Tag: Farooq

  • ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅದೇನು ಮೆಕ್ಕಾ-ಮದೀನಾನಾ – ಮುತಾಲಿಕ್‌ ಪ್ರಶ್ನೆ

    ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅದೇನು ಮೆಕ್ಕಾ-ಮದೀನಾನಾ – ಮುತಾಲಿಕ್‌ ಪ್ರಶ್ನೆ

    ಹುಬ್ಬಳ್ಳಿ: ವಿಧಾನಸೌಧದಲ್ಲಿ (Vidhana Soudha) ನಮಾಜ್‌ ಮಾಡಲು ಅವಕಾಶ ಕೇಳೋದಕ್ಕೆ ಅದೇನು ಮೆಕ್ಕಾ-ಮದೀನಾನಾ? ನಮಾಜ್‌ ಮಾಡೋಕೆ ಬೇರೆ ಕಡೆ ಸ್ಥಳ ಇಲ್ವಾ? ಎಲ್ಲಾ ಕಡೆ ಅನಧಿಕೃತವಾಗಿ ಮಸೀದಿಗಳನ್ನ ಕಟ್ಟಿದ್ದೀರಲ್ಲಾ ಅಲ್ಲಿ ಹೋಗಿ ನಮಾಜ್‌ (Namaz) ಮಾಡಿ.. ಇಂತಹ ಮನಸ್ಥಿತಿಗಳೇ ಕೋಮುವಾದಕ್ಕೆ ಕಾರಣವಾಗ್ತಿದೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿ ಕಾರಿದ್ದಾರೆ.

    ಹುಬ್ಬಳ್ಳಿಯಲ್ಲಿಂದು (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ಮತ್ತು ಹಿಂದೂಪರ ಸಂಘಟನೆಗಳಿಗೆ ಭಯದ ವಾತಾವರಣವನ್ನ ಕಾಂಗ್ರೆಸ್ ಸರ್ಕಾರ (Congress Government) ನಿರ್ಮಾಣ ಮಾಡಿದೆ. ಇನ್ನೂ ಒಂದು ವರ್ಷದಲ್ಲಿ ನಮ್ಮ ಸಂಘಟನೆ ಯಾವ ಪ್ರಮಾಣದಲ್ಲಿ ಬೆಳೆಯುತ್ತೆ ನೋಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ನಮಾಜ್‍ಗೆ ಅನುಮತಿ ಕೇಳಿದ ಜೆಡಿಎಸ್ ಸದಸ್ಯ

    ಪತ್ರಿ ಗ್ರಾಮದಲ್ಲೂ ಸಂಘಟನೆ ಬಲವಾಗುತ್ತದೆ, ಒಬ್ಬ ಹಿಂದೂವನ್ನ ಮುಟ್ಟೋದಿರಲಿ ತಂಟೆಗೆ ಬರೋಕು ಯೋಚನೆ ಮಾಡ್ಬೇಕು. ಜೈನ ಮುನಿಗಳ ಹತ್ಯೆ ಮಾಡಿದವರ ಮೇಲೆ ಯೋಗಿ ಮಾದರಿ ಕ್ರಮ ತೆಗೆದುಕೊಳ್ಳಬೇಕು. ಒಂದು ವರ್ಷದಲ್ಲಿ ಅವರು ಹೊರಗೆ ಬರ್ತಾರೆ ಉತ್ತರ ಪ್ರದೇಶ ಮಾದರಿಯಲ್ಲಿ ಮೂರು ಆರೋಪಿಗಳ ಮನೆ ಮೇಲೆ ಬುಲ್ಡೋಜರ್ ಹತ್ತಿಸಿದ್ರೆ ಎಲ್ಲವೂ ಸರಿಯಾಗುತ್ತೆ ಎಂದು ಹೇಳಿದ್ದಾರೆ.

    ಸೋಮವಾರ ವಿಧಾನ ಪರಿಷತ್ತಿನಲ್ಲಿ ನಡೆದ ಅಧಿವೇಶನದಲ್ಲಿ ಜೆಡಿಎಸ್ ಪರಿಷತ್ ಸದಸ್ಯ ಫಾರೂಕ್, ವಿಧಾನಸೌಧದಲ್ಲಿ ನಮಗೆ ನಮಾಜ್‍ಗೆ ಕೊಠಡಿ ವ್ಯವಸ್ಥೆ ಮಾಡಿಕೊಡಿ ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಭೂಕುಸಿತದಲ್ಲಿ ಇಡೀ ಕುಟುಂಬವನ್ನೇ ಕಳೆದುಕೊಂಡ; ಹೆಂಡತಿ-ಮಕ್ಕಳ ನೆನಪಿಗಾಗಿ ಬಡಜನರಿಗೆ ಮನೆ ನಿರ್ಮಿಸಿಕೊಟ್ಟ ಕುಟುಂಬ ಪ್ರೇಮಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನಸೌಧದಲ್ಲಿ ನಮಾಜ್‍ಗೆ ಅನುಮತಿ ಕೇಳಿದ ಜೆಡಿಎಸ್ ಸದಸ್ಯ

    ವಿಧಾನಸೌಧದಲ್ಲಿ ನಮಾಜ್‍ಗೆ ಅನುಮತಿ ಕೇಳಿದ ಜೆಡಿಎಸ್ ಸದಸ್ಯ

    ಬೆಂಗಳೂರು: ವಿಧಾನಸೌಧದಲ್ಲಿ (Vidhanasoudha) ನಮಾಜ್ ಮಾಡಲು ಅವಕಾಶ ಮಾಡಿಕೊಡಿ ಎಂದು ಜೆಡಿಎಸ್ ಪರಿಷತ್ (JDS Parishad) ಸದಸ್ಯ ಫಾರೂಕ್ (Farooq) ಒತ್ತಾಯ ಮಾಡಿದ್ದಾರೆ.

    ವಿಧಾನಸೌಧದಲ್ಲಿ ನಮಗೆ ನಮಾಜ್‍ಗೆ ಕೊಠಡಿ ವ್ಯವಸ್ಥೆ ಮಾಡಿಕೊಡಿ ಎಂದು ವಿಧಾನ ಪರಿಷತ್‍ನಲ್ಲಿ ಸಭಾಪತಿಗಳ ಗಮನಕ್ಕೆ ತಂದಿದ್ದಾರೆ.

    ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ ಪಾಟೀಲ್, ಸಭಾದ್ಯಕ್ಷರ ಕೊಠಡಿಯಲ್ಲಿ ಸಭೆ ಕರೆದ ವೇಳೆ ನಾಯಕರ ಮಾತುಗಳನ್ನು ಕೇಳಿ, ಅಧ್ಯಕ್ಷರು ಏನು ಅಪೇಕ್ಷೆ ಮಾಡುತ್ತಾರೆ ಎಂದು ಒಂದು ನಿರ್ಣಯ ಮಾಡಲು ಸರ್ಕಾರ ತೀರ್ಮಾನಿಸುತ್ತದೆ ಎಂದರು. ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ ಚರ್ಚಿಸಿ ತೀರ್ಮಾನ: ಮಧು ಬಂಗಾರಪ್ಪ

    ಇತ್ತ ಶಾಲಾ ಪಠ್ಯದಲ್ಲಿ ಜಾತ್ಯಾತೀತ ಪಠ್ಯ ತರಬೇಕು ಎಂದ ಅಬ್ದುಲ್ ಜಬ್ಬರ್ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಎಂಎಲ್‍ಸಿ ನಾರಾಯಣಸ್ವಾಮಿ. ಯಾರು ಜಾತ್ಯಾತೀತ ಪಠ್ಯ ತಂದಿದ್ದರು. ಯಾರು ಏನು ಸೇರಿಸಿದ್ರು ಅಂತ ಚರ್ಚೆ ಆಗಲಿ ಎಂದು ಒತ್ತಾಯಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ಜಬ್ಬರ್, ಜಾತ್ಯಾತೀತ ಅಂದ್ರೆ ನಿಮಗೆ ಯಾಕೆ ಚುರ್ ಅನ್ನುತ್ತೆ. ಜಾತ್ಯಾತೀತ ಕಂಡರೆ ಆಗೊಲ್ಲವಾ ಅಂದಿದ್ದಾರೆ. ಇಬ್ಬರನ್ನೂ ಸಭಾಪತಿ ಸಮಾಧಾನ ಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಅಮಿತಾಭ್ ಬಚ್ಚನ್ ಕಾರು ವಶಕ್ಕೆ

    ನಟ ಅಮಿತಾಭ್ ಬಚ್ಚನ್ ಕಾರು ವಶಕ್ಕೆ

    ಬೆಂಗಳೂರು: ಯುಬಿ ಸಿಟಿ ಬಳಿ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಸೇರಿದ ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಇಂದು ಸಂಜೆ ನಗರದ ಯುಬಿ ಸಿಟಿ ಬಳಿ ಆರ್‌ಟಿಒ ಅಧಿಕಾರಿಗಳು ಪರಿಶೀಲನೆಗೆ ಇಳಿದಿದ್ದರು. ಈ ವೇಳೆ ನಟ ಅಮಿತಾಭ್ ಹೆಸರಿನಲ್ಲಿ ನೊಂದಣಿ ಆಗಿರುವ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಪತ್ತೆಯಾಗಿತ್ತು.

    ಎರಡು ವರ್ಷದಿಂದ ಇನ್ಶುರೆನ್ಸ್ ಇಲ್ಲದೇ, ಮಹಾರಾಷ್ಟ್ರ ರಿಜಿಸ್ಟರ್ ಆಗಿರುವ ರೋಲ್ಸ್ ರಾಯ್ ಕಾರು ಇನ್ನೂ ಅಮಿತಾಭ್ ಬಚ್ಚನ್ ಹೆಸರಿನಲ್ಲೇ ಇದೆ. ಉದ್ಯಮಿ ಬಾಬು 2019 ರಲ್ಲಿ 6 ಕೋಟಿ ರೂ. ಕೊಟ್ಟು ಅಮಿತಾಭ್ ಬಚ್ಚನ್ ಬಳಿ ಈ ಖರೀದಿ ಮಾಡಿದ ವಿಚಾರ ಪರಿಶೀಲನೆ ವೇಳೆ ತಿಳಿದು ಬಂದಿದೆ. ಆದರೆ ವಾಹನದ ಎಲ್ಲಾ ದಾಖಲೆ ಗಳು ಇನ್ನೂ ಬಚ್ಚನ್ ಹೆಸರಲ್ಲೇ ಇರೋದು ಪತ್ತೆಯಾಗಿದೆ. ಇದನ್ನೂ ಓದಿ: ಕೆಜಿಎಫ್ ಟೀಂ ಅಲ್ಲ ಅದು ಫ್ಯಾಮಿಲಿ: ಶ್ರೀನಿಧಿ ಶೆಟ್ಟಿ

    ಇದೇ ವೇಳೆ ಪರಿಷತ್ ಸದಸ್ಯ ಫಾರೂಕ್ ಅವರಿಗೆ ಸೇರಿದ ಎರಡು ಐಷಾರಾಮಿ ಕಾರುಗಳು ಕೂಡ ಪತ್ತೆಯಾಗಿವೆ. ಇನ್ಶುರೆನ್ಸ್ ಇಲ್ಲದ, ಸೂಕ್ತ ದಾಖಲೆ ಇಲ್ಲದ, ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿ, ಒಂದೇ ನಂಬರ್ ನಲ್ಲಿ ಬೇರೆ ಬೇರೆ ಕಾರುಗಳು ಓಡಾಟ ಮಾಡುತ್ತಿರುವುದನ್ನು ಆರ್‌ಟಿಒ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸದ್ಯ ಕಾರ್ಯಾಚರಣೆ ಮುಂದುವರಿದಿದ್ದು ಹದಿಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

    ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್‌ ನೇತೃತ್ವದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರಾಜಣ್ಣ, ಮೋಟಾರ್‌ ವಾಹನ ನಿರೀಕ್ಷಕರಾದ ಸುಧಾಕರ್‌, ತಿಪ್ಪೇಸ್ವಾಮಿ, ವಿಶ್ವನಾಥ ಶೆಟ್ಟರ್‌, ರಂಜಿತ್‌, ರಾಜೇಶ್‌ ಮತ್ತು ರಾಜ್‌ ಕುಮಾರ್‌ ಅವರನ್ನ ಒಳಗೊಂಡ ತಂಡ ಇಂದು ಕಾರ್ಯಾಚರಣೆ ನಡೆಸಿತು.

  • ಫಾರೂಕ್ ಸಚಿವ ಸ್ಥಾನಕ್ಕೆ ಅಡ್ಡಿ ಆರೋಪ – ಸಿಎಂಗೆ ಮತ್ತೊಮ್ಮೆ ವಚನ ಭ್ರಷ್ಟತೆ ಕಳಂಕ

    ಫಾರೂಕ್ ಸಚಿವ ಸ್ಥಾನಕ್ಕೆ ಅಡ್ಡಿ ಆರೋಪ – ಸಿಎಂಗೆ ಮತ್ತೊಮ್ಮೆ ವಚನ ಭ್ರಷ್ಟತೆ ಕಳಂಕ

    – ದೇವೇಗೌಡ್ರ ಹಳೇ ಹೇಳಿಕೆ ಈಗ ವೈರಲ್

    ಬೆಂಗಳೂರು: ಮತ್ತೊಮ್ಮೆ ವಚನ ಭ್ರಷ್ಟತೆ ಆರೋಪಕ್ಕೀಡಾದ್ರಾ ಮುಖ್ಯಮಂತ್ರಿ ಅನ್ನೋ ಪ್ರಶ್ನೆಯೊಂದು ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಮೂಡಿದೆ.

    ಜೆಡಿಎಸ್ ಎಂಎಲ್‍ಸಿ ಬಿ.ಎಂ. ಫಾರೂಕ್‍ಗೆ ಸಚಿವ ಸ್ಥಾನ ಸಿಗಲ್ಲ ಎಂದು ಹೇಳಲಾಗುತ್ತಿದ್ದು, ಈ ಮೂಲಕ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಡಲು ಮುಖ್ಯಮಂತ್ರಿಗಳೇ ಅಡ್ಡಿಯಾದ್ರಾ ಅನ್ನೋ ಅನುಮಾನ ಮೂಡಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರು ಕೈಹಿಡಿಯಲಿಲ್ಲ ಎಂಬ ಸಿಟ್ಟಿದ್ದು, ಸಿಎಂ ಅವರು ಈ ಬಗ್ಗೆ ಹಲವು ಬಾರಿ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಗಳ ಹಠದಿಂದಲೇ ದೇವೇಗೌಡರು ಫಾರೂಕ್‍ಗೆ ಕೈ ಕೊಟ್ರಾ ಅನ್ನೋ ಪ್ರಶ್ನೆ ಕೂಡ ಮೂಡಿದೆ.

    ಯಾಕಂದರೆ, ಈ ದೇವೇಗೌಡರು ನಂಬಿದವರನ್ನು ಬಿಡಲ್ಲ, ಫಾರೂಕ್‍ರನ್ನ ಯು.ಟಿ ಖಾದರ್ ನಂತೆ ಮಂತ್ರಿ ಮಾಡಿ ಬೆಳೆಸುತ್ತೇನೆ ಎಂದು ಈ ಹಿಂದೆ ದೇವೇಗೌಡರು ಹೇಳಿದ್ದರು. ಕಳೆದ ವರ್ಷ ಫಾರೂಕ್‍ಗೆ ದೇವೇಗೌಡ್ರು ಕೊಟ್ಟಿದ್ದ ಭರವಸೆ ವೀಡಿಯೋ ಈಗ ವೈರಲ್ ಆಗುತ್ತಿದೆ.

    ದೇವೇಗೌಡರು ಹೇಳಿದ್ದೇನು?
    “ಈ ಸಭೆಯಲ್ಲಿ ಒಂದು ಮಾತು ಹೇಳ್ತೀನಿ. ಫಾರೂಕ್ ಅವರನ್ನು ಯು ಟಿ ಖಾದರ್ ಇರೋ ಸಚಿವ ಸ್ಥಾನದ ಜಾಗದಲ್ಲಿ ಕೂರಿಸ್ತೀನಿ. ನಾನು ಬದುಕಿರುವಾಗಲೇ ಈ ಕೆಲಸ ಮಾಡ್ತೀನಿ. ಅವರ ಆಸ್ತಿ ಎಷ್ಟಿದೆ, ಅವರ ಶ್ರೀಮಂತಿಕೆ ಎಷ್ಟಿದೆ ಅನ್ನೋದು ನಮಗೆ ಬೇಡ” ಎಂದು ಎಚ್‍ಡಿಡಿ ಹೇಳಿದ್ದರು.

  • ವಿಧಾನ ಪರಿಷತ್ ಸದಸ್ಯನ ಪುತ್ರಿ ಮದ್ವೆಯಲ್ಲಿ ಎಚ್‍ಎಚ್‍ಡಿ ಕುಟುಂಬ

    ವಿಧಾನ ಪರಿಷತ್ ಸದಸ್ಯನ ಪುತ್ರಿ ಮದ್ವೆಯಲ್ಲಿ ಎಚ್‍ಎಚ್‍ಡಿ ಕುಟುಂಬ

    ಮಂಗಳೂರು: ಉದ್ಯಮಿ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪುತ್ರಿಯ ಮದುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿಯಾಗಿ ನಡೆದಿದೆ.

    ಮಂಗಳೂರು ನಗರ ಹೊರವಲಯದ ಉಳ್ಳಾಲದ ಸಮುದ್ರ ದಂಡೆಯಲ್ಲಿ ಫಾರೂಕ್ ಕಟ್ಟಿಸಿರುವ ನೂತನ ರೆಸಾರ್ಟ್ ಸ್ಯಾಂಡ್ ಬೀಚ್ ನಲ್ಲಿ ಮದುವೆ ಕಾರ್ಯ ನಡೆದಿದೆ. ಕೇರಳದ ಹುಡುಗನ ಜೊತೆಗಿನ ಮದುವೆ ಕಾರ್ಯ ಮೂರು ದಿನ ನಡೆಯಲಿದ್ದು, ಇಂದು ಕೂಡ ಗಣ್ಯರು ಮಂಗಳೂರಿಗೆ ಆಗಮಿಸಲಿದ್ದಾರೆ.

    ಮದುವೆ ಗಣ್ಯರು ಬರುವ ಕಾರಣ ಮಂಗಳೂರಿನ ಐಷಾರಾಮಿ ಹೋಟೆಲ್ ಗಳನ್ನು ಮೂರು ದಿನಗಳ ಕಾಲ ತಿಂಗಳ ಮೊದಲೇ ಬುಕ್ ಮಾಡಲಾಗಿದೆ. ಸಚಿವ ಯು.ಟಿ. ಖಾದರ್ ಸ್ವ-ಕ್ಷೇತ್ರದಲ್ಲಿ ಫಾರೂಕ್ ಕಟ್ಟಿಸಿರುವ ರೆಸಾರ್ಟ್ ಈಗ ಜನಮನ ಸೆಳೆಯುವಂತಾಗಿದೆ.

    ಈ ಮದುವೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ, ಜೆಡಿಎಸ್ ವರುಷ್ಠ ದೇವೇಗೌಡ, ಪತ್ನಿ ಚನ್ನಮ್ಮ, ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸಚಿವ ಎಚ್.ಡಿ. ರೇವಣ್ಣ, ಪುತ್ರ ಪ್ರಜ್ವಲ್ ಮತ್ತು ಸಚಿವ ಬಸವರಾಜ್ ಹೊರಟ್ಟಿ, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಹಲವು ಮುಖಂಡರು ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews