Tag: farmer

  • ಸಾಲ ಮನ್ನಾ ಅಪೂರ್ಣವೋ, ಸಂಪೂರ್ಣವೋ- ಸಿಎಂ ಕುಮಾರಸ್ವಾಮಿ ಬಜೆಟ್‍ಗೆ ಕ್ಷಣಗಣನೆ

    ಸಾಲ ಮನ್ನಾ ಅಪೂರ್ಣವೋ, ಸಂಪೂರ್ಣವೋ- ಸಿಎಂ ಕುಮಾರಸ್ವಾಮಿ ಬಜೆಟ್‍ಗೆ ಕ್ಷಣಗಣನೆ

    ಬೆಂಗಳೂರು: ವಿಧಾನಸಭಾ ಚುನಾವಣೆ ಆದ ದಿನದಿಂದ ಸಾಲ ಮನ್ನಾಕ್ಕೆ ಕಾತರದಿಂದ ಕಾಯುತ್ತಿರುವ ಕರ್ನಾಟಕದ ರೈತರ ನಿರೀಕ್ಷೆಗಳಿಗೆ ಇಂದು ಅಧಿಕೃತ ಉತ್ತರ ಸಿಗಲಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಆಗಲಿದೆ.

    ಇಂದು ಬೆಳಗ್ಗೆ 11.30 ನಿಮಿಷಕ್ಕೆ ಹಣಕಾಸು ಸಚಿವರೂ ಆಗಿರುವ ಹೆಚ್‍ಡಿ ಕುಮಾರಸ್ವಾಮಿ ಆಯವ್ಯಯವನ್ನು ಮಂಡಿಸಲಿದ್ದಾರೆ. ಇದು ಅವರ ಪಾಲಿಗೆ 2ನೇ ಸಮ್ಮಿಶ್ರ ಬಜೆಟ್ ಕೂಡಾ ಹೌದು. ಅಧಿಕಾರಕ್ಕೆ ಬಂದ ಇಪ್ಪತ್ತನಾಲ್ಕು ಗಂಟೆಗಳಲ್ಲೇ ಸಹಕಾರಿ ಸಂಘಗಳ ಮತ್ತು ರಾಷ್ಟ್ರೀಕೃತ ಬ್ಯಾಂಕು ಸಾಲಮನ್ನಾ ಮಾಡೋದಾಗಿ ವಾಗ್ದಾನ ಮಾಡಿದ್ದ ಕುಮಾರಸ್ವಾಮಿ ಬಜೆಟ್‍ನಲ್ಲಿ ಆ ಘೋಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಅಸೆಂಬ್ಲಿಯನ್ನ ಹುಚ್ಚಾಸ್ಪತ್ರೆ ಮಾಡ್ಬೇಡಿ: ಶಾಸಕರ ವಿರುದ್ಧ ರಮೇಶ್ ಕುಮಾರ್ ಗರಂ

    ಪೂರ್ಣ ಪ್ರಮಾಣದ ಹೊಸ ಬಜೆಟ್ ಅಗತ್ಯತೇ ಇಲ್ಲ, ಸಾಲ ಮನ್ನಾ ಸಿದ್ದರಾಮಯ್ಯ ಮಾಡಿದ್ದ ಟೀಕೆ ಟಿಪ್ಪಣಿಗಳ ನಡುವೆಯೂ ಸಮನ್ವಯ ಸಮಿತಿ ಸಾಲ ಮನ್ನಾಕ್ಕೆ ಒಪ್ಪಿಕೊಂಡಿದೆ. ದೋಸ್ತಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಭಾಗ್ಯದ ಕಾರ್ಯಕ್ರಮಗಳಿಗೂ ಬಜೆಟ್‍ನಲ್ಲಿ ಅವಕಾಶ ನೀಡಲೇಬೇಕಾದ ಅನಿವಾರ್ಯತೆಯಲ್ಲಿರುವ ಕುಮಾರಸ್ವಾಮಿ, ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಅತ್ಯಂತ ಜನಪ್ರಿಯ ಭರವಸೆಗಳನ್ನು ಕಾರ್ಯಕರ್ತಗೊಳಿಸುವುದು ಕಷ್ಟ ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಜೆಟ್‍ನಲ್ಲಿ ಎಚ್‍ಡಿಕೆ ಏನೇನು ಘೋಷಿಸಬಹುದು? ಸಾಲಮನ್ನಾ ಹೇಗಿರಬಹುದು?

    ಇನ್ನು ಇಂದು ಬಜೆಟ್ ಇರುವುದರಿಂದ ಕುಮಾರಸ್ವಾಮಿ ಅವರು ನಾಲ್ಕು ದಿನದಿಂದ ಖಾಸಗಿ ಹೋಟೆಲ್‍ನಲ್ಲೇ ಉಳಿದುಕೊಂಡಿದ್ದಾರೆ. ಬಜೆಟ್ ಒತ್ತಡದ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಪಿ ನಗರದಲ್ಲಿರುವ ಮನೆಗೆ ಹೋಗಿಲ್ಲ. ಹೀಗಾಗಿ ಅವರು ರೇಸ್‍ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ತಂಗಿದ್ದಾರೆ. ಇತ್ತ ನಾಡಿನ ದೊರೆ ಸಿಗ್ತಾರಂತೆ ಜೆಪಿ ನಗರದಲ್ಲಿರುವ ಮನೆಯ ಬಳಿ ಜನ ಕಾದು ಕುಳಿತಿದ್ದಾರೆ. ಇನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಇಂಡಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ ಡಿ ಪಾಟೀಲ್ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ್ದಾರೆ. ಇದನ್ನೂ ಓದಿ:ರೈತರಿಗೆ ಮೋದಿಯಿಂದ ಬಂಪರ್ ಗಿಫ್ಟ್: ಯಾವ ಬೆಳೆಗೆ ಎಷ್ಟು ಕನಿಷ್ಠ ಬೆಂಬಲ ಬೆಲೆ? ಇಲ್ಲಿದೆ ಪೂರ್ಣ ಮಾಹಿತಿ

  • ಕೊಳಚೆ ನೀರನ್ನ ಕೃಷಿ ನೀರಾಗಿ ಪರಿವರ್ತನೆ-ಎರಡು ಎಕರೆಯಲ್ಲಿ ತಲೆ ಎತ್ತಿದೆ ಫಲವತ್ತಾದ ಬೆಳೆ

    ಕೊಳಚೆ ನೀರನ್ನ ಕೃಷಿ ನೀರಾಗಿ ಪರಿವರ್ತನೆ-ಎರಡು ಎಕರೆಯಲ್ಲಿ ತಲೆ ಎತ್ತಿದೆ ಫಲವತ್ತಾದ ಬೆಳೆ

    ಕೋಲಾರ: ಬಯಲುಸೀಮೆ ಕೋಲಾರದಲ್ಲಿ ಸಾವಿರ ಅಡಿಗೂ ನೀರು ಸಿಗಲ್ಲ ಅಂತ ಕೃಷಿ ಬಿಟ್ಟವರೇ ಹೆಚ್ಚು. ಆದರೆ ನಮ್ಮ ಇವತ್ತಿನ ಪಬ್ಲಿಕ್ ಹೀರೋ ಶಿವಮೂರ್ತಿ ಅವರು ತ್ಯಾಜ್ಯ ನೀರನ್ನ ಬಳಸಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ.

    ಕೋಲಾರ ತಾಲೂಕು ಜಂಗಮಗುರ್ಜೇನಹಳ್ಳಿಯ ರೈತ ಶಿವಮೂರ್ತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಶಿವಮೂರ್ತಿ ಫಲವತ್ತಾದ ಸೀಬೆ ಮತ್ತು ಕುಂಬಳಕಾಯಿ ತೋಟ ಮಾಡಿ ಇತರ ರೈತರಿಗೂ ಮಾದರಿಯಾಗಿದ್ದಾರೆ. ಗ್ರಾಮದ ಕೊಳಚೆ ನೀರನ್ನ ಕೃಷಿಹೊಂಡದಲ್ಲಿ ಶೇಖರಿಸಿ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಸುಮಾರು 2 ಎಕರೆ ಪ್ರದೇಶದಲ್ಲಿ ಬಂಗಾರದಂತ ಬೆಳೆ ಬೆಳೆದಿದ್ದಾರೆ.

    ಶಿವಮೂರ್ತಿ ಅವರು ಮೊದಲಿಗೆ ಕೊಳಚೆ ನೀರನ್ನ ಬಳಸಲು ಮುಂದಾದಾಗ ಗ್ರಾಮಸ್ಥರು ಹಾಸ್ಯದ ಮಾತುಗಳನ್ನು ಆಡಿದ್ದರು. ಆದ್ರೀಗ ಬೆಕ್ಕಸ ಬೆರಗಾಗಿ ಶಿವಮೂರ್ತಿ ತೋಟದ ಬೆಳೆಯನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದಾರೆ.

    https://www.youtube.com/watch?v=YVXoNDEB6vs

  • ಅನುಮಾನಾಸ್ಪದ ರೀತಿಯಲ್ಲಿ ಒಂಟಿ ಸಲಗ ಸಾವು – ಜನರೇ ವಿಷ ಹಾಕಿ ಕೊಂದ್ರಾ?

    ಅನುಮಾನಾಸ್ಪದ ರೀತಿಯಲ್ಲಿ ಒಂಟಿ ಸಲಗ ಸಾವು – ಜನರೇ ವಿಷ ಹಾಕಿ ಕೊಂದ್ರಾ?

    ಕೋಲಾರ: ಜಿಲ್ಲೆಯ ಗಡಿ ಪ್ರದೇಶವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂನಲ್ಲಿ ಒಂಟಿ ಸಲಗವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ.

    ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂನ ನಾಯುಡು ಎಂಬ ಮಾವಿನ ತೋಟದಲ್ಲಿ ಅನುಮಾನಾಸ್ಪದವಾಗಿ ಆನೆಯೊಂದು ಮೃತಪಟ್ಟಿದೆ. ಬಂಗಾರಪಾಳ್ಯಂ ಅರಣ್ಯ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿನಿಂದ 5 ಆನೆಗಳ ಹಿಂಡು ಬೀಡು ಬಿಟ್ಟಿದ್ದವು. ಮಾವಿನ ತೋಪಿನಲ್ಲಿ ಆನೆ ಸಾವನ್ನಪ್ಪಿದ್ದನ್ನು ಕಂಡ ಕುರಿಗಾಹಿಗಳು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

    ಘಟನೆ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಐದು ಆನೆಗಳ ಹಿಂಡು ಆಗಾಗ ಜಿಲ್ಲೆಯ ಕೆಜಿಎಫ್ ಹಾಗೂ ಬಂಗಾರಪೇಟೆ ತಾಲೂಕಿನ ಗಡಿ ಪ್ರದೇಶದಲ್ಲಿ ದಾಳಿ ನಡೆಸಿ ರೈತರ ಬೆಳೆ ಹಾನಿ ಮಾಡಿದ್ದವು. ಅಲ್ಲದೇ ಮಾವು ಸೇರಿದಂತೆ ವಿವಿಧ ಬೆಳೆಗಳ ನಾಶ ಮಾಡಿದ್ದರಿಂದ ರೈತರೇ ಆನೆಗೆ ವಿಷ ಹಾಕಿ ಕೊಂದಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

  • ವಿರೋಧದ ನಡುವೆಯೂ ಕಾವೇರಿ ಪ್ರಾಧಿಕಾರದ ಸಭೆ

    ವಿರೋಧದ ನಡುವೆಯೂ ಕಾವೇರಿ ಪ್ರಾಧಿಕಾರದ ಸಭೆ

    ಬೆಂಗಳೂರು: ಕರ್ನಾಟಕದ ವಿರೋಧದ ನಡುವೆಯೂ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ನಡೆಯಲಿದ್ದು, ತಮಿಳುನಾಡಿಗೆ ಜುಲೈ ತಿಂಗಳಲ್ಲಿ ಬೇಕಾಗಿರುವ ನೀರು ಬಿಡುಗಡೆ ಸಂಬಂಧ ಕಾವೇರಿ ನೀರು ನಿಯಂತ್ರಣ ಸಮಿತಿಗೆ ನಿರ್ದೇಶನಗಳನ್ನು ನೀಡಲಿದೆ. ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಮೊದಲ ಬಾರಿ ನವದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಎಲ್ಲ ಸದಸ್ಯರು ಸಭೆ ಸೇರಲಿದ್ದಾರೆ.

    ದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಮಸೂದ್ ಹುಸೈನ್ ಅಧ್ಯಕ್ಷತೆಯಲ್ಲಿ ಆರಂಭವಾಗೋ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಯ ಪ್ರತಿನಿಧಿಗಳು ಭಾಗವಹಿಸ್ತಾರೆ. ಕರ್ನಾಟಕದ ಪರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

    ಶನಿವಾರ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಾಧಿಕಾರ ರಚನೆ ಸ್ವರೂಪ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಹಾಕಲು ನಿರ್ಧರಿಸಲಾಗಿತ್ತು. ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆಯಿಂದಾಗಿ ಬಹುತೇಕ ಡ್ಯಾಂ ಗಳು ಭರ್ತಿ ಹಂತಕ್ಕೆ ಬಂದಿವೆ. ಈ ಸಂಬಂಧ ಚರ್ಚೆ ನಡೆಯಲಿದ್ದು, ತಮಿಳುನಾಡಿಗೆ ಜುಲೈ ಬಳಿಕ ಬಿಡಬೇಕಾದ ನೀರಿನ ಪ್ರಮಾಣ ಕುರಿತು ಚರ್ಚೆ ನಡೆಯಲಿದೆ.

    ಪ್ರಾಧಿಕಾರದ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಗಬಹುದು..?
    1. ಜುಲೈನಲ್ಲಿ ಕರ್ನಾಟಕದಿಂದ ಬಿಡುಗಡೆಯಾಗಬೇಕಿರುವ ನೀರಿನ ಪ್ರಮಾಣದ ಬಗ್ಗೆ ನಿಯಂತ್ರಣ ಸಮಿತಿಗೆ ನಿರ್ದೇಶನ.
    2. ಪ್ರತಿ 10 ದಿನಕ್ಕೊಮ್ಮೆ ತಿಂಗಳಲ್ಲಿ 3 ಬಾರಿ ಕರ್ನಾಟಕದಿಂದ ಬಿಡಬೇಕಿರುವ ನೀರಿನ ಪ್ರಮಾಣದ ಬಗ್ಗೆ ಮಾರ್ಗಸೂಚಿ.
    3. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಜುಲೈನಲ್ಲಿ ಹರಿಯಬೇಕಿರುವ ನೀರು 34 ಟಿಎಂಸಿ.
    4. ಕಾವೇರಿಕೊಳ್ಳದ ಡ್ಯಾಂಗಳಲ್ಲಿರುವ ನೀರಿನ ಸಂಗ್ರಹ, ಒಳಹರಿವಿನ ಪ್ರಮಾಣದ ಮಾಹಿತಿ ಪ್ರಸ್ತಾಪ.
    5. ನಾಲ್ಕು ರಾಜ್ಯಗಳಲ್ಲಿ ಜೂನ್ 1ರಿಂದ ಜೂನ್ 30ರವರೆಗಿನ ಮಳೆಯ ಪ್ರಮಾಣದ ಬಗ್ಗೆ ಅಂಕಿ ಅಂಶ.
    6. ಒಳಹರಿವು, ಹೊರಹರಿವು, ಡ್ಯಾಂಗಳಲ್ಲಿ ಸಂಗ್ರಹ, ಮಳೆ ಪ್ರಮಾಣ, ಬೇಸಾಯ ಪ್ರದೇಶ.
    7. ಗೃಹ ಬಳಕೆ ಮತ್ತು ಕೈಗಾರಿಕೆ ಬಳಕೆಗೆ ಬೇಕಾಗಿರುವ ನೀರಿನ ಪ್ರಮಾಣದ ಮಾಹಿತಿ ಸಂಗ್ರಹದ ಸ್ವರೂಪದ ಬಗ್ಗೆ ನಿರ್ಧಾರ.
    8. ಡ್ಯಾಂಗಳಿಂದ ನಾಲೆಗಳಿಗೆ ಇನ್ನೂ ನೀರು ಬಿಟ್ಟಿಲ್ಲ, ಎಷ್ಟು ನೀರು ಬಿಡಬೇಕೆಂಬ ಬಗ್ಗೆ ಚರ್ಚೆ.
    9. ಕರ್ನಾಟಕ ಹೆಚ್ಚುವರಿ ನೀರನ್ನಷ್ಟೇ ಬಿಟ್ಟಿದೆ, ತನಗೆ ಬರಬೇಕಿದ್ದ ಪಾಲನ್ನು ಬಿಟ್ಟಿಲ್ಲ.
    10. ಹೀಗಾಗಿ ತಕ್ಷಣವೇ ತನ್ನ ಪಾಲಿನ ನೀರು ಬಿಡುವಂತೆ ತಮಿಳುನಾಡು ವಾದ ಸಾಧ್ಯತೆ.
    11. ಪ್ರಾಧಿಕಾರ ರಚನೆಯಲ್ಲಾದ ಲೋಪದ ಬಗ್ಗೆ ಕರ್ನಾಟಕದಿಂದ ವಾದ ಸಾಧ್ಯತೆ.

  • ಸೋಲಾರ್ ಪಾರ್ಕ್ ಹೆಸರಲ್ಲಿ ರೈತರ ಜಮೀನು ಖರೀದಿ – ಪಕ್ಕದಲ್ಲಿದ್ದ ಸರ್ಕಾರಿ ಭೂಮಿಗೂ ಕನ್ನ

    ಸೋಲಾರ್ ಪಾರ್ಕ್ ಹೆಸರಲ್ಲಿ ರೈತರ ಜಮೀನು ಖರೀದಿ – ಪಕ್ಕದಲ್ಲಿದ್ದ ಸರ್ಕಾರಿ ಭೂಮಿಗೂ ಕನ್ನ

    -ಬಳ್ಳಾರಿಯಲ್ಲಿ ಗಣಿ ಬಳಿಕ ಸೌರಶಕ್ತಿ ಕಾಟ

    ಬಳ್ಳಾರಿ: ಗಣಿ ಆಯ್ತು, ಈಗ ಬಿಸಿಲನಾಡು ಬಳ್ಳಾರಿಯಲ್ಲಿ ಸೋಲಾರ್ ಕಂಪೆನಿಯ ಕರ್ಮಕಾಂಡದ ಕಥೆ.

    ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನಕನ್ನಿಹಳ್ಳಿಯಲ್ಲಿ ಕ್ಲೀನ್ ಮ್ಯಾಕ್ಸ್ ಸೋಲಾರ್ ಕಂಪನಿ ವಿದ್ಯುತ್ ಸ್ಥಾವರ ಆರಂಭಿಸಿತ್ತು. ರೈತರಿಂದ ಕಡಿಮೆ ಬೆಲೆಗೆ 460 ಎಕರೆಯಷ್ಟು ಭೂಮಿ ಖರೀದಿಸಿ 60 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಿದ್ದು, ಇದುವರೆಗೆ ಕೈಗಾರಿಕಾ ಘಟಕ ಸ್ಥಾಪನೆಗೆ ಭೂ ಪರಿವರ್ತನೆ (ಎನ್‍ಎ) ಮಾಡಿಕೊಂಡಿಲ್ಲ.

    ರೈತರ ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಭೂಮಿಯನ್ನೂ ಅಕ್ರಮಿಸಿಕೊಂಡಿದ್ದು, ಅಲ್ಲೆಲ್ಲಾ ವಿದ್ಯುತ್ ಕಂಬಗಳನ್ನು ಹಾಕಿ ಲೈನ್ ಎಳೆದಿದೆ. ಬೃಹತ್ ಗುಂಡಿಗಳನ್ನು ಅಗೆದು ರಸ್ತೆಗಾಗಿ ಮಣ್ಣು ಸರಬರಾಜು ಮಾಡುತ್ತಿದೆ.

    ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಸಹ ಕ್ಲೀನ್ ಮ್ಯಾಕ್ಸ್ ಕಂಪೆನಿಯ ಅಕ್ರಮದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ರು. ಆದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಮಿನಿಸ್ಟರ್ ಪವರ್‍ಫುಲ್ ಆಗಿರೋ ಕಾರಣ ಜಿಲ್ಲಾಡಳಿತ ಸಮ್ಮನಿದೆ ಅನ್ನೋದು ಸ್ಥಳೀಯರ ಆರೋಪ.

  • ಸಾಲಮನ್ನಾದ ಕ್ರೆಡಿಟ್‍ಗೆ ದೋಸ್ತಿಗಳ ಕಸರತ್ತು !

    ಸಾಲಮನ್ನಾದ ಕ್ರೆಡಿಟ್‍ಗೆ ದೋಸ್ತಿಗಳ ಕಸರತ್ತು !

    – ರೈತರ ಅಕೌಂಟ್‍ಗೆ ನೇರ ವರ್ಗಾವಣೆಗೆ ಪ್ಲಾನ್

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿಂದ ಇಲ್ಲಿವರೆಗೆ ಸಾಲಮನ್ನಾ ವಿಚಾರವಾಗಿಯೇ ದಿನನಿತ್ಯವೂ ಸುದ್ದಿಯಾಗ್ತಿದೆ. ಇಷ್ಟು ದಿನ ಸಾಲಮನ್ನಾ ಮಾಡೋದು ಹೇಗೆ ಅನ್ನೋದೇ ದೊಡ್ಡ ತಲೆಬಿಸಿಯಾಗಿತ್ತು. ಆದ್ರೀಗ ಸಾಲಮನ್ನಾದ ಕ್ರೆಡಿಟ್ ವಿಚಾರವಾಗಿ ಸಮ್ಮಿಶ್ರ ಸರ್ಕಾರದ ದೋಸ್ತಿಗಳ ನಡುವೆ ಶೀತಲ ಸಮರ ನಡೆದಿದೆ ಎಂದು ಹೇಳಲಾಗುತ್ತಿದೆ.

    ಸಾಲಮನ್ನಾದ ಎಲ್ಲಾ ಕ್ರೆಡಿಟ್ ತಾವು ಪಡೆಯಲು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರಂತೆ. ಅದಕ್ಕಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಬಳಿ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಿದ್ದಾರೆ. ಅದರಂತೆ ರೈತರ ಅಕೌಂಟಿಗೆ ನೇರವಾಗಿ ಸಾಲಮನ್ನಾದ ಹಣ ಹಾಕಿ, ಅಲ್ಲಿಂದ ನೇರವಾಗಿ ಸಹಕಾರಿ ಬ್ಯಾಂಕ್‍ಗಳ ಅಕೌಂಟ್‍ಗೆ ಜಮೆ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.

    ಸಾಲ ಮಾಡಿದ್ದು ನಾವು, ಆದ್ರೆ ನಮ್ಮ ಅಕೌಂಟ್‍ಗೆ ಹಣ ಹಾಕಿ ಸಾಲ ತೀರಿಸಿದ್ದು ಕುಮಾರಸ್ವಾಮಿ ಸರ್ಕಾರ ಅನ್ನೋ ಭಾವನೆ ರೈತರಲ್ಲಿ ಮೂಡಿಸೋದು ಸಿಎಂ ತಂತ್ರವಾಗಿದೆ. ಇಷ್ಟೇ ಅಲ್ಲ, ಸಾಲಮನ್ನಾ ವಿಚಾರದಲ್ಲಿ ಸಹಕಾರಿ ಬ್ಯಾಂಕುಗಳು ರೈತರಿಗೆ ಮೋಸ ಮಾಡದಂತೆ ತಡೆಯಲು ವಿಚಕ್ಷಣ ದಳವೊಂದನ್ನು ರಚಿಸಲು ನಿರ್ಧರಿಸಿದ್ದಾರೆ. ಸಾಲಮನ್ನಾ ಸಂಬಂಧ ಸಹಕಾರಿ ಬ್ಯಾಂಕುಗಳು ವಂಚಿಸಿದ್ರೆ ಅಥವಾ ಸರಿಯಾಗಿ ಸ್ಪಂದಿಸದಿದ್ದಲ್ಲಿ ಈ ವಿಚಕ್ಷಣ ದಳ ರೈತರ ಪರ ನಿಲ್ಲಲಿದೆ.

    ಈ ಮೂಲಕ ಕುಮಾರಸ್ವಾಮಿ ಒಬ್ಬರೇ ರೈತರ ಪರವಾಗಿ ಇರೋದು ಅನ್ನೋ ವೇವ್‍ನ್ನು ಲೋಕಸಭೆ ಚುನಾವಣೆ ವೇಳೆಗೆ ಕ್ರಿಯೇಟ್ ಮಾಡಲು ಪ್ಲಾನ್ ರೂಪಿಸಲಾಗಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರಕ್ಕೆ ಸವಾಲಾಗಿದ್ದ ಸಾಲಮನ್ನಾಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ (ಸಿಎಂಪಿ) ಸಮ್ಮತಿ ನೀಡಿದೆ. ಆದರೆ ಸಂಪೂರ್ಣ ಸಾಲ ಬದಲಿಗೆ ಬೆಳೆ ಸಾಲಮನ್ನಾಕ್ಕೆ ಮಾತ್ರ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಹೆಚ್. ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ್ ನೇತೃತ್ವದ ಕರಡು ಸಮಿತಿಯ ವರದಿ ಇಂದು ಸಮನ್ವಯ ಸಮಿತಿಗೆ ರವಾನೆಯಾಗಲಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಮನ್ವಯ ಸಮಿತಿಯ ಸಭೆ ನಡೆಯಲಿದ್ದು, ಅಲ್ಲಿ ಒಪ್ಪಿಗೆ ಸಿಕ್ಕರೆ ಅನುಷ್ಠಾನಕ್ಕೆ ಬರಲಿದೆ. ಇವತ್ತು ಸಿಎಂಪಿ ತೆಗೆದುಕೊಂಡ ನಿರ್ಧಾರ ಹೀಗಿದೆ.

    ಸಿಎಂಪಿ ಶಿಫಾರಸು:
    * ಸದ್ಯಕ್ಕೆ ಸಂಪೂರ್ಣ ಸಾಲಮನ್ನಾ ಇಲ್ಲ
    * ಕೇವಲ ಬೆಳೆ ಸಾಲ ಮಾತ್ರ ಮನ್ನಾ
    * ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ
    * ಏಪ್ರಿಲ್ 1, 2009ರಿಂದ ಮೇ 31, 2018ರವರೆಗಿನ ಸಾಲ ಮನ್ನಾ
    * ಗರ್ಭಿಣಿಯರಿಗೆ ಮಾಸಿಕ 6000 ಭತ್ಯೆ
    * ಮಗು ಹುಟ್ಟುವ 3 ತಿಂಗಳು ಮುನ್ನ, ಹುಟ್ಟಿದ 3 ತಿಂಗಳ ನಂತರ ಭತ್ಯೆ
    * ಸದ್ಯಕ್ಕೆ ವೃದ್ಧಾಪ್ಯ ವೇತನ ಹೆಚ್ಚಳ ಇಲ್ಲ

  • ಬಿತ್ತನೆ ಮಾಡಿದ ಜಮೀನಿನಲ್ಲಿ ಪ್ರವಾಹದಂತೆ ನೀರು-ಕಳಪೆ ಕಾಮಗಾರಿಗೆ ಬೇಸತ್ತ ಅನ್ನದಾತ

    ಬಿತ್ತನೆ ಮಾಡಿದ ಜಮೀನಿನಲ್ಲಿ ಪ್ರವಾಹದಂತೆ ನೀರು-ಕಳಪೆ ಕಾಮಗಾರಿಗೆ ಬೇಸತ್ತ ಅನ್ನದಾತ

    ಬಳ್ಳಾರಿ: ಬಿತ್ತನೆ ಮಾಡಿದ ಜಮೀನುಗಳಲ್ಲಿ ನೀರು ಪ್ರವಾಹದಂತೆ ಹರಿದಿದ್ದರಿಂದ ಬಳ್ಳಾರಿಯ ರೈತರು ಕಳಪೆ ಕಾಮಗಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬಳ್ಳಾರಿಯ ಹಡಗಲಿ ತಾಲೂಕಿನ ಹತ್ತು ಕೆರೆಗಳಿಗೆ ನೀರುಣಿಸುವ ಹುಲಿಗುಡ್ಡ ಏತ ನೀರಾವರಿ ಯೋಜನೆಯ ದುಸ್ಥಿತಿ. ಕಳೆದ ವರ್ಷ ಸಚಿವರಾಗಿದ್ದ ಪರಮೇಶ್ವರ್ ನಾಯ್ಕ್ ತಾವು ತಂದಿದ್ದ ಅನುದಾನವನ್ನು ತರಾತುರಿಯಲ್ಲಿ ಬಳಸಲು ಹತ್ತಾರು ಕೆರೆಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಿದ್ರು. ಅದಕ್ಕಾಗಿ ರೈತರ ಜಮೀನುಗಳ ಮುಖಾಂತರ ದೊಡ್ಡ ದೊಡ್ಡ ಪೈಪ್‍ಲೈನ್‍ಗಳನ್ನು ಅಳವಡಿಸಿದ್ರು.

    ಜಮೀನುಗಳಲ್ಲಿ ಅಳವಡಿಸಲಾಗಿದ್ದ ಪೈಪುಗಳು ಒಂದೇ ವರ್ಷಕ್ಕೆ ಒಡೆದು ಹೋಗಿದ್ದರಿಂದ ರೈತರು ಪರದಾಡುವಂತಾಗಿದೆ. ರೈತರ ಜಮೀನಿನಲ್ಲಿ ಪೈಪ್‍ಗಳು ಒಡೆದು ಜಮೀನುಗಳು ಜಲಾವೃತವಾಗುತ್ತಿವೆ. ಇದರಿಂದ ರೈತರ ಇತ್ತೀಚೆಗಷ್ಟೇ ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಶೇಂಗಾ, ರಾಗಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ.

    ಇತ್ತ ಒಡೆದು ಹೋಗಿರುವ ಪೈಪುಗಳ ರಿಪೇರಿಗಾಗಿ ಜೆಸಿಬಿಗಳ ಮೂಲಕ ಮಣ್ಣು ಅಗೆಯುತ್ತಿರುವದರಿಂದ ಬೆಳೆಗೆ ಮತ್ತಷ್ಟು ಹಾನಿ ಆಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ಕಳಪೆ ಕಾಮಗಾರಿ ಮುಚ್ಚಿಕೊಳ್ಳಲು ಗುತ್ತಿಗೆದಾರರು- ಶಾಸಕರು, ಅಧಿಕಾರಿಗಳ ಮೂಲಕ ರೈತರನ್ನು ಬೆದರಿಸುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ.

  • ಸಮ್ಮಿಶ್ರ ಸರ್ಕಾರಕ್ಕೆ ಸಾಲಮನ್ನಾ ತಲೆನೋವು- ತಲೆಕೆಳಗಾದ ಸಿಎಂ ಎಚ್‍ಡಿಕೆ ಲೆಕ್ಕಾಚಾರ

    ಸಮ್ಮಿಶ್ರ ಸರ್ಕಾರಕ್ಕೆ ಸಾಲಮನ್ನಾ ತಲೆನೋವು- ತಲೆಕೆಳಗಾದ ಸಿಎಂ ಎಚ್‍ಡಿಕೆ ಲೆಕ್ಕಾಚಾರ

    ಬೆಂಗಳೂರು: ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಸಾಲಮನ್ನಾ ಮಾಡುವುದು ಸಿಎಂ ಕುಮಾರಸ್ವಾಮಿ ಅವರು ಅಂದುಕೊಂಡಷ್ಟು ಸುಲಭವಿಲ್ಲ. ಯಾಕಂದ್ರೆ ರೈತರು ಈಗಾಗಲೇ ಸುಮಾರು 53 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ.

    ಹಾಗಾದ್ರೆ ಯಾವ್ಯಾವ ಬ್ಯಾಂಕ್‍ಗಳಲ್ಲಿ ರೈತರು ಎಷ್ಟು ಸಾಲ ಮಾಡಿದ್ದಾರೆ ಅಂತ ನೋಡೋದಾದ್ರೆ,
    * ಕೆನರಾ ಬ್ಯಾಂಕ್: 16,966 ಕೋಟಿ ರೂ.
    * ಕಾರ್ಪೋರೇಷನ್ ಬ್ಯಾಂಕ್: 3,176 ಕೋಟಿ ರೂ.
    * ಸಿಂಡೀಕೇಟ್ ಬ್ಯಾಂಕ್: 4,026 ಕೋಟಿ ರೂ.
    * ಎಸ್‍ಬಿಐ: 5,800 ಕೋಟಿ ರೂ.
    * ವಿಜಯ ಬ್ಯಾಂಕ್: 2,970 ಕೋಟಿ ರೂ.
    * ಕರ್ನಾಟಕ ಬ್ಯಾಂಕ್: 2,149 ಕೋಟಿ ರೂ.
    * ಐಡಿಬಿಐ ಬ್ಯಾಂಕ್: 3,439 ಕೋಟಿ ರೂ.
    * ಪ್ರಗತಿ ಕೃಷಿ ಗ್ರಾಮೀಣ ವಿಕಾಸ ಬ್ಯಾಂಕ್: 3,367 ಕೋಟಿ ರೂ.
    * ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್: 4,334 ಕೋಟಿ ರೂ.
    * ಅಪೆಕ್ಸ್ ಬ್ಯಾಂಕ್: 10,734 ಕೋಟಿ ರೂ.

    ಚುನಾವಣೆಗೂ ಮುಂಚೆ ತಾನು ಸಿಎಂ ಆಗಿ ಅಧಿಕಾರಕ್ಕೆ ಬಂದ ತಕ್ಷಣ ಮೊದಲು ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದರು. ಅಲ್ಲದೇ ಬಳಿಕ ಕರ್ನಾಟಕದ ಜನರಿಗೆ ನಾನು ವಂಚನೆ ಮಾಡುವುದಿಲ್ಲ. ಜನರ ಹೆಸರಿನಲ್ಲಿ ನಾನು ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದೇನೆ. ನಾನು ಬಹಳ ಸೂಕ್ಷ್ಮ ಜೀವಿ. ನನ್ನ ಮಾತನ್ನು ನಡೆಸಿಕೊಟ್ಟಿಲ್ಲ ಎಂದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಅಷ್ಟು ಮಾತ್ರವಲ್ಲ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಅಂತ ಹೇಳಿದ್ದರು. ಆದ್ರೆ ಇದೀಗ ಸಮ್ಮಿಶ್ರ ಸರ್ಕಾರಕ್ಕೆ ರೈತರ ಸಾಲಮನ್ನಾ ವಿಚಾರ ಕಗ್ಗಂಟಾಗಿದೆ.

  • ರೈತರ ತೋಟಗಳಿಗೆ ಆನೆ ದಾಳಿ ತಡೆಯಲು ಹೊಸ ತಂತ್ರಕ್ಕೆ ಮುಂದಾದ ಅರಣ್ಯ ಇಲಾಖೆ

    ರೈತರ ತೋಟಗಳಿಗೆ ಆನೆ ದಾಳಿ ತಡೆಯಲು ಹೊಸ ತಂತ್ರಕ್ಕೆ ಮುಂದಾದ ಅರಣ್ಯ ಇಲಾಖೆ

    ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ ಹಲವು ವರ್ಷಗಳಿಂದ ಇದ್ದು ಆನೆಗಳ ದಾಳಿಯನ್ನು ತಡೆಯಲು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳು ಅಷ್ಟಿಷ್ಟಲ್ಲ. ಆದರೆ ಸದ್ಯ ಅರಣ್ಯ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಈ ಮೂಲಕ ರೈತರ ಬೆಳೆ ರಕ್ಷಣೆ ಹೊಸ ತಂತ್ರ ಜಾರಿಗೆ ಸಿದ್ಧತೆ ನಡೆಸಿದೆ.

    ಈ ಹಿಂದೆ ಅಳವಡಿಸಿದ್ದ ಸೋಲಾರ್ ಬೇಲಿ, ಕಂದಕ ನಿರ್ಮಾಣ ಕಾರ್ಯಗಳು ಅಷ್ಟು ಯಶಸ್ವಿಯಾಗಿ ಕಾಡಾನೆಗಳ ದಾಳಿಯನ್ನು ತಡೆಯಲು ವಿಫಲವಾಗಿತ್ತು. ಇದೀಗ ವಿದೇಶ ಹಾಗೂ ನೆರೆಯ ಕೇರಳ ರಾಜ್ಯದಲ್ಲಿ ಸಕ್ಸಸ್ ಆಗಿರುವ ಸರಳ ಸಾಧನವನ್ನು ಜಿಲ್ಲೆಯಲ್ಲೂ ಅಳವಡಿಸುವ ಮೂಲಕ ಆನೆ ಕಾಟಕ್ಕೆ ನಿಯಂತ್ರಣ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ. ಇದರ ಭಾಗವಾಗಿ ಜೇನು ಪೆಟ್ಟಿಗೆಗಳನ್ನು ಜಮೀನು ಬಳಿ ಕಟ್ಟುವ ಮೂಲಕ ಜೇನು ಬೇಲಿಯನ್ನು ನಿರ್ಮಿಸುವುದು ಈ ಹೊಸ ಪ್ರಯೋಗ.

    ಜಿಲ್ಲೆಯ ಆಲೂರು-ಸಕಲೇಶಪುರ ತಾಲೂಕು ಸೇರಿದಂತೆ ಎಲ್ಲೆಲ್ಲಿ ಕಾಡಾನೆ ಹಾವಳಿ ಹಾಗೂ ಓಡಾಟ ಹೆಚ್ಚಾಗಿದೆಯೋ ಅಲ್ಲಿ, ಪ್ರಾಯೋಗಿಕವಾಗಿ ಜಮೀನು ಅಥವಾ ತೋಟದ ಸುತ್ತಮುತ್ತಾ ಈ ಜೇನುಪೆಟ್ಟಿಗೆ ಅಳವಡಿಸಲಾಗಿದೆ. ಪೆಟ್ಟಿಗೆಯಲ್ಲಿ ಜೇನುಹುಳ ಪೋಷಣೆ ಮಾಡಲಾಗುತ್ತದೆ. ತೋಟದ ಸುತ್ತ ಸಾಲಾಗಿ ಸ್ಥಳಾವಕಾಶ ಬಿಟ್ಟು ಅಳವಡಿಸಿರುವ ಜೇನುಪೆಟ್ಟಿಗಳಿಗೆ ಹಗ್ಗ ಕಟ್ಟಲಾಗಿದೆ. ಒಂದೊಮ್ಮೆ ಕಾಡಾನೆ ಬಂದು, ಹಗ್ಗವನ್ನು ಮುಟ್ಟಿದಾಗ ಪೆಟ್ಟಿಗೆಯೊಳಗಿದ್ದ ಜೇನುಹುಳಗಳ ಹಿಂಡು ಹೊರಬಂದು ಸದ್ದು ಮಾಡುತ್ತವೆ. ಈ ಸದ್ದಿಗೆ ಕಾಡಾನೆ ಹೆದರಿ ಯಾವುದೇ ನಷ್ಟಮಾಡದೇ ವಾಪಸ್ ಹೋಗುತ್ತವೆ.

    ಈ ವಿಧಾನ ದೂರದ ಕೀನ್ಯಾ ದೇಶ, ನೆರೆಯ ಕೇರಳ ರಾಜ್ಯದಲ್ಲಿ ಸಕ್ಸಸ್ ಆದ ಹಿನ್ನೆಲೆಯಲ್ಲಿ ನಾವೂ ಆರಂಭಿಸುತ್ತೇವೆ ಎಂದು ಅರಣ್ಯಾಧಿಕಾರಿಗಳು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ದಶಕಗಳಿಂದ ಆನೆ ಹಾವಳಿಯನ್ನು ತಡೆಯಲು ಸಾದ್ಯವಾಗಿಲ್ಲ, ಈಗ ಜೇನುಸಾಕಣೆ ಪೆಟ್ಟಿಗೆ ಯಶಸ್ವಿಯಾಗುವುದೋ ಗೊತ್ತಿಲ್ಲ ಎಂಬುವುದು ರೈತರ ಅನುಮಾನವಾಗಿದೆ. ಆದರೆ ಅರಣ್ಯ ಇಲಾಖೆಯ ಈ ತಂತ್ರ ಯಶಸ್ವಿಯಾದರೆ ಬೆಳೆ ರಕ್ಷಣೆ ಸಾಧ್ಯವಾಗಿ ರೈತರು ಉತ್ತಮ ಲಾಭ ಪಡೆಯಲಿದ್ದಾರೆ.

  • ಜಮೀನಿಗೆ ನುಗ್ಗಿದ ನೀರಿನಿಂದ ಭತ್ತದ ಬೆಳೆ ನಾಶ- ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಯತ್ನಿಸಿದ ರೈತ – ವಿಡಿಯೋ ನೋಡಿ

    ಜಮೀನಿಗೆ ನುಗ್ಗಿದ ನೀರಿನಿಂದ ಭತ್ತದ ಬೆಳೆ ನಾಶ- ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಯತ್ನಿಸಿದ ರೈತ – ವಿಡಿಯೋ ನೋಡಿ

    ಮೈಸೂರು: ಕಷ್ಟಪಟ್ಟು 4 ಎಕರೆ ಜಮೀನಿನಲ್ಲಿ ಬೆಳೆದ ಭತ್ತ ನೀರಿನಲ್ಲಿ ಮುಳುಗಿ ನಾಶವಾಗಿದ್ದನ್ನು ಕಂಡ ರೈತರೊಬ್ಬರು ಅದೇ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಸವಯ್ಯ ಬೆಳೆ ನಾಶವಾಗಿದನ್ನು ಕಂಡು ಆತ್ಮಹತ್ಯೆಗೆ ಯತ್ನಿಸಿದ ರೈತ. ಕುಪ್ಪರವಳ್ಳಿ ಗ್ರಾಮ ನಿವಾಸಿಯಾದ ಬಸವಯ್ಯ 4 ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದರು. ಆದರೆ ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಹರಿದ ಪರಿಣಾಮ ಸಂಪೂರ್ಣ ಬೆಳೆ ನಾಶವಾಗಿತ್ತು. ಇದನ್ನು ಕಂಡ ಬಸವಯ್ಯ ತನಗೆ ಈ ಜೀವನ ಬೇಡ ಎಂದು ಗೋಳಾಡುತ್ತಾ ಆತ್ನಹತ್ಯೆ ಯತ್ನಿಸಿದ್ದರು.

    ಈ ವೇಳೆ ಸ್ಥಳದಲ್ಲಿದ್ದ ಯುವಕರಿಬ್ಬರು ಬಸಯ್ಯರನ್ನು ದಡಕ್ಕೆ ಕರೆ ತಂದು ರಕ್ಷಣೆ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಮಳೆನಾಡು ಸೇರಿದಂತೆ ಕಪಿಲ ನದಿಯ ಪಾತ್ರದಲ್ಲಿ ಭಾರೀ ಮಳೆಯಾದ ಕಾರಣ ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರ ಬಿಡಲಾಗಿತ್ತು. ಮುಂಗಾರು ಈ ಬಾರಿ ರಾಜ್ಯದಲ್ಲಿ ಬಹುಬೇಗ ಆರಂಭವಾಗಿದ್ದರಿಂದ ಮಳೆಯ ಪ್ರಮಾಣವು ಹೆಚ್ಚಾಗಿದ್ದು ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ.

    ನಂಜನಗೂಡು ಸೇರಿದಂತೆ ಕಬಿನಿ ಜಲಾಶಯ ಪಾತ್ರದ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಬೆಳೆ ನಾಶವಾಗಿದ್ದು, ಸುಮಾರು 50 ಎಕರೆಗೂ ಹೆಚ್ಚಿನ ಬೆಳೆ ನೀರಿನಲ್ಲಿ ಮುಳುಗಿದೆ. ಲಕ್ಷ ಲಕ್ಷ ಸಾಲ ಮಾಡಿ ಬೆಳೆದ ಬೆಳೆ ಕೈ ಸೇರುವ ಮುನ್ನವೇ ನೀರು ಪಾಲಾಗಿದೆ. ಜಲಾಶಯದ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ನೀಡಿದ್ದರೂ ಕೂಡ ಬೆಳೆ ಕಟಾವು ಮಾಡಲು ಇನ್ನು 15 ದಿನಗಳ ಸಮಯ ಬೇಕಾಗಿದ್ದರಿಂದ ರೈತರು ಸಹ ಅಸಹಾಯಕರಾಗಿದ್ದಾರೆ.

    https://www.youtube.com/watch?v=HbexpBIvzhA