Tag: farmer

  • ಒಂದೇ ದಿನದಲ್ಲಿ ಬರೋಬ್ಬರಿ 7 ಲಕ್ಷ ವ್ಯೂವ್ಸ್ ಕಂಡ ಈ ವಿಡಿಯೋ ನೋಡಿ

    ಒಂದೇ ದಿನದಲ್ಲಿ ಬರೋಬ್ಬರಿ 7 ಲಕ್ಷ ವ್ಯೂವ್ಸ್ ಕಂಡ ಈ ವಿಡಿಯೋ ನೋಡಿ

    ಧುನಿಕ ಕಾಲದಲ್ಲಿ ತಂತ್ರಜ್ಞಾನ ಬೆಳವಣಿಗೆ ಕಂಡಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಹೊಸ ಯಂತ್ರಗಳು ಲಗ್ಗೆ ಇಡುತ್ತಿವೆ. ಈ ಯಂತ್ರಗಳಿಂದ ಕಾರ್ಮಿಕ ಶಕ್ತಿ ಕಡಿಮೆ ಮಾಡಿ ಕೆಲಸವನ್ನು ಹಗುರ ಮಾಡಿಕೊಳ್ಳಬಹುದು ಎಂಬುವುದನ್ನು ಈ ವಿಡಿಯೋ ನಿಮಗೆ ತೋರಿಸುತ್ತದೆ.

     

    ರೈತರೊಬ್ಬರು ತಮ್ಮ ತೋಟದಲ್ಲಿ ತೆಂಗಿನ ಮರದ ಕೆಳಗೆ ಮಣ್ಣನ್ನ ಸಡಿಲಗೊಳಿಸುತ್ತಿದ್ದಾರೆ. ಇಲ್ಲಿ ರೈತ ಒಂದು ಹೊಸ ಯಂತ್ರದ ಮೂಲಕ ಮಣ್ಣನ್ನು ಹದಗೊಳಿಸಿ, ಮರದ ಕೆಳಗೆ ನೀರು ನಿಲ್ಲುವ ಹಾಗೆ ಮಾಡುತ್ತಿದ್ದಾರೆ. ಕೇವಲ ಕೆಲವೇ ನಿಮಿಷಗಳಲ್ಲಿ ರೈತ ಈ ಕೆಲಸವನ್ನು ಯಂತ್ರದ ಸಹಾಯದಿಂದ ಮಾಡಿದ್ದಾರೆ. ಅದೇ ಕೆಲಸವನ್ನು ಒಬ್ಬ ರೈತ ಮಾಡಬೇಕಾದರೆ ಸುಮಾರು ಒಂದರಿಂದ ಎರಡು ಗಂಟೆಗಳ ಸಮಯವನ್ನು ವ್ಯಯ ಮಾಡಬೇಕು. ಆದರೆ ಅದೇ ಮಷಿನ್‍ನಿಂದ ಮಾಡಿದ್ದಲ್ಲಿ ಕೇವಲ ಒಂದೆರೆಡು ನಿಮಿಷಗಳಲ್ಲಿ ಮಾಡಿ ಮುಗಿಸಬಲ್ಲ.

    ಈ ವಿಡಿಯೋವನ್ನ ರೋಸ್ ಮೀಡಿಯಾ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ಒಂದೇ ದಿನಕ್ಕೆ 7 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ವಿಡಿಯೋ ನೋಡಿದ ಕೆಲವು ಜನರು ಈ ತಂತ್ರ ನನಗೆ ಬೇಕು ಎಂದು ಕಮೆಂಟ್ ಹಾಕಿದ್ದರೆ, ಇನ್ನೂ ಕೆಲವರು ಇದು ಮಾನವನ ಉದ್ಯೋಗವನ್ನು ಕಿತ್ತುಕೊಳ್ಳುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

    https://www.youtube.com/watch?v=4MtxrSOS6Uo

     

  • ಮೋದಿಗೆ ಟ್ವೀಟ್ ಮಾಡಿದ್ದಕ್ಕೆ ಕೊಪ್ಪಳದ ರೈತನ ಜಮೀನಿನಲ್ಲಿ ಹೊಸ ವಿದ್ಯುತ್ ಕಂಬ ಬಂತು!

    ಮೋದಿಗೆ ಟ್ವೀಟ್ ಮಾಡಿದ್ದಕ್ಕೆ ಕೊಪ್ಪಳದ ರೈತನ ಜಮೀನಿನಲ್ಲಿ ಹೊಸ ವಿದ್ಯುತ್ ಕಂಬ ಬಂತು!

    ಕೊಪ್ಪಳ: ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಿಂದಾಗಿ ಕೆಲ ಸಮಸ್ಯೆಗಳು ಬದಲಾಗಿದ್ದನ್ನು ನೀವು ಈ ಹಿಂದೆ ಓದಿದ್ದೀರಿ. ಆದರೆ ಈಗ ಪ್ರಧಾನಿಗೆ ಮಾಡಿದ ಟ್ವೀಟ್ ನಿಂದಾಗಿ ಜಿಲ್ಲೆಯ ರೈತರೊಬ್ಬರು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ.

    ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ವಿಜಯಕುಮಾರ್ ಯತ್ನಳ್ಳಿ ಅವರ ಜಮೀನಿನಲ್ಲಿದ್ದ ಕಬ್ಬಿಣದ ವಿದ್ಯುತ್ ಕಂಬವೊಂದು ಬಾಗಿತ್ತು.  ವಿದ್ಯುತ್ ಕಂಬ ಬಾಗಿದ್ದರಿಂದ ಪ್ರತಿ ವರ್ಷ ಉಳುಮೆ ಮಾಡಲು ಇವರಿಗೆ ತೊಂದರೆ ಆಗುತಿತ್ತು.

    ಈ ಸಮಸ್ಯೆ ನಿವಾರಣೆಗೆ ವಿಜಯಕುಮಾರ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಇವರ ಮನವಿ ಅಧಿಕಾರಿಗಳಿಗೆ ಕೇಳಿಸಲೇ ಇಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತ ರೈತ ವಿಜಯ್‍ಕುಮಾರ್ ಅವರು ಈ ಸಮಸ್ಯೆಯನ್ನು ಬಗೆ ಹರಿಸಲು ಬುಧವಾರ ಬೆಳಗ್ಗೆ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ.

    ಪ್ರಧಾನಿಗೆ ಟ್ವೀಟ್ ಮಾಡಿದ ವಿಚಾರ ತಿಳಿದು ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ದಿಢೀರ್ ಆಗಿ ಗುರುವಾರ ಜಮೀನಿಗೆ ಬಂದು ಕಂಬವನ್ನು ಬದಲಾಯಿಸಿ ಹೋಗಿದ್ದಾರೆ.

     

     

  • ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬೆತ್ತಲೆ ಪ್ರತಿಭಟನೆ

    ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬೆತ್ತಲೆ ಪ್ರತಿಭಟನೆ

    ಹಾವೇರಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ರೈತರೊಬ್ಬರು ಹಾವೇರಿಯಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

    ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ಬಳಿ ರೈತ ಕಾಳಪ್ಪ ಲಮಾಣಿ ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಇದೇ ವೇಳೆ ಚಂದ್ರಪ್ಪ ಎಂಬವರು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಕಾರ್ಯಕರ್ತರು ನಗರದ ಮುರುಘರಾಜೇಂದ್ರಮಠದಿಂದ ಅರೆಬೆತ್ತಲೆ ಪ್ರತಿಭಟನೆ ಪ್ರಾರಂಭಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ರೈತರು ಬೇವಿನಸೊಪ್ಪು ಕಟ್ಟಿಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

    ಇದೂವರೆಗೂ ಜಿಲ್ಲೆಯ ಯಾವ ರೈತರಿಗೂ ಬಗರ್ ಹುಕುಂ ಪತ್ರವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಾಣೇಬೆನ್ನೂರು ಪಟ್ಟಣದಲ್ಲಿ ಪ್ರತಿಭಟನೆ ಕೈಗೊಂಡಿದ್ರೂ, ಯಾವ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತ ಕಾಳಪ್ಪ ಸಾರ್ವಜನಿಕವಾಗಿ ಬೆತ್ತಲಾಗುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ವಿಷ ಸೇವಿಸಿದ ರೈತ ಚಂದ್ರಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ರೈತರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಮುನ್ನೇಚ್ಚರಿಕಾ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    https://www.youtube.com/watch?v=ODhN2OQZmUI

     

  • ಹಾವೇರಿ ಗೋಲಿಬಾರ್ ನಡೆದು ಇಂದಿಗೆ 10 ವರ್ಷ- ಇನ್ನೂ ರೈತರಿಗೆ ಸಿಕ್ಕಿಲ್ಲ ಸೂಕ್ತ ಪರಿಹಾರ

    ಹಾವೇರಿ ಗೋಲಿಬಾರ್ ನಡೆದು ಇಂದಿಗೆ 10 ವರ್ಷ- ಇನ್ನೂ ರೈತರಿಗೆ ಸಿಕ್ಕಿಲ್ಲ ಸೂಕ್ತ ಪರಿಹಾರ

    ಹಾವೇರಿ: ರೈತ ದೇಶದ ಬೆನ್ನೆಲುಬು. ಆತ ನಮಗೆ ಅನ್ನವನ್ನು ನೀಡುವ ಅನ್ನದಾತ. ಹಾಗಾಗಿ ಹಾವೇರಿಯಲ್ಲಿ ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿ ಇಂದಿಗೆ 10 ವರ್ಷ ಆಯ್ತು.

    ಜೂನ್ 10 2008 ರಂದು ಹಾವೇರಿ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ರೈತರು ಗಲಾಟೆ ಮಾಡಿದ್ದರು. ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರು. ಆ ವೇಳೆಗೆ ಸಿದ್ದಲಿಂಗಪ್ಪ ಚೂರಿ ಮತ್ತು ನೆಲೋಗಲ್ಲ ಗ್ರಾಮದ ರೈತ ಪುಟ್ಟಪ್ಪ ಹೊನ್ನತ್ತಿ ಗುಂಡೇಟಿಗೆ ಬಲಿಯಾಗಿದ್ದರು.

    ನ್ಯಾಯ ಕೊಡಿಸಬೇಕಾದ ಆಯೋಗವೇ ರೈತರನ್ನು ಗೂಂಡಾಗಳು ಅಂತಾ ವರದಿ ನೀಡಿತ್ತು. ಆದ್ರೆ ಈ ವರದಿಯನ್ನು ರಾಜ್ಯ ಸರ್ಕಾರ ಬಹಿರಂಗ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 50 ಸಾವಿರ ರೂಪಾಯಿ ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದು ಬಿಟ್ಟರೆ ಸೂಕ್ತ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ.

      

  • ಮಂಡ್ಯ: ಸಾಲಬಾಧೆ ತಾಳಲಾರದೆ ಡೆತ್‍ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

    ಮಂಡ್ಯ: ಸಾಲಬಾಧೆ ತಾಳಲಾರದೆ ಡೆತ್‍ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

    ಮಂಡ್ಯ: ಸಾಲಬಾಧೆ ತಾಳಲಾರದೆ ರೈತರೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ರೈತ ಕೃಷ್ಣೇಗೌಡ (41) ಆತ್ಮಹತ್ಯೆಗೆ ಶರಣಾದ ರೈತ. ಕೃಷ್ಣೇಗೌಡ ಅವರು ಸುಮಾರು ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆ ಬೆಳೆದಿದ್ರು. ಬೇಸಾಯಕ್ಕೆಂದು ಸುಮಾರು ಮೂರುವರೆ ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ರು. ಆದ್ರೆ ಬೆಳೆ ನೀರಿಲ್ಲದೆ ಒಣಗಿ ಹೋಗಿತ್ತು. ಜೊತೆಗೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಬೇಸತ್ತು ಇಂದು ಬೆಳಗ್ಗೆ ತಮ್ಮ ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ರೈತ ಕೃಷ್ಣೇಗೌಡ, ನನ್ನ ಸಾವಿಗೆ ನಾನೇ ಕಾರಣ. ನನ್ನ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ವ್ಯವಸಾಯಕ್ಕಾಗಿ ಬ್ಯಾಂಕ್ ನಲ್ಲಿ ಮತ್ತು ಸ್ನೇಹಿತರ ಬಳಿ ಸಾಲ ಮಾಡಿದ್ದೆ. ಯಾವುದೇ ಬೆಳೆ ಆಗದಿರುವುದರಿಂದ ಮನನೊಂದಿದ್ದೇನೆ. ದಯಮಾಡಿ ಕ್ಷಮಿಸಿ ಅಂತಾ ಬರೆದಿದ್ದಾರೆ. ಈ ಸಂಬಂಧ ಕೊಪ್ಪ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಯಚೂರಿನಲ್ಲಿ ಅದ್ಧೂರಿ ಮುಂಗಾರು ಹಬ್ಬ – ಆನೆ ಭಾರದ ಕಲ್ಲು ಎಳೆದು ಎತ್ತುಗಳ ಓಟ

    ರಾಯಚೂರಿನಲ್ಲಿ ಅದ್ಧೂರಿ ಮುಂಗಾರು ಹಬ್ಬ – ಆನೆ ಭಾರದ ಕಲ್ಲು ಎಳೆದು ಎತ್ತುಗಳ ಓಟ

    ರಾಯಚೂರು: ರಾಜ್ಯಕ್ಕೆ ಮುಂಗಾರು ಮಳೆ ಕಾಲಿಡುತ್ತಿದ್ದಂತೆ ರಾಯಚೂರು ರೈತರು ಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಕಾರಹುಣ್ಣಿಮೆಯನ್ನ ಮುಂಗಾರು ಸಾಂಸ್ಕೃತಿಕ ಹಬ್ಬವಾಗಿ ರೈತರು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.

    ವರುಣದೇವ ರೈತರ ಮೇಲೆ ಕರುಣೆ ತೋರಲಿ ಅನ್ನೋದು ಈ ಹಬ್ಬದ ಉದ್ದೇಶ. ಮೂರು ದಿನಗಳ ಕಾಲ ನಡೆಯಲಿರುವ ಈ ಸಂಭ್ರಮದಲ್ಲಿ ಮೊದಲ ದಿನವಾದ ಗುರುವಾರ ಎತ್ತುಗಳು ಭಾರದ ಕಲ್ಲನ್ನ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಈ ಬಾರಿ ಒಟ್ಟು 67 ಜೋಡಿ ಎತ್ತುಗಳು ಭಾಗವಹಿಸಿದ್ವು. ವಿಜೇತ ಎತ್ತುಗಳ ಜೋಡಿಗೆ 7.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತೆ.

    ಕಳೆದ 17 ವರ್ಷಗಳಿಂದ ನಡೆಯುತ್ತಿರುವ ಸ್ಪರ್ಧೆಯಲ್ಲಿ ರಾಜ್ಯ ಮಾತ್ರವಲ್ಲದೆ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಜೋಡಿ ಎತ್ತುಗಳು ಭಾಗಿಯಾಗುತ್ತವೆ.

  • ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ದಾಳಿ

    ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ದಾಳಿ

    ಹಾವೇರಿ: ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ಎರಗಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕಡೂರು ಗ್ರಾಮದ ಬಳಿ ನಡೆದಿದೆ.

    ಶೇಖಪ್ಪ ಕಮಟಳ್ಳಿ (40) ಗಾಯಗೊಂಡ ರೈತ. ಜಮೀನಿಗೆ ನೀರು ಹಾಯಿಸಲು ತೆರಳುತ್ತಿದ್ದ ವೇಳೆ ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದ್ದು, ಕಾಲು ಮತ್ತು ಮೈ, ಕೈಗೆ ಪರಚಿ ಗಾಯ ಮಾಡಿದೆ. ಶೇಕಪ್ಪ ಅವರನ್ನು ಈಗ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ರಾಮದ ಬಳಿಯೇ ಚಿರತೆಗಳು ಬಿಡಾರ ಹೂಡಿವೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಮೂರು ಚಿರತೆಗಳು ಬೋನಿಗೆ ಬಿದ್ದಿವೆ. ಚಿರತೆ ದಾಳಿಯಿಂದ ಕಡೂರು, ಕುಡುಪಲಿ, ಬುಳ್ಳಾಪುರ ಗ್ರಾಮದ ಜನರು ಆಂತಕಪಡುತ್ತಿದ್ದಾರೆ.

    ಸ್ಥಳಕ್ಕೆ ಹಿರೇಕೆರೂರು ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮುಕ್ಕಾಲು ಇಂಚು ನೀರಲ್ಲೇ 5 ಎಕರೆಯಲ್ಲಿ ಕೃಷಿ ಮಾಡ್ತಿರೋ ಚಿತ್ರದುರ್ಗದ ದಯಾನಂದ್ ಮೂರ್ತಿ

    ಮುಕ್ಕಾಲು ಇಂಚು ನೀರಲ್ಲೇ 5 ಎಕರೆಯಲ್ಲಿ ಕೃಷಿ ಮಾಡ್ತಿರೋ ಚಿತ್ರದುರ್ಗದ ದಯಾನಂದ್ ಮೂರ್ತಿ

    ಚಿತ್ರದುರ್ಗ: ಈ ಬೇಸಿಗೆಯಲ್ಲಿ ನೀರಿಲ್ಲದೇ ಎಷ್ಟೋ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿವೆ. ಆದರೆ ಚಿತ್ರದುರ್ಗದ ರೈತರೊಬ್ಬರು ಕೇವಲ ಮುಕ್ಕಾಲು ಇಂಚು ನೀರಿನಲ್ಲೇ ಸಮಗ್ರ ಕೃಷಿ ಮಾಡ್ತಿದ್ದಾರೆ. ಅಡಿಕೆ, ದಾಳಿಂಬೆ ಸೇರಿದಂತೆ ಸೊಂಪಾಗಿ ಮರ ಗಿಡಗಳನ್ನ ಬೆಳೆಸುತ್ತಿದ್ದಾರೆ.

    ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆಯ ಗ್ರಾಮದ ರೈತ ದಯಾನಂದ್ ಮೂರ್ತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ದಯಾನಂದ್ ಅವರು ಹನಿ ನೀರಾವರಿ ಮೂಲಕ ಕೃಷಿ ಮಾಡ್ತಿದ್ದಾರೆ. ಕೇವಲ ಮುಕ್ಕಾಲು ಇಂಚು ನೀರಿನ ಬೋರ್‍ವೆಲ್‍ನಲ್ಲಿ 5 ಎಕರೆಯಲ್ಲಿ ಕೃಷಿ ಮಾಡ್ತಿದ್ದಾರೆ. ಅಡಿಕೆ, ಬಾಳೆ, ದಾಳಿಂಬೆ, ನುಗ್ಗೆ, ಮಾವು, ತೆಂಗು, ಸಪೋಟ ಗಿಡ ಬೆಳೆದಿದ್ದಾರೆ.

    ಟೈಮ್‍ಟೇಬಲ್ ಪ್ರಕಾರ ಗಿಡಗಳಿಗೆ ಬಾಟಲಿ ಮೂಲಕ ರಂಧ್ರ ಮಾಡಿ ನೀರುಣಿಸ್ತಾರೆ. ಬೇಲಿಯ ನಡುವೆ ಸ್ವಿಲ್ವರ್, ಹೆಬ್ಬೇವು, ಹೊಂಗೆ, ಟೀಕ್, ಶ್ರೀಗಂಧದ ಗಿಡ ನೆಟ್ಟಿದ್ದಾರೆ. ದಾಳಿಂಬೆ ಕಾಪಾಡಿಕೊಳ್ಳಲು ಅಲ್ಲಲ್ಲಿ ಪಕ್ಷಿಗಳಿಗೆಂದೇ ಬಾಳೆಗೊನೆ, ಪಪ್ಪಾಯಿ ಹಣ್ಣುಗಳನ್ನ ಹಾಗೆ ಬಿಟ್ಟಿದ್ದಾರೆ. ಪ್ರಾಣಿ ಪಕ್ಷಿಗಳಿಗಾಗಿ ಅಲ್ಲಲ್ಲಿ ಪ್ಲಾಸ್ಟಿಕ್ ಬಟ್ಟಲುಗಳನ್ನ ಇಟ್ಟಿದ್ದಾರೆ.

    ಎಲ್‍ಎಲ್‍ಬಿ ಓದಿರೋ ದಯಾನಂದಮೂರ್ತಿ ಬೆಂಗಳೂರಲ್ಲಿ ವಾಚ್‍ಮನ್ ಆಗಿದ್ರು. ಆದರೆ ಆ ಕೆಲಸ ಬಿಟ್ಟು ಬಂದು ಒಂದು ರೂಪಾಯಿ ಸಾಲ ಕೂಡಾ ಮಾಡದೇ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ದಯಾನಂದಮೂರ್ತಿ ಅವರ ವಿಭಿನ್ನ ಕೃಷಿಗೆ ಹಲವು ಪ್ರಶಸ್ತಿಗಳು, ಗೌರವಗಳು ಹುಡುಕಿಕೊಂಡಿ ಬಂದಿವೆ. ವಿದ್ಯುತ್ ಸಮಸ್ಯೆ, ಕೂಲಿ ಕಾರ್ಮಿಕರ ತೊಂದರೆ, ಬೆಲೆ ಕುಸಿತದ ನಡುವೆಯೇ ದಯಾನಂದಮೂರ್ತಿ ಮಾದರಿ ರೈತನಾಗಿ ಕಾಣಿಸುತ್ತಾರೆ.

    https://www.youtube.com/watch?v=mUWR61s4cXs

  • ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಲಘಟಗಿಯಲ್ಲಿ ರೈತರಿಬ್ಬರು ಬಲಿ

    ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಲಘಟಗಿಯಲ್ಲಿ ರೈತರಿಬ್ಬರು ಬಲಿ

    ಧಾರವಾಡ: ವಿದ್ಯುತ್ ತಂತಿ ತಗುಲಿ ರೈತರಿಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಕಬ್ಬು ಬೆಳೆಯುವ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ್ ಕ್ಯಾರಕೊಪ್ಪ (52) ಹಾಗೂ ಚನ್ನಬಸಪ್ಪ ಧೂಳಿಕೊಪ್ಪ (45) ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ದುರ್ದೈವಿಗಳು.

    ಗಾಳಿಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಬಗ್ಗೆ ರೈತರು ಹೆಸ್ಕಾಂಗೆ ದೂರನ್ನ ನೀಡಿದ್ದರು. ದೂರು ನೀಡಿದ್ದರೂ ಸಿಬ್ಬಂದಿ ದುರಸ್ತಿ ಮಾಡಿರಲಿಲ್ಲ.

    ಘಟನೆ ನಡೆದ ನಂತರ ಆಕ್ರೋಶಿತ ರೈತರು ಕಲಘಟಗಿಯ ಹೆಸ್ಕಾಂ ಕಚೇರಿಗೆ ನುಗ್ಗಿ ಕಿಟಕಿ ಹಾಗೂ ಕುರ್ಚಿಗಳನ್ನ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಕೂಡಾ ನಡೆಸಲಾಗಿದೆ.

    ಇದೇ ವೇಳೆ ಸಾವನ್ನಪ್ಪಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು. ಕಲಘಟಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಯಾದಗಿರಿ: ವಿದ್ಯುತ್ ತಂತಿ ತಗುಲಿ ರೈತ ಸಾವು

    ಯಾದಗಿರಿ: ವಿದ್ಯುತ್ ತಂತಿ ತಗುಲಿ ರೈತ ಸಾವು

    ಯಾದಗಿರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೈತರೊಬ್ಬರು ವಿದ್ಯುತ್ ತಂತಿ ತುಳಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ನಡೆದಿದೆ.

    65 ವರ್ಷದ ಹಣಮಂತ ಡೊಣ್ಣೆಗೌಡ ಮೃತ ರೈತ. ಹಣಮಂತ ಅವರು ಪ್ರತಿ ದಿನದಂತೆ ಇಂದು ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದರು. ಸೋಮವಾರ ರಾತ್ರಿ ಗ್ರಾಮದಲ್ಲಿ ಭಾರೀ ಗಾಳಿ ಬೀಸಿದ್ದರಿಂದ ವಿದ್ಯುತ್ ತಂತಿ ತುಂಡಾಗಿ ಜಮೀನಿನಲ್ಲಿ ಬಿದ್ದಿದೆ.

     

    ವಿದ್ಯುತ್ ಪ್ರವಹಿಸುತ್ತಿರುವ ತಂತಿಯನ್ನ ಗಮನಿಸದ ರೈತ ಹಣಮಂತ ಅದನ್ನ ತುಳಿದು ಸಾವನ್ನಪ್ಪಿದ್ದಾರೆ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.