Tag: Fatehabad

  • ಕಳ್ಳತನ ಆರೋಪದಡಿ ಬಂಧನ – ಮನನೊಂದು 17ರ ಬಾಲಕ ಜೈಲಿನಲ್ಲೇ ಆತ್ಮಹತ್ಯೆ

    ಚಂಡೀಗಢ: ಕಳ್ಳತನ ಆರೋಪದಡಿ ಬಂಧನಕ್ಕೊಳಗಾಗಿದ್ದ 17 ವರ್ಷದ ಬಾಲಕ ಮನನೊಂದು ಜೈಲಿನೊಳಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಫತೇಹಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಫತೇಹಾಬಾದ್‍ನ ಭಾಟಿಯಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿನೋದ್ ಕುಮಾರ್, ಜನವರಿ 11ರಂದು ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದರು. ಆದರೆ ಮರುದಿನ ಹಿಂದಿರುಗಿ ನೋಡಿದಾಗ ಮನೆಯ ಬೀಗ ಹೊಡೆದು 3,000 ರೂಪಾಯಿ ಕಳ್ಳತನವಾಗಿರುವುದು ಕಂಡುಬಂತು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ನೆರೆಹೊರೆಯವರನ್ನು ವಿಚಾರಿಸಿದಾಗ ಬಾಲಕನ ಮೇಲೆ ಆರೋಪ ಕೇಳಿ ಬಂದಿದೆ. ಪೊಲೀಸರು ಐಪಿಸಿ ಸೆಕ್ಷನ್ 457 ಮತ್ತು 380ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಾಲ ವಸೂಲಿಗಾಗಿ ವೃದ್ಧೆಗೆ ಬಂದೂಕು ತೋರಿಸಿ ಹೆದರಿಸಿದ ಆಸಾಮಿ

    ನಂತರ ಬಾಲಕನನ್ನು ಫತೇಹಾಬಾದ್‍ನಿಂದ ಬೋರ್ಸೆಲ್ ಜೈಲಿಗೆ ಗುರುವಾರ ಕರೆದೊಯ್ಯಲಾಗಿತ್ತು. ಕೊರೊನಾ ಕಾರಣಾಂತರದಿಂದ ಪ್ರತ್ಯೇಕ ಕೊಠಡಿಯಲ್ಲಿ ಬಾಲಕ ಇದ್ದನು. ಶನಿವಾರ ಜೈಲು ಸಿಬ್ಬಂದಿ ಬಾಲಕನಿಗೆ ಊಟ ನೀಡಲು ಹೋದ ವೇಳೆ ಬಾಲಕ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದೀಗ ಬಾಲಕನ ತಾಯಿ ಸುಮನ್ ಅಲಿಯಾಸ್ ಸೋನು ಮತ್ತು ಸಹೋದರಿ ಮೋನು, ಫತೇಹಾಬಾದ್ ಪೊಲೀಸರು ಬಾಲಕನಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ.

    ಬಾಲಕನಿಗೆ ಪೊಲೀಸರು ನಿರ್ದಯವಾಗಿ ಥಳಿಸಿದ್ದರಿಂದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಜೈಲಿನಲ್ಲಿ ಭದ್ರತಾ ವ್ಯವಸ್ಥೆಯ ಕೊರತೆ ಇದ್ದು, 2019ರಲ್ಲಿ 20 ಮಂದಿ ಬಂಧಿತ ಆರೋಪಿಗಳು ಪರಾರಿಯಾಗಿದ್ದರು. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್

  • 120 ಮಹಿಳೆಯರನ್ನ ರೇಪ್ ಮಾಡಿದ್ದ 60 ವರ್ಷದ ಸ್ವಾಮೀಜಿಯ ಬಂಧನ

    120 ಮಹಿಳೆಯರನ್ನ ರೇಪ್ ಮಾಡಿದ್ದ 60 ವರ್ಷದ ಸ್ವಾಮೀಜಿಯ ಬಂಧನ

    -120 ಸೆಕ್ಸ್ ಸಿಡಿ ವಶಕ್ಕೆ ಪಡೆದ ಪೊಲೀಸರು

    ಫತೇಹಬಾದ್: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ವಿಡಿಯೋ ವೈರಲ್ ಆದ ಬಳಿಕ ಸ್ವಾಮೀಜಿಯನ್ನು ಬಂಧಿಸಿರುವ ಘಟನೆ ಹರಿಯಾಣದ ಫತೇಹಬಾದ್ ಪ್ರದೇಶದಲ್ಲಿ ನಡೆದಿದೆ.

    ಬಾಬಾ ಅಮರ್ ಪೂರಿ (60) ಬಂಧಿತ ಆರೋಪಿಯಾಗಿದ್ದು, ಸದ್ಯ ಈತನ ಮೇಲೆ 120 ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿದೆ.

    ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಸ್ವಾಮೀಜಿಯ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಆತನಿಗೆ ಸಂಬಂಧಿಸಿದ ಕೆಲ ಪ್ರದೇಶಗಳ ಮೇಲೆ ದಾಳಿ ನಡೆಸಿ ಅನುಮಾನಸ್ಪದಾಗಿ ಕಂಡು ಬಂದ ಫೈಲ್ ಗಳನ್ನು ವಶಕ್ಕೆ ಪಡೆದಿದ್ದು, ಬಾಬಾ ವಿರುದ್ಧ ಇಬ್ಬರು ಮಹಿಳೆಯರು ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

    ಅಂದಹಾಗೇ ಮಹಿಳೆ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಸ್ವಾಮೀಜಿ ಈ ದೃಶ್ಯಗಳನ್ನು ಸೆರೆ ಹಿಡಿದು ಬಳಿಕ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ಈ ಸಂಬಂಧ ಪೊಲೀಸರು ದಾಳಿ ನಡೆಸಿದ ವೇಳೆ 120 ವಿಡಿಯೋ ಕ್ಲೀಪ್ ಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಬಂಧಿತ ಅಮರ್ ಪೂರಿ ಸ್ವಾಮೀಜಿ ಹರಿಯಾಣದ ಫತೇಹಬಾದ್ ನ ಬಾಬಾ ಬಾಲ್ಕಾನಾಥ್ ದೇವಾಲಯದ ಸ್ವಾಮೀಜಿಯಾಗಿದ್ದು, ಈತನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬಾಬಾ ವಿರುದ್ಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಸ್ವಾಮೀಜಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಅತ್ಯಾಚಾರದ ದೃಶ್ಯಗಳ ಸಿಡಿಯನ್ನು ಸಹ ಪೊಲೀಸರಿಗೆ ಸಲ್ಲಿಸಿದ್ದಾರೆ. ಕಳೆದ 9 ತಿಂಗಳ ಹಿಂದೆಯಷ್ಟೇ ಮಹಿಳೆಯೊಬ್ಬರು ಸ್ವಾಮೀಜಿಯ ತಮ್ಮ ಮೇಲೆ ದೇವಾಲಯದಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ದೂರು ನೀಡಿದ್ದರು.