Tag: Father-son

  • ಹಳೆಯ ಬಾವಿಯೊಳಗೆ ಉಸಿರುಗಟ್ಟಿ ನಾಲ್ವರ ಸಾವು

    ಹಳೆಯ ಬಾವಿಯೊಳಗೆ ಉಸಿರುಗಟ್ಟಿ ನಾಲ್ವರ ಸಾವು

    ಅಮರಾವತಿ: ಹಳೆಯ ಬಾವಿಯೊಳಗೆ(well) ತಂದೆ, ಮಗ ಸೇರಿದಂತೆ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ(Andhra Pradesh) ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಮಚಲಿಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಂಟುಮಿಲ್ಲಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಸ್ಥಳೀಯ ನಿವಾಸಿ ರಾಮರಾವ್(55) ಅವರು ನೀರಿನ ಹರಿವನ್ನು ಸರಿಪಡಿಸುವ ಸಲುವಾಗಿ ಹೂಳು ತೆಗೆಯಲು ಆಳವಾಗಿದ್ದ ಹಳೆಯ ಬಾವಿಗೆ ಇಳಿದಿದ್ದರು. ಆದರೆ ಈ ವೇಳೆ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬಳಿಕ ಅವರ ಮಗ ಲಕ್ಷ್ಮಣ್(33) ರಾಮರಾವ್ ಅವರನ್ನು ರಕ್ಷಿಸುವ ಸಲುವಾಗಿ ಬಾವಿಗೆ ಹಾರಿದ್ದಾರೆ. ಆದರೆ ಅವರಿಗೂ ಅದೇ ವಿಧಿ ಎದುರಾಗಿ, ಬಾವಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್

    ಬಾವಿಗೆ ಇಳಿದಿದ್ದ ತಂದೆ, ಮಗನನ್ನು ರಕ್ಷಿಸಲು ಮುಂದಾದ ಗ್ರಾಮದ ಶ್ರೀನಿವಾಸ್ ಹಾಗೂ ರಂಗ ಬಾವಿಗೆ ಇಳಿದಿದ್ದರು. ಆದರೆ ಬಾವಿ ಪ್ರವೇಶಿಸಿದ ಯಾರೊಬ್ಬರೂ ಬದುಕಲು ಸಾಧ್ಯವಾಗಲಿಲ್ಲ. ಬಾವಿಯಲ್ಲಿ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ ಮಾಹಿತಿಯನ್ನು ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ: ಗನ್ ಹಿಡಿದು ಮಕ್ಕಳನ್ನು ಮದರಸಾಗೆ ಕಳುಹಿಸಿದ ವ್ಯಕ್ತಿ

    ಘಟನಾ ಸ್ಥಳಕ್ಕೆ ಆಗಮಿಸಿದ ಆಂಧ್ರಪ್ರದೇಶದ ವಸತಿ ಸಚಿವ ಜೋಗಿ ರಮೇಶ್, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯ ಬಗ್ಗೆ ಬಂಟುಮಿಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 90 ಕಿ.ಮೀವರೆಗೂ ಬೈಕ್‍ನಲ್ಲಿ ಮಗನ ಮೃತದೇಹ ಸಾಗಿಸಿದ ತಂದೆ

    90 ಕಿ.ಮೀವರೆಗೂ ಬೈಕ್‍ನಲ್ಲಿ ಮಗನ ಮೃತದೇಹ ಸಾಗಿಸಿದ ತಂದೆ

    ಅಮರಾವತಿ: 90 ಕಿಮೀ. ದೂರದಲ್ಲಿದ್ದ ತಮ್ಮ ಹುಟ್ಟೂರಿಗೆ ಮಗನ ಮೃತದೇಹ ಸಾಗಿಸಲು ಅಂಬುಲೆನ್ಸ್ ಚಾಲಕ 20,000 ರೂ. ಕೇಳಿದ್ದಾನೆ. ಈ ಹಿನ್ನೆಲೆ ತಂದೆ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ತಡೆದು ಸವಾರನನ್ನು ಬೇಡಿಕೊಂಡು ತನ್ನ ಹುಟ್ಟೂರಿಗೆ ಸೇರಿದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ

    ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಜನರಲ್(RUIA) ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಃಖಿತ ವ್ಯಕ್ತಿ ನರಸಿಂಹುಲು ತನ್ನ 10 ವರ್ಷದ ಮಗ ಜಸ್ವಾನನ್ನು ಕಳೆದುಕೊಂಡಿದ್ದಾರೆ. ಆಸ್ಪತ್ರೆಯಿಂದ ನರಸಿಂಹುಲು ಹುಟ್ಟೂರಿಗೆ 90 ಕಿ.ಮೀ ದೂರವಿತ್ತು. ಈ ಹಿನ್ನೆಲೆ ಅಂಬುಲೆನ್ಸ್ ಚಾಲಕನನ್ನು ನರಸಿಂಹುಲು ಆಸ್ಪತೆಯಿಂದ ತಮ್ಮೊರಿಗೆ ಜಸ್ವಾ ಮೃತದೇಹವನ್ನು ಕರೆದೊಯ್ಯಲು ಕೇಳಿದ್ದಾನೆ. ಇದನ್ನೂ ಓದಿ:  ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ

    ಚಾಲಕ 20,000 ರೂ. ಬೇಡಿಕೆ ಇಟ್ಟಿದ್ದಾನೆ. ಬಡತಂದೆಗೆ ಚಾಲಕ ಮಾಡಿದ ಡಿಮ್ಯಾಂಡ್ ಕೇಳಿ ಶಾಕ್ ಆಗಿದ್ದು, ಮಗನ ದೇಹ ಎತ್ತಿಕೊಂಡು ಆ ಸ್ಥಳದಲ್ಲಿ ಓಡಾಡುತ್ತಿದ್ದ ಬೈಕ್ ಸವಾರರಿಗೆ 90 ಕಿ.ಮೀಟರ್ ದೂರದಲ್ಲಿರುವ ತನ್ನ ಹುಟ್ಟೂರಿಗೆ ಬಿಡುವಂತೆ ಮನವಿ ಮಾಡಿಕೊಂಡಿದ್ದಾನೆ. ನರಸಿಂಹುಲು ಅವರು ಮಾವಿನ ತೋಟದಲ್ಲಿ ತೋಟಗಾರನಾಗಿ ಕೆಲಸ ಮಾಡುತ್ತಿದ್ದರು. ಅವರ ಬಳಿ ಹಣವಿಲ್ಲದ ಕಾರಣ ಹೊರಗಿನಿಂದ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತೋಟದ ಮಾಲೀಕರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಗ್ರಾಮದಿಂದ ಆಂಬುಲೆನ್ಸ್ ಕಳುಹಿಸಿದ್ದಾರೆ. ಆದರೆ ಇದನ್ನು ಗಮನಿಸಿದ ಖಾಸಗಿ ಅಂಬುಲೆನ್ಸ್ ಚಾಲಕ ಗ್ರಾಮದಿಂದ ಬಂದಿದ್ದ ಚಾಲಕನನ್ನು ಥಳಿಸಿ ಆಸ್ಪತ್ರೆಯಿಂದ ಓಡಿಸಿದ್ದಾರೆ. ಈ ಹಿನ್ನೆಲೆ ತಂದೆ ಬೈಕ್‍ನಲ್ಲಿ ಶವವನ್ನು ಹೊತ್ತೊಯ್ದಿದ್ದಾನೆ.

    ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದು, ತಿರುಪತಿಯ RUIA ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪುಟ್ಟಮಗನನ್ನು ಕರೆದುಕೊಂಡು ಹೋಗಬೇಕೆಂದು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ ಅದಕ್ಕೆ ಯಾರು ಒಪ್ಪಿಕೊಳ್ಳಲಿಲ್ಲ. ಶವಾಗಾರದ ವ್ಯಾನ್‍ಗಳು ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂದು ಬರೆದು ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್

    ಮಾಧ್ಯಮಗಳ ವರದಿಗಳ ಪ್ರಕಾರ, ಬುಡಕಟ್ಟು ಜನಾಂಗದ ಬಾಲಕ ಜಸ್ವಾ ಯಕೃತ್ತಿನ(ಲಿವರ್) ಸಮಸ್ಯೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಸಂಪೂರ್ಣ ಘಟನೆಯ ತನಿಖೆಗೆ ಆದೇಶಿಸಿದೆ.

  • ಘಟಪ್ರಭಾ ಪ್ರವಾಹದಲ್ಲಿ ಸಿಲುಕಿದ್ದ ತಂದೆ, ಮಗನ ರಕ್ಷಣೆ

    ಘಟಪ್ರಭಾ ಪ್ರವಾಹದಲ್ಲಿ ಸಿಲುಕಿದ್ದ ತಂದೆ, ಮಗನ ರಕ್ಷಣೆ

    ಬಾಗಲಕೋಟೆ: ಪಬ್ಲಿಕ್ ಟಿವಿ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯಿಂದ ಪ್ರವಾಹದಲ್ಲಿ ಸಿಲುಕಿದ್ದ ತಂದೆ-ಮಗನನ್ನ ಎಸ್‍ಡಿಆರ್‍ಎಫ್ ತಂಡ ಸುರಕ್ಷಿತವಾಗಿ ಮರಳಿ ತಂದಿದೆ.

    ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಮುಧೋಳ ತಾಲೂಕಿನ ಚಿಚಕಂಡಿ ಸೇತುವೆ ಮುಳುಗಡೆಯಾಗಿತ್ತು. ಸೇತುವೆ ಮೇಲೆ ನೀರು ಬರುತ್ತದೆ ಎನ್ನುವ ವಿಷಯ ತಿಳಿದ ಜೀರಗಾಳ ಗ್ರಾಮದ ಶ್ರೀಶೈಲ ಉಪ್ಪಾರ್ ಹಾಗೂ ಮಗ ರಮೇಶ್ ಹೊಲದಲ್ಲಿ ಕಟ್ಟಲಾಗಿದ್ದ ದನಗಳನ್ನ ಹೊರತರಲು ಹೋದಾಗ ಪ್ರವಾಹಕ್ಕೆ ಸಿಲುಕಿ ಜೀವಭಯದಲ್ಲಿದ್ದರು.

    ಈ ವಿಚಾರ ತಿಳಿದು ಪಬ್ಲಿಕ್ ಟಿವಿ ಪ್ರತಿನಿಧಿ ರವಿ ಹಳ್ಳೂರ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ, ರಕ್ಷಣಾ ಕಾರ್ಯಕ್ಕೆ ಮುಂದಾಗುವಂತೆ ಮನವಿ ಮಾಡಿದ್ದರು. ಪರಿಣಾಮ, ಎಸ್‍ಡಿಆರ್‍ಎಫ್ ತಂಡ ಸ್ಥಳಕ್ಕೆ ಆಗಮಿಸಿ ಪ್ರವಾಹದಲ್ಲಿ ಸಿಲುಕಿದ್ದ ತಂದೆ ಮಗನನ್ನು ರಕ್ಷಿಸಿದ್ದಾರೆ.

    ಹಿರಣ್ಯಕೇಶಿ, ಮಾರ್ಕಂಡೇಯ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಘಟಪ್ರಭಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮೇಲೆ ಸುಮಾರು ಎಂಟು ಅಡಿಯಷ್ಟು ನೀರು ಹರಿಯುತ್ತಿದೆ. ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.

  • ಉಕ್ಕಿ ಹರಿಯುತ್ತಿರುವ ಘಟಪ್ರಭಾ- ಪ್ರವಾಹದ ಮಧ್ಯೆ ಸಿಲುಕಿದ ತಂದೆ, ಮಗ

    ಉಕ್ಕಿ ಹರಿಯುತ್ತಿರುವ ಘಟಪ್ರಭಾ- ಪ್ರವಾಹದ ಮಧ್ಯೆ ಸಿಲುಕಿದ ತಂದೆ, ಮಗ

    ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವರುಣನ ಆರ್ಭಟಕ್ಕೆ ಈ ಭಾಗದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಚಖಂಡಿಯಲ್ಲಿ ಪ್ರವಾಹದ ಮಧ್ಯೆ ತಂದೆ-ಮಗ ಸಿಲುಕಿಕೊಂಡು ಅಪಾಯದಲ್ಲಿದ್ದಾರೆ.

    ಹಿರಣ್ಯಕೇಶಿ, ಮಾರ್ಕಂಡೇಯ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮೇಲೆ ಸುಮಾರು ಎಂಟು ಅಡಿಯಷ್ಟು ನೀರು ಹರಿಯುತ್ತಿದೆ. ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.

    ಈ ಮಧ್ಯೆ ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನಿವಾಸಿಗಳಾದ ಶ್ರೀಶೈಲ ಉಪ್ಪಾರ(68) ಹಾಗೂ ರಮೇಶ್ ಉಪ್ಪಾರ(30) ಪ್ರವಾಹದ ಮಧ್ಯೆ ಸಿಲುಕಿಕೊಂಡು ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಸುಮಾರು ನಾಲ್ಕು ಗಂಟೆಯಿಂದ ತಂದೆ- ಮಗ ನೀರಿನ ಮಧ್ಯೆಯೇ ಸಿಲುಕಿದ್ದಾರೆ. ಚಿಚಖಂಡಿ ನಡುಗಡ್ಡೆಯಲ್ಲಿದ್ದ ಹೊಲದಲ್ಲಿನ ಎಮ್ಮೆಗಳನ್ನು ತರಲು ಹೋಗಿ ನೀರಿನ ಪ್ರವಾಹದ ಮಧ್ಯೆ ತಂದೆ ಮಗ ಸಿಲುಕಿದ್ದಾರೆ. ಅವರ ಜೊತೆ 4 ಎಮ್ಮೆಗಳು ಕೂಡ ಜೀವ ರಕ್ಷಣೆಗಾಗಿ ಪರದಾಡುತ್ತಿವೆ.

    ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪಬ್ಲಿಕ್ ಟಿವಿ ವರದಿಗಾರರು ತಂದೆ-ಮಗನನ್ನು ರಕ್ಷಣೆ ಮಾಡಿ ಎಂದು ಮುದೋಳ ಶಾಸಕ ಗೊವಿಂದ್ ಕಾರಜೋಳ್, ಎಸ್ ಪಿ ಲೋಕೆಶ್, ಡಿಸಿ ಆರ್. ರಾಮಚಂದ್ರನ್ ಹಾಗೂ ಮುದೋಳ ಸಿಪಿಐ ಶ್ರೀಶೈಲ್ ಬನ್ನೆ ಅವರಿಗೆ ತಿಳಿಸಿದ್ದಾರೆ. ಆದರೂ ಕೂಡ ಈವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿಲ್ಲ. ಬರೀ ಭರವಸೆಯನ್ನು ಮಾತ್ರ ನೀಡುತ್ತಿದ್ದಾರೆ. ಹೀಗಾಗಿ ರಕ್ಷಣೆಗೆ ಬಾರದ ಅಧಿಕಾರಿಗಳ ಮೇಲೆ ಜೀರಗಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.