Tag: farmer

  • ಆದಾಯದ 80% ಹಣ ಹೋರಾಟಕ್ಕೆ ಮೀಸಲು- ಬರದ ನಾಡು ಪಾವಗಡದ ರೈತರ ಆಶಾಕಿರಣ ತುಮಕೂರಿನ ಪೂಜಾರಪ್ಪ

    ಆದಾಯದ 80% ಹಣ ಹೋರಾಟಕ್ಕೆ ಮೀಸಲು- ಬರದ ನಾಡು ಪಾವಗಡದ ರೈತರ ಆಶಾಕಿರಣ ತುಮಕೂರಿನ ಪೂಜಾರಪ್ಪ

    ತುಮಕೂರು: ಪಾವಗಡ ತಾಲೂಕು ಬರದಿಂದಲೇ ಸುದ್ದಿಯಲ್ಲಿರುತ್ತೆ. ಆದ್ರೆ ಇಲ್ಲಿನ ರೈತ ಪೂಜಾರಪ್ಪಗೆ ಇದರ ಬಿಸಿ ಇಲ್ಲ. ಹೂವಿನಿಂದಲೇ ಬದುಕು ರೂಪಿಸಿಕೊಂಡು ಅದರಿಂದ ಬರೋ ಆದಾಯವನ್ನ ರೈತ ಹೋರಾಟಕ್ಕೆ ಮೀಸಲಿಟ್ಟಿದ್ದಾರೆ.

    ತುಮಕೂರಿನ ಬರದ ತಾಲೂಕು ಪಾವಗಡದ ಬ್ಯಾಡನೂರು ದೊಡ್ಡಹಟ್ಟಿ ಗ್ರಾಮದ ರೈತ ಪೂಜಾರಪ್ಪ ಅವರು ತಾಲೂಕಿನ ರೈತರ ವಿಷಯ ಬಂದಾಗ ಸದಾ ಮುಂಚೂಣಿಯಲ್ಲಿ ಇರುತ್ತಾರೆ. ಕಳೆದ 6 ವರ್ಷಗಳಿಂದ ರಾಜ್ಯ ರೈತ ಸಂಘದ ಪಾವಗಡ ತಾಲೂಕು ಅಧ್ಯಕ್ಷರಾಗಿದ್ದಾರೆ. ರೈತರ ಹೋರಾಟಕ್ಕಾಗಿ ತನ್ನ ಜಮೀನಿನಲ್ಲಿ ಬೆಳೆಯುತ್ತಿರುವ ಕಾಕಡಾ ಹೂವಿನ ಶೇ.80 ರಷ್ಟು ಸಂಪಾದನೆಯನ್ನ ಮೀಸಲಾಗಿಟ್ಟಿದ್ದಾರೆ. 4 ಎಕರೆ ಕಾಕಡಾ ಹೂವಿನಿಂದ ವರ್ಷಕ್ಕೆ ಏನಿಲ್ಲಾ ಅಂದ್ರೂ 8 ಲಕ್ಷ ರೂ.ನಷ್ಟು ಹಣ ಸಂಪಾದಿಸ್ತಾರೆ.

    ಪಾವಗಡದಿಂದ ಮಧುಗಿರಿವರೆಗೆ ಎಳೆಯಲಾದ ಪವರ್ ಗ್ರಿಡ್ ಲೈನ್ ವಿರುದ್ಧ ಹೋರಾಟ ನಡೆಸಿ ನೂರಾರು ರೈತರಿಗೆ 120 ಕೋಟಿ ರೂ. ಪರಿಹಾರ ಕೊಡಿಸಿದ್ದಾರೆ. ವಿಶ್ವವಿಖ್ಯಾತ ಸೋಲಾರ್ ಪ್ಲಾಂಟ್ ಗೆ ರೈತರ ಜಮೀನು ಭೋಗ್ಯಕ್ಕೆ ಪಡೆದಿರೋ ಸರ್ಕಾರ ಮೊದಲಿಗೆ ಎಕರೆಗೆ ಕೇವಲ 16 ಸಾವಿರ ರೂಪಾಯಿ ನಿಗದಿ ಮಾಡಿತ್ತು. ಆದ್ರೆ ಇದನ್ನ 22 ಸಾವಿರಕ್ಕೆ ಹೆಚ್ಚುವಂತೆ ಮಾಡಿದ್ದು ಇದೇ ಪೂಜಾರಪ್ಪ ಅವರು.

    ಯಾವುದೇ ಆಮಿಷಕ್ಕೂ ಒಳಗಾಗದೆ 53ರ ವಯಸ್ಸಿನಲ್ಲೂ ಹೋರಾಡ್ತಿರೋ ಪೂಜಾರಪ್ಪಗೆ ಪಾವಗಡ ರೈತರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

    https://www.youtube.com/watch?v=84bqxAY0dm8

  • ಮಹದಾಯಿ ಹೋರಾಟಗಾರರಿಂದ ಮೋದಿ ಫೋಟೋಗೆ ವಿಶೇಷ ಪೂಜೆ

    ಮಹದಾಯಿ ಹೋರಾಟಗಾರರಿಂದ ಮೋದಿ ಫೋಟೋಗೆ ವಿಶೇಷ ಪೂಜೆ

    ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಹಿನ್ನೆಲೆಯಲ್ಲಿ ಇಂದು ಪ್ರಧಾನಿಯವರು ಬೆಂಗಳೂರಿನ ಅರಮನೆ ಮೈದಾನಕ್ಕೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರು ಮೋದಿ ವಿರುದ್ಧ ಪ್ರತಿಭಟನೆ ಡನೆಸುತ್ತಿದ್ದಾರೆ.

    ಮಹದಾಯಿ ವಿಚಾರದಲ್ಲಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿದ್ದಾರೆ. ಅಲ್ಲದೇ ಇದೇ ವೇಳೆ ಫ್ರೀಡಂಪಾರ್ಕ್ ನಲ್ಲಿ ಮೋದಿ ಭಾವಚಿತ್ರ ಕ್ಕೆ ಹೂವು ಹಾಕಿದ್ದಾರೆ. `ಮೋದಿ ಜಿ ಗೆಟ್ ವೆಲ್ ಸೂನ್ ಫಾರ್ ಮಹದಾಯಿ’ ಅಂತಾ ಭಾವಚಿತ್ರ ದ ಮೇಲೆ ಬರೆದಿದ್ದಾರೆ.

    ಸಮಾವೇಶದಲ್ಲಿ ಮಾತನಾಡುವ ಪ್ರಧಾನಿ ಅವರು ಮಹದಾಯಿ ವಿಚಾರವನ್ನು ಪ್ರಸ್ತಾಪ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾತ್ರ ಮೋದಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭಾಷಣದ ವೇಳೆ ಕೇಂದ್ರದಿಂದ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರಾ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

    ಕೇಂದ್ರ ಬಜೆಟ್ ಬಳಿಕ ಮೊದಲ ಸಾರ್ವಜನಿಕ ಭಾಷಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ವಿದೇಶಗಳಲ್ಲಿರುವ ಎನ್‍ಆರ್‍ಐಗಳಿಗೆ ಮೋದಿ ಭಾಷಣ ತಲುಪಿಸಲು ಬಿಜೆಪಿ ವ್ಯವಸ್ಥೆ ಮಾಡಿಕೊಂಡಿದೆ. ಬಿಜೆಪಿ ಕರ್ನಾಟಕ, ಬಿಜೆಪಿ ಇಂಡಿಯಾ, ಬಿಜೆಪಿ ಟ್ವಿಟ್ಟರ್ ಸಾಮಾಜಿಕ ಜಾಲತಾಣಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಭಾಷಣ ಪ್ರಸಾರ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇಷ್ಟೇ ಅಲ್ಲದೆ 200 ಸೋಶಿಯಲ್ ಮೀಡಿಯಾ ಕಾರ್ಯಕರ್ತರಿಂದ ಫೇಸ್ ಬುಕ್ ಮೂಲಕ ಲೈವ್ ನೀಡಲು ತೀರ್ಮಾನ ತೆಗೆದುಕೊಂಡಿದ್ದು, ಮೋದಿ ಭಾಷಣ ಲೈವ್ ಪ್ರಸಾರ ಮಾಡಲೆಂದೇ ಆಯ್ದ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗಿದೆ.

  • ಹಳೆಯ ದ್ವೇಷಕ್ಕೆ ತೊಗರಿ ಬೆಳೆಗೆ ಬೆಂಕಿ- ಠಾಣೆ ಮೆಟ್ಟಿಲೇರಿದ್ರೂ ರೈತನಿಗೆ ಸಿಗಲಿಲ್ಲ ನ್ಯಾಯ

    ಹಳೆಯ ದ್ವೇಷಕ್ಕೆ ತೊಗರಿ ಬೆಳೆಗೆ ಬೆಂಕಿ- ಠಾಣೆ ಮೆಟ್ಟಿಲೇರಿದ್ರೂ ರೈತನಿಗೆ ಸಿಗಲಿಲ್ಲ ನ್ಯಾಯ

    ಬೀದರ್: ತಾಲೂಕಿನ ನೌಬಾದ್‍ನಲ್ಲಿ ದುಷ್ಕರ್ಮಿಗಳು ಹಳೆಯ ದ್ವೇಷಕ್ಕೆ ಬೆಳೆಗೆ ಬೆಂಕಿಹಚ್ಚಿ ಅಟ್ಟಹಾಸ ಮೆರೆದ್ದಾರೆ. ಲಕ್ಷ ಲಕ್ಷ ಬೆಲೆ ಬಾಳುವ ತೊಗರಿ ಹಾಗೂ ಕಾರಳು ಕಟಾವು ಮಾಡಿಟ್ಟಿದ್ದ ರಾಶಿಗೆ ಕೀಡಿಗೇಡಿಗಳು ಬೆಂಕಿ ಹಂಚಿದ್ದಾರೆ.

    ಈ ಕೃತ್ಯಕ್ಕೆ ಸಂಬಂಧಿಕರಲ್ಲಿ ಇದ್ದ ಹಳೆಯ ದ್ವೇಷವೇ ಕಾರಣ ಎಂದು ರೈತ ಬಂಡೆಪ್ಪಾ ಆರೋಪಿಸಿದ್ದಾರೆ. ಈಗ ಬಂಡೆಪ್ಪಾ ಬೆಳೆ ಕಳೆದುಕೊಂಡು ಇಗಾ ಪೊಲೀಸ್ ಠಾಣೆ ಸುತ್ತಿ ಸುತ್ತಿ ಬೇಸತ್ತಿದ್ದಾರೆ.

    ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಈ ಕುರಿತು ಮನವಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಕೊಲೆ ಮಾಡಲು ಕೀಡಿಗೇಡಿಗಳು ಸಂಚು ರೂಪಿಸಿ ಯತ್ನ ಮಾಡಿ ವಿಫಲರಾಗಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ರೈತ ಬಂಡೆಪ್ಪಾ ಅಂಗಲಾಚುತ್ತಿದ್ದಾರೆ.

     

  • ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಲೋನ್ ರಿಕವರಿ ಏಜೆಂಟ್‍ಗಳು

    ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಲೋನ್ ರಿಕವರಿ ಏಜೆಂಟ್‍ಗಳು

    ಲಕ್ನೋ: ಲೋನ್ ರಿಕವರಿ ಏಜೆಂಟ್‍ಗಳು ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 100 ಕಿ.ಮೀ ದೂರವಿರುವ ಸೀತಾಪುರದಲ್ಲಿ ನಡೆದಿದೆ.

    ಗ್ಯಾನ ಚಂದ್ರ(45) ಮೃತ ರೈತ. ಪೊಲೀಸರ ಪ್ರಕಾರ, ಗ್ಯಾನ ಚಂದ್ರ ಅವರು ಖಾಸಗಿ ಸಂಸ್ಥೆ ಎಲ್&ಟಿ ಫೈನಾನ್ಸ್‍ನಿಂದ ಕೆಲವು ವರ್ಷಗಳ ಹಿಂದೆ 5 ಲಕ್ಷ ರೂ. ಸಾಲ ಪಡೆದಿದ್ದರು. ಲೋನ್ ಪೂರ್ಣಗೊಳಿಸಲು 1.25 ಲಕ್ಷ ರೂ. ಪಾವತಿಸಬೇಕಿತ್ತು. ಚಂದ್ರ ಅವರು ಎರಡು ವಾರಗಳ ಹಿಂದೆ ಸಂಸ್ಥೆಗೆ 35 ಸಾವಿರ ರೂ. ಹಣವನ್ನ ಪಾವತಿಸಿದ್ದರು. ಲೋನ್ ಹಣ ಪಾವತಿಯಲ್ಲಿ ಕೆಲವು ವಾರ ವಿಳಂಬವಾದ ಕಾರಣ ಎರಡು ದಿನಗಳ ಹಿಂದೆ ಐವರು ರಿಕವರಿ ಏಜೆಂಟ್‍ಗಳು ಮನೆಯ ಬಳಿ ಬಂದು ಟ್ರ್ಯಾಕ್ಟರ್ ಹಿಂದಿರುಗಿಸುವಂತೆ ಚಂದ್ರ ಅವರಿಗೆ ಕೇಳಿದ್ದಾರೆ.

    ರೈತ ಹಾಗೂ ಏಜೆಂಟ್‍ಗಳ ನಡುವೆ ವಾಗ್ವಾದ ನಡೆದಿದದ್ದು, ಈ ವೇಳೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ರಿಕವರಿ ಏಜೆಂಟ್‍ಗಳು ಮುಂದಾಗಿದ್ದಾರೆ. ಅವರಲ್ಲಿ ಒಬ್ಬರು ಚಂದ್ರ ಅವರನ್ನ ಟ್ರ್ಯಾಕ್ಟರ್ ಮುಂದೆ ತಳ್ಳಿದ್ದಾರೆ. ಹೀಗಾಗಿ ಕುಟುಂಬಸ್ಥರ ಕಣ್ಣ ಮುಂದೆಯೇ ಚಂದ್ರ ಟ್ರ್ಯಾಕ್ಟರ್ ಅಡಿ ಸಿಲುಕಿ ಸಾವನ್ನಪ್ಪಿದ್ದಾರೆ.

    ಸಾಂದರ್ಭಿಕ ಚಿತ್ರ

    ನಾವು ಜನವರಿ 10ರಂದು 35 ಸಾವಿರ ರೂ. ಪಾವತಿಸಿದ್ದೆವು. ನಮ್ಮ ಅಣ್ಣ ಉಳಿದ ಹಣವನ್ನ ಬೇಗ ಪಾವತಿಸುತ್ತೇನೆಂದು ಹೇಳಿದ್ರು. ಆದ್ರೆ ಅವರು ಅದನ್ನು ಕೇಳಿಸಿಕೊಳ್ಳದೇ ಟ್ರ್ಯಾಕ್ಟರ್ ಕೀ ಕಸಿದುಕೊಂಡರು. ಅವರು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವಾಗ ಅವರಲ್ಲಿ ಒಬ್ಬ ವ್ಯಕ್ತಿ ನನ್ನ ಅಣ್ಣನನ್ನು ತಳ್ಳಿದ್ರು. ನಂತರ ಅವರು ಟ್ರ್ಯಾಕ್ಟರ್ ಕೆಳಗೆ ಬಿದ್ದು, ನಮ್ಮ ಕಣ್ಣ ಮುಂದೆಯೇ ಸಾವನ್ನಪ್ಪಿದ್ರು ಎಂದು ಚಂದ್ರ ಅವರ ಸಹೋದರ ಓಂ ಪ್ರಕಾಶ್ ಹೇಳಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ಹೇಳಿದ್ದಾರೆ.

    ಚಂದ್ರ ಅವರು 2.5 ಎಕರೆ ಜಮೀನು ಹೊಂದಿದ್ದರು. ಆದ್ರೆ ಐವರು ಪುತ್ರಿಯರು ಸೇರಿದಂತೆ 7 ಜನರ ಕುಟುಂಬವನ್ನು ಸಾಕಲು ಅದು ಸಾಕಾಗುತ್ತಿರಲಿಲ್ಲ. ಒಬ್ಬ ಮಗಳಿಗೆ ಶ್ರವಣ ಹಾಗೂ ಮಾತಾಡುವ ತೊಂದರೆಯೂ ಇತ್ತು. ಹಣ ಸಂಪಾದಿಸಲು ಚಂದ್ರ ಬೇರೆ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

  • ಕೈಗೆಟುಕುವ ರೀತಿಯಲ್ಲಿ ಜೋತು ಬಿದ್ದ ವಿದ್ಯುತ್ ತಂತಿ- ಆತಂಕದಲ್ಲಿ ಗ್ರಾಮಸ್ಥರು

    ಕೈಗೆಟುಕುವ ರೀತಿಯಲ್ಲಿ ಜೋತು ಬಿದ್ದ ವಿದ್ಯುತ್ ತಂತಿ- ಆತಂಕದಲ್ಲಿ ಗ್ರಾಮಸ್ಥರು

    ಬೆಂಗಳೂರು: ನಗರದ ಹೊರವಲಯದ ನೆಲಮಂಗಲ ನಿವಾಸಿಗಳು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಪರಿತಪಿಸುವಂತಾಗಿದೆ.

    ತಾಲೂಕಿನ ಚಿಕ್ಕಮಾರನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿ, ಕಳೆದ ಒಂದು ವರ್ಷದಿಂದ ಕೈಗೆಟುಕುವ ರೀತಿಯಲ್ಲಿ ಜೋತು ಬಿದ್ದಿದೆ. ಮನೆಯ ಮುಂಭಾಗದಲ್ಲೇ ವಿದ್ಯುತ್ ತಂತಿ ಹಾಯ್ದು ಹೋಗಿದ್ದು, ರೈತರು ತಮ್ಮ ಮನೆಯಿಂದ ಜಮೀನಿಗೆ ಹೋಗಬೇಕಾದರೆ ಇದರ ಕೆಳ ಭಾಗದಲ್ಲೇ ಹೋಗಬೇಕಾಗಿದೆ.

    ಈಗಾಗಲೇ ಇಲ್ಲಿನ ರೈತರು ಹಾಗೂ ಗ್ರಾಮಸ್ಥರು ವಿದ್ಯುತ್ ತಂತಿ ತಗುಲಿ ಅನೇಕ ಬಾರಿ ವಿದ್ಯುತ್ ಶಾಕ್ ಹೊಡೆಸಿಕೊಂಡಿದ್ದಾರೆ. ವಿದ್ಯುತ್ ತಂತಿಗಳ ದುರಸ್ಥಿ ಕಾರ್ಯ ಮಾಡುವಂತೆ, ನೆಲಮಂಗಲ ಬೆಸ್ಕಾಂ ಕಚೇರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.

    ಇನ್ನು ಈ ವಿಚಾರದಲ್ಲಿ ಲೈನ್ ಮ್ಯಾನ್‍ಗಳಿಗೆ ತಿಳಿಸಿದರೆ ಬಾಯಿಗೆ ಬಂದ ಹಾಗೆ ಹಣ ಕೇಳುತಿದ್ದು, ಹಣ ಕೊಡಲಾಗದೇ ಇತ್ತ ಭಯದಲ್ಲಿ ಇಡೀ ಗ್ರಾಮವೇ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ಪ್ರತಿನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.

  • ಜಮೀನಿಗೆ ಹೋಗ್ತಿದ್ದಾಗ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ- ರೈತ ಮಹಿಳೆ ಸಾವು

    ಜಮೀನಿಗೆ ಹೋಗ್ತಿದ್ದಾಗ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ- ರೈತ ಮಹಿಳೆ ಸಾವು

    ಮಂಡ್ಯ: ಜಮೀನಿಗೆ ಹೋಗುತ್ತಿದ್ದ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತಿನಗಾಡಿ ಹಳ್ಳಕ್ಕೆ ಮಗುಚಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ 40 ವರ್ಷದ ಜವನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶಂಕರ್ ಎಂಬುವರು ಗಾಯಗೊಂಡಿದ್ದಾರೆ. ಇದೇ ವೇಳೆ ಎತ್ತುಗಳು ಕೂಡ ಗಾಯಗೊಂಡಿವೆ. ಕೆಲಸಕ್ಕೆಂದು ಜಮೀನಿಗೆ ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಎತ್ತಿನಗಾಡಿಯ ನೊಗಕ್ಕೆ ತಾಗಿದ್ದು, ಎತ್ತಿನಗಾಡಿ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ.

    ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ದುರ್ಮರಣ

    ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ದುರ್ಮರಣ

    ರಾಮನಗರ: ಜಮೀನಿನಲ್ಲಿ ದನ ಮೇಯಿಸಲು ಹೋಗಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಲ್ಯಾ ಗ್ರಾಮದಲ್ಲಿ ನಡೆದಿದೆ.

    ಕಲ್ಯಾ ಗ್ರಾಮದ ನಿವಾಸಿ ಚಂದ್ರಪ್ಪ (55) ವಿದ್ಯುತ್ ತಂತಿ ಸ್ಪರ್ಶದಿಂದ ಸಾವನ್ನಪ್ಪಿದ ರೈತ. ಬೆಳಿಗ್ಗೆ ದನ ಮೇಯಿಸಲು ತಮ್ಮ ಜಮೀನಿಗೆ ತೆರಳಿದ್ದ ಚಂದ್ರಪ್ಪ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನ ಗಮನಿಸದೇ ಅದರ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

     

    ವಿದ್ಯುತ್ ತಂತಿ ತುಂಡಾಗಿ ಹಲವು ದಿನಗಳೇ ಕಳೆದಿದ್ವು. ಈ ಬಗ್ಗೆ ಬೆಸ್ಕಾಂ ಗೆ ದೂರು ಕೂಡಾ ನೀಡಿದ್ವಿ. ಆದ್ರೆ ಬೆಸ್ಕಾಂ ಅಧಿಕಾರಿಗಳು ತುಂಡಾಗಿದ್ದ ತಂತಿಯನ್ನು ಸರಿಪಡಿಸುವುದಿರಲಿ ಸ್ಥಳಕ್ಕೆ ಭೇಟಿಯನ್ನೂ ಸಹ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ಮೃತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ರು.

    ಘಟನೆ ಸಂಬಂಧ ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಭತ್ತದ ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು- 3 ಬೃಹತ್ ಬಣವೆಗಳು ಸಂಪೂರ್ಣ ಭಸ್ಮ

    ಭತ್ತದ ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು- 3 ಬೃಹತ್ ಬಣವೆಗಳು ಸಂಪೂರ್ಣ ಭಸ್ಮ

    ತುಮಕೂರು: ಕಿಡಿಗೇಡಿಗಳು ಭತ್ತದ ಬಣವೆಗೆ ಬೆಂಕಿ ಇಟ್ಟ ಪರಿಣಾಮ ಮೂರು ಬೃಹತ್ ಬಣವೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಿಯೂರಿನಲ್ಲಿ ನಡೆದಿದೆ.

    ಗೋವಿಂದಯ್ಯ, ನಟರಾಜ ಹಾಗೂ ಚಂದ್ರಪ್ಪ ಎನ್ನುವವರಿಗೆ ಈ ಬಣವೆ ಸೇರಿದೆ. ಪ್ರತ್ಯೇಕ ಸ್ಥಳದಲ್ಲಿ ಕೃತ್ಯ ನಡೆದಿರುವುದರಿಂದ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಷ್ಟರಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿತ್ತು.

    ಬಣವೆ ಸುಟ್ಟು ಭಸ್ಮವಾದ ಪರಿಣಾಮ ಮೂವರೂ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೈಯಕ್ತಿಕ ದ್ವೇಷಕ್ಕೆ ಬಾಳೆ ಬೆಳೆ ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು

    ವೈಯಕ್ತಿಕ ದ್ವೇಷಕ್ಕೆ ಬಾಳೆ ಬೆಳೆ ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು

    ಮೈಸೂರು: ಮಾಲೀಕನ ಮೇಲಿನ ವೈಯಕ್ತಿಕ ದ್ವೇಷಕ್ಕೆ ದುಷ್ಕರ್ಮಿಗಳು ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ಕತ್ತರಿಸಿ ವಿಕೃತಿ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬನ್ನೂರು ಸಮೀಪದ ಅತ್ತಹಳ್ಳಿ ಗ್ರಾಮದ ರಾಮಪ್ರಸಾದ್ ಎಂಬವರಿಗೆ ಸೇರಿದ್ದು, ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಬಾಳೆ ಬೆಳೆಯನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ರೈತ ದುಷ್ಕರ್ಮಿಗಳ ಕೃತ್ಯದಿಂದ ಅಪಾರ ನಷ್ಟ ಅನುಭವಿಸಿದ್ದಾರೆ.

    ಕೃತ್ಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹದಾಯಿಗಾಗಿ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿಂದು ವಾಟಾಳ್ ನಾಗರಾಜ್ ಕರಾಳ ದಿನಾಚರಣೆ

    ಮಹದಾಯಿಗಾಗಿ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿಂದು ವಾಟಾಳ್ ನಾಗರಾಜ್ ಕರಾಳ ದಿನಾಚರಣೆ

    ಬೆಂಗಳೂರು: ಮಹದಾಯಿಗಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮುಂದಾಳತ್ವದಲ್ಲಿ ಇಂದು ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಕರಾಳ ದಿನಾಚರಣೆ ನಡೆಯಲಿದೆ.

    ಇದರಲ್ಲಿ ಚಿತ್ರರಂಗದವರು ಕೂಡ ಪಾಲ್ಗೊಳ್ಳಲಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಈ ಹೋರಾಟಕ್ಕೆ ಸಾಥ್ ಕೊಡಲಿದ್ದಾರೆ. ಮಹದಾಯಿ ವಿಚಾರದಲ್ಲಿ ರಾಜಕೀಯ ಖಂಡಿಸಿ ಈ ಹೋರಾಟ ನಡೆಯಲಿದೆ.

    ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ಸೇರಿದಂತೆ ರಾಜಕಾರಣಿಗಳ ವಚನ ಭ್ರಷ್ಟತೆ ಖಂಡಿಸಿ ಬುಧವಾರ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಅದರಲ್ಲೂ ಬೆಂಗಳೂರಿನಲ್ಲಿ ರಾಜ್ಯಪಾಲರಿಗೆ ಮನವಿ ನೀಡೋಕೆ ಹೋದರೆ ಅಲ್ಲಿ ಅವಮಾನ ಆಯ್ತು. ಒಂದು ಕಡೆ ರಾಜಕಾರಣಿಗಳಿಂದ ಭರವಸೆ ಸಿಗಲಿಲ್ಲ. ಮತ್ತೊಂದು ಕಡೆ ರಾಜ್ಯದ ಪ್ರಥಮ ಪ್ರಜೆ ಭೇಟಿಗೆ ಅವಕಾಶ ಕೊಡಲಿಲ್ಲ.

    ಇದರಿಂದ ನಿರಾಶಿತರಾದ ಮಹದಾಯಿ ಹೋರಾಟಗಾರರು ರಾತ್ರಿಯೇ ತಮ್ಮ ಊರುಗಳತ್ತ ತೆರಳಿದ್ದು, ಕೆಲವರು ಈಗಲೂ ತೆರಳುತ್ತಿದ್ದಾರೆ. ಐದು ದಿನಗಳಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದ್ದ ರೈತರು ನಿರಾಸೆಯಿಂದಲೇ ಹೋಗುತ್ತಿದ್ದಾರೆ.