Tag: farmer

  • ಕತ್ತು ಕೊಯ್ದು ರೈತನ ಬರ್ಬರ ಹತ್ಯೆ

    ಕತ್ತು ಕೊಯ್ದು ರೈತನ ಬರ್ಬರ ಹತ್ಯೆ

    ಮಂಡ್ಯ: ರೈತರೊಬ್ಬರ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಚಿಕ್ಕತಿಮ್ಮಯ್ಯ (45) ಕೊಲೆಯಾದ ರೈತ. ಚಿಕ್ಕತಿಮ್ಮಯ್ಯ ಎಂದಿನಂತೆ ರಾತ್ರಿ ಜಮೀನಿನ ಬಳಿ ಕೆಲಸಕ್ಕೆ ಹೋಗಿದ್ರು. ಆದರೆ ಅವರು ತುಂಬಾ ಸಮಯ ಕಳೆದರೂ ಮನೆಗೆ ವಾಪಸ್ ಬಂದಿರಲಿಲ್ಲ. ಇದ್ರಿಂದ ತಮ್ಮ ಮನೆಯವರು ಜಮೀನಿನ ಬಳಿ ಹೋಗಿ ಪರಿಶೀಲನೆ ನಡೆಸಿದಾಗ ರೈತ ಚಿಕ್ಕತಿಮ್ಮಯ್ಯ ಅವರನ್ನ ಕತ್ತು ಕೊಯ್ದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಕೊಲೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

    ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೇಮಾವತಿ ನೀರಿನ ಹೋರಾಟಕ್ಕೆ ರಾಜ್ಯದಲ್ಲಿ ಮೊದಲ ಬಲಿ

    ಹೇಮಾವತಿ ನೀರಿನ ಹೋರಾಟಕ್ಕೆ ರಾಜ್ಯದಲ್ಲಿ ಮೊದಲ ಬಲಿ

    ತುಮಕೂರು: ಹೇಮಾವತಿ ನೀರಿನ ಹೋರಾಟಕ್ಕೆ ರೈತ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಬ್ಬಿ ತಾಲೂಕಿನ ಸೋಮಲಾಪುರದಲ್ಲಿ ನಡೆದಿದೆ.

    ಚಲುವರಾಜು(35) ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈತ. ನೀರು ಹರಿಯುತ್ತಿದ್ದ ನಾಲೆಯ ತೂಬು ಮುಚ್ಚಿಸಲು ಪೊಲೀಸರು ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

    ಮೃತ ಚಲುವರಾಜು ಅವರು ತೂಬು ಮುಚ್ಚುವುದನ್ನು ವಿರೋಧಿಸಿ ನಾಲೆಗೆ ಹಾರಿದ್ದಾರೆ. ಹೀಗಾಗಿ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋಗಿದ್ದಾರೆ. ಈ ಶವಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪೊಲೀಸರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=9fQtvqI96vs

  • ಒಂದು ಎಕ್ರೆ ಗಾತ್ರದ ಬೃಹತ್ ಬಲೂನ್ ಪತ್ತೆ

    ಒಂದು ಎಕ್ರೆ ಗಾತ್ರದ ಬೃಹತ್ ಬಲೂನ್ ಪತ್ತೆ

    ಕಲಬುರಗಿ: ಜಿಲ್ಲೆಯ ಚಿಂಚೋಳಿಯ ಹೊಸಳ್ಳಿ (ಎಚ್) ಗ್ರಾಮದ ರೈತರ ಜಮೀನಿನಲ್ಲಿ ಬೃಹತ್ ಆಕಾರದ ನಿಗೂಢ ಬಲೂನ್ ಪತ್ತೆಯಾಗಿದೆ.

    ಎಲ್ಲಿಂದಲ್ಲೋ ಆಗಸದಿಂದ ಹಾರಿ ಬಂದು ರೈತರ ಜಮೀನಿನಲ್ಲಿ ಆವರಿಸಿರುವ ಬೃಹತ್ ಬಲೂನ್ ಸುಮಾರು ಒಂದು ಎಕರೆ ಪ್ರದೇಶದಷ್ಟು ವಿಶಾಲವಾಗಿದೆ. ಈ ಅನಾಮಧೇಯ ಪ್ಲಾಸ್ಟಿಕ್ ಬಲೂನ್ ಕಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ವಿಚಾರ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.

    ಇದರ ಮಾಹಿತಿ ಪಡೆದ ಚಿಂಚೋಳಿ ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಲೂನ್ ಬಗ್ಗೆ ಯಾವ ಅಧಿಕಾರಿಗಳಿಗೂ ಸಹ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಬಲೂನ್‍ನಲ್ಲಿ ಯಾವುದೇ ಅಕ್ಷರಗಳು ಸಹ ಮುದ್ರಣವಾಗಿಲ್ಲ. ಹೀಗಾಗಿ ಈ ಬಲೂನ್ ಯಾರಿಗೆ ಸೇರಿದ್ದು? ಇಲ್ಲಿಗೆ ಬಂದಿದ್ದು ಹೇಗೆ? ಯಾರಾದರೂ ಬಲೂನ್ ಬಳಸಿ ಸಂಶೋಧನೆ ನಡೆಸುತ್ತಿದ್ದಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

    ಬಲೂನ್ ಮೂಲಕ ಕೆಲವೊಂದು ಕಂಪೆನಿಗಳು ಸಂಶೋಧನೆ ನಡೆಸುತ್ತಿವೆ. ವಿಶೇಷವಾಗಿ ಇಂಟರ್‍ನೆಟ್ ದಿಗ್ಗಜ ಗೂಗಲ್ ‘ಪ್ರೊಜೆಕ್ಟ್ ಲೂನ್’ ಹೆಸರಿನಲ್ಲಿ ಬಲೂನ್ ಮೂಲಕ ಇಂಟರ್‍ನೆಟ್ ನೀಡಲು ಮುಂದಾಗುತ್ತಿದೆ. ನ್ಯೂಜಿಲೆಂಡ್ ನಲ್ಲಿ ಮೊದಲ ಪ್ರಯೋಗ ನಡೆದಿದ್ದು, ಹಲವು ದೇಶಗಳ ಜೊತೆ ಗೂಗಲ್ ಇಂಟರ್‍ನೆಟ್ ಒದಗಿಸಲು ಒಪ್ಪಂದ ಮಾಡಿಕೊಂಡಿದೆ.

    https://youtu.be/HOndhtfIXSY

  • ರೈತರ ನೀರು ಕಸಿದ ಸಂಸದರ ಅಳಿಯ-ಪ್ರಶ್ನೆ ಮಾಡಿದ್ರೆ ಆಳು ಕಳಿಸಿ ಗೂಂಡಾಗಿರಿ

    ರೈತರ ನೀರು ಕಸಿದ ಸಂಸದರ ಅಳಿಯ-ಪ್ರಶ್ನೆ ಮಾಡಿದ್ರೆ ಆಳು ಕಳಿಸಿ ಗೂಂಡಾಗಿರಿ

    ಕೊಪ್ಪಳ: ರೈತರ ಜಮೀನಿಗೆ ಹರಿಯಬೇಕಿದ್ದ ಕೊಪ್ಪಳ ತಾಲೂಕಿನ ಹಿರೇಹಳ್ಳ ಕಾಲುವೆ ನೀರಿಗೆ ಸಂಸದ ಸಂಗಣ್ಣ ಕರಡಿ ಅವರ ಅಳಿಯ ಸಿದ್ದಲಿಂಗಪ್ಪ ಕನ್ನ ಹಾಕಿದ್ದಾರೆ.

     

    ಸಂಗಣ್ಣ ಕರಡಿ ಅವರ ಅಳಿಯ ಸಿದ್ದಲಿಂಗಪ್ಪ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ನೀಲಗಿರಿ, ಸಬಾಬುಲ್ಲಾ ಮರಗಳಿಗೆ ನೀರು ಉಪಯೋಗಿಸುತ್ತಿದ್ದಾರೆ. ತನ್ನ ಜಮೀನಿನ ಅರ್ಧ ಕೆರೆಯಲ್ಲಿ ನೀರನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ ಎಂದು ಗ್ರಾಮದ ರೈತರು ಆರೋಪಿಸುತ್ತಿದ್ದಾರೆ.

     

    ಈ ಸಂಬಂಧ ದೌರ್ಜನ್ಯವನ್ನು ಪ್ರಶ್ನಿಸಿದ ಗ್ರಾಮದ ರೈತರಿಗೆ ಆಳುಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಈ ಬಗ್ಗೆ ಸಂಸದ ಕರಡಿ ಸಂಗಣ್ಣ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಸಣ್ಣ ರೈತರು ಆರೋಪ ಮಾಡುತ್ತಾರೆ.

    ನಾನೇನು ಯಾರ ನೀರನ್ನೂ ಸಂಗ್ರಹಿಸಿಕೊಂಡಿಲ್ಲ. ನನ್ನ ಪಾಲಿನ ನೀರನ್ನು ರಾತ್ರಿ ಸಂಗ್ರಹಿಸಿಕೊಂಡು ಹಗಲಿನಲ್ಲಿ ಬಳಸಿಕೊಳ್ಳುತ್ತಿದ್ದೇನೆ. ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗ್ತಿದೆ ಎಂದು ಸಂಗಣ್ಣ ಕರಡಿ ಅವರ ಅಳಿಯ ಸಿದ್ದಲಿಂಗಪ್ಪ ಹೇಳುತ್ತಾರೆ.

    ರೈತರು ಸಾವಿರಾರು ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬೆಳೆ ನೀರಿಲ್ಲದೆ ಒಣಗಿಹೋಗ್ತಿದೆ. ಇಷ್ಟೆಲ್ಲಾ ಆಗ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಣ್ಣು ತೆರೆದು ಸಹ ನೋಡುತ್ತಿಲ್ಲ ಎಂಬುದು ರೈತರ ಆರೋಪ.

     

  • ನೇಗಿಲಯೋಗಿಯ ನಿದ್ದೆ ಕೆಡಿಸಿರೋ ಮಂಗಗಳ ಉಪಟಳ- ರೈತರ ಕಷ್ಟ ಕೇಳುವವರ್ಯಾರು?

    ನೇಗಿಲಯೋಗಿಯ ನಿದ್ದೆ ಕೆಡಿಸಿರೋ ಮಂಗಗಳ ಉಪಟಳ- ರೈತರ ಕಷ್ಟ ಕೇಳುವವರ್ಯಾರು?

    ಗದಗ: ಅದ್ಯಾಕೋ ರೈತರ ಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಒಂದಲ್ಲಾ ಒಂದು ಸಂಕಷ್ಟದ ಸುಳಿಗೆ ಸಿಲುಕಿ ರೈತ ನಲುಗುತ್ತಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲ. ಮತ್ತೊಂದೆಡೆ ಅಲ್ಪಸ್ವಲ್ಪ ಮಳೆಗೆ ಬೆಳೆದ ಬೆಳೆ ಮಂಗಗಳ ಹಾವಳಿಯಿಂದ ಹಾಳಾಗುತ್ತಿದೆ. ಬರಗಾಲದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆನಾಶದಿಂದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಗದಗ ತಾಲೂಕಿನ ನಾಗಾವಿ ಹಾಗೂ ಬೆಳದಡಿ ಭಾಗದ ಜಮೀನಿನಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಅಲ್ಪಸ್ವಲ್ಪ ಬೆಳೆದ ಹೆಸರು, ಶೇಂಗಾ ಬೆಳೆಯನ್ನ ಮಂಗಗಳ ಹಿಂಡು ಕಿತ್ತು ತಿಂದು ಹಾಕುವ ಮೂಲಕ ನಾಶ ಮಾಡುತ್ತಿವೆ. ಪ್ರತಿನಿತ್ಯ ರೈತರು ಬೆಳೆಯನ್ನ ಕಾಯಲೇಬೇಕು. ಈ ಭಾಗದಲ್ಲಿ ಅನೇಕ ರೈತರು ಬೆಳೆ ನಾಶದಿಂದ ಕಂಗಾಲಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ ಬೆಳೆ ಪರಿಹಾರ ಕೇಳಿದರೆ ನೋ ಚಾನ್ಸ್ ಎನ್ನುತ್ತಿದ್ದಾರೆ.

    ಮನುಷ್ಯರಂತೆ ವಾನರ ಸೈನ್ಯ ಸಾಲುಸಾಲಾಗಿ ಬಂದು ಬೆಳೆತಿಂದು ಹಾನಿ ಮಾಡುತ್ತಿವೆ. ಸಾಲ ಮಾಡಿ ಬೀಜಗೊಬ್ಬರ ಹಾಕಿ ಬೆಳೆದ ಬೆಳೆ ಕೈತಪ್ಪಿ ಹೊರಟಿದೆ. ಮಂಗಗಳಿಂದ ಹೆಸರು, ಶೇಂಗಾ ಬೆಳೆ ಕಳೆದುಕೊಂಡು ಕಂಗಲಾದ ರೈತರ ಜೀವನ ಈಗ ದುಸ್ತರವಾಗಿದೆ. ರೈತರಿಗೆ ಬೆಳೆ ಹಾನಿ ಕೊಡುವುದಾಗಿ ಸರ್ಕಾರ ಬರೀ ಹೇಳುತ್ತಿದೆ ವಿನಃ ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬುವುದು ರೈತರ ಆರೋಪವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಬೆಳೆಹಾನಿ ಬಗ್ಗೆ ಸೂಕ್ತ ಪರಿಶೀಲನೆ ಮಾಡಿ ಪರಿಹಾರ ನೀಡಬೇಕು. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡದೆ ಇದ್ದರೆ ಸಾಲದಿಂದ ಸಾಯುವುದಂತೂ ಖಚಿತ ಎಂದಿದ್ದಾರೆ.

    ನೇಗಿಲಯೋಗಿಯ ನಿದ್ದೆ ಕೆಡಿಸಿರೋ ಈ ಮಂಗಗಳ ಉಪಟಳ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಮಂಗಗಳಿಗೆ ಪ್ರತ್ಯೇಕ ಅರಣ್ಯ ಮಾಡಬೇಕು. ಇಲ್ಲಾ ಅಂದರೆ ಇವುಗಳನ್ನು ಹಿಡಿದು ಕಾಡು, ಬೆಟ್ಟ, ಗುಡ್ಡಗಳಿಗೆ ಸಾಗಿಸಬೇಕು ಎಂಬುವುದು ರೈತರ ಒತ್ತಾಯವಾಗಿದೆ. ಇನ್ನಾದರೂ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡುತ್ತಾ ಅಥವಾ ಈ ಕೋತಿಗಳನ್ನ ಕಾಡಿಗೆ ಕಳಿಸುವ ಮೂಲಕ ರೈತರ ಕಷ್ಟಗಳನ್ನ ಮುಕ್ತಿಗೊಳಿಸುತ್ತಾ ಎಂದು ಕಾದು ನೋಡಬೇಕಿದೆ.

     

     

  • ಅಮಿತ್ ಶಾ, ರಾಹುಲ್ ಗಾಂಧಿ ಪ್ರವಾಸದ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದು ಹೀಗೆ

    ಅಮಿತ್ ಶಾ, ರಾಹುಲ್ ಗಾಂಧಿ ಪ್ರವಾಸದ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದು ಹೀಗೆ

    ಧಾರವಾಡ: ರಾಷ್ಟ್ರೀಯ ಪಕ್ಷಗಳ ಮುಖಂಡರಾದ ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ಪಕ್ಷ ಬೆಳವಣಿಗೆ ಬಗ್ಗೆ ಮಾತ್ರ ಪ್ರವಾಸ ಮಾಡುತ್ತಿದ್ದು, ಮಹದಾಯಿ ಬಗ್ಗೆ ಚಕಾರ ಎತ್ತಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

    ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರಿಗೆ ನೀರಿನ ಹಾಹಾಕಾರ ಎದುರಾಗಿದೆ. ಮಹದಾಯಿ ನೀರಿನ ಸಮಸ್ಯೆ ಇದ್ದರೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಮುಖ್ಯವಾಗಿದೆ ಎಂದರು.

    ರೈತರಿಗೆ ಬೇಕಾದ ನೀರಿನ ವಿಷಯ ಎತ್ತುತ್ತಿಲ್ಲ. ಮಹದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಗೋವಾ ಸಿಎಂ ನಿರ್ಲಜ್ಜ ಸಿಎಂ ಎಂದು ಕಿಡಿಕಾರಿದರು. ಚುನಾವಣೆಯಲ್ಲಿ ರಾಜಕೀಯ ಮಾಡದೇ, ರಾಜ್ಯದ ರೈತರ ಹಾಹಾಕಾರ ಇದೆ. ಅದಕ್ಕೆ ಪರಿಹಾರ ಕೊಡುವ ಕೆಲಸವನ್ನು ಅಮಿತ್ ಶಾ ಮಾಡಬೇಕು ಎಂದು ತಿಳಿಸಿದರು.

    ನಾನೀಗಾಗಲೇ ಅಮಿತ್ ಶಾ ಅವರಿಗೆ ಪತ್ರ ಬರೆದು ಮಹದಾಯಿ ಬಗ್ಗೆ ಉಲ್ಲೇಖ ಮಾಡಿದ್ದೇನೆ. ಕಾಂಗ್ರೆಸ್‍ನ ರಾಹುಲ್ ಗಾಂಧಿ ಕೂಡಾ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಎರಡು ವರ್ಷದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಪ್ರತಿಕ್ರಿಯೇ ಇಲ್ಲ. ರೈತರ ಮೇಲೆ ಕೇಸ್ ಹಾಕಿದ್ರೂ ಜನ ಛೀ.. ಥೂ.. ಅಂದರೂ ಸಮಸ್ಯೆ ಮಾತ್ರ ಸರಿಯಾಗುತ್ತಿಲ್ಲ. ಸೋನಿಯಾ ಗಾಂಧಿ ಅವರು ಕೂಡಾ ಮಹದಾಯಿ ಜೋಡಿಸುವ ವಿಚಾರದಲ್ಲಿ ಮೌನವಾಗಿದ್ದಾರೆ. ಬಿಜೆಪಿಗೆ ಜನರು ಅಧಿಕಾರ ಕೊಟ್ಟಿದ್ದಾರೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರೆಸಿದರೆ ಕೇಂದ್ರ ಸರ್ಕಾರದಲ್ಲಿ ಸೋನಿಯಾ ಗಾಂಧಿಗೆ ಆದ ಸ್ಥಿತಿ ನಿಮಗೂ ಆಗುತ್ತೆ ಎಂದು ಎಚ್ಚರಿಕೆ ನೀಡಿದರು.

    ನಾಲ್ಕು ಜಿಲ್ಲೆಯ ಜನರು ಚುನಾವಣೆಗೆ ಬಹಿಷ್ಕಾರ ಹಾಕಬೇಕು. ನೀರು ತಂದು ಕೊಟ್ಟವರಿಗೆ ಓಟು ಹಾಕುವ ಕೆಲಸ ಆಗಬೇಕು. ನಿರ್ಗಮಿತ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ದೇಶದಲ್ಲಿ ಮುಸ್ಲಿಮರು ಅಸುರಕ್ಷಿತ ಎಂದು ಹೇಳಿದ್ದಾರೆ. ಎರಡು ಬಾರಿ ನೀವು ಹಿಂದೂ ಸುರಕ್ಷತೆಯಲ್ಲಿ ಉಪರಾಷ್ಟ್ರಪತಿಯಾಗಿದ್ದೀರಿ. ಹೀಗಾಗಿ ಈ ರೀತಿ ಹೇಳಿಕೆ ನೀಡಿರುವುದು ಮೂರ್ಖತನವಾಗಿದೆ ಎಂದು ಹೇಳಿದರು.

  • ಮಲ್ಟಿಫ್ಲೆಕ್ಸ್, ಥಿಯೇಟರ್‍ಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್- ಎಳನೀರು ಮಾರಲು ಸರ್ಕಾರ ಆದೇಶ

    ಮಲ್ಟಿಫ್ಲೆಕ್ಸ್, ಥಿಯೇಟರ್‍ಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್- ಎಳನೀರು ಮಾರಲು ಸರ್ಕಾರ ಆದೇಶ

    ಮೈಸೂರು: ಜಿಲ್ಲೆಯ ಎಲ್ಲಾ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ ಥಿಯೇಟರ್ ಗಳಲ್ಲಿ ಕೂಲ್ ಡ್ರಿಂಕ್ಸ್ ಮಾರಾಟವನ್ನು ಮೈಸೂರು ಜಿಲ್ಲಾಡಳಿತ ಬಂದ್ ಮಾಡಿದೆ.

    ಬರಗಾಲದ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯಿಂದ ಎಲ್ಲಾ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ ಥಿಯೇಟರ್ ಗಳಲ್ಲಿ ಕಡ್ಡಾಯವಾಗಿ ಎಳನೀರು ಮಾರಾಟ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶಿಸಿದ್ದಾರೆ.

    ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಈ ಕುರಿತು ತೋಟಗಾರಿಕೆ ಸಚಿವರಿಗೆ ಪತ್ರವನ್ನು ಬರೆದಿದ್ದರು. ಈ ನಿಟ್ಟಿನಲ್ಲಿ ತೋಟಗಾರಿಕೆ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಎಲ್ಲಾ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ ಥಿಯೇಟರ್ ಗಳಲ್ಲಿ ಎಳನೀರು ಮಾರಾಟ ಮಾಡಲು ಕ್ರಮ ವಹಿಸುವಂತೆ ಪತ್ರದಲ್ಲಿ ಬರೆಯಲಾಗಿತ್ತು.

    ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳು ಆದೇಶ ಜಾರಿ ಮಾಡಿದ್ದು, ಮೈಸೂರು ಚಲನಚಿತ್ರ ಮಂದಿರಗಳ ಒಕ್ಕೂಟದ ಅಧ್ಯಕ್ಷರಿಗೆ ಈ ಕುರಿತು ಆದೇಶ ಪತ್ರ ರವಾನಿಸಿದ್ದಾರೆ.

  • ತಂದೆ-ತಾಯಿಯ ಸಮಾಧಿ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡ ರೈತ

    ತಂದೆ-ತಾಯಿಯ ಸಮಾಧಿ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡ ರೈತ

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೂರು ಗ್ರಾಮದಲ್ಲಿ ಕೊಳವೆಬಾವಿಗಳ ವೈಫಲ್ಯ ಹಾಗೂ ಸಾಲಬಾಧೆಯಿಂದ ಮನನೊಂದ ರೈತರೊಬ್ಬರು ತನ್ನ ತಂದೆ-ತಾಯಿಯ ಸಮಾಧಿ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    43 ವರ್ಷದ ಪ್ರಕಾಶ್ ಆತ್ಮಹತ್ಯೆಗೆ ಶರಣಾಗಿರುವ ರೈತ. ಮೃತ ಪ್ರಕಾಶ್ ಪತ್ನಿ ಸಾಲ ತೀರಲಿ ಅಂತ ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿದ್ದ ವೇಳೆ ರೈತ ಪ್ರಕಾಶ್ ತನ್ನ ಜಮೀನನಲ್ಲೇ ಇರುವ ತಂದೆ-ತಾಯಿ ಸಮಾಧಿಗಳ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ರೈತರ ಪ್ರತಿಭಟನೆಯಿಂದ ಹಾರಂಗಿ ಡ್ಯಾಂನಿಂದ ಕಾಲುವೆಗಳಿಗೆ ನೀರು

    ರೈತರ ಪ್ರತಿಭಟನೆಯಿಂದ ಹಾರಂಗಿ ಡ್ಯಾಂನಿಂದ ಕಾಲುವೆಗಳಿಗೆ ನೀರು

    ಮಡಿಕೇರಿ: ಕೊಡಗಿನಾದ್ಯಂತ ಹಲವು ದಿನಗಳಿಂದ ಮಳೆ ಸುರಿದು ಹಳ್ಳಕೊಳ್ಳ ಉಕ್ಕಿ ಹರಿದರೂ ಜಿಲ್ಲೆಯ ರೈತಾಪಿ ವರ್ಗ ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯದಿಂದ ಕೃಷಿ ಚಟುವಟಿಕೆಗಾಗಿ ಕಾಲುವೆಗಳಿಗೆ ನೀರು ಹರಿಸುವಂತೆ ಕೆಲವು ದಿನಗಳ ಹಿಂದೆ ನಾಲೆಗಳಿಗೆ ನೀರು ಬೀಡಬೇಕು ಎಂದು ಆಗ್ರಹಿಸಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.

    ಕೆಆರ್‍ಎಸ್ ತುಂಬಿಸಲು ಹಾರಂಗಿಯಿಂದ ನೀರು ಹರಿಸಲಾಗುತ್ತಿದೆ. ಆದರೆ ಈ ನೀರು ಕರ್ನಾಟಕದ ರೈತರಿಗೆ ಸಿಗದೇ ತಮಿಳುನಾಡುಗೆ ಹೋಗುತ್ತಿದೆ. ಹೀಗಾಗಿ ತಮಿಳುನಾಡಿಗೆ ಹರಿಸುವ ನೀರನ್ನು ನಿಲ್ಲಿಸಿ, ನಾಲೆಗಳಿಗೆ ನೀರು ಹರಿಸಬೇಕು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ನಾಲೆಗಳಿಗೆ 50 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇನ್ನು ನದಿಗೆ 5200 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

    ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ ಇದ್ದು, ಇಂದಿನ ನೀರಿನ ಮಟ್ಟ 2858.28 ಅಡಿ ಇದೆ. ಕಳೆದ ವರ್ಷ ಇದೆ ದಿನ 2857.83 ಅಡಿ ಇದ್ದು, ಇಂದಿನ ನೀರಿನ ಒಳ ಹರಿವು 3907 ಕ್ಯೂಸೆಕ್ ಇದೆ. ಕಳೆದ ವರ್ಷ ಇದೆ ದಿನ ನೀರಿನ ಒಳಹರಿವು 3885 ಕ್ಯೂಸೆಕ್ ಇತ್ತು. ಇಂದು ನದಿಗೆ 5200 ಕ್ಯೂಸೆಕ್ ನೀರನ್ನು ಹರಿಸುತ್ತಿದ್ದರೆ, ನಾಲೆಗೆ 50 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?

    ಕ್ಯೂಸೆಕ್ ಎಂಬುದು cubic foot per second ಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

     

     

  • ಕೆರೆಗಳಿಗೆ ಹರಿದ ಜೀವನದಿ ಕಾವೇರಿ ನೀರು-ರೈತರು ಕಬ್ಬು, ಭತ್ತ ಬೆಳೆಯದಂತೆ ಫರ್ಮಾನು!

    ಕೆರೆಗಳಿಗೆ ಹರಿದ ಜೀವನದಿ ಕಾವೇರಿ ನೀರು-ರೈತರು ಕಬ್ಬು, ಭತ್ತ ಬೆಳೆಯದಂತೆ ಫರ್ಮಾನು!

    ಮಂಡ್ಯ: ಇಂದಿನಿಂದ ಕಾವೇರಿಕೊಳ್ಳದಲ್ಲಿರುವ ಕೆರೆಗಳಿಗೆ ಕಾವೇರಿ ನೀರು ಹರಿಯಲಿದೆ. ಅಂದರೆ ಕೆಆರ್‍ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಡ್ಯಾಂನಲ್ಲಿರುವ ನೀರನ್ನು ಹರಿಸಿ ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ.

    ಬುಧವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಂಡ್ಯ ಭಾಗದ ಶಾಸಕರು, ಸಂಸದರು, ಜನಪ್ರತಿನಿಧಿಗಳ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾವೇರಿಯ ನಾಲ್ಕೂ ಡ್ಯಾಮ್‍ಗಳಿಂದ ಕೆರೆ-ಕಟ್ಟೆಗಳಿಗೆ ರಾತ್ರಿಯಿಂದಲೇ 15 ದಿನ ನೀರು ಹರಿಯಲಿದೆ ಅಂತಾ ಸರ್ಕಾರ ಘೋಷಿಸಿದೆ. ಆದ್ರೆ ಕೆರೆಗಳಿಗೆ ತುಂಬುವ ನೀರನ್ನು ಕುಡಿಯುವ ಮತ್ತು ಜಾನುವಾರುಗಳಿಗೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಮಾತ್ರ ಬಳಕೆ ಮಾಡಲಾಗುತ್ತದೆ ಅಂತಾ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

    ನೀರು ಬಿಟ್ಟ ಮಾತ್ರಕ್ಕೆ ಕಾವೇರಿಕೊಳ್ಳದ ರೈತರು ಭತ್ತ ಮತ್ತು ಕಬ್ಬು ಬೆಳೆಯಬಾರದು ಅಂತಾ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಮುಂಗಾರು ಕೊರತೆ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ಮೋಡ ಬಿತ್ತನೆ ಮಾಡ್ತೀವಿ ಅಂತಾ ಸಿಎಂ ಹೇಳಿದ್ದಾರೆ.

    ಕಾವೇರಿಗೆ ಬಾಗಿನ: ಕೆಆರ್‍ಎಸ್ ಅಣೆಕಟ್ಟೆಯಿಂದ ಮಧ್ಯರಾತ್ರಿಯಿಂದಲೇ ನಾಲೆಗಳಿಗೆ ನೀರು ಹರಿಸಿದ್ರಿಂದ ಹೋರಾಟಗಾರರು ಕಾವೇರಿ ನೀರಿಗೆ ಬಾಗಿನ ಅರ್ಪಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿಗೆ ನಿರಂತರವಾಗಿ ಕೆಆರ್‍ಎಸ್ ನೀರು ಹರಿಸುತ್ತಿದ್ದ ರಾಜ್ಯ ಸರ್ಕಾರ ರೈತರ ಬೆಳೆಗೆ ನೀರು ನೀಡಿರಲಿಲ್ಲ.

    ವಸ್ತುಸ್ಥಿತಿ ಅರಿತಿದ್ದ ರೈತರು ನಮ್ಮ ಬೆಳೆಗೆ ನೀರು ಬೇಡ, ನಾಲೆಗಳ ಮುಖಾಂತರ ನೀರು ಹರಿಸಿ ಕೆರೆಕಟ್ಟೆನಾದ್ರು ತುಂಬಿಸಿ. ಆ ಮೂಲಕ ಜನ, ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಿ ಎಂದು ಸರ್ಕಾರದ ವಿರುದ್ಧ ತಿಂಗಳಾನುಗಟ್ಟಲೆ ಪ್ರತಿಭಟನೆ ನಡೆಸಿದ್ರು. ಕಸ್ತೂರಿ ಕರ್ನಾಟಕ ಜನಪರವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಮಂಡ್ಯದ ಎಲ್ಲ ಕೆರೆಕಟ್ಟೆ ತುಂಬಿಸುವಂತೆ ಮದ್ದೂರಮ್ಮ ಕೆರೆಯಲ್ಲಿ ಕಳೆದೊಂದು ತಿಂಗಳಿಂದ ನಿರಂತವಾಗಿ ಅಹೋರಾತ್ರಿ ಧರಣಿ ನಡೆಸಲಾಗಿತ್ತು.

    ರೈತರು, ಕನ್ನಡಪರ ಹೋರಾಟಗಾರರ ಬೇಡಿಕೆಗೆ ಮಣಿದ ಸರ್ಕಾರ ಕೊನೆಗೂ ಮಧ್ಯರಾತ್ರಿಯಿಂದಲೇ ಕೆಆರ್‍ಎಸ್ ಅಚ್ಚುಕಟ್ಟು ವ್ಯಾಪ್ತಿಯ ವಿಶ್ವೇಶ್ವರಯ್ಯ, ವಿರಿಜಾ, ಚಿಕ್ಕದೇವರಾಯ, ವರುಣ, ಆರ್‍ಬಿಎಲ್‍ಎಲ್ ನಾಲೆಗಳಿಗೆ ನೀರು ಹರಿಸಿದೆ. ನೀರನ್ನು ಖುಷಿಯಿಂದ ಸ್ವಾಗತ ಮಾಡಿದ ಕಸ್ತೂರಿ ಕರ್ನಾಟಕ ಜನಪರವೇದಿಕೆ ಕಾರ್ಯಕರ್ತರು, ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪಾಂಡವಪುರ ತಾಲೂಕಿನ ಕಟ್ಟೇರಿ ಸಮೀಪ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ವಿಸಿ ನಾಲೆಗೆ ಬಾಗಿನ ಅರ್ಪಿಸಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.