Tag: father in law

  • ಸೊಸೆ ಕತ್ತು ಸೀಳಿದ ಮಾವ- 8ರ ಕಂದಮ್ಮ ಅನಾಥ

    ಸೊಸೆ ಕತ್ತು ಸೀಳಿದ ಮಾವ- 8ರ ಕಂದಮ್ಮ ಅನಾಥ

    ಲಕ್ನೋ: ಮಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವಾಗಿ ಮನನೊಂದಿದ್ದ ಮಾವ ಸೊಸೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.

    ಪಿಂಕಿ, ಅಮಿತ್ ಬನ್ಸಾಲ್ ಮೃತರು. ರಾಮ್ ಕಿಶನ್ ಆರೋಪಿಯಾಗಿದ್ದಾನೆ. ಈತನ ಮಗ ನೇಣು ಬಿಗಿದುಕೊಂಡು ಆತ್ಮಹ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಕಳೆದುಕೊಂಡಿದ್ದ ಕೋಪವನ್ನು ಸೊಸೆಯ ಮೇಲೆ ತಿರಿಸಿಕೊಳ್ಳಲು ಆಕೆಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಗಾನಗಂಧರ್ವ ಭಾಗವತ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ

    ಮೀರತ್ನಲ್ಲಿರುವ ತನ್ನ ಕಚೇರಿಯಲ್ಲಿ ರಾಮ್ ಕಿಶನ್ ಮಗ ಆತ್ಮಹತ್ಯೆಗೆ ಶರಣಾಗಿದ್ದನು. ಮಗ ಅಮಿತ್ ಬನ್ಸಾಲ್ ಒಳಾಂಗಣ ವಿನ್ಯಾಸಕಾರನಾಗಿ( Interior Designer) ಕೆಲಸ ಮಾಡುತ್ತಿದ್ದ. ತನ್ನ ಮಗನ ಸಾವಿನಿಂದ ಕೋಪಗೊಂಡ ರಾಮ್ ಕಿಶನ್ ತನ್ನ ಸೊಸೆಯನ್ನು ಕಟ್ಟರ್ ನಿಂದ ಹೊಡೆದು ಬನ್ಸಾಲ್ ಕಚೇರಿಯಲ್ಲಿ ಗಂಭೀರವಾಗಿ ಗಾಯಗೊಳಿಸಿದ್ದನು. ಇಡೀ ಘಟನೆಯು ಕಚೇರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ಘಟನೆ ನಡೆದ ದಿನ ಪಿಂಕಿ ತನ್ನ ಪತಿ ಅಮಿತ್ ಬನ್ಸಾಲ್‍ಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ನಂತರ ಆತನ ಕಚೇರಿಗೆ ಹೋದಾಗ ಅಮಿತ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದನು. ಈ ವೇಳೆ ಪಿಂಕಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಮಾವ ಕೂಡ ಕಚೇರಿಗೆ ಬಂದಿದ್ದಾನೆ. ಮಗನ ಸಾವನ್ನು ಕಂಡು ಕೆಂಡಾಮಂಡಲನಾಗಿದ್ದಾನೆ. ರಾಮ್ ಕಿಶನ್ ಕೋಪದಿಂದ ಪಿಂಕಿಯನ್ನು ಥಳಿಸಿ, ಕಟ್ಟರ್ ನಿಂದ ಅವಳ ಮೇಲೆ ಹಲ್ಲೆ ಮಾಡಿದನು. ಆಗ ಸ್ಥಳಕ್ಕೆ ನೌಚಂಡಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಗಾಯಗೊಂಡಿದ್ದ ಪಿಂಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಿಂಕಿ ಸಾವನ್ನಪಿದ್ದಾಳೆ.

    ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ರಾಮ್ ಕಿಶನ್‍ನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ. ಪಿಂಕಿ ಗಾಜಿಯಾಬಾದ್ ಮೂಲದವಳಾಗಿದ್ದು, ಮೃತ ದಂಪತಿಗೆ 8 ತಿಂಗಳ ಮಗಳಿದ್ದಾಳೆ.

  • ಸೊಸೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ ಮಾವ!

    ಸೊಸೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ ಮಾವ!

    ಮುಂಬೈ: ಪಾಪಿ ಮಾವನೊಬ್ಬ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೇ ಆಕೆಗೆ ಒತ್ತಾಯಪೂರ್ವಕವಾಗಿ ಕೋಳಿ ರಕ್ತ ಕುಡಿಸಿದ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    33 ವರ್ಷದ ಮಹಿಳೆ ಮಾವ ಮತ್ತು ಪತಿಯ ವಿರುದ್ಧ ಮಾನಸಿಕ ಹಾಗೂ ದೈಹಿಕ ಕಿರುಕುಳ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಸ್ವೀಕರಿಸುವ ಪೊಲೀಸರು ಆರೋಪಿ ಮಾವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ವಯಂ ಘೋಷಿತ ದೇವಮಾನವ ನಿರ್ದೇಶನದಂತೆ ಮಹಿಳೆಗೆ ಆಕೆಯ ಮಾವ ಕೋಳಿ ರಕ್ತವನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾನೆ.

    ದೂರಿನಲ್ಲಿ ಮಹಿಳೆ, ನನ್ನ ಪತಿ ಶಕ್ತಿಹೀನನಾಗಿದ್ದು ಈ ವಿಚಾರವನ್ನು ಆತನ ತಂದೆ-ತಾಯಿ ನನ್ನ ಮುಂದೆ ಮುಚ್ಚಿಟ್ಟಿದ್ದಾರೆ. ಹೀಗಾಗಿ ಮಾವ ನನ್ನ ಮೇಲೆ ಬಲವಂತವಾಗಿ ಸೆಕ್ಸ್ ಮಾಡಿ ಗರ್ಭಿಣಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದನು. ಇನ್ನು ಪತಿಯ ಬಗ್ಗೆ ನಾನು ನನ್ನ ಸಂಬಂಧಿಕರ ಬಳಿಯೂ ಹೇಳಿಕೊಂಡಿದ್ದೆ. ಆ ಬಳಿಕ ನನ್ನ ಮೇಲೆ ಅತ್ತೆಯೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. 2018ರಿಂದ ಅಂದರೆ ಮದುವೆಯಾದಾಗಿನಿಂದಲೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರ ಕಡಿಮೆಯಾಗಿದೆ: ದಿಗ್ವಿಜಯ ಸಿಂಗ್

    ಮಹಿಳೆ ಡಿಗ್ರಿ ಮುಗಿಸಿದ್ದು, ಪತಿ ಡಿಪ್ಲೋಮಾ ಎಂಜಿನಿಯರ್ ಪದವಿ ಪಡೆದಿದ್ದಾನೆ. ಇವರಿಬ್ಬರು 2018ರ ಡಿಸೆಂಬರ್ 30ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 4 ತಿಂಗಳಿನಿಂದ ದಂಪತಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಸದ್ಯ ಮಹಿಳೆಯ ದೂರಿನ ಅನ್ವಯ ತನಿಖೆ ನಡೆಸುತ್ತಿದ್ದೇವೆ. ಅಲ್ಲದೆ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವುದಾಗಿ ಪೊಲಿಸ್ ಇನ್ಸ್ ಪೆಕ್ಟರ್ ಜಿತೇಂದ್ರ ಕದಂ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಜನ್ರಿಗೆ ಗುಡ್ ನ್ಯೂಸ್ – ಅ.1ರಿಂದ ಕಾರ್ಯನಿರ್ವಹಿಸಲಿರುವ ಹೊಂಜು ಗೋಪುರ

  • ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳಲ್ಲಿ ಓರ್ವ ಮಾವನನ್ನೇ ಕೊಲೆ ಮಾಡಿದವನು!

    ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳಲ್ಲಿ ಓರ್ವ ಮಾವನನ್ನೇ ಕೊಲೆ ಮಾಡಿದವನು!

    ಮೈಸೂರು: ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದಲ್ಲಿರುವ ಆರೋಪಿಗಳಲ್ಲಿ ಒಬ್ಬನು ಮಾವನನ್ನೆ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.

    ಗ್ಯಾಂಗ್ ರೇಪ್ ಪ್ರಕರಣ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಪ್ರಕರಣ ಆರೋಪಿಯೊಬ್ಬ ಕೊಲೆ ಆರೋಪಿಯಾಗಿದ್ದಾನೆ. ಪ್ರೀತಿಸಿದ ಹುಡುಗಿಯನ್ನ ಮದುವೆ ಮಾಡಕೊಡದಿದ್ದಾಗ ಹುಡುಗಿ ತಂದೆಯನ್ನು ಕೊಲೆ ಮಾಡಿದ್ದನು. ಸದ್ಯ ಪೊಲೀಸರ ತನಿಖೆ ವೇಳೆ ಬೆಳಕಿಗಿ ಬಂದಿದೆ. ಆರೋಪಿಗಳ ಉಳಿದ ಪ್ರಕರಣ ಹಿನ್ನೆಲೆಗಳನ್ನ ಪೊಲೀಸರು ಕೆದಕುತ್ತಿದ್ದಾರೆ. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

    ಆರೋಪಿಗಳು ಮೈಸೂರಿನಲ್ಲಿ ತಮಿಳುನಾಡಿನಲ್ಲಿ ಖರೀದಿಸಿದ್ದ ಸಿಮ್ ಬಳಕೆ ಮಾಡಿದ್ದು, ಪೊಲೀಸರಿಗೆ ತನಿಖೆ ವೇಳೆ ತಿಳಿದಿದೆ. ನಂಬರ್‍ಗಳ ಟ್ರೇಸ್ ಮಾಡಿದ್ದು, ಈ ಘಟನ ಸ್ಥಳದಲ್ಲಿ ಹೆಚ್ಚಾಗಿ ಬಳಕೆಯಾಗಿ ಮತ್ತೆ ತಮಿಳುನಾಡಿನಲ್ಲಿ ಬಳಕೆಯಾದ ಹಿನ್ನೆಲೆಯನು ಹುಡುಕುತ್ತಾ ಆರೋಪಿಗಳ ಪತ್ತೆ ಹಚ್ಚಲಾಗಿದೆ.

    ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿದ ಸತ್ಯಮಂಗಲದಲ್ಲಿ ಇಂದು ಬೆಳಗ್ಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಮೂವರು ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದವರಾಗಿದ್ದಾರೆ. ರಸ್ತೆಗಳಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಗಳು ಇವರ ಮೇಲಿದೆ. ಅಂತೆಯೇ ಯುವಕ ಹಾಗೂ ಯುವತಿಯನ್ನೂ ದರೋಡೆ ಮಾಡಲು ತಂಡ ಹೋಗಿತ್ತು. ಇವರ ಬಳಿ ಏನೂ ಸಿಗದಕ್ಕೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು ಎನ್ನಲಾಗಿದೆ.

  • ಮತ್ತೊಂದು ರೇಪ್ ಕೇಸ್- ಸಿದ್ದಾಪುರದಲ್ಲಿ 11ರ ಬಾಲೆ ಮೇಲೆ ಮಾವನಿಂದಲೇ ಅತ್ಯಾಚಾರ

    ಮತ್ತೊಂದು ರೇಪ್ ಕೇಸ್- ಸಿದ್ದಾಪುರದಲ್ಲಿ 11ರ ಬಾಲೆ ಮೇಲೆ ಮಾವನಿಂದಲೇ ಅತ್ಯಾಚಾರ

    – ಶಾಲೆಯಿಂದ ಮನೆಗೆ ಹೊರಟಾಗ ಕೃತ್ಯ

    ಕಾರವಾರ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿರುವಾಗಲೇ ಇದೀಗ ಮತ್ತೊಂದು ರೇಪ್ ಕೇಸ್ ಬೆಳಕಿಗೆ ಬಂದಿದೆ. ಸೋದರ ಮಾವನೇ 11 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬಾಲಕಿ ಸೋದರ ಮಾವನೇ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ಇದೀಗ ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು!

    ಶಾಲೆಯಿಂದ ಹೊರಟಾಗ ಅತ್ಯಾಚಾರ:
    ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಹೊರಟಾಗ ಮನೆಗೆ ಬಿಡುವುದಾಗಿ ಹೇಳಿ ಬೈಕ್ ನಲ್ಲಿ ಕುರಿಸಿಕೊಂಡ ಆರೋಪಿ, ಮಾರ್ಗ ಮಧ್ಯೆ ಕಾಡಿನಲ್ಲಿ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ನಂತರ ಯಾರಿಗೂ ಹೇಳದಂತೆ ಹೆದರಿಸಿ ಆಕೆಯನ್ನು ಮನೆಗೆ ಬಿಟ್ಟು ಹೋಗಿದ್ದಾನೆ. ವಿಷಯ ತಿಳಿಯುತಿದ್ದಂತೆ ಪೊಷಕರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದು, ತಕ್ಷಣ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ – ಕ್ಷಮೆಯಾಚಿಸಿದ ಗೃಹ ಸಚಿವ

  • ಮಾವನ ಅಪಹರಣದಲ್ಲಿ ಅಳಿಯನೇ ಪ್ರಮುಖ ಪಾತ್ರಧಾರಿ

    ಮಾವನ ಅಪಹರಣದಲ್ಲಿ ಅಳಿಯನೇ ಪ್ರಮುಖ ಪಾತ್ರಧಾರಿ

    ಧಾರವಾಡ: ಮಾವನ ಅಪಹರಣದಲ್ಲಿ ಅಳಿಯನೇ ಭಾಗಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಅಳಿಯ ಪವನ ಜೊತೆ ಆಸೀಫ್, ಸಮೀರ್, ಮಂಜುನಾಥ್, ಖಲೀಲ ಬಂಧಿತ ಆರೋಪಿಗಳಾಗಿದ್ದಾರೆ. ಶ್ರೀನಿವಾಸ್ ನಾಯ್ಡು ಎಂಬ ರಿಯಲ್ ಎಸ್ಟೇಲ್ ಉದ್ಯಮಿಯನ್ನು ಅಳಿಯನ ಪವನ್ ಅಪಹರಣ ಮಾಡಿಸಿದ್ದನು.

    ನಿನ್ನೆ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣದ ಪ್ರಮುಖ ಪಾತ್ರಧಾರಿ ಅಳಿಯನೇ ಇರುವುದು ತನಿಖೆಯಿಂದ ಹೊರ ಬಿದ್ದಿದೆ. ಈ ಪ್ರಕರಣ ಭಾರೀ ಟ್ವಿಸ್ಟ್ ಪಡೆದಿದ್ದು, ಉದ್ಯಮಿಯ ಅಳಿಯನಿಂದಲೇ ಮಾವನ ಕಿಡ್ನಾಪ್ ಪ್ಲ್ಯಾನ್ ನಡೆದಿತ್ತು ಎಂದು ತಿಳಿದು ಬಂದಿದೆ.

    ಶ್ರೀನಿವಾಸ ನಾಯ್ಡು ಎಂಬ ರಿಯಲ್ ಎಸ್ಟೇಲ್ ಉದ್ಯಮಿಗೆ ನಿನ್ನೆ ಧಾರವಾಡದ ಇಟಿಗಟ್ಟಿ ಗ್ರಾಮದ ಬಳಿ ನಾಲ್ಕು ಜನ ಅಪಹರಿಸಿ ಪರಾರಿಯಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಶ್ರೀನಿವಾಸ ಅಳಿಯ ಪವನ ವಾಜಪೇಯಿಗೆ ಕೂಡಾ ಅಪಹರಣಕಾರರು ಹೊಡೆದು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಪೊಲೀಸರು ಶ್ರೀನಿವಾಸಗೆ ನಿನ್ನೆ ನಾಲ್ಕು ಗಂಟೆಯಲ್ಲೇ ಅಪಹರಣಕಾರಿಂದ ಬಿಡಿಸಿ ಕರೆ ಕರೆತಂದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಸೂಚನೆಯಿದೆ: ವಾಟಾಳ್ ನಾಗರಾಜ್

    ನಂತರ ತನಿಖೆ ಮುಂದುವರಿಸಿದ್ದ ಧಾರವಾಡ ವಿದ್ಯಾಗಿರಿ ಪೊಲೀಸರಿಗೆ ಅಳಿಯನೇ ಪ್ರಮುಖ ಸುತ್ರಧಾರ ಎಂದು ತಿಳಿದು ಬಂದಿದ್ದರಿಂದ, ಆತನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಬಾಯಿ ಬಿಟ್ಟ ಅಳಿಯ ಪವನ್, ಆತನ ಜೊತೆಯಲ್ಲಿ ಇದ್ದವರ ಹೆಸರು ಬಾಯಿ ಬಿಟ್ಟಿದ್ದ. ಸದ್ಯ ಪವನ ಜೊತೆಯಲ್ಲಿ ಅಪಹರಣ ಮಾಡಿದ್ದ ನಾಲ್ಕು ಯುವಕರಿಗೆ ಬಂಧಿಸಿದ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

    ಅಳಿಯ ಪವನ ಸೇರಿ ನಾಲ್ವರನ್ನು ಬಂಧಿಸಿದ ವಿದ್ಯಾಗಿರಿ ಪೊಲೀಸರು, ಜೈಲಿಗೆ ಕಳಿಸಿದ್ದಾರೆ. ಅಳಿಯ ಮತ್ತು ಮಾವನ ನಡುವೆ ಹಣದ ವ್ಯವಹಾರ ಇತ್ತು ಎಂದು ತಿಳಿದು ಬಂದಿದ್ದು, ಇದೇ ವಿಚಾರಕ್ಕೆ ಅಳಿಯ ಅಪಹರಣ ಮಾಡಿದ್ದಾನೆ.

  • ಒಂದೇ ದಿನದ ಅಂತರದಲ್ಲಿ ಮಾವ, ಅಳಿಯ ಸಾವು

    ಒಂದೇ ದಿನದ ಅಂತರದಲ್ಲಿ ಮಾವ, ಅಳಿಯ ಸಾವು

    ಚಾಮರಾಜನಗರ: ಅನಾರೋಗ್ಯ ಸಮಸ್ಯೆಯಿಂದ ಮಾವ,ಅಳಿಯ ಇಬ್ಬರು ಸಾವನ್ನಪ್ಪಿದ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ. ಇದನ್ನೂ ಓದಿ:  ಹೊಸತನದೊಂದಿಗೆ ಬಿಗ್‍ಬಾಸ್ ಪುನಾರಂಭಕ್ಕೆ ಕಿಚ್ಚನೂ ರೆಡಿ

    ಸ್ವಾಮಿ, ಅಳಿಯ ರಾಜಶೇಖರ್ ಕಾಂತ್ ಮೃತರಾಗಿದ್ದಾರೆ. ಇವರು ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ನಿವಾಸಿಗಳಾಗಿದ್ದರು. ಈ ಮಾವ, ಅಳಿಯ ಒಂದು ದಿನದ ಅಂತರದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 50 ದಿನ ನಡೆಯಲಿದೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್

    ಸ್ವಾಮಿ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಇದೀಗ ಬೆಳಗ್ಗೆ ಮೃತ ಸ್ವಾಮಿಯ ತಂಗಿ ಮಗ ರಾಜಶೇಖರ್ ಕಾಂತ್ ಕೂಡ ಅನಾರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

    ಕುಟುಂಬದ ಮೂಲದ ಪ್ರಕಾರ ಇಬ್ಬರು ಕೂಡ ಪರಸ್ಪರ ಬಿಟ್ಟು ಇರುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಮಾವ ಸಾವನ್ನಪ್ಪಿದ ಬೆಳಗ್ಗೆ ಅಳಿಯನೂ ಕೂಡ ಸಾವನ್ನಪ್ಪಿದ್ದಾನೆ. ಇಡೀ ಕುಟುಂಬವೀಗ ಶೋಕ ಸಾಗರದಲ್ಲಿ ಮುಳುಗಿದೆ.

  • ಸೊಸೆಯನ್ನು ಕೊಂದು ಮಾವನೂ ಆತ್ಮಹತ್ಯೆಗೆ ಶರಣು

    ಸೊಸೆಯನ್ನು ಕೊಂದು ಮಾವನೂ ಆತ್ಮಹತ್ಯೆಗೆ ಶರಣು

    ಚಾಮರಾಜನಗರ: ಸೊಸೆಯನ್ನು ಕೊಲೆ ಮಾಡಿ ಮಾವನೂ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಆದರ್ಶ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಸುಮಿತ್ರಾ(32) ಕೊಲೆಯಾದ ದುರ್ದೈವಿ, ಚಿಕ್ಕಹುಚ್ಚಯ್ಯ(60) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಸೊಸೆಯನ್ನು ಕೊಲೆ ಮಾಡಿ ಮಾವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಸೊಸೆ ಹಾಗೂ ಮಾವನ ಸಾವು ಇದೀಗ ಸ್ಥಳೀಯರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ.

    ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

  • ಮಾವನ ಮೇಲಿನ ಮುನಿಸು- ಮೂರು ತಿಂಗಳ ಗರ್ಭಿಣಿ ಆತ್ಮಹತ್ಯೆ

    ಮಾವನ ಮೇಲಿನ ಮುನಿಸು- ಮೂರು ತಿಂಗಳ ಗರ್ಭಿಣಿ ಆತ್ಮಹತ್ಯೆ

    ಮೈಸೂರು: ಮಾವನ ಮೇಲೆ ಮುನಿಸಿನಿಂದ ಗಂಡನಿಗೆ ಪತ್ರ ಬರೆದು ಪೊಲೀಸಪ್ಪನ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ನಗರದ ಹೆಬ್ಬಾಳದ ಪೊಲೀಸರು ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

    ಚೈತ್ರಾ (25) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. 5 ತಿಂಗಳ ಹಿಂದೆ ಮೇಟಗಳ್ಳಿ ಪೊಲೀಸ್ ಠಾಣೆಯ ಪೇದೆ ಮೋಹನ್ ಆರಾಧ್ಯನನ್ನು ಚೈತ್ರಾ ಮದುವೆಯಾಗಿದ್ದರು. ಮದುವೆಯಾದ ದಿನದಿಂದ ಮಾವ ಸರಿಯಾಗಿ ಮಾತನಾಡಿಸಿಲ್ಲ. ನನ್ನ ಜೊತೆಗೆ ತಂದೆ ಹಾಗೂ ತಾಯಿಗೂ ಮಾವನವರಿಂದ ಗೌರವ ಸಿಕ್ಕಿಲ್ಲ. ತವರು ಮನೆಗೆ ಹೋಗುವಾಗ ವೇಳೆ ಕೂಡ ಅವಮಾನ ಮಾಡಿದ್ದಾರೆ. ನಿಮ್ಮ ಅಪ್ಪನೇ ನನಗೆ ಹೀಗೆ ಆಗಲು ಕಾರಣ. ನಿಮ್ಮ ಅಪ್ಪನ ಇಷ್ಟದಂತೆ ಮದುವೆ ಮಾಡಿಕೊಟ್ಟಿಲ್ಲ ಎಂದಿದ್ದರು.

    ನಮ್ಮ ಮನೆಯವರ ಶಕ್ತಿಯಾನುಸಾರ ಮದುವೆ ಮಾಡಿದ್ದಾರೆ. ನನ್ನ ಈ ಸ್ಥಿತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ತಂದೆಯೇ ಆವರೇ ಕಾರಣ ಎಂದು ಮಾವ ಮಲ್ಲಾರಾಧ್ಯ ಮೇಲೆ ಆರೋಪಿಸಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೊಸೆಯ ಮೇಲೆ ಅತ್ಯಾಚಾರ ಎಸಗಿ ವಿಕೃತಿ- ಕೇಳಲು ಬಂದ ಮಗನನ್ನೇ ಕೊಂದ

    ಸೊಸೆಯ ಮೇಲೆ ಅತ್ಯಾಚಾರ ಎಸಗಿ ವಿಕೃತಿ- ಕೇಳಲು ಬಂದ ಮಗನನ್ನೇ ಕೊಂದ

    – ಗುಂಡು ಹಾರಿಸಿ ಮಗನ ಕೊಂದ ತಂದೆ

    ಲಕ್ನೋ: ಹಿರಿಯ ವಯಸ್ಕನೊಬ್ಬ ತನ್ನ ಸೊಸೆಯ ಮೇಲೆಯೇ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದು, ಇದನ್ನು ಪ್ರಶ್ನಿಸಲು ಬಂದ ಮಗನನ್ನೇ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

    ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ಘಟನೆ ನಡೆದಿದ್ದು, ಲೈಸೆನ್ಸ್ ಹೊಂದಿದ್ದ ರಿವಾಲ್ವರ್ ನಿಂದ ಶೂಟ್ ಮಾಡಿ ಮಗನನ್ನು ಕೊಲೆ ಮಾಡಿದ್ದಾನೆ. ಆರೋಪಿ ಮಜೋಲಾದ ಹನುಮಾನ್ ನಗರದಲ್ಲಿ ನೆಲೆಸಿದ್ದು, ಅತ್ಯಾಚಾರ ಹಾಗೂ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಕೊಲೆಯಾದ ಸಂತ್ರಸ್ತ ವರ್ಷದ ಹಿಂದಷ್ಟೇ ವಿವಾಹವಾಗಿದ್ದ.

    ನವೆಂಬರ್ 25ರಂದು ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ಮಾವ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ಸಂದರ್ಭದಲ್ಲಿ ಪತಿ ಹಾಗೂ ಇತರ ಕುಟುಂಬಸ್ಥರು ಬೇರೊಂದು ನಗರಕ್ಕೆ ವಿವಾಹ ಸಮಾರಂಭಕ್ಕೆ ತೆರಳಿದ್ದರು ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.

    ವಿವಾಹ ಸಮಾರಂಭದಿಂದ ಪತಿ ಹಾಗೂ ಕುಟುಂಬಸ್ಥರು ವಾಪಸ್ ಮನೆಗೆ ಬಂದ ಬಳಿಕ ಮಹಿಳೆ ಪತಿ ಹಾಗೂ ಅತ್ತೆಗೆ ಈ ಕುರಿತು ವಿವರಿಸಿದ್ದಾಳೆ. ತಕ್ಷಣವೇ ಮಹಿಳೆಯ ಪತಿ ತನ್ನ ತಂದೆಯನ್ನು ಪ್ರಶ್ನಿಸಿದ್ದು, ವಾಗ್ವಾದ ನಡೆದಿದೆ. ಅಲ್ಲದೆ ಈ ಕುರಿತು ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ತಂದೆ ಮಗನ ಮಧ್ಯೆ ವಾಗ್ವಾದ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಆರೋಪಿಯ ಸಣ್ಣ ಮಗ ಸಹ ತಂದೆ ಪರ ವಾದಿಸಿದ್ದಾನೆ.

    ಈ ವೇಳೆ ಆರೋಪಿ ತಂದೆ ಗನ್ ತೆಗೆದುಕೊಂಡಿದ್ದು, ಸಂತ್ರಸ್ತೆಯ ಪತಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಈ ಕುರಿತು ಎಸ್‍ಪಿ ಅಮಿತ್ ಕುಮಾರ್ ಆನಂದ್ ಮಾಹಿತಿ ನೀಡಿದ್ದು, ಸಂಬಂಧಿಸಿದ ಐಪಿಸಿ ಸೆಕ್ಷನ್‍ಗಳಡಿ 56 ವರ್ಷದ ಆರೋಪಿ ಹಾಗೂ ಆತನ ಕಿರಿಯ ಮಗನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.

  • ಅಕ್ರಮ ಸಂಬಂಧ – ಟ್ರ್ಯಾಕ್ಟರ್ ಹತ್ತಿಸಿ ಮನೆ ಸೊಸೆ, ಆಕೆಯ ಗೆಳೆಯನನ್ನು ಕೊಂದ ತಂದೆ, ಮಗ

    ಅಕ್ರಮ ಸಂಬಂಧ – ಟ್ರ್ಯಾಕ್ಟರ್ ಹತ್ತಿಸಿ ಮನೆ ಸೊಸೆ, ಆಕೆಯ ಗೆಳೆಯನನ್ನು ಕೊಂದ ತಂದೆ, ಮಗ

    – ಓಡಿ ಹೋಗಿದ್ದವರನ್ನು ಕಾಣೆಯಾದ ಪ್ರಕರಣ ದಾಖಲಿಸಿ ಕರೆಸಿದರು
    – ಸ್ವಲ್ಪ ದಿನ ಕಳೆಯುತ್ತಿದ್ದಂತೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಕೊಲೆ

    ಮುಂಬೈ: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆ ಹಾಗೂ ಆಕೆಯ ಸ್ನೇಹಿತನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಮಾವ ಹಾಗೂ ಆತನ ಮಗನನ್ನು ಬಂಧಿಸಲಾಗಿದೆ. ಚಾಪಾಲ್ಗಾಂವ್ ನಿವಾಸಿಗಳಾದ ಬಾತ್ವೆಲ್ ಸಂಪತ್ ಲಾಲ್ಜಾರೆ ಹಾಗೂ ಅವರ ಮಗ ವಿಖಾಸ್ ಲಾಲ್ಜಾರೆಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಂಬಾಡ್ ಠಾಣೆಯ ಇನ್‍ಸ್ಪೆಕ್ಟರ್ ಅನಿರುದ್ಧ ನಾಂದೇಡ್ಕರ್ ತಿಳಿಸಿದ್ದಾರೆ.

    ಬಾತ್ವೆಲ್ ಲಾಲ್ಜಾರೆ ಕೊಲೆಯಾದ ಮಹಿಳೆ ಮಾರಿಯಾಳ ಮಾವನಾಗಿದ್ದು, ವಿಖಾಸ್ ಲಲ್ಜಾರೆ ಮಹಿಳೆಯ ಅಳಿಯ. 32 ವರ್ಷದ ಮಾರಿಯಾ ಲಲ್ಜಾರೆ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ತಮ್ಮ ಮಾವ ಹಾಗೂ ಅಳಿಯಂದಿರೊಂದಿಗೆ ಮಹಿಳೆ ವಾಸವಿದ್ದಳು. ಅಲ್ಲದೆ ಅದೇ ಗ್ರಾಮದ ವಿವಾಹಿತ ವ್ಯಕ್ತಿ ಅರ್ಬಕ್ ಭಾಗ್ವತ್(27) ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.

    ಇದಕ್ಕೆ ಮಹಿಳೆಯ ಮಾವ ಹಾಗೂ ಅಳಿಯಂದಿರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಹಲವು ಬಾರಿ ಭಾಗ್ವತ್‍ಗೆ ಬೆದರಿಕೆ ಸಹ ಹಾಕಿದ್ದರು. ತಂದೆ, ಮಗ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಭಾಗ್ವತ್ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಹಾಗೂ ಎಸ್‍ಪಿಗೆ ದೂರು ದಾಖಲಿಸಿದ್ದರು.

    ಇದಾದ ಬಳಿಕ ಮಾರ್ಚ್ 30 ರಂದು ಭಾಗ್ವತ್ ಹಾಗೂ ಮಾರಿಯಾ ಇಬ್ಬರೂ ಓಡಿ ಹೋಗಿ ಗುಜರಾತ್‍ನಲ್ಲಿ ತಂಗಿದ್ದರು. ಬಳಿಕ ಮಾರಿಯಾ ಮನೆ ಕಡೆಯವರು ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಏಪ್ರಿಲ್ 22ರಂದು ಪೊಲೀಸರು ಇಬ್ಬರನ್ನೂ ಗುಜರಾತ್‍ನಿಂದ ಮರಳಿ ಕರೆ ತಂದಿದ್ದರು. ಇದಾದ ಬಳಿಕ ಇಬ್ಬರೂ ಒಟ್ಟಿಗೆ ಅದೇ ಊರಿನಲ್ಲಿ ವಾಸಿಸುತ್ತಿದ್ದರು.

    ಅಕ್ಟೋಬರ್ 28 ರಂದು ಈ ಜೋಡಿ ಕಾರ್ಯಕ್ರಮಕ್ಕೆಂದು ಹತ್ತಿರದ ಹಳ್ಳಿಗೆ ಬೈಕ್ ಮೇಲೆ ತೆರಳಿತ್ತು. ಇದನ್ನು ಗಮನಿಸಿ ಆರೋಪಿ ವಿಕಾಸ್ ಲಾಲ್ಜಾರೆ ಜೋಡಿ ಇದ್ದ ಬೈಕ್‍ಗೆ ಟ್ರ್ಯಾಕ್ಟರ್ ಗುದ್ದಿಸಿದ್ದು, ಅವರು ಕೆಳಗೆ ಬೀಳುತ್ತಿದ್ದಂತೆ ಇಬ್ಬರ ಮೇಲೂ ಟ್ರ್ಯಾಕ್ಟರ್ ಹಾಯಿಸಿದ್ದಾನೆ. ಈ ವೇಳೆ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ತೀವ್ರ ಗಾಯಗಳಾಗಿದ್ದರಿಂದ ಇಬ್ಬರೂ ಸಾವನ್ನಪ್ಪಿದ್ದಾರೆ.

    ಭಾಗ್ವತ್ ಪತ್ನಿ ಈ ಕುರಿತು ಮಾತನಾಡಿ, ವಿಕಾಸ್ ಲಾಲ್ಜಾರೆ ಹಾಗೂ ಆತನ ತಂದೆ ಇಬ್ಬರೂ ಸೇರಿ ನನ್ನ ಪತಿ ಹಾಗೂ ಮಾರಿಯಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಕಾಸ್ ಹಾಗೂ ಆತನ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಇನ್ಸ್‍ಪೆಕ್ಟರ್ ನಾಂದೇಡ್ಕರ್ ತಿಳಿಸಿದ್ದಾರೆ.