Tag: farmer

  • ವಿಡಿಯೋ: ಭಾರೀ ಮಳೆಗೆ ನೋಡನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಯ್ತು ಎಮ್ಮೆಗಳು

    ವಿಡಿಯೋ: ಭಾರೀ ಮಳೆಗೆ ನೋಡನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಯ್ತು ಎಮ್ಮೆಗಳು

    ರಾಯಚೂರು/ಚಾಮರಾಜನಗರ: ಮಹದೇಶ್ವರ ಬೆಟ್ಟದಿಂದ ನಾಗಮಲೈಗೆ ಹೋಗುವ ಮಾರ್ಗ ಮಧ್ಯೆ ಇರುವ ಕೊಳ್ಳೆಗಾಲ ತಾಲೂಕಿನ ಹಲೆಯೂರು ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ನಾಲ್ಕು ಎಮ್ಮೆಗಳು ಕೊಚ್ಚಿಕೊಂಡು ಹೋಗಿದೆ.

    ಜಿಲ್ಲೆಯಲ್ಲಿ ಗುರುವಾರ ರಭಸದಿಂದ ಸುರಿದ ಮಳೆಗೆ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಮೇವು ಮೇಯುತ್ತಿದ್ದ ಎಮ್ಮೆಗಳು ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಹಳ್ಳವೊಂದರಲ್ಲಿ ಕೊಚ್ಚಿ ಹೋಗಿವೆ.

    ಗದ್ದೆಗಳಿಗೆ ನೀರು: ವಿವಿಧೆಡೆ ಭಾರೀ ಮಳೆ ಸುರಿದಿದ್ದು ಹಳ್ಳಗಳು ತುಂಬಿಹರಿಯುತ್ತಿವೆ. ಉತ್ತಮ ಮಳೆಯಿಂದ ಒಂದೆಡೆ ರೈತರ ಮೊಗದಲ್ಲಿ ಖುಷಿ ಮೂಡಿದ್ದರೆ ಇನ್ನೊಂದೆಡೆ ಹೊಲ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

    ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಬಳಿ ಹೆದ್ದಾರಿ ಕುಸಿದು ಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಬುದ್ದಿನ್ನಿ ಹಳ್ಳ ತುಂಬಿ 10 ಹಳ್ಳಿಗಳ ಸಂಪರ್ಕ ಕಡಿತವಾಗಿದ್ದು ಶಾಲೆ ಮತ್ತು ಕಾಲೇಜಿಗಳಿಗೆ ಹೋಗಲಾಗದೇ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ.

    ನಂದಿಹಾಳ, ನಸ್ಲಾಪುರ, ಅಮರಾವತಿ, ರಾಜಲದಿನ್ನಿ ಗ್ರಾಮಗಳಿಗೆ ನೀರು ನುಗ್ಗಿದೆ. ಮಾನವಿ ಪಟ್ಟಣದಲ್ಲಿ ನಮಾಜ್‍ಗೇರಿ ಗುಡ್ಡದ ಈದ್ಗಾ ಮೈದಾನ ಗೋಡೆ ಪಕ್ಕದ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳಾದ ಹನುಮಂತ, ಕೃಷ್ಣ, ಲಕ್ಷ್ಮಿ, ಪೂಜಾ, ತೇಜಸ್ವಿನಿಯನ್ನ ಮಾನ್ವಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ತಾಲೂಕಿನಲ್ಲೂ ಭಾರೀ ಮಳೆಯಾಗಿದ್ದು ತಿಮ್ಮಾಪೂರ ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತ ಗೊಂಡಿದೆ.

    https://youtu.be/miOJ9iXiKyk

    https://youtu.be/iwtyxNr7HZU

  • ಬೆಳೆ ಸಾಲ ನೀಡದ್ದಕ್ಕೆ ಬ್ಯಾಂಕ್ ಮ್ಯಾನೇಜರ್‍ಗೆ ರೈತನಿಂದ ಕಪಾಳಮೋಕ್ಷ

    ಬೆಳೆ ಸಾಲ ನೀಡದ್ದಕ್ಕೆ ಬ್ಯಾಂಕ್ ಮ್ಯಾನೇಜರ್‍ಗೆ ರೈತನಿಂದ ಕಪಾಳಮೋಕ್ಷ

    ವಿಜಯಪುರ: ಸಾಲ ನೀಡಲು ನಿರಾಕರಿಸಿದ್ದಕ್ಕೆ ರೈತರೊಬ್ಬರು ಬ್ಯಾಂಕ್ ಮ್ಯಾನೇಜನರ್ ಮೇಲೆ ಹಲ್ಲೆ ನಡೆಸಿದ ಘಟನೆ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ನಿವಾಸಿ ಗುರುಲಿಂಗಪ್ಪ ಮೂಡಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) ಮ್ಯಾನೇಜರ್ ಅಶೋಕ್ ವಾಲಿ ಮೇಲೆ ಹಲ್ಲೆ ನಡೆಸಿದ್ದಾನೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಗುರುಲಿಂಗಪ್ಪ ಪರಾರಿಯಾಗಿದ್ದಾನೆ.

    ಏನಿದು ಪ್ರಕರಣ?
    ಲಿಂಗಪ್ಪ ಹಲವು ದಿನಗಳಿಂದ ಬೆಳೆ ಸಾಲಕ್ಕಾಗಿ ಕೆವಿಜಿ ಬ್ಯಾಂಕ್‍ಗೆ ಅಲೆದಾಡುತ್ತಿದ್ದ. ಆದರೆ ಇವನ ಮತ್ತು ಸಹೋದರ ಗುರುಸಿದ್ದಪ್ಪ ಮೂಡಲಿಯ ನಡುವೆ 8 ಎಕರೆ ಜಮೀನು ಹಂಚಿಕೆ ವಿಚಾರದಲ್ಲಿ ವ್ಯಾಜ್ಯವಿತ್ತು. ಅಲ್ಲದೆ 8 ಎಕರೆ ಜಮೀನು ಇಬ್ಬರಿಗೂ ಹಂಚಿಕೆಯಾಗಿರಲಿಲ್ಲ. ಆದ್ದರಿಂದ ಬೆಳೆ ಸಾಲ ನೀಡಬೇಡಿ ಎಂದು ಗುರುಸಿದ್ದಪ್ಪ ಅವರು ಮ್ಯಾನೇಜರ್‍ಗೆ ತಿಳಿಸಿದ್ದರು. ಈ ಕಾರಣಕ್ಕೆ ಮ್ಯಾನೇಜರ್ ಗುರುಲಿಂಗಪ್ಪನಿಗೆ ಸಾಲ ನೀಡಲು ನಿರಾಕರಿಸಿದ್ದರು. ದಿನವೂ ಬ್ಯಾಂಕ್ ಗೆ ಬಂದು ಅಲೆದಾಡಿ ರೋಸಿಹೊಗಿದ್ದ ಗುರುಲಿಂಗಪ್ಪ ಕೋಪಗೊಂಡು ಮ್ಯಾನೇಜರ್‍ಗೆ ಕಪಾಳಮೋಕ್ಷ ಮಾಡಿ ಈಗ ಪರಾರಿಯಾಗಿದ್ದಾನೆ.

  • ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡದೇ ಸತಾಯಿಸ್ತಿದ್ದಾರೆ ಅಧಿಕಾರಿಗಳು!

    ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡದೇ ಸತಾಯಿಸ್ತಿದ್ದಾರೆ ಅಧಿಕಾರಿಗಳು!

    ನೆಲಮಂಗಲ: ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಕುಂಟು ನೆಪ ಹೇಳಿ ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.

    ನೆಲಮಂಗಲ ತಾಲೂಕಿನ ಅರಳೇದಿಬ್ಬದ ನಿವಾಸಿ ಹನುಮಯ್ಯ ಎಂಬುವವರು ಸಹಕಾರಿ ಬ್ಯಾಂಕ್‍ನಲ್ಲಿ ಕೃಷಿಗಾಗಿ 25 ಸಾವಿರ ರೂಪಾಯಿ ಸಾಲ ಮಾಡಿದ್ದರು. ತೀವ್ರ ಬರಗಾಲವಿದ್ದ ಹಿನ್ನೆಲೆಯಲ್ಲಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ಹನುಮಯ್ಯ 2016ರ ಮೇ 29ನೇ ತಾರೀಕಿನಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಡನ ಆತ್ಮಹತ್ಯೆ ವಿಚಾರ ತಿಳಿದ ರೈತನ ಹೆಂಡತಿ ತಿಮ್ಮವ್ವ ಹೃದಯಾಘಾತದಿಂದ ಮೃತಪಟ್ಟಿದ್ದರು.

    ನೆಲಮಂಗಲ ಸರ್ಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ವಿಷ ಸೇವಿಸಿರುವುದಾಗಿ ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತನ ಕುಟುಂಬದವರು ಕೃಷಿ ಇಲಾಖೆಯಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ನೆಲಮಂಗಲದ ಕೃಷಿ ಇಲಾಖೆಯ ಅಧಿಕಾರಿಗಳು ರೈತ ವಿಷ ಸೇವನೆಯಿಂದ ಮೃತಪಟ್ಟಿಲ್ಲ ಅವರಿಗೆ 75 ವರ್ಷ ವಯಸ್ಸಾಗಿ ಮೃತ ಪಟ್ಟಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    ಸರ್ಕಾರ ಮೃತ ರೈತರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಡ ರೈತನ ಕುಟುಂಬಗಳಿಗೆ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ. ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ ಈ ರೈತನ ಕುಟುಂಬಸ್ಥರ ಪರಿಸ್ಥಿತಿ.

  • ಎಎಸ್‍ಐ ಪತ್ನಿಯಿಂದ ಮೀಟರ್ ಬಡ್ಡಿ-ಪಂಚಾಯ್ತಿ ಉಪಾಧ್ಯಕ್ಷನ ಪತ್ನಿಯೂ ಸಾಥ್!

    ಎಎಸ್‍ಐ ಪತ್ನಿಯಿಂದ ಮೀಟರ್ ಬಡ್ಡಿ-ಪಂಚಾಯ್ತಿ ಉಪಾಧ್ಯಕ್ಷನ ಪತ್ನಿಯೂ ಸಾಥ್!

    ಕೊಪ್ಪಳ: ಜಿಲ್ಲೆಯ ಕಾರಟಗಿ ಎಎಸ್‍ಐ ವೆಂಕಟೇಶ್ ತಮ್ಮ ಪತ್ನಿಯನ್ನು ಮುಂದೆ ಬಿಟ್ಟು ಭರ್ಜರಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪವೊಂದು ಕೇಳಿ ಬರುತ್ತಿದೆ.

    ಚಿಕ್ಕದಾಗಿ ಬಡ್ಡಿ ವ್ಯವಹಾರ ಮಾಡುತ್ತಾರೆ ಎಂದು ತಿಳಿದರೆ ತಪ್ಪು. ಅಸಲಿಗೆ ಎಎಸ್‍ಐ ಅವರ ಪತ್ನಿ ಪದ್ಮಾವತಿ 12 ಲಕ್ಷ ರೂ. ಸಾಲ ಪಡೆದಿದ್ದ ಗಂಗಾವತಿ ತಾಲೂಕಿನ ಉಳೇನೂರು ಗ್ರಾಮದ ಹೊನ್ನುರಪ್ಪನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.

    ಇನ್ನು ರೈತ ಉಳಿದ 1 ಎಕರೆಯಲ್ಲಿ ಜಮೀನಿನಲ್ಲಿ ಉಳಿಮೆ ಮಾಡಲು ಹೋದ್ರೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕ್ತಿದ್ದಾರೆ ಅಂತ ನೊಂದ ಕುಟುಂಬ ಎಸ್‍ಪಿಗೆ ದೂರು ನೀಡಿದೆ. 12 ಲಕ್ಷದ ಬದಲು 35 ಲಕ್ಷ ರೂ.ಯ ಪತ್ರ ಬರೆಸಿಕೊಂಡು ಈಗ ರೈತನ 3 ಎಕರೆ ಜಮೀನನ್ನೇ ಕಬಳಿಸಿದ್ದಾರೆ ಎಂದು ಹೊನ್ನುರಪ್ಪರ ಮಗ ಅಂಬಣ್ಣ ಆರೋಪ ಮಾಡಿದ್ದಾರೆ.

    ಎಎಸ್‍ಐ ವೆಂಕಟೇಶ್‍ರ ಪತ್ನಿ ಪದ್ಮಾವತಿಗೆ ಬೆನ್ನೆಲುಬಾಗಿರೋದು ಗಂಗಾವತಿ ತಾ.ಪಂ ಉಪಾಧ್ಯಕ್ಷ ಗವಿಸಿದ್ದಪ್ಪ, ಆತನ ಹೆಂಡ್ತಿ ಶಾರದಮ್ಮ ಉಳೇನೂರು ಗ್ರಾಪಂ ಅಧ್ಯಕ್ಷೆಯ ಬೆಂಬಲವಿದೆ ಎಂದು ರೈತ ಕುಟುಂಬ ಆರೋಪಿಸುತ್ತಿದೆ.

  • ಭಾರೀ ಮಳೆಗೆ ರಸ್ತೆಯಲ್ಲೇ ಕೊಚ್ಚಿ ಹೋಯ್ತು ಬೈಕ್, ಸೈಕಲ್: ವಿಡಿಯೋ ನೋಡಿ

    ಭಾರೀ ಮಳೆಗೆ ರಸ್ತೆಯಲ್ಲೇ ಕೊಚ್ಚಿ ಹೋಯ್ತು ಬೈಕ್, ಸೈಕಲ್: ವಿಡಿಯೋ ನೋಡಿ

    ಬೆಳಗಾವಿ: ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಬೈಲಹೊಂಗಲ ಪಟ್ಟಣದ ಇಂಚಲ ಗ್ರಾಸ್ ರೋಡಿನಲ್ಲಿ ಮಳೆ ನೀರಿನ ರಭಸಕ್ಕೆ ಬೈಕ್ ಮತ್ತು ಸೈಕಲ್ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

    ಹೌದು, ಇಂದು ಪಟ್ಟಣದಲ್ಲಿ ಸತತ 5 ಘಂಟೆಗಳ ಕಾಲ ಭಾರೀ ಮಳೆಯಿಂದ ಟ್ರಾಫಿಕ್ ಜಾಮ್, ವಾಹನ ಸವಾರರು, ಪಟ್ಟಣದ ನಿವಾಸಿಗಳು ಪರದಾಡಿದ್ದಾರೆ.

    ಬೈಲವಾಡದಲ್ಲಿಯೂ ಸಹ ಮನೆ, ಗದ್ದೆಗಳಿಗೆ ಭಾರೀ ನೀರು ನುಗ್ಗಿದ್ದು, ಆ ಊರಿನ ಹೊರವಲಯದಲ್ಲಿ ಸಮುದ್ರದಂತೆ ನೀರು ಹರಿಯುತ್ತಿದೆ. ಈ ರೀತಿ ಎಂದೂ ಆಗದ ಮಳೆ ಆಗಿದ್ದನ್ನು ಕಂಡು ರೈತರು ಸಂತೋಷಗೊಂಡಿದ್ದಾರೆ.

    https://youtu.be/RbzNEfpXMBs

     

  • ಜೀವನಾಧಾರವಾಗಿದ್ದ ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲಿಗೆ ರೈತ ಬಲಿ!

    ಜೀವನಾಧಾರವಾಗಿದ್ದ ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲಿಗೆ ರೈತ ಬಲಿ!

    ಮಂಡ್ಯ: ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿ ಹೊಡೆದ ಪರಿಣಾಮ ರೈತರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಅಳೀಸಂದ್ರ ಗ್ರಾಮದ ಬಳಿ ನಡೆದಿದೆ.

    ರಂಗಪ್ಪ(70) ಎಂಬುವರೇ ಮೃತ ರೈತ. ರಂಗಪ್ಪ ಅವರು ಎಂದಿನಂತೆ ಬೆಳಗ್ಗೆಯೇ ಎಮ್ಮೆ ಮೇಯಿಸಲು ಹೋಗಿದ್ರು. ಸಂಜೆಯಾಗುತ್ತಿದ್ದಂತೆ ಎಮ್ಮೆ ಮೇಯಿಸಿಕೊಂಡು ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ರೈಲು ಬರುತ್ತಿರುವುದರ ಅರಿವಿರದ ಎಮ್ಮೆಗಳು ರೈಲ್ವೆ ಹಳಿ ಮೇಲೆ ಹೋಗಿವೆ.

    ರೈಲು ಬರುತ್ತಿರುವಾಗಲೇ ಹಳಿ ಮೇಲೆ ಬದುಕಿಗೆ ಜೀವನಾಧಾರವಾಗಿದ್ದ ಎಮ್ಮೆಗಳು ಇರುವುದನ್ನು ಗಮನಿಸಿದ ರೈತ ರಂಗಪ್ಪ ಅವುಗಳನ್ನು ಓಡಿಸಲು ಹಳಿ ಹತ್ತಿದ್ದಾರೆ. ಆದರೆ ಈ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದ್ದರಿಂದ ರೈತ ರಂಗಪ್ಪ ಮತ್ತು ಎರಡು ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

    ರೈತ ರಂಗಪ್ಪನ ಸಾವಿನಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೀರು ಕೇಳಿದ ವೃದ್ಧ ರೈತನಿಗೆ ಥಳಿಸಿ, ಬೂಟು ಕಾಲಿನಿಂದ ಒದ್ದ ತುಮಕೂರು ಡಿವೈಎಸ್‍ಪಿ!

    ನೀರು ಕೇಳಿದ ವೃದ್ಧ ರೈತನಿಗೆ ಥಳಿಸಿ, ಬೂಟು ಕಾಲಿನಿಂದ ಒದ್ದ ತುಮಕೂರು ಡಿವೈಎಸ್‍ಪಿ!

    ತುಮಕೂರು: ಹೇಮಾವತಿ ನೀರಿಗಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಜಿಲ್ಲೆಯ ಡಿವೈಎಸ್ಪಿ ನಾಗರಾಜು ದರ್ಪ ತೋರಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರೊಬ್ಬರಿಗೆ ಥಳಿಸಿ, ಬೂಟು ಕಾಲಿನಿಂದ ಒದ್ದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

    ತುಮಕೂರು ಗ್ರಾಮಾಂತರ ಪ್ರದೇಶಕ್ಕೆ ಹೇಮಾವತಿ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತಿತ್ತು. ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಬ್ಯಾರಿಕೇಡ್ ದಾಟಲು ಪ್ರಯತ್ನಿಸಿದ ಶಾಸಕ ಸುರೇಶ್ ಗೌಡರನ್ನು ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದರು.

    ಈ ವೇಳೆ ಧಿಕ್ಕಾರ ಕೂಗುತಿದ್ದ ರೈತರೊಬ್ಬರನ್ನು ಪೊಲೀಸರು ಎಳೆದುಕೊಂಡು ಹೋಗಿ ಅಮಾನವೀಯವಾಗಿ ವರ್ತಿಸಿದ್ದಾರೆ. ಡಿವೈಎಸ್ಪಿ ನಾಗರಾಜು ರೈತನ ಕೊರಳಪಟ್ಟಿ ಹಿಡಿದು, ಬೂಟುಕಾಲಿನಿಂದ ಒದ್ದು ದರ್ಪ ಮೆರೆದಿರುವುದು ಇದೀಗ ಎಲ್ಲರ ಆಕ್ರೋಶಕ್ಕೆ ಈಡಾಗಿದೆ.

    https://www.youtube.com/watch?v=AGei4ojA1og

  • ಬಳ್ಳಾರಿ- ಮಳೆಯ ನೀರಿನಲ್ಲೇ ಶಿಕ್ಷಕರ ದಿನಾಚರಣೆ!

    ಬಳ್ಳಾರಿ- ಮಳೆಯ ನೀರಿನಲ್ಲೇ ಶಿಕ್ಷಕರ ದಿನಾಚರಣೆ!

    ಬಳ್ಳಾರಿ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತುಂಬೆಲ್ಲಾ ನೀರು ನುಗ್ಗಿದೆ. ಹೀಗಾಗಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಮಳೆಯ ನೀರಿನಲ್ಲೇ ಶಿಕ್ಷಕರ ದಿನಾಚರಣೆ ಆಚರಿಸಿದ್ದಾರೆ.

    ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಸುಮಾರು 3 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಹೊಸಪೇಟೆ ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದ ಬೆಳೆ ಜಲಾವೃತಗೊಂಡಿದೆ.

    ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿ, ಕಲ್ಲಹಳ್ಳಿ, ವೆಂಕಟಗೀರಿ, ರಾಜಾಪುರ, ಕಮಲಾಪುರ, ರಾಯರ ಕೆರೆ, ನಾಗಲಾಪುರ, ಗರಗ, ಡಿಎನ್‍ಕೆರೆ ಮರಿಯಮ್ಮನಹಳ್ಳಿ ಮಾಗಾಣಿ ಸೇರಿ ಹಲವು ಗ್ರಾಮಗಳ ಅಪಾರ ಪ್ರಮಾಣದಲ್ಲಿ ಬೆಳೆದ ಕಬ್ಬು ಬತ್ತ ಬಾಳೆ ಬೆಳೆ ನೀರಿನಲ್ಲಿ ಜಲಾವೃತಗೊಂಡಿವೆ.

    ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದಲ್ಲಿನ ಹಳ್ಳ ತುಂಬಿ ಹರಿದ ಪರಿಣಾಮ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆಲ್ಲಾ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

  • ನೂರಡಿ ತಲುಪಿತು ಕೆಆರ್‍ಎಸ್ ನೀರಿನ ಮಟ್ಟ

    ನೂರಡಿ ತಲುಪಿತು ಕೆಆರ್‍ಎಸ್ ನೀರಿನ ಮಟ್ಟ

    ಮಂಡ್ಯ: ಕೆಲ ದಿನಗಳಿಂದ ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆಆರ್‍ಎಸ್ ಡ್ಯಾಂನಲ್ಲಿ ನೀರಿನ ಸಂಗ್ರಹ ನೂರು ಅಡಿಯ ಗಡಿಯನ್ನು ತಲುಪಿದೆ.

    2013 ಮತ್ತು 2014ರ ಆಗಸ್ಟ್‍ನಲ್ಲಿ ಡ್ಯಾಂನಲ್ಲಿ ಗರಿಷ್ಠ ಅಂದರೆ 124.80 ಅಡಿ ನೀರಿನ ಸಂಗ್ರಹವಾಗುವ ಮೂಲಕ ಡ್ಯಾಂ ಭರ್ತಿಯಾಗಿತ್ತು. 2015ರ ನವೆಂಬರ್‍ನಲ್ಲಿ 110.87 ಅಡಿ ಸಂಗ್ರಹವಾಗಿದ್ದೇ ಗರಿಷ್ಠ ಪ್ರಮಾಣವಾಗಿತ್ತು. 2016ರ ಜುಲೈನಲ್ಲಿ 99.65 ಅಡಿ ನೀರಿನ ಸಂಗ್ರಹವೇ ಗರಿಷ್ಠ ಮಟ್ಟದಾಗಿತ್ತು. ಈ ಬಾರಿ ನೂರು ಅಡಿ ನೀರಿನ ಸಂಗ್ರಹವಾಗಿದೆ.

    124.80 ಅಡಿ ಗರಿಷ್ಠ ಪ್ರಮಾಣದ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ಸದ್ಯ 100.10 ಅಡಿ ನೀರಿನ ಸಂಗ್ರಹವಿದೆ. ಇದರಲ್ಲಿ 12,231 ಕ್ಯೂಸೆಕ್ ಒಳಹರಿವು ಇದ್ದರೆ 8,029 ಕ್ಯೂಸೆಕ್ ಹೊರಹರಿವಿದೆ. ಮತ್ತೊಂದೆಡೆ ಡ್ಯಾಂಗೆ ನೀರು ಹರಿದು ಬರುತ್ತಿದ್ದರೂ ರೈತರಿಗೆ ಮಾತ್ರ ಖುಷಿಕೊಟ್ತಿಲ್ಲ.

    ಕಳೆದ ಕೆಲ ದಿನಗಳಿಂದ ನಿರಂತರವಾಗಿ ಕೆಆರ್‍ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತರಿಗೆ ನೀರು ಕೊಡೋ ಮನಸ್ಸು ಮಾಡ್ತಿಲ್ಲ. ಇದು ಮಂಡ್ಯ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಡ್ಯಾಂನಲ್ಲಿ ನೂರು ಅಡಿ ನೀರಿನ ಸಂಗ್ರಹವಾಗಿರೋದ್ರಿಂದ ನಾಲೆಗಳಿಗೆ ನೀರು ಬಿಟ್ಟರೆ ಒಂದಷ್ಟು ಬೆಳೆ ಬೆಳೆದುಕೊಳ್ತೀವಿ ಅಂತಾ ರೈತರು ಮನವಿ ಮಾಡಿಕೊಂಡಿದ್ದಾರೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಗಮನಿಸಿ, ಕೃಷ್ಣಾ ನದಿ ಪಾತ್ರಕ್ಕೆ ತೆರಳಬೇಡಿ: ಬಸವಸಾಗರ ಜಲಾಶಯ ಭರ್ತಿ

    ಗಮನಿಸಿ, ಕೃಷ್ಣಾ ನದಿ ಪಾತ್ರಕ್ಕೆ ತೆರಳಬೇಡಿ: ಬಸವಸಾಗರ ಜಲಾಶಯ ಭರ್ತಿ

    ಯಾದಗಿರಿ: ರಾಜ್ಯದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿನ ಕಳೆದ ಒಂದು ವಾರದಿಂದ ಮಳೆಯಾಗುತ್ತಿರುವುದರಿಂದ ಬಸವಸಾಗರ ಜಲಾಶಯವು ಭರ್ತಿಯಾಗಿದ್ದು, ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರನ್ನು ಹರಿಸಲಾಗಿದೆ.

    ಬಸವಸಾಗರ ಜಲಾಶಯದಲ್ಲಿ ಒಳ ಹರಿರುವ ಪ್ರಮಾಣ ಹೆಚ್ಚಾದಂತೆ ಹೊರ ಹರಿವಿನ ಪ್ರಮಾಣವು ಕೂಡ ಹೆಚ್ಚಾಗುತ್ತಿದೆ. 33.33 ಟಿಎಂಸಿಯಲ್ಲಿ ಸಂಗ್ರಹ ಸಾಮರ್ಥ್ಯವಿರುವ ಬಸವಸಾಗರ ಜಲಾಶಯದಲ್ಲಿ ಈಗಾಗಲೇ 33.267 ಟಿಎಂಸಿ ನೀರು ಸಂಗ್ರಹವಾಗಿದೆ.

    ಆಲಮಟ್ಟಿ ಜಲಾಶಯದಿಂದ ಬಸವಸಾಗರಕ್ಕೆ 51 ಸಾವಿರ ಕ್ಯೂಸೆಕ್ ನೀರು ಒಳಹರಿವು ಬರುತ್ತಿದ್ದು, ಜಲಾಶಯದಿಂದ 52 ಸಾವಿರ ಕ್ಯೂಸೆಕ್ ನೀರನ್ನು ಆರು ಗೇಟ್ ಮೂಲಕ ಕೃಷ್ಣಾ ನದಿಗೆ ನೀರು ಬಿಡಲಾಗಿದೆ.

    ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಜಲಾಶಯದಿಂದ ಮತ್ತಷ್ಟು ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತದೆ. ಹೀಗಾಗಿ ನದಿ ಪಾತ್ರಕ್ಕೆ ಜನರು ತೆರಳದಂತೆ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳ ಸೂಚನೆ ನೀಡಿದ್ದಾರೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

    https://www.youtube.com/watch?v=1W5eHD6tGKo