Tag: fawad chaudhry

  • ಮೋದಿಗೆ ಮತ್ತೊಂದು ಯುದ್ಧದಲ್ಲಿ ಸೋಲು: ಕೇಜ್ರಿವಾಲ್‌ ಜೈಲಿಂದ ಹೊರಬಂದಿದ್ದಕ್ಕೆ ಪಾಕ್‌ ನಾಯಕ ಸಂತಸ

    ಮೋದಿಗೆ ಮತ್ತೊಂದು ಯುದ್ಧದಲ್ಲಿ ಸೋಲು: ಕೇಜ್ರಿವಾಲ್‌ ಜೈಲಿಂದ ಹೊರಬಂದಿದ್ದಕ್ಕೆ ಪಾಕ್‌ ನಾಯಕ ಸಂತಸ

    ಇಸ್ಲಾಮಾಬಾದ್: ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಜೈಲಿನಿಂದ ಬಿಡುಗಡೆಯಾದ ಬಗ್ಗೆ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ (Fawad Chaudhry) ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಮತ್ತೊಂದು ಯುದ್ಧದಲ್ಲಿ ಸೋತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಕೇಜ್ರಿವಾಲ್‌ ಬಿಡುಗಡೆ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಚೌದರಿ, ಮೋದಿ (Narendra Modi) ಜಿ ಅವರಿಗೆ ಮತ್ತೊಂದು ಯುದ್ಧದಲ್ಲಿ ಸೋಲಾಗಿದೆ. ಕೇಜ್ರಿವಾಲ್‌ ಬಿಡುಗಡೆಯು ಭಾರತದ ಜನತೆಗೆ ಒಳ್ಳೆಯ ಸಂದೇಶ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕಿದೆ: 50 ದಿನಗಳ ಬಳಿಕ ಜೈಲಿನಿಂದ ಹೊರಬಂದ ಕೇಜ್ರಿವಾಲ್‌ ಪ್ರತಿಕ್ರಿಯೆ

    ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2024 ರ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. 50 ದಿನಗಳ ನಂತರ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

    ಹಲವು ಷರತ್ತುಗಳನ್ನು ವಿಧಿಸಿ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ. ಜೂ.2 ರಂದು ಮತ್ತೆ ಪೊಲೀಸರ ಮುಂದೆ ಶರಣಾಗುವಂತೆ ದೆಹಲಿ ಸಿಎಂಗೆ ಸುಪ್ರೀಂ ಸೂಚನೆ ನೀಡಿದೆ. ಇದನ್ನೂ ಓದಿ: ದೇವರ ಆಶೀರ್ವಾದ ನನ್ನ ಜೊತೆಗಿದೆ- ಜೈಲಿನಿಂದ ಹೊರ ಬಂದ ಕೇಜ್ರಿವಾಲ್‌ ಫಸ್ಟ್‌ ರಿಯಾಕ್ಷನ್

    ಇದಕ್ಕೂ ಮುನ್ನ, ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಮರುಹಂಚಿಕೆ ಸಮೀಕ್ಷೆಯನ್ನು ನಡೆಸುವುದಾಗಿ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಚೌಧರಿ ಶ್ಲಾಘಿಸಿದ್ದರು. ರಾಹುಲ್ ಗಾಂಧಿಯನ್ನು ಮುತ್ತಜ್ಜ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೊಂದಿಗೆ ಹೋಲಿಸಿ, ‘ಇಬ್ಬರೂ ಸಮಾಜವಾದಿಗಳು’ ಎಂದು ಚೌಧರಿ ಬಣ್ಣಿಸಿದ್ದರು.

  • ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್‌ ಮಾಜಿ ಸಚಿವ

    ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್‌ ಮಾಜಿ ಸಚಿವ

    ಚಂದ್ರಯಾನ-3 ಮನುಕುಲದ ಐತಿಹಾಸಿಕ ಕ್ಷಣ: ಫವಾದ್‌ ಬಣ್ಣನೆ

    ಇಸ್ಲಾಮಾಬಾದ್‌: ಇಸ್ರೋದ (ISRO) ಚಂದ್ರಯಾನ-3 (Chandrayaan-3) ಯೋಜನೆಯು ಅಂತಿಮ ಹಂತಕ್ಕೆ ತಲುಪಿದೆ. ಇಂದು ಚಂದ್ರನ (Moon) ಮೇಲ್ಮೈನಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ. ಇದನ್ನು ಐತಿಹಾಸಿಕ ಕ್ಷಣ ಎಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್‌ ಚೌಧರಿ (Fawad Chaudhry) ಬಣ್ಣಿಸಿದ್ದಾರೆ.

    ಇಮ್ರಾನ್‌ ಖಾನ್‌ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ಫವಾದ್‌ ಚೌಧರಿ, ಭಾರತೀಯ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದ್ದಾರೆ. ಭಾರತ ಕೈಗೊಂಡಿರುವ ಚಂದ್ರಯಾನ-3 ಮನುಕುಲದ ಐತಿಹಾಸಿಕ ಕ್ಷಣ. ಪಾಕಿಸ್ತಾನದ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್

    ತಮ್ಮ ಟ್ವಿಟ್ಟರ್‌ (ಎಕ್ಸ್‌) ಖಾತೆಯಲ್ಲಿ ಪೋಸ್ಟ್‌ ಹಾಕಿರುವ ಫವಾದ್‌ ಚೌಧರಿ, ಪಾಕ್ ಮಾಧ್ಯಮಗಳು ಬುಧವಾರ ಸಂಜೆ 6:15 ಕ್ಕೆ ಚಂದ್ರನ ಮೇಲ್ಮೈಗೆ ಚಂದ್ರಯಾನ-3 ಲ್ಯಾಂಡಿಂಗ್ ಆಗುವುದನ್ನು ನೇರಪ್ರಸಾರ ಮಾಡಬೇಕು. ಮಾನವ ಕುಲಕ್ಕೆ ವಿಶೇಷವಾಗಿ ಭಾರತೀಯರಿಗೆ, ವಿಜ್ಞಾನಿಗಳಿಗೆ ಮತ್ತು ಭಾರತದ ಬಾಹ್ಯಾಕಾಶ ಸಮುದಾಯಕ್ಕೆ ಇದೊಂದು ಐತಿಹಾಸಿಕ ಕ್ಷಣ. ಅವರೆಲ್ಲರಿಗೂ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

    ಚಂದ್ರನ ಅಂಗಳದಲ್ಲಿ ಇಂದು ಸಂಜೆ 6:04ಕ್ಕೆ ಚಂದ್ರಯಾನ-3 ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ. ಚಂದ್ರಯಾನ-3 ಯಶಸ್ಸಿಗೆ ದೇಶಾದ್ಯಂತ ಪ್ರಾರ್ಥನೆ, ಪೂಜೆ-ಪುನಸ್ಕಾರ ನಡೆಯುತ್ತಿವೆ. ಲ್ಯಾಂಡಿಂಗ್‌ ಕಾರ್ಯಕ್ರಮದ ನೇರಪ್ರಸಾರಕ್ಕೆ ಹಲವೆಡೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ವರ್ಜುಯಲ್‌ ಮೂಲಕ ಚಂದ್ರಯಾನ-3 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: Chandrayaan-3: ಕೊನೆಯ ಆ 20 ನಿಮಿಷವೇ ಆತಂಕ – ಲ್ಯಾಂಡಿಂಗ್‌ ಹೇಗಿರುತ್ತೆ? ಈ ಬಗ್ಗೆ ನೀವು ತಿಳಿಯಲೇಬೇಕು…

    ಭಾನುವಾರ ಲ್ಯಾಂಡಿಂಗ್ ವೇಳೆ ಚಂದ್ರನ ಮೇಲ್ಮೈಗೆ ಅಪ್ಪಳಿಸಿದ ರಷ್ಯಾದ ಚಂದ್ರನ ಮಿಷನ್ ಲೂನಾ-25 ವಿಫಲವಾಗಿತ್ತು. 2019 ರಲ್ಲಿ ಚಂದ್ರಯಾನ-2 ಮಿಷನ್ ಚಂದ್ರನ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿರುವ ಅದೇ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿಯಲಾಗದೇ ವಿಫಲವಾಗಿತ್ತು. ಈಗ ಭಾರತದ ಚಂದ್ರಯಾನ-3 ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ: ಚಂದ್ರಯಾನ-3 ಲೇವಡಿ ಮಾಡಿದ ಪಾಕಿಸ್ತಾನ ಮಾಜಿ ಸಚಿವ

    ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ: ಚಂದ್ರಯಾನ-3 ಲೇವಡಿ ಮಾಡಿದ ಪಾಕಿಸ್ತಾನ ಮಾಜಿ ಸಚಿವ

    ಇಸ್ಲಾಮಾಬಾದ್‌: ಭಾರತದ ಮಹತ್ವಾಕಾಂಕ್ಷೆ ಚಂದ್ರಯಾನ-3 (Chandrayaan-3) ಅನ್ನು ಪಾಕಿಸ್ತಾನದ (Pakistan) ವಿಜ್ಞಾನ ಮತ್ತು ತಂತ್ರಜ್ಞಾನ ಮಾಜಿ ಸಚಿವ ಫವಾದ್‌ ಚೌಧರಿ (Fawad Chaudhry) ಲೇವಡಿ ಮಾಡಿದ್ದಾರೆ. ಚಂದ್ರನ ವೀಕ್ಷಣೆಗಾಗಿ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ ಹಾಸ್ಯ ಮಾಡಿದ್ದಾರೆ.

    ಫವಾದ್ ಅವರ ಸಂದರ್ಶನದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡೆಸಿದ ಚಂದ್ರನ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಶ್ನೆಗೆ ಹಾಸ್ಯಮಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: Chandrayaan-3: ವಿಮಾನದ ಕಿಟಕಿಯಿಂದ ಸೆರೆಯಾದ ಅದ್ಭುತ ವೀಡಿಯೋ ವೈರಲ್

    ಬಾಹ್ಯಾಕಾಶದಲ್ಲಿ ಚಂದ್ರನ ಸ್ಥಾನ ನಮಗೆ ಗೊತ್ತಿದೆ. ಯಾವಾಗ ಹುಟ್ಟುತ್ತಾನೆ, ಮುಳುಗುತ್ತಾನೆ ಎಂಬುದೂ ತಿಳಿದಿದೆ. ಆದರೆ ಚಂದ್ರನ ವೀಕ್ಷಣೆಗೆ ಇಷ್ಟು ಕಸರತ್ತು ಮಾಡುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವರ ಹೇಳಿಕೆಯನ್ನು ಬೆಂಬಲಿಸಿ ವೀಡಿಯೋವನ್ನು ಅನೇಕರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಜು.14 ರಂದು ಚಂದ್ರಯಾನ-3 ಯೋಜನೆಯ ಗಗನನೌಕೆಯನ್ನು ಇಸ್ರೋ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಉಡಾವಣೆ ಮಾಡಿತು. ಗಗನನೌಕೆಯು ಕಕ್ಷೆ ಬದಲಿಸುವ ಎರಡನೇ ಹಂತದ ಪ್ರಕ್ರಿಯೆಯು ಸೋಮವಾರ ಯಶಸ್ವಿಯಾಗಿದೆ. ಅಲ್ಲದೇ ಭೂಮಿಯ ಸುತ್ತ ಮೂರನೇ ಕಕ್ಷೆಗೆ ಇಂದು ಗಗನನೌಕೆ ಏರಲಿದೆ. ಇದನ್ನೂ ಓದಿ: Chandrayaan-3 ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ: ಇಸ್ರೋ

    ಅಮೆರಿಕ, ಚೀನಾ, ರಷ್ಯಾ ದೇಶಗಳು ಚಂದ್ರನ ಮೇಲ್ಮೈ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿ ಯಶಸ್ವಿಯಾಗಿವೆ. ಭಾರತದ ಚಂದ್ರಯಾನ-3 ಯಶಸ್ವಿಯಾದರೆ ಈ ದೇಶಗಳ ಸಾಲಿಗೆ ಸೇರುತ್ತದೆ. ಅಲ್ಲದೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾರ್ಯಾಚರಣೆ ಮಾಡಿದ ಮೊದಲ ದೇಶವಾಗಿ ಇತಿಹಾಸ ಸೃಷ್ಟಿಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಮ್ರಾನ್ ಖಾನ್ ಕೊನೆಯ ಬಾಲ್ ವರೆಗೂ ಹೋರಾಡುತ್ತಾರೆ, ರಾಜೀನಾಮೆ ಕೊಡಲ್ಲ: ಪಾಕ್ ಸಚಿವ

    ಇಮ್ರಾನ್ ಖಾನ್ ಕೊನೆಯ ಬಾಲ್ ವರೆಗೂ ಹೋರಾಡುತ್ತಾರೆ, ರಾಜೀನಾಮೆ ಕೊಡಲ್ಲ: ಪಾಕ್ ಸಚಿವ

    ಇಸ್ಲಾಮಾಬಾದ್: ಪಾಕ್ ಪ್ರಧಾನಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಇಮ್ರಾನ್ ಖಾನ್ ಒಬ್ಬ ಆಟಗಾರನಾಗಿ ಕೊನೆಯ ಬಾಲ್ ವರೆಗೆ ಹೋರಾಡುತ್ತಾರೆ. ರಾಜೀನಾಮೆ ಕೊಡುವುದಿಲ್ಲ ಎಂದು ಪಾಕಿಸ್ತಾನದ ಸಚಿವ ಫವಾದ್ ಚೌಧರಿ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

    ಪಾಕ್ ಸಂಸತ್‍ನಲ್ಲಿ ಅವಿಶ್ವಾಸ ಮಂಡನೆ ಬಳಿಕ ಸರ್ಕಾರ ಪತನಗೊಳ್ಳುವ ಎಲ್ಲಾ ಸಾಧ್ಯತೆಗಳು ಇದ್ದು, ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ರಾಜೀನಾಮೆ ಕೊಡಬೇಕೆಂಬ ಕೂಗು ಜೋರಾಗಿದೆ. ಈ ನಡುವೆ ಇಮ್ರಾನ್ ಖಾನ್ ಸರ್ಕಾರದಲ್ಲಿ ಸಚಿವರಾಗಿದ್ದ ಫವಾದ್ ಚೌಧರಿ, ಇಮ್ರಾನ್ ಖಾನ್ ಆಟಗಾರ ಅವರು ಕೊನೆಯ ಬಾಲ್ ವರೆಗೂ ಆಡುತ್ತಾರೆ ರಾಜೀನಾಮೆ ನೀಡುವುದಿಲ್ಲ ಎಂದು ಉರ್ದು ಭಾಷೆಯಲ್ಲಿ ಬರೆದುಕೊಂಡು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಲ್ಪಮತಕ್ಕೆ ಕುಸಿದ ಇಮ್ರಾನ್ ಖಾನ್ ಸರ್ಕಾರ- ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಸಾಧ್ಯತೆ

    ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯು 342 ಸಂಸದರ ಸಾಮರ್ಥ್ಯ ಹೊಂದಿದೆ. 172 ಸ್ಥಾನಗಳು ಬಹುಮತ ಸಂಖ್ಯೆಯಾಗಿದ್ದು, ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತ್ರೆಹ್ರೀಕ್ – ಎ ಇನ್ಸಾಫ್ ಪಕ್ಷ 177 ಸ್ಥಾನಗಳನ್ನು ಹೊಂದಿತ್ತು. ವಿಪಕ್ಷ ಪಿಪಿಪಿ ಬಳಿ 162 ಸ್ಥಾನಗಳಿದ್ದು, ಸರ್ಕಾರ ರಚನೆಗೆ ಇಮ್ರಾನ್ ಖಾನ್ ಪರ ಸಂಸದರನ್ನು ಸೆಳೆಯುತ್ತಿದೆ. ಇದನ್ನೂ ಓದಿ: ಚೀನಾದ ಶಾಂಫೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

    https://twitter.com/FawadPTIUpdates/status/1509104201019936771

    ಈಗ ಪಿಪಿಪಿಗೆ ಎಂಕ್ಯೂಎಂ-ಪಿ ಪಕ್ಷವೂ ಬೆಂಬಲ ನೀಡುವುದಾಗಿ ಹೇಳಿರುವುದರಿಂದ ಇಮ್ರಾನ್ ಖಾನ್ ಸರ್ಕಾರ ಕುಸಿದು ಬೀಳುವುದು ಖಚಿತವಾಗಿದೆ. ನಾಳೆ ಪಾಕ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆ ಆರಂಭವಾಗಲಿದ್ದು, ಏಪ್ರಿಲ್ 3ಕ್ಕೆ ಮತದಾನ ನಡೆಯಲಿದೆ. ಈ ನಡುವೆ ಇಮ್ರಾನ್ ಖಾನ್ ಏನು ನಿರ್ಧಾರ ಕೈಗೊಳ್ಳುತ್ತಾರೆ? ರಾಜೀನಾಮೆಗೆ ಮುಂದಾಗುತ್ತಾರಾ? ಎಂಬ ಕುತೂಹಲ ಪಾಕ್ ರಾಜಕೀಯದಲ್ಲಿ ಮೂಡಿದೆ.

  • ಸಂಗೀತ ಲೋಕವನ್ನು ದಶಕಗಳ ಕಾಲ ಆಳಿದ ರಾಣಿ ಲತಾ ಮಂಗೇಶ್ಕರ್‌: ಪಾಕ್‌ ಸಚಿವ

    ನವದೆಹಲಿ: ಖ್ಯಾತ ಹಿನ್ನೆಲೆ ಗಾಯಕಿ, ಭಾರತ ರತ್ನ ಪುರಸ್ಕೃತೆ ಲತಾ ಮಂಗೇಶ್ಕರ್‌ ಅವರ ನಿಧನಕ್ಕೆ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್‌ ಚೌದರಿ ಸಂತಾಪ ಸೂಚಿಸಿದ್ದಾರೆ.

    ಸಂಗೀತ ಲೋಕದ ದಂತಕಥೆ ಇನ್ನಿಲ್ಲ. ಸಂಗೀತ ಜಗತ್ತನ್ನು ದಶಕಗಳ ಕಾಲ ಆಳಿದ ಸುಮಧುರ ಕಂಠದ ರಾಣಿ ಲತಾ ಮಂಗೇಶ್ಕರ್‌. ಅವರು ಸಂಗೀತ ಕಿರೀಟವಿಲ್ಲದ ರಾಣಿಯಾಗಿದ್ದರು. ಅವರ ಧ್ವನಿಯು ಎಲ್ಲಾ ಕಾಲಕ್ಕೂ ಜನರ ಹೃದಯವನ್ನು ಆಳುತ್ತಿರುತ್ತದೆ ಎಂದು ಟ್ವೀಟ್‌ ಮಾಡಿ ಸ್ಮರಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಎರಡು ದಿನ ಶೋಕಾಚರಣೆ

    ಫವಾದ್‌ ಚೌದರಿ ಅವರು ಉರ್ದು ಹಾಗೂ ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿ ಲತಾ ಮಂಗೇಶ್ಕರ್‌ ಅವರಿಗೆ ಸಂತಾಪ ಸೂಚಿಸಿದ್ದಾರೆ.

    ಲತಾ ಮಂಗೇಶ್ಕರ್‌ ಅವರು ಭಾರತದ ಗಡಿಯಾಚೆಗೂ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಪಾಕಿಸ್ತಾನ ಸರ್ಕಾರಿ ಟೆಲಿವಿಷನ್‌ ಕೂಡ ಲತಾ ಅವರ ಜೀವನ, ಸಾಧನೆ ಸುದ್ದಿಯನ್ನು ಪ್ರಸಾರ ಮಾಡಿದೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ವಿಶೇಷ ನಮನ

    ಕೊರೊನಾ ಸೋಂಕು ಹಾಗೂ ಅಂಗಾಂಗ ವೈಫಲ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ಕೊನೆಯುಸಿರೆಳೆದರು. ಮುಂಬೈನ ಕ್ಯಾಂಡಿ ಆಸ್ಪತ್ರೆಯ ತ್ರೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.