Tag: fashion hacks

  • ಹುಡುಗರಿಗಾಗಿ ಡ್ರೆಸ್ಸಿಂಗ್ ಹ್ಯಾಕ್ – ಟೈಲರ್ ಬಳಿ ಹೋಗದೇ ಫಿಟ್ಟಿಂಗ್ ಮಾಡಿಕೊಳ್ಳಿ

    ಹುಡುಗರಿಗಾಗಿ ಡ್ರೆಸ್ಸಿಂಗ್ ಹ್ಯಾಕ್ – ಟೈಲರ್ ಬಳಿ ಹೋಗದೇ ಫಿಟ್ಟಿಂಗ್ ಮಾಡಿಕೊಳ್ಳಿ

    ನೀವು ಈಗಷ್ಟೆ ಬಟ್ಟೆ ಖರೀದಿ ಮಾಡಿದ್ದೀರಾ? ನಿಮ್ಮ ಹೊಸ ಬಟ್ಟೆ ನಿಮ್ಮ ಸೈಜ್‌ಗೆ ಹೊಂದಿಕೊಳ್ಳುತ್ತಿಲ್ಲವೆ? ಅಥವಾ ನಿಮ್ಮ ಹಳೆ ಬಟ್ಟೆಗಳೇ ಕೊನೆ ಕ್ಷಣದಲ್ಲಿ ಕೈ ಕೊಡುತ್ತಿದೆಯೆ? ಇಂತಹ ಸನ್ನಿವೇಶದಲ್ಲಿ ನಿಮ್ಮ ಬಳಿ ಟೈಲರ್ ಬಳಿ ಹೋಗುವಷ್ಟು ಸಮಯ ಇಲ್ಲವಾದಲ್ಲಿ ಇಲ್ಲಿರುವ ಕೆಲವು ಡ್ರೆಸ್ಸಿಂಗ್ ಹ್ಯಾಕ್‌ಗಳು ಕೊನೇ ಕ್ಷಣದಲ್ಲಿ ಖಂಡಿತವಾಗಿಯೂ ನಿಮ್ಮ ಸಹಾಯಕ್ಕೆ ಬರುತ್ತದೆ.

    ಪ್ಯಾಂಟ್ ಲೆಂತ್ ಹ್ಯಾಕ್:
    ನಿಮ್ಮಪ್ಯಾಂಟ್ ಆಂಕಲ್ ಗಿಂತ ಉದ್ದ ವಾಗಿದ್ದರೆ ಅದು ಖಂಡಿತವಾಗಿಯೂ ನಿಮಗೆ ಅಂದವಾಗಿ ತೋರುವುದಿಲ್ಲ. ನಿಮ್ಮ ಹೊಸ ಪ್ಯಾಂಟ್ ಅರ್ಜೆಂಟ್ ಆಗಿ ಆಲ್ಟರ್ ಆಗಬೇಕಿದ್ದರೆ ಹೀಗೆ ಮಾಡಿ.

    ನಿಮಗೆ ಈ ಹ್ಯಾಕ್‌ನಲ್ಲಿ ಅಗತ್ಯ ಬೀಳುವುದು ಕೇವಲ ಎರಡು ರಬ್ಬರ್ ಬ್ಯಾಂಡ್‌ಗಳು. ನೀವು ಪ್ಯಾಂಟ್ ಧರಿಸಿರುವಾಗಲೇ ಆಂಕಲ್‌ನ ಕೊನೆಯಲ್ಲಿ ರಬ್ಬರ್ ಬ್ಯಾಂಡ್ ಅನ್ನು ಪ್ಯಾಂಟ್‌ಗೆ ಬಂಧಿಸಿ. ಹೆಚ್ಚಿಗೆ ಉದ್ದದ ಭಾಗವನ್ನು ಮಡಿಕೆಯಾಗಿ ಒಳ ಭಾಗದೆಡೆ ಮಡಚಿ. ರಬ್ಬರ್ ಬ್ಯಾಂಡ್ ಹೊರ ಭಾಗದಲ್ಲಿ ತೋರುವಂತಿರಬಾರದು. ಎರಡೂ ಕಾಲುಗಳ ಲೆಂತ್ ಅನ್ನು ಮಡಚಿದರೆ ಆಯ್ತು. ನಿಮ್ಮ ಪ್ಯಾಂಟ್‌ಅನ್ನು ಪರ್ಫೆಕ್ಟ್ ಆಗಿ ಆಂಕಲ್ ಲೆಂತ್‌ನಲ್ಲಿ ಈ ರೀತಿಯಾಗಿ ನಿಲ್ಲಿಸಬಹುದು. ಇದನ್ನೂ ಓದಿ: ಮಹಿಳೆಯರು ಚಳಿಗಾಲದಲ್ಲಿ ಧರಿಸಬಹುದಾದ 5 ಸ್ಟೈಲಿಶ್ ಕ್ಯಾಪ್‍ಗಳು

    ಓವರ್ ಸೈಸ್ ಶರ್ಟ್ ಅನ್ನು ಪರ್ಫೆಕ್ಟ್ ಫಿಟ್ ಮಾಡಿ:
    ಇತ್ತೀಚೆಗೆ ಓವರ್ ಸೈಸ್ ಟಿ-ಶಟ್‌ಗಳ ಟ್ರೆಂಡ್ ನಡೆಯುತ್ತಿದ್ದರೂ ಪರ್ಫೆಕ್ಟ್ ಫಿಟ್‌ಗಳ ಫ್ಯಾಶನ್ ಎಂದಿಗೂ ಹಳೆಯದಾಗುವುದಿಲ್ಲ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು. ಓವರ್ ಸೈಸ್ ಶರ್ಟ್ಅನ್ನು ಪರ್ಫೆಕ್ಟ್ ಫಿಟ್ ಮಾಡಲು ಒಂದು ಒಳ್ಳೆಯ ಉಪಾಯ ಅದರ ಸ್ಲೀವ್ಸ್ ಅನ್ನು ಚಿಕ್ಕದಾಗಿ ಮಾಡುವುದು. ನಿಮ್ಮ ಶರ್ಟ್‌ನ ಸ್ಲೀವ್ಸ್ ಉದ್ದವಾಗಿದ್ದರೆ ಅದನ್ನು ಮಡಿಕೆಗಳಾಗಿ ಹೊರಭಾಗದಲ್ಲೇ ಮಡಚಿ. ಅದು ಸರಿಯಾಗಿ ಕೂರುತ್ತಿಲ್ಲ ಎಂಬ ಸಮಸ್ಯೆ ಎದುರಾದರೆ, ಮಡಿಕೆಯಾಗಿ ಮಡಚಿದ ರೀತಿಯಲ್ಲೇ ಒಂದೆರಡು ಬಾರಿ ಐರನ್ ಮಾಡಿ. ಈಗ ನಿಮ್ಮ ಶರ್ಟ್ ಪರ್ಫೆಕ್ಟ್ ಫಿಟ್ ಇಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಸಣ್ಣದಾಗಿ ಕಾಣಿಸುತ್ತದೆ.

    ಲೂಸ್ ಜೀನ್ಸ್ ಟೈಟ್ ಮಾಡುವ ಹ್ಯಾಕ್:
    ನಿಮ್ಮ ಜೀನ್ಸ್ ಲೂಸ್ ಆಗಿದ್ದರೆ, ನಿಮ್ಮ ಸೊಂಟದಲ್ಲಿ ಅದು ಕೂರುತ್ತಿಲ್ಲವೆಂದಾದರೆ ಹೀಗೆ ಮಾಡಿ. ಜೀನ್ಸ್‌ ವೆಸ್ಟ್ ಬಟನ್  ಹಿಂದಿನ ಬೆಲ್ಟ್ ಲೂಪ್‌ಗೆ ಸಿಕ್ಕಿಸಿ ನಂತರ ಹುಕ್ ಹೋಲ್‌ಗೆ ಬಂಧಿಸಿ. ಈಗ ಲೂಸ್ ಪ್ಯಾಂಟ್ ಟೈಟ್ ಆಗಿರುತ್ತದೆ. ಆದರೆ ಅದರ ಲುಕ್ ಹಾಳಾಯ್ತು ಎಂದು ನಿಮಗೆ ಎನಿಸಿದರೆ ಔಟ್ ಶರ್ಟ್ ಮಾಡಿ. ಇದರಿಂದ ನೀವು ಹ್ಯಾಕ್ ಬಳಸಿರುವ ಸಂಗತಿ ಯಾರಿಗೂ ತಿಳಿಯುವುದಿಲ್ಲ. ಇದನ್ನೂ ಓದಿ: ಯೋಗ ಸಂದೇಶದ ಮೂಲಕ ಹೊಸ ವರ್ಷ ಬರಮಾಡಿಕೊಂಡ ವಿದ್ಯಾರ್ಥಿಗಳು

    ಟೈಟ್ ಜೀನ್ಸ್ ಪರ್ಫೆಕ್ಟ್ ಫಿಟ್ ಮಾಡಿ:
    ನಿಮ್ಮ ಜೀನ್ಸ್ ಟೈಟ್ ಆಗಿದ್ದರೆ, ಪ್ಯಾಂಟ್‌ನ ಬಕ್ಕಲ್ ಹೋಲ್‌ಗೆ ಸಿಕ್ಕಿಸಲು ಕಷ್ಟವಾಗುತ್ತಿದ್ದರೆ, ಒಂದು ರಬ್ಬರ್ ಬ್ಯಾಂಡ್ ತೆಗೆದುಕೊಂಡು ಹೋಲ್‌ಗೆ ಗಂಟು ಹಾಕಿ ನಂತರ ಬಟನ್‌ಗೆ ಸಿಕ್ಕಿಸಿ. ರಬ್ಬರ್ ಬ್ಯಾಂಡ್ ಕಾಣಿಸದಂತೆ ನಂತರದಲ್ಲಿ ನೀವು ಬೆಲ್ಟ್ ಬಳಸಬಹುದು.

    ಕಾಲರ್‌ಅನ್ನು ಪರ್ಫೆಕ್ಟ್ ಆಗಿ ಕೂರಿಸಿ:
    ಶರ್ಟ್ ಅಥವಾ ಪೋಲೋ ಟಿ-ಶರ್ಟ್‌ನ ಕಾಲರ್ ಸರಿಯಾಗಿಕೂರದೇ ಇರುವುದು ಪ್ರತಿ ಹುಡುಗರೂ ಎದುರಿಸುವ ಒಂದು ಸಾಮಾನ್ಯ ಸಮಸ್ಯೆ. ಈ ಸಂದರ್ಭದಲ್ಲಿ ನೀವು ಡಬಲ್ ಸೈಡ್ ಸ್ಟಿಕ್ಕಿ ಟೇಪ್ ಬಳಸಿ ಅದನ್ನು ಸರಿಯಾಗಿ ಕೂರುವಂತೆ ಮಾಡಬಹುದು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಮತ್ತೆ RRR ಚಿತ್ರ ಬಿಡುಗಡೆ ಮುಂದೂಡಿಕೆ?

    ಒಂದು ವೇಳೆ ನಿಮ್ಮ ಬಳಿ ಡಬಲ್ ಸೈಡ್ ಟೇಪ್ ಇಲ್ಲವೆಂದರೆ, ಅದನ್ನು ಖರೀದಿಸುವ ಸಮಯವೂ ನಿಮ್ಮಲ್ಲಿ ಇಲ್ಲ ಎಂದಾದರೆ, ಒಂದು ಉಪಾಯವಿದೆ. ಶರ್ಟ್‌ನ ಎಲ್ಲಾ ಬಟನ್‌ಗಳನ್ನೂ ಬಂಧಿಸಿ (ಬಟನ್ ಅಪ್ ಮಾಡಿ). ನಿಮ್ಮ ಕಾಲರ್ ತನ್ನಷ್ಟಕೆ ನೀಟ್‌ಆಗಿ ಕೂರುತ್ತದೆ.

  • ಎಲ್ಲಾ ಹುಡುಗಿಯರಿಗೆ ತಿಳಿದಿರಲೇಬೇಕಾದ 7 ಫ್ಯಾಶನ್ ಹ್ಯಾಕ್ಸ್

    ಎಲ್ಲಾ ಹುಡುಗಿಯರಿಗೆ ತಿಳಿದಿರಲೇಬೇಕಾದ 7 ಫ್ಯಾಶನ್ ಹ್ಯಾಕ್ಸ್

    ಚೆನ್ನಾಗಿ ಸಿಂಗರಿಸಿಕೊಂಡು ಅಂದವಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯವಾಗಿ ಎಲ್ಲಾ ಹುಡುಗಿಯರಿಗೂ ಇರುತ್ತೆ. ಆದ್ರೆ ರೆಡಿಯಾಗುವಾಗ ಕೊನೇ ಘಳಿಗೆಯಲ್ಲಿ ಏನಾದ್ರೂ ಎಡವಟ್ಟಾದ್ರೆ ಅದನ್ನ ಮ್ಯಾನೇಜ್ ಮಾಡೋಕೂ ಬರ್ಬೇಕು. ಅಂತಹ ಸಮಯದಲ್ಲಿ ನಿಮಗೆ ಈ ಹ್ಯಾಕ್‍ಗಳು ನೆರವಾಗಬಹುದು. ಏನದು ಹ್ಯಾಕ್ಸ್ ಅಂದ್ರಾ? ಮುಂದೆ ಓದಿ

    1. ಜೀನ್ಸ್ ಝಿಪ್ ಲೂಸ್ ಆಗಿದ್ದು ಪದೇ ಪದೇ ಕೆಳಗೆ ಜಾರ್ತಿದ್ರೆ ಅದಕ್ಕಿಂತ ಮುಜುಗರ ಮತ್ತೊಂದಿಲ್ಲ. ಹಾಗಂತ ಆ ಜೀನ್ಸ್ ಹಾಕದೇ ಮೂಲೆಯಲ್ಲಿ ಇಡೋಕಾಗಲ್ಲ. ಇದಕ್ಕಾಗಿ ಇಲ್ಲಿದೆ ಸೂಪರ್ ಹ್ಯಾಕ್. ಒಂದು ಕೀಚೈನ್‍ನ ರಿಂಗ್ ತೆಗೆದುಕೊಂಡು ಅದನ್ನ ಝಿಪ್‍ನ ತುದಿಗೆ ಹಾಕಿ. ಝಿಪ್ ಮೇಲಕ್ಕೆಳೆದು ಪ್ಯಾಂಟಿನ ಬಟನ್ ಮೇಲೆ ರಿಂಗ್ ಕೂರುವಂತೆ ಮಾಡಿ ನಂತರ ಬಟನ್ ಹಾಕಿದ್ರೆ ಝಿಪ್ ಜಾರೋದಿಲ್ಲ.

    2. ಶರ್ಟ್‍ನ ಗುಂಡಿಯಿಂದ ದಾರ ಸ್ವಲ್ಪ ಸ್ವಲ್ಪವೇ ಕಿತ್ತು ಬರುತ್ತಿದ್ರೆ ಟ್ರಾನ್ಸ್‍ಪರೆಂಟ್ ನೇಲ್‍ಪಾಲಿಶ್(ಯಾವುದೇ ಬಣ್ಣವಿಲ್ಲದ ತಿಳಿಯಾದ ನೇಲ್‍ಪಾಲಿಶ್) ಹಾಕಿ ಒಣಗಿಸಿ ನಂತರ ಶರ್ಟ್ ಧರಿಸಿ.

    3. ಶೂ ತುದಿಯ ಬಿಳಿ ಭಾಗದ ಮೇಲೆ ಮಣ್ಣು ಮೆತ್ತಿಕೊಂಡಿದ್ದರೆ ಇಡೀ ಶೂವನ್ನ ನೀರಿನಿಂದ ತೊಳೆಯೋ ಬದಲು ಟೂತ್‍ಪೇಸ್ಟ್ ಬಳಸಿ ತೆಗೆಯಬಹುದು. ಮೊದಲಿಗೆ ಬಟ್ಟೆ ಅಥವಾ ಟಿಶ್ಯೂನಿಂದ ಮಣ್ಣನ್ನ ತೆಗೆಯಿರಿ. ನಂತರ ಒಂದು ಟೂತ್‍ಬ್ರಷ್‍ಗೆ ಪೇಸ್ಟ್ ಹಾಕಿ ಶೂ ಮೇಲೆ ಉಜ್ಜಿ ನಂತರ ಒಣಬಟ್ಟೆಯಿಂದ ಒರೆಸಿದ್ರೆ ನಿಮ್ಮ ಶೂ ಫಳಫಳಿಸುತ್ತೆ.

    4. ಕಪ್ಪು ಜೀನ್ಸ್ ಅಥವಾ ಪ್ಯಾಂಟ್ ಮೇಲೆ ನೂಲುಗಳು ಅಂಟಿಕೊಂಡಿದ್ದರೆ ಅದನ್ನ ತೆಗೆಯಲು ಸೆಲ್ಲೋ ಟೇಪ್ ಬಳಸಿ. ಸ್ವಲ್ಪ ಟೇಪ್ ಕಟ್ ಮಾಡಿಕೊಂಡು ಅಂಗೈಗೆ ಸುತ್ತಿಕೊಂಡು ಪ್ಯಾಂಟ್ ಮೇಲೆ ಒತ್ತಿದರೆ ನೂಲು ಟೇಪ್‍ಗೆ ಅಂಟಿಕೊಳ್ಳುತ್ತದೆ. ಹೀಗೆ ನೂಲು ಇರುವ ಕಡೆಯಲ್ಲೆಲ್ಲಾ ಪ್ರೆಸ್ ಮಾಡಿ ಪ್ಯಾಂಟ್ ಮೇಲೆ ಅಂಟಿಕೊಂಡ ನೂಲನ್ನು ತೆಗೆಯಬಹುದು.

    5. ಸ್ವೆಟರ್‍ಗಳು ಸ್ವಲ್ಪ ಹಳೆಯದಾದಂತೆ ಅದರ ಮೇಲಿನ ನೂಲು ಸಣ್ಣ ಸಣ್ಣ ಉಂಡೆಗಳಂತೆ ಅಂಟಿಕೊಂಡು ಸ್ವೆಟರ್‍ನ ಅಂದವನ್ನ ಕಡೆಸುತ್ತದೆ. ಇದನ್ನ ತೆಗೆಯಬೇಕಾದ್ರೆ ಶೇವಿಂಗ್ ರೇಜರ್ ಬಳಸಿ. ರೇಜರ್‍ನಿಂದ ಒಂದೆರಡು ಬಾರಿ ಸ್ವೆಟರ್ ಮೇಲೆ ಶೇವ್ ಮಾಡಿದ್ರೆ ಆಯ್ತು.

    6. ಜೀನ್ಸ್ ಅಥವಾ ಯಾವುದೇ ಪ್ಯಾಂಟ್ ಕೊಳ್ಳಲು ಹೋದಾಗ ಅದು ನಿಮಗೆ ಫಿಟ್ ಆಗುತ್ತದೋ ಇಲ್ಲವೋ ಎಂದು ಟ್ರೈ ಮಾಡಲು ಸಮಯವಿಲ್ಲ ಅಂತಾದ್ರೆ ಇಲ್ಲಿದೆ ಐಡಿಯಾ. ಪ್ಯಾಂಟನ್ನ ಹಿಂದಿನಿಂದ ನಿಮ್ಮ ಕುತ್ತಿಗೆಯ ಸುತ್ತ ಸುತ್ತಿ ಹಿದಿಡುಕೊಳ್ಳಿ. ಕುತ್ತಿಗೆಯ ಮುಂಭಾಗದಲ್ಲಿ ಪ್ಯಾಂಟ್‍ನ ಎರಡೂ ತುದಿ ಟಚ್ ಆದ್ರೆ ಆ ಪ್ಯಾಂಟ್ ನಿಮಗೆ ಫಿಟ್ ಆಗುತ್ತದೆ. ತುದಿಗಳು ಟಚ್ ಆಗದಿದ್ರೆ ಚಿಕ್ಕದು ಅಥವಾ ಎರಡೂ ತುದಿ ಒಂದರ ಮೇಲೊಂದು ಕುರುವಷ್ಟು ಉದ್ದವಿದ್ರೆ ಆ ಪ್ಯಾಂಟ್ ನಿಮಗೆ ದೊಡ್ಡದಾಗುತ್ತದೆ ಎಂದರ್ಥ.

    7. ಜ್ಯಾಕೆಟ್, ಜೀನ್ಸ್ ಅಥವಾ ಬ್ಯಾಗಿನ ಝಿಪ್ ಹಾಕಲು ಕಷ್ಟವಾಗ್ತಿದ್ರೆ ಝಿಪ್‍ನ ಎರಡೂ ಬದಿಗೆ ಕ್ರೆಯಾನ್, ಕ್ಯಾಂಡಲ್ ಅಥವಾ ಪೆನ್ಸಿಲ್‍ನಿಂದ ಉಜ್ಜಿ. ನಂತರ ಝಿಪ್ ಸಲೀಸಾಗಿ ಎಳೆಯಬಹುದು.