Tag: Father- Mother

  • ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೋಗಿ ಅಪ್ಪ-ಅಮ್ಮನ ಮಚ್ಚಿನಿಂದ ಕೊಚ್ಚಿ ಕೊಂದ!

    ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೋಗಿ ಅಪ್ಪ-ಅಮ್ಮನ ಮಚ್ಚಿನಿಂದ ಕೊಚ್ಚಿ ಕೊಂದ!

    ತಿರುವನಂತಪುರಂ: ಪಾಪಿ ಮಗನೊಬ್ಬ ತನ್ನ ತಂದೆ-ತಾಯಿಯನ್ನು ಮಚ್ಚಿನಿಂದ ಕೊಚ್ಚಿ ನಿರ್ದಯವಾಗಿ ಕೊಚ್ಚಿ ಕೊಲೆಗೈದ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.

    ಈ ಗಟನೆ ಇಂದು ಬೆಳಗ್ಗೆ ನಡೆದಿದ್ದು, ಮಗನಿಂದ್ಲೇ ಮೃತಪಟ್ಟ ದುರ್ದೈವಿಗಳನ್ನು ಕುಟ್ಟನ್ ಹಾಗೂ ಚಂದ್ರಿಕಾ ಎಂದು ಗುರುತಿಸಲಾಗಿದೆ. ಅನೀಶ್ ಕೊಲೆ ಆರೋಪಿಯಾಗಿದ್ದು, ಗಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೌಟುಂಬಿಕ ಕಲಹದಿಂದಲೇ ಹತ್ಯೆ ನಡೆದಿದೆ ಎಂಬುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಮನೆ ಮುಂದೆ ರಸ್ತೆ ಬದಿಯಲ್ಲಿ ಇಬ್ಬರ ಮೃತದೇಹ ದೊರೆತಿದೆ.

    ಮನೆಯಲ್ಲಿ ಆಗಾಗ ಮಗ ಹಾಗೂ ಹತ್ತವರ ನಡುವೆ ಜಗಳ ನಡೆಯುತ್ತಿತ್ತು. ಈ ಜಗಳ ಇಂದು ಬೆಳಗ್ಗೆ ತಾರಕ್ಕೇರಿದ್ದು, ತಂದೆ-ತಾಯಿ ಕೊಲೆ ಮಾಡುವಲ್ಲಿ ಅಂತ್ಯವಾಗಿದೆ. ಅನಿಶ್ ಹೆತ್ತವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೂ ಮುನ್ನ ಇಬ್ಬರನ್ನು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿದ್ದಾನೆ ಎಮದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

    ಸದ್ಯ ಅನೀಶ್ ಬಮಧಿಸಿರುವ ಪೊಲಿಸರು, ಕೊಲೆಯ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 3 ವರ್ಷದಿಂದ ದೈಹಿಕ ಸಂಪರ್ಕ ಬೆಳೆಸಿ ವಂಚನೆ- ಸತ್ಯ ತಿಳಿದ ಬಳಿಕ ಯುವತಿ ದೂರು

  • ಕಾಣೆಯಾಗಿ ಬರೋಬ್ಬರಿ 10 ವರ್ಷಗಳ ಬಳಿಕ ತಂದೆ-ತಾಯಿಯನ್ನು ಸೇರಿದ ಮಗ!

    ಕಾಣೆಯಾಗಿ ಬರೋಬ್ಬರಿ 10 ವರ್ಷಗಳ ಬಳಿಕ ತಂದೆ-ತಾಯಿಯನ್ನು ಸೇರಿದ ಮಗ!

    ಚೆನ್ನೈ: ಪವಾಡ ಎಂಬಂತೆ ಕಳೆದು ಹೋಗಿ ಬರೋಬ್ಬರಿ 10 ವರ್ಷಗಳ ಬಳಿಕ ಮಗನೊಬ್ಬ ತಂದೆ-ತಾಯಿಯ ಜೊತೆಯಾದ ಘಟನೆ ಚೆನ್ನೈನಲ್ಲಿ ನಡೆದಿದೆ.

    ಶಿವಪ್ರಕಾಶ್(42) ಹೆತ್ತವರ ಮಡಿಲು ಸೇರಿದ ಮಗ. ಲಾಕ್ ಡೌನ್ ಸಮಯದಲ್ಲಿ ಶಿವಪ್ರಕಾಶ್ ಬಸ್ತಾರ್ನ ಜಗದಲ್ಪುರದಲ್ಲಿ ಅಲೆದಾಡುತ್ತಿದ್ದ. ಇದನ್ನು ಗಮನಿಸಿದ ಆರೋಗ್ಯಾಧಿಕಾರಿಗಳು ಶಿವಪ್ರಕಾಶ್ ನನ್ನು ಹಿಡಿದು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಶಿವಪ್ರಕಾಶ್ ಗೆ ಅಲ್ಲಿನ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ಶಿವಪ್ರಕಾಶ್ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ.

    ನಾವು ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದ್ದೇವೆ. ಆದರೆ ಆತನಿಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ನಾವು ಏನೇ ಪ್ರಶ್ನೆಗಳನ್ನು ಕೇಳಿದರೂ ಆತ ಸುಮ್ಮನಾಗುತ್ತಿದ್ದನು. ಆದರೂ ನಾವು ಆತನನ್ನು ಮನವೊಲಿಸಿದೆವು. ಕೆಲವು ತಿಂಗಳು ಕಾಲ ಇಲ್ಲಿಯೇ ಇದ್ದ ಶಿವಪ್ರಕಾಶ್, ಕೊನೆಗೆ ತಮಿಳಿನಲ್ಲಿ ಒಂದೆರಡು ಸಾಲುಗಳನ್ನು ಬರೆದರು. ಹೆಸರು ಶಿವಪ್ರಕಾಶ್ ಆಗಿದ್ದು, ತಿರುವಣ್ಣಾಮಲೈ ಜಿಲ್ಲೆಯ ಚೆಯಾರ್ ನಲ್ಲಿರುವ ಎಚೂರ್ ಗೆ ಸೇರಿದವರು ಎಂಬುದಾಗಿ ತಿಳಿಯಿತು. ಕೂಡಲೇ ಶಿವಪ್ರಕಾಶ್ ಕೊಟ್ಟ ಮಾಹಿತಿಯನ್ನು ಅವರ ಸ್ಥಳೀಯರಿಗೆ ಕಳುಹಿಸಿದ್ದೇವೆ. ಆಗ ಅವರು ಶಿವಪ್ರಕಾಶ್ ನನ್ನು ಗುರುತಿಸಿದರು ಎಂದು ಜಗದಲ್ಪುರ್ ರೆಡ್ ಕ್ರಾಸ್ ಸೊಸೈಟಿಯ ಉಪಾಧ್ಯಕ್ಷ ಅಲೆಕ್ಸಾಂಡರ್ ಎಂ ಚೆರಿಯನ್ ತಿಳಿಸಿದರು.

    ಸಾಂಕ್ರಾಮಿಕ ರೋಗದಿಂದಾಗಿ ಶಿವಪ್ರಕಾಶ್ ಮತ್ತೆ ತಮ್ಮ ತಂದೆ-ತಾಯಿಯನ್ನು ನೋಡುವಂತಾಯಿತು. ಇಲ್ಲವೆಂದರೆ ಅವರು ಇನ್ನೂ ಅಲೆಮಾರಿಯಾಗಿಯೇ ಉಳಿಯುತ್ತಿದ್ದರು ಎಂದು ಬಸ್ತಾರ್ ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ. ಬಸ್ತಾರ್ ಜಿಲ್ಲಾಡಳಿತವು ಪ್ರಕಾಶ್ ಅವರ ಹಳ್ಳಿಯ ಸ್ಥಳೀಯರನ್ನು ಸಂಪರ್ಕಿಸಿದಾಗ ಅವರು ಹೆತ್ತವರನ್ನು ಪತ್ತೆಹಚ್ಚಲು ಮತ್ತಷ್ಟು ಸಹಾಯ ಮಾಡಿದರು. ಅವರು ಕಾಣೆಯಾದ ವ್ಯಕ್ತಿಯ ವರದಿಯನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಒಂದು ದಶಕದ ಹಿಂದೆ ದಾಖಲಿಸಿದ್ದರು.

    ಇಷ್ಟು ವರ್ಷ ಎಲ್ಲಿ ಇದ್ದುದಾಗಿ ಶಿವಪ್ರಕಾಶ್ ಬಾಯಿಬಿಟ್ಟಿಲ್ಲ. ಆದರೆ 3-4 ತಿಂಗಳು ಅವರು ಕ್ವಾರಂಟೈನ್ ಆಗಿದ್ದರು. ನಾವು ಆತನನ್ನು ವಾಪಸ್ ಮನೆಗೆ ಸೇರಿಸೋ ಪ್ರಯತ್ನ ಮಾಡಿದ್ದೇವೆ ಹೊರತು, ನಾವು ಅವರ ನಂಬಿಕೆಯನ್ನು ಗೆಲ್ಲುವಲ್ಲಿ ಕೆಲಸ ಮಾಡಿದ್ದೇವೆ ಹೊರತು ಅವರ ಹಿಂದಿನ ಬಗ್ಗೆ ತನಿಖೆ ನಡೆಸಲಿಲ್ಲ. ಜಿಲ್ಲಾಧಿಕಾರಿ ರಜತ್ ಬನ್ಸಾಲ್ ಅವರ ಪ್ರಯತ್ನಕ್ಕೆ ಧನ್ಯವಾದಗಳು, ಪ್ರಕಾಶ್ ಅವರ ಕುಟುಂಬದೊಂದಿಗೆ ಇದ್ದಾರೆ ಎಂದು ಚೆರಿಯನ್ ತಿಳಿಸಿದರು.

  • ಫೋರ್ಜರಿ ಮಾಡಿ ಆಸ್ತಿ ಕಬಳಿಸಿ ತಂದೆ-ತಾಯಿಯನ್ನು ಬೀದಿಗೆ ಬಿಟ್ಟ ಹೆಣ್ಣುಮಕ್ಕಳು!

    ಫೋರ್ಜರಿ ಮಾಡಿ ಆಸ್ತಿ ಕಬಳಿಸಿ ತಂದೆ-ತಾಯಿಯನ್ನು ಬೀದಿಗೆ ಬಿಟ್ಟ ಹೆಣ್ಣುಮಕ್ಕಳು!

    – ದ್ರೋಹಕ್ಕೆ ಕಣ್ಣೀರಿಟ್ಟ 90ರ ಹಿರಿ ಜೀವಗಳು

    ಬೆಂಗಳೂರು: ತಂದೆ-ತಾಯಿ ಮಕ್ಕಳಿಗೋಸ್ಕರ ತಮ್ಮ ಇಡೀ ಬದುಕನ್ನೇ ಮುಡಿಪಿಡುತ್ತಾರೆ. ಕಷ್ಟಪಟ್ಟು ಮಕ್ಕಳನ್ನು ಸಾಕಿ ಅವರೆಲ್ಲರಿಗೂ ಸೂರು ಮಾಡಿಕೊಟ್ಟ ತಂದೆ-ತಾಯಿ, ಹೆಣ್ಣುಮಕ್ಕಳು ಮನೆ ಕಣ್ಣು ಎನ್ನುವಂತೆ ಸಾಕಿ ಸಲಹಿದರು. ಆದರೆ ಅದೇ ಮಕ್ಕಳು ಆಸ್ತಿಯ ಆಸೆಗೆ ಹೆತ್ತವರಿಗೆ ದ್ರೋಹ ಬಗೆದಿದ್ದಾರೆ.

    ಮಕ್ಕಳಿಗಾಗಿ ನಿಸ್ವಾರ್ಥವಾಗಿ ತಮ್ಮ ಸುಖವನ್ನೂ ಮರೆತು ಅವರ ಸುಖಕ್ಕೆ ಬದುಕನ್ನೇ ಹೆತ್ತವರು ಸವೆಯುತ್ತಾರೆ. ಆದರೆ ವೆಲ್ಲಿಯನ್, ಕಮಲಮ್ಮ ದಂಪತಿಗೆ ತಮ್ಮ ಮಕ್ಕಳೇ ಮೋಸ ಮಾಡಿದ್ದಾರೆ. ವೆಲ್ಲಿಯನ್ ದಂಪತಿಗೆ ಒಟ್ಟು ನಾಲ್ಕು ಜನ ಹೆಣ್ಣುಮಕ್ಕಳು. ಈ ಮಕ್ಕಳನ್ನು ಓದಿಸಿ, ಅವರಿಗೊಂದು ಬದುಕು ಕಟ್ಟಿಕೊಟ್ಟಿದ್ದು, ನಾಲ್ಕು ಜನರಿಗೂ ಚಾಮರಾಜಪೇಟೆಯಲ್ಲಿ ಪ್ರತ್ಯೇಕ ಮನೆ ಕಟ್ಟಿಕೊಟ್ಟಿದ್ದಾರೆ. ಇಷ್ಟೆಲ್ಲ ಮಾಡಿದ್ದರೂ ಹೆತ್ತವರು ಮಾತ್ರ ಈ ಮಕ್ಕಳಿಗೆ ಭಾರವಾಗಿದ್ದಾರೆ. ನಾಲ್ವರಲ್ಲಿ ಮೂವರು ಆಸ್ತಿಯನ್ನು ಫೋರ್ಜರಿ ಸಹಿ ಮೂಲಕ ತಮ್ಮ ಹೆಸರಿಗೆ ಬರೆದುಕೊಂಡಿದ್ದು, ತಂದೆ- ತಾಯಿಯನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ.

    ಆದರೆ ಒಬ್ಬಳು ಪುತ್ರಿ ಹೆತ್ತವರನ್ನು ಮನೆಗೆ ಕರೆತಂದು ಸಾಕಲು ಮುಂದಾದಾಗ ಆಕೆಯ ಮನೆ ಸೇರಿದಂತೆ, ಆಸ್ತಿಯನ್ನು ಕೂಡ ಲಪಟಾಯಿಸಲು ಉಳಿದ ಮೂವರು ಸ್ಕೆಚ್ ಹಾಕಿದ್ದಾರಂತೆ. ಹೆಣ್ಣು ಮಕ್ಕಳ ಮೃಗೀಯ ವರ್ತನೆಗೆ ವೃದ್ದ ದಂಪತಿ ಕಣ್ಣೀರು ಹಾಕಿದ್ದಾರೆ.

    ಮಕ್ಕಳಿಗೆಂದು ದಂಪತಿ ವಿಲ್ ಸಹ ಮಾಡಿದ್ದರು. ಅದನ್ನ ನಂಬದೇ ಫೋರ್ಜರಿ ಮಾಡಿ ಆಸ್ತಿಯನ್ನ ಮಕ್ಕಳು ಕಬಳಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೆ ಇರಲು ಮನೆ ಬೇಕು ಎಂದು ದೊಡ್ಡ ಸೈಟಿನಲ್ಲಿ ನಾಲ್ಕು ಮನೆಗಳನ್ನ ನಿರ್ಮಿಸಿ, ಎಲ್ಲರ ಹೆಸರಲ್ಲೂ ಒಂದೊಂದು ಮನೆಯನ್ನ ದಂಪತಿ ಬರೆದು ವಿಲ್ ಮಾಡಿದ್ದರು. ಆದರೆ ಆ ವಿಲ್ ಅನ್ನು ಹೆಣ್ಣು ಮಕ್ಕಳಿಗೆ ತೋರಿಸಿರಲಿಲ್ಲ. ಇದೇ ವಿಚಾರಕ್ಕೆ ತಂದೆ ತಾಯಿ ಮೇಲೆ ಮಕ್ಕಳು ಮುನಿಸಿಕೊಂಡಿದ್ದರು.

    ನಂತರ ಜನವರಿಯಲ್ಲಿ ಜಿಗಣಿ ರಿಜಿಸ್ಟ್ರಾರ್ ಆಫೀಸಿನಲ್ಲಿ ಸಬ್ ರಿಜಿಸ್ಟ್ರಾರ್ ಮಂಜುನಾಥ್ ಅನ್ನೋರು ಚಿನ್ನಪ್ಪ ಎಂಬವರಿಗೆ ಜನರಲ್ ಪವರ್ ಆಫ್ ಅಟಾರ್ನಿಯ(ಜಿಪಿಎ) ಕೊಟ್ಟು ನಂತರ ಅದನ್ನ ದಾನದ ರೂಪದಲ್ಲಿ ಈ ಹೆಣ್ಣು ಮಕ್ಕಳು ಫೋರ್ಜರಿ ಮಾಡಿ ಬರೆಸಿಕೊಂಡಿದ್ದಾರೆ. ಈಗ ತಾವೇ ಕಟ್ಟಿದ ಮನೆಯಲ್ಲಿ ಇರಲೂ ಆಗದೇ ಕಣ್ಣೀರಿಡುತ್ತಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ತಂದೆಗೆ ಹೆಚ್ಚು ಪ್ರೀತಿ ಅಂತಾರೆ ಆದರೆ ಮಕ್ಕಳಿಂದಲೇ ತಂದೆಯ ಇಷ್ಟೊಂದು ನೋವು ಅನುಭವಿಸುತ್ತಿದ್ದಾರೆ.

    ತಂದೆ ತಾಯಿ ಕಣ್ಣಿಗೆ ಕಾಣೋ ದೇವರು ಅಂತಾರೆ ಆದರೆ ಕೇವಲ ತಂದೆ ತಾಯಿಯೇ ಕಷ್ಟ ಪಟ್ಟು ಸಂಪಾದಿಸಿದ ಆಸ್ತಿಗಾಗಿ ಅವರನ್ನೇ ಬೀದಿ ಪಾಲು ಮಾಡಲು ಹೊರಟಿರುವ ಇಂತಹ ಮಕ್ಕಳಿಗೆ ಕಾನೂನು ತಕ್ಕ ಶಾಸ್ತಿ ಮಾಡಬೇಕು ಅನ್ನೊದು ನೊಂದವರ ಒತ್ತಾಯವಾಗಿದೆ.

  • ಹೆತ್ತವರ ದುರಂತ ಸಾವಿಗೆ ಕಾರಣವಾಯ್ತು ರಾಕ್ಷಸ ಮಗ, ಸೊಸೆಯ ಕಿರುಕುಳ

    ಹೆತ್ತವರ ದುರಂತ ಸಾವಿಗೆ ಕಾರಣವಾಯ್ತು ರಾಕ್ಷಸ ಮಗ, ಸೊಸೆಯ ಕಿರುಕುಳ

    ಬೆಂಗಳೂರು: ಮಗ-ಸೊಸೆಯ ಕಿರುಕುಳಕ್ಕೆ ವೃದ್ಧ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಆರೋಪಿಗಳ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಗಿರನಗರ ನಿವಾಸಿ ಕೃಷ್ಣಮೂರ್ತಿ(70) ಹಾಗೂ ಸ್ವರ್ಣಮೂರ್ತಿ(68) ಆತ್ಮಹತ್ಯೆ ಮಾಡಿಕೊಂಡಿದ್ದ ವೃದ್ಧ ದಂಪತಿ. ಆಗಸ್ಟ್ 23ರಂದು ಫ್ಯಾನಿಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಘಟನೆ ನಡೆದ ಬಹುದಿನಗಳ ಬಳಿಕ ಹೆತ್ತವರ ಸಾವಿಗೆ ಮಗ ಹಾಗೂ ಸೊಸೆಯೇ ಕಾರಣವೆಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

    ಮನೆಯ ಗೋಡೆಯ ಮೇಲೆ ಕೃಷ್ಣಮೂರ್ತಿ ಅವರು ಕೊನೆ ಸಂದೇಶ ಬರೆದಿದ್ದರು, ಇತ್ತ ಸ್ವರ್ಣಮೂರ್ತಿ ಅವರ ಹಣೆ ಮೇಲೆ ಸಂದೇಶವೊಂದು ಬರೆದಿತ್ತು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ಸತ್ಯಾಂಶ ಹೊರಬಿದ್ದಿದೆ.

    ಸಾಯುವ ಮುನ್ನ ಗೋಡೆಯ ಮೇಲೆ ಮಗ ಹಾಗೂ ಸೊಸೆಯ ಕಿರುಕುಳದ ಮಾಹಿತಿ ಬಿಚ್ಚಿಟ್ಟು ವೃದ್ಧ ತಂದೆ ಸಹಿ ಮಾಡಿದ್ದರು. “ನರಕದಿಂದ ಸ್ವರ್ಗದ ಕಡೆಗೆ ಪಯಣ, ನಮ್ಮಿಬ್ಬರ ಸಾವಿಗೆ ಸೊಸೆ ಸ್ನೇಹ ಸೂರ್ಯನಾರಾಯಣ, ಮಗ ಮಂಜುನಾಥ್ ಶ್ರೇಯಸ್ ಚಿತ್ರಹಿಂಸೆಯೇ ಕಾರಣ. ಅವರು ನಮ್ಮಿಬ್ಬರಿಗೂ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ” ಎಂದು ಗೋಡೆಯ ಮೇಲೆ ಬರೆದು ಕೊನೆಯಲ್ಲಿ ಸಹಿ ಮಾಡಿದ್ದರು. ಇತ್ತ ತಾಯಿ ಹಣೆ ಮೇಲೆ “ನನ್ನನ್ನು ಕ್ಷಮಿಸು” ಎಂದು ಬರೆದುಕೊಂಡು, ಕೊನೆಗೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದರು.

    ಈ ದುರಂತ ಸಾವಿನ ಹಿಂದಿನ ರಹಸ್ಯದ ತನಿಖೆಗೆ ಮುಂದಾದ ಗಿರನಗರ ಪೊಲೀಸರು, ಪ್ರಕರಣವನ್ನು ಭೇದಿಸಿದ್ದಾರೆ. ಈಗಾಗಲೇ ಸೊಸೆ ಸ್ನೇಹ ಹಾಗೂ ಮಗ ಮಂಜುನಾಥ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದಾರೆ.

  • ವಯಸ್ಸಾದವರನ್ನು ಆಸ್ಪತ್ರೆಗೆ ದಾಖಲಿಸಿ ಮತ್ತೆ ಕರ್ಕೊಂಡೋಗಲ್ಲ- ಶಿರಸಿಯಲ್ಲಿ ಮನಕಲುಕುವ ಘಟನೆ

    ವಯಸ್ಸಾದವರನ್ನು ಆಸ್ಪತ್ರೆಗೆ ದಾಖಲಿಸಿ ಮತ್ತೆ ಕರ್ಕೊಂಡೋಗಲ್ಲ- ಶಿರಸಿಯಲ್ಲಿ ಮನಕಲುಕುವ ಘಟನೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸರ್ಕಾರಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಇದೆ. ಈ ಆಸ್ಪತ್ರೆಗೆ ಸುತ್ತಮುತ್ತಲಿನ ಜನರು ಹಲವು ಕಾರಣಗಳಿಗಾಗಿ ವಯಸ್ಸಾದ ತಂದೆ-ತಾಯಿಯರನ್ನು ಕರೆದುಕೊಂಡು ಬಂದು ದಾಖಲು ಮಾಡುತ್ತಾರೆ. ಆದ್ರೆ ಹುಷಾರಾದ ಬಳಿಕ ತಂದೆ-ತಾಯಿಯನ್ನು ವಾಪಸ್ ಕರೆದುಕೊಂಡು ಹೋಗದೇ ಇರುವುದು ವಿಷಾದನೀಯ ಸಂಗತಿ.

    ಪ್ರತಿ ತಿಂಗಳು ಇದೇ ರೀತಿ ಇಬ್ಬರು ವಯೋವೃದ್ಧರು ಈ ಆಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ನೀಡುವ ಬನ್ ಹಾಗೂ ಹಾಲನ್ನು ಸೇವಿಸಿ ಬದುಕು ಸಾಗಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಕೆಲವರನ್ನು ಎನ್‍ಜಿಒ ನೆರವಿನಿಂದ ಧಾರವಾಡದ ವೃದ್ಧಾಶ್ರಮಕ್ಕೆ ಸೇರಿಸಲಾಗಿದೆ. ಈ ಆಸ್ಪತ್ರೆ ಸಿಬ್ಬಂದಿಗಳು ಕೂಡ ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮದೇ ಖರ್ಚಿನಲ್ಲಿ ಮೂಲಭೂತ ವಸ್ತುಗಳಾದ ಸೋಪು, ತಲೆಗೆ ಎಣ್ಣೆ ಕೊಡಿಸುತ್ತಿದ್ದಾರೆ. ನಮಗೆ ಎಲ್ಲಿಯಾದರೂ ವ್ಯವಸ್ಥೆ ಮಾಡಿಕೊಡಿ ಎನ್ನುವ ಧ್ವನಿ ಕಣ್ಣಲ್ಲಿ ನೀರು ತರಿಸುತ್ತಿದೆ.