Tag: farmer

  • ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ – ರಥೋತ್ಸವದಲ್ಲಿ ಹರಕೆ ತೀರಿಸಿದ ರೈತ

    ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ – ರಥೋತ್ಸವದಲ್ಲಿ ಹರಕೆ ತೀರಿಸಿದ ರೈತ

    ವಿಜಯನಗರ: ಸಾಮಾನ್ಯವಾಗಿ ಕೃಷಿ ಕೆಲಸ ಮಾಡುವವರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರಲ್ಲ. ಈ ಹಿನ್ನೆಲೆಯಲ್ಲಿ ಯುವ ರೈತನೊಬ್ಬ, ರೈತರಿಗೆ (farmer) ಕನ್ಯೆ ಕೊಡಲಿ ಎಂದು ಬರೆದು ರಥೋತ್ಸವದಲ್ಲಿ ಹರಕೆ ತೀರಿಸಿದ್ದಾನೆ.

    ವಿಜಯನಗರ (Vijayanagara) ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ ನಿನ್ನೆ (ಬುಧವಾರ) ಸಂಜೆ ಜರುಗಿದೆ‌. ಈ ರಥೋತ್ಸವದಲ್ಲಿ, ಓರ್ವ ಯುವ ರೈತ ಬಾಳೆಹಣ್ಣಿನ ಮೇಲೆ ಬರೆದಿರುವ ಹರಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹರಿಕೆಯಲ್ಲಿ ಏನಿದೆ?: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ ಎಂದು ಬಾಳೆಹಣ್ಣಿನ ಮೇಲೆ ಬರೆದಿದ್ದಾನೆ. ಇದನ್ನು ನಂತರ ರಥೋತ್ಸವದ ವೇಳೆ ದುರ್ಗಾದೇವಿ ರಥಕ್ಕೆ ಸಮರ್ಪಿಸಿ ತನ್ನ ಹರಕೆಯನ್ನು ಸಮರ್ಪಣೆ ಮಾಡಿದ್ದಾನೆ. ಇದನ್ನೂ ಓದಿ: ಹೂಡಿಕೆದಾರರ ಹಿತಾಸಕ್ತಿಯೇ ನನಗೆ ಮುಖ್ಯ – 20,000 ಕೋಟಿ ಮೌಲ್ಯದ FPO ಹಿಂಪಡೆದ ಬಳಿಕ ಅದಾನಿ ಮೊದಲ ಪ್ರತಿಕ್ರಿಯೆ

    ತಾಯಿ ದುರ್ಗಾಂಬಿಕೆ ಜನರ ಮನಸ್ಸು ಬದಲಾಯಿಸಿ, ರೈತರಿಗೂ ಮದುವೆಯಾಗಲು ಹೆಣ್ಣು ಸಿಗಲಿ. ಎಲ್ಲರಿಗೂ ಈ ರೀತಿಯ ಮನಸ್ಥಿತಿಯನ್ನು ಕರುಣಿಸಲಿ ಎಂದು ಹರಕೆ ತೀರಿಸಿದ್ದಾರೆ. ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳ್ಳಿ, ಬಂಗಾರ ಪದಕ ಗೆದ್ದುಕೊಟ್ಟಿದ್ದ `ಮೈಸೂರು ಹುಲಿ-193′ ಖ್ಯಾತಿಯ ಕೊಬ್ಬರಿ ಹೋರಿ ಸಾವು

    ಬೆಳ್ಳಿ, ಬಂಗಾರ ಪದಕ ಗೆದ್ದುಕೊಟ್ಟಿದ್ದ `ಮೈಸೂರು ಹುಲಿ-193′ ಖ್ಯಾತಿಯ ಕೊಬ್ಬರಿ ಹೋರಿ ಸಾವು

    ಹಾವೇರಿ: ನಾಡ ಪ್ರಸಿದ್ಧಿ ಕೊಬ್ಬರಿ ಹೋರಿ (Kobbari Hori) ಸ್ಪರ್ಧೆಯಲ್ಲಿ ಹೆಸರು ಮಾಡಿ ಬೆಳ್ಳಿ, ಬಂಗಾರ ಪದಕ ಬಹುಮಾನವಾಗಿ ಗೆದ್ದು ತಂದುಕೊಟ್ಟಿದ್ದ `ಮೈಸೂರು ಹುಲಿ-193′ (Mysuru Huli 193) ಖ್ಯಾತಿಯ ಹೋರಿ ಅನಾರೋಗ್ಯದಿಂದ ಸಾವನ್ನಪ್ಪಿದೆ.

    ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು (Ranebennur) ನಗರದ ಕುರುಬಗೇರಿ ಓಣಿಯಲ್ಲಿ ಕೊಬ್ಬರಿ ಹೋರಿ ಸಾವನ್ನಪ್ಪಿದ್ದು, ಸಾವಿರಾರು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಮಾಲೀಕರು ಹೋರಿಯನ್ನ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಹೋರಿ ರೈತ (Farmer) ನಾಗಪ್ಪ ಗೂಳಣ್ಣನವರ್ ಎಂಬವರಿಗೆ ಸೇರಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಪ್ರಬಲ ಭೂಕಂಪ – 7 ಮಂದಿ ಸಾವು, 400ಕ್ಕೂ ಹೆಚ್ಚು ಜನರಿಗೆ ಗಾಯ

    13 ವರ್ಷಗಳಿಂದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಸೊಲಿಲ್ಲದ ಸರದಾರನಾಗಿದ್ದ `ಮೈಸೂರು ಹುಲಿ 193′ ಕೊಬ್ಬರಿ ಹೋರಿಯ ಸ್ಪರ್ಧೆಯಲ್ಲಿ ಬಂಗಾರ, ಬೆಳ್ಳಿ, ಬೈಕ್ ಸೇರಿದಂತೆ ಹಲವಾರು ಬಹುಮಾನಗಳನ್ನು ಗೆದ್ದುಕೊಟ್ಟಿತ್ತು. ಅಲ್ಲದೇ `ಪೀಪಿ ಹೋರಿ’ ಎಂದೂ ಹೆಸರು ಮಾಡಿತ್ತು. ಇದನ್ನೂ ಓದಿ: `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಪತ್ನಿ ಕೊಲೆ – ಆರೋಪಿ ಪತಿಯಿಂದ ರೋಚಕ ರಹಸ್ಯ ಬಯಲು

    ಭಾನುವಾರ (ಜ.29) ಮಧ್ಯಾಹ್ನ 1:30ರ ವೇಳೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ, ಹಿಂದೂ ವಿಧಿವಿಧಾನಗಳ ಮೂಲಕ ಕೊಬ್ಬರಿ ಹೋರಿ ಅಂತ್ಯಕ್ರಿಯೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ದಂಪತಿ ಪಾರು- ಸ್ಥಳೀಯರ ಆಕ್ರೋಶ

    ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ದಂಪತಿ ಪಾರು- ಸ್ಥಳೀಯರ ಆಕ್ರೋಶ

    ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಹೊಲದಲ್ಲಿ ರಾಗಿ ಕಾಯುತ್ತಾ ಮಲಗಿದ್ದ ರೈತನ ಮೇಲೆ ಕಾಡಾನೆ (Wild Elephant) ದಾಳಿ ಮಾಡಿ ಕೊಂದ ಘಟನೆ ನಡೆದು 24 ಗಂಟೆಯೂ ಆಗಿಲ್ಲ. ಇದೀಗ ಮತ್ತೊಂದು ಆನೆ ದಾಳಿ ಪ್ರಕರಣ ದಾಖಲಾಗಿದೆ.

    ತರೀಕೆರೆ ತಾಲೂಕಿನ ರಾಗಿಬಸವನಹಳ್ಳಿಯಲ್ಲಿ ಹೊಲದಲ್ಲಿ ರಾಗಿ ಕಾಯುತ್ತಾ ಮಲಗಿದ್ದ 65 ವರ್ಷದ ಈರಣ್ಣ ಎಂಬವರ ಮೇಲೆ ದಾಳಿ ಮಾಡಿದ ಕಾಡಾನೆ ಅವರನ್ನ ಕೊಂದಿತ್ತು. ಇಂದು ಬೆಳಗ್ಗೆ ಮೂಡಿಗೆರೆ (Mudigere) ತಾಲೂಕಿನ ಬಣಕಲ್ ಸಮೀಪ ರಸ್ತೆಬದಿ ಆಶ್ರಯ ಪಡೆದಿದ್ದವರ ಮೇಲೂ ಕಾಡಾನೆ ದಾಳಿ ಮಾಡಿದೆ. ಆದರೆ ಅದೃಷ್ಟವಶಾತ್ ಮೂವರು ಸಾವಿನಿಂದ ಪಾರಾಗಿದ್ದಾರೆ. ಹಾಸನ (Hassan) ಜಿಲ್ಲೆ ಬೇಲೂರು ತಾಲೂಕಿನ ಹಗರೆ ಮೂಲದ ನಾಗವಲ್ಲಿ ಹಾಗೂ ಗಂಡುಗುಸೆ ಎಂಬ ದಂಪತಿ ಕೂಲಿ ಕೆಲಸಕ್ಕೆಂದು ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮಕ್ಕೆ ಬಂದಿದ್ದರು. ಬಣಕಲ್ ಗ್ರಾಮದ ಪಶು ಆಸ್ಪತ್ರೆ ಬಳಿ ಟೆಂಟ್ ಹಾಕಿಕೊಂಡು ಮಲಗಿದ್ದಾಗ ಕಾಡಾನೆ ದಾಳಿ ಮಾಡಿದೆ. ಅದೃಷ್ಟವಶಾತ್ ದಂಪತಿ ಹಾಗೂ ಮತ್ತೊಬ್ಬರು ಒಟ್ಟು ಮೂವರು ಸಾವಿನಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಜಲೀಲ್‌ ಹತ್ಯೆ ಕೇಸ್‌ – ಇಬ್ಬರು ಮಹಿಳೆಯರ ವಿಚಾರಣೆ, ಗಾಂಜಾ ಮಾಫಿಯಾದ ವಾಸನೆ

    ನಾಗವಲ್ಲಿ ಹಾಗೂ ಗಂಡುಗುಸೆ ದಂಪತಿಗೆ ತೀವ್ರ ಗಾಯವಾಗಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗವಲ್ಲಿಗೆ ಸೊಂಟದ ಭಾಗಕ್ಕೆ ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೇಲಿಂದ ಮೇಲೆ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದರೂ ಆನೆ ಹಾವಳಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳದ ಅರಣ್ಯ ಇಲಾಖೆ (Forest Department) ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಬಣಕಲ್ ಗ್ರಾಮದ ಪಶು ಆಸ್ಪತ್ರೆ ಬಳಿ ಆನೆ ಬಂದಿದೆ ಅಂದರೆ ಆಲ್‍ಮೋಸ್ಟ್ ಕಾಡಾಂಚಿನ ಗ್ರಾಮಗಳಲ್ಲಿದ್ದ ಆನೆ ಹಾವಳಿ ಈಗ ನಗರ ಪ್ರದೇಶಕ್ಕೂ ಕಾಲಿಟ್ಟಿದೆ. ಬಣಕಲ್ ಸುಮಾರು 400ಕ್ಕೂ ಹೆಚ್ಚು ಮನೆಗಳಿಗರು ಹೋಬಳಿ ಕೇಂದ್ರ. ಅಲ್ಲಿಗೆ ಆನೆ ಬಂದಿದೆ ಅಂದರೆ ಜನ ತೀವ್ರ ಕಂಗಾಲಾಗಿದ್ದಾರೆ. ಈಗಾಗಲೇ ಕಳೆದ ಆರು ತಿಂಗಳಲ್ಲಿ ಮೂಡಿಗೆರೆಯಲ್ಲಿ ಮೂವರು ಕಾಡಾನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ.

    ಜನ ಕಾಡಾನೆ ದಾಳಿಯಿಂದ ಕಂಗೆಟ್ಟು ಶಾಸಕರ ಮೇಲೂ ಹಲ್ಲೆ ಮಾಡಿದ್ದರು. ಅರಣ್ಯ ಇಲಾಖೆ ಕಚೇರಿಯ ಗೇಟ್ ಮುರಿದಿದ್ದರು. ಕಳ್ಳ ಭೇಟೆ ನಿಗ್ರಹ ದಳದ ಕ್ಯಾಂಪನ್ನ ದ್ವಂಸ ಮಾಡಿದ್ದರು. ಬಳಿಕ ಅರಣ್ಯ ಇಲಾಖೆ ಮೂರು ಕಾಡಾನೆಗಳನ್ನ ಸೆರೆ ಹಿಡಿದಿದ್ದರು. ಆದರೆ ನರಹಂತಕ ಒಂಟಿ ಸಲಗ ಮೂಡಿಗೆರೆ ಭೈರನನ್ನ ಸೆರೆ ಹಿಡಿದಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದರು. ಇಂದು ಬೆಳಗ್ಗೆ ಬಣಕಲ್ ಗ್ರಾಮಕ್ಕೆ ಬಂದಿರುವ ಒಂಟಿ ಸಲಗ ಕೂಡ ಅದೇ ಭೈರ ಎಂಬ ಮಾತುಗಳು ಕೇಳಿ ಬಂದಿದೆ. ಮಲೆನಾಡಲ್ಲಿ ದಿನದಿಂದ ದಿನಕ್ಕೆ ಆನೆ ಹಾವಳಿ ಮೀತಿ ಮೀರಿದ್ದು ಜನ ನೆಮ್ಮದಿಯಿಂದ ಬದುಕೋದಕ್ಕೆ ಅಸಾಧ್ಯವಾದಂತಹ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಸಾವು

    ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಸಾವು

    ಚೆನ್ನೈ: ಹಿಂದಿ ಹೇರಿಕೆ (Hindi imposition) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹಿರಿಯ ಡಿಎಂಕೆ ಕಾರ್ಯಕರ್ತರೊಬ್ಬರು ಮೈಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಸೇಲಂ ಜಿಲ್ಲೆಯ ಪಕ್ಷದ ಕಚೇರಿ ಬಳಿ ನಡೆದಿದೆ.

    MK STALIN AND ANNAMALAI

    ಗಾಯಗೊಂಡಿರುವ ವ್ಯಕ್ತಿಯನ್ನು ಡಿಎಂಕೆ ರೈತ (DMK farmer) ವಿಭಾಗದ ಮಾಜಿ ಕಾರ್ಯಕರ್ತ 85 ವರ್ಷದ ತಂಗವೇಲ್ ಎಂದು ಗುರುತಿಸಲಾಗಿದೆ. ಪಕ್ಷದ ಕಚೇರಿ ಮುಂದೆ ಶನಿವಾರ ತಂಗವೇಲ್ ಅವರು ಹಿಂದಿ ಹೇರಿಕೆ ವಿರುದ್ಧ ಘೋಷಣೆಯನ್ನು ಕೂಗುತ್ತಾ, ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಇದೇ ವೇಳೆ ಪಕ್ಷದ ಕೆಲವು ಕಾರ್ಯಕರ್ತರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೋತ್ತಿಗೆ ಬೆಂಕಿ ಮೈ ತುಂಬಾ ಹರಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: `ಗಾಲ್ವಾನ್ ಸೇಸ್ ಹಾಯ್’ – ರಿಚಾ ಚಡ್ಡಾ ಬೆಂಬಲಿಸಿದ ನಟ ಪ್ರಕಾಶ್ ರಾಜ್

    ತಮಿಳು ಭಾಷೆ ಇರುವಾಗ ಹಿಂದಿ ಹೇರುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಬರೆದ ಕಾಗದವನ್ನು ಪ್ರತಿಭಟನಾಕಾರರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ವ್ಯಕ್ತಿಯ ಸಾವಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Chief Minister MK Stalin) ಅವರು, ಇನ್ಮುಂದೆ ಯಾರು ಪ್ರಾಣ ಕಳೆದುಕೊಳ್ಳಬಾರದು. ಹಿಂದಿ ಹೇರಿಕೆಯ ವಿರುದ್ಧ ರಾಜಕೀಯವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರದಿಂದ (Central Government) ಪ್ರತಿಕ್ರಿಯೆ ಬರುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣ – ಮೂರರಲ್ಲಿ 2 ಗೋಪುರ ತೆರವು

    Live Tv
    [brid partner=56869869 player=32851 video=960834 autoplay=true]

  • ಜ್ಯೋತಿಷಿ ಮಾತು ಕೇಳಿ ರೈತನೊಬ್ಬ ನಾಲಿಗೆಗೆ ಹಾವಿನಿಂದ ಕಚ್ಚಿಸಿಕೊಂಡ

    ಜ್ಯೋತಿಷಿ ಮಾತು ಕೇಳಿ ರೈತನೊಬ್ಬ ನಾಲಿಗೆಗೆ ಹಾವಿನಿಂದ ಕಚ್ಚಿಸಿಕೊಂಡ

    ಚೆನ್ನೈ: ರೈತನೊಬ್ಬ (Farmer) ಜ್ಯೋತಿಷಿಯೊಬ್ಬರ (Astrologer) ಸಲಹೆಯ ಮೇರೆಗೆ ಕೊಳಕು ಮಂಡಲ ಹಾವಿನಿಂದ (Snake) ನಾಲಿಗೆಯನ್ನು (Tongue) ಕಚ್ಚಿಸಿಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ (Tamil Nadu) ಈರೋಡ್‍ನಲ್ಲಿ ನಡೆದಿದೆ.

    ಕಾಪಿಚೆಟ್ಟಿ ಪಾಳ್ಯಂನ ನಿವಾಸಿ ರಾಜಾ (54) ಎಂಬಾತನಿಗೆ ಆಗಾಗ ಹಾವು ಕಚ್ಚುವ ಕನಸು ಬೀಳುತ್ತಿತ್ತು. ಇದರಿಂದಾಗಿ ರಾಜ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಜ್ಯೋತಿಷಿ ರಾಜನಿಗೆ ಹಾವಿನ ದೇವಸ್ಥಾನಕ್ಕೆ ಹೋಗಿ ಕೆಲವು ಆಚರಣೆಗಳನ್ನು ಮಾಡಲು ತಿಳಿಸಿದ್ದಾರೆ. ಆ ಆಚರಣೆಗಳಲ್ಲಿ ಹಾವಿನ ಬಳಿ ನಾಲಿಗೆ ಚಾಚುವುದು ಒಂದಾಗಿತ್ತು. ಜ್ಯೋತಿಷಿಗಳ ಸಲಹೆಯ ಮೇರೆಗೆ ರಾಜ ದೇವಸ್ಥಾನಕ್ಕೆ ಹೋಗಿ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ. ಅದಾದ ಬಳಿಕ ರಾಜ ಕೊಳಕುಮಂಡಲದ ಮುಂದೆ ಮೂರು ಬಾರಿ ನಾಲಿಗೆಯನ್ನು ಚಾಚಿದ್ದಾನೆ. ಈ ವೇಳೆ ಆ ಹಾವು ರಾಜನ ನಾಲಿಗೆಯನ್ನು ಕಚ್ಚಿದೆ.

    ರಾಜನಿಗೆ ಹಾವು ಕಚ್ಚಿದ್ದನ್ನು ಕಂಡ ದೇವಸ್ಥಾನದ ಅರ್ಚಕರು ಕೂಡಲೇ ಆತನನ್ನು ಈರೋಡ್ ಮಣಿಯನ್ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿ ರಾಜನ ನಾಲಿಗೆಯನ್ನು ತುಂಡರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಶಿವಲಿಂಗದ ಮೇಲೆ ಮೂಡಿದ ಕಣ್ಣಿನ ಆಕೃತಿ – ವಿಸ್ಮಯ ನೋಡಲು ಮುಗಿಬಿದ್ದ ಜನ

    crime

    ಈ ಬಗ್ಗೆ ಮಣಿಯನ್ ಮೆಡಿಕಲ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಸೆಂಥಿಲ್ ಕುಮಾರನ್ ಮಾತನಾಡಿ, ವೈದ್ಯರು ರಾಜಾನ ನಾಲಿಗೆ ಕತ್ತರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಜೊತೆಗೆ ಹಾವಿನ ವಿಷಕ್ಕೆ ಪ್ರತಿವಿಷವನ್ನೂ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ – ಮಹಾರಾಷ್ಟ್ರದ 42 ಗ್ರಾಮಗಳ ಒಕ್ಕೊರಲಿನ ಮನವಿ

    Live Tv
    [brid partner=56869869 player=32851 video=960834 autoplay=true]

  • ಬೀದರ್‌ನಲ್ಲೊಬ್ಬ ಮಾದರಿ ರೈತ- 2 ಎಕರೆಯಲ್ಲಿ ಹೀರೇಕಾಯಿ ಬೆಳೆದು ಕಮಾಲ್

    ಬೀದರ್‌ನಲ್ಲೊಬ್ಬ ಮಾದರಿ ರೈತ- 2 ಎಕರೆಯಲ್ಲಿ ಹೀರೇಕಾಯಿ ಬೆಳೆದು ಕಮಾಲ್

    ಬೀದರ್: ತೊಗರಿ, ಕಬ್ಬು ಸೇರಿದಂತೆ ಸಾಮಾನ್ಯ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಳ್ಳುತ್ತಿದ್ದ ರೈತನಿಂದ ಡಿಫರೆಂಟ್ ಐಡಿಯಾ. ಕಡಿಮೆ ನೀರು, ಕಡಿಮೆ ಖರ್ಚು, ಕಡಿಮೆ ಜಮೀನಿನಲ್ಲಿ ಹಿರೇಕಾಯಿ (Ridge Gourd) ಬೆಳೆ ಬೆಳೆದು ತಿಂಗಳಿಗೆ ಲಕ್ಷ ಲಕ್ಷ ಲಾಭ ಪಡೆಯುತ್ತಿದ್ದಾರೆ ಈ ಮಾದರಿ ರೈತ.

    ಬೀದರ್ (Bidar) ತಾಲೂಕಿನ ಅತಿವಾಳ ಗ್ರಾಮದ ರೈತ ಶಾಲಿವಾನ್ ತಮ್ಮ ಎರಡು ಎಕರೆಯಷ್ಟು ಜಮೀನಿನಲ್ಲಿ ಹಿರೇಕಾಯಿ ಬೆಳೆದು ಎರಡು ದಿನಕ್ಕೊಮ್ಮೆ 10 ಸಾವಿರ ಆದಾಯ ಗಳಿಸುತ್ತಿದ್ದಾರೆ. ಪ್ರತಿ ವರ್ಷ ಉದ್ದು, ಸೋಯಾ, ಹೆಸರು ಮತ್ತು ಕಬ್ಬು ಬೆಳೆ ಬೆಳೆದು ಕೈ ಸುಟ್ಟುಕೊಂಡಿದ್ದ ಶಾಲಿವಾನ್, ತೋಟಗಾರಿಕೆ ಬೆಳೆಯಲ್ಲಿ ವಿನೂತನ ಪ್ರಯತ್ನ ಮಾಡಿದ್ದಾರೆ. ಹಿರೇಕಾಯಿ ಕಳೆದೊಂದು ತಿಂಗಳಿಂದ ನಿರಂತರವಾಗಿ ಒಂದು ದಿನ ಬಿಟ್ಟು ಒಂದು ದಿನ ಕಟಾವಿಗೆ ಬರ್ತಿದೆ. ಪ್ರತಿಯೊಂದು ಕಟಾವಿಗೂ ಒಂದು ಕ್ವಿಂಟಾಲ್‍ವರೆಗೂ ಬೆಳೆ ಸಿಗುತ್ತಿದ್ದು, 10 ರಿಂದ 15 ಸಾವಿರ ರೂಪಾಯಿವರೆಗೂ ಆದಾಯ ಬರುತ್ತಿದೆ.

    ಪ್ರಗತಿಪರ ರೈತ ಶಾಲಿವಾನ್ ಕಳೆದ 20 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಹೊಸ ತಂತ್ರಜ್ಞಾನವನ್ನು ಆಳವಡಿಕೊಳ್ಳುವಲ್ಲಿ ಮುಂದಿದ್ದಾರೆ. ಕಳೆದ ಬಾರಿ ಎರಡು ಎಕರೆಯಷ್ಟು ಜಮೀನಿನಲ್ಲಿ ಟೊಮ್ಯಾಟೋ (Tomato) ಬೆಳೆದು 10 ಲಕ್ಷ ರೂಪಾಯಿಯಷ್ಟು ಲಾಭವಾಗಿತ್ತು. ಇವರ ರೀತಿ ಎಲ್ಲ ರೈತರು ಪ್ರಯೋಗಾತ್ಮಕ ಕೃಷಿಯನ್ನು ಅಳವಡಿಸಿಕೊಂಡಾಗ ರೈತ ಆತ್ಮಹತ್ಯೆ ಕಡೆ ಮುಖ ಮಾಡೋದು ಕಡಿಮೆಯಾಗುತ್ತದೆ. ಇದನ್ನೂ ಓದಿ: ಕೈಕೊಟ್ಟ ಲವರ್‌ಗೆ ಠಕ್ಕರ್ ಕೊಡಲು ಆಕೆಯ ಮೊದಲ ಅಕ್ಷರ ಬಳಸಿ ಚಹಾ ಅಂಗಡಿ ತೆರೆದ ಪ್ರೇಮಿ

    ಇನ್ನಾದರೂ ರೈತರು ಸಾಲ ಮಾಡಿ ಸಾಮಾನ್ಯ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಳ್ಳುವುದಕ್ಕಿಂತ್ತ ಮುಂಚೆ ಲಾಭ ಕೊಡುವ ಈ ರೀತಿಯ ಬೆಳೆಗಳ ಕಡೆ ರೈತರು ಮುಖ ಮಾಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಖರೀದಿಸಿದ ಆರೇ ತಿಂಗಳಲ್ಲಿ ವಾಹನ ರಿಪೇರಿ- ಹಳೆ ಇಂಜಿನ್‍ಗೆ ಹೊಸ ಬಾಡಿ ಹಾಕಿರುವ ಆರೋಪ

    ಖರೀದಿಸಿದ ಆರೇ ತಿಂಗಳಲ್ಲಿ ವಾಹನ ರಿಪೇರಿ- ಹಳೆ ಇಂಜಿನ್‍ಗೆ ಹೊಸ ಬಾಡಿ ಹಾಕಿರುವ ಆರೋಪ

    ತುಮಕೂರು: ಕಾರು (Car) ಖರೀದಿ ಮಾಡಲು ಹೋಗಿದ್ದ ರೈತನ ಕೊಳಕು ಬಟ್ಟೆ ನೋಡಿ, ಮಹಿಂದ್ರಾ ಶೋ ರೂಂ ಸಿಬ್ಬಂದಿ ಅವಮಾನ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಅದೇ ತುಮಕೂರಿ (Tumakuru) ನಲ್ಲಿ ಟಾಟಾ ಶೋ ರೂಂನಿಂದ ಯುವ ರೈತನೋರ್ವನಿಗೆ ಮೋಸ ಆಗಿದೆ. ಖರೀದಿಸಿದ ಟಾಟಾ ಗೂಡ್ಸ್ ವಾಹನ (TaTa Goods) 25 ದಿನಕ್ಕೆ ಕೆಟ್ಟು ನಿಂತಿದೆ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿ ಕೊಟ್ಟಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

    ಹೌದು.. ತುಮಕೂರಿನ ಅಂತರಸಹಳ್ಳಿಯ ಟಾಟಾ ಶೋರೂಂನಲ್ಲಿ ಹೆಬ್ಬೂರಿನ ಕುಮಾರ್ ಎಂಬ ಯುವ ರೈತನೋರ್ವ ಮೇ ತಿಂಗಳಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನ ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ 25 ದಿನದಲ್ಲೇ ವಾಹನ ರಿಪೇರಿಗೆ ಬಂದಿದೆ. ಸ್ಟೇರಿಂಗ್ ಸಮಸ್ಯೆ, ಚಾರ್ಸಿ ವೆಲ್ಡಿಂಗ್, ಎಕ್ಸ್ ಲೇಟರ್ ಒತ್ತಿದಾಗ ಗಾಡಿ ಪೂರ್ತಿ ಶೇಖ್ ಆಗೋ ಸಮಸ್ಯೆ ಕಂಡು ಬಂದಿದೆ. ಕಂಪನಿ ರೂಲ್ಸ್ ಪ್ರಕಾರ 72 ಸಾವಿರ ಕಿ.ಮೀ. ಒಳಗೆ ಓಡಿದರೆ ರೀಪ್ಲೇಸ್‌ಮೆಂಟ್‌ ಮಾಡಿಕೊಡಬೇಕು. ಆದರೆ ಶೋ ರೂಂನವರು ಕಳೆದ 6 ತಿಂಗಳಲ್ಲಿ ಬರೋಬ್ಬರಿ 11 ಬಾರಿ ರಿಪೇರಿ ಮಾಡಿ ಕಳುಹಿಸಿದ್ದಾರೆಯೇ ಹೊರತು ಬದಲಿ ವಾಹನ ಕೊಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಯುವ ರೈತ ಕುಮಾರ್ ಟಾಟಾ ಶೋ ರೂಂ ಬಳಿ ಪ್ರತಿಭಟನೆ ಮಾಡಿದ್ದಾರೆ.

    ಯುವ ರೈತ ಕುಮಾರ್ ಕೃಷಿ ಬಳಕೆಗೆ ವಾಹನ ಬಳಸುವ ಜೊತೆಗೆ ರೈತರಿಂದ ಸಂಗ್ರಹಿಸಿದ ಹಾಲನ್ನೂ ವಾಹನದ ಮೂಲಕ ಡೈರಿಗೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ. ಮೊನ್ನೆ ದಿನ ಗೂಡ್ಸ್ ವಾಹನ ಮತ್ತೇ ಇದ್ದಕ್ಕಿದ್ದ ಹಾಗೆ ಕೈಕೊಟ್ಟಿತು. ಪರಿಣಾಮ ಸಕಾಲಕ್ಕೆ ಡೈರಿಗೆ ತಲುಪಲು ಆಗದೇ ಸುಮಾರು 900 ಲೀಟರ್ ಹಾಲು ಕೆಟ್ಟು ಹೋಗಿ ಸುಮಾರು 27 ಸಾವಿರ ರೂ. ನಷ್ಟ ಆಗಿದೆ. ಕಾಟಾಚಾರಕ್ಕೆ ಶೋರೂಂನವರು ರಿಪೇರಿ ಮಾಡಿಕೊಡ್ತಿದ್ದಾರೆಯೇ ಹೊರತು ಬದಲಿ ವಾಹನ ಕೊಡುವ ಮಾತನಾಡುತ್ತಿಲ್ಲ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿಕೊಟ್ಟಿದ್ದಾರೆ ಅನ್ನೋ ಆರೋಪ ಕುಮಾರ್ ಮಾಡಿದ್ದಾರೆ. ಆದರೆ ಶೋ ರೂಂನವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ.

    ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಾಹನ ಖರೀದಿಸಿ ಪರದಾಡುತ್ತಿದ್ದ ಯುವ ರೈತ ಕುಮಾರ್ ಬದಲಿ ವಾಹನ ಕೊಡುವಂತೆ ಪಟ್ಟು ಹಿಡಿದಿದ್ದಾನೆ. ಇದನ್ನೂ ಓದಿ: ನಮ್ಮಿಂದ ಏನೂ ಮೋಸ ಆಗಿಲ್ಲ, ಎಲ್ಲವೂ ಗ್ರಾಹಕನದ್ದೇ ತಪ್ಪು: ತುಮಕೂರು ಶೋ ರೂಂ ಸ್ಪಷ್ಟನೆ

    ಆರೋಪ ತಳ್ಳಿಹಾಕಿದ ಶೋ ರೂಂ
    ಅಂತರಸನಹಳ್ಳಿಯ ಟಾಟಾ ಪ್ರೇರಣಾ ಮೋಟರ್ಸ್ ನಲ್ಲಿ ಯುವ ರೈತ ಕುಮಾರ್ ಖರೀದಿಸಿದ್ದ ಟಾಟಾ ಇಂಟ್ರಾ ಗೂಡ್ಸ್ (TATA Intra Goods) ವಾಹನದಲ್ಲಿ ಮೋಸ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋ ರೂಂ ಸರ್ವಿಸ್ ಮ್ಯಾನೇಜರ್ ಏಕನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಸ್ಪಷ್ಟನೆ ಏನು?: 27 ಸಾವಿರ ಕಿ.ಮೀ. ಗಾಡಿ ರನ್ ಆಗಿದ್ದಾಗ ಒಂದು ಬಾರಿ ಸರ್ವಿಸ್ ಮಾಡಲು ಗಾಡಿ ತಂದಿದ್ದಾರೆ. ಪವರ್ ಸ್ಟೇರಿಂಗ್ ಸಮಸ್ಯೆ ಎಂದು ಬಂದಿದ್ದರು. ಅವಾಗ ನಾವು ಬದಲಾವಣೆ ಮಾಡಿಕೊಟ್ಟಿದ್ದೇವೆ. ಈಗ ಬಂದು ಹೊಸ ಸಮಸ್ಯೆ ಹೇಳುತ್ತಿದ್ದಾರೆ. ಹೊಂಡ ಗುಂಡಿಯಲ್ಲಿ ಗಾಡಿ ಬಿದ್ರೆ ಟಕ್ ಎಂದು ಸೌಂಡ್ ಬರುತ್ತೆ ಅಂತ ಹೇಳುತ್ತಿದ್ದಾರೆ. ಅದು ನಮಗೆ ಕಂಡು ಬರುತ್ತಿಲ್ಲ.

    ಗಾಡಿಯನ್ನು ಒಂದು ದಿನ ಸಂಪೂರ್ಣವಾಗಿ ಶೋ ರೂಂನಲ್ಲಿ ಬಿಟ್ಟು ಹೋಗಿ ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ಗಾಡಿ ಬಿಟ್ಟು ಹೋಗಲಿಕ್ಕೆ ಮುಂದಾಗುತ್ತಿಲ್ಲ. ಒಂದು ದಿನ ಗಾಡಿ ಬಿಟ್ಟು ಹೋದರೆ ನಮಗೆ ವ್ಯವಹಾರ ನಷ್ಟ ಆಗುತ್ತದೆ ಅಂತ ಹೇಳುತ್ತಾರೆ. ಗಾಡಿ ರಿಪೇರಿಗೆ ಬಿಟ್ಟರೆ ಒಂದು ದಿನದ ಮಟ್ಟಿಗೆ ಬದಲಿ ಇನ್ನೊಂದು ಗಾಡಿ ಅವರಿಗೆ ಕೊಡಬೇಕಂತೆ. ಇಲ್ಲಾಂದ್ರೆ ಆ ದಿನದ ಒಂದು ಬಾಡಿಗೆ ಕೊಡಿ ಅಂತ ಹೇಳ್ತಾರೆ. ಯಾವ ಕಂಪನಿಯಲ್ಲೂ ಆ ರೀತಿ ಆಯ್ಕೆ ಇಲ್ಲ.

    ಈ ಮಾದರಿಯ ವಾಹನದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ದೂರು ಬಂದಿಲ್ಲ. ಮೊದಲ ಬಾರಿಗೆ ದೂರು ಬಂದಿದೆ. ಅವರು ಗಾಡಿಯನ್ನು ಒಂದಿನ ಪೂರ್ತಿ ಗ್ಯಾರೇಜ್ ನಲ್ಲಿ ಬಿಟ್ಟು ಹೋದರೆ ನಾವು ಫ್ರೀ ಆಫ್ ಕಾಸ್ಟ್ಲಿ ಎಲ್ಲವೂ ರೆಡಿ ಮಾಡಿಕೊಡುತ್ತೇವೆ. ನಿಮ್ಮ ಗಾಡಿಯ ಸಮಸ್ಯೆಯನ್ನು ನೀವೇ ಮುಂದೆ ನಿಂತು ರಿಪೇರಿ ಮಾಡಿಕೊಂಡು ಹೋಗಿ ಎಂದು ನಾವು ಹೇಳಿದ್ದೇವೆ. ಆದರೆ ಅವರು ನಮ್ಮ ಮಾತು ಕೇಳುತ್ತಿಲ್ಲ. ಇದನ್ನೂ ಓದಿ: ಶಾಲೆಗೆ ಹೋಗಿದ್ದ 7ನೇ ಕ್ಲಾಸ್ ಬಾಲಕಿ ನಾಪತ್ತೆ – ಸ್ಕೂಲ್ ಬಳಿ ಬ್ಯಾಗ್ ಬಿಟ್ಟು ಕಣ್ಮರೆ

    ಆರು ತಿಂಗಳಿಗೆ 70 ಸಾವಿರ ಕಿ.ಮೀ. ಗಾಡಿ ಓಡಿದೆ. ಅಷ್ಟೊಂದು ರನ್ ಆಗಲು ಹೇಗೆ ಸಾಧ್ಯ? ಟಾಟಾ ಮೋಟರ್ಸ್ ಮೊದಲ 72 ಸಾವಿರ ಕಿ.ಮೀ.ವರೆಗೆ ಮಾತ್ರ ಉಚಿತವಾಗಿ ರಿಪೇರಿ ಮಾಡಲಿಕ್ಕೆ ಅವಕಾಶ ಇದೆ. ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಏಕನಾಥ್ ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಳೆಯಿಂದ ರಕ್ಷಿಸಲು ಮೇಕೆಗಳಿಗೆ ರೈನ್‍ಕೋಟ್ ಸಿದ್ಧ ಮಾಡಿದ ರೈತ

    ಮಳೆಯಿಂದ ರಕ್ಷಿಸಲು ಮೇಕೆಗಳಿಗೆ ರೈನ್‍ಕೋಟ್ ಸಿದ್ಧ ಮಾಡಿದ ರೈತ

    ಚೆನ್ನೈ: ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ರೈತರೊಬ್ಬರು (Farmer) ತಮ್ಮ ಮೇಕೆಗಳಿಗೆ (Goats) ತಿರುಗಾಡಿ ಮೇಯಿಸಲು ತೊಂದರೆ ಆಗಬಾರದು ಎಂದು ತಾತ್ಕಾಲಿಕ ರೈನ್‍ಕೋಟ್‍ಗಳನ್ನು ರಚಿಸಿದ್ದಾರೆ.

    ತಮಿಳುನಾಡಿನ (Tamil Nadu) ತಂಜಾವೂರಿನ (Thanjavur) ಕುಲಮಂಗಲಂ ಗ್ರಾಮದ ಗಣೇಶನ್ (70) ಎಂಬವರಿಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಜಮೀನಿನಲ್ಲಿ ಕುರಿಗಳು, ಹಸುಗಳು, ಕೋಳೀಗಳನ್ನು ಸಹ ಸಾಕುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ತನ್ನ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಹಾಗೂ ಮೇಕೆಗಳು ಮೇಯುವಾಗ ವಿಪರೀತ ಚಳಿಯಿಂದ ನಡುಗುತ್ತಿರುವುದನ್ನು ಅವರು ಗಮನಿಸಿದ್ದಾರೆ.

    ಇದರಿಂದಾಗಿ ಅವುಗಳ ರಕ್ಷಣೆಗೆ ಏನಾದರೂ ಮಾಡಬೇಕು ಎಂದುಕೊಂಡ ಗಣೇಶನ್ ಅವುಗಳಿಗೆ ರೈನ್‍ಕೋಟ್‍ನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಕಿ ಮೂಟೆಗಳನ್ನು ತಂದ ಚೀಲವನ್ನು ಅವರು ತಮ್ಮ ಮೇಕೆಗಳಿಗೆಂದೇ ರೈನ್ ಕೋಟ್‍ಗಳನ್ನಾಗಿ ಪರಿವರ್ತಿಸಿದರು. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಮೊದಲಿಗೆ ಅಲ್ಲಿನ ಗ್ರಾಮಸ್ಥರು ಗಣೇಶನ್ ಅವರ ಈ ಕೆಲಸದಿಂದ ಆಶ್ಚರ್ಯಕ್ಕೊಳಗಾದರೂ, ಆನಂತರದಲ್ಲಿ ಗಣೇಶನ್ ಅವರಿಗೆ ಮೇಕೆಗಳ ಮೇಲಿರುವ ಕಾಳಜಿಯ ಕುರಿತು ಶ್ಲಾಘಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್‍ಗೆ ಹೆಚ್ಚಾಯ್ತು ಫೈಟ್

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗಲು ಹುಡುಗಿಗಾಗಿ ಕ್ಯೂ ನಿಂತ ಮಂಡ್ಯ ಯುವ ರೈತರು

    ಮದುವೆಯಾಗಲು ಹುಡುಗಿಗಾಗಿ ಕ್ಯೂ ನಿಂತ ಮಂಡ್ಯ ಯುವ ರೈತರು

    ಮಂಡ್ಯ: ರೈತಾಪಿ ವರ್ಗದ ಯುವಕರು ಮದುವೆಯಾಗಲು ಹೆಣ್ಣು ಕೇಳಲು ಹೋದ್ರೆ ಹೆಣ್ಣೆತ್ತವರು ಹುಡುಗ ಏನು ಮಾಡ್ಕೊಂಡು ಇದ್ದಾನೆ ಅಂದಾಗ ರೈತನಾಗಿದ್ದಾನೆ ಅಂದ್ರೆ ಸಾಕು ಮೂಗು ಮುರಿಯುತ್ತಾರೆ. ಹೀಗಾಗಿ ಯುವಕರು ಮದುವೆಯಾಗಲು ಹೆಣ್ಣು ಸಿಗದೇ ಇದೀಗ ವಧು-ವರರ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಳ ಸಂಗಾತಿಗಾಗಿ ಕ್ಯೂ ನಿಂತಿದ್ದಾರೆ.

    ರೈತ (Farmer) ದೇಶದ ಬೆನ್ನೆಲುಬು, ರೈತನಿದ್ದರೆ ಮಾತ್ರ ದೇಶ ಸುಭೀಕ್ಷವಾಗಿ ಇರುತ್ತೆ ಅಂತಾ ಹೇಳ್ತಾರೆ. ಆದರೆ ಇದೀಗ ಅಂತಹ ರೈತ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ಮದುವೆಯಾಗಲು ರೈತ ಹೆಣ್ಣು ಕೇಳಲು ಹೋದ್ರೆ, ಹೆಣ್ಣೆತ್ತವರು ನಾವು ರೈತರಿಗೆ ನಮ್ಮ ಮಗಳನ್ನು ಕೊಡುವುದಿಲ್ಲ. ನಾವು ಪಟ್ಟಣದಲ್ಲಿ ಕೆಲಸದಲ್ಲಿ ಇರುವವರಿಗೆ ನಮ್ಮ ಮಗಳನ್ನು ಕೊಡ್ತೀವಿ ಎನ್ನುವವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ರೈತ ಯುವಕರು (Farmer Marriage) ದಾಂಪತ್ಯ ಜೀವನ ತುಳಿಯಲು ಹುಡುಗಿ ಸಿಗದೇ ಮಂಡ್ಯ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪರದಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಗೆ ಎಂದ್ರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ಒಕ್ಕಲಿಗ ವಧು-ವರ ಸಮಾವೇಶ. ಇದನ್ನೂ ಓದಿ:  ಮಂಡ್ಯದಲ್ಲಿ ರಸ್ತೆ ಗುಂಡಿಗೆ ನಿವೃತ್ತ ಯೋಧ ಬಲಿ

    ಭಾನುವಾರ ಆದಿಚುಂಚನಗಿರಿ (Adichunchanagiri) ಯಲ್ಲಿ ನಡೆದ ವಧು-ವರರ ಸಮಾವೇಶದಲ್ಲಿ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ನಾನ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಧು-ವರರ ಆಯ್ಕೆಗೆ ಬಂದಿದ್ದಾರೆ. ಸುಮಾರು 12 ಸಾವಿರ ಮಂದಿ ಸಮಾವೇಶದಲ್ಲಿ ರಿಜಿಸ್ಟರ್ ಆಗಿದ್ದು, ಈ ಪೈಕಿ 250 ಮಂದಿ ಹುಡುಗಿಯರು ವರನಿಗಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಉಳಿದ 11,750 ಮಂದಿ ಯುವಕರು ದಾಂಪತ್ಯ ಜೀವನಕ್ಕೆ ಕಾಲಿಡಲು ವಧುವಿಗಾಗಿ ಹುಡುಕಾಟ ನಡೆಸಲು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಪೈಕಿ ಅತೀ ಹೆಚ್ಚು ರೈತ ಸಮುದಾಯದ ಯುವಕರೇ ಇರುವುದು ಆಶ್ಚರ್ಯದ ಸಂಗತಿಯಾಗಿದೆ.

    ಒಟ್ಟಾರೆ ರೈತನೇ ದೇಶದ ಬೆನ್ನೆಲುಬು ಎಂದು ಹೇಳುವಾಗ ರೈತನ ಆರ್ಥಿಕತೆ ಸುಧಾರಿಸಲು ಸರ್ಕಾರ ಸರಿಯಾದ ಕಾರ್ಯಕ್ರಮಗಳನ್ನು ಜಾರಿಗೆ ತಾರದ ಕಾರಣ ರೈತರ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ. ಮದುವೆಯಾಗಲು ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂದ್ರೆ ರೈತರ ಸ್ಥಿತಿ ಎಷ್ಟರ ಮಟ್ಟಿಗೆ ಇದೆ ಎಂದು ಗೊತ್ತಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಕುಸಿದ ಬೆಲೆ- ರಸ್ತೆಗೆ ಹೂವು ಚೆಲ್ಲಿ ರೈತ ಕಣ್ಣೀರು

    ಕುಸಿದ ಬೆಲೆ- ರಸ್ತೆಗೆ ಹೂವು ಚೆಲ್ಲಿ ರೈತ ಕಣ್ಣೀರು

    ಕೋಲಾರ: ಸರಣಿ ಹಬ್ಬಗಳು ಮುಗಿಯುತ್ತಿದ್ದಂತೆ ಚೆಂಡು ಹೂವಿಗೆ ಬೆಲೆ ಇಲ್ಲದೆ ಹೂವು ಬೆಳೆಗಾರರು ಕಂಗಾಲಾಗಿದ್ದಾರೆ.

    ರೈತರು (Farmer) ಬೆಳೆದು ಹೂವಿಗೆ ಬೆಲೆ ಇಲ್ಲದ ಹಿನ್ನೆಲೆ ರೈತರು ಕಿತ್ತ ಹೂವನ್ನ ಕಣ್ಣಿರಾಕುತ್ತಾ ರಸ್ತೆಗೆ ಸುರಿಯುತ್ತಿದ್ದಾರೆ. ಕೋಲಾರ (Kolar) ನಗರದ ಹೊರವಲಯದ ಕೊಂಡರಾಜನಹಳ್ಳಿ ರಾಷ್ಟ್ರೀಯ ಹೆದ್ದಾರಿಯ ರಸ್ತೆಗೆ ಸುರಿದ ರೈತ ಕಣ್ಣಿರಾಕುತ್ತಿದ್ದಾನೆ. ಇದನ್ನೂ ಓದಿ: ವೇತನ ಸಮಸ್ಯೆ – 108 ಅಂಬುಲೆನ್ಸ್ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಮಾರುಕಟ್ಟೆಯಲ್ಲಿ ಹೂವಿಗೆ ಬೆಲೆ ಇಲ್ಲದ ಕಾರಣ ಗದ್ದೆಕಣ್ಣೂರಿನ ರೈತರು ರಸ್ತೆಯಲ್ಲಿ ಸುರಿದಿದ್ದಾರೆ. ಅಲ್ಲದೆ ಹಾಕಿದ ಬಂಡವಾಳ ಸಹ ರೈತನಿಗೆ ಸಿಗುತ್ತಿಲ್ಲ, ಕೆಜಿ 2 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಕಣ್ಣೀರು ಹಾಕಿಕೊಂಡು ರಸ್ತೆಗೆ ಹೂವು ಸುರಿದ ಆಕ್ರೋಶ ಹೊರ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]