುಕರಿಗೆ 2 ದಿನ ಆಶ್ರಯ ನೀಡಿ, ಬಿರಿಯಾನಿ ಪೂರೈಸಿದ್ದ ಆರೋಪವಿದೆ.

    ಇನ್ನೂ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ.  ಮಂಗಳೂರಲ್ಲಿ ಡಿಜಿಪಿ ಪ್ರವೀಣ್ ಸೂದ್ ಉನ್ನತ ಮಟ್ಟದ ಸಭೆ ನಡೆಸಿ, ಹಲವು ಸೂಚನೆ ನೀಡಿದ್ದಾರೆ. ಆರೋಪಿಗಳು ಯಾವುದೇ ಧರ್ಮೀಯರಾಗಿದ್ರೂ ಬಿಡೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸುರತ್ಕಲ್‌ನಲ್ಲಿ ಬೀಚ್‌ನಲ್ಲಿ ಭಿನ್ನ ಕೋಮಿನ ಯುವಕನ ಜೊತೆ ಬಂದ ಯುವತಿ ಮೇಲೆ ರೇಪ್‌

    ಸುಹಾಸ್, ಮೋಹನ್, ಗಿರಿ ಮತ್ತು ಅಮಿತ್ ಎಂಬ ಪಾತಕಿಗಳು ಫಾಝಿಲ್ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದ್ದು, ಯಾವುದೇ ಕ್ಷಣದಲ್ಲಿ ಈ ನಾಲ್ವರನ್ನು ಬಂಧಿಸುವ ಸಂಭವ ಇದೆ. ಈ ಹಿಂದೆ ಹಲವು ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಸುಹಾಸ್ ಇದರಲ್ಲೂ ಪ್ರಮುಖ ಆರೋಪಿ ಎನ್ನಲಾಗಿದೆ. ಅಮಿತ್ ಕಾರು ಚಾಲಕ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ. ಇದನ್ನೂ ಓದಿ: ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು

    Live Tv
    [brid partner=56869869 player=32851 video=960834 autoplay=true]

  • ಮಸೂದ್‌, ಫಾಝಿಲ್‌ ಕುಟುಂಬಸ್ಥರಿಗೆ ಹೆಚ್‌ಡಿಕೆ ಸಾಂತ್ವನ – 5 ಲಕ್ಷ ಪರಿಹಾರ ವಿತರಣೆ

    ಮಸೂದ್‌, ಫಾಝಿಲ್‌ ಕುಟುಂಬಸ್ಥರಿಗೆ ಹೆಚ್‌ಡಿಕೆ ಸಾಂತ್ವನ – 5 ಲಕ್ಷ ಪರಿಹಾರ ವಿತರಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್‌ ಹಾಗೂ ಫಾಝಿಲ್‌ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಎರಡೂ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ಚೆಕ್‌ ನೀಡಿದರು.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹತ್ಯೆಗೀಡಾಗಿದ್ದ ಯುವಕ ಮಸೂದ್‌ ಹಾಗೂ ಮಂಗಳೂರಿನ ಸುರತ್ಕಲ್‌ನ ಮಂಗಳಾಪೇಟೆಯಲ್ಲಿ ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಯುವಕ ಫಾಝಿಲ್‌ ಪೋಷಕರನ್ನು ಭೇಟಿಯಾಗಿ ಕುಮಾರಸ್ವಾಮಿ ಸಾಂತ್ವನ ಹೇಳಿದರು. ಹೆಚ್‌ಡಿಕೆ ಜೊತೆಗೆ ಜೆಡಿಎಸ್‌ ನಾಯಕರಾದ ಭೋಜೇಗೌಡ, ಸಿ.ಎಂ.ಇಬ್ರಾಹಿಂ, ಬಿ.ಎಂ.ಫಾರೂಕ್‌ ಕೂಡ ಇದ್ದರು. ಇದನ್ನೂ ಓದಿ: ಪ್ರವೀಣ್‌ ಮನೆಗೆ ಮಾಜಿ ಸಿಎಂ ಹೆಚ್‌ಡಿಕೆ ಭೇಟಿ – ನೆಟ್ಟಾರು ಕುಟುಂಬಕ್ಕೆ 5 ಲಕ್ಷ ಪರಿಹಾರ

    ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಅವರಿಗೂ 5 ಲಕ್ಷ ರೂ. ಪರಿಹಾರದ ಚೆಕ್‌ ನೀಡಿದ್ದರು.

    ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಎರಡು ಮೂರು ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸಕ್ಕೆ ಬಂದಿಲ್ಲ. ಕರಾವಳಿಯಲ್ಲಿ ನಡೆದ ಹತ್ಯೆ ವಿಷಯದಲ್ಲಿ ಚರ್ಚೆ ಮಾಡೋಕೆ ಬರುತ್ತೇನೆಂದು ಅಂದುಕೊಂಡಿರಲಿಲ್ಲ. ಇದು ನನಗೆ ನೋವು ತಂದಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯ ಹಲವು ಸಮಯದಿಂದ ನಡೆಯುತ್ತಿದೆ. ಸಣ್ಣಪುಟ್ಟ ಪ್ರಕರಣಗಳನ್ನು ಇಲ್ಲಿ ದೊಡ್ಡದಾಗಿ ಮಾಡಲಾಗುತ್ತೆ. ಹಿಂದೂ ಮುಸ್ಲಿಂ ಸಮಾಜದ ನಡುವೆ ಕಂದಕ ಸೃಷ್ಟಿ ಮಾಡಿದ್ದಾರೆ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಂದು ಬೆಂಗಳೂರಿನಲ್ಲಿ ಬಚ್ಚಿಟ್ಟುಕೊಂಡಿದ್ದ ಹಂತಕರು..!

    ಬೇರೆ ರಾಜಕಾರಣಿಗಳ ಥರ ನಾನು ಫ್ಲೈಯಿಂಗ್ ವಿಸಿಟ್ ಮಾಡಿಲ್ಲ. ಮೂರು ಕುಟುಂಬಗಳಿಂದ ಮಾಹಿತಿ ಪಡೆದು ಬಂದಿದ್ದೇನೆ. ಹತ್ಯೆ ನಡೆಸಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಮೂರು ಕುಟುಂಬದ ಒಕ್ಕೊರಲಿನ ಆಗ್ರಹವಾಗಿದೆ. ಯಾವ ರಾಜಕಾರಣಿ, ಮಂತ್ರಿ, ಸಂಘಟನೆ ಮುಂಚೂಣಿಯಲ್ಲಿದ್ದ ನಾಯಕರ ಹತ್ಯೆಯಾಗಿಲ್ಲ. ಸಂಘಟನೆ ಹೆಸರಲ್ಲಿ ಯುವಕರನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟರು.

    ಎರಡು ರಾಷ್ಟ್ರೀಯ ಪಕ್ಷಗಳ ಶಾಸಕರನ್ನು ಇಲ್ಲಿ ಹಲವು ವರ್ಷಗಳಿಂದ ಆಯ್ಕೆ ಮಾಡಿದ್ದಾರೆ. ಕಾನೂನಿನ ವೈಫಲ್ಯದ ಬಗ್ಗೆ ಈಗ ಕಾಂಗ್ರೆಸ್ ಚರ್ಚೆ ಮಾಡುತ್ತಿದೆ. ನಿಮ್ಮ ಸರ್ಕಾರ ಇದ್ದಾಗ ಕರಾವಳಿಗೆ ಕೊಟ್ಟ ಕೊಡುಗೆ ಏನು? ಇಲ್ಲಿನ ಜನರಿಗೆ ಯಾವ ರಕ್ಷಣೆ ನೀಡಿದ್ದೀರಿ? ಈಗ ಬಿಜೆಪಿ ಮಂತ್ರಿಗಳು ಯಾವು ಕೊಡುಗೆ ನೀಡಿದ್ದೀರಿ ಎಂದು ರಾಷ್ಟ್ರೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

    ಮೂರು ನಾಲ್ಕು ತಿಂಗಳ ಹಿಂದೆ ಇದು ಇಲ್ಲಿಗೆ ನಿಲ್ಲಲ್ಲ ಎಂದಿದ್ದೆ. ಈಗ ಇದು ಪ್ರಾರಂಭ ಆಗಿದೆ. ಮುಖ್ಯಮಂತ್ರಿಗಳು ಇಲ್ಲಿ ಬಂದು ಏನು ಸಾಧನೆ ಮಾಡಿ ಹೋದ್ರು? ಎರಡು ಸಮಾಜದಲ್ಲಿ ವಿಶ್ವಾಸ ಮೂಡಿಸುವ ಸಂದೇಶ ಕೊಡಬಹುದೆಂದು ಅಂದುಕೊಂಡಿದ್ದೆ. ಆದ್ರೆ ಈ ವಿಶ್ವಾಸ ಹುಸಿಯಾಯಿತು. ಪ್ರವೀಣ್ ಕುಟುಂಬಕ್ಕೆ ಎಷ್ಟು ಪರಿಹಾರ ಕೊಟ್ಟರೂ ತಕರಾರಿಲ್ಲ. ಮುಖ್ಯಮಂತ್ರಿ ಇಲ್ಲಿದ್ದಾಗಲೇ ಸುರತ್ಕಲ್‌ನಲ್ಲಿ ಹತ್ಯೆ ನಡೆದಿದೆ. ಮುಖ್ಯಮಂತ್ರಿ ಅಲ್ಲಿಗೂ ಭೇಟಿ ನೀಡಿ ವಿಶ್ವಾಸ ತುಂಬಬೇಕಿತ್ತು. ಆದ್ರೆ ಹತ್ಯೆಯಾದಲ್ಲಿಗೆ ಸಿಎಂ ಭೇಟಿ ನೀಡಿಲ್ಲ. ಯಾರನ್ನು ಮೆಚ್ಚಿಸುವುದಕ್ಕೆ ಈ ರೀತಿ ವರ್ತಿಸುತ್ತಿದ್ದೀರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್

    ಸಣ್ಣಪುಟ್ಟ ಸಮುದಾಯಕ್ಕೆ ಸೇರಿದ ಯುವಕರನ್ನು ಹತ್ಯೆ ನಡೆಸುತ್ತೀರಿ. ಮಸೂದ್ ಕುಟುಂಬಕ್ಕೆ ಭೇಟಿ ಕೊಟ್ಟಿದ್ದೆ. ಒಂದು ಕರುವನ್ನು ಯಾರೊ ಒಬ್ಬರು ಸಾಕುವುದಕ್ಕೆ ಕೊಟ್ಟಿದ್ದರು ಎಂದು ಮನೆಯವರು ಹೇಳಿದ್ದಾರೆ. ಮಸೂದ್ ಆ ಕರುವನ್ನು ಮೇಯಿಸಲು ಕರೆದೊಯ್ಯುತ್ತಿದ್ದ. ಕೆಲ ಯುವಕರು ಈತನನ್ನು ಗುರಾಯಿಸುತ್ತಿದ್ದರು. ಘರ್ಷಣೆ ನಡೆದು ಸಂಧಾನಕ್ಕೆ ಕರೆದಿದ್ದರು. ಆದ್ರೆ ಸಂಧಾನಕ್ಕೆ ಕರೆದವರು ಮಸೂದ್ ಹತ್ಯೆ ಮಾಡಿದ್ದಾರೆ. ಹತ್ಯೆ ನಡೆದ ದಿನವೇ ಕರುವೂ ಸತ್ತು ಹೋಗಿದೆ ಎಂದು ತಿಳಿಸಿದರು.

    ಪೊಲೀಸ್ ಮಹಾನಿರ್ದೇಶಕರು ನಾನು ಬಂದ ಫ್ಲೈಟ್‌ನಲ್ಲಿ ಬಂದ್ರು. ಡಿಜಿ ಬಂದಿದ್ದು ನೋಡಿ ಮಹತ್ವದ ಹೇಳಿಕೆ ಕೊಡ್ತಾರೆ ಅಂದುಕೊಂಡಿದ್ದೆ. ಹತ್ಯೆ ನಡೆದಾಗಲೇ ಪೊಲೀಸ್ ಮಹಾನಿರ್ದೇಶಕರು ಬರಬೇಕಿತ್ತು. ಬೆಂಗಳೂರಿನಲ್ಲಿ ಯಾವ ಮಹಾ ಘನಂದಾರಿ‌ ಕೆಲಸ ಇದೆ. ವರ್ಗಾವಣೆ ಸೇರಿದಂತೆ ಕೆಲ ಹಣದ ವ್ಯವಹಾರ ನಡೆಸುತ್ತಿದ್ರಾ? ನನಗೆ ಹೇಳುವುದಕ್ಕೆ ಯಾವುದೇ ಮುಲಾಜಿಲ್ಲ ಎಂದು ಕಿಡಿಕಾರಿದರು.

    Live Tv
    [brid partner=56869869 player=32851 video=960834 autoplay=true]

  • ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್

    ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್

    ಮಂಗಳೂರು: ಸುರತ್ಕಲ್ ನಿವಾಸಿ ಫಾಝಿಲ್ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿದೆ.

    ಸದ್ಯ ಪ್ರಕರಣ ಸಂಬಂಧ ರೌಡಿಶೀಟರ್ ಸುಹಾಸ್ ಸೇರಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಫಾಝಿಲ್ ಹತ್ಯೆಯ ರೂವಾರಿಯೇ ರೌಡಿಶೀಟರ್ ಸುಹಾಸ್ ಆಗಿದ್ದು, ಕೊಲೆ ಹೇಗೆ ಮಾಡ್ಬೇಕು..? ಕೊಲೆ ನಂತರ ಹೇಗೆ ಎಸ್ಕೇಪ್ ಆಗ್ಬೇಕು..?, ಪ್ರತಿಯೊಂದನ್ನೂ ಹೇಳುವ ಮೂಲಕ ಪ್ಲಾನ್ ರೂಪಿಸಿದ್ದ ಎಂಬುದಾಗಿ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಂದು ಬೆಂಗಳೂರಿನಲ್ಲಿ ಬಚ್ಚಿಟ್ಟುಕೊಂಡಿದ್ದ ಹಂತಕರು..!

    ಫಾಝಿಲ್ ಹತ್ಯೆಯ ವೇಳೆ ಡ್ರೈವರ್ ಕಾರನಲ್ಲೇ ಇರಬೇಕು. ಹತ್ಯೆ ಮುಗಿಸಿ ಬಂದ ನಂತರ ಕಾರ್ ಹತ್ತಿ ಪರಾರಿಯಾಗಬೇಕು. ಅಲ್ಲದೆ ಪರಾರಿಯಾಗುವ ರಸ್ತೆಯ ಮಾರ್ಗ ಕೂಡ ಬದಲಿಸುವಂತೆ ಸುಹಾಸ್ ಹೇಳಿದ್ದ. ಸುಹಾಸ್ ಹೇಳಿದಂತೆ ಹಂತಕರು ಸುರತ್ಕಲ್ ಮಾರ್ಗದಿಂದ ಬಂಟ್ವಾಳಕ್ಕೆ ತೆರಳಿ, ಬಂಟ್ವಾಳದ ವಿಟ್ಠಲನಗರದವರೆಗೂ ಹೋಗಿದ್ದರು. ಬಳಿಕ ಅಲ್ಲಿಂದ ಉಡುಪಿಗೆ ಹೋಗಿದ್ದಾರೆ. ಉಡುಪಿಯ ಪ್ರಮುಖ ಗ್ರಾಮಗಳಲ್ಲಿ ಓಡಾಡಿದ್ದರು. ಇತ್ತ ಶನಿವಾರ ರಾತ್ರಿ ಅಜಿತ್ ಬಂಧನವಾಗಿದ್ದ ಮಾಹಿತಿ ತಿಳಿಯುತ್ತಿದ್ದಂತೆಯೇ ಮತ್ತೆ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಅನ್ನೋ ಅಂಶವೊಂದು ಬಯಲಾಗಿದೆ. ಇದನ್ನೂ ಓದಿ: 23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಅಧಿಕಾರದ ಮಹಲು ಕಟ್ಟಿದ್ದೀರಿ: BJP ಸರ್ಕಾರದ ವಿರುದ್ಧ ಸೂಲಿಬೆಲೆ ಕಿಡಿ

    ಇತ್ತ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಹತ್ಯೆಗೆ ಬಳಸಲಾದ ಕಾರು ಪತ್ತೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಇಂದು ಕಾರು ಪರಿಶೀಲನೆಗೆ ಆಗಮಿಸಿದರು. ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳು ಕಾರಿನ ಮಹಜರು ನಡೆಸಿ ತೆರಳಿದ್ದಾರೆ. ವಾಹನದ ಸ್ಟೇರಿಂಗ್ ಮತ್ತು ಹ್ಯಾಂಡ್ ಬ್ರೇಕ್ ಮೇಲೆ ಇರುವ ಬೆರಳಚ್ಚು ಪತ್ತೆ ಮಾಡಲಿರುವ ಪೊಲೀಸರು, ಕಾರಿನಲ್ಲಿರುವ ಸಿಮ್ ಕಾರ್ಡ್ ಬಗ್ಗೆ ಇಂದು ತಪಾಸಣೆ ನಡೆಸಲಿದ್ದಾರೆ. ಇನ್ನು ಎರಡು ದಿನದಿಂದ ಇನ್ನಾದ ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಕಾರನ್ನು ಇಂದು ಸುರತ್ಕಲ್ ಪೊಲೀಸರು ಟೋಯಿಂಗ್ ವಾಹನ ಬಳಸಿ ತೆರವು ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್

    ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆಯಿದೆ. ಅದಕ್ಕೆ ಮೊದಲು ಅದನ್ನು ಹೆಚ್ಚಿಸಬೇಕು ಎಂದು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಡಿಜಿಪಿ ಪ್ರವೀಣ್ ಸೂದ್ ತಿಳಿಸಿದರು.

    ಮಂಗಳೂರು ಕೊಲೆ ಪ್ರಕರಣಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹತ್ತು ದಿನಗಳಲ್ಲಿ ಮೂರು ಕೊಲೆ ಪ್ರಕರಣಗಳು ನಡೆದಿವೆ. ಮಸೂದ್ ಕೊಲೆ ಪ್ರಕರಣಲ್ಲಿ ಎಂಟು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಇಬ್ಬರು ಅರೆಸ್ಟ್ ಆಗಿದ್ದಾರೆ. ತನಿಖೆ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಉಳಿದ ಆರೋಪಿಗಳನ್ನು ಪತ್ತೆ ಮಾಡುತ್ತೇವೆ. ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಸುರತ್ಕಲ್ ಫಾಜಿಲ್ ಹತ್ಯೆ ಕೇಸಲ್ಲಿ ನಾಲ್ವರು ಭಾಗಿ ಶಂಕೆ

    ಗಡಿಪ್ರದೇಶದಲ್ಲಿ ತಪಾಸಣೆ ಜಾಸ್ತಿ ಮಾಡಬೇಕು. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆಯಿದೆ. ಅದನ್ನು ಸ್ವಲ್ಪ ಹೆಚ್ಚು ಮಾಡಬೇಕು ಎಂದು ಸರ್ಕಾರದ ಕಡೆಯಿಂದ ಚರ್ಚೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.

    ಫಾಝಿಲ್ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ. ಕೃತ್ಯಕ್ಕೆ ಬಳಸಿದ ಕಾರು ಸಿಕ್ಕಿದ್ದು, ಮಾಲೀಕನನ್ನು ಬಂಧಿಸಿದ್ದೇವೆ. ಅವರ ಮೂಲಕ ಉಳಿದ ಅಪರಾಧಿಗಳನ್ನು ಸದ್ಯದಲ್ಲೇ ಬಂಧಿಸುತ್ತೇವೆ. ನಾನು ಇಂದು ಕಮಿಷನರ್, ಎಸ್‍ಪಿ, ಐಜಿ ಜೊತೆ ಸಭೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರು ಪೊಲೀಸರ ವಶಕ್ಕೆ

    ಮುಂದೆ ಇಂತಹ ಘಟನೆಗಳು ಆಗಬಾರದು. ಏನೇನು ಕ್ರಮ ತೆಗೆದುಕೊಳ್ಳಬೇಕು ಅದರ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡ್ತಿನಿ. ಡಿಸಿ ಅವರ ಜೊತೆಯೂ ಮಾತನಾಡುತ್ತೀನಿ. ಏನೇನು ಕ್ರಮ ತೆಗೆದುಕೊಳ್ಳುತ್ತೀವಿ ಎಂದು ಈಗಾಗಲೇ ಸಿಎಂ ಬೊಮ್ಮಾಯಿ ಅವರಿಗೆ ಹೇಳಿದ್ದೇವೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಸರಣಿ ಹತ್ಯೆ ಪ್ರಕರಣ- ದಕ್ಷಿಣ ಕನ್ನಡಕ್ಕೆ DGP ಪ್ರವೀಣ್ ಸೂದ್ ಭೇಟಿ

    ಸರಣಿ ಹತ್ಯೆ ಪ್ರಕರಣ- ದಕ್ಷಿಣ ಕನ್ನಡಕ್ಕೆ DGP ಪ್ರವೀಣ್ ಸೂದ್ ಭೇಟಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಇದೀಗ ನಗರಕ್ಕೆ ಭೇಟಿ ನೀಡಿದ್ದಾರೆ.

    ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಪ್ರವೀಣ್ ಸೂದ್ ಅವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಪ್ರವೀಣ್ ಕುಮಾರ್ ನೆಟ್ಟಾರು ಹಾಗೂ ಫಾಝಿಲ್ ಹತ್ಯೆ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇದೇ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರು ಪೊಲೀಸರ ವಶಕ್ಕೆ

    ಪಶ್ಚಿಮ ವಲಯ ಐಜಿಪಿ, ಕಮೀಷನರ್ ಹಾಗೂ ಎಸ್‍ಪಿಯವರು ಮಹಾ ನಿರ್ದೇಶಕರಿಗೆ ವರದಿ ನೀಡುತ್ತಿದ್ದಾರೆ. ಸರ್ಕ್ಯೂಟ್ ಹೌಸ್ ನಲ್ಲಿ ಉಪಹಾರ ಮುಗಿಸಿ ಕಮೀಷನರ್ ಕಚೇರಿ ಹಾಗೂ ಎಸ್‍ಪಿ ಕಚೇರಿಗೆ ಪ್ರವೀಣ್ ಸೂದ್ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಸುರತ್ಕಲ್ ಫಾಜಿಲ್ ಹತ್ಯೆ ಕೇಸಲ್ಲಿ ನಾಲ್ವರು ಭಾಗಿ ಶಂಕೆ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ದಿನಗಳ ಅಂತರದಲ್ಲಿ ಮೂರು ಕೊಲೆಗಳು ನಡೆದಿದೆ. ಮಸೂದ್ ಬಳಿಕ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ನಂತರ ಫಾಝಿಲ್ ಹತ್ಯೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]