Tag: farmer

  • ರಣಬಿಸಿಲಿಗೆ ಮೀನುಗಳ ಮಾರಣಹೋಮ; ಲಕ್ಷಾಂತರ ರೂ. ನಷ್ಟ – ರೈತನ ಕಣ್ಣೀರು

    ರಣಬಿಸಿಲಿಗೆ ಮೀನುಗಳ ಮಾರಣಹೋಮ; ಲಕ್ಷಾಂತರ ರೂ. ನಷ್ಟ – ರೈತನ ಕಣ್ಣೀರು

    ವಿಜಯಪುರ: ಜಿಲ್ಲೆಯಲ್ಲಿ (Vijayapur) 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಜನ, ಜಾನುವಾರುಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಜಿಲ್ಲೆಯ ಮಧಬಾವಿ ತಾಂಡಾದಲ್ಲಿ ರಣಬಿಸಿಲಿಗೆ ಇಂಜಿನಿಯರ್ ಒಬ್ಬರು ಸಾಕಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ.ಗಳ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ.

    ಬೆಂಗಳೂರಿನ (Bengaluru) ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ವಿಜಯಕುಮಾರ್ ಎಂಬವರು ತಾಂಡದಲ್ಲಿ ಮೀನು ಸಾಕಣೆ ಮಾಡಿದ್ದರು. ಸುಮಾರು 20 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ 17 ಸಾವಿರ ಸ್ನೇಕ್ ಹೆಡ್ ಮುರೆಲ್ ತಳಿಯ ಮೀನನ್ನು (Snakehead murrel Fish) ಸಾಕಿದ್ದರು. ಇನ್ನೇನೂ ಎರಡು ದಿನಗಳಲ್ಲಿ ಮೀನುಗಳು 30-40 ಲಕ್ಷ ರೂ.ಗಳಿಗೆ ಹೈದ್ರಾಬಾದ್‍ಗೆ ಮಾರಾಟ ಆಗಬೇಕಿತ್ತು. ಅಷ್ಟರಲ್ಲಿ ಮೀನುಗಳ ಮಾರಣ ಹೋಮವೇ ನಡೆದಿದೆ.

    ಈ ಮೀನುಗಳಿಗೆ ಪ್ರತಿ ತಿಂಗಳು 2 ಲಕ್ಷ ರೂ.ಗಳಷ್ಟು ಆಹಾರ ಹಾಕಿ ಬೆಳೆಸಲಾಗಿತ್ತು. ಮಾರುಕಟ್ಟೆಯಲ್ಲಿ ಕೆಜಿಗೆ 700 ರಿಂದ 800 ರೂ. ಬೆಲೆ ಬಾಳುವ ಮೀನುಗಳು ಇನ್ನೇನು ಕೊನೆಯ ಕ್ಷಣದಲ್ಲಿ ಸಾವನ್ನಪ್ಪಿವೆ ಎಂದು ರೈತ (Farmer) ವಿಜಯಕುಮಾರ್ ಹಾಗೂ ಮಿತ್ರರು ಕಣ್ಣಿರು ಹಾಕುತ್ತಿದ್ದಾರೆ.

    ಕಳೆದ ವರ್ಷ ಮೀನು ಕೃಷಿ ಮಾಡಿ ವಿಜಯಕುಮಾರ್ ಯಶಸ್ವಿಯಾಗಿದ್ದರು. ಈ ಹಿನ್ನೆಲೆ ಮೀನುಗಾರಿಕೆ ಇಲಾಖೆಯಿಂದ  (Department of Fisheries) ಅವರಿಗೆ ಸನ್ಮಾನಿಸಲಾಗಿತ್ತು. ಈ ಬಾರಿಯೂ ಒಳ್ಳೆಯ ಇಳುವರಿ ಬಂದಿತ್ತು. ಆದರೆ ಬಿಸಿಲಿನ ತಾಪಕ್ಕೆ ಮೀನುಗಳು ಸಾವನ್ನಪ್ಪಿದ್ದು, ಸರ್ಕಾರದ ಸಹಾಯಕ್ಕೆ ಅವರು ಕೈಚಾಚಿದ್ದಾರೆ.

    ಪ್ರತಿನಿತ್ಯ ವಿಜಯಪುರದಲ್ಲಿ ಉಷ್ಣಾಂಶ ದಾಖಲೆ ಪ್ರಮಾಣದಲ್ಲಿ ಏರುತ್ತಿದ್ದು, 40 ರಿಂದ 44 ಡಿಗ್ರಿ ವರೆಗೂ ತಾಪಮಾನ ದಾಖಲಾಗಿತ್ತಿದೆ. ಇದರಿಂದ ಜಿಲ್ಲೆಯ ಜನರ ನಿದ್ದೆ ಹದೆಗೆಟ್ಟು ಹೋಗಿದೆ. ಜನರ ಆರೋಗ್ಯದ ಮೇಲೂ ನಾನಾ ದುಷ್ಪರಿಣಾಮಗಳು ಬೀರುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

  • ಬ್ಯಾಡಗಿಯಲ್ಲಿ ಸಿಡಿದ ರೈತರು –  ಮೆಣಸಿನ ಮಾರುಕಟ್ಟೆ ಕಚೇರಿ, ಅಗ್ನಿಶಾಮಕ ವಾಹನಕ್ಕೆ ಬೆಂಕಿ

    ಬ್ಯಾಡಗಿಯಲ್ಲಿ ಸಿಡಿದ ರೈತರು – ಮೆಣಸಿನ ಮಾರುಕಟ್ಟೆ ಕಚೇರಿ, ಅಗ್ನಿಶಾಮಕ ವಾಹನಕ್ಕೆ ಬೆಂಕಿ

    ಹಾವೇರಿ: ದಿಢೀರ್ ಮೆಣಸಿನಕಾಯಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು (Farmers) ಮಾರುಕಟ್ಟೆ ಆಡಳಿತ ಕಚೇರಿಗೆ (Market Administration Office) ಕಲ್ಲುತೂರಿ, ವಾಹನಗಳಿಗೆ ಬೆಂಕಿ ಇಟ್ಟ ಘಟನೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ (Byadgi Chilli Market)  ನಡೆದಿದೆ.

     

    ಪ್ರತಿ ಕ್ವಿಂಟಾಲ್ ಮೆಣಸಿನಕಾಯಿಗೆ ಕಳೆದ ವಾರ 20 ಸಾವಿರ ರೂ. ದರ ನಿಗದಿಯಾಗಿತ್ತು. ಆದರೆ ಈ ವಾರ 12 ಸಾವಿರ ರೂ. ದರ ನಿಗದಿ ಮಾಡಿದ್ದಕ್ಕೆ ಆಕ್ರೋಶಗೊಂಡ ರೈತರು ಎಪಿಎಂಸಿ ಕಚೇರಿ ಮುಂದೆ ಇರುವ ಆಡಳಿತ ಕಚೇರಿಗೆ ಕಲ್ಲು ತೂರಿದ್ದಾರೆ.  ಇದನ್ನೂ ಓದಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ

    ಕಚೇರಿಯ ಮುಂದೆ ನಿಂತಿದ್ದ ಸರ್ಕಾರಿ ಕಾರಿನ ಗಾಜು ಪುಡಿಪುಡಿಯಾಗಿದೆ. ಇನ್ನೊಂದು ಕಾರನ್ನು ಎತ್ತಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಆಡಳಿತ ಕಚೇರಿಯ ಮುಂಭಾಗದಲ್ಲಿ ಅಗ್ನಿಶಾಮಕ ದಳ ವಾಹನ, ಎಪಿಎಂಸಿ ಕಾರಿನ ಜೊತೆ ಖಾಸಗಿ ವ್ಯಕ್ತಿಗಳ ಎರಡು ಕಾರು, 10 ಬೈಕಿಗೆ ಬೆಂಕಿ ಹಚ್ಚಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

     

  • ರಾಯಚೂರಿನಲ್ಲಿ ಚಿರತೆ ದಾಳಿ: ಜಮೀನಿನಲ್ಲಿ ಕಟ್ಟಿಹಾಕಿದ್ದ ಆಕಳ ಕರು ಬಲಿ

    ರಾಯಚೂರಿನಲ್ಲಿ ಚಿರತೆ ದಾಳಿ: ಜಮೀನಿನಲ್ಲಿ ಕಟ್ಟಿಹಾಕಿದ್ದ ಆಕಳ ಕರು ಬಲಿ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಬಳಿ ಚಿರತೆ (Leopard) ದಾಳಿ ನಡೆಸಿದ್ದು ಆಕಳ ಕರು (Calf) ಬಲಿಯಾಗಿದೆ. ಜಮೀನಿನಲ್ಲಿ ಕಟ್ಟಿ ಹಾಕಿದ್ದ ಎರಡು ವರ್ಷದ ಆಕಳ ಕರು ಚಿರತೆ ದಾಳಿಗೆ ಒಳಗಾಗಿದೆ.

    ಜಾಲಹಳ್ಳಿಯ ಮುದ್ದರಂಗಪ್ಪ ತೆಗ್ಗಳ್ಳಿ‌ ಎಂಬುವವರ ಜಮೀನಿನಲ್ಲಿ ಚಿರತೆ ದಾಳಿ ನಡೆದಿದ್ದು, ಪಕ್ಕದಲ್ಲೇ ಕಟ್ಟಿದ್ದ ಒಂದು ಆಕಳು ಬಚಾವ್ ಆಗಿದೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

    ಘಟನೆ ಹಿನ್ನೆಲೆ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಚಿರತೆ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿವೆ. ಕರು ಮೇಲೆ ದಾಳಿ ನಡೆದಿರುವ ರೀತಿಯ ಆಧಾರದ ಮೇಲೆ ಚಿರತೆಯೇ ದಾಳಿ ಮಾಡಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಚಿರತೆ ದಾಳಿಯಿಂದ ಜಾಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಜನ ಭಯಭೀತರಾಗಿದ್ದಾರೆ.

    ಜಿಲ್ಲೆಯ ಮಾನ್ವಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಒಂದೆರಡು ವರ್ಷಗಳಿಂದ ಚಿರತೆ ಭಯ ಹೆಚ್ಚಾಗಿ ಕಾಡುತ್ತಿದ್ದು ಈಗ ದೇವದುರ್ಗ ತಾಲೂಕಿನಲ್ಲೂ ಚಿರತೆ ದಾಳಿ ನಡೆದಿದ್ದು ಜನರ ಆತಂಕ ಹೆಚ್ಚಿಸಿದೆ. ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ಗುಹೆಗಳು ಹೆಚ್ಚಾಗಿ ಇರುವುದರಿಂದ ಚಿರತೆಗಳಿಗೆ ನೆಚ್ಚಿನ ತಾಣಗಳಾಗುತ್ತಿವೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.

     

  • Loksabha Election: ರೈತರ ಪ್ರತಿಭಟನೆ ಬೆನ್ನಲ್ಲೇ ಮೊದಲ ಗ್ಯಾರಂಟಿ ಘೋಷಿಸಿದ ಖರ್ಗೆ

    Loksabha Election: ರೈತರ ಪ್ರತಿಭಟನೆ ಬೆನ್ನಲ್ಲೇ ಮೊದಲ ಗ್ಯಾರಂಟಿ ಘೋಷಿಸಿದ ಖರ್ಗೆ

    ನವದೆಹಲಿ: ರೈತರ ‘ದೆಹಲಿ ಚಲೋ’ ಆಂದೋಲನದ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಲೋಕಸಭಾ ಚುನಾವಣೆಯನ್ನು ಗುರುಯಾಗಿಸಿಕೊಂಡು ತಮ್ಮ ಮೊದಲ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದಾರೆ.

    ಛತ್ತೀಸ್‌ಗಢದ ಅಂಬಿಕಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ `ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ಮಾತನಾಡಿದ ಖರ್ಗೆ, ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌ (Congress) ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಬೇಡಿಕೆಗಳಲ್ಲಿ ಒಂದಾದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP-Minimum Support Price) ಖಾತರಿಪಡಿಸುವ ಕಾನೂನು ಜಾರಿಗೆ ತರುವುದಾಗಿ ಘೋಷಣೆ ಮಾಡಿದರು. ಅಲ್ಲದೆ ಇದು ನಮ್ಮ ಮೊದಲ ಭರವಸೆ ಎಂದು ಹೇಳಿದರು.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜನರು ಮೋದಿಯವರ “ಗ್ಯಾರಂಟಿ”ಗಳನ್ನು ನಂಬಬಾರದು ಎಂದು ಕರೆ ನೀಡಿದರು. ಇದನ್ನೂ ಓದಿ: ರೈತರ ಪ್ರತಿಭಟನೆ- 1ಕಿ.ಮೀ ಸಾಗಲು ಬರೋಬ್ಬರಿ ಒಂದು ಗಂಟೆ ಕಾದ ವಾಹನಗಳು

    ಪ್ರಧಾನಿ ಮೋದಿಗೆ (Narendra Modi) ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಮತ್ತು ಅವರು ತಮಗಾಗಿ ಮಾತ್ರ ಕೆಲಸ ಮಾಡುತ್ತಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಬಡವರ ಪಕ್ಷವಾದರೆ, ಬಿಜೆಪಿ ಶ್ರೀಮಂತರ ಪಕ್ಷ ಎಂದು ಕಿಡಿಕಾರಿದರು.

  • ಸಾಲಮನ್ನಾ ಆಸೆಗಾಗಿ ರೈತರು ಬರಗಾಲಕ್ಕೆ ಕಾಯುತ್ತಾರೆ- ಶಿವಾನಂದ್ ಪಾಟೀಲ್ ವಿವಾದಾತ್ಮಕ ಹೇಳಿಕೆ

    ಸಾಲಮನ್ನಾ ಆಸೆಗಾಗಿ ರೈತರು ಬರಗಾಲಕ್ಕೆ ಕಾಯುತ್ತಾರೆ- ಶಿವಾನಂದ್ ಪಾಟೀಲ್ ವಿವಾದಾತ್ಮಕ ಹೇಳಿಕೆ

    ಚಿಕ್ಕೋಡಿ (ಬೆಳಗಾವಿ): ಇತ್ತೀಚೆಗಷ್ಟೆ ರೈತರಿಗೆ (Farmers) ಪರಿಹಾರ ನೀಡಿದ ಬಳಿಕ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ (Shivanand Patil) ಮತ್ತೊಮ್ಮೆ ರೈತರ ಬಗ್ಗೆ ಲಘುವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿರುವ ಸಚಿವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಪರಿಹಾರ ಕೊಡೋಕೆ ಶುರು ಮಾಡಿದ್ಮೇಲೆ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ: ಶಿವಾನಂದ ಪಾಟೀಲ್

    ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜನೂ ಕೊಟ್ಟರು, ಗೊಬ್ಬರನೂ ಕೊಟ್ಟರು. ಇನ್ನೂ ರೈತರಿಗೆ ಏನಪ್ಪಾ ಅಂದ್ರೆ ಒಂದು ಆಸೆ ಇರುತ್ತೆ, ಮಗನ್ ಮ್ಯಾಲ ಮ್ಯಾಲ ಬರಗಾಲ ಬೀಳಲಿ ಅಂತ ಹೇಳಿ. ಯಾಕಂದ್ರೆ ಸಾಲ ಮನ್ನಾ ಗುತ್ತೆ ಅಂತಾ. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದಾರೆ.

    ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದ್ರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯ. ಸರ್ಕಾರ ಸದಾ ನರೆವಿಗೆ ಬರಲು ಸಾಧ್ಯವಿಲ್ಲ ಎಂದು ಸಚಿವರು ಮಾತನಾಡಿದ್ದಾರೆ.

  • ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತನ ರುಂಡ ಕತ್ತರಿಸಿದ ದುಷ್ಕರ್ಮಿಗಳು

    ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತನ ರುಂಡ ಕತ್ತರಿಸಿದ ದುಷ್ಕರ್ಮಿಗಳು

    ಗದಗ: ಜಮೀನಿನಲ್ಲಿ (Farm) ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತ ಕಾರ್ಮಿಕನ ತಲೆಯನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋದ ಘಟನೆ ಗದಗ (Gadag) ತಾಲೂಕಿನ ತಿಮ್ಮಾಪೂರ (Thimmapur) ಗ್ರಾಮದ ಜಮೀನಿನಲ್ಲಿ ನಡೆದಿದೆ.

    ಸಣ್ಣ ಹನುಮಪ್ಪ ಅಲಿಯಾಸ್ ಕುಂಟೆಪ್ಪ ವಜ್ರದ್ (65) ಎಂಬ ರೈತ ಕಾರ್ಮಿಕನ ರುಂಡವನ್ನು ಯಾರೋ ಕತ್ತರಿಸಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ದೇಹ ಮಾತ್ರ ಇದ್ದು, ರುಂಡ ಇಲ್ಲ. ಮೃತ ರೈತ ಕಾರ್ಮಿಕ ಕೊಪ್ಪಳ (Koppal) ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ನಿವಾಸಿ. ಈತ ತಿಮ್ಮಾಪೂರ ಗ್ರಾಮದ ಬಾಲಪ್ಪ ಕೊಪ್ಪದ ಎಂಬ ರೈತರ ಜಮೀನಲ್ಲಿ ಬೆಳೆ ಕಾಯುತ್ತಿದ್ದ. ಜಮೀನಿನ ಮಾಲಿಕರು ನಿತ್ಯ ಊಟ ಕೊಟ್ಟು ತಿಂಗಳಿಗೆ 7,000 ರೂ. ಕೊಡುವುದಾಗಿ ಹೇಳಿ ಜಮೀನು ಕಾಯುವಂತೆ ಹೇಳಿದ್ದರು. ಕಳೆದ ಒಂದು ತಿಂಗಳಿನಿಂದ ಮೆಣಸಿನಕಾಯಿ ಕಾಯುತ್ತಿದ್ದ. ಆದರೆ ಬೆಳಗ್ಗೆ ಮಾಲೀಕರು ಬಂದು ನೋಡಿದಾಗ ಕುಂಟೆಪ್ಪನ ರುಂಡ ಇಲ್ಲವಾಗಿದೆ. ಇದನ್ನೂ ಓದಿ: ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ಆರೋಪ; 15 ಮಂದಿ ಐಸಿಸ್ ಶಂಕಿತರ ಬಂಧನ

    ಯಾರು ಕೊಲೆ ಮಾಡಿದ್ದಾರೆ? ಯಾಕೆ ಆಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಕೊಲೆಯ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಸ್ಥಳಕ್ಕೆ ಗದಗ ಎಸ್.ಪಿ ಬಿ.ಎಸ್ ನೇಮಗೌಡ, ಡಿವೈಎಸ್ಪಿ ಸುಂಕದ್ ಹಾಗೂ ಗ್ರಾಮೀಣ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದ ತಂಡ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ರೈತ ಕಾರ್ಮಿಕನ ರುಂಡ ಹಾಗೂ ದುಷ್ಕರ್ಮಿಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ

    ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ. ತಮ್ಮ ಬೆಳೆ ಉಳಿಸಿಕೊಳ್ಳಲು ರೈತರು ಸಾಕಷ್ಟು ಕಷ್ಟ ಪಡುವಂತಾಗಿದೆ. ಆದರೆ ಈ ಘಟನೆಯಿಂದ ರೈತರು ಬೆಚ್ಚಿ ಬಿದ್ದಿದ್ದಾರೆ. ತಮ್ಮ ಬೆಳೆ ಉಳಿಸಿಕೊಳ್ಳಲು ಹಗಲು ರಾತ್ರಿ ಕಾವಲು ಕಾಯಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಬೇಲ್‌ನಲ್ಲಿ ಹೊರಬಂದ ಅತ್ಯಾಚಾರ ಆರೋಪಿ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ – ಬಳಿಕ ಆತ್ಮಹತ್ಯೆ

  • ಕೃಷಿ ಉಪಕರಣಗಳ ಬೆಲೆ ದುಪ್ಪಟ್ಟು – ಅಂದು 30 ಪೈಪ್‌, 5 ಸ್ಪ್ರಿಂಕ್ಲರ್‌ಗೆ 1,876 ರೂ. – ಈಗ 4,667 ರೂ.ಗೆ ಏರಿಕೆ

    ಕೃಷಿ ಉಪಕರಣಗಳ ಬೆಲೆ ದುಪ್ಪಟ್ಟು – ಅಂದು 30 ಪೈಪ್‌, 5 ಸ್ಪ್ರಿಂಕ್ಲರ್‌ಗೆ 1,876 ರೂ. – ಈಗ 4,667 ರೂ.ಗೆ ಏರಿಕೆ

    – ರೈತ ಸಂಪರ್ಕ ಕೇಂದ್ರಗಳಿಗೆ ಹೋದ ರೈತರಿಗೆ ಶಾಕ್‌

    ಹಾವೇರಿ: ರಾಜ್ಯದಲ್ಲಿ ತೀವ್ರ ಬರಗಾಲ (Drought) ಆವರಿಸಿದೆ. ಮಳೆ ಇಲ್ಲದೆ ಭಾರೀ ಸಂಕಷ್ಟವನ್ನು ರೈತ (Farmer) ಎದುರಿಸುತ್ತಿದ್ದಾನೆ. ಈ ಮಧ್ಯೆ ಕೃಷಿ ಉಪಕರಣಗಳಿಗೆ (Agriculture Equipment) ಪಾವತಿಸಬೇಕಾದ ಹಣವನ್ನು ದುಪ್ಪಟ್ಟು ಮಾಡಿ ಸರ್ಕಾರ ರೈತರಿಗೆ ಶಾಕ್‌ ನೀಡಿದೆ.

    ಹೌದು, ರೈತ ಸಂಪರ್ಕ ಕೇಂದ್ರಗಳಿಗೆ ಖರೀದಿಗೆ ಹೋದ ರೈತರು ಕೃಷಿ ಉಪಕರಣ ಬೆಲೆ ಕೇಳಿ ಅಘಾತಗೊಂಡಿದ್ದಾರೆ. ತುಂತುರು ಹಾಗೂ ಹನಿ ನೀರಾವರಿ ಉಪಕರಣಗಳ ಮೇಲಿನ ದರವನ್ನು ದುಪ್ಪಟ್ಟು ಮಾಡಿದೆ.  ಕಳೆದ ಅವಧಿಯಲ್ಲಿ 1,876 ರೂ. ರಿಯಾಯಿತಿ ದರ ಪಾವತಿಸಿ 30 ಪೈಪ್‌, 5 ಸ್ಪ್ರಿಂಕ್ಲರ್ ಖರೀದಿಸಬಹುದಿತ್ತು.  ಇದನ್ನೂ ಓದಿ: ಮತ್ತೆ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ

    ಈಗ ಈ ಸರ್ಕಾರದ ಅವಧಿಯಲ್ಲಿ 30 ಪೈಪ್, 5 ಸ್ಪ್ರಿಂಕ್ಲರ್ ಖರೀದಿಗೆ 4,667 ರೂ. ದರ ನಿಗದಿ ಮಾಡಲಾಗಿದೆ. ಏಕಾಏಕಿ ಈ ಪರಿ ದರವನ್ನು ಹೆಚ್ಚಿಸಲು ಕಾರಣ ಏನು ಎನ್ನುವುದು ಗೊತ್ತಿಲ್ಲ. ಹೀಗೆ ದರವನ್ನು ದುಪ್ಪಟ್ಟು ಮಾಡಿದರೆ ನಾವು ಹೇಗೆ ಬದುಕುವುದು ಎಂದು ರೈತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು

    ರೈತ ಸಂಪರ್ಕ ಕೇಂದ್ರಗಳಿಗೆ ಬಂದವರು ಹಣ ಹೊಂದಿಸಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ತಿಳಿಯದಂತೆ ಸರ್ಕಾರ ಆದೇಶ ಮಾಡಿದೆ ಎಂದು ಅನ್ನದಾತರು ಸಿಟ್ಟು ಹೊರಹಾಕುತ್ತಿದ್ದಾರೆ.

     

  • ಕೆಳಗೆ ನಿಂತು ಟ್ರ್ಯಾಕ್ಟರ್ ಆನ್ ಮಾಡಿದ ರೈತ – ಮೈಮೇಲೆ ಟ್ರ್ಯಾಕ್ಟರ್ ಹರಿದು ಸಾವು

    ಕೆಳಗೆ ನಿಂತು ಟ್ರ್ಯಾಕ್ಟರ್ ಆನ್ ಮಾಡಿದ ರೈತ – ಮೈಮೇಲೆ ಟ್ರ್ಯಾಕ್ಟರ್ ಹರಿದು ಸಾವು

    ದಾವಣಗೆರೆ: ಕೆಳಗೆ ನಿಂತು ಟ್ರ್ಯಾಕ್ಟರ್ (Tractor) ಆನ್ ಮಾಡಿದ ಹಿನ್ನೆಲೆ ಮೈಮೇಲೆ ಟ್ರ್ಯಾಕ್ಟರ್ ಹರಿದು ರೈತ (Farmer) ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.

    ನವೀನ್ ಎಚ್.ಟಿ (41) ಮೃತಪಟ್ಟ ರೈತ. ಇವರು ಅಡಿಕೆ ಸುಲಿಯುವ ಯಂತ್ರಕ್ಕೆ ಹಾಕುವ ಸಲುವಾಗಿ ಟ್ರ್ಯಾಕ್ಟರ್ ನಿಲ್ಲಿಸಿದ್ದರು. ಬಳಿಕ ಕೆಳಗೆ ನಿಂತುಕೊಂಡು ಟ್ರ್ಯಾಕ್ಟರ್ ಆನ್ ಮಾಡಿದ್ದಾರೆ. ಈ ವೇಳೆ ಟ್ರ್ಯಾಕ್ಟರ್ ಮೈಮೇಲೆ ಹರಿದು ರೈತ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: KEA ಪರೀಕ್ಷೆ ಅಕ್ರಮ ಪ್ರಕರಣ – ಇಬ್ಬರು ಪ್ರಾಂಶುಪಾಲರ ಬಂಧನ

    ಘಟನೆಯಿಂದ ರೈತ ನವೀನ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ರೈತನ ಮೇಲೆ ಟ್ರ್ಯಾಕ್ಟರ್ ಹರಿದ ದೃಶ್ಯ ಮನೆ ಮುಂದಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ತಂಬಾಕು ಚೀಲಗಳಲ್ಲಿ ತುಂಬಿ ದಾಖಲೆ ಇಲ್ಲದೆ ಸಾಗಿಸ್ತಿದ್ದ 8 ಕೋಟಿ ಹಣ ಜಪ್ತಿ

  • ಫಸಲಿಗೆ ಬಂದ 70ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಡಿದ ಕಿಡಿಗೇಡಿಗಳು – ಕಣ್ಣೀರಿಟ್ಟ ರೈತ

    ಫಸಲಿಗೆ ಬಂದ 70ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಡಿದ ಕಿಡಿಗೇಡಿಗಳು – ಕಣ್ಣೀರಿಟ್ಟ ರೈತ

    ಹಾಸನ: ಜಮೀನು ವಿವಾದದ ಹಿನ್ನಲೆಯಲ್ಲಿ 70ಕ್ಕೂ ಹೆಚ್ಚು ತೆಂಗಿನಮರಗಳನ್ನು ಕಿಡಿಗೇಡಿಗಳು ನಾಶ ಮಾಡಿದ ಘಟನೆ ಚನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಕೃಷ್ಣಮೂರ್ತಿ ಹಾಗೂ ಕುಶಾಲ ಎಂಬವರ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಮರಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಜಮೀನಿನ ಬಳಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಐದು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನಮರಗಳನ್ನು ಕಳೆದುಕೊಂಡು ರೈತರು (Farmer) ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಪಾಕ್‍ಗೆ ಸೇನಾ ಮಾಹಿತಿ – ಇಬ್ಬರು ಶಂಕಿತರು ಅರೆಸ್ಟ್

    ನುಗ್ಗೇಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.

    ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರಿಂದಲೇ ಆಗಿರುವ ನಷ್ಟ ಭರಿಸುವಂತೆ ರೈತ ಕೃಷ್ಣಮೂರ್ತಿ ಹಾಗೂ ಕುಶಾಲ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಬರ್ಬರ ಹತ್ಯೆ – 2ನೇ ಹೆಂಡತಿಯ ಅಕ್ರಮ ಸಂಬಂಧವೇ ಕಾರಣ ಎಂದ ಮೊದಲ ಪತ್ನಿ

  • ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳ ದರ್ಪ

    ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳ ದರ್ಪ

    ಗದಗ: ಬರಗಾಲದ ಸಂದರ್ಭದಲ್ಲಿ ರೈತನ (Farmer) ಮೇಲೆ ಬ್ಯಾಂಕ್ ಅಧಿಕಾರಿಗಳು ಸಾಲದ (Loan) ವಿಷಯಕ್ಕೆ ದರ್ಪ ತೋರಿದ್ದಾರೆ ಎಂಬ ಆರೋಪ ಜಿಲ್ಲೆಯ ಮುಂಡರಗಿ (Mundaragi) ಪಟ್ಟಣದಲ್ಲಿ ಕೇಳಿ ಬಂದಿದೆ.

    ಮುಂಡರಗಿ ತಾಲೂಕಿನ ಕಕ್ಕೂರ ಗ್ರಾಮದ ಬಸವರಾಜ್ ನಿಟ್ಟಾಲಿ ಎಂಬ ರೈತನಿಗೆ ಬ್ಯಾಂಕ್ ಅಧಿಕಾರಿಗಳು ಸಾಲ ತೀರಿಸುವ ಕುರಿತು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ರೈತ ಬಸವರಾಜ್ ನಿಟ್ಟಾಲಿ ಮುಂಡರಗಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ 1.70 ಲಕ್ಷ ರೂ. ಸಾಲ ಪಡೆದಿದ್ದರು. ಈಗ ಒಂದು ವರ್ಷದಲ್ಲಿ ಅಸಲು, ಬಡ್ಡಿ ಸೇರಿ 2 ಲಕ್ಷ 20 ಸಾವಿರ ರೂ.ಗೂ ಅಧಿಕವಾಗಿದೆ.

    ಬ್ಯಾಂಕ್‌ನವರು ಸಾಲ ತೀರಿಸುವಂತೆ ಪದೇ ಪದೇ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ತನ್ನನ್ನು ಎತ್ತಾಕಿಕೊಂಡು ಹೋಗಿ ಬ್ಯಾಂಕ್‌ನಲ್ಲಿ ಕಿರುಕುಳ ನೀಡಿದ್ದಾರೆ. ಹೆದರಿಸಿ ಸಾಲದ ಪತ್ರಕ್ಕೆ ಹೆಬ್ಬೆರಳು ಸಹಿ ಮಾಡಿಸಿಕೊಂಡಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪವರ್ ಶೇರಿಂಗ್ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ಕೃಷ್ಣ ಭೈರೇಗೌಡ

    ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳು ದರ್ಪ ತೋರಿದ್ದಾರೆ. ಭೀಕರ ಬರಗಾಲದ ಸಂದರ್ಭದಲ್ಲಿ ಹೀಗೆ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳು ಗೂಂಡಾವರ್ತನೆ ತೋರಿದ್ದಾರೆ. ರಜೆ ಇದ್ದರೂ ಸಾಲ ಮರುಪಾವತಿ ಮಾಡುವಂತೆ ರೈತನನ್ನು ಬ್ಯಾಂಕಿಗೆ ಕರೆತಂದು ದಬ್ಬಾಳಿಕೆ ಮಾಡಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ.

    ಬ್ಯಾಂಕ್ ಅಧಿಕಾರಿಗಳ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲಾಗಿದೆ. ಬ್ಯಾಂಕ್ ಅಧಿಕಾರಿಗಳ ಅಟ್ಟಹಾಸದಿಂದ ಅನೇಕ ಅನ್ನದಾತರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]