Tag: Fawad Khan

  • ಪಾಕ್ ನಟನ ‘ಅಬೀರ್ ಗುಲಾಲ್’ ಚಿತ್ರದ ಸಾಂಗ್ಸ್ ಯೂಟ್ಯೂಬ್‌ನಿಂದ ಡಿಲೀಟ್

    ಪಾಕ್ ನಟನ ‘ಅಬೀರ್ ಗುಲಾಲ್’ ಚಿತ್ರದ ಸಾಂಗ್ಸ್ ಯೂಟ್ಯೂಬ್‌ನಿಂದ ಡಿಲೀಟ್

    ಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terror Attack) ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಚಿತ್ರ (Abir Gulal) ಬಿಡುಗಡೆಗೆ ಅನುಮತಿ ನೀಡಬಾರದು ಎಂದು ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಈ ಚಿತ್ರದ ಹಾಡುಗಳನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಇದನ್ನೂ ಓದಿ:ಪಾಕ್ ನಟನ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಬಹಿಷ್ಕಾರ

    ಪಾಕ್ ನಟ ಫವಾದ್ (Fawad Khan) ನಟನೆಯ ‘ಅಬೀರ್ ಗುಲಾಲ್’ ಚಿತ್ರದ 2 ಹಾಡುಗಳು ‘ಸರಿಗಮ’ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಲಾಗಿತ್ತು. ಒಂದು ರೊಮ್ಯಾಂಟಿಕ್ ಸಾಂಗ್ ಮತ್ತೊಂದು ಪಾರ್ಟಿ ಸಾಂಗ್ ಆಗಿತ್ತು. ಈಗ ಈ ಎರಡು ಹಾಡನ್ನು ‘ಸರಿಗಮ’ ಯೂಟ್ಯೂಬ್ ಚಾನೆಲ್‌ನಿಂದ ತೆಗೆದು ಹಾಕಲಾಗಿದೆ. ಇದನ್ನೂ ಓದಿ:‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ

    ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಸಿನಿಮಾ ಭಾರತದಲ್ಲಿ ರಿಲೀಸ್ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಫವಾದ್ ಖಾನ್ ಮತ್ತು ವಾಣಿ ಕಪೂರ್ ನಟಿಸಿರುವ ‘ಅಬೀರ್ ಗುಲಾಲ್’ ಮೇ 9ರಂದು ರಿಲೀಸ್ ಆಗಬೇಕಿತ್ತು. ಈ ಸಿನಿಮಾವನ್ನು ಬಿಡುಗಡೆಗೆ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಪಾಕ್ ಕಲಾವಿದರು, ಗಾಯಕರು ತಂತ್ರಜ್ಞರು ಭಾರತದ ಸಿನಿಮಾದಲ್ಲಿ ಕೆಲಸ ಮಾಡಲು ನಿಷೇಧಿಸಲಾಗಿದೆ. ಫಹಾದ್ ಹೊರತಾಗಿ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕ ಎಲ್ಲರೂ ಭಾರತೀಯರೇ ಆಗಿದ್ದಾರೆ. ಸಿನಿಮಾದ ನಾಯಕಿ ವಾಣಿ ಕಪೂರ್ ಅವರು ಬಾಲಿವುಡ್‌ನ ‘ಬೇಫಿಕ್ರೆ’, ‘ವಾರ್’, ತಮಿಳಿನ `ಆಹಾ ಕಲ್ಯಾಣಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ವಿವಾದಕ್ಕೆ ಸಿಲುಕಿರುವ ‘ಅಬೀರ್ ಗುಲಾಲ್’ ಸಿನಿಮಾವನ್ನು ಆರತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ.

     

    View this post on Instagram

     

    A post shared by Vaani Kapoor (@vaanikapoor)

    ‘ಉರಿ’ ದಾಳಿ ಬಳಿ ಪಾಕ್ ಕಲಾವಿದರನ್ನು ಭಾರತದ ಸಿನಿಮಾದಲ್ಲಿ ನಟಿಸಲು ನಿಷೇಧ ಹೇರಲಾಗಿತ್ತು. ವರ್ಷಗಳ ಬಳಿಕ ಪರಿಸ್ಥಿತಿ ತಿಳಿಯಾದಂತೆ ಮತ್ತೆ ಪಾಕ್ ಕಲಾವಿದರು ಬಾಲಿವುಡ್‌ನಲ್ಲಿ ನಟಿಸಲು ಶುರು ಮಾಡಿದರು.

  • ಪಾಕ್ ನಟನ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಬಹಿಷ್ಕಾರ

    ಪಾಕ್ ನಟನ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಬಹಿಷ್ಕಾರ

    ಹಲ್ಗಾಮ್‌ನಲ್ಲಿ ನಡೆದ ದಾಳಿ ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ (Fawad Khan) ನಟನೆಯ ‘ಅಬೀರ್ ಗುಲಾಲ್’ (Abir Gulal) ಸಿನಿಮಾ ಭಾರತದಲ್ಲಿ ರಿಲೀಸ್ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಇದನ್ನೂ ಓದಿ:ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್?

    ಪಾಕ್ ನಟ ಫವಾದ್ ಖಾನ್ ಮತ್ತು ವಾಣಿ ಕಪೂರ್ ನಟಿಸಿರುವ ‘ಅಬೀರ್ ಗುಲಾಲ್’ ಮೇ 9ರಂದು ರಿಲೀಸ್ ಆಗಬೇಕಿತ್ತು. ಆದರೆ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಹಿನ್ನೆಲೆ ಈ ಸಿನಿಮಾವನ್ನು ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಪಾಕ್ ಕಲಾವಿದರು, ಗಾಯಕರು ತಂತ್ರಜ್ಞರು ಭಾರತದ ಸಿನಿಮಾದಲ್ಲಿ ಕೆಲಸ ಮಾಡಲು ನಿಷೇಧಿಸಲಾಗಿದೆ. ಇದನ್ನೂ ಓದಿ: ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗ್ತಿದೆ: ಉಗ್ರರ ದಾಳಿಗೆ ಸಲೀಂ ಮರ್ಚೆಂಟ್ ಕಿಡಿ

     

    View this post on Instagram

     

    A post shared by Vaani Kapoor (@vaanikapoor)

    ಫಹಾದ್ ಹೊರತಾಗಿ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕ ಎಲ್ಲರೂ ಭಾರತೀಯರೇ ಆಗಿದ್ದಾರೆ. ಸಿನಿಮಾದ ನಾಯಕಿ ವಾಣಿ ಕಪೂರ್ ಅವರು ಬಾಲಿವುಡ್‌ನ ‘ಬೇಫಿಕ್ರೆ’, ‘ವಾರ್’, ತಮಿಳಿನ `ಆಹಾ ಕಲ್ಯಾಣಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ವಿವಾದಕ್ಕೆ ಸಿಲುಕಿರುವ ‘ಅಬೀರ್ ಗುಲಾಲ್’ ಸಿನಿಮಾವನ್ನು ಆರತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ.

    ‘ಉರಿ’ ದಾಳಿ ಬಳಿ ಪಾಕ್ ಕಲಾವಿದರನ್ನು ಭಾರತದ ಸಿನಿಮಾದಲ್ಲಿ ನಟಿಸಲು ನಿಷೇಧ ಹೇರಲಾಗಿತ್ತು. ವರ್ಷಗಳ ಬಳಿಕ ಪರಿಸ್ಥಿತಿ ತಿಳಿಯಾದಂತೆ. ಮತ್ತೆ ಪಾಕ್ ಕಲಾವಿದರು ಬಾಲಿವುಡ್‌ನಲ್ಲಿ ನಟಿಸಲು ಶುರು ಮಾಡಿದರು.

  • ಪುಲ್ವಾಮಾ ದಾಳಿ ನಮ್ಮ ಸಮುದಾಯದ ಯಶಸ್ಸು ಎಂದ ಪಾಕ್ ಸಚಿವ

    ಪುಲ್ವಾಮಾ ದಾಳಿ ನಮ್ಮ ಸಮುದಾಯದ ಯಶಸ್ಸು ಎಂದ ಪಾಕ್ ಸಚಿವ

    ಇಸ್ಲಾಮಾಬಾದ್: ನೆರೆಯ ದುಷ್ಟ ಪಾಕಿಸ್ತಾನ 20 ತಿಂಗಳ ತಾನು ಎಸಗಿದ ಘೋರಕೃತ್ಯವನ್ನ ಒಪ್ಪಿಕೊಂಡಿದೆ. ಪುಲ್ವಾಮಾ ದಾಳಿಯ ತಮ್ಮ ಸಮುದಾಯ ಯಶಸ್ಸು ಎಂದು ಪಾಕಿಸ್ತಾನ ಸಚಿವ ಫವಾದ್ ಖಾನ್ ಸಂಸತ್ ನಲ್ಲಿಯೇ ಹೇಳಿಕೆ ನೀಡಿದ್ದಾರೆ.

    ಇಂದು ಮುಸ್ಲಿಂ ಲೀಗ್ ಎನ್ ಪಕ್ಷದ ನೇತಾರ ಅಯಾಜ್ ಸಾದಿಕ್ ಪ್ರಶ್ನೆಗೆ ಫವಾದ್ ಖಾನ್ ಉತ್ತರಿಸುತ್ತಿದ್ದರು. ಭಾರತ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವಶಕ್ಕೆ ಪಡೆದ ವೇಳೆ ವಿದೇಶಾಂಗ ಸಚಿವ ಖುರೇಷಿ ಭಯಗೊಂಡಿದ್ದರು. ಆರ್ಮಿ ಚೀಫ್ ಹಣೆಯ ಮೇಲೆ ಬೆವರು ಇತ್ತು, ಅವರ ಕಾಲುಗಳು ನಡಗುತ್ತಿದ್ದವು ಎಂದು ಸಾದಿಕ್ ಹೇಳಿದ್ದರು. ಇದನ್ನೂ ಓದಿ: ಅಭಿನಂದನ್‍ರನ್ನು ಬಿಡುಗಡೆ ಮಾಡದಿದ್ರೆ ಪಾಕ್ ಬ್ರಿಗೇಡ್‍ಗಳು ಧ್ವಂಸ ಆಗ್ತಿತ್ತು – ಧನೋವಾ

    ಸಾದಿಕ್ ಪ್ರಶ್ನೆಗೆ ಉತ್ತರಿಸಿದ ಫವಾದ್, ನಾನು ಹಿಂದೂಸ್ಥಾನದೊಳಗೆ ನುಗ್ಗಿ ದಾಳಿ ನಡೆಸಿದ್ದೇವೆ. ಪುಲ್ವಾಮಾ ದಾಳಿಯಲ್ಲಿ ಸಿಕ್ಕ ಯಶಸ್ಸು, ಇಮ್ರಾನ್ ಖಾನ್ ಆದೇಶದಿಂದ ಲಭ್ಯವಾಗಿರೋದು. ಇದು ನಮ್ಮ ಸಮುದಾಯದ ಯಶಸ್ಸು. ಆ ಯಶಸ್ಸಿನಲ್ಲಿ ನಾವು ಮತ್ತು ನೀವು ಭಾಗಿಯಾಗಲು ಸಿಕ್ಕ ಅವಕಾಶ ಹೆಮ್ಮೆ ವಿಷಯ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿ- ಒಂದು ಮೊಬೈಲ್‍ನಿಂದ ಇಡೀ ಕೃತ್ಯದ ಮಾಹಿತಿ ಬಹಿರಂಗ

    ಅಂದು ಏನಾಗಿತ್ತು?
    ಕಳೆದ ವರ್ಷದ ಫೆ. 14 ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಉಗ್ರ ಅದಿಲ್ ಅಹ್ಮದ್ ದಾರ್ ಇಕೋ ಕಾರನ್ನು ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಸ್ಫೋಟದ ತೀವ್ರತೆಗೆ ಯೋಧರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ದೂರದವರೆಗೆ ಚಿಮ್ಮಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದನ್ನೂ ಓದಿ:  ಪುಲ್ವಾಮಾ ದಾಳಿ – ಭಯೋತ್ಪಾದಕಿ ಮಗಳಿಗೆ ಸಾಥ್ ಕೊಟ್ಟಿದ್ದ ತಂದೆ, ಬಯಲಾಯ್ತು ಸ್ಫೋಟಕ ಸತ್ಯ