Tag: father in law

  • ಕಾಲು ತುಳಿದ ನೆಪವೊಡ್ಡಿ KSRTC ಚಾಲಕನ ಎದೆಗೆ ಕುಡುಗೋಲಿನಿಂದ ಕೊಚ್ಚಿ ಕೊಲೆ

    ಕಾಲು ತುಳಿದ ನೆಪವೊಡ್ಡಿ KSRTC ಚಾಲಕನ ಎದೆಗೆ ಕುಡುಗೋಲಿನಿಂದ ಕೊಚ್ಚಿ ಕೊಲೆ

    – ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ದುಷ್ಕೃತ್ಯ
    – ಎಂಟು ಮಂದಿಯಿಂದ ಓರ್ವನ ಹತ್ಯೆ
    – ಅಳಿಯನ ಮೇಲಿನ ಕೋಪಕ್ಕೆ ಮಾವ ಬಲಿ

    ಬಾಗಲಕೋಟೆ: ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ಯುವಕನ ಕಾಲು ತುಳಿದ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಿಮ್ಮ ಅಳಿಯ ಕಾಲು ತುಳಿದ ಎಂದು ನೆಪವಿಟ್ಟುಕೊಂಡು ಜಗಳಕ್ಕಿಳಿದ 8 ಮಂದಿ ದುಷ್ಕರ್ಮಿಗಳು ಕೆಎಸ್ಆರ್‌ಟಿಸಿ ಚಾಲಕರ ಎದೆಗೆ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದಾರೆ.

    ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಕೆಎಸ್ಆರ್‌ಟಿಸಿ ಬಸ್ ಚಾಲಕ ಶಿವಪ್ಪ ಪೂಜಾರಿ(43) ಕೊಲೆಯಾದ ದುರ್ದೈವಿ. ಶೇಖರಪ್ಪ ಪೂಜಾರಿ, ಗ್ಯಾನೆಪ್ಪ ಪೂಜಾರಿ, ಶಿವಪ್ಪ ಯಲ್ಲಪ್ಪ ಇದ್ದಲಗಿ, ಮುತ್ತಪ್ಪ ಪೂಜಾರಿ, ಶ್ರೀಶೈಲ್ ಪೂಜಾರಿ ಸೇರಿದಂತೆ 8 ಜನರು ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಕೇವಲ ಕಾಲು ತುಳಿದ ಎಂಬ ಕಾರಣವನ್ನಿಟ್ಟುಕೊಂಡು ಶುರುವಾದ ಜಗಳ, ಮಾರಾಮಾರಿಗೆ ತಿರುಗಿ ಕೊನೆಗೆ 8 ಜನರು ಸೇರಿ ಶಿವಪ್ಪ ಅವರನ್ನು ಕೊಲೆ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ಶೈಲಿಯಲ್ಲಿ ಯುವಕನ ಕೊಲೆಗೆ ಸಂಚು – ಕೈಗೆ ಚಾಕು ಇರಿತ

    ಸೋಮವಾರ ರಾತ್ರಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮೆರವಣಿಗೆ ವೇಳೆ ಶಿವಪ್ಪ ಅವರ ಅಳಿಯ ಅಯ್ಯಪ್ಪ ಪೂಜಾರಿ ಹಾಗೂ ಕೆಲ ಯುವಕರು ಕುಣಿಯುತ್ತಿದ್ದರು. ಈ ವೇಳೆ ಗ್ಯಾನಪ್ಪಗೆ ಅಯ್ಯಪ್ಪ ಅವರ ಕಾಲು ಬಡಿದಿತ್ತು. ಇಷ್ಟಕ್ಕೆ ಸಿಟ್ಟಿಗೆದ್ದ ಗ್ಯಾನಪ್ಪ ಅಯ್ಯಪ್ಪ ಅವರ ಜೊತೆ ಜಗಳಕ್ಕೆ ನಿಂತುಕೊಂಡನು. ಆದರೆ ಅಲ್ಲಿದ್ದ ಹಿರಿಯರು ಇಬ್ಬರನ್ನೂ ಸಮಾಧಾನ ಮಾಡಿ ಕಳುಹಿಸಿದ್ದರು. ಇದನ್ನೂ ಓದಿ:ತುಂಬು ಗರ್ಭಿಣಿಗೆ ವರದಕ್ಷಿಣೆ ಕಿರುಕುಳ-ಪ್ರಶ್ನಿಸಿದ್ದಕ್ಕೆ ಅತ್ತೆ ಮೇಲೆ ಲಾಂಗ್ ಅಟ್ಯಾಕ್

    ಆದರೆ ಇಷ್ಟಕ್ಕೆ ಸುಮ್ಮನಾಗದ ಗ್ಯಾನಪ್ಪ, ನಿಮ್ಮ ಅಳಿಯನಿಗೆ ಬುದ್ಧಿ ಹೇಳು ಎಂದು ಶಿವಪ್ಪ ಅವರ ಜೊತೆ ಮಾತುಕತೆ ಶುರುಮಾಡಿದ್ದನು. ಆಗ ಮಾತುಕತೆ ಜಗಳಕ್ಕೆ ತಿರುಗಿ, ಮಾರಾಮಾರಿಯಾಗಿ ಕೊನೆಗೆ ಶಿವಪ್ಪ ಕೊಲೆಯಾಗಿದ್ದಾರೆ. ಜಗಳದಲ್ಲಿ ಅಳಿಯನ ಪರ ಮಾತಾಡೋಕೆ ಬಂದ ಶಿವಪ್ಪರನ್ನು 8 ಜನ ಸೇರಿ ಕೊಲೆ ಮಾಡಿದ್ದಾರೆ. ಕಟ್ಟಿಗೆಗಳಿಂದ ಹೊಡೆದು, ಕುಡಗೋಲಿನಿಂದ ಶಿವಪ್ಪನ ಎದೆಗೆ ಕೊಚ್ಚಿ ಕೊಲೆಗೈದಿದ್ದಾರೆ. ಇದನ್ನೂ ಓದಿ:ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ

    ಸದ್ಯ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 8 ಮಂದಿ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

  • ಮಾವನ ಅಂತ್ಯ ಸಂಸ್ಕಾರಕ್ಕೆ ಹೊರಟು ಸ್ಮಶಾನ ಸೇರಿದ ಅಳಿಯ

    ಮಾವನ ಅಂತ್ಯ ಸಂಸ್ಕಾರಕ್ಕೆ ಹೊರಟು ಸ್ಮಶಾನ ಸೇರಿದ ಅಳಿಯ

    ಚಿಕ್ಕಮಗಳೂರು: ಮಾವನ ಅಂತ್ಯ ಸಂಸ್ಕಾರಕ್ಕೆ ಹೊರಟಿದ್ದ ಅಳಿಯನೂ ಸಾವನಪ್ಪಿರೋ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುರೇಶ್ (47) ಮೃತ ದುರ್ದೈವಿ. ಪತ್ನಿ ತಂದೆಯ ಸಾವಿಗೆ ಹೋಗಲು ರಸ್ತೆ ಬದಿಯಲ್ಲಿ ಸುರೇಶ್, ಪತ್ನಿ ಸುನಂದಾ ಹಾಗೂ ಮಕ್ಕಳು ಬಸ್ಸಿಗಾಗಿ ಕಾಯುತ್ತಿದರು. ಈ ವೇಳೆ ಏಕಾಏಕಿ ರಸ್ತೆ ಬದಿಯಲ್ಲಿ ನಿಂತಿದ್ದ ಸುರೇಶ್ ಕುಟುಂಬಸ್ಥರ ಮೇಲೆ ಕಾರು ನುಗ್ಗಿದೆ. ಕೂದಲೆಳೆ ಅಂತರದಲ್ಲಿ ಕಾರು ಡಿಕ್ಕಿಯಿಂದ ಪತ್ನಿ ಸುನಂದಾ ಹಾಗೂ ಮಕ್ಕಳು ಪಾರಾಗಿದ್ದಾರೆ.

    ಈ ಘಟನೆಯಲ್ಲಿ ತಪ್ಪಿಸಿಕೊಳ್ಳಲು ಮುಂದಾದ ಸುರೇಶ್ ಮೇಲೆ ಕಾರು ಹರಿದ ಪರಿಣಾಮ ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಪಾನಮತ್ತನಾಗಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದ್ದು, ಒಂದೆಡೆ ತಂದೆ ಸಾವು, ಮತ್ತೊಂದೆಡೆ ಪತಿಯ ಸಾವಿನಿಂದ ಮೃತ ಸುರೇಶ್ ಪತ್ನಿ ಸುನಂದಾ ಕಂಗಾಲಾಗಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೊಬೈಲ್ ನಿಷೇಧ – ಕೊನೆಯ ಬಾರಿ ಮಾವನ ಮುಖ ನೋಡಲಾಗದೆ ಬಿಕ್ಕಿ ಬಿಕ್ಕಿ ಅತ್ತ ನಿರ್ವಾಹಕ

    ಮೊಬೈಲ್ ನಿಷೇಧ – ಕೊನೆಯ ಬಾರಿ ಮಾವನ ಮುಖ ನೋಡಲಾಗದೆ ಬಿಕ್ಕಿ ಬಿಕ್ಕಿ ಅತ್ತ ನಿರ್ವಾಹಕ

    ಬೆಂಗಳೂರು: ಚಾಲಕ ಮತ್ತು ನಿರ್ವಾಹಕರಿಗೆ ಡ್ಯೂಟಿ ಸಮಯದಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ ಈಶಾನ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ ಕೊನೆಯ ಬಾರಿ ತನ್ನ ಮಾವನ ಮುಖ ನೋಡಲು ಆಗಲಿಲ್ಲ ಎಂದು ಕಣ್ಣೀರಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಪರುಶುರಾಮ್ ಯಾದಗಿರಿಯ ಗುರುಮಿಠಕಲ್ ಡಿಪೋದಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು, ಅವರು ಡ್ಯೂಟಿ ಮಾಡುತ್ತಿದ್ದಾಗ ಅವರ ಮಾನ ಊರಿನಲ್ಲಿ ತೀರಿಕೊಂಡಿದ್ದಾರೆ. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆದ ಕಾರಣ ಅವರಿಗೆ ಈ ವಿಷಯ ತಿಳಿದಿರಲಿಲ್ಲ.

    ಪರುಶುರಾಮ್ ಮಾವ ಸೆ.16ರಂದು ಮೃತಪಟ್ಟಿದ್ದರು. ಆದರೆ ಆ ದಿನ ಅವರು ಗುರುಮಿಠಕಲ್ – ಕಲಬುರಗಿ ಕಡೆ ಹೋಗುವ ಬಸ್ಸಿನಲ್ಲಿ ಕರ್ತವ್ಯ ಮಾಡುತ್ತಿದ್ದರು. ಮೃತಪಟ್ಟ ವಿಚಾರವನ್ನು ತಿಳಿಸಲು ಪರಶುರಾಮ್ ಮನೆಯವರು ಅವರ ಮೊಬೈಲ್‍ಗೆ ಕರೆ ಮಾಡಿದ್ದಾರೆ. ಡ್ಯೂಟಿಯ ಸಮಯದಲ್ಲಿ ಮೊಬೈಲ್ ನಿಷೇಧವಿದ್ದ ಕಾರಣ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಕಾರಣದಿಂದ ಅವರನ್ನು ಸಂಪರ್ಕಿಸಲಾಗಿಲ್ಲ.

    ಈ ವೇಳೆ ಪರುಶರಾಮ್ 17ನೇ ತಾರೀಖು ಡ್ಯೂಟಿ ಮೇಲೆಯೇ ಕಲಬುರಗಿದಿಂದ ಗುರುಮಿಠಕಲ್‍ಗೆ ವಾಪಸ್ ಬಂದಿದ್ದಾರೆ. ಅದೇ ರಸ್ತೆಯಲ್ಲಿ ಬರುವಾಗ ಹಳ್ಳಿಯೊಂದರಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಇದನ್ನು ನೋಡಿದ ಪರುಶರಾಮ್ ಬಸ್ ನಿಲ್ಲಿಸಿ, ಯಾರು, ಏನಾಗಿತ್ತು ಎಂದು ವಿಚಾರಿಸಿದಾಗ ತನ್ನ ಮಾವನೇ ತೀರಿಕೊಂಡಿದ್ದು ಎಂಬ ವಿಷ್ಯ ಗೊತ್ತಾಗಿದೆ. ಇದನ್ನು ಓದಿ: ಕಂಡಕ್ಟರ್‌ನಿಂದ ಬಸ್ಸಲ್ಲೇ ಗಾನಾ ಬಜಾನ – ಯಾದಗಿರಿಯ ಪರಶುರಾಮ್ ಪಬ್ಲಿಕ್ ಹೀರೋ

    ಈ ವಿಚಾರದಿಂದ ಬೇಸರಗೊಂಡ ಪರಶುರಾಮ್ ಮೊಬೈಲ್ ನಿಷೇಧ ಮಾಡಿರೋ ಹಿನ್ನೆಲೆ, ಡ್ರೈವರ್ ಮತ್ತು ಕಂಡಕ್ಟರ್‍ಗಳ ಸಂಕಟವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ತನ್ನ ನೋವನ್ನು ಹಂಚಿಕೊಂಡಿದ್ದಾರೆ. ಚಾಲಕ ಮತ್ತು ನಿರ್ವಾಹಕಗೆ ಮೊಬೈಲ್ ನಿಷೇಧ ಮಾಡಿರುವುದರಿಂದ ತುಂಬಾ ತೊಂದರೆಯಾಗಿದೆ. ಸೋಮವಾರದಿಂದ ನಾನು ಡ್ಯೂಟಿ ಮಾಡುತ್ತಿದ್ದೆ ಈ ವೇಳೆ ನಮ್ಮ ಮಾವ ತೀರಿಕೊಂಡಿದ್ದಾರೆ. ನಾನು ನನ್ನ ಮೊಬೈಲ್‍ನನ್ನು ಸ್ವಿಚ್ ಆಫ್ ಮಾಡಿ ಪೆಟ್ಟಿಗೆಯಲ್ಲಿ ಇಟ್ಟಿದ್ದೆ ನನಗೆ ವಿಷಯವೇ ತಿಳಿದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

    ನಮ್ಮ ಮನೆಯವರು ವಿಷಯ ತಿಳಿಸಲು ನನಗೆ ಕರೆ ಮಾಡಿದ್ದಾರೆ. ಆದರೆ ನನ್ನ ಮೊಬೈಲ್ ಸ್ವಿಚ್ ಆಫ್ ಆದ ಕಾರಣ ನನಗೆ ಈ ವಿಚಾರವೇ ಗೊತ್ತಾಗಿಲ್ಲ. ಮೊಬೈಲ್ ನಿಷೇಧ ಮಾಡಿದ ಕಾರಣ ನಾನು ಕೊನೆಯದಾಗಿ ನಮ್ಮ ಮಾವನವರ ಮುಖ ನೋಡದ ಹಾಗೇ ಆಯಿತು ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇದನ್ನು ಓದಿ: ಮಗಳು ಮೃತಪಟ್ಟರೂ ಕಂಡಕ್ಟರ್ ಕೆಲಸಕ್ಕೆ ಹಾಜರಾಗಲು ಸೂಚಿಸಿದ ಅಧಿಕಾರಿ

    ಪರಶುರಾಮ್ ಈ ಹಿಂದೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿದ್ದರು. ಎಂಟು ವರ್ಷದಿಂದ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಪರಶುರಾಮ್‍ಗೆ ಶಾಲಾ ದಿನಗಳಿಂದಲೂ ಹಾಡು ಹೇಳೋ ಹುಚ್ಚು ಬೆಳೆಸಿಕೊಂಡಿದ್ದರು. ಹೀಗಾಗಿ ಇದೀಗ ಇಲಾಖೆಯ ಅನುಮತಿ ಪಡೆದು ಬಸ್ಸಿನಲ್ಲಿ ಹಾಡುವ ಮೂಲಕ ಪ್ರಯಾಣಿಕರನ್ನು ರಂಜಿಸುತ್ತಿದ್ದಾರೆ.

  • ಇವತ್ತೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗ್ತಾರೆ: ಡಿಕೆಶಿ ಮಾವ

    ಇವತ್ತೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗ್ತಾರೆ: ಡಿಕೆಶಿ ಮಾವ

    ಮೈಸೂರು: ಇವತ್ತೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮಾವ ತಿಮ್ಮಯ್ಯ ಹೇಳಿದ್ದಾರೆ.

    ನಗರದ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನನ್ನ ಅಳಿಯ ಯಾವದೇ ತಪ್ಪು ಮಾಡಿಲ್ಲ. ಇದರಲ್ಲಿ ಯಾವ ಹವಾಲವೂ ಇಲ್ಲ ಅಕ್ರಮ ಸಂಪಾದನೆಯೂ ಇಲ್ಲ. ಬುಧವಾರವೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಾರೆ. ಅಳಿಯನ ಬಂಧನ ಸುದ್ದಿ ಕೇಳಿದ ಕೂಡಲೇ ಮಗಳ ಜೊತೆ ಮಾತನಾಡಿದ್ದೇನೆ. ನಾವೂ ಯಾರು ಆತಂಕಕ್ಕೆ ಒಳಗಾಗಿಲ್ಲ ಎಂದು ಹೇಳಿದ್ದಾರೆ.

    ತಪ್ಪು ಮಾಡಿಲ್ಲ ಎಂದ ಮೇಲೆ ಆತಂಕ ಯಾಕೆ ಹೇಳಿ? ರಾಜಕೀಯ ದುರುದ್ದೇಶದಿಂದ ಡಿ.ಕೆ.ಶಿವಕುಮಾರ್ ಅವರನ್ನು ಬಂಧನವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ಹೀಗಾಗಿ ಅಧಿಕಾರ ದುರಪಯೋಗ ಪಡಿಸಿಕೊಂಡು ಬಂಧನ ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್ ಅವರನ್ನು ನಾಲ್ಕು ದಿನ ವಿಚಾರಣೆ ಮಾಡಿದೆ. ಎಲ್ಲ ರೀತಿಯಲ್ಲೂ ಅವರು ವಿಚಾರಣೆಗೆ ಸಹಕಾರ ನೀಡಿದ್ದಾರೆ. ಈಗ ವಿಚಾರಣೆಗೆ ಸಹಕರಿಸುತ್ತಿಲ್ಲ ಅಂದರೆ ಅದರ ಅರ್ಥ ಏನೂ? ವಿಚಾರಣೆ ನಾಲ್ಕು ದಿನ ನಡೆದ ಕಾರಣ ಬಂಧನವಾಗಲ್ಲ ಎಂದು ಕೊಂಡಿದ್ದೇವು. ಆದರೆ ಈಗ ಬಂಧನವಾಗಿದೆ. ಇದನ್ನು ಕಾನೂನಾತ್ಮಕವಾಗಿ ಎದುರಿಸುವ ಶಕ್ತಿ ನನ್ನ ಅಳಿಯನಿಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ವರದಕ್ಷಿಣೆ ನೀಡದ ಮಾವನ ಕಿವಿ ಕತ್ತರಿಸಿ, ಅತ್ತೆಯ ಮೂಗು ಕಚ್ಚಿದ ಅಳಿಯ

    ವರದಕ್ಷಿಣೆ ನೀಡದ ಮಾವನ ಕಿವಿ ಕತ್ತರಿಸಿ, ಅತ್ತೆಯ ಮೂಗು ಕಚ್ಚಿದ ಅಳಿಯ

    ಲಕ್ನೋ: ವರದಕ್ಷಿಣೆ ನೀಡಿಲ್ಲ ಎಂಬ ಕಾರಣ ಅಳಿಯನೊಬ್ಬ ಮಾವನ ಕಿವಿ ಕತ್ತರಿಸಿ ಅತ್ತೆಯ ಮೂಗು ಕಚ್ಚಿದ ಘಟನೆ ಉತ್ತರ ಪ್ರದೇಶದ ಬರೇಲಿಯ ನಕಾಟಿಯಾ ಪ್ರದೇಶದಲ್ಲಿ ನಡೆದಿದೆ.

    ಹಲ್ಲೆ ಮಾಡಿದ ಅಳಿಯನನ್ನು ಮೊಹಮ್ಮದ್ ಅಶ್ಫಾಕ್ ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ ಅತ್ತೆ ಮಾವನನ್ನು, ಗಂಥಾ ರೆಹಮಾನ್ ಮತ್ತು ಗುಲ್ಶನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಗುಲ್ಶನ್ ಅವರನ್ನು ಹೆಚ್ಚಿನ ಚಿಕೆತ್ಸೆಗಾಗಿ ದೆಹಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಫ್‍ಸಿಐ) ನಾಲ್ಕನೇ ಹಂತದ ಉದ್ಯೋಗಿಯಾಗಿರುವ ಗಂಥಾ ರೆಹಮಾನ್ ಅವರ ತನ್ನ ಪುತ್ರಿ ಚಾಂದ್ ಬಿ ಅವರನ್ನು ಒಂದು ವರ್ಷದ ಹಿಂದೆ ಬರೇಲಿಯ ರೀಯಲ್ ಎಸ್ಟೇಟ್ ವ್ಯಾಪಾರಿಯಾದ ಮೊಹಮ್ಮದ್ ಅಶ್ಫಾಕ್‍ನಿಗೆ ಕೊಟ್ಟು ವಿವಾಹ ಮಾಡಿದ್ದಾರೆ. ಈ ಸಮಯದಲ್ಲಿ ರೆಹಮಾನ್ ತನ್ನ ಮಗಳಿಗೆ 10 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಕೂಡ ನೀಡಿದ್ದಾರೆ. ಆದರೆ ಚಾಂದ್ ಬಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಗಂಡ 5 ಲಕ್ಷ ರೂ. ಹೆಚ್ಚು ವರದಕ್ಷಿಣೆ ನೀಡುವಂತೆ ಹೇಳಿದ್ದಾನೆ. ಆದರೆ ರೆಹಮಾನ್ ಇದನ್ನು ನಿರಾಕರಿಸಿದಾಗ, ಅಶ್ಫಾಕ್ ಭಾನುವಾರ ಚಂದ್ ಬಿಯನ್ನು ಥಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವಿಷಯವನ್ನು ತಿಳಿದು ರೆಹಮಾನ್ ಮತ್ತು ಗುಲ್ಶನ್ ಜೊತೆಯಲ್ಲಿ ಮಗಳ ಮನೆಗೆ ಬಂದಿದ್ದಾರೆ. ಈ ವೇಳೆ ಎರಡು ಕುಟುಂಬದ ನಡುವೆ ಈ ವಿಚಾರಕ್ಕೆ ಮಾತುಕತೆ ನಡೆದಿದೆ. ಈ ವೇಳೆ ಕೋಪಗೊಂಡ ಅಶ್ಫಾಕ್ ಮತ್ತು ಅವರ ಕುಟುಂಬದವರು, ರೆಹಮಾನ್ ಮತ್ತು ಗುಲ್ಶನ್ ಅವರನ್ನು ಥಳಿಸಿದ್ದಾರೆ. ಈ ಜಗಳದಲ್ಲಿ ಅಶ್ಫಾಕ್ ಅತ್ತೆ ಗುಲ್ಶನ್ ಅವರ ಮೂಗು ಕಚ್ಚಿದ್ದಾನೆ ಮತ್ತು ಮಾವ ರೆಹಮಾನ್ ಅವರ ಕಿವಿಯನ್ನು ಚಾಕುವಿನಿಂದ ಕತ್ತರಿಸಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಅವನಿಶ್ ಸಿಂಗ್, ಈ ಪ್ರಕರಣಕ್ಕೆ ಸಂಬಧಿಸಿದಂತೆ ಐಪಿಸಿ ಸೆಕ್ಷನ್ 323, 326 ಮತ್ತು 504ರ ಅಡಿಯಲ್ಲಿ ಅಶ್ಫಾಕ್ ಕುಟುಂಬದ ಐದು ಜನರ ಮೇಲೆ ಎಫ್‍ಐಆರ್ ದಾಖಲಾಗಿದೆ. ಅವರು ತಪ್ಪಿಸಿಕೊಂಡಿದ್ದು ಶೀಘ್ರದಲ್ಲೇ ಅವರನ್ನು ಬಂಧಿಸಲಿದ್ದೇವೆ ಎಂದು ಹೇಳಿದ್ದಾರೆ.

  • ಅಡುಗೆ ಮನೆಯಲ್ಲಿ ಸೊಸೆಯಿಂದ ಕ್ಯಾಮೆರಾ ಫಿಕ್ಸ್ – 50ರ ಮಾವನ ಕೃತ್ಯ ಬಯಲು

    ಅಡುಗೆ ಮನೆಯಲ್ಲಿ ಸೊಸೆಯಿಂದ ಕ್ಯಾಮೆರಾ ಫಿಕ್ಸ್ – 50ರ ಮಾವನ ಕೃತ್ಯ ಬಯಲು

    ಮುಂಬೈ: ಲೈಂಗಿಕ ಕಿರುಕುಳ ಕೊಡುತ್ತಿದ್ದ ಮಾವನ ಕೃತ್ಯವನ್ನು ಸೊಸೆಯೊಬ್ಬಳು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುವ ಮೂಲಕ ಆತನ ಕೃತ್ಯವನ್ನು ಬಯಲು ಮಾಡಿದ್ದಾಳೆ.

    ವಿರಾರ್ ಪೊಲೀಸರು 50 ವರ್ಷದ ಆರೋಪಿ ಮಾವನನ್ನು ಬಂಧಿಸಿದ್ದಾರೆ. ಆರೋಪಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆರೋಪಿ ಅನೇಕ ದಿನಗಳಿಂದ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಮಹಿಳೆ ನಿಮ್ಮ ತಂದೆ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ ಎಂದು ಪತಿಯ ಬಳಿ ಹೇಳಿಕೊಂಡಿದ್ದಾಳೆ. ಆದರೆ ಪತಿ ತಂದೆಯ ಮೇಲಿನ ಆರೋಪವನ್ನು ನಿರಾಕರಿಸಿದ್ದನು. ಇದರಿಂದಾಗಿ ಆಕೆ ಮಾನವ ಕೃತ್ಯವನ್ನು ಫೋನಿನಲ್ಲಿ ರೆಕಾರ್ಡ್ ಮಾಡಲು ನಿರ್ಧರಿಸಿದ್ದಾಳೆ.

    ಅದರಂತೆಯೇ ಒಂದು ದಿನ ಸೊಸೆ ತನ್ನ ಮೊಬೈಲ್ ಫೋನ್ ಕ್ಯಾಮೆರಾವನ್ನು ಅಡುಗೆಮನೆಯಲ್ಲಿ ಮಾವನಿಗೆ ಕಾಣಿಸದಂತೆ ಇಟ್ಟಿದ್ದಳು. ಬೆಳಗ್ಗೆ ಆರೋಪಿ ಮಾವ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ. ಮತ್ತೆ ಸಂಜೆ ಸೊಸೆ ಅಡುಗೆ ಮನೆಯಲ್ಲಿದ್ದಳು. ಆಗ ಮಾವ ಬಂದು ಆಕೆ ಎದೆಯನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದೆಲ್ಲಾ ಫೋನಿನ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಪತಿ ಮನೆಗೆ ಬಂದ ಕೂಡಲೇ ಅವಳು ಮಾವನ ಕೃತ್ಯವನ್ನು ತೋರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ಮಗ ಪ್ರಶ್ನೆ ಮಾಡಿದ್ದಕ್ಕೆ ಮಗ ಮತ್ತು ಸೊಸೆಯನ್ನು ಮನೆಯಿಂದ ಹೊರಹೋಗುವಂತೆ ತಂದೆ ಸೂಚಿಸಿದ್ದಾನೆ. ನಂತರ ಮಹಿಳೆ ವಿಡಿಯೋ ಕ್ಲಿಪ್ ಜೊತೆ ವಿರಾರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿ ಎಫ್‍ಐಆರ್ ದಾಖಲಿಸಿದ್ದಳು. ಆಕೆ ನೀಡಿದ ದೂರಿನ ಅನ್ವಯ ನಾವು ಆತನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಮಂತ್ ಕಟ್ಕರ್ ಹೇಳಿದ್ದಾರೆ.

  • ವಿದ್ಯುತ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಸೊಸೆಯ ಕತ್ತು ಸೀಳಿ ಕೊಂದ ಮಾವ

    ವಿದ್ಯುತ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಸೊಸೆಯ ಕತ್ತು ಸೀಳಿ ಕೊಂದ ಮಾವ

    ನವದೆಹಲಿ: ವಿದ್ಯುತ್ ಬಿಲ್ ಜಾಸ್ತಿ ಬಂದ ಕಾರಣಕ್ಕೆ ಮಾವ-ಸೊಸೆ ನಡುವೆ ಜಗಳ ನಡೆದು, ಸಿಟ್ಟಿಗೆದ್ದ ಮಾವ ಚಾಕುವಿನಿಂದ ಸೊಸೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದೆಹಲಿಯ ಪಹರ್ಗಾಂಜ್ ನಲ್ಲಿ ನಡೆದಿದೆ.

    ಕೊಲೆಯಾದ ಮಹಿಳೆಯನ್ನು ನೀರಜಾ ದೇವಿ(33) ಹಾಗೂ ಆರೋಪಿಯನ್ನು ಭಾಗತ್ ರಾಮ್(65) ಎಂದು ಗುರುತಿಸಲಾಗಿದೆ. ಮನೆಗೆ ವಿದ್ಯುತ್ ಬಿಲ್ ಜಾಸ್ತಿ ಬಂದ ಕಾರಣ ಸೊಸೆ ನೀರಜಾ ಅಡುಗೆ ಮನೆಯ ಬಲ್ಬ್ ತೆಗೆದಿದ್ದಾಳೆ. ಈ ಕಾರಣಕ್ಕೆ ನೀರಜಾ ಮತ್ತು ಆಕೆಯ ಅತ್ತೆ-ಮಾವನ ನಡುವೆ ಜಗಳ ನಡೆದಿತ್ತು. ಬಳಿಕ ಅದು ತಾರಕಕ್ಕೇರಿ ಮಾತಿಗೆ ಮಾತು ಬೆಳೆದು ಕೋಪಗೊಂಡ ಮಾವ ಚಾಕುವಿನಿಂದ ಸೊಸೆಯ ಗಂಟಲನ್ನು ಸೀಳಿ ಕೊಲೆಮಾಡಿದ್ದಾನೆ.

    ಸೊಸೆಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಭಾಗತ್ ರಕ್ತಸಿಕ್ಕ ಬಟ್ಟೆಯಲ್ಲೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ನಡೆದದ್ದೆಲ್ಲವನ್ನು ಹೇಳಿ ಶರಣಾಗಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ನಮ್ಮ ಸೊಸೆ ನಮ್ಮ ಜೊತೆ ಸದಾ ಜಗಳವಾಡುತ್ತಿದ್ದಳು. ಮಗ-ಸೊಸೆ ಮಧ್ಯೆ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ಹೀಗಾಗಿ ನನ್ನ ಹೆಂಡತಿಗೆ ಹಾಗೂ ನನಗೆ ಸದಾ ಬೈಯುತ್ತಿದ್ದಳು ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ.

    ಕಳೆದ ತಿಂಗಳು ವಿದ್ಯುತ್ ಬಿಲ್ ಜಾಸ್ತಿ ಬಂದ ಕಾರಣ ಜಗಳ ನಡೆದಿತ್ತು. ಬಳಿಕ ಸೊಸೆ ನೀರಜಾ ಅಡುಗೆ ಮನೆ, ಬಾತ್‍ರೂಂ ಸೇರಿದಂತೆ ಮನೆಯ ಮೆಟ್ಟಿಲುಗಳ ಬಳಿ ಇದ್ದ ಎಲ್ಲಾ ಬಲ್ಬ್ ಗಳನ್ನು ತೆಗೆದು ಹಾಕಿದ್ದಳು. ಇದರಿಂದ ನನಗೆ ಹಾಗೂ ನನ್ನ ಪತ್ನಿಗೆ ಕತ್ತಲಾದಾಗ ಓಡಾಡಲು ತೊಂದರೆಯಾಗುತಿತ್ತು. ಹೀಗಾಗಿ ಮತ್ತೆ ಬಲ್ಬ್ ಗಳನ್ನು ಹಾಕುವಂತೆ ಹೇಳಿದ್ದೇವು. ಆ ಕಾರಣಕ್ಕೆ ಜಗಳ ನಡೆದಿತ್ತು ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.

    ಮೃತ ಮಹಿಳೆಯ ಪೋಷಕರು ಆಕೆಯ ಅತ್ತೆ-ಮಾವ ತಮ್ಮ ಮಗಳಿಗೆ ಕೌಟುಂಬಿಕ ಹಿಂಸೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

  • ಅಳಿಯನಾಗಿ ಒಪ್ಪಿಕೊಳ್ಳುತ್ತೇನೆ ಎಂದು ಮನೆಗೆ ಬಂದು ಹಲ್ಲೆಗೈದ ಮಾವ

    ಅಳಿಯನಾಗಿ ಒಪ್ಪಿಕೊಳ್ಳುತ್ತೇನೆ ಎಂದು ಮನೆಗೆ ಬಂದು ಹಲ್ಲೆಗೈದ ಮಾವ

    ಹೈದರಾಬಾದ್: ಅಳಿಯನಾಗಿ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿ ಮನೆಗೆ ಬಂದು ಮಗಳ ಗಂಡನ ಮೇಲೆಯೇ ಹಲ್ಲೆಗೈದ ಘಟನೆಯೊಂದು ಹೈದರಾಬಾದ್ ನ ಎಸ್.ಆರ್ ನಗರ ಪ್ರದೇಶದಲ್ಲಿ ನಡೆದಿದೆ.

    ಇಮ್ತಿಯಾಜ್(21) ಹಲ್ಲೆಗೊಳಗಾದ ಅಳಿಯ. ತನ್ನ ಪತ್ನಿಯ ತಂದೆ ಹಾಗೂ ಸಂಬಧಿಕರು ಬಂದು ಶುಕ್ರವಾರ ಇಮ್ತಿಯಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಪೋಷಕರು ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ ಇಮ್ತಿಯಾಜ್ ಮತ್ತು ಫಾತಿಮಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಫಾತಿಮಾ ಮನೆಯವರ ವಿರೋಧದ ನಡುವೆಯೂ ಇವರಿಬ್ಬರು ಮದುವೆಯಾಗಿದ್ದರು. ಆದರೆ ಶುಕ್ರವಾರ ಫಾತಿಮಾ ತಂದೆ, ನಿನ್ನನ್ನು ನಮ್ಮ ಅಳಿಯ ಎಂದು ಒಪ್ಪಿಕೊಳ್ಳುತ್ತೇವೆ. ಈ ಬಗ್ಗೆ ಮಾತುಕತೆ ನಡೆಸಲು ನಿಮ್ಮ ಮನೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಇಮ್ತಿಯಾಜ್ ಮನೆಗೆ ಬರುವಂತೆ ಹೇಳಿದ್ದಾರೆ.

    ಮನೆಗೆ ಬಂದು ಕೆಲ ಹೊತ್ತು ಮಾತುಕತೆ ನಡೆಸಿದ್ದ ಕುಟುಂಬದ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಈ ವೇಳೆ ಫಾತಿಮಾ ಸಹೋದರರು ಚಾಕುವಿನಿಂದ ಇಮ್ತಿಯಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಯುತ್ತಿದ್ದಂತೆಯೇ ಇಮ್ತಿಯಾಜ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಇದರಿಂದ ಮತ್ತಷ್ಟು ಕೆರಳಿದ ಫಾತಿಮಾ ಸಹೋದರರು, ಇಮ್ತಿಯಾಜ್ ನನ್ನು ರಸ್ತೆಗೆ ಎಳೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ಇಮ್ತಿಯಾಜ್ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳೀಯರು ಜಮಾಯಿಸಿದ್ದು, ಈ ಮಧ್ಯೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಎ.ಆರ್ ಶ್ರೀನಿವಾಸ್ ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಹೈದರಾಬಾದ್ ಪೊಲೀಸರು ಮರ್ಯಾದಾ ಹತ್ಯೆಗೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ನಡುರಸ್ತೆಯಲ್ಲೇ ಖಾರದ ಪುಡಿ ಎರಚಿ ಸೊಸೆಯಿಂದ ಮಾವನ ಮೇಲೆ ಹಲ್ಲೆ

    ನಡುರಸ್ತೆಯಲ್ಲೇ ಖಾರದ ಪುಡಿ ಎರಚಿ ಸೊಸೆಯಿಂದ ಮಾವನ ಮೇಲೆ ಹಲ್ಲೆ

    ಹೈದರಾಬಾದ್: ಆಸ್ತಿಗಾಗಿ ತನ್ನ ಪತಿಯ ಜೊತೆ ಸೇರಿ ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಮಂಗಳವಾರ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದೆ.

    ಆಸ್ತಿ ವಿಚಾರಕ್ಕಾಗಿ ಮಗ ನಡುರಸ್ತೆಯಲ್ಲೇ ತನ್ನ ತಂದೆಯ ಮೇಲೆ ಕಬಿಣ್ಣದಿಂದ ಹೊಡೆದು ಹಲ್ಲೆ ಮಾಡುತ್ತಿದ್ದನು. ಈ ವೇಳೆ ಮಹಿಳೆ ಮನೆಯಲ್ಲಿದ್ದ ಖಾರದ ಪುಡಿಯನ್ನು ಮಾವನ ಮೇಲೆ ಎರಚಿ ಹಲ್ಲೆ ಮಾಡಿದ್ದಾಳೆ.

    ಪತಿಯ ಜೊತೆ ಸೇರಿ ಆಕೆ ಕೂಡ ತನ್ನ ಮಾವನ ಮೇಲೆ ಹಲ್ಲೆ ಮಾಡಿದ್ದಾಳೆ. ಮಹಿಳೆಯ ಸಹೋದರ ಕೂಡ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧನನ್ನು ತಿರುಪತಿಯಲ್ಲಿ ಇರುವ ರೂಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.

    ಸದ್ಯ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವೃದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪತಿ- ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

  • ಸೊಸೆಯನ್ನೇ ಸೆಕ್ಸ್‌ಗೆ ಕರೆದ ಮಾವ – ವಿಷಯ ತಿಳಿದು ಬಟ್ಟೆ ಎಳೆದಾಡಿ ಅತ್ತೆಯಿಂದ ಹಲ್ಲೆ

    ಸೊಸೆಯನ್ನೇ ಸೆಕ್ಸ್‌ಗೆ ಕರೆದ ಮಾವ – ವಿಷಯ ತಿಳಿದು ಬಟ್ಟೆ ಎಳೆದಾಡಿ ಅತ್ತೆಯಿಂದ ಹಲ್ಲೆ

    ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನೊಬ್ಬ ತನ್ನ ಸೊಸೆಯನ್ನೇ ಲೈಂಗಿಕ ಕ್ರಿಯೆಗೆ ಕರೆದ ಘಟನೆ ಬೆಂಗಳೂರಿನ ಕೊಣನಕುಂಟೆಯಲ್ಲಿ ನಡೆದಿದೆ.

    ಪಳನಿ ಸೊಸೆಯನ್ನೇ ಲೈಂಗಿಕ ಕ್ರಿಯೆಗೆ ಕರೆದ ಮಾವ. ಪಳನಿ ತನ್ನ ಸೊಸೆ ಅನಿತಾ (ಹೆಸರು ಬದಲಾಯಿಸಲಾಗಿದೆ)ಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. 2014ರಲ್ಲಿ ಅನಿತಾ ಮ್ಯಾಟ್ರಿಮೋನಿಯ ಮುಂಖಾತರ ಕುಮಾರ್‍ನನ್ನು ಮದುವೆಯಾಗಿದ್ದರು.

    ಪಳನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಸೊಸೆ ಅನಿತಾಗೆ ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದನು. ಈ ವಿಷಯ ತಿಳಿದ ಕುಮಾರ್ ತನ್ನ ತಂದೆಯಿಂದ ದೂರವಿರಲು ಬೇರೆ ಮನೆ ಮಾಡಿದ್ದರು. ಬಳಿಕ ಪಳನಿ ಹಾಗೂ ಆತನ ಪತ್ನಿ ಸರಸ್ವತಿ ಬಂದು ಅನಿತಾ ಮೇಲೆ ಹಲ್ಲೆ ನಡೆಸಿದ್ದರು.

    ಪಳನಿ ಹಾಗೂ ಸರಸ್ವತಿ ಗುರುವಾರ ಅನಿತಾ ನಿವಾಸದ ಬಳಿ ಗಲಾಟೆ ಮಾಡಿ ಆಕೆಯ ಬಟ್ಟೆ ಎಳೆದಾಡಿ ಹಲ್ಲೆ ಮಾಡಿದ್ದಾರೆ. ಮನೆಯ ಬಳಿ ಬಂದು ಗಲಾಟೆ ಮಾಡಿ ಹೋಗಿದ್ದಕ್ಕೆ ಅನಿತಾ ತನ್ನ ಅತ್ತೆ-ಮಾವನ ವಿರುದ್ಧ ಕೇಸ್ ದಾಖಲಿಸಿದ್ದಾರೆ.

    ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.