Tag: farmer

  • ರೈತನಿಂದ 20 ಅಡಿ ಆಳಕ್ಕೆ ಬಿದ್ದ ನವಿಲು ರಕ್ಷಣೆ!

    ರೈತನಿಂದ 20 ಅಡಿ ಆಳಕ್ಕೆ ಬಿದ್ದ ನವಿಲು ರಕ್ಷಣೆ!

    ಬೀದರ್: 20 ಅಡಿ ಆಳದ ತೆರೆದ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ರಾಷ್ಟ್ರ ಪಕ್ಷಿ ನವಿಲನ್ನು ಬೀದರ್ ತಾಲೂಕಿನ ಚಿಟ್ಟಾವಾಡಿಯ ರೈತರೊಬ್ಬರು ರಕ್ಷಣೆ ಮಾಡಿ ಮಾನವೀಯತೆ ತೋರಿಸಿದ್ದಾರೆ.

    ನವಿಲು ಕಣ್ಣು ಕಾಣದೆ ತೆರೆದ ಬಾವಿಗೆ ಬಿದ್ದಿದೆ. ಆಹಾರವಿಲ್ಲದೆ ಇಂದು ಮುಂಜಾನೆಯಿಂದ ಬಾವಿಯಲ್ಲಿ ಒದ್ದಾಡುತ್ತಿತ್ತು. ಬಾವಿಗೆ ಬಿದ್ದಿದ್ದ ರಾಷ್ಟ್ರ ಪಕ್ಷಿಯನ್ನು ರೈತ ಮಹಮ್ಮದ್ ಜಾಫರ್ ನೋಡಿದ್ದಾರೆ.

    ನಂತರ ಸ್ಥಳಿಯರಿಗೆ ಕರೆ ಮಾಡಿ, ಹಗ್ಗದ ಸಹಾಯದಿಂದ ಬಾವಿಯ ಕೆಳಗೆ ಇಳಿದಿದ್ದಾರೆ. ಬಳಿಕ ಬಾವಿಯಲ್ಲಿದ್ದ ನವಿಲನ್ನು ಹಗ್ಗದ ಸಹಾಯದಿಂದ ತನ್ನ ಸೊಂಟಕ್ಕೆ ಕಟ್ಟಿಕೊಂಡು ಮೇಲೆ ಎತ್ತಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ನವಿಲನ್ನು ರಕ್ಷಣೆ ಮಾಡಿ ರೈತ ಜಾಫರ್ ಪಶು ಇಲಾಖೆಯ ಅಧಿಕಾರಿಗಳ ಬಳಿಗೆ ತಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

  • ಎತ್ತುಗಳಿಲ್ಲದೇ 2 ಎಕರೆ ಕಳೆ ತೆಗೆದ ರೈತ

    ಎತ್ತುಗಳಿಲ್ಲದೇ 2 ಎಕರೆ ಕಳೆ ತೆಗೆದ ರೈತ

    ಕೊಪ್ಪಳ: ಸಾಮಾನ್ಯವಾಗಿ ಹೊಲಗಳಲ್ಲಿ ಕಳೆ ತಗೆಯಲು ಎತ್ತುಗಳು ಬೇಕು. ಆದರೆ ರೈತರೊಬ್ಬರು ಎತ್ತುಗಳಿಲ್ಲದೆ ಬೆಳೆಗಳ ಮಧ್ಯೆ ಬೆಳೆದ ಕಳೆಯನ್ನ ತೆಗೆದಿದ್ದಾರೆ

    ಹೌದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ರೈತ ಶಿವಾನಂದ ಕರೆಯಣ್ಣವರ ಎತ್ತುಗಳಿಲ್ಲದೆ ಕಳೆ ತೆಗೆದಿದ್ದಾರೆ. ಕೃಷಿ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತಿರುವ ಕೈ ಚಾಲಿತ ಯಂತ್ರದಲ್ಲಿ ಶಿವಾನಂದ ತನ್ನ ಹೊಲದಲ್ಲಿ ಬೆಳೆದ ಕಳೆ ತಗೆಯಲು ಮುಂದಾಗಿದ್ದಾರೆ. ಎತ್ತುಗಳಿಲ್ಲದ ಕಾರಣ ಬಾಡಿಗೆ ಎತ್ತು ತಂದು ಕಳೆ ತಗೆಯಲು ಹಣವಿರದ ಕಾರಣ ಕೈ ಚಾಲಿತ ಯಂತ್ರದ ಮೊರೆ ಹೋಗಿದ್ದರು.

    ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಕಳೆ(ಕಸ) ತಗೆಯಲು ಎತ್ತುಗಳಿಗೆ 500 ರಿಂದ 1000 ಬಾಡಿಗೆ ನೀಡಬೇಕಾಗುತ್ತದೆ. ಬಾಡಿಗೆ ನೀಡಿದರೂ ಎತ್ತುಗಳು ಸರಿಯಾದ ಸಮಯಕ್ಕೆ ಸಿಗೋದಿಲ್ಲ. ಇದರಿಂದ ರೋಸಿಗೋದ ಶಿವಾನಂದ ಕೃಷಿ ಸಂಪರ್ಕ ಕೇಂದ್ರದ ಸಹಾಯ ಕೇಳಿದ್ದಾರೆ.

    ಅಧಿಕಾರಿಗಳು ಕೈ ಚಾಲಿತ ಯಂತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಎತ್ತುಗಳ ಬದಲಿಗೆ ಇದೆ ಒಳ್ಳೆಯದು ಅಂದುಕೊಂಡ ರೈತ ಶಿವಾನಂದ ಇದೀಗ ಕೈ ಚಾಲಿತ ಯಂತ್ರದಿಂದ ಕಳೆ ತೆಗೆದಿದ್ದಾರೆ. ಎತ್ತುಗಳಿಂದ ದಿನವಿಡಿ ಕೆಲಸ ಮಾಡಿದರೂ ಒಂದು ಎಕರೆ ಕಳೆ ತಗೆಯಲು ಸಾಧ್ಯವಿಲ್ಲ. ಆದರೆ ಈ ಯಂತ್ರದಿಂದ ಒಂದು ದಿನಕ್ಕೆ ಎರಡರಿಂದ ಮೂರು ಎಕರೆ ಕಳೆ ತಗೆಯಬಹುದು ಎಂದು ಶಿವಾನಂದ ಹೇಳಿದ್ದಾರೆ.

  • ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು!

    ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು!

    ಬೆಳಗಾವಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ಸ್ಪರ್ಶಿಸಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.

    ನಿಜಗುಣಯ್ಯ ಗುಂಡಕಲ್(45) ಮೃತ ದುರ್ದೈವಿ. ಇವರು ವೀರಾಪುರ ಗ್ರಾಮದ ನಿವಾಸಿಯಾಗಿದ್ದು, ಇಂದು ಬೆಳಗ್ಗೆ ತಮ್ಮ ಜಮೀನಿಗೆ ಕೆಲಸಕ್ಕೆಂದು ಹೋಗಿದ್ದಾರೆ. ಈ ವೇಳೆ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ತುಳಿದಿದ್ದಾರೆ. ವಿದ್ಯುತ್ ಹರಿದ ಪರಿಣಾಮ ರೈತ ಸ್ಥಳದಲ್ಲಿಯೇ ಅಸುನೀಗಿದ್ದಾರೆ.

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಿತ್ತೂರು ಪೊಲೀಸ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮಹದಾಯಿ ರೈತರಿಂದ ದೆಹಲಿಯಲ್ಲಿ ಗಡ್ಕರಿ ಭೇಟಿ

    ಮಹದಾಯಿ ರೈತರಿಂದ ದೆಹಲಿಯಲ್ಲಿ ಗಡ್ಕರಿ ಭೇಟಿ

    ನವದೆಹಲಿ: ಮಹದಾಯಿ ವಿಚಾರವಾಗಿ ಇಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನ ರಾಜ್ಯ ರೈತರ ನಿಯೋಗ ಭೇಟಿ ಮಾಡಿತು.

    ಮಹದಾಯಿ ವ್ಯಾಪ್ತಿಯ ಮೂರು ಜಿಲ್ಲೆಯ 23 ಮಂದಿ ರೈತರ ನಿಯೋಗ ನವದೆಹಲಿಯ ಸಾರಿಗೆ ಭವನದಲ್ಲಿ ಸಚಿವರನ್ನ ಭೇಟಿಯಾದ್ರು. ಭೇಟಿ ವೇಳೆ ಮಹಾದಾಯಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು ಜೊತೆಗೆ ನ್ಯಾಯಾಧೀಕರಣದಲ್ಲಿರುವ ವ್ಯಾಜ್ಯದ ತೀರ್ಪು ಶೀಘ್ರ ನೀಡುವಂತೆ ಮನವಿ ಮಾಡಿದರು.

    ಮನವಿ ಸ್ವೀಕರಿಸಿದ ನಿತಿನ್ ಗಡ್ಕರಿ ನ್ಯಾಯಾಧೀಕರಣದಲ್ಲಿ ವಿವಾದ ತೀರ್ಪಿನ ಹಂತದಲ್ಲಿದೆ. ಈ ವೇಳೆ ಮಧ್ಯ ಪ್ರವೇಶ ಸಾಧ್ಯವಿಲ್ಲ. ಜುಲೈಯೊಳಗೆ ಮಹದಾಯಿ ತೀರ್ಪು ಬರಲಿದೆ. ಒಂದು ವೇಳೆ ಬಾರದಿದ್ದಲ್ಲಿ ಆಗಸ್ಟ್ ಒಂದರ ಬಳಿಕ ಮತ್ತೊಮ್ಮೆ ಭೇಟಿಯಾಗುವಂತೆ ರಾಜ್ಯ ರೈತ ನಿಯೋಗಕ್ಕೆ ಸೂಚಿಸಿದ್ದಾರೆ.

    ರೈತ ನಿಯೋಗದ ನೇತೃತ್ವ ವಹಿಸಿದ್ದ ಸಹ್ಯಾದ್ರಿ ಜಲಜನ ಸೊಸೈಟಿ ಮಹದಾಯಿ ಸಣ್ಣ ನೀರಾವರಿ ಯೋಜನೆ ಕುರಿತಾದ ಪ್ಲಾನ್ ಸಿದ್ಧಪಡಿಸಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಸಲ್ಲಿಸಿತು. ಪ್ಲಾನ್ ಸ್ವೀಕರಿಸಿದ ನಿತಿನ್ ಗಡ್ಕರಿ ತೀರ್ಪಿನ ಬಳಿಕ ಪರಿಶೀಲಿಸುವ ಭರವಸೆ ನೀಡಿದರು.ಇದನ್ನೂ ಓದಿ:ಕಳಸಾ ಬಂಡೂರಿ ವಿವಾದ – ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್

  • ಬ್ಯಾಂಕ್ ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರೈತ

    ಬ್ಯಾಂಕ್ ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರೈತ

    ದಾವಣಗೆರೆ: ಬ್ಯಾಂಕ್ ಅಧಿಕಾರಿಗಳು ಸಾಲ ನೀಡಲು ಸತಾಯಿಸಿದ ಕಾರಣಕ್ಕೆ ಮನನೊಂದ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಿಲು ಗ್ರಾಮದಲ್ಲಿ ನಡೆದಿದೆ.

    ನಿಟ್ಟೂರು ಗ್ರಾಮದ ಪ್ರಕಾಶ್ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದ ರೈತರಾಗಿದ್ದಾರೆ. ಹಲವಾಗಿಲಿನ ಪ್ರಗತಿ ಕೃಷ್ಣಾ ಪ್ರಗತಿ ಬ್ಯಾಂಕ್ ನಲ್ಲಿ ಜಮೀನಿನ ಮೇಲೆ ಕೃಷಿ ಸಾಲ ನೀಡುವಂತೆ ಹಲವಾರು ಬಾರಿ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿಕೊಂದಿದ್ದರು.

    ಆದರೆ ಬ್ಯಾಂಕ್ ಅಧಿಕಾರಿಗಳು ಮಾತ್ರ ರೈತ ಪ್ರಕಾಶ್‍ರನ್ನು ಬ್ಯಾಂಕಿಗೆ ಅಲೆದಾಡಿಸಿದ್ದಾರೆ. ಕೆಲ ದಿನಗಳ ನಂತರ ಸಾಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಈ ವರ್ತನೆಗೆ ಬೇಸತ್ತ ರೈತ ಪ್ರಕಾಶ ಬ್ಯಾಂಕಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ತನ್ನ ಸಾವಿಗೆ ಬ್ಯಾಂಕ್ ಮ್ಯಾನೇಜರ್ ಉಮೇಶ್ ರೆಡ್ಡಿ ಯೇ ಕಾರಣ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿಟ್ಟುಕೊಂಡಿದ್ದ.

    ಆತ್ಮಹತ್ಯೆಗೆ ಯತ್ನಿಸಿದ ರೈತ ಪ್ರಕಾಶ್‍ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಹಲವಾಗಲು ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

  • ಕಳಸಾ ಬಂಡೂರಿ ವಿವಾದ – ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್

    ಕಳಸಾ ಬಂಡೂರಿ ವಿವಾದ – ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್

    ಬೆಂಗಳೂರು: ಕಳಸಾ ಬಂಡೂರಿ ವಿವಾದ ಪರಿಹಾರದ ಚರ್ಚೆಗೆ ಪ್ರಧಾನಮಂತ್ರಿ ಗಳಿಂದ ಕಳಸಾ ಬಂಡೂರಿ ರೈತರ ಭೇಟಿಗೆ ದಿನ ನಿಗದಿಯಾಗಿದೆ.

    ಇದೇ ತಿಂಗಳು 14 ಅಥವಾ 15 ರಂದು ಪ್ರಧಾನಿ ನರೇಂದ್ರ ಮೋದಿಯವರನ್ನ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ಕಳಸಾ ಬಂಡೂರಿ ರೈತರು ಭೇಟಿಯಾಗಲಿದ್ದಾರೆ.ಇದನ್ನೂ ಓದಿ:ಮಹದಾಯಿ ನ್ಯಾಯಾಧಿಕರಣದ ಮುಂದೆ ವಾದ ಅಂತ್ಯ: ಮೂರು ರಾಜ್ಯಗಳ ವಾದ ಏನಿತ್ತು? ಜುಲೈನಲ್ಲಿ ಬರುತ್ತಾ ತೀರ್ಪು?

    ಬೆಂಗಳೂರಿನ ಸಹ್ಯಾದ್ರಿ ಜನ-ಜಲ ಸೊಸೈಟಿ ಹಾಗೂ ಮಹದಾಯಿ ಮಹಾವೇದಿಕೆ ಸಹಯೋಗ ದಲ್ಲಿ ಪ್ರಧಾನಿಗಳನ್ನ ಭೇಟಿ ಮಾಡಲಿದ್ದು ಹುಬ್ಬಳ್ಳಿ, ಧಾರವಾಡ, ರಾಮದುರ್ಗ, ನರಗುಂದ ಸೇರಿದಂತೆ 23 ಜನ ರೈತರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

    ಇಂದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸಲಿರುವ ರೈತರು ನಾಳೆ ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.ಇದನ್ನೂ ಓದಿ:2 ವರ್ಷವಾದ್ರೂ ರೈತರ ಹೋರಾಟಕ್ಕೆ ಬೆಲೆಯಿಲ್ಲ: ಕಳಸಾ ಬಂಡೂರಿ, ಮಹದಾಯಿ ನೀರಿಗಾಗಿ `ಮಾಡು ಇಲ್ಲವೇ ಮಡಿ’ ಹೋರಾಟ

  • ಒಂದೂವರೆ ಎಕರೆ ಜಮೀನಿನಲ್ಲಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆದು ಮಾದರಿಯಾಗಿದ್ದಾರೆ ಕೋಲಾರದ ಮಹಿಳೆ!

    ಒಂದೂವರೆ ಎಕರೆ ಜಮೀನಿನಲ್ಲಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆದು ಮಾದರಿಯಾಗಿದ್ದಾರೆ ಕೋಲಾರದ ಮಹಿಳೆ!

    ಕೋಲಾರ: ಕೆರೆಗಳ ನಾಡು ಕೋಲಾರದಲ್ಲಿ ಮಳೆಯನ್ನೇ ಆಧರಿಸಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಮಹಿಳೆಯೊಬ್ಬರು `ಮಾದರಿ ರೈತ ಮಹಿಳೆ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ಚಿನ್ನದ ನಾಡು ಕೋಲಾರದಲ್ಲಿ ಆದರ್ಶ ರೈತ ಮಹಿಳೆಯೊಬ್ಬರು ಸುಮಾರು 60 ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತೊಂಡಹಳ್ಳಿ ಗ್ರಾಮದ ರಾಜಮ್ಮ ಈ ಆದರ್ಶ ಮಹಿಳೆ.

    ಕೋಲಾರದಲ್ಲಿ ಮಳೆಯ ಪ್ರಮಾಣ ಅಷ್ಟೇನೂ ಹೇಳಿಕೊಳ್ಳುವಂಥದ್ದೇನಲ್ಲ. ಮುಂಗಾರು ಮಳೆಯನ್ನೇ ಆಧರಿಸಿ ರೈತ ಮಹಿಳೆ ರಾಜಮ್ಮ, ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ 60 ವರ್ಷಗಳಿಂದ ಸುಮಾರು 50 ರಿಂದ 60 ರೀತಿಯ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ.

    ತಮ್ಮ ದೈನಂದಿನ ಬದುಕಿಗೆ ಬೇಕಾದ ರಾಗಿ, ಜೋಳ, ಅವರೆ, ಗೊಂಗುರು, ಬುಷ್ ಬಿನ್ಸ್, ಚಿಕ್ಕಕುಂಬಳಕಾಯಿ, ಕೆಂಪುಮುದ್ರೆ ಜೋಳ, ಹಳಸಂದ್ರ, ಸಾಮೆ, ಕಪ್ಪು ಸಾಮೆ, ಔಡಲ ಬೀಜ, ಬರುಗು ಸಾಮಿ, ಕಾಕಿ ಜೋಳ, ಕಿರು ಹಳೆಸಂದ್ರೆ, ತಬೆ ಬೀಜ, ನುಗ್ಗೆಬೀಜ, ಅವರೆ ಬೀಜ, ಸಚೆ ಬೀಜ, ಬಿಳಿ ನವೆ, ಊದಲು ಬೀಜ,ಕೆಂಪು ನವಣೆ, ಎಳ್ಳು, ರಾಗಿ ಬೀಳು, ಗಿಡ್ಡ ರಾಗಿ, ಬೀಟ್ರೋರಟ್, ಅರಿಸಿನ, ಟಮೋಟೊ, ಸೌತೆಕಾಯಿ, ಅರಿಸಿನ ಮೂಲಂಗಿ, ಈರುಳ್ಳಿ, ಬದನೆ, ಮುಸುಕ ಬದನೆ, ಕ್ಯಾರೆಟ್, ಕಡ್ಡಿ ಮೆಣಸಿನಕಾಯಿ, ಕೆಂಪು ಮೂಲಂಗಿ, ರಾಜಾಮ್ ಬೀಜ, ಮೆಂಥ್ಯ್ ಸೋಪ್ಪು, ತಂಬೂರಿ ಸೊರೆಕಾಯಿ ಕ್ಯಾರೆಟ್, ಉದ್ದ ಕುಂಬಳಕಾಯಿ, ಸೊರೆಬೀಜ, ಜೋಳ, ಬೀಳಿಬಿನ್ಸ್, ಸಾಮಿ, ಉದ್ದಲಬೀಜ, ಚಟ್ನಿ ಎಳ್ಳು ಸೇರಿದಂತೆ ಹಲವಾರು ಬಗೆಯ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ.

    ತಮ್ಮ ಕುಟುಂಬಕ್ಕೆ ಬೇಕಾದಷ್ಟು ಸಿರಿಧಾನ್ಯಗಳನ್ನು ಬೆಳೆಯುತ್ತಾ ವರ್ಷವಿಡೀ ತಮ್ಮ ಜೀವನ ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯ ಅಂದ್ರೆ ಇವರು ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಹೊಲಕ್ಕೆ ರಾಸಾಯನಿಕ ಗೊಬ್ಬರವನ್ನು ಬಳಸದೇ ಕೊಟ್ಟಿಗೆ ಗೊಬ್ಬರವನ್ನೇ ಬಳಸಿ ಆರೋಗ್ಯಕರ ಕೃಷಿ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಇವರು ಮಾಡುವ ಕೃಷಿಯು ಅಕ್ಕಪಕ್ಕದ ರೈತರಿಗೂ ಮಾದರಿಯಾಗಿದೆ.

    ಈಗಾಗಲೇ ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭೂಮಿ ಶುಚಿಗೊಳಿಸುವುದರಿಂದ ಹಿಡಿದು ಬಿತ್ತನೆವರೆಗೆ ಎಲ್ಲಾ ಕಾರ್ಯಗಳು ಪ್ರಾರಂಭಗೊಂಡಿವೆ. ಇನ್ನು ರೈತರಿಗೆ ಇದು ಪಕ್ಕಾ ಪರ್ವಕಾಲ. ಬಿತ್ತನೆ ಕಾರ್ಯ ಪೂರ್ಣಗೊಂಡು ಚೆನ್ನಾಗಿ ಬೆಳೆ ಬಂದರೆ ವರ್ಷವಿಡೀ ಆನಂದದಿಂದ ಊಟ ಮಾಡಬಹುದು ಎನ್ನುವ ಭಾವನೆ ಅವರದ್ದಾಗಿದೆ.

  • ಜಿ.ಟಿ ದೇವೇಗೌಡರಿಗೆ ಕೊಟ್ಟಿರುವ ಖಾತೆಯನ್ನು ಪುನರ್ ವಿಮರ್ಶಿಸಬೇಕು: ವಿಶ್ವನಾಥ್

    ಜಿ.ಟಿ ದೇವೇಗೌಡರಿಗೆ ಕೊಟ್ಟಿರುವ ಖಾತೆಯನ್ನು ಪುನರ್ ವಿಮರ್ಶಿಸಬೇಕು: ವಿಶ್ವನಾಥ್

    ಮೈಸೂರು:ಜಿಟಿ ದೇವೇಗೌಡರಿಗೆ ಕೊಟ್ಟಿರುವ ಉನ್ನತ ಶಿಕ್ಷಣ ಖಾತೆಯ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು ಎಂದು ಜೆಡಿಎಸ್ ಶಾಸಕ ಹೆಚ್ ವಿಶ್ವನಾಥ್ ಹೇಳಿದ್ದಾರೆ.

    ಕುಮಾರಸ್ವಾಮಿಗಳು ಮೈಸೂರು ಜಿಲ್ಲೆಗೆ 2 ಮಂತ್ರಿ ಸ್ಥಾನಗಳನ್ನು ಕೊಡುವುದರ ಮೂಲಕ ಹೆಚ್ಚು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಎರಡು ದೊಡ್ಡ ಇಲಾಖೆಗಳನ್ನೇ ಕೊಟ್ಟಿದ್ದಾರೆ. ಆದರೆ ಜಿಟಿ ದೇವೇಗೌಡರಿಗೆ ಕೊಟ್ಟಿರುವ ಉನ್ನತ ಶಿಕ್ಷಣ ಖಾತೆಯನ್ನು ಪುನರ್ ವಿಮರ್ಶೆ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.

    ಜಿಟಿ ದೇವೇಗೌಡರು ರೈತರ, ಸಾಮಾನ್ಯರ ಜೊತೆ ಬದುಕು ಮಾಡುತ್ತಿರುವ ಮುಖಂಡರು. ಹಾಗಾಗಿ ಉನ್ನತ ಶಿಕ್ಷಣ ಅವರಿಗೆ ಸರಿಹೊಂದಲ್ಲ. ರೈತರ, ಸಾಮಾನ್ಯರ ಜೊತೆ ಇರುವಂತಹ ಇಲಾಖೆಯನ್ನು ಕೊಡುವುದು ಸೂಕ್ತ ಎಂದು ಹೇಳಿದರು.

  • ನೂತನ ಸರ್ಕಾರದಿಂದ ನಾಡಿನ ರೈತರಿಗೆ ಮೊದಲ ಶಾಕ್

    ನೂತನ ಸರ್ಕಾರದಿಂದ ನಾಡಿನ ರೈತರಿಗೆ ಮೊದಲ ಶಾಕ್

    ಬೆಂಗಳೂರು: ನೂತನ ಸಮ್ಮಿಶ್ರ ಸರ್ಕಾರ ನಾಡಿನ ರೈತರಿಗೆ ಮೊದಲ ಶಾಕ್ ನೀಡಿದೆ. ಹಾಲಿನ ಖರೀದಿ ದರವನ್ನು 2 ರೂ. ಕಡಿತಗೊಳಿಸಲಾಗಿದೆ. ಜೂನ್ 1ರಿಂದ ಹಾಲಿನ ದರ ಅನ್ವಯವಾಗುವಂತೆ ದರ ಕಡಿತಗೊಳಿಸಲಾಗಿದೆ. ಕೆಎಂಎಫ್‍ನ ನಾನಾ ಒಕ್ಕೂಟಗಳಿಂದ ದರ ಕಡಿತ ಮಾಡಲಾಗಿದೆ. ಕೆಎಂಎಫ್‍ನ ಕೆಲ ಒಕ್ಕೂಟಗಳು ಪ್ರತಿ ಲೀಟರ್ ಗೆ 1.50-2 ರೂ.ಕಡಿತ ಮಾಡಿವೆ.

    ದರ ಇಳಿಕೆಗೆ ಕಾರಣ ಏನು ?
    ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹಾಲು ಉತ್ಪಾದನೆ ಹೆಚ್ಚಳವಾಗುತ್ತದೆ. ಮೇ-ಜೂನ್‍ನಲ್ಲಿ ಅತ್ಯಧಿಕ ಪ್ರಮಾಣದ ಹಾಲು ಉತ್ಪತ್ತಿಯಾಗುವ ಕಾರಣ ಹಾಲು ಒಕ್ಕೂಟಗಳಿಗೆ ಹೆಚ್ಚುವರಿ ಹಾಲು ಮಾರಾಟ ಮಾಡಲು ಆಗುವುದಿಲ್ಲ. ಈ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ ಸಂಗ್ರಹಿಸಿ ಇಡಬೇಕು, ಇಲ್ಲವೇ ಮಾರಾಟ ಮಾಡಬೇಕು. ಆದರೆ ಹಾಲಿನ ಪುಡಿಗೆ ಬೇಡಿಕೆ ಇಲ್ಲ. ಮುಂಗಾರು ಅವಧಿಯಲ್ಲಿ ಹಸಿರು ಮೇವು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಹಾಲು ಉತ್ಪಾದನೆಯೂ ಹೆಚ್ಚಳವಾಗಲಿದೆ. ಈ ಕಾರಣಕ್ಕೆ ದರ ಇಳಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಪ್ರತಿ ವರ್ಷ ಕೆಲವು ತಿಂಗಳು ದರ ಇಳಿಕೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ.

     

    ದಾಖಲೆಯ ಹಾಲು ಉತ್ಪಾದನೆ:
    ಕೆಎಂಎಫ್‍ಗೆ ಸೇರಿದ ಹದಿನಾಲ್ಕು ಜಿಲ್ಲಾ ಒಕ್ಕೂಟಗಳಲ್ಲಿ ನಿತ್ಯ ಸರಾಸರಿ 75 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದೆ. ಮೇ ತಿಂಗಳಲ್ಲಿ 77.88 ಲಕ್ಷ ಲೀ. ಹಾಲು ಸಂಗ್ರಹಗೊಂಡಿರುವುದು ಇದೂವರೆಗಿನ ದಾಖಲೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 80 ಲಕ್ಷ ಲೀ.ಗೆ ಹೆಚ್ಚುವ ನಿರೀಕ್ಷೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಗಿಂತ ಹೈನುಗಾರಿಕೆ ಲಾಭದಾಯಕ ಆಗಿರುವ ಕಾರಣ ಹಸು ಸಾಕಣೆಗೆ ಹೆಚ್ಚಿನ ಒಲವು ಕಂಡುಬಂದಿದೆ. ಗ್ರಾ.ಪಂ.ಗಳಲ್ಲಿ ಹಾಲು ಉತ್ಪಾದಕರ ಸಂಘಗಳು ಹೆಚ್ಚು ಸಕ್ರಿಯವಾಗಿರುವ ಕಾರಣ ಬಹುತೇಕ ಎಲ್ಲಾ ಒಕ್ಕೂಟಗಳಲ್ಲಿ ಕ್ಷೀರ ಉತ್ಪಾದನೆ ಏರುಮುಖಗೊಂಡಿದೆ.

    ಹಾಲು ಉತ್ಪಾದಕರಿಂದ ಖರೀದಿ ದರ ಕಡಿತ ಆಯಾ ಒಕ್ಕೂಟಗಳು ಕೈಗೊಂಡಿವೆ. ಮಳೆಗಾಲದಲ್ಲಿ ಹಾಲು ಇಳುವರಿ ಹೆಚ್ಚಳವಾಗುವ ಕಾರಣ ಖರೀದಿ ದರ ಇಳಿಸುವುದು ಸ್ವಾಭಾವಿಕ. ಬೇಸಿಗೆಯಲ್ಲಿ ಮತ್ತೆ ಖರೀದಿ ದರ ಹೆಚ್ಚಳವಾಗುತ್ತದೆ. ಸದ್ಯಕ್ಕೆ ಈ ಪ್ರಕ್ರಿಯೆಯಿಂದ ಗ್ರಾಹಕರಿಗೆ ಹೊರೆ ಇಲ್ಲ.

    ಹಾಲು ಸಂಗ್ರಹ, ಬಳಕೆ ವಿವರ:
    ಕೆಎಂಎಫ್ ನಿತ್ಯ ಸರಾಸರಿ 75 ಲಕ್ಷ ಲೀ. ಹಾಲು ಸಂಗ್ರಹಿಸುತ್ತದೆ. ಈ ಪೈಕಿ 34 ಲಕ್ಷ ಲೀ. ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಮೊಸರು ತಯಾರಿಕೆಗೆ 4 ಲಕ್ಷ ಲೀ., ಗುಡ್ ಲೈಫ್ ಹಾಲು ತಯಾರಿಸಲು ಐದು ಲಕ್ಷ ಲೀ. ಹಾಗೂ ನಂದಿನಿ ಉತ್ಪನ್ನಗಳ ತಯಾರಿಕೆಗೆ ಐದು ಲಕ್ಷ ಲೀ. ಬಳಸಲಾಗುತ್ತದೆ. ಉಳಿದಿದ್ದನ್ನು ಹಾಲಿನ ಪುಡಿ ಮಾಡಲು ಬಳಸಿಕೊಳ್ಳಲಾಗುತ್ತದೆ. ಆದರೆ, ಉತ್ಪಾದನೆಯಾದ ಪೂರ್ಣ ಹಾಲಿ ಪುಡಿಯನ್ನು ಬಿಕರಿ ಮಾಡಲು ಸಾಧ್ಯವಾಗದಿರುವುದು ಹಾಲು ಉತ್ಪಾದಕರ ದರ ಕಡಿತಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದಾಗಿ ತಿಳಿದುಬಂದಿದೆ.

  • ಜನರ ಸೆಲ್ಫಿ ಕ್ರೇಜ್ – ಬೆಳೆಯ ನಷ್ಟ ಭರಿಸಲು ರೈತರಿಂದ ಮಾಸ್ಟರ್ ಪ್ಲಾನ್

    ಜನರ ಸೆಲ್ಫಿ ಕ್ರೇಜ್ – ಬೆಳೆಯ ನಷ್ಟ ಭರಿಸಲು ರೈತರಿಂದ ಮಾಸ್ಟರ್ ಪ್ಲಾನ್

    ಚಾಮರಾಜನಗರ: ಜನರ ಸೆಲ್ಫಿ ಕ್ರೇಜ್‍ನಿಂದ ಹಾನಿಯಾಗುತ್ತಿದ್ದ ಬೆಳೆಯ ನಷ್ಟವನ್ನು ಭರಿಸಲು ರೈತರು ಮಾಸ್ಟರ್ ಪ್ಲಾನೊಂದನ್ನು ಮಾಡಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆ ಜನರ ಸೆಲ್ಫಿ ಕ್ರೇಜ್ ಗೆ ತುತ್ತಾಗುತ್ತಿತ್ತು. ಇದೀಗ ಇಲ್ಲಿನ ರೈತರು ಸೆಲ್ಫಿ ತೆಗೆದುಕೊಳ್ಳುವವರ ಬಳಿ 10 ರೂಪಾಯಿಯನ್ನು ವಸೂಲಿ ಮಾಡುತ್ತಿದ್ದಾರೆ.

    ಗುಂಡ್ಲುಪೇಟೆಯ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಹುತೇಕ ಕೇರಳಿಗರು ಸಂಚಾರ ಮಾಡುತ್ತಾರೆ. ಸೂರ್ಯಕಾಂತಿ ಹೂ ನೋಡಿ ಸೆಲ್ಫಿ ತೆಗದುಕೊಳ್ಳಲು ಜಮೀನಿಗೆ ಬಂದು ಸೂರ್ಯಕಾಂತಿ ಗಿಡಗಳನ್ನು ಮುರಿದು ಹಾಕುತ್ತಿದ್ದರು. ಇದರಿಂದ ಇಲ್ಲಿನ ರೈತರಿಗೆ ಸಾಕಷ್ಟು ನಷ್ಟವಾಗುತ್ತಿತ್ತು.

    ಹೀಗಾಗಿ ಇಲ್ಲಿನ ರೈತರು ಸೆಲ್ಫಿ ತೆಗೆದುಕೊಳ್ಳಲು ಬರುವ ಕೇರಳ ಪ್ರವಾಸಿಗರಿಂದ 10 ರೂಪಾಯಿಯನ್ನು ಪಡೆಯುತ್ತಿದ್ದಾರೆ. ಇದರಿಂದ ರೈತರಿಗೆ ಒಂದು ಕಡೆ ತಮ್ಮ ಬೆಳೆಯನ್ನು ಕಾಯುವುದರ ಜೊತೆಗೆ 10 ರೂಪಾಯಿ ರೂಪದಲ್ಲಿ ವರಮಾನವು ಬಂದಂತೆ ಆಗುತ್ತಿದೆ.