Tag: Fast And Furious

  • ಹಾಲಿವುಡ್‌ಗೆ ಕಾಲಿಟ್ಟ ಎರಡನೇ ಮೈಸೂರು ಸೆಲೆಬ್ರಿಟಿ

    ಹಾಲಿವುಡ್‌ಗೆ ಕಾಲಿಟ್ಟ ಎರಡನೇ ಮೈಸೂರು ಸೆಲೆಬ್ರಿಟಿ

    ದೈನಂದಿನ ಸುದ್ದಿಗಳನ್ನು ಬಿಗ್ ಬುಲೆಟಿನ್ ಮೂಲಕ ನಾಡಿಗೆ ವಿಭಿನ್ನವಾಗಿ ನೀಡುವ ಪಬ್ಲಿಕ್ ಟಿವಿ (Public TV) ಮುಖ್ಯಸ್ಥ ಹೆಚ್.ಆರ್ ರಂಗನಾಥ್ (HR Ranganath) ಅವರು ಹಾಲಿವುಡ್ ಸಿನಿಮಾಗೆ ಸಾಥ್ ನೀಡಿದ್ದಾರೆ.

    ಹಾಲಿವುಡ್ ‘ಫಾಸ್ಟ್ & ಫ್ಯೂರಿಯಸ್ 10’ (Fast and Furious 10) ಸಿನಿಮಾ ರಿಲೀಸ್‌ಗೂ (ಮೇ 19) ಮುನ್ನವೇ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡದ ಹೆಮ್ಮೆಯ ಪತ್ರಕರ್ತ ಹೆಚ್.ಆರ್ ರಂಗನಾಥ್ ಅವರು ಈ ಚಿತ್ರ ಭಾಗವಾಗಿದ್ದಾರೆ. ರೋಮ್‌ನಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವ ಸುದ್ದಿಯನ್ನು ರಂಗನಾಥ್ ಅವರು ಈ ಚಿತ್ರದ ಮೂಲಕ‌ ಪ್ರಸ್ತುತ ಪಡಿಸಿದ್ದಾರೆ. ಇದನ್ನೂ ಓದಿ: ‘ಟೈಗರ್‌ 3’ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಭುಜಕ್ಕೆ ಗಾಯ

    ಈ ಸುದ್ದಿ ಪಬ್ಲಿಕ್ ಟಿವಿ ಆಫೀಸಿನಲ್ಲಿ ಚಿತ್ರೀಕರಣವಾಗಿದ್ದೂ, ಈ ಮೂಲಕ ಹಾಲಿವುಡ್‌ಗೆ ಹಾರಿದ ಕನ್ನಡದ ಎರಡನೇ‌ ವ್ಯಕ್ತಿ ಇವರಾಗಿದ್ದಾರೆ. ಇವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಈ ಹಿಂದೆ ಮೈಸೂರಿನ ಸಾಬು ದಸ್ತಗಿರಿ ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಮೊದಲ ಬಾರಿಗೆ ಕನ್ನಡ ಮಾಧ್ಯಮ ಮುಖ್ಯಸ್ಥರು ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: Cannes 2023: ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿಯರು