Tag: farzi cafe

  • ನಲಪಾಡ್ ಹಲ್ಲೆ ಪ್ರಕರಣ- ಯುಬಿ ಸಿಟಿಯ ಫರ್ಜಿ ಕೆಫೆಗೆ ರೀ ಓಪನ್ ಭಾಗ್ಯ

    ನಲಪಾಡ್ ಹಲ್ಲೆ ಪ್ರಕರಣ- ಯುಬಿ ಸಿಟಿಯ ಫರ್ಜಿ ಕೆಫೆಗೆ ರೀ ಓಪನ್ ಭಾಗ್ಯ

    ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್, ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಯುಬಿ ಸಿಟಿಯ ಫರ್ಜಿ ಕೆಫೆಯ ರೆಸ್ಟೋರೆಂಟ್ ರೀ ಓಪನ್ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ.

    ನಲಪಾಡ್ ಪ್ರಕರಣದ ವಿವಾದಿತ ಕೇಂದ್ರಬಿಂದು ಯುಬಿ ಸಿಟಿಯ ಫರ್ಜಿ ಕೆಫೆ ರೀ ಓಪನ್ ಮಾಡಲು ಕಬ್ಬನ್ ಪಾರ್ಕ್ ಪೋಲೀಸರು ಅನುಮತಿ ನೀಡಿದ್ದು, ಹಲವು ಷರತ್ತುಗಳನ್ನು ವಿಧಿಸಿದ್ದಾರೆ.

    ಷರತ್ತುಗಳು ಈ ಕೆಳಗಿನಂತಿವೆ.
    1. ಕೆಫೆಯ ಒಳಗೆ ಧೂಮಪಾನಕ್ಕೆ ಅವಕಾಶ ನೀಡಬಾರದು.
    2. ಎಷ್ಟು ಟೇಬಲ್‍ಗಳು ಇರುತ್ತವೆಯೋ ಅದಕ್ಕಿಂತ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಹೆಚ್ಚಿಗೆ ಒಳಗೆ ಇರುವಂತಿಲ್ಲ.
    3. ಗಲಾಟೆಗಳಾದಂತಹ ಸಂದರ್ಭದಲ್ಲಿ ಕೂಡಲೇ ಪೋಲೀಸರಿಗೆ ಮಾಹಿತಿ ನೀಡಬೇಕು.

    ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆಯಾದ ಬಳಿಕ ಪೊಲೀಸರು ಕೆಫೆಯನ್ನು ಕ್ಲೋಸ್ ಮಾಡಿದ್ದರು. ಸದ್ಯ ಪೊಲೀಸರು ಕೆಲವು ಷರತ್ತುಗಳನ್ನು ವಿಧಿಸಿ ಕೆಫೆ ತೆರೆಯಲು ಅನುಮತಿ ನೀಡಿದ್ದಾರೆ.

    ಏನಿದು ಪ್ರಕರಣ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದನು. ಫೆಬ್ರವರಿ 17ರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

  • ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಬೆಂಗಳೂರು: ಇದು ರೌಡಿ ನಲಪಾಡ್ ರಾಕ್ಷಸತ್ವದ ಘೋರ ಕಥನ. ವಿದ್ವತ್ ಮೇಲೆ ಯಾವ್ಯಾವ ರೀತಿ ದಾಳಿ ನಡೆಯಿತು, ಆಸ್ಪತ್ರೆಯಲ್ಲೂ ನಲಪಾಡ್ ಗ್ಯಾಂಗ್ ಅಬ್ಬರಿಸಿದ್ದು ಹೇಗೆ ಹಾಗೂ ನಲಪಾಡ್ ದಾಳಿಯ ಬಗ್ಗೆ ವಿದ್ವತ್ ಪಬ್ಲಿಕ್ ಟಿವಿಗೆ ತಿಳಿಸಿದ ಎಕ್ಸ್ ಕ್ಲೂಸೀವ್ ಮಾತು ಇಲ್ಲಿದೆ. ಇದನ್ನೂ ಓದಿ: Exclusive ಹ್ಯಾರಿಸ್ ಮಗನ ಮತ್ತೊಂದು ಕರ್ಮಕಾಂಡ ಬಿಚ್ಚಿಟ್ಟ ಮಹಿಳೆ

    ಫರ್ಜಿ ಕೆಫೆಯಲ್ಲಿ ಕಾಲು ಚಾಚಿಕೊಂಡು ಕುಳಿತಿದ್ದಕ್ಕೆ ಕ್ಷಮೆ ಕೋರುವಂತೆ ಹೇಳಿದರು. ತಪ್ಪಿಲ್ಲದ ಕಾರಣಕ್ಕೆ ನಾನು ಆರಂಭದಲ್ಲಿ ನಲಪಾಡ್ ಮಾತು ಕೇಳಲಿಲ್ಲ. ಎಂಎಲ್‍ಎ ಹ್ಯಾರಿಸ್ ಮಗನಿಗೇ ಎದುರು ಮಾತನಾಡುತ್ತೀಯಾ ಎನ್ನುತ್ತಾ ಅಬ್ಬರಿಸಿದ್ರು. ಏಕಾಏಕಿ ಹೊಡೆಯಲು ಶುರು ಮಾಡಿದ್ದರಿಂದ sorry.. sorry.. ಎಂದೆ. ಆದರೆ sorry ಎಂದರೂ ಕೂಡ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದರು. ನಲಪಾಡ್ ಜತೆ ಸುಮಾರು 15 ಸ್ನೇಹಿತರು ಇದ್ದರು. ಅವರಲ್ಲಿ ಆರೇಳು ಮಂದಿ ಬೌನ್ಸರ್‍ಗಳು. ಎಲ್ಲರೂ ಸೇರಿಕೊಂಡು ಮನಸೋ ಇಚ್ಛೆ ಹೊಡೆದರು. ಮೈಮೇಲೆ ಕುರ್ಚಿಗಳನ್ನು ಎಸೆದರು, `ಕ್ಷಮೆ ಕೇಳು’ ಎಂದರು. ಕ್ಷಮೆ ಯಾಚಿಸಿದರೂ ಹೊಡೆದರು ಎಂದು ವಿದ್ವತ್ ಹೇಳಿದ್ದಾರೆ. ಇದನ್ನೂ ಓದಿ: ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!

    ನಲಪಾಡ್ ಗ್ಯಾಂಗ್ ಫರ್ಜಿ ಕೆಫೆಯಲ್ಲಿ ಮಾತ್ರ ಅಬ್ಬರಿಸಿರಲಿಲ್ಲ. ಚಿಕಿತ್ಸೆಗಾಗಿ ಮಲ್ಯಾ ಆಸ್ಪತ್ರೆಗೆ ದಾಖಲಾದ್ರೂ ಬಿಟ್ಟಿರಲಿಲ್ಲ ಆ ಗ್ಯಾಂಗ್. ವಿದ್ವತ್‍ಗೆ ನರ್ಸ್‍ವೊಬ್ಬರು ಪ್ರಾಥಮಿಕ ಚಿಕಿತ್ಸೆ ನೀಡುವ ವೇಳೆ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿತ್ತು. ಎರಡು ಕಾರುಗಳಲ್ಲಿ ಆಸ್ಪತ್ರೆಗೆ ನುಗ್ಗಿದ ರೌಡಿ ನಲಪಾಡ್ ಹಾಗೂ ಸಹಚರರು, ಆಸ್ಪತ್ರೆ ಕೊಠಡಿಯ ಬಾಗಿಲು ಒದ್ದುಕೊಂಡೇ ಒಳನುಗ್ಗಿ ಪುನಃ ವಿದ್ವತ್ ಮೇಲೆ ಹಲ್ಲೆಗೆ ಯತ್ನ ನಡೆಸಿದ್ರು. ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

    ರಕ್ಷಣೆಗೆ ಹೋದ ವಿದ್ವತ್ ಸೋದರನ ಮೇಲೂ ನಲಪಾಡ್ ಹಲ್ಲೆ ನಡೆಸಿ, ಕೊರಳಪಟ್ಟಿ ಹರಿದಿದ್ದ. ಈ ವೇಳೆ ಗುರು ರಾಜ್‍ಕುಮಾರ್ ಅವರನ್ನ ನೋಡಿ ನಲಪಾಡ್ ಆಸ್ಪತ್ರೆಯಿಂದ ಹೊರಹೋಗಿದ್ದ. ಗುರು ರಾಜ್‍ಕುಮಾರ್ ಮಲ್ಯ ಆಸ್ಪತ್ರೆಗೆ ಬರದಿದ್ದರೆ, ನನ್ನ ತಮ್ಮನನ್ನು ಕೊಂದುಬಿಡುತ್ತಿದ್ರು ಎಂದು ಸಾತ್ವಿಕ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!

    ಇದನ್ನೂ ಓದಿ: ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ 

    https://www.youtube.com/watch?v=dy5Sl50Qi3k

    https://www.youtube.com/watch?v=IHwUP3mtZXQ

    ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ