Tag: farmer

  • ಅಂದು ರೈತರ ಮೇಲೆ ಜೀಪ್ ಹತ್ತಿಸಿದ್ರು, ಇಂದು ಬಂಧಿಸಿ ಹಿಗ್ಗಾಮುಗ್ಗಾ ಥಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳು!

    ಅಂದು ರೈತರ ಮೇಲೆ ಜೀಪ್ ಹತ್ತಿಸಿದ್ರು, ಇಂದು ಬಂಧಿಸಿ ಹಿಗ್ಗಾಮುಗ್ಗಾ ಥಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳು!

    ಚಿಕ್ಕಮಗಳೂರು: ಅಂದು ರೈತರ ಮೇಲೆ ಜೀಪ್ ಹತ್ತಿಸೋಕೆ ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಇಂದು ಮತ್ತೆ ತಮ್ಮ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ.

    ಚಿಕ್ಕಮಗಳೂರಿನ ತರಿಕೆರೆ ತಾಲೂಕಿನ ಎಂಸಿ.ಹಳ್ಳಿಯ ಸರ್ವೆ ನಂಬರ್ 4ರಲ್ಲಿ 438 ಎಕರೆ ಜಾಗಕ್ಕೆ ನಾಲ್ಕು ದಶಕಗಳಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಇದನ್ನೂ ಓದಿ: ಹೊಲಕ್ಕೆ ನುಗ್ಗಿ ಅರಣ್ಯಾಧಿಕಾರಿಗಳ ಆಟಾಟೋಪ – ರೈತ ಮಹಿಳೆಯರ ಮೇಲೆ ಜೀಪ್ ಹತ್ತಿಸಲು ಯತ್ನ

    ಈಗ ಮತ್ತೆ ಈ ಅರಣ್ಯಾಧಿಕಾರಿಗಳು ರಾತ್ರೋರಾತ್ರಿ ರೈತರ ತೆಂಗಿನ ಮರಗಳನ್ನು ಕಡಿದು ಹಾಕಿ, ಅವರನ್ನ ಬಂಧಿಸಿ ಮನಸ್ಸೋ ಇಚ್ಛೆ ಮೈಮೇಲೆ ಬಾಸುಂಡೆ ಬರೋ ರೀತಿ ಥಳಿಸಿದ್ದಾರೆ. ಅರಣ್ಯ ಇಲಾಖೆ ಕಂದಾಯ ಭೂಮಿಗೆ ಬೇಲಿ ಹಾಕೋಕೆ ರೈತರ ಮೇಲೆ ದರ್ಪ ತೋರ್ತಿದ್ದಾರೆ. ಇದ್ರಿಂದ ರೋಸಿ ಹೋಗಿರೋ ರೈತರು, ಕೂಡಲೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮಧ್ಯ ಪ್ರವೇಶಸಿ ಈ ಜಾಗ ಯಾರದ್ದೆಂದು ಸ್ಪಷ್ಟಪಡಿಸಲಿ, ಇಲ್ಲವಾದ್ರೆ ನಮಗೆ ಇಚ್ಛಾಮರಣಕ್ಕೆ ಅನುಮತಿ ನೀಡಿಲಿ ಎಂದು ಆಗ್ರಹಿಸಿದ್ದಾರೆ.

    ಸದ್ಯ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.

  • ಎತ್ತಿನಗಾಡಿಗೆ ಕಾರ್ ಡಿಕ್ಕಿ- 1 ಎತ್ತು ಸ್ಥಳದಲ್ಲೇ ಸಾವು, ರಸ್ತೆಯಲ್ಲಿ ನರಳಾಡಿದ ಮತ್ತೊಂದು ಎತ್ತು

    ಎತ್ತಿನಗಾಡಿಗೆ ಕಾರ್ ಡಿಕ್ಕಿ- 1 ಎತ್ತು ಸ್ಥಳದಲ್ಲೇ ಸಾವು, ರಸ್ತೆಯಲ್ಲಿ ನರಳಾಡಿದ ಮತ್ತೊಂದು ಎತ್ತು

    ಮಂಡ್ಯ: ಎತ್ತಿನಗಾಡಿಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಂದು ಎತ್ತು ಮತ್ತು ರೈತ ಗಾಯಗೊಂಡಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಇಂದು ಮುಂಜಾನೆ ಇಂಡವಾಳು ಗ್ರಾಮದ ಸಮೀಪ ಬೆಂಗಳೂರು ಮೈಸೂರು ಹೆದಾರಿಯಲ್ಲಿ ವೇಗವಾಗಿ ಬಂದ ಕಾರು ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಮತ್ತೊಂದು ಎತ್ತು ಗಂಭೀರವಾಗಿ ಗಾಯಗೊಂಡಿದ್ದು, ಹೆದ್ದಾರಿ ಪಕ್ಕದಲ್ಲೇ ನರಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

     

    ಎತ್ತಿನಗಾಡಿ ಓಡಿಸುತ್ತಿದ್ದ ರೈತ ಮನು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವ್ಯವಸಾಯದ ಕೆಲಸಕ್ಕೆ ಹೋಗುತ್ತಿದ್ದ ಎತ್ತಿನಗಾಡಿಗೆ ಅಪಘಾತವಾದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಎತ್ತುಗಳನ್ನೇ ಜೀವನಾಧಾರವಾಗಿ ನಂಬಿದ್ದ ರೈತ ಮುಂದಿನ ದಾರಿ ಕಾಣದೆ ಕಂಗಾಲಾಗಿದ್ದಾರೆ.

     

  • ನಟ, ಕೆಪಿಜೆಪಿ ಸ್ಥಾಪಕ ಉಪೇಂದ್ರಗೆ ಎಸ್.ಆರ್. ಹಿರೇಮಠ ಕಿವಿಮಾತು!

    ನಟ, ಕೆಪಿಜೆಪಿ ಸ್ಥಾಪಕ ಉಪೇಂದ್ರಗೆ ಎಸ್.ಆರ್. ಹಿರೇಮಠ ಕಿವಿಮಾತು!

    ರಾಯಚೂರು: ನಟ ಉಪೇಂದ್ರ ಅಕ್ರಮವಾಗಿ ರೈತರ ಭೂಮಿಯನ್ನು ಕಬಳಿಸಿದ್ದಾರೆ. ಮೊದಲು ಅವರು ಮೆನೆ ಗೆದ್ದು, ಮಾರು ಗೆಲ್ಲಲಿ ಅಂತ ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಎಸ್.ಆರ್.ಹಿರೇಮಠ್ ಹೇಳಿದ್ದಾರೆ.

    ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪಕ್ಷ ಕಟ್ಟಲು, ಸಂಘಟನೆ ಮಾಡಲು ಅವಕಾಶಗಳಿವೆ. ಸಾರ್ವಜನಿಕ ಜೀವನಕ್ಕೆ ಬರುವವರಿಗೆ ಅವರ ಅಕ್ರಮವೇ ಅವರಿಗೆ ಸುಳಿಯಾಗಬಾರದು. ಅಕ್ರಮವಾಗಿ ರೈತರ ಭೂಮಿಯಲ್ಲಿ ರುಪ್ಪೀಸ್ ರೆಸಾರ್ಟ್ ಕಟ್ಟಿರುವ ಉಪೇಂದ್ರ ಅಕ್ರಮ ಸುರಳಿಯಿಂದ ಹೊರಬಂದು ಸಾರ್ವಜನಿಕ ಜೀವನಕ್ಕೆ ಕಾಲಿಡಲಿ ಅಂತ ಸಲಹೆ ನೀಡಿದ್ದಾರೆ.

    ತಮ್ಮ ಅಕ್ರಮದಿಂದ ಹೊರ ಬಂದು ಇತರರಿಗೆ ಒಳ್ಳೆಯದು ಮಾಡಲಿ. ನ್ಯಾಯಾಲಯದಲ್ಲಿ ಪ್ರಕರಣ ಹೇಗಾಯ್ತು, ಏನಾಯ್ತು ಅನ್ನೋದು ನಮಗೆ ಗೊತ್ತಿದೆ. ನಾವು ಇದರ ವಿರುದ್ದ ಧ್ವನಿ ಎತ್ತಿದಾಗ ನ್ಯಾಯಾಧೀಶರು ಪ್ರಕರಣದ ವಿಚಾರಣೆಗೆ ರೀಕಾಲ್ ಮಾಡಿದ್ದರು. ಉಪೇಂದ್ರ ಬಡ ರೈತರಿಗೆ ಅವರ ಜಮೀನು ಮರಳಿಸಬೇಕು ಅಂತ ಎಸ್.ಆರ್ .ಹಿರೇಮಠ್ ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಜಮೀನು ವಿವಾದದಲ್ಲಿ ನಟ ಉಪೇಂದ್ರಗೆ ಹೈ ಕೋರ್ಟ್ ನಿಂದ ಬಿಗ್ ರಿಲೀಫ್

    https://youtu.be/7C5QPHui87Y

     

  • ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಕಂಪನಿಯಿಂದ ನೂರಾರು ಜನರಿಗೆ ಮೋಸ

    ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಕಂಪನಿಯಿಂದ ನೂರಾರು ಜನರಿಗೆ ಮೋಸ

    ಕೋಲಾರ: ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಮೂಲದ ಕಂಪನಿಯೊಂದು ನೂರಾರು ಜನರಿಗೆ ಮೋಸ ಮಾಡಿರುವ ಘಟನೆ ಕೋಲಾರ ತಾಲೂಕು ಕಿತ್ತಂಡೂರು ಗ್ರಾಮದಲ್ಲಿ ನಡೆದಿದೆ.

    ತಮಿಳುನಾಡು ತಂಜಾವೂರಿನ ಕ್ರೈಸ್ಟ್ ಇಂಟರ್ ನ್ಯಾಷನಲ್ ಟೂರಿಸಂ ಅಂಡ್ ಫೈನಾನ್ಸ್ ಗ್ರೂಪ್ ಆಫ್ ಕಂಪನಿ ಕಳೆದ ಮೂರು ತಿಂಗಳಿನಿಂದ ರೈತರಿಂದ 50 ಲಕ್ಷ ಹಣ ವಸೂಲಿ ಮಾಡಿ ಪರಾರಿಯಾಗಿದ್ದರು. ತಲೆಮರೆಸಿಕೊಂಡಿದ್ದ ಕಂಪನಿ ಮಾಲೀಕ ಸೆಂದಿಲ್ ಜಾಮೀನಿಗಾಗಿ ಕೋರ್ಟ್‍ಗೆ ಬಂದಿದ್ದು, ಈ ವೇಳೆ ಮೋಸ ಹೋಗಿದ್ದ ನೂರಾರು ಜನರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ತಮ್ಮ ಹಣ ತಮಗೆ ವಾಪಸ್ ನೀಡುವಂತೆ ಆಗ್ರಹಿಸಿದ್ರು.

    ಈ ಬಗ್ಗೆ ಫೈನಾನ್ಸ್ ಕಂಪನಿ ಮಾಲೀಕ ಸೆಂದಿಲ್ ಮಾತನಾಡಿ ನನ್ನ ಸಿಬ್ಬಂದಿ ಮೋಸ ಮಾಡಿದ್ದಾರೆ. ನನಗೆ ಜಾಮೀನು ಸಿಕ್ಕಿದೆ. ಒಂದು ತಿಂಗಳು ಕಾಲಾವಕಾಶ ಕೇಳಿದ್ದು ಜನರ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಾನೆ.

    ಸದ್ಯ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬ್ಲೇಡ್ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

  • ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    – ಮಂಡ್ಯ, ಕಾರವಾರದಲ್ಲೂ ಸೈಕ್ಲೋನ್ ಹೊಡೆತ
    – 14 ಜನರ ಸಾವು, 223 ಜನರ ರಕ್ಷಣೆ

    ತಿರುವನಂತರಪುರ: ಕನ್ಯಾಕುಮಾರಿ ಸೇರಿದಂತೆ ಕೇರಳದ ಕರಾವಳಿಯಲ್ಲಿ ಓಖಿ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಾಜ್ಯದ ಮಂಗಳೂರು ಕರಾವಳಿಗೂ ಓಖಿ ಚಂಡಮಾರತ ಅಪ್ಪಳಿಸಿದ್ದು, ಚಂಡಮಾರುತದ ರಭಸಕ್ಕೆ 4 ಮೀನುಗಾರಿಕಾ (ವೆಸಲ್) ಹಡುಗು ಮುಳುಗಡೆಯಾಗಿದೆ.

    ಇದರ ಜೊತೆಗೆ ಇನ್ನೊಂದು ವೆಸಲ್ ನಾಪತ್ತೆಯಾಗಿದ್ದು, ಅದರಲ್ಲಿದ್ದ 8 ಮಂದಿ ಕಾರ್ಮಿಕರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ವೆಸಲ್‍ನ ಮಾಲೀಕರು, ಸಾಮಾಗ್ರಿಗಳನ್ನು ಕಳಿಸುತ್ತಿರುವ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

    ಮಂಗಳೂರಲ್ಲಿ ಅನಾಹುತದ ಬೆನ್ನಲ್ಲೇ ಕಾರವಾರದಲ್ಲೂ ಓಖಿ ಸೈಕ್ಲೋನ್ ಗಂಟೆಗೆ 40 ಕಿ.ಮೀ ವೇಗದಲ್ಲಿ ಅಪ್ಪಳಿಸುತ್ತಿದೆ. ಇದರಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಮೀನುಗಾರರಿಗೆ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಲಾಗಿದೆ. ಓಖಿ ಪ್ರಭಾವ ಸತತ 48 ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಓಖಿ ಚಂಡಮಾರುತದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿಯೂ ಸಹ ಕಟ್ಟೆಚ್ಚರ ವಹಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳು ಹೆಚ್ಚು ಏಳುತ್ತಿದ್ದು ಗಂಟೆಗೆ 35 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಕಾರಣದಿಂದ ಎರಡು ದಿನಗಳವರೆಗೆ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಕಾರವಾರ ಭಾಗದಲ್ಲಿ ನಾರ್ತ್ ಈಸ್ಟ್ ನಿಂದ ಬೀಸುತ್ತಿರುವ ಬಿರುಗಾಳಿಯ ಪ್ರಮಾಣ ತಗ್ಗಿದೆ. ಗಾಳಿಯು ದಿಕ್ಕು ಬದಲಿಸುತ್ತಿದ್ದು ಜಿಲ್ಲೆಯ ಕರಾವಳಿ ಭಾಗದಲ್ಲಿ ಇಂದು ಸಂಜೆ ಅಥವಾ ನಾಳೆ ಸಂಜೆ ಒಳಗೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

     

    ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ಮಂಡ್ಯ, ಕೋಲಾರದಲ್ಲೂ ಸೈಕ್ಲೋನ್ ಭೀತಿ ಎದುರಾಗಿದೆ. ಓಖಿ ಚಂಡಮಾರುತದಿಂದಾಗಿ ಕಟಾವಿಗೆ ಬಂದಿರುವ ಭತ್ತ, ರಾಗಿ ಆಹಾರ ಪದಾರ್ಥಗಳು ಬಿರುಗಾಳಿಗೆ ನಾಶವಾಗುವ ಆಂತಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಟಾವು ಮಾಡಲಾಗಿರುವ ಬೆಳೆಗಳು ಮಳೆಗೆ ನಾಶವಾಗಿದೆ. ಮಂಡ್ಯದ ಮದ್ದೂರು ತಾಲೂಕಿನ ವೈದ್ಯನಾಥಪುರದಲ್ಲಿ ರೈತ ಬೆಳೆದ ಭತ್ತದ ಬೆಳೆ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ, ವೈದ್ಯನಾಥಪುರ ಗ್ರಾಮದ ರೈತರು ಚಂಡಮಾರುತದ ಅರಿವಿಲ್ಲದೇ ತೆನೆ ಬಂದಿದ್ದ ಸುಮಾರು ನಾಲ್ಕು ಎಕರೆ ಪ್ರದೇಶದ ಭತ್ತದ ಪೈರನ್ನು ಕಟಾವು ಮಾಡಿದ್ದರು. ಆದರೆ ಭತ್ತದ ಪೈರನ್ನು ಒಕ್ಕಣೆ ಮಾಡುವ ಮುನ್ನವೇ ಮಳೆ ಸುರಿದು ಗದ್ದೆಯಲ್ಲಿ ನೀರು ನಿಂತಿದೆ. ಪರಿಣಾಮ ಭತ್ತದ ಬೆಳೆ ಸಂಪೂರ್ಣ ನೀರಿನಲ್ಲಿ ನೆನೆದು ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

    ಸಮುದ್ರಕ್ಕೆ ತೆರಳಿದ ಮೀನುಗಾರರನ್ನು ಭಾರತೀಯ ನೌಕಾ ಪಡೆ ಹೆಲಿಕಾಪ್ಟರ್ ಗಳ ಮೂಲಕ ರಕ್ಷಣೆ ಮಾಡುತ್ತಿದ್ದು, ಇದುವರೆಗೂ ಸುಮಾರು 223 ಜನರನ್ನು ರಕ್ಷಣೆ ಮಾಡಿದೆ. ಇನ್ನು ಸಮುದ್ರಕ್ಕೆ ತೆರಳಿದ 40 ರಿಂದ 60 ಮೀನುಗಾರರ ಸುಳಿವು ಸಿಕ್ಕಿಲ್ಲ ಎಂದು ವರದಿಯಾಗಿದೆ. ಈವರೆಗೆ 14 ಜನ ಮೃತಪಟ್ಟಿದ್ದಾರೆ.

    ಭಾರತೀಯ ನೌಕಪಡೆ ರಕ್ಷಣಾ ಕಾರ್ಯಚಾರಣೆ ಕೈಗೊಂಡಿರುವ ದೃಶ್ಯಗಳು ಲಭ್ಯವಾಗಿದೆ. ಇನ್ನು ಸಮುದ್ರಕ್ಕೆ ತೆರಳಿರುವ ಮೀನುಗಾರರ ಕುಟುಂಬಸ್ಥರು ಸಮುದ್ರ ದಡದಲ್ಲೇ ಕಾದು ಕುಳಿತ್ತಿದ್ದು, ನೀರು ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

    https://www.youtube.com/watch?v=FlExdKZ96-U

    https://www.youtube.com/watch?v=IskPbU9PesM

     

     

  • ರಾಗಿ ಕಟಾವು ಮಾಡಿ ರಾಶಿ ಪೂಜೆ ಮಾಡಬೇಕೆಂದಿದ್ದ ರೈತರಿಗೆ ಓಖಿ ಚಂಡಮಾರುತದ ಆತಂಕ

    ರಾಗಿ ಕಟಾವು ಮಾಡಿ ರಾಶಿ ಪೂಜೆ ಮಾಡಬೇಕೆಂದಿದ್ದ ರೈತರಿಗೆ ಓಖಿ ಚಂಡಮಾರುತದ ಆತಂಕ

    ಕೋಲಾರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚೆನ್ನೈನಲ್ಲಿ ಅಪ್ಪಳಿಸಿರುವ ಓಖಿ ಚಂಡಮಾರುತದ ಎಫೆಕ್ಟ್ ನಿಂದ ಗಡಿ ಜಿಲ್ಲೆ ಕೋಲಾರದ ರೈತರು ಆತಂಕ ಎದುರಿಸುವಂತಾಗಿದೆ.

    ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ರಾಗಿ ಕಟಾವು ಮಾಡಿ ರಾಶಿ ಪೂಜೆ ಮಾಡಬೇಕೆಂದಿದ್ದ ರೈತನಿಗೆ ಓಖಿ ಚಂಡಮಾರುತ ಆತಂಕ ತಂದೊಡ್ಡಿದೆ. ಕೋಲಾರ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದ್ದು, ಬೆಂಬಿಡದೆ ತುಂತುರು ಮಳೆ ಸುರಿಯುತ್ತಿದೆ. ಪರಿಣಾಮ ಕೋಲಾರ ಜಿಲ್ಲೆಯ ರೈತರು ಆತಂಕಕ್ಕೊಳಗಾಗಿದ್ದಾರೆ.

    ಈ ಬಾರಿ ಮುಂಗಾರು ಉತ್ತಮ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಒಳ್ಳೆಯ ರಾಗಿ ಬೆಳೆಯಾಗಿತ್ತು. ಕೋಟ್ಯಾಂತರ ರೂಪಾಯಿ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರು ರಾಗಿ ಪೈರು ಕಟಾವು ಮಾಡುವ ಹಾಗೂ ಕಟಾವು ಮಾಡಿದ ರಾಗಿ ತೆನೆಯನ್ನ ಒಕ್ಕಣೆ ಮಾಡುವ ಕೆಲಸದಲ್ಲಿ ತೊಡಗಿದ್ದರು. ಹೀಗಿರುವಾಗಲೇ ಓಖಿ ಚಂಡಮಾರುತದ ಎಫೆಕ್ಟ್ ರಾಗಿ ಪೈರೆಲ್ಲಾ ನೆಲ ಕಚ್ಚಿ ಹಾಳಾಗುವಂತೆ ಮಾಡಿದೆ. ಅಲ್ಲದೇ ಒಕ್ಕಣೆಗೆ ಸಿದ್ಧಮಾಡಿಕೊಂಡಿದ್ದ ರೈತರ ರಾಗಿ ತೆನೆ ಮಳೆಯಲ್ಲಿ ನೆನದು ರಾಗಿ ಹಾಳಾಗಿದೆ, ಇದರಿಂದ ಕೋಲಾರದಲ್ಲಿ ರಾಗಿ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.

    ಮಳೆ ಇನ್ನು ಮೂರು ದಿನಗಳ ಕಾಲ ಮುಂದುವರೆಯುವ ಹಿನ್ನೆಲೆಯಲ್ಲಿ ರಾಗಿ ಬೆಳೆ ಮಳೆಯಲ್ಲಿ ನೆನೆದು ಮೊಳಕೆ ಹೊಡೆಯಲಾರಂಭಿಸುತ್ತದೆ ಎನ್ನುವ ಆತಂಕ ಕೂಡಾ ರೈತರಲ್ಲಿದೆ. ಅಲ್ಲದೆ ಅವರೆ ಹಾಗೂ ತೊಗರಿ ಬೆಳೆಯೂ ಸಹ ಹೂವು ಬಿಟ್ಟಿದ್ದರಿಂದ ಹೂವೆಲ್ಲಾ ಉದುರಿಹೋಗುತ್ತದೆ ಅನ್ನೊ ಅಳಲು ರೈತರದ್ದು. ಸಣ್ಣದಾಗಿ ಸುರಿಯುತ್ತಿರುವ ಜಡಿ ಮಳೆಯೇ ಆದರೂ ಇದರಿಂದ ರೈತರಿಗೆ ಅಗುತ್ತಿರುವ ಹಾನಿ ಮಾತ್ರ ಅಪಾರ ಪ್ರಮಾಣದ್ದಾಗಿದೆ.

  • ಸಾಲ ಮನ್ನಾ ಯೋಜನೆ ಹೆಸ್ರಲ್ಲಿ ದೋಖಾ – ಸಹಕಾರಿ ಬ್ಯಾಂಕ್ ನಲ್ಲಿ ರೈತರಿಗೆ ಸಿಗ್ತಿಲ್ಲ ಹೊಸ ಸಾಲ

    ಸಾಲ ಮನ್ನಾ ಯೋಜನೆ ಹೆಸ್ರಲ್ಲಿ ದೋಖಾ – ಸಹಕಾರಿ ಬ್ಯಾಂಕ್ ನಲ್ಲಿ ರೈತರಿಗೆ ಸಿಗ್ತಿಲ್ಲ ಹೊಸ ಸಾಲ

    ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿರುವ ರೈತರ ಸಾಲ ಮನ್ನಾದಿಂದ ರೈತರಿಗೆ ಅನುಕೂಲಕ್ಕಿಂತ ತೊಂದರೆಯೇ ಜಾಸ್ತಿಯಾಗಿದೆ.

    50 ಸಾವಿರ ರೂಪಾಯಿ ಸಾಲ ಮನ್ನಾ ಘೋಷಣೆಯಾದ್ರೂ ಸಹಕಾರಿ ಬ್ಯಾಂಕ್‍ಗಳು ಮಾತ್ರ ಬಾಕಿ ಪ್ರಮಾಣಪತ್ರ ಕೊಡ್ತಿಲ್ಲ. ಇದರಿಂದ ರೈತರಿಗೆ ಹೊಸ ಸಾಲನೂ ಸಿಗ್ತಿಲ್ಲ. ಹಳೆ ಸಾಲಗಾರರನ್ನ ಹೊಸ ಪಟ್ಟಿಗೆ ಸೇರಿಸುತ್ತಿಲ್ಲ.

    ಸಾಲ ಸಿಗದೇ ರೈತರು ಹೆಚ್ಚು ಬಡ್ಡಿಗೆ ಖಾಸಗಿ ಸಾಲದ ಶೂಲದಲ್ಲಿ ಸಿಲುಕುತ್ತಿದ್ದಾರೆ. ಬಡ್ಡಿರಹಿತವಾಗಿ 3 ಲಕ್ಷದವರೆಗೆ ಸಾಲ ಕೊಡಬೇಕಾದ ಬ್ಯಾಂಕ್‍ಗಳು ಮೊದಲ ಬಾರಿ ಸಾಲ ಪಡೆಯುವವರಿಗೆ ಕೇವಲ 10 ಸಾವಿರ ರೂಪಾಯಿ ಮಾತ್ರ ನೀಡ್ತಿವೆ. ರಾಯಚೂರು, ಕೊಪ್ಪಳ ಜಿಲ್ಲೆ ಸೇರಿ 89 ಸಾವಿರದ 513 ಜನ ರೈತರ 272 ಕೋಟಿ ಸಾಲ ಮನ್ನಾ ಆಗಿದೆ. ಆದ್ರೆ ಈ ಎಲ್ಲಾ ರೈತರಿಗೆ ಈ ಬಾರಿ ಸಾಲವನ್ನೇ ನೀಡಿಲ್ಲ.

    40 ಕೋಟಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿದೆ. ಡಿಸೆಂಬರ್ ಬಳಿಕ ಸಾಲ ಕೊಡುವುದಾಗಿ ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಹೇಳಿದೆ ಎಂದು ತಿಳಿದುಬಂದಿದೆ.

  • ಕ್ರಿಕೆಟ್ ಮೂಲಕ ಚಿನ್ನ ಬೆಳೆಯುತ್ತಿದ್ದಾರೆ ದೆಹಲಿ ರೈತರು!

    ಕ್ರಿಕೆಟ್ ಮೂಲಕ ಚಿನ್ನ ಬೆಳೆಯುತ್ತಿದ್ದಾರೆ ದೆಹಲಿ ರೈತರು!

    ದೆಹಲಿ: ರಾಷ್ಟ್ರ ರಾಜಧಾನಿಯ ರೈತರು ತಮ್ಮ ಭೂಮಿಯಲ್ಲಿ ಕೃಷಿ ಕೆಲಸವನ್ನು ಬಿಟ್ಟು ಕ್ರಿಕೆಟ್ ಮೈದಾನಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಹೊಸ ಆದಾಯ ಮೂಲವನ್ನು ಹುಡುಕಿದ್ದಾರೆ.

    ದೆಹಲಿ ಗುರ್ಗಾವ್‍ನಲ್ಲಿ ಐಟಿ ಉದ್ಯಮ ದೊಡ್ಡದಾಗಿ ಬೆಳೆದಿರುವುದರಿಂದ ಇಲ್ಲಿನ ಐಟಿ ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಕ್ರಿಕೆಟ್ ಆಡಲು ಈ ಮೈದಾನಗಳನ್ನು ಸಿದ್ಧ ಪಡಿಸಲಾಗಿದೆ. ಪ್ರತಿ ದಿನ ಈ ಮೈದಾನದಲ್ಲಿ ಕನಿಷ್ಠ ಮೂರು ಪಂದ್ಯಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ಪಂದ್ಯಕ್ಕೆ ಸುಮಾರು 3,500 ರಿಂದ 7,500 ರೂ. ಗಳನ್ನು ನಿಗದಿ ಪಡಿಸಲಾಗುತ್ತಿದೆ.

    ಈ ಹೊಸ ಉದ್ಯಮದಲ್ಲಿ ದೆಹಲಿಯ ಬಿಲಿಯಾವಾಸ್ ಹಾಗೂ ಕದಾರ್ಪುರ್ ಪ್ರದೇಶದಲ್ಲಿ ಈಗಾಗಲೇ ಸುಮಾರು 40 ಮೈದಾನಗಳು ನಿರ್ಮಾಣವಾಗಿದೆ. ಪ್ರತಿ ಪಂದ್ಯಕ್ಕೆ ಪಡೆಯುವ ಮೊತ್ತವು ಪಂದ್ಯದ ಓವರ್ ಹಾಗೂ ಅಂಪೈರ್ ಫೀಸ್ ಆಧಾರಿಸಿ ನಿರ್ಧರಿಸಲಾಗುತ್ತದೆ. ಅಲ್ಲದೇ ಕೆಲವು ಮೈದಾನಗಳಲ್ಲಿ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದ್ದು ಈ ಸೇವೆಯನ್ನು ಪಡೆಯಲು ಹೆಚ್ಚಿನ ಮೊತ್ತ ನೀಡಬೇಕಾಗುತ್ತದೆ ಎಂದು ಪ್ರದೇಶದಲ್ಲಿ ಈಗಾಗಲೇ ಹಲವು ಪಂದ್ಯಗಳನ್ನು ಆಯೋಜಿಸಿರುವ ಟರ್ಫ್ ಸ್ಫೋರ್ಟ್ಸ್  ಮ್ಯಾನೇಜ್‍ಮೆಂಟ್ ಮಾಲೀಕ ಸಚಿನ್ ಖೂರನ ಅವರು ತಿಳಿಸಿದ್ದಾರೆ.

    ಇಲ್ಲಿ ನಡೆಯುವ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ 20 ವರ್ಷದ ವಿದ್ಯಾರ್ಥಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರತಿ ವಾರಾಂತ್ಯದಲ್ಲಿ ಇಲ್ಲಿ ನಡೆಯುವ ಪಂದ್ಯಗಳ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಂಪೈರಿಂಗ್ ಆರಂಭಿಸುವ ಮೊದಲು ಪ್ರತಿಯೊಬ್ಬರಿಗೂ 7 ರಿಂದ 8 ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಮೈದಾನಗಳಂತೆ ದೇಶದ ಇತರೇ ಪ್ರಮುಖ ಪ್ರದೇಶಗಳಲ್ಲಿಯೂ ಈ ಬೆಳವಣಿಗೆ ಕಂಡು ಬರುತ್ತದೆ ಎಂದು ಬೆಂಗಳೂರು ಪೂಮಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿನವಂತ್ ಸೆಹಗಲ್ ತಿಳಿಸಿದ್ದಾರೆ.

    ದೆಹಲಿಯ ಗುರು ಗಾಂವ್ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಈ ಮೈದಾನಗಳಿಂದ ಸ್ಥಳೀಯ ವ್ಯಾಪಾರಿಗಳಿಗೂ ಉತ್ತಮ ಲಾಭ ಲಭಿಸುತ್ತಿದ್ದು, ಸ್ಥಳೀಯ ಕ್ರಿಕೆಟ್ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ.

  • ಅನ್ನದಾತರಿಗೆ ಪುಡಿಗಾಸು ಪರಿಹಾರ- ನದಿಯಲ್ಲಿ ನೀರಿಲ್ಲದಿದ್ರೂ ಸಮೃದ್ಧ ಬೆಳೆ ಎಂದು ಸರ್ಕಾರಕ್ಕೆ ವರದಿ

    ಅನ್ನದಾತರಿಗೆ ಪುಡಿಗಾಸು ಪರಿಹಾರ- ನದಿಯಲ್ಲಿ ನೀರಿಲ್ಲದಿದ್ರೂ ಸಮೃದ್ಧ ಬೆಳೆ ಎಂದು ಸರ್ಕಾರಕ್ಕೆ ವರದಿ

    ಹಾವೇರಿ: ಅಧಿಕಾರಿಗಳೇ ಅನ್ನದಾತರ ಬೆನ್ನಿಗೆ ಇರಿದ ಸುದ್ದಿ ಇದು. ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೆ ಬರದಿಂದ ಬರೆ ಬಿತ್ತು. ಸರ್ಕಾರ ಕೊಡೋ ಅಲ್ಪ ಸ್ವಲ್ಪ ಪರಿಹಾರದಿಂದಾದ್ರೂ ಕೊಂಚ ಸುಧಾರಿಸಿಕೊಳ್ಳೋಣ ಎಂದರೆ ಅದಕ್ಕೆ ಕಲ್ಲು ಹಾಕಿದ್ದಾರೆ ಹಾವೇರಿ ಜಿಲ್ಲೆಯ ಹೊಣೆಗೇಡಿ ಅಧಿಕಾರಿಗಳು.

    ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಭೀಕರ ಬರಗಾಲ ತಾಂಡವವಾಡುತ್ತಿದೆ. ವರದಾ, ತುಂಗಭದ್ರಾ, ಕುಮುದ್ವಿತಿ ನದಿಗಳಲ್ಲಿ ನೀರಿಲ್ಲ. ಹೀಗಿದ್ದರೂ ಆಡೂರು, ಶೀಗಿಹಳ್ಳಿ, ಶಂಕ್ರಿಕೊಪ್ಪ ಗ್ರಾಮಗಳ ರೈತರು ವರದಾ ನದಿ ನೀರು ಬಳಸಿಕೊಂಡು ಸಮೃದ್ಧ ಬೆಳೆ ಬೆಳೆದಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ.

    ಅಷ್ಟೇ ಅಲ್ಲ ಬೆಳೆ ಪರಿಹಾರ ರೂಪದಲ್ಲಿ 50, 100, 500 ರೂಪಾಯಿ ಪರಿಹಾರ ಕೊಟ್ಟಿದೆ ಸರ್ಕಾರ. ಪ್ರತಿ ಎಕರೆಗೆ ಕನಿಷ್ಟ ಎರಡೂವರೆ ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿಯಾದರೂ ಬೆಳೆ ಹಾನಿ ಪರಿಹಾರ ಸಿಗಬೇಕು. ಕೆಲವೇ ಕೆಲವು ರೈತರಿಗೆ ಐದಾರು ಸಾವಿರ ರೂಪಾಯಿ ಪರಿಹಾರ ಬಂದಿದ್ದು ಬಿಟ್ರೆ ಉಳಿದ ಬಹುತೇಕ ರೈತರಿಗೆ ಎಕರೆಗೆ ಐವತ್ತು, ನೂರು ರೂಪಾಯಿಯಂತೆ ಪರಿಹಾರ ಹಣ ಜಮೆ ಆಗಿದೆ.

  • ಸಾಲ ತೀರಿಸುವಂತೆ ಬ್ಯಾಂಕ್‍ ನಿಂದ ನೋಟಿಸ್- ಹೃದಯಾಘಾತವಾಗಿ ರೈತ ಸಾವು

    ಸಾಲ ತೀರಿಸುವಂತೆ ಬ್ಯಾಂಕ್‍ ನಿಂದ ನೋಟಿಸ್- ಹೃದಯಾಘಾತವಾಗಿ ರೈತ ಸಾವು

    ತುಮಕೂರು: ಸಾಲ ತೀರಿಸುವಂತೆ ಬ್ಯಾಂಕ್ ನವರು ಕಳಿಸಿದ ನೋಟಿಸ್ ನೋಡಿ ಹೃದಯಾಘಾತಕ್ಕೊಳಗಾಗಿ ರೈತರೊಬ್ಬರು ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಜಿಲ್ಲೆಯ ಶಿರಾ ತಾಲೂಕಿನ ಎಂ. ದಾಸರಹಳ್ಳಿಯ 65 ವರ್ಷದ ಬಡಯ್ಯ ಮೃತ ರೈತ. ವಿವಿಧ ಬ್ಯಾಂಕ್ ಗಳಲ್ಲಿ 6 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿದ್ದರು. ಆದರೆ ಬೆಳೆ ಹಾಳಾಗಿ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ.

    ಸೋಮವಾರ ಮಧ್ಯಾಹ್ನ ಬಡಯ್ಯನಿಗೆ ಸಾಲ ತೀರಿಸುವಂತೆ ಬ್ಯಾಂಕಿನಿಂದ ನೋಟಿಸ್ ಬಂದಿತ್ತು. ಅದನ್ನು ನೋಡಿ ಹೃದಯಾಘಾತಕ್ಕೆ ಒಳಗಾಗಿದ್ದರು. ಬಡಯ್ಯ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.