Tag: farmer

  • ದುಷ್ಕರ್ಮಿಗಳಿಂದ 52 ಅಡಿಕೆ ಗಿಡಗಳ ನಾಶ- ಜಮೀನಿನಲ್ಲಿಯೇ ಹೊರಳಾಡಿ ರೈತ ಕಣ್ಣೀರು

    ದುಷ್ಕರ್ಮಿಗಳಿಂದ 52 ಅಡಿಕೆ ಗಿಡಗಳ ನಾಶ- ಜಮೀನಿನಲ್ಲಿಯೇ ಹೊರಳಾಡಿ ರೈತ ಕಣ್ಣೀರು

    ಹಾವೇರಿ: ಮೂರು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಗಿಡ (Arecanut Tree) ಗಳನ್ನ ದುಷ್ಕರ್ಮಿಗಳು ಕಡಿದು ಹಾಕಿದ್ದು, ದುಷ್ಕರ್ಮಿಗಳ ಕೃತ್ಯದಿಂದ ಜಮೀನಿನಲ್ಲಿ ಬಿದ್ದು ಹೊರಳಾಡಿ ರೈತ ಕಣ್ಣೀರು ಹಾಕಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ.

    ರಾತ್ರಿ ವೇಳೆಯಲ್ಲಿ ತೋಟಕ್ಕೆ ನುಗ್ಗಿ 52 ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ತುಂಡಾಗಿ ಬಿದ್ದಿರೋ ಅಡಿಕೆ ಗಿಡಗಳನ್ನು ತಬ್ಬಿಕೊಂಡು, ಜಮೀನಿನಲ್ಲಿ ರೈತ (Farmer) ಉರುಳಾಡಿ ಕಣ್ಣೀರು ಹಾಕಿದ್ದಾನೆ. ಈ ಕೃತ್ಯವನ್ನ ಎಸಗಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸುವಂತೆ ರೈತ ಅಡಿವೆಪ್ಪ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ

    ಅಡಿವೆಪ್ಪ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಡಿಕೆ ಗಿಡಗಳನ್ನ ಬೆಳೆಸಿದ್ದ, ಇನ್ನೂ ಎರಡು ವರ್ಷಕ್ಕೆ ಫಸಲು ಪ್ರಾರಂಭವಾಗುತಿತ್ತು. ಅದರೆ ದುಷ್ಕರ್ಮಿಗಳ ಕೃತ್ಯದಿಂದ ಅನ್ನದಾತ ಕಂಗಾಲಾಗಿದ್ದಾನೆ. ಅಡಿಕೆ ಗಿಡಗಳನ್ನು ಕಡಿದು ಹಾಕಿರೋ ದುಷ್ಕರ್ಮಿಗಳ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ನಮ್ಮದು ರೈತರ ಪರವಾದ ಸರ್ಕಾರ: ಜಗದೀಶ್ ಶೆಟ್ಟರ್

    ನಮ್ಮದು ರೈತರ ಪರವಾದ ಸರ್ಕಾರ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ನಮ್ಮ ಸರ್ಕಾರದ ಮುಖ್ಯ ಧ್ಯೇಯ ರೈತರ ಅಭಿವೃದ್ಧಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadeesh Shettar) ಹೇಳಿದ್ದಾರೆ.

    ವಾರ್ಡ್ ನಂ.35 ರ ಭೈರಿದೇವರಕೊಪ್ಪದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 8 ಕೋಟಿ ಅನುದಾನದಲ್ಲಿ, ಎರಡು ಸಣ್ಣ ಸೇತುವೆ ಒಳಗೊಂಡಂತೆ ಭೈರಿದೇವರಕೊಪ್ಪ – ಮಾರಡಗಿ, ಭೈರಿದೇವರಕೊಪ್ಪ – ಸೋಮಾಪುರ ಜಿಲ್ಲಾ ಮುಖ್ಯ ರಸ್ತೆ ಸುಧಾರಣಾ ಕಾಮಗಾರಿಗಳು ಹಾಗೂ ಭೈರಿದೇವರಕೊಪ್ಪ – ಸದಾಶಿವ ನಗರದ 24*7 ಕುಡಿಯುವ ನೀರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಸಮೀಕ್ಷೆ ಏನೇ ಹೇಳಿದ್ರೂ ಈ ಬಾರಿ JDSಗೆ ಅಧಿಕಾರ- HDK

    ರಸ್ತೆಗಳನ್ನು ಡಾಂಬರೀಕರಣ ಮಾಡುವುದರಿಂದ ಮನೆಯಿಂದ ಹೊಲಗಳಿಗೆ ಸರಾಗವಾಗಿ ಓಡಾಡಬಹುದು. ಅಲ್ಲದೇ ಬೆಳೆದ ಬೆಳೆಗಳನ್ನು ಸುಲಭವಾಗಿ ಸಾಗಿಸಬಹುದು. ರಸ್ತೆ (Road) ಗಳು ಅತಿಕ್ರಮಣವಾಗಿದ್ದರೆ ತೆರವುಗೊಳಿಸಿ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.ಇನ್ನೂ ನಮ್ಮ ಸರ್ಕಾರದ ರೈತರ ಪರವಾದ ಸರ್ಕಾರ ರೈತರ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಡಿಸಿ ಕಚೇರಿಗೆ ಬೀಗ ಹಾಕಿ ರೈತರಿಂದ ಪ್ರತಿಭಟನೆ

    ಡಿಸಿ ಕಚೇರಿಗೆ ಬೀಗ ಹಾಕಿ ರೈತರಿಂದ ಪ್ರತಿಭಟನೆ

    ಬೆಳಗಾವಿ: ಕಬ್ಬು ಬೆಳೆಗಾರರಿಗೆ 5,500 ರೂ. ದರ ನಿಗದಿ ಮಾಡುವಂತೆ ಒತ್ತಾಯಿಸಿ ಬೆಳಗಾವಿಯ ಡಿಸಿ ಕಚೇರಿಗೆ ಬೀಗ ಹಾಕಿ ರೈತರು ಪ್ರತಿಭಟನೆ ನಡೆಸಿದರು.

    ಬೆಳಗಾವಿ (Belagavi) ಡಿಸಿ ಕಚೇರಿಗೆ (DC Office) ಬೀಗ ಹಾಕಿ ಮುಂಭಾಗದಲ್ಲಿ ಪ್ರತಿಭಟನೆ (Protest) ನಡೆಸಿದ ರೈತರು (Farmer) ಕಬ್ಬು ಬೆಳೆಗಾರರಿಗೆ 5,500 ರೂ. ದರ ನಿಗದಿ ಮಾಡುವಂತೆ ಒತ್ತಾಯ ಮಾಡಿದ್ದರು. ಅಷ್ಟೇ ಅಲ್ಲದೇ ಡಿಸಿ ಕಚೇರಿ ಮುಂಭಾಗದಲ್ಲಿಯೇ ಹಾಸಿಗೆ ಹಾಸಿ ರೈತರು ಪ್ರತಿಭಟಿಸಿದರು. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ರೈತರಿಗೆ 5,500 ರೂ. ದರ ನಿಗದಿ ಸೇರಿದಂತೆ ಇತರ ಬೇಡಿಕೆ ಈಡೇರಿಸುವಂತೆ ನಿನ್ನೆ ಡಿಸಿಗೆ ರೈತರು ಮನವಿ ಮಾಡಿದ್ದರು. ಆದರೆ ಡಿಸಿ ನಿತೇಶ್‌ ಪಾಟೀಲ್‌ ನಡೆಸಿದ ಸಂಧಾನ ವಿಫಲ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿದಿದೆ. ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಸ್ಥಳಕ್ಕೆ ಸಕ್ಕರೆ ಸಚಿವರು ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧಾರಾಕಾರ ಮಳೆ – ಇಂದು, ನಾಳೆ ಯೆಲ್ಲೋ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • ಜಮೀನು ವಿವಾದ- ಮಾತುಕತೆಗೆ ಬಂದಾತನ ಕಾಲಿಗೆ ಗುಂಡು ಹೊಡೆದ ರೈತ ಸಂಘದ ಜಿಲ್ಲಾಧ್ಯಕ್ಷ

    ಜಮೀನು ವಿವಾದ- ಮಾತುಕತೆಗೆ ಬಂದಾತನ ಕಾಲಿಗೆ ಗುಂಡು ಹೊಡೆದ ರೈತ ಸಂಘದ ಜಿಲ್ಲಾಧ್ಯಕ್ಷ

    ಚಿಕ್ಕಮಗಳೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಮಾತುಕತೆಗೆ ತೆರಳಿದ್ದವರ ಮೇಲೆ ರೈತ ಸಂಘದ ಜಿಲ್ಲಾಧ್ಯಕ್ಷ ಶೂಟ್ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಾಲಿಗೆ ಗುಂಡು ತಾಗಿದ ವ್ಯಕ್ತಿಯನ್ನು ನಾರಾಯಣ್ ರಾಜ್ ಎಂದು ಗುರುತಿಸಲಾಗಿದೆ. ಮಾಕೋನಹಳ್ಳಿ ಗ್ರಾಮದ ರೈತ (Farmer) ಸಂಘದ ದುಗ್ಗಪ್ಪಗೌಡ ಹಾಗೂ ಮಂಚೇಗೌಡ ನಡುವೆ ಜಮೀನು ವಿವಾದವಿದ್ದು, ಮಂಚೇಗೌಡ ತಮ್ಮ ಜಮೀನನ್ನು ಮನೋಜ್ ಎಂಬವರಿಗೆ ಮಾರಾಟ ಮಾಡಿದ್ದರು. ಮಂಚೇಗೌಡ ಅವರ ಜಮೀನು (Land) ಖರೀದಿಸಿದ ಮನೋಜ್ ಜಮೀನಿನ ಸರ್ವೇ ಕಾರ್ಯ ಮುಗಿಸಿದ್ದರು. ಈ ವೇಳೆ ಮನೋಜ್ ಖರೀದಿಸಿದ ಜಾಗವನ್ನು ದುಗ್ಗಪ್ಪಗೌಡ ಅವರು ಒತ್ತುವರಿ ಮಾಡಿ ಮನೆ ಕಟ್ಟಿದ್ದರು ಎಂದು ಹೇಳಲಾಗಿದೆ.

    crime

    ಹಾಗಾಗಿ, ಜಮೀನು ಖರೀದಿಸಿದ ಮನೋಜ್ ಹಾಗೂ ಅದೇ ಜಮೀನು ಪಕ್ಕದಲ್ಲಿದ್ದ ದುಗ್ಗಪ್ಪಗೌಡರಿಗೆ ಜಮೀನು ವಿವಾದ ಕೂಡ ಇತ್ತು. ಈ ಬಗ್ಗೆ ಮಾತನಾಡಲು ದುಗ್ಗಪ್ಪಗೌಡ ಅವರ ಮನೆ ಬಳಿ ಹೋದಾಗ ಮಹಡಿ ಮೇಲೆ ನಿಂತಿದ್ದ ದುಗ್ಗಪ್ಪಗೌಡ ಕೋವಿಯಿಂದ ಮಾತುಕತೆಗೆ ಬಂದವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ನಾರಾಯಣ್‍ರಾಜ್ ಎಂಬುವರ ಕಾಲಿಗೆ ಗುಂಡು ತಗುಲಿದ್ದು, ಕೂಡಲೇ ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಕುಂಭ ಕಳಶ ಹೊತ್ತು ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ ಶಶಿಕಲಾ ಜೊಲ್ಲೆ

    ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ಮೂಡಿಗೆರೆ ಪೊಲೀಸರು ರೈತ ಸಂಘದ ಅಧ್ಯಕ್ಷ ದುಗ್ಗಪ್ಪಗೌಡರನ್ನು ಬಂಧಿಸಿದ್ದಾರೆ. ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗುಂಡು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾರಾಯಣ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದನ್ನೂ ಓದಿ: ನಿದ್ದೆಯಿಂದ ಎದ್ದೇಳಿ- ಬೊಮ್ಮಾಯಿಯವರನ್ನು ಕುಂಭಕರ್ಣನಿಗೆ ಹೋಲಿಸಿ, 150ನೇ ದಿನದ ಏಮ್ಸ್ ಹೋರಾಟ

    Live Tv
    [brid partner=56869869 player=32851 video=960834 autoplay=true]

  • ಸೀಗೆ ಹುಣ್ಣಿಮೆ ದಿನ ಪುನೀತ್ ರಾಜ್‌ಕುಮಾರ್ ಫೋಟೋ ಇಟ್ಟು ಹೊಲದ ಪೂಜೆ ಮಾಡಿದ ರೈತ

    ಸೀಗೆ ಹುಣ್ಣಿಮೆ ದಿನ ಪುನೀತ್ ರಾಜ್‌ಕುಮಾರ್ ಫೋಟೋ ಇಟ್ಟು ಹೊಲದ ಪೂಜೆ ಮಾಡಿದ ರೈತ

    ಧಾರವಾಡ: ಸೀಗೆ ಹುಣ್ಣಿಮೆ (Seege Hunnime) ಬಂದರೆ ಸಾಕು ರೈತರ ಕುಟುಂಬ ಎಲ್ಲ ಹೊಲಕ್ಕೆ ಹೋಗಿ ಹೊಲಕ್ಕೆ ಪೂಜೆ ಮಾಡಿ ನಮಿಸುತ್ತಾರೆ. ಅದೇ ರೀತಿ ಇಂದು ಸೀಗೆ ಹುಣ್ಣಿಮೆ ಇರುವ ಕಾರಣ ಧಾರವಾಡ (Dharwada) ಜಿಲ್ಲೆಯ ಅಣ್ಣಿಗೇರಿ ತಾಲೂಕಿ ರೈತರೊಬ್ಬರು ಪುನೀತ್ ರಾಜ್‌ಕುಮಾರ್ (Puneeth Rajkumar)  ಭಾವಚಿತ್ರ ಇಟ್ಟು ಹೊಲದಲ್ಲಿ ಪೂಜೆ ಮಾಡಿದ್ದಾರೆ.

    ಅಣ್ಣಿಗೇರಿ ಪಟ್ಟಣದ ಅಶೋಕ್ ಕುರಿ ಸೀಗೆ ಹುಣ್ಣಿಮೆ ಹಿನ್ನೆಲೆ ಪುನೀತ್ ರಾಜ್‍ಕುಮಾರ್ ಭಾವಚಿತ್ರ ಇಟ್ಟು ಹೊಲಕ್ಕೆ ಪೂಜೆ ಮಾಡಿದ್ದಾರೆ. ಅಶೋಕ್ ಕುರಿ ಅವರ ಹೊಲದಲ್ಲಿ ಇರುವ ಬನ್ನಿ ಮರದ ಕಳಗೆ ಉತ್ತರದ ಕರ್ನಾಟಕ ಶೈಲಿಯ ಅಡುಗೆ ಮಾಡಿ ಎಡೆ ಇಟ್ಟು ಅದರ ನಡುವೆ ಪುನೀತ್ ಭಾವಚಿತ್ರ ಇಟ್ಟು ಪೂಜಿಸಿದ್ದಾರೆ. ಇದನ್ನೂ ಓದಿ: ಗಂಧದ ಗುಡಿಯಲ್ಲಿ ಚಂದದ ನೋಟ: ನೀವು ಇರಬೇಕಿತ್ತು ಎಂದು ಕಣ್ಣೀರಾಕಿದ ಫ್ಯಾನ್ಸ್

    ಇನ್ನೊಂದೆಡೆ ಇಂದು ಪುನೀತ್ ರಾಜ್‍ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ (Gandhada Gudi) ಟ್ರೇಲರ್ (Trailer) ಬಿಡುಗಡೆ ಆಗಿದೆ. ಅಪ್ಪು ಈ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಬಗ್ಗೆ ಅಷ್ಟೊಂದು ಕನಸು ಯಾಕೆ ಕಂಡಿದ್ದರು ಎನ್ನುವುದಕ್ಕೆ ಟ್ರೈಲರ್‌ನಲ್ಲಿ ತೋರಿಸಿದ ಒಂದೊಂದು ಫ್ರೇಮೂ ಸಾಕ್ಷಿಯಾಗಿವೆ. ಗಂಧದ ಗುಡಿಯಲ್ಲಿ ಏನಿಲ್ಲ, ಎಲ್ಲವೂ ಇದೆ. ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ಅರಣ್ಯ, ಕಾಡು ಪ್ರಾಣಿಗಳು, ಕಾಡಂಚಿನ ಜನರು, ದೇವರು, ದೈವ ಎಲ್ಲವನ್ನೂ ಒಂದೇ ಉಸಿರಿಗೆ ಹಿಡಿದಿಟ್ಟಿದ್ದಾರೆ ಪುನೀತ್ ರಾಜ್‍ಕುಮಾರ್. ರಾತ್ರಿ ಅವರು ಕಾಡಿನೊಳಗೆ ನುಗ್ಗಿದಾಗ ನಾವೇ ಭಯಪಡುವಷ್ಟು ಸುಂದರವಾಗಿ ಸೆರೆ ಹಿಡಿದಿದ್ದಾರೆ ಆ ರಾತ್ರಿಯನ್ನು. ಸಮುದ್ರದಾಳಕ್ಕೆ ಅಪ್ಪು ಜಿಗಿದಾಗ ಇಲ್ಲಿ ನಾವೇ ಒದ್ದೆಯಾಗುವಂತೆ ಸಿನಿಮಾಟೋಗ್ರಫಿ ಇದೆ. ಇದನ್ನೂ ಓದಿ: `ಗಂಧದಗುಡಿ’ ಟ್ರೈಲರ್‌ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

    Live Tv
    [brid partner=56869869 player=32851 video=960834 autoplay=true]

  • ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು – ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿದ್ರು

    ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು – ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿದ್ರು

    ರಾಂಚಿ: ಟ್ರ್ಯಾಕ್ಟರ್ ಹಿಂಪಡೆಯಲು ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು ಆತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆಗೈದಿದ್ದಾರೆ.

    ಶುಕ್ರವಾರ ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ ಈ ಘಟನೆ ನಡೆದಿದ್ದು, ಜನಪ್ರಿಯ ಫೈನಾನ್ಸ್ ಕಂಪನಿಯ ಅಧಿಕಾರಿಗಳು ರೈತರ ಮನೆಗೆ ತೆರಳಿ ಟ್ರ್ಯಾಕ್ಟರ್ ಹಿಂಪಡೆಯಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಅವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ಹಾಗೂ ರೈತನ ಮಗಳ ನಡುವೆ ವಾಗ್ವಾದ ನಡೆದಿದೆ. ನಂತರ ಗರ್ಭಿಣಿ ಮಹಿಳೆ ಟ್ರ್ಯಾಕ್ಟರ್‌ಗೆ ಅಡ್ಡ ಹಾಕಿ ನಿಂತಿದ್ದಾರೆ. ಈ ವೇಳೆ ಅಧಿಕಾರಿಗಳು ಆಕೆಯನ್ನು ಟ್ರಾಕ್ಟರ್‌ನಡಿ ತಳ್ಳಿ ಕೊಂದಿದ್ದಾರೆ. ಬಳಿಕ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸಂಬಂಧಿಕರು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: KPTCL ಪರೀಕ್ಷಾ ಅಕ್ರಮ: ಮತ್ತೆ ಮೂವರು ಆರೋಪಿಗಳ ಬಂಧನ – ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

    ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಹಜಾರಿಬಾಗ್ ಎಸ್‍ಪಿ ಮನೋಜ್ ರತನ್ ಚೋಥೆ ಫೈನಾನ್ಸ್ ಕಂಪನಿಯ ಅಧಿಕಾರಿಗಳು ರೈತನ ಮನೆಗೆ ನುಗ್ಗಿದ ಬಳಿಕ ಟ್ರ್ಯಾಕ್ಟರ್‌ಗಾಗಿ ವಾದ ವಿವಾದ ನಡೆದಿದೆ. ಈ ಮಧ್ಯೆ ರೈತನ ಮಗಳಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ. ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲು ರೈತರ ಮನೆಗೆ ಹೋಗುವ ಮುನ್ನ ಫೈನಾನ್ಸ್ ಕಂಪನಿಯ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೂ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬೊಮ್ಮಾಯಿಗೆ ಕಪ್ಪುಪಟ್ಟಿ ಪ್ರದರ್ಶನ

    Live Tv
    [brid partner=56869869 player=32851 video=960834 autoplay=true]

  • ಚಿಕ್ಕಬಳ್ಳಾಪುರ, ರಾಯಚೂರಲ್ಲಿ ಟ್ರ್ಯಾಕ್ಟರ್ ಹೆಸರಲ್ಲಿ ರೈತರಿಗೆ ಮೋಸ

    ಚಿಕ್ಕಬಳ್ಳಾಪುರ, ರಾಯಚೂರಲ್ಲಿ ಟ್ರ್ಯಾಕ್ಟರ್ ಹೆಸರಲ್ಲಿ ರೈತರಿಗೆ ಮೋಸ

    ಚಿಕ್ಕಬಳ್ಳಾಪುರ/ರಾಯಚೂರು: ನಿಮ್ಮ ಹತ್ರ ಇಷ್ಟೊಂದು ಜಮೀನು ಇಟ್ಟುಕೊಂಡು ಎಷ್ಟೊಂದು ಕಷ್ಟ ಪಡ್ತೀರಿ. ಒಂದು ಟ್ರ್ಯಾಕ್ಟರ್ ತಗೊಂಡುಬಿಡಿ. ನಮ್ಮದೇ ಟ್ರಾಕ್ಟರ್ ಶೋ ರೂಮ್ ಇದೆ. ನಿಮ್ಮ ಜಮೀನಿನ ದಾಖಲೆಗಳನ್ನು ನಮಗೆ ಕೊಡಿ ಸಾಕು. ನೀವು ಏನೂ ಕಷ್ಟಪಡಬೇಡಿ, ಸುಲಭವಾಗಿ ನಾವೇ ನಿಮ್ಮ ಜಮೀನಿನ ಮೇಲೆ ಲೋನ್ ತೆಗೆದುಕೊಂಡು ಪ್ರತಿಷ್ಠಿತ ಕಂಪನಿಯ ಟ್ರ್ಯಾಕ್ಟರ್ ಕೊಡಿಸ್ತೀವಿ ಅಂತ ರೈತರಿಗೆ ಟ್ರಾಕ್ಟರ್ ಶೋ ರೂಂ ಮಾಲೀಕನೋರ್ವ ಮಹಾನ್ ವಂಚನೆ ಮಾಡಿದ್ದು, ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ.

    ಹೌದು. ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ಮೂಲದ ಅನ್ವೇಷ್, ಗೌರಿಬಿದನೂರು ನಗರದಲ್ಲಿ ನಂಜುಡೇಶ್ವರ ಟ್ರ್ಯಾಕ್ಟರ್ ಶೋ ರೂಂ ನಡೆಸುತ್ತಿದ್ದ. ಆದರೆ ಟ್ರ್ಯಾಕ್ಟರ್ ಖರೀದಿಗೆ ಬರೋ ರೈತರ ಬಳಿ ದಾಖಲೆ ಪಡೆಯುತ್ತಿದ್ದ ಅನ್ವೇಷ್, ರೈತರ ಹೆಸರಲ್ಲಿ ಫೈನಾನ್ಸ್ ಕಂಪನಿಗಳ ಬಳಿ ಲೋನ್ ಮಾಡ್ತಿದ್ದ. ಆದರೆ ಆ ದುಡ್ಡಿಂದ ಟ್ರ್ಯಾಕ್ಟರ್ (Tractor) ಕಂಪನಿಯಿಂದ ಟ್ರ್ಯಾಕ್ಟರ್ ಖರೀದಿ ಮಾಡದೇ ಸ್ವಂತಕ್ಕೆ ಖರ್ಚು ಮಾಡಿಕೊಂಡು ಮಜಾ ಮಾಡ್ತಿದ್ದನಂತೆ. ಇದಕ್ಕೆ ಎಲ್ ಆಂಡ್ ಟಿ ಫೈನಾನ್ಸ್ ಕಂಪನಿಯ ಅನಿಲ್ ಹಾಗೂ ಶ್ರೀಮಂತ್ ಶಾಮೀಲು ಮಾಡಿಕೊಂಡು ಅವರಿಗೂ ಒಂದಷ್ಟು ದುಡ್ಡು ಕೊಟ್ಟು ಮ್ಯಾನೇಜ್ ಮಾಡ್ತಿದ್ದ. ಇತ್ತ ರೈತರು (Farmers) ಕೇಳಿದಾಗಲೆಲ್ಲ ಟ್ರ್ಯಾಕ್ಟರ್ ಬಂದಿಲ್ಲ ಬಂದಿಲ್ಲ ಅಂತ ಕಾಲ ಕಲೆಯುತ್ತಿದ್ದನಂತೆ.

    ಹೀಗೆ ಗೌರಿಬಿದನೂರು (GauriBidanuru) ತಾಲೂಕಿನ ತೋಕಲಹಳ್ಳಿ ಗ್ರಾಮದ ರೈತ ಪ್ರಭಾಕರ ರೆಡ್ಡಿಗೆ, ಟ್ರಾಕ್ಟರ್ ಅವಶ್ಯಕತೆ ಇಲ್ಲದಿದ್ದರೂ, ಆತನ ಬೆನ್ನು ಬಿದ್ದ ಅನ್ವೇಷ್ ದಾಖಲೆಗಳನ್ನು ಪಡೆದು ಎಲ್ ಆಂಡ್ ಟಿ ಫೈನಾನ್ಸ್ ನಲ್ಲಿ ಬರೋಬ್ಬರಿ 7 ಲಕ್ಷ 40 ಸಾವಿರ ರೂಪಾಯಿ ಸಾಲ ಪಡೆದು ರೈತನಿಗೆ ಟ್ರಾಕ್ಟರ್‍ನೂ ನೀಡಿಲ್ಲ, ಸಾಲದ ಹಣವನ್ನೂ ನೀಡಿಲ್ಲ. ಕೊನೆಗೆ ಎಲ್ ಆಂಡ್ ಟಿ ಫೈನಾನ್ಸ್ ನವರು ರೈತನ ಮನೆಗೆ ಬಂದು ಯಾಕೆ ಟ್ರ್ಯಾಕ್ಟರ್ ಲೋನ್ ಕಟ್ಟಿಲ್ಲ ಅಂತ ಅವಾಜ್ ಹಾಕಿದಾಗ ಶೋ ರೂಮ್ ಮಾಲೀಕನ ಕಳ್ಳಾಟ ಬಯಲಾಗಿದೆ. ಇದೇ ರೀತಿ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರಿನಲ್ಲಿ 9 ಜನ ರೈತರಿಗೆ ಮೋಸ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಇದರಿಂದ ಗೌರಿಬಿದನೂರು ನಗರ ಠಾಣೆ ಪೊಲೀಸರು, ಅನ್ವೀಷ್, ಶ್ರೀಮಂತ್, ಅನಿಲಕುಮಾರ್ ನನ್ನು ಬಂಧಿಸಿ ನ್ಯಾಯಾಂಗ ಬಂಧನ (Judicial Custody) ಕ್ಕೆ ಒಪ್ಪಿಸಿದ್ದಾರೆ.

    ರಾಯಚೂರಲ್ಲಿ ರೈತನಿಗೆ ಶಾಕ್ ಕೊಟ್ಟ ಫೈನಾನ್ಸ್ ಕಂಪನಿ: 2021ರ ಜೂನ್ ತಿಂಗಳಿನಲ್ಲಿ ರಾಯಚೂರಿನ ಲಿಂಗಸುಗೂರು ತಾಲೂಕಿನ ಕಳ್ಳಿ ಲಿಂಗಸುಗೂರು ರೈತ ಅಯ್ಯಾಳಪ್ಪ ಟ್ರ್ಯಾಕ್ಟರ್ ಖರೀದಿಸಿದ್ದರು. ಅದಕ್ಕೆ ಎರಡು ಕಂತು ಹಣ ಕೂಡ ಪಾವತಿಸಿದ್ದಾರೆ. ಆದರೆ ಮೂರನೇ ಕಂತಿನ ಹಣ ಕಟ್ಟಿಲ್ಲ ಅಂತ ಎಲ್ ಅಂಡ್ ಟಿ ಫೈನಾನ್ಸ್ ಕಂಪನಿ ರೈತನಿಗೆ ಮಾಹಿತಿಯನ್ನೂ ನೀಡದೆ ಟ್ರ್ಯಾಕ್ಟರನ್ನು ಸೀಜ್ ಮಾಡಿ ಸಿಂಧನೂರಿಗೆ ತೆಗೆದುಕೊಂಡು ಹೋಗಿದ್ದಾರೆ.

    ಈ ವೇಳೆ ಮೂರನೇ ಕಂತಿನ ಹಣ 85 ಸಾವಿರ ರೂಪಾಯಿ ಹೊಂದಿಸಿಕೊಂಡು ರೈತ ಫೈನಾನ್ಸ್ ಕಂಪನಿ ಕಚೇರಿ ಹೋದ್ರೆ ನಿಮ್ಮ ಟ್ರ್ಯಾಕ್ಟರ್ ಬೇರೆಯವರಿಗೆ ಮಾರಾಟ ಮಾಡಲಾಗಿದೆ ಎಂಬ ಉತ್ತರ ನೀಡಿದ್ದಾರೆ. ಇದರಿಂದ ರೈತ ಕಂಗಾಲಾಗಿ ನ್ಯಾಯಕ್ಕಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಮೊದಲೇ ಅತೀವೃಷ್ಠಿಯಿಂದ ಕಂಗಾಲಾಗಿರುವ ರೈತನಿಗೆ ಫೈನಾನ್ಸ್ ಕಂಪನಿ ಗಾಯದ ಮೇಲೆ ಬರೆ ಎಳೆದಿದೆ.

    Live Tv
    [brid partner=56869869 player=32851 video=960834 autoplay=true]

  • ಆತ್ಮಹತ್ಯೆ ಮಾಡ್ಕೊಂಡ ರೈತನ ಬಗ್ಗೆ ಹಗುರ, ಅವಾಚ್ಯ ಪದ ಬಳಸಿದ ಕೆ.ಬಿ ಕೋಳಿವಾಡ

    ಆತ್ಮಹತ್ಯೆ ಮಾಡ್ಕೊಂಡ ರೈತನ ಬಗ್ಗೆ ಹಗುರ, ಅವಾಚ್ಯ ಪದ ಬಳಸಿದ ಕೆ.ಬಿ ಕೋಳಿವಾಡ

    ಹಾವೇರಿ: ವಿಧಾನಸಭೆ ಮಾಜಿ ಅಧ್ಯಕ್ಷ, ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಕೋಳಿವಾಡ (K. B. Koliwad) ಅವರು ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಹಗುರವಾಗಿ ಮಾತನಾಡಿದ ಪ್ರಸಂಗ ನಡೆದಿದೆ.

    ಕಾಂಗ್ರೆಸ್ (Congress) ಕಾರ್ಯಕರ್ತರೊಬ್ಬರು ಕೋಳಿವಾಡ ಅವರಿಗೆ ಕರೆ ಮಾಡಿ, ರೈತ (Farmer)ಆತ್ಮಹತ್ಯೆ ಮಾಡಿಕೊಂಡಿದ್ದು, ಮಾಲೆ ಹಾಕಲು ಬರುವಂತೆ ತಿಳಿಸಿದ್ದಾರೆ. ಈ ವೇಳೆ ಕೋಳಿವಾಡ ಅವರು ಆ ರೈತನ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೇ ಅವಾಚ್ಯ ಶಬ್ಧಗಳನ್ನು ಕೂಡ ಬಳಸಿದ್ದಾರೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಪಕ್ಷದ ಕಾರ್ಯಕ್ರಮ ಸಂಘಟನೆ ಮಾಡಲು ಮುಖಂಡರೊಬ್ಬರ ಮನೆಯಲ್ಲಿ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದಾಗ ಕೋಳಿವಾಡಗೆ ಕಾರ್ಯಕರ್ತನ ಕರೆ ಬಂದಿದೆ. ಫೋನ್ (Phone Call) ನಲ್ಲಿ ಮಾತನಾಡಿದ ಮೇಲೆ ಕಾರ್ಯಕರ್ತರ ಮುಂದೆ ರೈತನ ಬಗ್ಗೆ ಅವಾಚ್ಯ ಶಬ್ಧ ಬಳಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಮರ್ಮಾಂಗಕ್ಕೆ ಚಾಕುವಿನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ

    ಐದು ಬಾರಿ ಶಾಸಕರಾಗಿರೋ ಕೋಳಿವಾಡ ಅವರು ಒಮ್ಮೆ ಸಚಿವರಾಗಿ, ವಿಧಾನಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇದೀಗ ಹಿರಿಯ ರಾಜಕಾರಣಿಯ ಬಾಯಲ್ಲಿ ಬಂದ ಹಗುರ ಮಾತುಗಳಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಎಂಎಸ್‍ಪಿ ಜಾರಿ, ಸಾಲಮನ್ನಾಕ್ಕೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರ ಹೋರಾಟ

    ಎಂಎಸ್‍ಪಿ ಜಾರಿ, ಸಾಲಮನ್ನಾಕ್ಕೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರ ಹೋರಾಟ

    ನವದೆಹಲಿ: ಕೂಡಲೇ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಜಾರಿ ಮಾಡಬೇಕು ಮತ್ತು ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಸಾವಿರಕ್ಕೂ ಅಧಿಕ ರೈತರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಮಹಾಪಂಚಾಯತ್ ಒಂದು ದಿನದ ಶಾಂತಿಯುತ ಕಾರ್ಯಕ್ರಮವಾಗಿದ್ದು, ಇದರ ಭಾಗವಾಗಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ ರೈತರು ಆಗಮಿಸಿದ್ದರು.

    ಕರ್ನಾಟಕದಿಂದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಅಡಿಯಲ್ಲಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ 150ಕ್ಕೂ ಅಧಿಕ ರೈತರು ದೆಹಲಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸುಮಾರು ಇಪ್ಪತ್ತಕ್ಕೂ ಅಧಿಕ ಮಹಿಳಾ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಎಂಎಸ್‍ಪಿ ಮೇಲಿನ ಕಾನೂನು ಖಾತರಿ, ವಿದ್ಯುತ್ ತಿದ್ದುಪಡಿ ಮಸೂದೆ 2022 ರದ್ದತಿ ಹಾಗೂ ರೈತರ ಸಾಲ ಮನ್ನಾ ಸೇರಿದಂತೆ ಕೆಲವು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ, ಶಕ್ತಿ ಪ್ರದರ್ಶನ ಸರಿಯಲ್ಲ: ವಿಶ್ವನಾಥ್

    ಪ್ರತಿಭಟನೆ ಬಳಿಕ ಮಾತನಾಡಿದ ಕುರಬೂರು ಶಾಂತಕುಮಾರ್, ಎಂಎಸ್‍ಪಿ ಜಾರಿ ಮಾಡುವುದಾಗಿ ಮೋದಿ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಸಮಿತಿಯಲ್ಲಿ ತನ್ನದೇ ಜನರನ್ನು ನಿಯೋಜಿಸಿ ಯಾಮಾರಿಸುತ್ತಿದೆ. ಕೊಟ್ಯಾಧಿಪತಿ ಉದ್ಯಮಿಗಳ ಸಾಲ ಮನ್ನಾ ಆಗುತ್ತಿದೆ. ಈ ಹಿಂದೆ ನೀಡಿದ ಭರವಸೆಯಂತೆ ಕೂಡಲೇ ಎಂಎಸ್‍ಪಿ ಜಾರಿಯಾಗಬೇಕು ರೈತರ ಸಾಲ ಮನ್ನಾ ಆಗಬೇಕು. ಇಲ್ಲದಿದ್ದರೆ ಈ ಹಿಂದೆ ನಡೆಸಿದಂತೆ ವರ್ಷಗಟ್ಟಲೇ ಬೃಹತ್ ಪ್ರತಿಭಟನೆ ನಡೆಸಲಾಗುವುದು ಮೋದಿ ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೊಟ್ಟೆ ಕೇಸ್‌ – ಸಿದ್ದರಾಮಯ್ಯಗೆ ಈಗ ಝಡ್‌ ಶ್ರೇಣಿಯ ಭದ್ರತೆ

    Live Tv
    [brid partner=56869869 player=32851 video=960834 autoplay=true]

  • ಮಂಡ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದ ಹಿಂದೂ ಕಾರ್ಯಕರ್ತರು, ಅನ್ನದಾತರು!

    ಮಂಡ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದ ಹಿಂದೂ ಕಾರ್ಯಕರ್ತರು, ಅನ್ನದಾತರು!

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಅನ್ನದಾತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಡಿಸಿದ್ದಾರೆ. ಪ್ರವೀಣ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆ ಮಾಡಿದ್ರೆ, ಜಿಎಸ್‍ಟಿ ವಿರುದ್ಧ ಅನ್ನದಾತರು ಪ್ರತಿಭಟಿಸಿದ್ರು. ಇಂದು ಮಂಡ್ಯದಲ್ಲಿ ನಡೆದ ನಾಲ್ಕು ಪ್ರತಿಭಟನೆಯಿಂದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಆಗಿತ್ತು.

    ಮಂಡ್ಯದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಮತ್ತು ಪಿಎಫ್‍ಐ ಹಾಗೂ ಎಸ್‍ಟಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 10 ಸಾವಿರಕ್ಕೂ ಅಧಕ ಮಂದಿ ಮಂಡ್ಯದ ಮಹಿಳಾ ಕಾಲೇಜಿನಿಂದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಹೀಗಿದ್ದರೂ ಹಿಂದೂಗಳ ಕೊಲೆಯಾಗುತ್ತಿದೆ. ಹಿಂದೂಗಳ ರಕ್ಷಣೆ ನಮ್ಮ ಧ್ಯೇಯ ಎಂದು ಕೊಂಡು ಅಧಿಕಾರಕ್ಕೆ ಬಂದವರು ಇದೀಗ ಹತ್ಯೆಗಳಾದ್ರು ಇದೀಗ ಕಠಿಣ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಗಂಟೆಯಲ್ಲೇ ಪಿಎಫ್‍ಐ ಮತ್ತು ಎಸ್‍ಟಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ ಎಂದವರು ಇದೀಗ ತುಟಿ ಬಿಚ್ಚುತ್ತಿಲ್ಲ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ವಿರುದ್ಧ ಆಕ್ರೋಶ ವ್ಯಪಡಿಸಿದರು.

    ಒಂದು ಕಡೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ರೆ ಮತ್ತೊಂದೆಡೆ ಕರ್ನಾಟಕ ರಾಜ್ಯ ರೈತ ಸಂಘಟವೂ ಸಹ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿತು. ಬೆಲ್ಲದ ಮೇಲಿನ ಜಿಎಸ್‍ಟಿ ವಾಪಸ್ ಪಡೆಯುವಂತೆ, ಕಬ್ಬಿಗೆ ಟನ್‍ಗೆ 4500 ರೂ ಬೆಲೆ ನಿಗಧಿ ಮಾಡುವಂತೆ, ಬೆಲ್ಲಕ್ಕೆ ವೈಜ್ಞಾನಿಕ ಬೆಲೆ ನಿಗಧಿಪಡಿಸಬೇಕು ಹಾಗೂ ಎಪಿಎಂಸಿಯನ್ನು ಪಾರದರ್ಶಕಗೊಳಿಸಬೇಕೆಂದು ಪ್ರತಿಭಟನೆ ನಡೆಸಿದರು. ಮಂಡ್ಯದ ಕಾಳಮ್ಮ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಎತ್ತಿನಗಾಡಿ, ಟ್ರಾಕ್ಟರ್ ಹಾಗೂ ಟಿಲ್ಲರ್ ಗಳ ಮೂಲಕ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್

    ಇತ್ತ ಸಿಐಟಿಯು ಸಂಘಟೆಯಿಂದ ಸಾವರಿರಾರು ಕಾರ್ಯಕರ್ತರು ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಡಿಸಿ ಆಫೀಸ್ ವರೆಗೆ ಕೂಲಿ ಕಾರ್ಯಕರ್ತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಇನ್ನೂ ಅಖಿಲ ಭಾರತ ವಿರಶೈವ ಲಿಂಗಾಯತ ಮಹಾಸಭಾದಿಂದ ವಿರಶೈವ ಲಿಂಗಾಯತ ಸಮೂದಾಯವನ್ನು ಓಬಿಸಿ ಪಟ್ಟಿಗೆ ಸೇರಿಸಬೇಕೆಂದು ಸಂಜಯ್ ಸರ್ಕಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಮಂಡ್ಯದಲ್ಲಿ ನಡೆದ ಈ ಸರಣಿ ಪ್ರತಿಭಟನೆಯಿಂದ ಮಂಡ್ಯ ನಗರದ ಜನರು ಪರದಾಡುವ ಸ್ಥಿತಿ ನಿರ್ಮಾಣವಾದ್ರೆ, ಇನ್ನೊಂದೆಡೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವ ಸ್ಥತಿ ನಿರ್ಮಾಣವಾಯಿತು.

    ಒಟ್ಟಾರೆ ಮಂಡ್ಯ ಇಂದು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶದ ಸ್ವರೂಪದಲ್ಲಿ ನಡೆದ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಇತ್ತ ಈ ಪ್ರತಿಭಟನೆಗಳಿಂದ ಜನ ಸಾಮಾನ್ಯರು ಪರದಾಡಿದರು.

    Live Tv
    [brid partner=56869869 player=32851 video=960834 autoplay=true]