Tag: Fatwa

  • ಮುಸ್ಲಿಮರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದೀರಿ: ವಿಜಯ್‌ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಜಮಾತ್‌

    ಮುಸ್ಲಿಮರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದೀರಿ: ವಿಜಯ್‌ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಜಮಾತ್‌

    ಟ, ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್‌ ದಳಪತಿ (Vijay Thalapathy) ವಿರುದ್ಧ ಅಖಿಲ ಭಾರತ ಮುಸ್ಲಿಂ ಜಮಾತ್‌ ಫತ್ವಾ (Fatwa) ಹೊರಡಿಸಿದೆ. ಮುಸ್ಲಿಂ ಸಮುದಾಯದ ಯಾರು ಕೂಡ ವಿಜಯ್‌ ಜೊತೆ ನಿಲ್ಲದಂತೆ ಮನವಿ ಮಾಡಿಕೊಂಡಿದೆ.

    ಮುಸ್ಲಿಮರನ್ನು ವಿಜಯ್ ನಕಾರಾತ್ಮಕವಾಗಿ ಬಿಂಬಿಸಿದ್ದಾರೆ. ಜೂಜುಕೋರರು ಮತ್ತು ಮದ್ಯ ಗ್ರಾಹಕರನ್ನು ತಮ್ಮ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದರಿಂದ ಫತ್ವಾ ಹೊರಡಿಸಲಾಗಿದೆ ಎಂದು ಎಐಎಂಜೆ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ನಟಿಸಲು ಹಲವು ಕಥೆಗಳನ್ನು ಕೇಳಿದ್ದೆ, ಯಾವುದು ಇಷ್ಟವಾಗಿಲ್ಲ: ಪೂಜಾ ಹೆಗ್ಡೆ

    ನಟ ವಿಜಯ್‌ ರಾಜಕೀಯ ಪಕ್ಷವನ್ನು ರಚಿಸಿದ್ದಾರೆ. ಮುಸ್ಲಿಮರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಆದರೆ, ಅವರು ತಮ್ಮ ಚಲನಚಿತ್ರಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದನೆ ಹರಡುವವರಂತೆ ನಕಾರಾತ್ಮಕ ರೀತಿಯಲ್ಲಿ ಬಿಂಬಿಸಿದ್ದರು ಎಂದು ರಜ್ವಿ ಆರೋಪಿಸಿದ್ದಾರೆ.

    ಅವರು ಈಚೆಗೆ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಜೂಜುಕೋರರು ಮತ್ತು ಮದ್ಯ ಸೇವಿಸುವವರನ್ನು ಆಹ್ವಾನಿಸಲಾಗಿತ್ತು. ಇದೆಲ್ಲದರಿಂದ ತಮಿಳುನಾಡಿನ ಸುನ್ನಿ ಮುಸ್ಲಿಮರು ಅವರ ಮೇಲೆ ಕೋಪಗೊಂಡಿದ್ದಾರೆ. ಅವರು ಫತ್ವಾ ಕೇಳಿದರು. ಹೀಗಾಗಿ, ಮುಸ್ಲಿಮರು ವಿಜಯ್ ಜೊತೆ ನಿಲ್ಲಬಾರದು ಎಂದು ಉಲ್ಲೇಖಿಸಿ ಫತ್ವಾ ಹೊರಡಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಫ್ಯಾನ್ಸ್‌ಗೆ ಪತ್ರ ಬರೆದ ನಜ್ರಿಯಾ

    ನಟ, ರಾಜಕಾರಣಿ ವಿಜಯ್ ಅವರಿಗೆ ಮುಸ್ಲಿಮರಿಂದ ಬೆದರಿಕೆ ಇದೆ ಎಂದು ಕೇಂದ್ರದಿಂದ ವೈ-ಭದ್ರತೆ ಕೋರಲಾಗಿದೆಯೆಂದು ಪ್ರತಿಸ್ಪರ್ಧಿಗಳು ಆರೋಪಿಸಿದ್ದರು. ಇದರ ಬೆನ್ನಲ್ಲೇ ವಿವಾದ ಭುಗಿಲೆದ್ದಿತ್ತು.

    ವಿಜಯ್ ತಮ್ಮ ‘ಕಥಿ’ ಮತ್ತು ‘ಬೀಸ್ಟ್’ ಚಿತ್ರಗಳಲ್ಲಿ ಮುಸ್ಲಿಮರನ್ನು ನಕಾರಾತ್ಮಕವಾಗಿ ತೋರಿಸಿದ್ದಾರೆ. ಆದ್ದರಿಂದ, ನಟನಿಗೆ ಮುಸ್ಲಿಮರಿಂದ ಬೆದರಿಕೆ ಬರಬಹುದು ಎಂದು ವಿಜಯ್ ಮತ್ತು ಟಿವಿಕೆ, ಗೃಹ ಸಚಿವಾಲಯದಿಂದ ರಕ್ಷಣೆ ಕೋರಿದ್ದಾರೆ ಎಂದು ವಿಸಿಕೆ ವಕ್ತಾರ ವನ್ನಿಯರಸು ಹೇಳಿದ್ದರು. ಇದನ್ನೂ ಓದಿ: ಪೀರಿಯಡ್ಸ್ ಬಗ್ಗೆ ಸಮಂತಾ ಓಪನ್ ಟಾಕ್

    ಆದರೆ, ಟಿವಿಕೆ ಮತ್ತು ಮಿತ್ರ ಪಕ್ಷ ತಮಿಳುನಾಡು ಮುಸ್ಲಿಂ ಲೀಗ್ ಈ ಆರೋಪಗಳನ್ನು ನಿರಾಕರಿಸಿದೆ. ಇದು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಮುಸ್ಲಿಮರನ್ನು ಟಿವಿಕೆಯಿಂದ ದೂರವಿಡಲು ಮಾಡಿದ ತಂತ್ರವಾಗಿದೆ ಎಂದು ಆರೋಪಿಸಿದೆ.

  • ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ

    ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ

    – ನನ್ನನ್ನು ದ್ವೇಷಿಸುವವರು ಪಾಕಿಸ್ತಾನಕ್ಕೆ ಹೋಗಲಿ ಅಂದ್ರು ಉಮರ್‌ ಅಹ್ಮದ್‌

    ಅಯೋಧ್ಯೆ: ಜನವರಿ 22 ರಂದು ನಡೆದ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸಿದ್ದ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ವಿರುದ್ಧ ಫತ್ವಾ (Fatwa) ಹೊರಡಿಸಲಾಗಿದೆ.

    ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ (Dr Imam Umer Ahmed Ilyasi) ಅವರಿಗೆ ಫತ್ವಾ ಹೊರಡಿಸಲಾಗಿದೆ. ಈ ವಿಚಾರವನ್ನು ಸ್ವತಃ ಉಮರ್‌ ಅಹ್ಮದ್‌ ಅವರೇ ತಿಳಿಸಿದ್ದಾರೆ. ಮುಖ್ಯ ಇಮಾಮ್ ಆಗಿ ನಾನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಆಹ್ವಾನವನ್ನು ಸ್ವೀಕರಿಸಿದ್ದೇನೆ. ನಾನು ಎರಡು ದಿನ ಆಲೋಚಿಸಿ ನಂತರ ದೇಶಕ್ಕಾಗಿ ಸೌಹಾರ್ದತೆಗಾಗಿ ಅಯೋಧ್ಯೆಗೆ (Ayodhya Ram Mandir) ಹೋಗಲು ನಿರ್ಧರಿಸಿದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಶೆಟ್ಟರ್ ಡೀಸೆಂಟ್ ಜಂಟಲ್‍ ಮ್ಯಾನ್, ಕಾಂಗ್ರೆಸ್ಸಿಗರು ಉಳಿಸಿಕೊಳ್ಳಬೇಕಾಗಿತ್ತು: ಹರಿಪ್ರಸಾದ್

    ಕ್ಷಮೆ ಕೇಳಲ್ಲ: ಭಾನುವಾರ ಫತ್ವಾ ಹೊರಡಿಸಲಾಗಿದೆ. ಜನವರಿ 22 ರ ಸಂಜೆಯಿಂದ ನನಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ. ನಾನು ಕೆಲವು ಕರೆಗಳನ್ನು ರೆಕಾರ್ಡ್ ಮಾಡಿದ್ದೇನೆ, ಅದರಲ್ಲಿ ಕರೆ ಮಾಡಿದವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನನ್ನನ್ನು ಪ್ರೀತಿಸುವವರು ಹಾಗೂ ರಾಷ್ಟ್ರವನ್ನು ಪ್ರೀತಿಸುವವರು ನನ್ನನ್ನು ಬೆಂಬಲಿಸುತ್ತಾರೆ. ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನನ್ನು ದ್ವೇಷಿಸುವವರು ಬಹುಶಃ ಪಾಕಿಸ್ತಾನಕ್ಕೆ ಹೋಗಲಿ. ನಾನು ಪ್ರೀತಿಯ ಸಂದೇಶವನ್ನು ನೀಡಿದ್ದೇನೆ, ನಾನು ಯಾವುದೇ ಅಪರಾಧ ಮಾಡಿಲ್ಲ. ಈ ಸಂಬಂಧ ನಾನು ಕ್ಷಮೆಯಾಚಿಸುವುದಿಲ್ಲ ಅಥವಾ ರಾಜೀನಾಮೆ ನೀಡುವುದಿಲ್ಲ. ಅವರು ಏನು ಬೇಕಾದರೂ ಮಾಡಬಹುದು ಎಂದು ಅವರು ಹೇಳಿದ್ದಾರೆ.

    ಈ ಕುರಿತು ಮುಖ್ಯ ಇಮಾಮ್ ಅವರು ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಅವರ ವಿರುದ್ಧದ ಫತ್ವಾ ದುರದೃಷ್ಟಕರ ಮತ್ತು ಖಂಡನೀಯ ಕೃತ್ಯ ಎಂದು ವಿಎಚ್‌ಪಿ ಬಣ್ಣಿಸಿದೆ. ಕೆಲವು ಮೂಲಭೂತವಾದಿಗಳು ಇಸ್ಲಾಂ ಅನ್ನು ತಮ್ಮ ಆಸ್ತಿ ಎಂದು ಪರಿಗಣಿಸುತ್ತಾರೆ ಎಂದು ಕಿಡಿಕಾರಿದೆ.

  • ಮುಸ್ಲಿಂ ಯುವತಿಯರು ಐಬ್ರೋ ಮಾಡುವಂತಿಲ್ಲ – ಫತ್ವಾ ಹೊರಡಿಸಿದ ಬರೇಲಿ ಧಾರ್ಮಿಕ ಕೇಂದ್ರ

    ಮುಸ್ಲಿಂ ಯುವತಿಯರು ಐಬ್ರೋ ಮಾಡುವಂತಿಲ್ಲ – ಫತ್ವಾ ಹೊರಡಿಸಿದ ಬರೇಲಿ ಧಾರ್ಮಿಕ ಕೇಂದ್ರ

    ಲಕ್ನೋ: ಮುಸ್ಲಿಂ ಯುವತಿಯರು ಐಬ್ರೋ (Eyebrow) ಮಾಡಬಾರದು ಎಂದು ಉತ್ತರ ಪ್ರದೇಶದ (Uttar Pradesh) ದರ್ಗಾ ಅಲಾ ಹಜರತ್ ಫತ್ವಾ (Fatwa) ಹೊರಡಿಸಿದೆ.

    ಮುಸ್ಲಿಂ (Muslim) ಯುವಕರು ತಮ್ಮ ಗುರುತನ್ನು ಮರೆ ಮಾಚುವ ಮತ್ತು ಮಸ್ಲಿಮೇತರ (Non-Muslim) ಹುಡುಗಿಯರನ್ನು ಮಾದುವೆಯಾಗಬಾರದು ಎಂದು ಇನ್ನೊಂದು ಫತ್ವಾ ಹೊರಡಿಸಿದೆ. ಇದನ್ನೂ ಓದಿ: ಇಸ್ಲಾಂ ಪದ್ಧತಿಯಂತೆ ಮದುವೆಯಾದ ಮುಸ್ಲಿಂ ಜೋಡಿ

    ಪುರುಷರು ಕೂದಲು ಕಸಿ ಮಾಡುವುದು ಹಾಗೂ ಮಹಿಳೆಯರು ತಮ್ಮ ಹುಬ್ಬುಗಳಿಗೆ ಆಕಾರ ನೀಡುವುದು ಷರಿಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

    ದಾರುಲ್ ಇಫ್ತಾ (Darul Ifta) ಸಂಸ್ಥೆಯು ಹೊರಡಿಸಿದ ಈ ಫತ್ವಾದಲ್ಲಿ ಮುಸ್ಲಿಂ ಯುವಕರು ತಮ್ಮ ಗುರುತನ್ನು ಮರೆಮಾಚಿ ಅನ್ಯಧರ್ಮದ ಹುಡುಗಿಯರ ಪ್ರೀತಿಯಲ್ಲಿ ಬೀಳುವುದು ‘ಹರಾಮ್’ (Haram) ಎಂದು ಹೇಳಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಐಫೋನ್‌ ಫ್ಯಾಕ್ಟರಿ, ಬೆಂಗಳೂರಿನಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌: ಫಾಕ್ಸ್‌ಕಾನ್‌ ಅಧಿಕೃತ ಘೋಷಣೆ

    ಮುಸ್ಲಿಂ ಯುವಕರು ಇಸ್ಲಾಮೇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಲ್ಲದೆ ಅನ್ಯ ಧರ್ಮದ ಯುವತಿಯರೊಂದಿಗೆ ಪ್ರೀತಿಯಲ್ಲಿ ಬಿದ್ದು ಅವರನ್ನು ಮದುವೆಯಾಗುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬರೇಲಿಯಿಂದ ಫತ್ವಾವನ್ನು ಹೊರಡಿಸಲಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನ ಶಹಾಬುದ್ದಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ:ಆಲಿಯಾ ನನ್ನ ಪತ್ನಿಯಲ್ಲ, ನನ್ನ ಮಕ್ಕಳ ತಾಯಿ ಅಷ್ಟೆ: ನಟ ನವಾಜುದ್ದೀನ್ ಸಿದ್ದಿಕಿ

    ಈ ಇಸ್ಲಾಮೇತರ ಕೃತ್ಯಗಳಲ್ಲಿ ಮುಸ್ಲಿಂ ಹುಡುಗರು ತಮ್ಮ ಕೈಗೆ ಖಡಗ, ಹಣೆಗೆ ತಿಲಕವನ್ನು ಇಟ್ಟುಕೊಳ್ಳುವುದು, ತಮ್ಮ ಗುರುತನ್ನು ಮರೆಮಾಚಿ ಅನ್ಯ ಧರ್ಮದ ಯುವತಿಯರೊಡನೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವಂತಹ ಚಟುವಟಿಕೆಗಳು ಕಾನೂನು ಬಾಹಿರ ಮತ್ತು ಹರಾಮ್ ಎಂದು ಫತ್ವಾದಲ್ಲಿ ಉಲ್ಲೇಖಿಸಲಾಗಿದೆ.

    ಇದೇ ತರಹ ಪತಿಯು ತನ್ನ ಪತ್ನಿಗೆ ಮೆಸ್ಸೇಜ್ ಮುಖಾಂತರ ಹಲವು ಬಾರಿ ತಲಾಖ್ (Talaq) ನೀಡಿ ಪತ್ನಿಯು ಅದನ್ನು ಸ್ವೀಕರಿಸಿದರೆ ಷರಿಯಾ ಪ್ರಕಾರ ತಲಾಖ್ ಮಾನ್ಯವಾಗಿರುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ಐವರು ಮಕ್ಕಳಿದ್ದರೂ, ಆಸ್ತಿಯೆಲ್ಲಾ UP ಸರ್ಕಾರದ ಹೆಸರಿಗೆ ಬರೆದ ವೃದ್ಧ

  • ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ

    ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ

    ಲಕ್ನೋ: ಉತ್ತರಪ್ರದೇಶದ ಮೀರತ್‌ನಲ್ಲಿರುವ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವುದಕ್ಕೆ ಮುಸ್ಲಿಂ ಧರ್ಮಗುರುಗಳಿಂದ ಬೆದರಿಕೆ ಬರುತ್ತಿದೆ ಎಂಬುದಾಗಿ ಬಿಜೆಪಿ ನಾಯಕಿ ರೂಬಿಖಾನ್ ಆರೋಪಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಮುಸ್ಲಿಂ ಧರ್ಮಗುರುಗಳು ಬೆದರಿಕೆ ಹಾಕಿದ್ದಾರೆ. ಈ ಹಿಂದೆಯೂ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮನೆಯುಲ್ಲಿ ಪೂಜೆ ಸಲ್ಲಿಸಿದಾಗಲೂ ತನ್ನ ವಿರುದ್ಧ ಫತ್ವಾ ಹೊರಡಿಸಲಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಮನೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

    ಸಾಂದರ್ಭಿಕ ಚಿತ್ರ

    ಇದೀಗ ನಾನು 7 ದಿನಗಳ ಕಾಲ ಮನೆಯಲ್ಲಿ ಗಣೇಶನ ವಿಗ್ರಹ ಸ್ಥಾಪಿಸಿದ್ದೇನೆ, ಶ್ರದ್ಧೆಯಿಂದ ಪೂಜಿಸಿ, ವಿಸರ್ಜನೆ ಮಾಡುತ್ತೇನೆ. ಅದಕ್ಕಾಗಿ ನನ್ನ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಅಲ್ಲದೇ, ಮುಸ್ಲಿಂ ಧರ್ಮಗುರುಗಳು ನನ್ನ ವಿರುದ್ಧ ತಿರುಗಿಬಿದ್ದಿದ್ದಾರೆ, ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ. ಈ ಹಿಂದೆಯೂ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ಈಗ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ಗಣೇಶನನ್ನು ಪೂಜಿಸಿ, ವಿಸರ್ಜನೆ ಮಾಡುತ್ತೇನೆ. ನನ್ನ ಪತಿ ನನ್ನೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‍ಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ ಧರ್ಮ ಗುರು

    ಕಾಂಗ್ರೆಸ್‍ಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ ಧರ್ಮ ಗುರು

    ರಾಮನಗರ: ಹಲವು ವಿಶೇಷತೆಗಳಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ ಬೊಂಬೆನಗರಿ ಚನ್ನಪಟ್ಟಣ. ಈಗಾಗಲೇ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಪ್ರಬಲ ನಾಯಕರೇ ಸ್ಪರ್ಧೆ ಮಾಡಿರೋದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಎಲ್ಲದರ ನಡುವೆ ಮುಸ್ಲಿಂ ಧರ್ಮಗುರು ಒಬ್ಬರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ್ದಾರೆ.

    ಫಾರುಖ್ ಮುಲ್ಲಾ ಫತ್ವಾ ಹೊರಡಿಸಿದ ಧರ್ಮಗುರು. ಕ್ರಮ ಸಂಖ್ಯೆ 3ರ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣಗೆ ಮತ ನೀಡಬೇಕೆಂದು ತಮ್ಮ ಸಮುದಾಯದ ಜನರಿಗೆ ಸೂಚಿಸಿದ್ದಾರೆ. ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಸಹ ಒಂದೇ ಆಗಿವೆ. ಕೋಮುವಾದಿ ಬಿಜೆಪಿಯನ್ನ ಬೆಂಬಲಿಸದಂತೆ ಸೂಚನೆ ನೀಡಿದ್ದಾರೆ. ರೇವಣ್ಣಗೆ ಅಹಿಂದ ಮತ ಹಾಕುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ತಿಳಿಸಿದ್ದಾರೆ.

    ಚನ್ನಪಟ್ಟಣದಲ್ಲಿ ಒಕ್ಕಲಿಗ ಮತದಾರರ ಬಳಿಕ ಮುಸ್ಲಿಂ ಮತದಾರರ ಪಾತ್ರ ನಿರ್ಣಾಯಕವಾಗಿದೆ. ಹೀಗಾಗಿ ಧರ್ಮಗುರುಗಳು ಹೊರಡಿಸಿರುವ ಫತ್ವಾವನ್ನು ಮುಸ್ಲಿಂ ಸಮುದಾಯದ ಜನರು ಪಾಲನೆ ಮಾಡ್ತಾರಾ ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    ಈ ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಎಚ್.ಎಂ.ರೇವಣ್ಣ ಸ್ಪರ್ಧೆ ಮಾಡಿದ್ರೆ, ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಮತ್ತು ಜೆಡಿಎಸ್ ನಿಂದ ಹೆಚ್.ಡಿ.ಕುಮಾರಸ್ವಾಮಿ ಕಣದಲ್ಲಿದ್ದಾರೆ.

  • ಮುಸ್ಲಿಂ ಮಹಿಳೆಯರು ಐಬ್ರೊ ಮಾಡಿಸಬಾರದು: ಫತ್ವಾಗೆ ಟೀಕೆ

    ಮುಸ್ಲಿಂ ಮಹಿಳೆಯರು ಐಬ್ರೊ ಮಾಡಿಸಬಾರದು: ಫತ್ವಾಗೆ ಟೀಕೆ

    ಲಕ್ನೋ: ಮುಸ್ಲಿಂ ಮಹಿಳೆಯರು ಇನ್ನೂ ಮುಂದೇ ಐಬ್ರೊ ಮಾಡಿಸುವಂತಿಲ್ಲ ಹಾಗೂ ಕೂದಲನ್ನು ಕತ್ತರಿಸುವಂತಿಲ್ಲ ಎಂದು ಉತ್ತರ ಪ್ರದೇಶದ ದರುಲ್ ಉಲೂಮ್ ದಿಯೋಬಂದ್ ಸಂಸ್ಥೆಯೊಂದು ಫತ್ವಾ ಹೊರಡಿಸಿದೆ.

    ಆದರೆ ದರುಲ್ ಉಲೂಮ್ ದಿಯೋಬಂದ್ ಉನ್ನತ ಶಿಕ್ಷಣ ಸಂಸ್ಥೆಯ ಶಾಸನಗಳನ್ನು ಪ್ರಕಟಿಸುವ ದರುಲ್ ಇಫ್ತಾ ಈ ಫತ್ವಾವನ್ನು ಟೀಕಿಸಿದೆ.

    ಫತ್ವಾದಲ್ಲಿ ಏನಿದೆ?

    ಮುಸ್ಲಿಂ ಧರ್ಮದಲ್ಲಿ ಮಹಿಳೆಯರಿಗೆ ಕೂದಲು ಕತ್ತರಿಸುವುದು ಹಾಗೂ ಐಬ್ರೊ ಮಾಡಿಸುವುದು ನಿಷೇಧಿಸಲಾಗಿದೆ, ಅಲ್ಲದೇ ಇನ್ನೂ ಇಂತಹ ಹತ್ತು ನಿಷೇಧಗಳು ಮಹಿಳೆಯರ ವಿಧಿಸಲಾಗಿದೆ. ಮಹಿಳೆಯರಿಗೆ ಬ್ಯೂಟಿ ಪಾರ್ಲರ್‍ಗೆ ತೆರಳಲು ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ, ಅಷ್ಟೇ ಅಲ್ಲ ಪುರುಷರಿಗೂ ಗಡ್ಡವನ್ನು ಶೇವ್ ಮಾಡಿಸಲು ಅನುಮತಿ ಇಲ್ಲ. ದೇಶಾದ್ಯಂತ ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್‍ಗೆ ತೆರಳುವುದು ಅಭ್ಯಾಸವಾಗಿದೆ. ಇದು ಸಾಂಪ್ರದಾಯಿಕ ಮುಸ್ಲಿಂರ ಲಕ್ಷಣವಲ್ಲ. ಇದನ್ನು ಕೂಡಲೇ ನಿಲ್ಲಸಬೇಕು ಎಂದು ತಿಳಿಸಲಾಗಿದೆ.

    ಮುಸ್ಲಿಂ ಮಹಿಳೆಯರಿಂದಲೂ ಫತ್ವಾ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇವರಿಗೆ ಫತ್ವಾ ಹೊರಡಿಸಲು ಯಾವುದೇ ಹಕ್ಕಿಲ್ಲ, ಪ್ರಪಂಚ ಬದಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಾದ ಗಲ್ಫ್ ದೇಶಗಳಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿಯನ್ನು ನೀಡಲಾಗಿದೆ. ಆದರೇ ನಮ್ಮ ದೇಶದಲ್ಲಿ ಇನ್ನೂ ಮಹಿಳೆಯ ಐಬ್ರೊ ಬಗ್ಗೆ ಫತ್ವಾ ಹೊರಡಿಸಲಾಗುತ್ತಿದೆ. ಇದು ನಮ್ಮ ವಿದ್ವಾಂಸರು ಹಾಗೂ ಮೌಲ್ವಿಗಳಿಗೆ ಅವಮಾನ ಎಂದು ತ್ರಿವಳಿ ತಲಾಕ್ ಸಂತ್ರಸ್ತೆ ಸೋಫಿಯಾ ಅಹ್ಮದ್ ಕಿಡಿಕಾರಿದ್ದಾರೆ.

    ಈ ಫತ್ವಾ ಇಸ್ಲಾಂ ಪುರುಷರಿಗೂ ಅನ್ವಯವಾಗುತ್ತದೆ, ಇಂದು ಎಷ್ಟು ಜನ ಮುಸ್ಲಿಂ ಪುರುಷರು ಈ ನಿಯಮವನ್ನು ಪಾಲಿಸುತ್ತಿದ್ದಾರೆ ಇಂತಹ ನಕಲಿ ಮೌಲ್ವಿಗಳನ್ನು ಬಿಟ್ಟು, ನಾವು ಎಲ್ಲವನ್ನು ಬುರ್ಕಾದಾಡಿಯಲ್ಲಿ ಮುಚ್ಚಿಡಲು ಯತ್ನಿಸುತ್ತಿದ್ದೇವೆ. ಇಂತಹ ವ್ಯಕ್ತಿಗಳು `ಲಿಪ್‍ಸ್ಪಿಕ್ ಅಂಡರ್ ಮೈ ಬುರ್ಕಾ’ ಸಿನಿಮಾವನ್ನು ಒಮ್ಮೆ ವಿಕ್ಷೀಸಬೇಕು ಎಂದು ಸಾಫಿಯಾ ಬೇಗಂ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೇರೊಬ್ಬ ಮೌಲ್ವಿಯ ಉಪದೇಶ ಆಲಿಸಿದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಫತ್ವಾ

    ಬೇರೊಬ್ಬ ಮೌಲ್ವಿಯ ಉಪದೇಶ ಆಲಿಸಿದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಫತ್ವಾ

    ಕಾರವಾರ: ಬೇರೊಬ್ಬ ಮೌಲ್ವಿಯ ಉಪದೇಶವನ್ನು ಆಲಿಸಿದ ಕಾರಣಕ್ಕಾಗಿ ಜಿಲ್ಲೆಯ ಚಿತ್ತಾಕುಲದ ಮಾಲ್ದಾರವಾಡದ ಗ್ರಾಮದಲ್ಲಿ 12 ಮುಸ್ಲಿಂ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ.

    ಗ್ರಾಮದ ಅನ್ವರ್ ಮಹಮದ್ ಖಾನ್, ಅಬ್ದುಲ್ ಸಲಾಂ ಸೇರಿದಂತೆ 12 ಕುಟುಂಬಗಳು ಆಂಧ್ರಪ್ರದೇಶದ ದಾವಲ್-ಅಲಿ-ಶಾಹಾರ್ ಎಂಬ ಮೌಲ್ವಿಯ ಉಪದೇಶವನ್ನ ಕೇಳಿ ಅವರನ್ನು ಅನುಸರಿಸುತ್ತಿದ್ದರು. ಈ ಕಾರಣದಿಂದಾಗಿ ಚಿತ್ತಾಕುಲದ ಮಸೀದಿ ಹಾಗೂ ಮಸೀದಿಯ ಸಮಿತಿ, 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಫತ್ವಾ ಹೊರಡಿಸಿದ್ದಾರೆ. ಬಹಿಷ್ಕಾರಗೊಂಡಿರುವ ಕುಟುಂಬಗಳ ಯಾವುದೇ ಕಾರ್ಯಕ್ರಮಗಳಿಗೆ ಸಂಬಂಧಿಕರು ತೆರಳದಂತೆ ಫತ್ವಾ ಹೊರಡಿಸಲಾಗಿದೆ.

    ಇದೇ ತಿಂಗಳ 21 ರಂದು ಅಬ್ದುಲ್ ಸಲಾಂ ಎಂಬ ಯುವಕನ ವಿವಾಹ ಮಹೋತ್ಸವವಿದ್ದು, ಮಸೀದಿಯಿಂದ ಮದುವೆಗೆ ಒಪ್ಪಿಗೆ ಪತ್ರ ನೀಡದ ಹಿನ್ನೆಲೆಯಲ್ಲಿ ಮದುವೆ ಮುರಿದು ಬೀಳುವ ಹಂತಕ್ಕೆ ಬಂದಿದೆ. ಇನ್ನು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು, ಅವರ ಸೂಚನೆಗಳಿದ್ದರೂ ಮಸೀದಿಯವರು ಮಾತ್ರ ತಮ್ಮ ಫತ್ವಾವನ್ನು ಹಿಂದೆ ತೆಗೆದುಕೊಂಡಿಲ್ಲ. ಆಂಧ್ರ ಮೂಲದ ಮೌಲ್ವಿಯನ್ನು ಅನುಸರಿಸದೇ ತಪ್ಪೋಪ್ಪಿಗೆ ಪತ್ರ ನೀಡಿದಲ್ಲಿ ಮಾತ್ರ ಫತ್ವಾ ಹಿಂಪಡೆಯುವ ಸಂದೇಶ ನೀಡಿದ್ದಾರೆ.