Tag: fashion tips

  • ಕ್ಲಿಯರ್ ಸ್ಕಿನ್‍ಗಾಗಿ ಇಲ್ಲಿವೆ 5 ಬೆಸ್ಟ್ ಟಿಪ್ಸ್

    ಕ್ಲಿಯರ್ ಸ್ಕಿನ್‍ಗಾಗಿ ಇಲ್ಲಿವೆ 5 ಬೆಸ್ಟ್ ಟಿಪ್ಸ್

    ಮೊಡವೆ, ಕಲೆಗಳಿಲ್ಲದೆ ಕ್ಲಿಯರ್ ಸ್ಕಿನ್ ಇರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆ. ಆದ್ರೆ ಒಂದು ಮೊಡವೆಯಾದ್ರೆ ಅದರ ಕಲೆ ಸಾಕಷ್ಟು ದಿನಗಳವರೆಗೆ ಉಳಿದುಬಿಡುತ್ತೆ. ಜೊತೆಗೆ ಬ್ಲಾಕ್‍ಹೆಡ್ಸ್, ಆಯ್ಲಿ ಸ್ಕಿನ್ ಸಮಸ್ಯೆ ಬೇರೆ. ಈ ಎಲ್ಲದಕ್ಕೂ ಪರಿಹಾರವಾಗಿ ಇಲ್ಲಿದೆ 5 ಟಿಪ್ಸ್.

    ಯಾವುದೇ ಫೇಸ್‍ಪ್ಯಾಕ್ ಹಾಕೋ ಮುನ್ನ ಮುಖವನ್ನ ಕಡಲೆಹಿಟ್ಟು ಅಥವಾ ಫೇಸ್‍ವಾಶ್‍ನಿಂದ ತೊಳೆಯಿರಿ. ಮುಖ ತೊಳೆದ ನಂತರ ಮೃದುವಾದ ಬಟ್ಟೆಯನ್ನ ಮುಖದ ಮೇಲೆ ಒತ್ತಿ. ಟವಲ್‍ನಿಂದ ಮುಖವನ್ನ ಉಜ್ಜಿ ಒರೆಸೋದ್ರಿಂದ ಕ್ರಮೇಣವಾಗಿ ಮುಖ ಸುಕ್ಕುಗಟ್ಟುತ್ತದೆ. ಫೇಸ್ ಪ್ಯಾಕ್ ತೊಳೆದ ನಂತರ ರೋಸ್ ವಾಟರ್ ಅಥವಾ ಮಾಯ್ ಶ್ಚರೈಸರ್ ಹಚ್ಚೋದನ್ನ ಖಂಡಿತ ಮರೆಯಬೇಡಿ.

    1. ಆಲೂಗಡ್ಡೆ
    ಆಲೂಗಡ್ಡೆಯನ್ನ ಸಣ್ಣಗೆ ತುರಿದುಕೊಂಡು ಅಥವಾ ಸಣ್ಣ ಜಾರ್‍ನಲ್ಲಿ ರುಬ್ಬಿಕೊಂಡು ಅದರ ರಸ ತೆಗೆದಿಟ್ಟುಕೊಳ್ಳಿ. ನಂತರ ಒಂದು ಹತ್ತಿಯ ಉಂಡೆಯನ್ನ ಆಲೂಗಡ್ಡೆ ರಸದಲ್ಲಿ ಅದ್ದಿ ಮುಖಕ್ಕೆ ಹಚ್ಚಿ. ಒಂದು ಬಾರಿ ಹಚ್ಚಿ, ಅದು ಒಣಗಿದ ನಂತರ ಮತ್ತೊಮ್ಮೆ ಹಚ್ಚಿ. ಹೀಗೆ ಮೂರರಿಂದ ನಾಲ್ಕು ಬಾರಿ ಮುಖಕ್ಕೆ ರಸವನ್ನ ಹಚ್ಚಿ ಒಣಗಲು ಬಿಡಿ. 20 ನಿಮಿಷಗಳ ನಂತರ ಮುಖ ತೊಳೆದು ನಂತರ ರೋಸ್‍ವಾಟರ್ ಹಚ್ಚಿಕೊಳ್ಳಿ. ಈ ರೀತಿ ಪ್ರತಿದಿನ 15 ದಿನಗಳವರೆಗೆ ಮಾಡಿ ನೋಡಿ ರಿಸಲ್ಟ್ ನಿಮಗೇ ಗೊತ್ತಾಗುತ್ತದೆ.

    2. ಜೇನುತುಪ್ಪ- ಚಕ್ಕೆ/ದಾಲ್ಚಿನಿ ಪೌಡರ್
    ದಾಲ್ಚಿನಿ ಅಥವಾ ಚಕ್ಕೆಯನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಪ್ರತಿದಿನ ಮಲಗುವ ಮುನ್ನ 2 ಚಿಟಿಕೆ ದಾಲ್ಚಿನಿ ಪುಡಿಗೆ ಕಾಲು ಚಮಚ ಜೇನುತುಪ್ಪ ಮತ್ತು 1 ಸ್ಪೂನ್ ನೀರು ಹಾಕಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿ ಮಲಗಿ. ಬೆಳಗ್ಗೆ ಎದ್ದ ನಂತರ ಕಡಲೆಹಿಟ್ಟು ಅಥವಾ ಮೃದುವಾದ ಫೇಸ್‍ವಾಶ್‍ನಿಂದ ತೊಳೆಯಿರಿ. ರಾತ್ರಿಯಿಡೀ ಜೇನುತುಪ್ಪ ಹಚ್ಚಿಕೊಂಡು ಮಲಗಲು ಕಿರಿಕಿರಿಯೆನಿಸಿದ್ರೆ ಸಮಯ ಸಿಕ್ಕಾಗ 1 ಗಂಟೆ ಕಾಲ ಈ ಪ್ಯಾಕ್ ಹಚ್ಚಿ ನಂತರ ತೊಳೆದು ರೋಸ್‍ವಾಟರ್ ಹಚ್ಚಿಕೊಳ್ಳಿ.

    3. ಗ್ರೀನ್ ಟೀ
    ಒಂದು ಪಾತ್ರೆಗೆ ನೀರು ಹಾಕಿ ಅದು ಕುದಿಯುವಾಗ ಗ್ರೀ ಟೀ ಬ್ಯಾಗ್ ಅಥವಾ ಗ್ರೀನ್ ಟೀ ಪುಡಿ ಹಾಕಿ ಬೇಯಿಸಿ. ನಂತರ ಒಲೆಯಿಂದ ಪಾತ್ರೆ ಕೆಳಗಿಳಿಸಿ, ತಲೆಯ ಮೇಲೆ ಒಂದು ಟವೆಲ್ ಹೊದ್ದುಕೊಂಡು 5 ನಿಮಿಷ ಸ್ಟೀಮ್ ತೆಗೆದುಕೊಳ್ಳಿ. ಇದಾದ ಬಳಿಕ ಗ್ರೀ ಟೀ ಡಿಕಾಕ್ಷನ್ ಬಿಸಾಡುವುದು ಬೇಡ. ಡಿಕಾಕ್ಷನ್ ಸೋಸಿಕೊಂಡು ಅದು ತಣ್ಣಗಾದ ನಂತರ ಒಂದು ಚಮಚ ಜೇನುತುಪ್ಪ, ಒಂದು ಚಮಚ ಆಲೋವೆರಾ ಜೆಲ್ ಹಾಗೂ 1 ಚಮಚ ರೋಸ್‍ವಾಟರ್ ಹಾಕಿ ಆಲೋವೆರಾ ಜೆಲ್ ಕರಗುವಂತೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನ ಐಸ್‍ಕ್ಯೂಬ್ ಟ್ರೇನಲ್ಲಿ ಹಾಕಿ ಫ್ರೀಜ್ ಮಾಡಿ. ಪ್ರತಿದಿನ ಮಲಗುವಾಗ ಒಂದು ಕ್ಯೂಬ್ ತೆಗೆದುಕೊಂಡು ಮುಖಕ್ಕೆ ಮಸಾಜ್ ಮಾಡಿ ಹಾಗೇ ಮಲಗಿ. ರಾತ್ರಿ ಹಚ್ಚಿಕೊಂಡು ಮಲಗಲು ಇಷ್ಟವಿಲ್ಲವಾದ್ರೆ ಒಂದು ಗಂಟೆಯ ಬಳಿಕ ಮುಖ ತೊಳೆದು ರೋಸ್ ವಾಟರ್ ಹಚ್ಚಿ. ವಾರಕ್ಕೆ ಒಂದು ಬಾರಿ ಸ್ಟೀಮ್ ಹಾಗು ಪ್ರತಿದಿನ ಐಸ್‍ಕ್ಯೂಬ್ ಹಚ್ಚುತ್ತಾ ಬಂದ್ರೆ ಕ್ರಮೇಣವಾಗಿ ಬದಲಾವಣೆ ಗಮನಿಸುತ್ತೀರ.

    4. ಕಸ್ತೂರಿ ಅರಿಶಿಣ
    ಗ್ರಂಧಿಗೆ(ಪೂಜಾ ಸಾಮಗ್ರಿಗಳು ಸಿಗುವ ಅಂಗಡಿ)ಗಳಲ್ಲಿ ಕಸ್ತೂರಿ ಅರಿಶಿಣ ಲಭ್ಯ. 2 ಚಿಟಿಕೆ ಕಸ್ತೂರಿ ಅರಿಶಿಣಕ್ಕೆ ಸ್ವಲ್ಪ ನೀರು ಮಿಕ್ಸ್ ಮಾಡಿ ರಾತ್ರಿ ಮಲಗುವಾಗ ಮುಖಕ್ಕೆ ಹಚ್ಚಿ ಮಲಗಿ. ಬೆಳಗ್ಗೆ ಎದ್ದ ನಂತರ ಕಡಲೆಹಿಟ್ಟಿನಿಂದ ಮುಖ ತೊಳೆಯಿರಿ. ಮುಖದ ಮೇಲೆ ಇನ್ನೂ ಅರಿಶಿಣದ ಬಣ್ಣ ಉಳಿದಿದ್ದರೆ ಚಿಂತೆ ಬೇಡ. ಸ್ನಾನ ಮಾಡಿದಾಗ ಹೊರಟುಹೋಗುತ್ತದೆ. ಯಾವುದಾದ್ರೂ ಸಮಾರಂಭಕ್ಕೆ ಹೋಗೋ ತರಾತುರಿಯಲ್ಲಿ ಅರಿಶಿಣ ಪ್ಯಾಕ್ ಬಳಸಿದ್ರೆ ಅದು ಸಂಪೂರ್ಣವಾಗಿ ಹೋಗುವುದಿಲ್ಲ. ಜಾಂಡೀಸ್ ಬಂದವರಂತೆ ಕಾಣಬಾರ್ದು ಅಂತಿದ್ರೆ ಇದನ್ನ ರಾತ್ರಿ ಮಲಗುವಾಗ್ಲೇ ಬಳಸಿದ್ರೆ ಒಳ್ಳೆಯದು.

    5. ಪುದೀನಾ
    ಪುದೀನಾವನ್ನ ಪೇಸ್ಟ್ ಮಾಡಿಕೊಂಡು ಅದರ ರಸ ತೆಗೆದಿಟ್ಟುಕೊಳ್ಳಿ. ಒಂದು ಹತ್ತಿ ಉಂಡೆಯನ್ನ ಇದರಲ್ಲಿ ಅದ್ದಿ ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ಮತ್ತೊಮ್ಮೆ ಹಚ್ಚಿ. ಇದೇ ರೀತಿ ಮೂರು ಬಾರಿ ಪುದೀನಾ ರಸವನ್ನ ಮುಖಕ್ಕೆ ಹಚ್ಚಿ ಒಣಗಲು ಬಿಡಿ. 20 ನಿಮಿಷಗಳ ನಂತರ ಮುಖ ತೊಳೆಯಿರಿ. 15 ದಿನಗಳವರೆಗೆ ಪ್ರತಿದಿನ ಇದನ್ನ ಬಳಸಿ ನೋಡಿ.

    ಈ ಟಿಪ್ಸ್ ಗಳನ್ನ ಯಾವಾಗ್ಲೋ ಮನಸ್ಸು ಬಂದಾಗ ಮಾತ್ರ ಒಮ್ಮೆ ಟ್ರೈ ಮಾಡಿ ಏನೂ ಬದಲಾವಣೆಯೇ ಆಗ್ಲಿಲ್ಲ ಅಂತ ದೂರಬೇಡಿ. ಯಾವುದೇ ಟಿಪ್ಸ್ ಆದ್ರೂ ಇಂತಿಷ್ಟು ದಿನಗಳವರೆಗೆ ಸತತವಾಗಿ ಬಳಸಿದಾಗಲೇ ಅದರ ರಿಸಲ್ಟ್ ಗೊತ್ತಾಗುತ್ತದೆ.

  • ರಾತ್ರಿ ನಿದ್ದೆಗೂ ಮುನ್ನ ಈ 5 ಬ್ಯೂಟಿ ಟ್ರಿಕ್ಸ್ ಫಾಲೋ ಮಾಡಿ ನೋಡಿ

    ರಾತ್ರಿ ನಿದ್ದೆಗೂ ಮುನ್ನ ಈ 5 ಬ್ಯೂಟಿ ಟ್ರಿಕ್ಸ್ ಫಾಲೋ ಮಾಡಿ ನೋಡಿ

    ಸುಂದರವಾಗಿ ಕಾಣಿಸಬೇಕು ಅಂತ ಸಾಮಾನ್ಯವಾಗಿ ಎಲ್ಲರೂ ಕೆಲವೊಂದು ಬ್ಯೂಟಿ ಟಿಪ್ಸ್ ಫಾಲೋ ಮಾಡಿರ್ತಾರೆ. ಆದ್ರೆ ಎಲ್ಲಾ ಟಿಪ್ಸ್ ಫಲ ಕೊಡುತ್ತದೆ ಅಂತೇನಿಲ್ಲ. ಕೆಲವೊಂದು ಮನೆಮದ್ದು ಕೆಲಸ ಮಾಡ್ಬೇಕಾದ್ರೆ ಅದನ್ನ ನಿಯಮಿತವಾಗಿ ತಿಂಗಳುಗಟ್ಟಲೆ ಪಾಲನೆ ಮಾಡಿದಾಗಲೇ ರಿಸಲ್ಟ್ ಗೊತ್ತಾಗೋದು. ಹಾಗೆ ಕೆಲವೊಂದು ಬ್ಯೂಟಿ ಟಿಪ್ಸ್ ರಾತ್ರಿ ವೇಳೆ ಪಾಲಿಸೋದ್ರಿಂದ ಬೆಳಗ್ಗೆ ಅದರ ರಿಸಲ್ಟ್ ನಿಮಗೆ ಗೊತ್ತಾಗುತ್ತೆ. ಅದೇನು ಅಂದ್ರಾ? ಇಲ್ಲಿದೆ ಆ 5 ಬ್ಯೂಟಿ ಟ್ರಿಕ್ಸ್

    1. ರಾತ್ರಿ ವೇಳೆ ತಲೆಗೆ ಎಣ್ಣೆ ಹಚ್ಚಿ ಮಲಗಿ
    ಆಫೀಸ್‍ಗೆ ಅಥವಾ ಕಾಲೇಜಿಗೆ ಹೋಗೋರು ತಲೆಗೆ ಎಣ್ಣೆ ಮಸಾಜ್ ಮಾಡಬೇಕಾದ್ರೆ ಅದಕ್ಕಾಗಿ ಸಮಯ ಬೇಕು. ಭಾನುವಾರ ಮಾತ್ರ ಟೈಂ ಸಿಗೋದು ಅನ್ನೋದಾದ್ರೆ ರಾತ್ರಿ ವೇಳೆ ತಲೆಗೆ ಎಣ್ಣೆ ಹಚ್ಚಬಹುದು. ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ. ನಂತರ ಕೂದಲು ಬಾಚಿ ಜಡೆ ಹೆಣೆದು ಅಥವಾ ಗಂಟು ಕಟ್ಟಿ ಶವರ್ ಕ್ಯಾಪ್ ಅಥವಾ ಪ್ಲಾಸ್ಟಿಕ್ ಕವರ್ ಹಾಕಿ ಹಾಯಾಗಿ ನಿದ್ದೆ ಮಾಡಿ. ಬೆಳಗ್ಗೆ ಎದ್ದು ಸ್ನಾನ ಮಾಡಿದ್ರೆ ಹೊಳೆಯುವ ಕೂದಲು ನಿಮ್ಮದು. ಕೊಬ್ಬರಿ ಎಣ್ಣೆಗೆ ಗುಲಾಬಿ ದಳಗಳನ್ನ ಹಾಕಿ ಬಿಸಿ ಮಾಡಿ, ಅದು ಬೆಚ್ಚಗಾದ ನಂತರ ದಳಗಳನ್ನ ಚೆನ್ನಾಗಿ ಕಿವುಚಿ ತೆಗೆದು ಆ ಎಣ್ಣೆಯನ್ನ ಹಚ್ಚಿ ಬೆಳಗ್ಗೆ ಎದ್ದು ಸ್ನಾನ ಮಾಡಿದ್ರೆ ನಿಮ್ಮ ಕೂದಲು ಮೃದುವಾಗುತ್ತೆ.

    2. ಪಾದದ ಬಿರುಕು ನಿವಾರಣೆಗೆ ಹೀಗೆ ಮಾಡಿ
    ಚಳಿಗಾಲದಲ್ಲಿ ಹಿಮ್ಮಡಿ ಬಿರುಕಾಗೋದು ಸಾಮಾನ್ಯ. ಅದಕ್ಕಾಗಿ ವಿಶೇಷ ಆರೈಕೆ ಮಾಡಬೇಕು. ರಾತ್ರಿ ಮಲಗುವ ಮುನ್ನ ಪಾದವನ್ನ ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿ. ನಂತರ ಬಿರುಕು ಮೂಡಿರೋ ಭಾಗಕ್ಕೆ ವ್ಯಾಸಲೀನ್ ಹಚ್ಚಿ ಸಾಕ್ಸ್ ಧರಿಸಿ ಮಲಗಿ. ಬೆಳಗ್ಗೆ ಎದ್ದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯೋದನ್ನ ಮರೀಬೇಡಿ. ಇಡೀ ಕಾಲಿಗೆ ಮಾಯ್‍ಶ್ಚರೈಸರ್ ಹಚ್ಚಿ ಸಾಕ್ಸ್ ಧರಿಸಿ ಮಲಗಿದ್ರೆ ನಿಮ್ಮ ಕಾಲು ಕೋಮಲವಾಗಿರೋದನ್ನ ಬೆಳಗ್ಗೆ ನೀವೇ ಗಮನಿಸಬಹುದು.

    3. ಕಣ್ಣಿನ ಆರೈಕೆ
    ಕಣ್ಣಿನ ಸುತ್ತ ಕಪ್ಪು ವರ್ತುಲ ಮೂಡಿದ್ದರೆ ಅಥವಾ ತುಂಬಾ ಆಯಾಸಗೊಂಡಿದ್ರೆ ರಾತ್ರಿ ಮಲಗುವಾಗ ಕಣ್ಣಿನ ಸುತ್ತ ಆಲ್ಮಂಡ್ ಆಯಿಲ್(ಬಾದಾಮಿ ಎಣ್ಣೆ) ಅಥವಾ ಆಲೋವೆರಾ ಜೆಲ್ ಹಚ್ಚಿ. ಈ ರೀತಿ ನಿಯಮಿತವಾಗಿ ಮಾಡುತ್ತಾ ಬಂದಲ್ಲಿ ಕ್ರಮೇಣವಾಗಿ ಕಪ್ಪು ವರ್ತುಲ ಕಡಿಮೆಯಾಗೋದನ್ನ ಗಮನಿಸುತ್ತೀರಿ.

    4. ಉದ್ದವಾದ ರೆಪ್ಪೆ ಬೇಕಾ? ಹೀಗೆ ಮಾಡಿ
    ರೆಪ್ಪೆ ಉದ್ದವಿಲ್ಲ ಅಂತ ಕೃತಕ ರೆಪ್ಪೆ ಹಾಕೋ ಬದಲು ನಿಮ್ಮ ಕಣ್ರೆಪ್ಪೆಗೆ ಸ್ವಲ್ಪ ಕಾಳಜಿ ತೋರಿಸಿ. ರಾತ್ರಿ ಮಲಗುವ ಮುನ್ನ ಸ್ವಲ್ಪ ಹರಳೆಣ್ಣೆಯನ್ನ ಕಣ್ಣಿನ ಮೇಲ್ಭಾಗ ಹಾಗೂ ಕೆಳಭಾಗದ ರೆಪ್ಪೆಗೆ ಹಚ್ಚಿ. ಹೀಗೆ ಮಾಡೋದ್ರಿಂದ ಕಣ್ರೆಪ್ಪೆಯ ಕೂಡಲು ದೃಢವಾಗುತ್ತದೆ. ಮರುದಿನ ಬೆಳಿಗ್ಗೆಯೇ ನೀವು ಈ ಬದಲಾವಣೆ ಗಮನಿಸಬಹುದು. ಆದ್ರೆ ರೆಪ್ಪೆ ಉದ್ದವಾಗಿ ಬೆಳೆಯಬೇಕು ಅಂತಿದ್ರೆ ಈ ರೀತಿ ನಿಯಮಿತವಾಗಿ ಮಾಡುತ್ತಿರಬೇಕು. ಕಣ್ಣಿನ ಹುಬ್ಬಿನಲ್ಲೂ ಕೂದಲು ಕಡಿಮೆಯಿದ್ರೆ ಹರಳೆಣ್ಣೆ ಹಚ್ಚಿ ಮಲಗೋದ್ರಿಂದ ಪ್ರಯೋಜನವಾಗುತ್ತದೆ.

    5. ನ್ಯಾಚುರಲ್ ಕರ್ಲ್ಸ್ ಬೇಕಾದ್ರೆ ಇಲ್ಲಿದೆ ಐಡಿಯಾ
    ಗುಂಗುರು ಕೂದಲು ಇಲ್ಲ. ಕೂದಲು ಕರ್ಲ್ ಮಾಡೋಕೆ ಕರ್ಲರ್ ಬೇಕು ಅನ್ನೋ ಚಿಂತೆ ಬೇಡ. ರಾತ್ರಿ ಮಲಗುವ ಮುನ್ನ ಕೂದಲನ್ನ ತೇವವಾಗಿಸಿ, ಸಿಕ್ಕಿಲ್ಲದಂತೆ ಬಾಚಿ ಮೂರ್ನಾಲು ಜಡೆ ಹಾಕಿ ಮಲಗಿ. ಬೆಳಗ್ಗೆ ಎದ್ದು ಜಡೆಯನ್ನ ಬಿಡಿಸಿ ಸ್ವಲ್ಪ ಸೆರಮ್ ಹಾಕಿ ನಿಮ್ಮಿಷ್ಟದಂತೆ ಕ್ರಾಪ್ ತೆಗೆದು ಹೆರ್‍ಸ್ಟೈಲ್ ಮಾಡಿಕೊಳ್ಳಿ. (ಗಮನಿಸಿ: ಜಡೆ ಬಿಡಿಸಿದ ನಂತರ ಬ್ರಶ್ ಅಥವಾ ಸಣ್ಣ ಹಲ್ಲಿನ ಬಾಚಣಿಗೆಯಿಂದ ಬಾಚಬಾರದು. ಸಾಧ್ಯವಾದಷ್ಟು ಬೆರಳಿನ ಸಹಾಯದಿಂದ್ಲೇ ಕೂದಲನ್ನ ಸೆಟ್ ಮಾಡಿ.)

  • ಎಲ್ಲಾ ಹುಡುಗಿಯರಿಗೆ ತಿಳಿದಿರಲೇಬೇಕಾದ 7 ಫ್ಯಾಶನ್ ಹ್ಯಾಕ್ಸ್

    ಎಲ್ಲಾ ಹುಡುಗಿಯರಿಗೆ ತಿಳಿದಿರಲೇಬೇಕಾದ 7 ಫ್ಯಾಶನ್ ಹ್ಯಾಕ್ಸ್

    ಚೆನ್ನಾಗಿ ಸಿಂಗರಿಸಿಕೊಂಡು ಅಂದವಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯವಾಗಿ ಎಲ್ಲಾ ಹುಡುಗಿಯರಿಗೂ ಇರುತ್ತೆ. ಆದ್ರೆ ರೆಡಿಯಾಗುವಾಗ ಕೊನೇ ಘಳಿಗೆಯಲ್ಲಿ ಏನಾದ್ರೂ ಎಡವಟ್ಟಾದ್ರೆ ಅದನ್ನ ಮ್ಯಾನೇಜ್ ಮಾಡೋಕೂ ಬರ್ಬೇಕು. ಅಂತಹ ಸಮಯದಲ್ಲಿ ನಿಮಗೆ ಈ ಹ್ಯಾಕ್‍ಗಳು ನೆರವಾಗಬಹುದು. ಏನದು ಹ್ಯಾಕ್ಸ್ ಅಂದ್ರಾ? ಮುಂದೆ ಓದಿ

    1. ಜೀನ್ಸ್ ಝಿಪ್ ಲೂಸ್ ಆಗಿದ್ದು ಪದೇ ಪದೇ ಕೆಳಗೆ ಜಾರ್ತಿದ್ರೆ ಅದಕ್ಕಿಂತ ಮುಜುಗರ ಮತ್ತೊಂದಿಲ್ಲ. ಹಾಗಂತ ಆ ಜೀನ್ಸ್ ಹಾಕದೇ ಮೂಲೆಯಲ್ಲಿ ಇಡೋಕಾಗಲ್ಲ. ಇದಕ್ಕಾಗಿ ಇಲ್ಲಿದೆ ಸೂಪರ್ ಹ್ಯಾಕ್. ಒಂದು ಕೀಚೈನ್‍ನ ರಿಂಗ್ ತೆಗೆದುಕೊಂಡು ಅದನ್ನ ಝಿಪ್‍ನ ತುದಿಗೆ ಹಾಕಿ. ಝಿಪ್ ಮೇಲಕ್ಕೆಳೆದು ಪ್ಯಾಂಟಿನ ಬಟನ್ ಮೇಲೆ ರಿಂಗ್ ಕೂರುವಂತೆ ಮಾಡಿ ನಂತರ ಬಟನ್ ಹಾಕಿದ್ರೆ ಝಿಪ್ ಜಾರೋದಿಲ್ಲ.

    2. ಶರ್ಟ್‍ನ ಗುಂಡಿಯಿಂದ ದಾರ ಸ್ವಲ್ಪ ಸ್ವಲ್ಪವೇ ಕಿತ್ತು ಬರುತ್ತಿದ್ರೆ ಟ್ರಾನ್ಸ್‍ಪರೆಂಟ್ ನೇಲ್‍ಪಾಲಿಶ್(ಯಾವುದೇ ಬಣ್ಣವಿಲ್ಲದ ತಿಳಿಯಾದ ನೇಲ್‍ಪಾಲಿಶ್) ಹಾಕಿ ಒಣಗಿಸಿ ನಂತರ ಶರ್ಟ್ ಧರಿಸಿ.

    3. ಶೂ ತುದಿಯ ಬಿಳಿ ಭಾಗದ ಮೇಲೆ ಮಣ್ಣು ಮೆತ್ತಿಕೊಂಡಿದ್ದರೆ ಇಡೀ ಶೂವನ್ನ ನೀರಿನಿಂದ ತೊಳೆಯೋ ಬದಲು ಟೂತ್‍ಪೇಸ್ಟ್ ಬಳಸಿ ತೆಗೆಯಬಹುದು. ಮೊದಲಿಗೆ ಬಟ್ಟೆ ಅಥವಾ ಟಿಶ್ಯೂನಿಂದ ಮಣ್ಣನ್ನ ತೆಗೆಯಿರಿ. ನಂತರ ಒಂದು ಟೂತ್‍ಬ್ರಷ್‍ಗೆ ಪೇಸ್ಟ್ ಹಾಕಿ ಶೂ ಮೇಲೆ ಉಜ್ಜಿ ನಂತರ ಒಣಬಟ್ಟೆಯಿಂದ ಒರೆಸಿದ್ರೆ ನಿಮ್ಮ ಶೂ ಫಳಫಳಿಸುತ್ತೆ.

    4. ಕಪ್ಪು ಜೀನ್ಸ್ ಅಥವಾ ಪ್ಯಾಂಟ್ ಮೇಲೆ ನೂಲುಗಳು ಅಂಟಿಕೊಂಡಿದ್ದರೆ ಅದನ್ನ ತೆಗೆಯಲು ಸೆಲ್ಲೋ ಟೇಪ್ ಬಳಸಿ. ಸ್ವಲ್ಪ ಟೇಪ್ ಕಟ್ ಮಾಡಿಕೊಂಡು ಅಂಗೈಗೆ ಸುತ್ತಿಕೊಂಡು ಪ್ಯಾಂಟ್ ಮೇಲೆ ಒತ್ತಿದರೆ ನೂಲು ಟೇಪ್‍ಗೆ ಅಂಟಿಕೊಳ್ಳುತ್ತದೆ. ಹೀಗೆ ನೂಲು ಇರುವ ಕಡೆಯಲ್ಲೆಲ್ಲಾ ಪ್ರೆಸ್ ಮಾಡಿ ಪ್ಯಾಂಟ್ ಮೇಲೆ ಅಂಟಿಕೊಂಡ ನೂಲನ್ನು ತೆಗೆಯಬಹುದು.

    5. ಸ್ವೆಟರ್‍ಗಳು ಸ್ವಲ್ಪ ಹಳೆಯದಾದಂತೆ ಅದರ ಮೇಲಿನ ನೂಲು ಸಣ್ಣ ಸಣ್ಣ ಉಂಡೆಗಳಂತೆ ಅಂಟಿಕೊಂಡು ಸ್ವೆಟರ್‍ನ ಅಂದವನ್ನ ಕಡೆಸುತ್ತದೆ. ಇದನ್ನ ತೆಗೆಯಬೇಕಾದ್ರೆ ಶೇವಿಂಗ್ ರೇಜರ್ ಬಳಸಿ. ರೇಜರ್‍ನಿಂದ ಒಂದೆರಡು ಬಾರಿ ಸ್ವೆಟರ್ ಮೇಲೆ ಶೇವ್ ಮಾಡಿದ್ರೆ ಆಯ್ತು.

    6. ಜೀನ್ಸ್ ಅಥವಾ ಯಾವುದೇ ಪ್ಯಾಂಟ್ ಕೊಳ್ಳಲು ಹೋದಾಗ ಅದು ನಿಮಗೆ ಫಿಟ್ ಆಗುತ್ತದೋ ಇಲ್ಲವೋ ಎಂದು ಟ್ರೈ ಮಾಡಲು ಸಮಯವಿಲ್ಲ ಅಂತಾದ್ರೆ ಇಲ್ಲಿದೆ ಐಡಿಯಾ. ಪ್ಯಾಂಟನ್ನ ಹಿಂದಿನಿಂದ ನಿಮ್ಮ ಕುತ್ತಿಗೆಯ ಸುತ್ತ ಸುತ್ತಿ ಹಿದಿಡುಕೊಳ್ಳಿ. ಕುತ್ತಿಗೆಯ ಮುಂಭಾಗದಲ್ಲಿ ಪ್ಯಾಂಟ್‍ನ ಎರಡೂ ತುದಿ ಟಚ್ ಆದ್ರೆ ಆ ಪ್ಯಾಂಟ್ ನಿಮಗೆ ಫಿಟ್ ಆಗುತ್ತದೆ. ತುದಿಗಳು ಟಚ್ ಆಗದಿದ್ರೆ ಚಿಕ್ಕದು ಅಥವಾ ಎರಡೂ ತುದಿ ಒಂದರ ಮೇಲೊಂದು ಕುರುವಷ್ಟು ಉದ್ದವಿದ್ರೆ ಆ ಪ್ಯಾಂಟ್ ನಿಮಗೆ ದೊಡ್ಡದಾಗುತ್ತದೆ ಎಂದರ್ಥ.

    7. ಜ್ಯಾಕೆಟ್, ಜೀನ್ಸ್ ಅಥವಾ ಬ್ಯಾಗಿನ ಝಿಪ್ ಹಾಕಲು ಕಷ್ಟವಾಗ್ತಿದ್ರೆ ಝಿಪ್‍ನ ಎರಡೂ ಬದಿಗೆ ಕ್ರೆಯಾನ್, ಕ್ಯಾಂಡಲ್ ಅಥವಾ ಪೆನ್ಸಿಲ್‍ನಿಂದ ಉಜ್ಜಿ. ನಂತರ ಝಿಪ್ ಸಲೀಸಾಗಿ ಎಳೆಯಬಹುದು.

  • 20 ವರ್ಷದ ಯುವತಿಯರ ವಾರ್ಡ್ ರೋಬ್‍ನಲ್ಲಿ ಇರಲೇಬೇಕಾದ 10 ವಸ್ತುಗಳು

    20 ವರ್ಷದ ಯುವತಿಯರ ವಾರ್ಡ್ ರೋಬ್‍ನಲ್ಲಿ ಇರಲೇಬೇಕಾದ 10 ವಸ್ತುಗಳು

    1. ಪಾರ್ಟಿ ಶೂ 

    ನಿಮ್ಮ ಬಳಿ ಎಷ್ಟೇ ಫ್ಲಾಟ್ ಚಪ್ಪಲಿ ಹಾಗೂ ಸ್ನೀಕರ್ ಶೂಗಳಿದ್ರೂ ಒಂದಾದ್ರೂ ಹೀಲ್ಡ್ ಶೂ ನಿಮ್ಮ ವಾರ್ಡ್‍ರೋಬ್‍ನಲ್ಲಿ ಇರಲೇಬೇಕು. ನೀವು ಪಾರ್ಟಿ ಪ್ರಿಯರಲ್ಲದಿದ್ರೂ ಯಾವುದಾದ್ರೂ ಸಮಾರಂಭಕ್ಕೆ ಹೋಗುವಾಗ ಈ ಶೂ ಬಳಸಬಹುದು. ಸಾಂಪ್ರದಾಯಿಕ ಉಡುಗೆ ಹಾಗೂ ವೆಸ್ಟರ್ನ್ ಡ್ರೆಸ್ ಎರಡಕ್ಕೂ ಮ್ಯಾಚ್ ಆಗವಂತಹ ಶೂ ಆಯ್ಕೆ ಮಾಡಿಕೊಳ್ಳಿ.

    2. ಕೂಲ್ ಕೂಲ್ ಪೈಜಾಮಾ

    ಯಾವುದೇ ಬಟ್ಟೆ ಸ್ವಲ್ಪ ಹಳೆಯದಾದ್ಮೇಲೆ ಅದನ್ನ ಮನೆಯಲ್ಲಿ ಹಾಕೊಳ್ಳೋಕೆ ಬಳಸ್ತೀವಿ. ಆದ್ರೆ ಕೆಲವೊಂದು ಉಡುಪುಗಳು ಬಿಗಿಯಾಗಿರಬಹುದು ಅಥವಾ ಅದರಲ್ಲಿ ಬೀಡ್ಸ್ ವರ್ಕ್ ಇದ್ರೆ ಮೈಗೆ ಚುಚ್ಚಬಹುದು. ಇದರಿಂದ ಮಲಗುವಾಗ ಕಿರಿಕಿರಿಯಾಗುತ್ತೆ. ಹೀಗಾಗಿ ಮನೆಯಲ್ಲೂ ಕೂಲ್ ಆಗಿರೋಕೆ ಆರಾಮದಾಯಕವಾದ ಪೈಜಾಮಾ ನಿಮ್ಮ ವಾರ್ಡ್‍ರೋಬ್‍ನಲ್ಲಿರಲಿ.

    3. ಆರಾಮದಾಯಕ ಒಳಉಡುಪುಗಳು

    20 ವರ್ಷ ಪ್ರಾಯದಲ್ಲಿ ಹೆಣ್ಣುಮಕ್ಕಳಿಗೆ ದೈಹಿಕವಾಗಿ ಸಾಕಷ್ಟು ಬದಲಾವಣೆಯಾಗುತ್ತದೆ. ಹೀಗಾಗಿ ಉತ್ತಮ ಗುಣಮಟ್ಟದ ಒಳಉಡುಪುಗಳನ್ನ ಕೊಳ್ಳೊದು ತುಂಬಾ ಮುಖ್ಯ. ಅಲ್ಲದೆ ಯಾವುದೇ ಉಡುಪು ಚೆನ್ನಾಗಿ ಕಾಣಬೇಕಾದ್ರೆ ಅದಕ್ಕೆ ತಕ್ಕಂತಹ ಒಳಉಡುಪು ಕೂಡ ತುಂಬಾ ಮುಖ್ಯ. ಚೆಂದದ ಬಟ್ಟೆ ತೊಟ್ಟು ಒಳಉಡುಪು ಸರಿಯಿಲ್ಲವಾದ್ರೆ ಮುಜುಗರ ಅನುಭವಿಸಬೇಕಾಗುತ್ತೆ. ಸೋ… ನಿಮಗೆ ಫಿಟ್ ಆಗುವಂತಹ ಒಳಉಡುಪನ್ನ ಖರೀದಿಸಿ.

    Read More: 15 Ideal Color Combinations to Make You Look Great

    4. ಮಾಯ್‍ಶ್ಚರೈಸರ್/ಸನ್‍ಸ್ಕ್ರೀನ್

    ನಿಮ್ಮ ಮುಖಕ್ಕೆ ಹೊಂದಿಕೆಯಾಗುವಂತಹ ಒಂದೊಳ್ಳೆ ಮಾಯ್‍ಶ್ಚರೈಸರ್ ಆಯ್ಕೆ ಮಾಡಿಕೊಳ್ಳೋದು ಸುಲಭದ ಮಾತಲ್ಲ. ಇದಕ್ಕಾಗಿ ತುಂಬಾ ಸಹನೆ ಇರಬೇಕು. ಸಾಕಷ್ಟು ಮಾಯ್‍ಶ್ಚರೈಸರ್‍ಗಳನ್ನ ಪ್ರಯೋಗ ಮಾಡ್ಬೇಕು. 20ರ ಹರೆಯದಲ್ಲಿ ಹಾರ್ಮೋನ್‍ಗಳ ವ್ಯತ್ಯಾಸದಿಂದ ಮುಖದಲ್ಲಿ ಮೊಡವೆಯಾಗೋದು ಹಾಗೂ ಇತರೆ ತೊಂದರೆಗಳು ಕಾಮನ್. ಹೀಗಾಗಿ ನಿಮ್ಮ ಮುಖಕ್ಕೆ ಹೊಂದಿಕೆಯಾಗೋ ಮಾಯ್‍ಶ್ಚರೈಸರ್ ಆಯ್ಕೆ ಮಾಡಿ ಅದನ್ನೇ ಬಳಸಿ. ನಿಮ್ಮದು ಎಣ್ಣೆ ತ್ವಚೆಯಾಗಿದ್ರೆ ವಾಟರ್ ಬೇಸ್ಡ್ ಮಾಯ್‍ಶ್ಚರೈಸರ್ ಹಾಗೂ ಡ್ರೈ ಸ್ಕಿನ್ ಆಗಿದ್ರೆ ಕ್ರೀಮ್ ಬೇಸ್ಡ್ ಮಾಯ್‍ಶ್ಚರೈಸರ್ ಬಳಸಿ. ಕೈ ಕಾಲುಗಳಿಗೂ ಮಾಯ್‍ಶ್ಚರೈಸರ್ ಬಳಸಿ. ಇನ್ನು ಸನ್‍ಸ್ಕ್ರೀನ್ ತಪ್ಪದೆ ಪ್ರತಿದಿನ ಬಳಸಿ. ಎಸ್‍ಪಿಎಫ್(ಸನ್ ಪ್ರೊಟೆಕ್ಷನ್ ಫಾರ್ಮುಲಾ) 25ಕ್ಕಿಂತ ಹೆಚ್ಚಿರುವ ಸನ್‍ಸ್ಕ್ರೀನ್ ಬಳಸಿದ್ರೆ ಉತ್ತಮ.

    5. ಕೂದಲಿಗೆ ತಕ್ಕ ಬಾಚಣಿಗೆ

    ಒಂದೇ ಬಾಚಣಿಗೆಯನ್ನ ಮನೆಮಂದಿಯೆಲ್ಲಾ ಬಳಸೋ ಕಾಲ ಹೋಯ್ತು. ಈಗ ನಿಮಗೆ ಅಂತ ಪ್ರತ್ಯೇಕವಾದ ಬಾಚಣಿಗೆ ಇಟ್ಟುಕೊಳ್ಳಲೇಬೇಕು. ಅದರಲ್ಲೂ ಕೂದಲಿನ ಸಿಕ್ಕು ಬಿಡಿಸೋಕೆ ಹಾಗೂ ಬಾಚಿ ಜಡೆ ಹಾಕೋಕೆ ಒಂದೇ ಬಾಚಣಿಗೆ ಸಾಕಾಗುವುದಿಲ್ಲ. ಸಿಕ್ಕು ಬಿಡಿಸೋಕೆ ಯಾವಾಗ್ಲೂ ದೊಡ್ಡ ಹಲ್ಲಿನ ಬಾಚಣಿಗೆ ಬಳಸಿ. ನಂತರ ಸಣ್ಣ ಬಾಚಣಿಗೆಯಲ್ಲಿ ಬಾಚಿಕೊಂಡು ಜಡೆ ಅಥವಾ ಕ್ಲಿಪ್ ಹಾಕಿ. ನಿಮ್ಮದು ಸ್ಟ್ರೇಟ್ ಹೇರ್ ಆಗಿದ್ರೆ ಬ್ರಶ್‍ನಂತಿರುವ ಬಾಚಣಿಗೆ ಬಳಸಿ. ಹಾಗೇ ಕರ್ಲಿ ಹೇರ್ ಆಗಿದ್ರೆ ಬ್ರಶ್‍ನಲ್ಲಿ ಬಾಚಿದ್ರೆ ಕೂದಲು ದೊಡ್ಡದಾಗಿ ವಿಗ್‍ನಂತೆ ಕಾಣುತ್ತದೆ. ಹೀಗಾಗಿ ಕರ್ಲಿ ಹೇರ್ ಇರೋರು ದೊಡ್ಡ ಹಲ್ಲಿನ ಬಾಚಣಿಗೆಯಲ್ಲೇ ಬಾಚಿದ್ರೆ ಸೂಕ್ತ. ರೌಂಡ್ ಕೂಂಬ್ ಕೂಡ ಬಳಸಬಹುದು.

    Read More: The 6 Best Affordable Brands to Boost Your Office Dressing Game

    6. ಸ್ಕಿನ್ನಿ ಜೀನ್ಸ್/ ಕಪ್ಪು ಬಣ್ಣದ ಜೀನ್ಸ್

    ನಿಮ್ಮ ಬಳಿ ಸಾಕಷ್ಟು ಜೀನ್ಸ್‍ಗಳಿದ್ರೂ ಫಿಟ್ ಆಗುವಂತಹ ಸ್ಕಿನ್ನಿ ಜೀನ್ಸ್ ಇದ್ರೆ ಅದೇ ನಿಮ್ಮ ಫೇವರೇಟ್ ಆಗಿರುತ್ತದೆ. ಹಾಗೇ ಕಪ್ಪು ಬಣ್ಣದ ಸ್ಕಿನ್ನಿ ಜೀನ್ಸ್ ನಿಮ್ಮ ವಾರ್ಡ್‍ರೋಬ್‍ನಲ್ಲಿ ಇರುವುದು ಅತ್ಯಗತ್ಯ. ಯಾವ ಪ್ಯಾಂಟ್ ಹಾಕೋದು ಅನ್ನೋ ಗೊಂದಲವಿದ್ದಾಗ ನಿಮ್ಮ ಫೇವರೇಟ್ ಪ್ಯಾಂಟನ್ನೇ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಕಪ್ಪು ಬಣ್ಣದ ಜೀನ್ಸ್ ಸಾಮಾನ್ಯವಾಗಿ ಎಲ್ಲಾ ಟಾಪ್‍ಗಳಿಗೂ ಹೊಂದಿಕೆಯಾಗುತ್ತದೆ.

    8. ವಾಚ್

    ಅಯ್ಯೋ ಈ ಕಾಲದಲ್ಲಿ ಮೊಬೈಲ್ ಇರಬೇಕಾದ್ರೆ ವಾಚ್‍ನಲ್ಲಿ ಟೈಂ ನೋಡೋರ್ಯಾರು ಅಂತ ಮೂಗು ಮುರೀಬೇಡಿ. ನೀವು ಕೈಗಡಿಯಾದರಲ್ಲಿ ಟೈಂ ನೋಡದಿದ್ರೂ ಪರವಾಗಿಲ್ಲ ಒಂದೊಳ್ಳೇ ವಾಚ್ ಕಟ್ಟಿದ್ರೆ ಅದರ ಗತ್ತೇ ಬೇರೆ. ದುಂಡಾದ ದೊಡ್ಡ ಡಯಲ್‍ನ ವಾಚ್‍ಗಳು ಈಗಿನ ಟ್ರೆಂಡ್. ಸ್ಟೀಲ್ ಕೇಸ್ ವಾಚ್ ಅಥವಾ ಬೆಲ್ಟ್ ವಾಚ್‍ಗಳಲ್ಲಿ ನಿಮಗೆ ಯಾವುದು ಇಷ್ಟವೋ ಅದನ್ನೇ ಆಯ್ಕೆ ಮಾಡಿಕೊಳ್ಳಿ.

    Read More: 7 Stylish Looks To Copy This Week

    9. ಬ್ಯಾಗ್/ ವಾಲೆಟ್

    ಕಾಲೇಜಿಗೆ ಹೋಗೋವಾಗ ಬಳಸೋ ಬ್ಯಾಕ್‍ಪ್ಯಾಕ್ ಜೊತೆ ಟ್ರೆಂಡಿ ಬ್ಯಾಗ್‍ಗಳು ಕೂಡ ನಿಮ್ಮ ವಾರ್ಡ್‍ರೋಬ್‍ನಲ್ಲಿರಲಿ. ಗೆಳತಿಯರ ಜೊತೆ ಹೊರಗೆ ಹೋಗುವಾಗ ಅಥವಾ ಶಾಪಿಂಗ್ ಹೋಗುವಾಗ ಬಳಸೋಕೆ ಒಂದು ಸ್ಲಿಂಗ್ ಬ್ಯಾಗ್ ಇದ್ದರೆ ಸೂಕ್ತ. ಹಾಗೆ ಕೇವಲ ಕಾರ್ಡ್ ಹಾಗೂ ಹಣ ಮಾತ್ರ ತೆಗೆದುಕೊಂಡು ಹೋಗೋ ಸಂದರ್ಭಕ್ಕೆ ಒಂದೊಳ್ಳೆ ವಾಲೆಟ್(ಪರ್ಸ್) ಇರಲಿ.

    10. ಕೂಲ್ ಸನ್‍ ಗ್ಲಾಸಸ್

    ಫೋಟೋಗೆ ಪೋಸ್ ಕೊಡೋಕಾದ್ರೂ ಗೆಳೆಯರ ಬಳಿ ಇರೋ ಸನ್‍ಗ್ಲಾಸಸ್ ತೆಗೆದುಕೊಂಡು ಹಾಕೊಳ್ತಾರೆ. ಆದ್ರೆ ಬಿಸಿಲಿನಿಂದ ಕಣ್ಣುಗಳನ್ನ ರಕ್ಷಿಸಿಕೊಳ್ಳೋಕೆ ಸನ್‍ಗ್ಲಾಸಸ್ ಇರಲೇಬೇಕು. ಹೀಗಾಗಿ ಒಂದೊಳ್ಳೆ ಸನ್‍ಗ್ಲಾಸಸ್ ಇಟ್ಟುಕೊಳ್ಳಿ. ಹಾಗಂತ ಕಡಿಮೆ ಬೆಲೆಗೆ ಸಿಗೋ ಸನ್‍ಗ್ಲಾಸಸ್ ಖರೀದಿಸಬೇಡಿ. ಉತ್ತಮ ಗುಣಮಟ್ಟದ ಸನ್‍ಗ್ಲಾಸಸ್ ಇದ್ರೆ ಬಾಳಿಕೆಯೂ ಬರುತ್ತದೆ ಹಾಗೇ ನಿಮ್ಮ ಕಣ್ಣುಗಳೂ ಸೇಫ್.

    ಇದು magzian.com ಸ್ಪಾನ್ಸರ್ ಸ್ಟೋರಿ. ಫೇಸ್‍ಬುಕ್ ಪೇಜ್ ಲೈಕ್ ಮಾಡಿ www.facebook.com/allmagzian

  • ಬೇಸಿಗೆಯಲ್ಲಿ ಕೂಲ್ ಆಗಿರಲು ನಿಮ್ಮ ಡ್ರೆಸ್ಸಿಂಗ್ ಹೇಗಿರಬೇಕು? ಇಲ್ಲಿದೆ 8 ಟಿಪ್ಸ್

    ಬೇಸಿಗೆಯಲ್ಲಿ ಕೂಲ್ ಆಗಿರಲು ನಿಮ್ಮ ಡ್ರೆಸ್ಸಿಂಗ್ ಹೇಗಿರಬೇಕು? ಇಲ್ಲಿದೆ 8 ಟಿಪ್ಸ್

     

    ಷ್ಟು ದಿನ ಚಳಿಗಾಲವಿತ್ತು. ಯಾವುದೇ ಉಡುಪು ತೊಟ್ಟರೂ ಅದರ ಮೇಲೆ ಜ್ಯಾಕೆಟ್ ಅಥವಾ ಸ್ವೆಟರ್ ಮತ್ತು ಸ್ಟೋಲ್ ಧರಿಸಿ ಬೆಚ್ಚಗಿರುತ್ತಿದ್ರಿ. ಆದ್ರೆ ಚಳಿಗಾಲ ಕಳೆದು ಇನ್ನೇನು ಬೇಸಿಗೆ ಸಮೀಪಿಸುತ್ತಿದೆ. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಅಂದ್ರೆ ನಮ್ಮ ಆಹಾರ, ಉಡುಗೆ- ತೊಡುಗೆಯೂ ಬದಲಾಗಬೇಕು. ಬೇಸಿಗೆಯಲ್ಲಿ ಕೂಲ್ ಆಗಿರಲು ಯಾವ ರೀತಿ ಉಡುಪು ಧರಿಸಬೇಕು ಅನ್ನೋದಕ್ಕೆ ಇಲ್ಲಿದೆ 7 ಟಿಪ್ಸ್:

     

    1. ಸಡಿಲವಾದ ಉಡುಪು ಧರಿಸಿ
    ಬೇಸಿಗೆಯಲ್ಲಿ ನಿಮ್ಮ ಉಡುಪು ಸಡಿಲವಾಗಿದ್ದಷ್ಟೂ ಆರಾಮಾಗಿ ಇರಬಹುದು. ಬಿಗಿಯಾದ ಉಡುಪು ತೊಡುವುದರಿಂದ ಸೆಕೆ ಉಂಟಾಗಿ ದೇಹ ಹೆಚ್ಚು ಬೆವರುತ್ತದೆ. ಹೀಗಾಗಿ ಸಡಿಲವಾದ ಬಟ್ಟೆ ತೊಟ್ಟರೆ ಕೂಲ್ ಆಗಿ ಇರಬಹುದು. ಸ್ಲೀವ್‍ಲೆಸ್ ಧರಿಸಿ ಹೊರಗೆ ಸುತ್ತಾಡಿದ್ರೆ ಮೈ ಕೈ ಟ್ಯಾನ್ ಆಗುತ್ತದೆ. ಹೀಗಾಗಿ ಹೊರಗೆ ಓಡಾಡುವಾಗ ಫುಲ್ ಸ್ಲೀವ್ಸ್ ಇರೋ ಬಟ್ಟೆ ಧರಿಸಿದ್ರೆ ಒಳ್ಳೆಯದು. ಟೈಟ್ ಟೀ ಶರ್ಟ್ ಮತ್ತು ಟೈಟ್ ಜೀನ್ಸ್ ತೊಡುವುದರ ಬದಲು ಆರಾಮಾದ ಕುರ್ತಾ, ಧೋತಿ ಪ್ಯಾಂಟ್ ಧರಿಸಿದ್ರೆ ಕೂಲ್ ಆಗಿರಬಹುದು.

    2. ಕಾಟನ್ ಬಟ್ಟೆಗಳನ್ನ ಧರಿಸಿ
    ಪಾಲಿಸ್ಟರ್ ಮತ್ತು ರೇಯಾನ್ ಬಟ್ಟೆಗಿಂತ ಕಾಟನ್ ಉಡುಪುಗಳು ಬೇಸಿಗೆಗೆ ಸೂಕ್ತ. ಕಾಟನ್ ಬಟ್ಟೆ ಬೆವರನ್ನು ಬೇಗನೆ ಹೀರುತ್ತದೆ ಹಾಗೂ ಬೇಗನ ಒಣಗುತ್ತದೆ. ಆದ್ದರಿಂದ ಕಾಟನ್ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸಿ.

    3. ಬಟ್ಟೆಗಳನ್ನ ಸ್ವಚ್ಛವಾಗಿಟ್ಟುಕೊಳ್ಳಿ
    ಬೇಸಿಗೆಯಲ್ಲಿ ದೇಹದಲ್ಲಿ ಹೆಚ್ಚು ಬೆವರು ಬರೋದ್ರಿಂದ ಕುತ್ತಿಗೆ ಹಾಗೂ ತೋಳಿನ ಭಾಗಗಳಲ್ಲಿ ಕಲೆಗಳಾಗುತ್ತವೆ. ಹಾಗೂ ಬಟ್ಟೆಯನ್ನ ಒಂದು ಬಾರಿ ತೊಟ್ಟು ಒಗೆಯದೇ ಹಾಗೇ ಧರಿಸಿದ್ರೆ ದುರ್ವಾಸನೆ ಬರುತ್ತದೆ. ಆದ್ದರಿಂದ ಒಂದು ಬಾರಿ ಧರಿಸಿದ ಉಡುಪನ್ನು ಶುಭ್ರವಾಗಿ ಒಗೆದ ನಂತರವೇ ಮತ್ತೊಮ್ಮೆ ಧರಿಸಿ.

    4. ಬೀಡಿಂಗ್ ಹಾಗೂ ಮೆಟಲ್ ವರ್ಕ್ ಇರುವಂತಹ ಬಟ್ಟೆಗಳನ್ನ ದೂರವಿಡಿ
    ಚಂದದ ಕಸೂತಿ ಮಾಡಿರುವ ಉಡುಪು ಧರಿಸಿದ್ರೆ ಗ್ರ್ಯಾಂಡ್ ಆಗಿ ಕಣ್ತೀರ ನಿಜ. ಆದ್ರೆ ಬೇಸಿಗೆಯಲ್ಲಿ ಇಂತಹ ಉಡುಪುಗಳನ್ನ ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಬಟ್ಟೆಯ ಜೊತೆಗೆ ಮಣಿ, ಬೀಡಿಂಗ್ ಮತ್ತು ಮೆಟಲ್ ವರ್ಕ್ ಇದ್ದರೆ ಅದರ ತೂಕವೂ ಹೆಚ್ಚಾಗುತ್ತದೆ. ಕೆಲವೊಮ್ಮೆ ವರ್ಕ್ ಮಾಡಿದ ಉಡುಪು ಮೈಗೆ ಚುಚ್ಚುವುದಲ್ಲದೆ ಹೆಚ್ಚು ಬೆವರುವಂತೆ ಮಾಡುತ್ತದೆ.

    5. ಹೊರಗೆ ಸುತ್ತಡುವಾಗ ಹ್ಯಾಟ್, ಸ್ಕಾರ್ಫ್ ಮತ್ತು ಸನ್‍ಗ್ಲಾಸಸ್ ಜೊತೆಯಲ್ಲಿರಲಿ
    ಹೊರಗೆ ಸುತ್ತಲು ಹೋದಗ ಸ್ಕಾರ್ಫ್, ಸನ್‍ಗ್ಲಾಸ್ ಮತ್ತು ಟೋಪಿಯನ್ನು ಬಳಸಿ. ಮನೆಯಿಂದ ಹೊರಡುವ ಮುನ್ನ ಸನ್‍ಸ್ಕ್ರೀನ್ ಹಚ್ಚಿಕೊಳ್ಳಲು ಮರೆಯಬೇಡಿ. ಅಂಗಡಿಗೆ ಅಥವಾ ಇಲ್ಲೇ ಸ್ವಲ್ಪ ದೂರ ಹೋಗಿ ಬರುವಿರಾದ್ರೆ ಛತ್ರಿ ಬಳಸಿ ನಿಮ್ಮ ತ್ವಚೆ ಟ್ಯಾನ್ ಆಗದಂತೆ ಮುನ್ನೆಚ್ಚರಿಕೆ ವಹಿಸಿ.

    6. ಲೈನಿಂಗ್ ಇಲ್ಲದ ಉಡುಪು ಧರಿಸಿ
    ಟಾಪ್, ಕೋಟ್ ಅಥವಾ ಸ್ಕರ್ಟ್‍ಗಳಲ್ಲಿ ಲೈನಿಂಗ್ ಇದೆ ಎಂದರೆ ನೀವು ಎರಡು ಪದರದ ಬಟ್ಟೆಯನ್ನು ಧರಿಸಿರ್ತೀರ. ಅದರಿಂದ ಹೆಚ್ಚು ಬೆವರುತ್ತೀರ. ಹೀಗಾಗಿ ಲೈನಿಂಗ್ ಇಲ್ಲದಂತಹ ಬಟ್ಟೆಯನ್ನ ಧರಿಸಿ. ಕಾಟನ್ ಉಟುಪುಗಳು ಬೇಸಿಗೆಗೆ ಹೇಳಿ ಮಾಡಿಸಿದ್ದು.

    7. ತಿಳಿ ಬಣ್ಣದ ಉಡುಪನ್ನೇ ಆಯ್ಕೆ ಮಾಡಿಕೊಳ್ಳಿ
    ಗಾಢ ಬಣ್ಣದ ಉಡುಪುಗಳು ಬಿಸಿಲನ್ನ ಹೆಚ್ಚು ಹೀರಿಕೊಳ್ಳುತ್ತವೆ. ಕಪ್ಪು ಬಣ್ಣದ ಉಡುಪು ಬಿಸಿಲನ್ನ ಹೀರಿಕೊಂಡು ಹೊರಹೋಗಲು ಬಿಡುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ತಿಳಿ ಬಣ್ಣದ ಉಡುಪನ್ನ ಧರಿಸಿ. ಬಿಳಿ ಬಣ್ಣದ ಉಡುಪು ಹೆಚ್ಚು ಬಿಸಿಲನ್ನ ಹೀರಿಕೊಳ್ಳುವುದಿಲ್ಲ. ಹೀಗಾಗಿ ಬಿಳಿ, ತಿಳಿ ಗುಲಾಬಿ, ತಿಳಿ ಹಳದಿಯಂತಹ ಬಣ್ಣಗಳ ಉಡುಪನ್ನ ಧರಿಸಿ.

    8. ಆಭರಣಗಳನ್ನ ಆದಷ್ಟೂ ಕಡಿಮೆ ತೊಟ್ಟುಕೊಳ್ಳಿ
    ಬೇಸಿಗೆಯಲ್ಲಿ ಹೆಚ್ಚು ಬೆವರೋದ್ರಿಂದ ಹೆಚ್ಚಾಗಿ ಆಭರಣ ತೊಟ್ಟುಕೊಂಡರೆ ಮತ್ತೆ ಕಿರಿಕಿರಿಯಾಗುತ್ತದೆ. ಹೀಗಾಗಿ ಆಭರಣಗಳನ್ನ ಸಾಧ್ಯವಾದಷ್ಟು ಕಡಿಮೆ ತೊಟ್ಟುಕೊಳ್ಳಿ. ಲೈಟ್ ಆಗಿದ್ದಷ್ಟೂ ನೀವು ಕೂಲ್ ಆಗಿರಬಹುದು ಅನ್ನೋದನ್ನ ಮರೀಬೇಡಿ.