ವ್ಯಕ್ತಿಯೊಬ್ಬ ಮೃತಪಟ್ಟ ತನ್ನ ಮಗನ ಪತ್ನಿಯನ್ನೇ ಮದುವೆ (Son Wife Marriage) ಯಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಇತ್ತ ಮುದುಕನನ್ನು ಮದುವೆಯಾಗಲು ಒಪ್ಪಿದ್ದೀಯಾ ಎಂದು ಮಹಿಳೆಯನ್ನು ಕೇಳಿದಾಗ, ಆಕೆ ಸ್ವ- ಇಚ್ಛೆಯಿಂದಲೇ ಈ ಮದುವೆಗೆ ಒಪ್ಪಿರುವುದಾಗಿ ತಿಳಿಸಿದ್ದಾಳೆ.
ಅಲ್ಲದೆ ಯಾಕೆ ಮಾವನನ್ನು ವರಿಸಿದ್ದೀಯಾ ಎಂದು ಪ್ರಶ್ನಿಸಿದಾಗ, ಅವನನ್ನು ಹೊರತುಪಡಿಸಿ ಬೇರೆ ಯಾರೂ ನನ್ನನ್ನು ನೋಡಿಕೊಳ್ಳುವುದಿಲ್ಲ ಎಂಬ ಯೋಚನೆ ಬಂತು. ಹೀಗಾಗಿ ಆತನನ್ನು ಮದುವೆಯಾಗಲು ಒಪ್ಪಿದೆ ಎಂದು ಹೇಳಿದ್ದಾಳೆ. ಆದರೆ ಈ ಮದುವೆ ಎಲ್ಲಿ ನಡೆದಿದ್ದು ಹಾಗೂ ಇದು ಸತ್ಯನಾ ಅಥವಾ ಸುಳ್ಳಾ ಎಂಬುದು ತಿಳಿದುಬಂದಿಲ್ಲ.
ಕೋವಿಡ್ ಎರಡನೇ ಅಲೆ ವೇಳೆ ಸ್ವಗ್ರಾಮ ಸೇರಿದ್ದ ರಂಗನಾಥ್, ಕುಡಿತದ ದಾಸನಾಗಿದ್ದನು. ಆಗ ದುಡಿಯಲಾರದ ಗಂಡನೊಂದಿಗೆ ಅಮೃತಾ ಹಿರಿಯೂರು ತಾಲೂಕಿನ ಹರ್ತಿಕೋಟೆಯಲ್ಲಿ ವಾಸವಾಗಿದ್ದಳು. ಇತ್ತ ಪ್ರತಿನಿತ್ಯ ಕುಡಿದು ಮನೆಗೆ ಧಾವಿಸುತಿದ್ದ ರಂಗನಾಥ್, ಪತ್ನಿ ಜೊತೆ ಜಗಳವಾಡ್ತಿದ್ದನು. ಇದರಿಂದ ಬೇಸತ್ತ ಪತ್ನಿ, ಪತಿಯಿಂದ ದೂರವಿದ್ದು, ತವರು ಮನೆಯಲ್ಲೇ ಬೀಡುಬಿಟ್ಟಿದ್ದಳು.
ಇತ್ತ ತವರು ಸೇರಿದ್ದ ಪತ್ನಿ ಅಮೃತಾಳನ್ನು ಕರೆತರಲು ಫುಲ್ ಟೈಟ್ ಆಗಿ ರಂಗನಾಥ್ ಬುಧವಾರ ಆಗಮಿಸಿ, ಮನೆ ಮುಂದೆ ಗಲಾಟೆ ಮಾಡಿದ್ದಾನೆ. ತಂದೆ ಉಮೇಶ್ ಜೊತೆ ಗಲಾಟೆ ಮಾಡುತ್ತಿದ್ದ ಪತಿಯ ವರ್ತನೆ ಕಂಡು ಅಮೃತಾ, ನೀನು ಕುಡಿಯುವುದು ಬಿಡುವ ತನಕ ಮನೆಗೆ ಬರಲ್ಲ ಅಂತಾ ಅವಾಜ್ ಹಾಕಿದ್ದಾಳೆ. ಅಲ್ಲದೆ ಅಲ್ಲೇ ಇದ್ದ ನಾಯಿ ಕಟ್ಟಿಹಾಕುವ ಸರಪಳಿಯನ್ನು ತಂದು ಪತಿಯನ್ನು ಬಂಧಿಸಿ, ಕಂಬಕ್ಕೆ ಕಟ್ಟಿದ್ದಾಳೆ.
ಗಂಡನನ್ನು ಪತ್ನಿಯೇ ಸರಪಳಿಯಿಂದ ಬಂಧಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಣಗಳಲ್ಲಿ ಮಹಿಳೆಯ ಧೈರ್ಯಕ್ಕೆ ಮಹಿಳೆಯರು ಪ್ರಜ್ಞಾವಂತರು ಶಹಬ್ಬಾಸ್ ಎಂದಿದ್ದಾರೆ. ಈ ಘಟನೆ ಅಬ್ಬಿನಹೊಳೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮನೆಯಲ್ಲಿ ನಾಯಿ (Dog) ಸಾಕುವ ವಿಚಾರಕ್ಕೆ ನಡೆದಿದ್ದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ದಿವ್ಯಾ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡವರು. ನಾಯಿ ವಿಚಾರಕ್ಕೆ ಅತ್ತೆ-ಮಾವನ ಜೊತೆ ದಿವ್ಯಾಳಿಗೆ ಜಗಳವಾಗಿದೆ. ಈ ಜಗಳವು ದಿವ್ಯಾ ನೇಣಿಗೆ ಕೊರಳೊಡ್ಡುವ ಮೂಲಕ ಅಂತ್ಯವಾಗಿದೆ. ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಿವ್ಯಾ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಇತ್ತ ಉಸಿರಾಟ (Breathing) ಸಂಬಂಧದ ಕಾಯಿಲೆಯಿಂದ ದಿವ್ಯಾ ಬಳಲುತ್ತಿದ್ದರು. ಈ ಮಧ್ಯೆ ವೈದ್ಯ (Doctor) ರು ಮನೆಯಲ್ಲಿ ನಾಯಿ ಇದ್ದರೆ ಕಾಯಿಲೆ ವಾಸಿಯಾಗಲ್ಲ ಎಂದಿದ್ದರು. ಹೀಗಾಗಿ ನಾಯಿಯನ್ನ ಯಾರಿಗಾದರೂ ನೀಡಿ ಎಂದು ಅತ್ತೆ-ಮಾವನಿಗೆ ದಿವ್ಯಾ ಹೇಳಿದ್ದರು. ಇದನ್ನೂ ಓದಿ: ದಯವಿಟ್ಟು ನನ್ನನ್ನು ಬದುಕಲು ಬಿಡಿ: ವಿಚಾರಣೆ ವೇಳೆ ಕಣ್ಣೀರು ಹಾಕಿದ ಪಾರ್ಥ ಚಟರ್ಜಿ
ಆದರೆ ನಾಯಿಯನ್ನ ಮನೆಯಿಂದ ಕಳಿಸಲು ಅತ್ತೆ-ಮಾವ ಒಪ್ಪಲಿಲ್ಲ. ಇದೇ ವಿಚಾರಕ್ಕೆ ದಿವ್ಯಾ ಹಾಗೂ ಅತ್ತೆ-ಮಾವನ ನಡುವೆ ಗಲಾಟೆ ನಡೆದಿದೆ. ಇದರಿಂದ ಮನನೊಂದ ದಿವ್ಯಾ ತನ್ನ ಮಗಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ಗೋವಿಂದಪುರ ಠಾಣೆ (Govindpura Police Station)ಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಮೈಸೂರು: ಮಾವನೇ ಸೊಸೆ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಘಟನೆ ಹುಣಸೂರಿನ ಗೋಕುಲ ರಸ್ತೆ ಎನ್.ಎಸ್ ಕ್ವಾಟ್ರರ್ಸ್‍ನಲ್ಲಿ ನಡೆದಿದೆ. ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ಮಾವ ಹಾಗೂ ಅದನ್ನು ತಡೆಯಲು ಪ್ರಯತ್ನಿಸದ ಪತಿಯ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.
ಹುಣಸೂರಿನ ಕಟ್ ನೋಟ್‍ವ್ಯಾಪಾರಿ ಇಕ್ಬಾಲ್ ಅಹ್ಮದ್, ತಾಲೂಕಿನ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ರಾಸಾಯನ ಶಾಸ್ತ್ರ ಅತಿಥಿ ಉಪನ್ಯಾಸಕ ಹಾಗೂ ಜಮಾತೆ ಇಸ್ಲಾಂ ಹಿಂದ್ ಸಂಘಟನೆಯ ಸಕ್ರಿಯ ಸದಸ್ಯನಾಗಿರುವ ರಶೀದ್ ಅಹ್ಮದ್ ಸೇರಿದಂತೆ 8 ಮಂದಿಯ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾಳೆ.
ಮಾವ ಇಕ್ಬಾಲ್ ಅಹ್ಮದ್ 2 ಬಾರಿ ಅತ್ಯಾಚಾರಕ್ಕೆ ಪ್ರಯತ್ನಪಟ್ಟಿದ್ದಾನೆ. ಇದಕ್ಕೆ ಅತ್ತೆ ಪರ್ವಿನ್ ತಾಜ್, ನಾದಿನಿ ರಜಿಯಾ ಮತ್ತೊಬ್ಬ ನಾದಿನಿ ಹಸೀನಾ ಆಕೆಯ ಗಂಡ ಕುಶಾಲನಗರ ದನಿನಾ ಪೇಟೆ ಮುಸ್ಲಿಂ ಜಮಾತ್ ಮಸೀದಿ ಸೆಕ್ರೆಟರಿ ಇರ್ಫಾನ್, ಗಂಡನ ಅಣ್ಣಾ ಮೆಕ್ಯಾನಿಕ್ ಮುಕ್ತರ್, ವಾರಗಿತ್ತಿ ಹೂರ್ ಬಾನು ಕುಮ್ಮಕ್ಕು ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಮನೆಯವರ ಕುಮ್ಮಕ್ಕುನಿಂದ ಮಾವ ಇಕ್ಬಾಲ್ ಅಹ್ಮದ್ ಪದೇ ಪದೇ ಅತ್ಯಚಾರಕ್ಕೆ ಪ್ರಯತ್ನಿಸಿದ್ದಾನೆ. ಇದನ್ನು ಪತಿ ರಶೀದ್ ಅಹ್ಮದ್ ಮುಂದೆ ಹೇಳಿಕೊಂಡರು ಸ್ಪಂದಿಸಿಲ್ಲ. ಪತಿ ಮನೆಯವರ ನೀಚ ವರ್ತನೆ ಕಂಡು ಸಂತ್ರಸ್ತ ಮಹಿಳೆ ತವರು ಮನೆಗೆ ವಿಷಯ ತಿಳಿಸಿದ್ದಾಳೆ. ಇದಾದ ಬಳಿಕ ಟ್ಯಾಲೆಂಟ್ ಸಂಸ್ಥೆ ಮಾಲೀಕರಳ್ಳಿ ಒಬ್ಬರಾದ ನವೀನ್ ರೈ ನೇತೃತ್ವದಲ್ಲಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಇದನ್ನೂ ಓದಿ:ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೆ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ: ಸಿದ್ದು ಕಿಡಿ
ಇದಕ್ಕೂ ಯಾವುದೇ ಕಿಮ್ಮತ್ತು ಕೊಡದೇ ಮತ್ತೊಮ್ಮೆ ಅತ್ಯಾಚಾರಕ್ಕೆ ಪ್ರಚೊದನೆ ನೀಡುವ ವರ್ತನೆ ಕುಟುಂಬಸ್ಥರು ನೀಡಿದ್ದಾರೆ. ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಸದ್ಯ ಹುಣಸೂರು ಪಟ್ಟಣ ಠಾಣೆಯಲ್ಲಿ 498ಂ, 354, 504, 506, 323, 149 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್ ದಾಖಲಾಗುತ್ತಿದ್ದಂತೆ ಪ್ರಭಾವ ಬಳಸಿ ಇಡೀ ಕುಟುಂಬ ತಲೆಮರೆಸಿಕೊಂಡಿದ್ದು, ಹುರ್ ಬಾನು ಪ್ರಕರಣ ದಾಖಲಾಗುವ ಮುನ್ಸೂಚನೆ ಅರಿತು ದುಬೈಗೆ ಪರಾರಿಯಾಗಿದ್ದಾಳೆ. ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ನಡುರಸ್ತೆಯಲ್ಲಿ ಮಹಿಳೆಯೊಬ್ಬಳು ತನ್ನ ಮಾವನಿಗೆ ನಿಷ್ಕರುಣೆಯಿಂದ ಚಪ್ಪಲಿಯಿಂದ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮಹಿಳೆ ತನ್ನ ತಂದೆ ಹಾಗೂ ಸಹೋದರನೊಂದಿಗೆ ಮಾವನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಚಪ್ಪಲಿಯಲ್ಲಿ ಥಳಿಸಿದ್ದಲ್ಲದೇ ಕಿಂಚಿತ್ತು ಕರುಣೆ ತೋರದೇ ಮೂವರು ಸೇರಿಕೊಂಡು ವೃದ್ಧನನ್ನು ರಸ್ತೆಯಲ್ಲಿ ಧರಧರನೇ ಎಳೆದೊಯ್ದಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಈಶ್ವರ ಖಂಡ್ರೆ ವಾಗ್ದಾಳಿ
ಈ ಸಂಪೂರ್ಣ ಘಟನೆಯು ಹೆದ್ದಾರಿಯ ನಡುವಿನ ಛೇದಕದಲ್ಲಿ ಪೊಲೀಸ್ ಚೌಕಿಯ ಸಮೀಪ ಸಂಭವಿಸಿದೆ. ವೀಡಿಯೋದಲ್ಲಿ ಸಹೋದರ ನನ್ನ ಸಹೋದರಿಯ ತಪ್ಪು ಏನಿದೆ. ಅವಳನ್ನೆ ಏಕೆ ಹೊಡೆದೆ ಎಂದು ಪದೇ, ಪದೇ ಕೇಳುತ್ತಾ ಹೊಡೆದಿದ್ದಾನೆ. ಈ ವೇಳೆ ಅಸಹಾಯಕನಾದ ವೃದ್ಧ, ತನಗೆ ಬಿಡುವಂತೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದರು. ಮೂವರು ಸೇರಿಕೊಂಡು ವೃದ್ಧನಿಗೆ ಹೊಡೆದು ಮತ್ತು ಕಾಲಿನಿಂದ ಒದ್ದಿದ್ದಾರೆ.
ಘಟನೆ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಗಾಯಾಳು ಸುಖದೇವ್ ಸಿಂಗ್ ಯಾದವ್ ಅವರ ಪುತ್ರ ಬಬ್ಲು ಯಾದವ್ ಅವರು, ತಮ್ಮ ಕಿರಿಯ ಸಹೋದರ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದು, ಅವರ ಪತ್ನಿ ಪುಷ್ಪಾ, ಸಹೋದರ ಕಮಲೇಶ್ ಮತ್ತು ಅವರ ತಂದೆ ರಾಮ್ ವಿಲಾಸ್ ನಮ್ಮ ತಂದೆಗೆ ಸಂಪೂರ್ಣ ಆಸ್ತಿಯನ್ನು ಪುಷ್ಪಾ ಅವರ ಹೆಸರಿಗೆ ಮಾಡುವಂತೆ ಒತ್ತಾಯಿಸಿದ್ದರು. ನಂತರ ಆಸ್ತಿಯನ್ನು ಹಂಚುವಂತೆ ಒತ್ತಡ ಹೇರಿದ್ದಕ್ಕೆ ನಾನು ಆಸ್ತಿಯನ್ನು ಹಂಚಲು ಸಿದ್ಧನಿಲ್ಲ ಎಂದು ತಿಳಿಸಿದ್ದರು. ಅಲ್ಲದೇ ಆಕೆಗೆ ಇರಲು ಒಂದು ಕೋಣೆಯನ್ನು ಸಹ ನೀಡಲಾಗಿತ್ತು. ಆದರೆ ಅಷ್ಟಕ್ಕೆ ತೃಪ್ತಿ ಕಾಣದೇ, ಮಹಿಳೆ ತನ್ನ ತಂದೆ ಮತ್ತು ಕುಟುಂಬಸ್ಥರನ್ನು ಕರೆಸಿ ನಮ್ಮ ತಂದೆಗೆ ಹೊಡೆಸಿದ್ದಾಳೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಭೋಪಾಲ್: 3,419 ಕೋಟಿ ರೂಪಾಯಿಯಷ್ಟು ವಿದ್ಯುತ್ ಬಿಲ್ ಬಂದಿರುವುದನ್ನು ಕಂಡು ಮಹಿಳೆ ಶಾಕ್ ಆದರೆ, ಆಕೆಯ ಮಾವ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾಮಾನ್ಯವಾಗಿ ಗ್ರಾಹಕರಿಗೆ ವಿದ್ಯುತ್ ಇಲಾಖೆ ಆಗಾಗ್ಗೆ ಕರೆಂಟ್ ಬಿಲ್ ಮೂಲಕ ಶಾಕ್ ನೀಡುತ್ತಿರುತ್ತದೆ. ಮನೆಯಲ್ಲಿ ವಿದ್ಯುತ್ ಬಳಸದೇ ಇದ್ದರೂ ಲಕ್ಷಾಂತರ ರೂಪಾಯಿ ಕಟ್ಟಬೇಕೆಂಬ ಬಿಲ್ ಕಳುಹಿಸುವ ಘಟನೆಗಳು ಆಗಾಗ ನಡೆಯುತ್ತಲೆ ಇರುತ್ತದೆ. ಇದೀಗ ಮಧ್ಯಪ್ರದೇಶದ ಗ್ವಾಲಿಯರ್ ನಗರದ ಶಿವ್ ವಿಹಾರ್ ನಿವಾಸಿಯಾಗಿರುವ ಗುಪ್ತಾ ಅವರಿಗೆ 3,419 ಕೋಟಿ ರೂಪಾಯಿಯಷ್ಟು ವಿದ್ಯುತ್ ಬಿಲ್ ಕಳುಹಿಸಲಾಗಿದೆ. ಇದರಿಂದ ಆತಂಕಗೊಂಡ ಗುಪ್ತಾ ಅವರ ಕುಟುಂಬದ ಮಹಿಳೆಗೆ ಆಕೆಯ ನೆರೆಹೊರೆಯವರು ಸಮಾಧಾನ ಹೇಳಿದ್ದಾರೆ.
ಈ ವಿಚಾರವಾಗಿ ಜನರಿಂದ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆಯೇ ಸ್ಪಷ್ಟೀಕರಣ ನೀಡಿರುವ ಮಧ್ಯಪ್ರದೇಶ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪೆನಿ (MPMKVVC), ಇದೊಂದು ‘ಮಾನವ ದೋಷ’ದಿಂದ ಉಂಟಾದ ಸಮಸ್ಯೆ ಎಂದು ತಿಳಿಸಿದ್ದು, ಕೂಡಲೇ ವಿದ್ಯುತ್ ಬಿಲ್ ಮೊತ್ತವನ್ನು ಸರಿಪಡಿಸಿದೆ. ಅಲ್ಲದೇ ಈಗ ಗುಪ್ತಾ ಕುಟುಂಬ ಕಟ್ಟಬೇಕಿರುವುದು 1,300 ರೂಪಾಯಿಗಳನ್ನು ಮಾತ್ರ ಎಂದು ಹೇಳಿದೆ. ಇದನ್ನೂ ಓದಿ: ಊರಿನ ಯಾರ ಮನೆಯಲ್ಲಿ ಸಮಸ್ಯೆ ಇದ್ರೂ ಸ್ಪಂದಿಸ್ತಿದ್ದ: ಪ್ರವೀಣ್ ಮಾವ ಕಣ್ಣೀರು
ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಗುಪ್ತಾ ಅವರ ಪತಿ ಸಂಜೀವ್ ಕಂಕಣೆ ಅವರು, ಜುಲೈನಲ್ಲಿ ಮನೆಯಲ್ಲಿ ಬಳಸಿದ್ದ ವಿದ್ಯುತ್‍ಗೆ ಬಂದಿರುವ ಬೃಹತ್ ಮೊತ್ತದ ಬಿಲ್ ಕಂಡು ನನ್ನ ತಂದೆ ಆಘಾತಕ್ಕೊಳಗಗಿದ್ದಾರೆ. ಅಲ್ಲದೇ ನನ್ನ ಪತ್ನಿ ಕೂಡ ಆಘಾತಕ್ಕೊಳಗಾಗಿದ್ದಾರೆ. ಜುಲೈ 20 ರಂದು ಬಿಡುಗಡೆಯಾದ ಬಿಲ್ ಅನ್ನು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ವಿತರಣ ಕಂಪನಿಯ (ಎಂಪಿಎಂಕೆವಿವಿಸಿ) ಪೋರ್ಟಲ್ ಮೂಲಕ ಪರಿಶೀಲನೆಗೆ ಒಳಪಡಿಸಲಾಗಿತ್ತು. ಆದರೆ ಅದು ಸರಿಯಾಗಿದೆ ಎಂದು ತೋರಿಸಿತು. ನಂತರ ರಾಜ್ಯ ವಿದ್ಯುತ್ ಕಂಪೆನಿ ಬಿಲ್ ಅನ್ನು ಸರಿಪಡಿಸಿದೆ ಎಂದು ತಿಳಿಸಿದ್ದಾರೆ.
ನಮ್ಮ ಉದ್ಯೋಗಿಯು ಬಳಕೆಯಾದ ಯುನಿಟ್ ಜಾಗದಲ್ಲಿ ಗ್ರಾಹಕ ಸಂಖ್ಯೆಯನ್ನು ಸಾಫ್ಟ್‍ವೇರ್‌ನಲ್ಲಿ ನಮೂದಿಸಿದ್ದಾರೆ. ಇದರಿಂದಾಗಿ ದೊಡ್ಡ ಮೊತ್ತದ ಬಿಲ್ ಸೃಷ್ಟಿಯಾಗಿದೆ. ಸರಿಯಾದ ಬಿಲ್ ಮೊತ್ತ 1,300 ರೂ ಅನ್ನು ವಿದ್ಯುತ್ ಗ್ರಾಹಕರಿಗೆ ಈಗ ನೀಡಲಾಗಿದೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಾನ್ಪುರ: ಸೊಸೆ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ ಪೊಲೀಸರ ಮೇಲೆಯೇ 45 ಸುತ್ತು ಗುಂಡು ಹಾರಿಸುವ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದಲ್ಲಿ ತನ್ನ ಸೊಸೆಯೊಂದಿಗೆ ಕೋಪಗೊಂಡ ಮಾವ 3 ಗಂಟೆಗಳ ಕಾಲ ಗದ್ದಲವನ್ನು ಸೃಷ್ಟಿಸಿದನು. ಅದು ಕೂಡ ಕೇವಲ 300 ರೂ. ಗೆ ಪತ್ನಿ, ಮಗ ಮತ್ತು ಸೊಸೆಯನ್ನು ರೂಮ್‍ಗೆ ಹಾಕಿ ಬೆಂಕಿ ಹಚ್ಚುವುದಾಗಿ ಬೆದರಿಸಿದ್ದಾನೆ. ಇದರಿಂದ ಗಾಬರಿಗೊಂಡ ಸೊಸೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೊಂದು ಕೌಟುಂಬಿಕ ಕಲಹವೆಂದು ಪರಿಗಣಿಸಿ, ಒಬ್ಬ ಇನ್ಸ್‌ಪೆಕ್ಟರ್ ಮತ್ತು ಕೆಲವು ಕಾನ್‍ಸ್ಟೆಬಲ್‍ಗಳು ಜೀಪಿನಲ್ಲಿ ಸ್ಥಳಕ್ಕೆ ತಲುಪಿದರು.
ಪೊಲೀಸರನ್ನು ನೋಡಿದ ಆತ ಹೆದರಿ ಛಾವಣಿಯ ಮೇಲೆ ಹತ್ತಿದ್ದು, ಅಲ್ಲಿಂದ ಅವನು ತನ್ನ ಪರವಾನಗಿ ಪಡೆದ ಡಬಲ್ ಬ್ಯಾರೆಲ್ ಗನ್‍ನಿಂದ ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದನು. ಸುಮಾರು ಮೂರು ಗಂಟೆಗಳ ಕಾಲ ಸುಮಾರು 45 ಸುತ್ತು ಗುಂಡು ಹಾರಿಸಿದರು. ಇದರಿಂದ ಇನ್ಸ್‍ಪೆಕ್ಟರ್ ಮತ್ತು ಇಬ್ಬರು ಕಾನ್‍ಸ್ಟೆಬಲ್‍ಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ನಾಳೆ ಫಸ್ಟ್ ಡೇ ಕೆಲಸಕ್ಕೆ ಹೋಗಬೇಕಿದ್ದವ ಮಸಣಕ್ಕೆ – ಅಪಘಾತದಲ್ಲಿ ತಂದೆ, ಮಗ ಸ್ಥಳದಲ್ಲೇ ಮೃತ
3 ಗಂಟೆಗಳ ನಂತರ, ಪೂರ್ವ ಡಿಸಿಪಿ ಪ್ರಮೋದ್ ಕುಮಾರ್, ಎಸಿಪಿ ಕ್ಯಾಂಟ್ ಮೃಗಾಂಕ್ ಶೇಖರ್ ಪಾಠಕ್, ಎಡಿಸಿಪಿ ರಾಹುಲ್ ಮಿಠಾಯಿ ಮತ್ತು ಆರು ಪೊಲೀಸ್ ಠಾಣೆಗಳ ಪಡೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.
ನಡೆದಿದ್ದೇನು?
ಶ್ಯಾಮನಗರದ ಸಿ-ಬ್ಲಾಕ್‍ನ ನಿವಾಸಿ ಆರ್‌ಕೆ ದುಬೆ(60) ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿ ಕಿರಣ್ ದುಬೆ, ಹಿರಿಯ ಮಗ ಸಿದ್ಧಾರ್ಥ್, ಸೊಸೆ ಭಾವನಾ ಮತ್ತು ದಿವ್ಯಾಂಗ್ ಮಗಳು ಚಾಂದಿನಿ ಅವರೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಕಿರಿಯ ಮಗ ರಾಹುಲ್ ಮತ್ತು ಸೊಸೆ ಜಯಶ್ರೀ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದುಬೆ ಅವರು ವಿದ್ಯುತ್ ಬಿಲ್ಲು 300 ರೂ. ನೀಡುವ ವಿಚಾರವಾಗಿ ಸೊಸೆಯೊಂದಿಗೆ ಜಗಳ ಪ್ರಾರಂಭವಾಗಿದೆ. ಇದರಿಂದ ಅತಿರೇಕವಾದ ದುಬೆ ಕೋಪ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕುತ್ತೇನೆ ಎಂದು ಕಿರುಚಾಡಿದ್ದಾನೆ. ಈ ವೇಳೆ ರಕ್ಷಣೆಗೆ ಬಂದ ಪತ್ನಿ ಮತ್ತು ಮಗನನ್ನು ಸೊಸೆಯೊಂದಿಗೆ ಕೊಠಡಿಗೆ ತೆಳ್ಳಿ ಬೀಗ ಹಾಕಿದ್ದಾನೆ.
ಸೊಸೆ ಪೊಲೀಸರಿಗೆ ಕರೆ
ಕೊಠಡಿಯಲ್ಲಿ ಬೀಗ ಹಾಕಿಕೊಂಡಿದ್ದ ಸೊಸೆ ಭಾವನಾ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾವನಿಂದ ಕುಟುಂಬವನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಾರೆ. ಚಕೇರಿ ಪೊಲೀಸರು ಮನೆಗೆ ತಲುಪಿದಾಗ, 3 ಗಂಟೆಗಳ ಕಾಲ ಗದ್ದಲವನ್ನು ಸೃಷ್ಟಿಸಿದನು.
ಚಕೇರಿ ಪೊಲೀಸರು ಗುಂಡಿನ ದಾಳಿಯ ಬಗ್ಗೆ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಡಿಸಿಪಿ ಪೂರ್ವ ಡಿಸಿಪಿ ಪ್ರಮೋದ್ ಕುಮಾರ್, ಎಸಿಪಿ ಮೃಗಾಂಕ್ ಶೇಖರ್ ಪಾಠಕ್ ಮತ್ತು ಎಡಿಸಿಪಿ ರಾಹುಲ್ ಅವರು ಪಡೆಯೊಂದಿಗೆ ಸ್ಥಳಕ್ಕೆ ತಲುಪಿದರು. ಇದಾದ ನಂತರವೂ ದುಬೆ ಸುಮ್ಮನಾಗಿಲ್ಲ, ಬದಲಿಗೆ ಪ್ರತಿಯೊಬ್ಬರ ಮೇಲೆಯೂ ಗುಂಡು ಹಾರಿಸುತ್ತಲೇ ಇದ್ದ.
ಇನ್ಸ್‌ಪೆಕ್ಟರ್ ಅಮಾನತು ಮಾಡಿಸಿದ
ದುಬೆ ಸುಮಾರು 3 ಗಂಟೆಗಳಲ್ಲಿ ಪೊಲೀಸರ ಮೇಲೆ 40 ರಿಂದ 45 ಸುತ್ತು ಗುಂಡು ಹಾರಿಸಿದ್ದಾನೆ. ಡಿಸಿಪಿ ಪೂರ್ವ ಡಿಸಿಪಿ ಧ್ವನಿವರ್ಧಕದ ಸಹಾಯದಿಂದ ದುಬೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ದುಬೆ ಡಿಸಿಪಿಗೆ, ಪೊಲೀಸ್ ಇನ್ಸ್‍ಪೆಕ್ಟರ್‌ನನ್ನ ಮನೆಗೆ ಹೇಗೆ ಬಂದರು. ಅವರನ್ನು ಅಮಾನತು ಮಾಡುವವರೆಗೆ ಗುಂಡಿನ ದಾಳಿ ಮುಂದುವರಿಯಲಿದೆ ಎಂದಿದ್ದಾನೆ. ಅದಕ್ಕೆ ದುಬೆಗೆ ಟೈಪ್ ಮಾಡಿದ ಅಮಾನತು ಪತ್ರವನ್ನು ವಾಟ್ಸಾಪ್ ಸಂಖ್ಯೆಗೆ ಡಿಸಿಪಿ ಕಳುಹಿಸಿದ್ದಾರೆ. ಅದರ ನಂತರವೇ ಅವರು ಗುಂಡು ಹಾರಿಸುವುದನ್ನು ನಿಲ್ಲಿಸಿದರು. ಇದಾದ ಬಳಿಕ ಪೊಲೀಸ್ ತಂಡ ಆತನನ್ನು ಬಂಧಿಸಿದೆ.
ಡಬಲ್ ಬ್ಯಾರೆಲ್ ಗನ್, 45 ಖಾಲಿ ಚಿಪ್ಪುಗಳು, 60 ಕಾಟ್ರಿಡ್ಜ್‌ಗಳು ಪತ್ತೆ
ದುಬೆಯನ್ನು ಕಸ್ಟಡಿಗೆ ತೆಗೆದುಕೊಂಡ ನಂತರ, ಪೊಲೀಸರು ಆತನ ಡಬಲ್ ಬ್ಯಾರೆಲ್ ಗನ್ ವಶಪಡಿಸಿಕೊಂಡರು. ಮನೆಯನ್ನು ಪರಿಶೀಲಿದ ವೇಳೆ, ಛಾವಣಿ ಮೇಲೆ ಸುಮಾರು 45 ಖಾಲಿ ಚಿಪ್ಪುಗಳು ಮತ್ತು 60ಕ್ಕೂ ಹೆಚ್ಚು ಕಾಟ್ರಿಡ್ಜ್‌ಗಳು ಕಂಡುಬಂದಿವೆ. ದುಬೆ ಬಳಿಯೂ ರಿವಾಲ್ವರ್ ಇದೆ ಎಂದು ಮಗ ಮತ್ತು ಸೊಸೆ ಹೇಳಿದ್ದಾರೆ. ಪೊಲೀಸರು ಮನೆಯನ್ನೆಲ್ಲ ಹುಡುಕಿದರೂ ರಿವಾಲ್ವರ್ ಪತ್ತೆಯಾಗಿರಲಿಲ್ಲ. ಇದೀಗ ರಿವಾಲ್ವರ್ ವಶಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಗೋಮಾಂಸ ಅಂಗಡಿಗಳ ಮೇಲೆ ಪೊಲೀಸರ ದಾಳಿ: 50 ಕೆಜಿ ಗೋಮಾಂಸ ವಶ, 29 ಹಸುಗಳ ರಕ್ಷಣೆ
ಮೂರು ತಿಂಗಳಿಂದ ಹಿರಿಯ ಮಗ, ಸೊಸೆ ಜೊತೆ ಜಗಳ
ಆರೋಪಿ ದುಬೆ ಪೊಲೀಸರಿಗೆ, ಹಿರಿಯ ಮಗ ಸಿದ್ಧಾರ್ಥ್ ಪತ್ನಿ ಭಾವನಾ ನನಗೆ ಕಿರುಕುಳ ನೀಡುತ್ತಾಳೆ. ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಾರೆ. ಆಕೆಯ ಕುಟುಂಬದವರೂ ನನಗೆ ಕಿರುಕುಳ ನೀಡುತ್ತಾರೆ. ಮೂರು ತಿಂಗಳ ಹಿಂದೆ ನಾನು ಪೊಲೀಸರಿಗೆ ದೂರು ನೀಡಿದ್ದೆ ಆದರೆ ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಮುಂಬೈ: ಟಿಫನ್ ಜೊತೆಗೆ ಟೀ ನೀಡಲಿಲ್ಲ ಎಂದು ಮಾವನೇ ತನ್ನ ರಿವಾಲ್ವರ್‌ನಿಂದ ಸೊಸೆಗೆ ಗುಂಡು ಹಾರಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
42 ವರ್ಷದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿದ್ದು, ಇದೀಗ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು 76 ವರ್ಷದ ಕಾಶಿನಾಥ ಪಾಂಡುರಂಗ ಪಾಟೀಲ್ ಎಂದು ಗುರುತಿಸಲಾಗಿದ್ದು, ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಯ ಮತ್ತೋರ್ವ ಸೊಸೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇದೀಗ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ
ಬೆಳಗಿನ ಚಹಾದ ಜೊತೆಗೆ ಸೊಸೆ ತನಗೆ ಉಪಹಾರವನ್ನು ನೀಡದೇ ಇದ್ದುದರಿಂದ ಆರೋಪಿ ಕೋಪಗೊಂಡಿದ್ದನು. ನಂತರ ತನ್ನ ರಿವಾಲ್ವರ್ ಹೊರ ತೆಗೆದು ತನ್ನ ಸೊಸೆಯ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಇತರ ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಈ ಘಟನೆಗೆ ಬೇರೆ ಏನಾದರೂ ಕಾರಣವಿದೆಯೇ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಸಂತೋಷ್ ಘಾಟೇಕರ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನದೊಳಗೆ ಪ್ರಯಾಣಿಕನ ಮೊಬೈಲ್ ಸ್ಫೋಟ – ಬೆಂಕಿ ನಂದಿಸಲು ಸಿಬ್ಬಂದಿ ಹರಸಹಾಸ
ಹೈದರಾಬಾದ್: ಮಗ ಆತ್ಮಹತ್ಯೆ ಮಾಡಿಕೊಂಡು ದೂರವಾದ ಎಂದು ಮನನೊಂದ ತಂದೆ, ಸೊಸೆಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣದ ಮಂಚೇರಿಯಲ್‍ನಲ್ಲಿ ನಡೆದಿದೆ.
ಸಾಯಿಕೃಷ್ಣ, ಸೌಂದರ್ಯ ಮೃತರಾಗಿದ್ದಾರೆ. ಲಿಂಗಣ್ಣಪೇಟೆಯ ನಿವಾಸಿಗಳಾದ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಇವರ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ಐದು ತಿಂಗಳ ಹಿಂದೆ ಮದುವೆಯಾಗಿದ್ದ ಈ ಜೋಡಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಸಾಯಿ ಕೃಷ್ಣ ಮದ್ಯಪಾನ ಮಡುತ್ತಿದ್ದನು. ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದನು. ಇದನ್ನೂ ಓದಿ: ಇಂಟರ್ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!
ಸಾಯಿಕೃಷ್ಣ ಮೃತನಾದ ಬಳಿಕ ಸೌಂದರ್ಯ ತನ್ನ ತವರು ಮನೆ ಸೇರಿದ್ದಳು. ಮಗನನ್ನು ಕಳೆದುಕೊಂಡ ಸಾಯಿಕೃಷ್ಣನ ತಂದೆ, ಇಷ್ಟಕ್ಕೆಲ್ಲ ಸೌಂದರ್ಯ ಕಾರಣ ಎಂದು ಆಕೆ ಇರುವ ಸ್ಥಳಕ್ಕೆ ಹೋಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಸೌಂದರ್ಯಗೆ ಕೊಡಲಿಯಿಂದ ಹೊಡೆದು ಪರಾರಿಯಾಗಿದ್ದಾನೆ. ಸೌಂದರ್ಯ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಕೇಂದ್ರದ ಶೆ.50ರಷ್ಟು ಸಿಬ್ಬಂದಿಗೆ ವರ್ಕ್ ಫ್ರಂ ಹೋಂ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾವ ವಯೋ ಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.
ತಿಮ್ಮಯ್ಯ ಕುಟುಂಬವನ್ನು ಅಗಲಿದ್ದಾರೆ. ಮೈಸೂರಿನ ಇಟ್ಟಿಗೆಗೂಡು ನಿವಾಸಿಯಾಗಿದ್ದ ತಿಮ್ಮಯ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಇದನ್ನೂ ಓದಿ: ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್
20 ದಿನಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇಂದು ವಯೋ ಸಹಜ ಖಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.