Tag: farmer

  • ರಾಯಚೂರಿನ ನಡುಗಡ್ಡೆ ಜನರ ಪರದಾಟ – ಮಕ್ಕಳೊಂದಿಗೆ ನದಿ ಈಜಿ ಬಂದ ರೈತರು

    ರಾಯಚೂರಿನ ನಡುಗಡ್ಡೆ ಜನರ ಪರದಾಟ – ಮಕ್ಕಳೊಂದಿಗೆ ನದಿ ಈಜಿ ಬಂದ ರೈತರು

    ರಾಯಚೂರು: ಕೃಷ್ಣಾ ನದಿ ಪ್ರವಾಹ ಹಿನ್ನೆಲೆ ಜಿಲ್ಲೆಯ ನಡುಗಡ್ಡೆ ಜನ ಹೊರಬರಲು ಪರದಾಟ ನಡೆಸಿದ್ದಾರೆ. ಪ್ರತೀ ಬಾರಿ ನದಿಗೆ ಹೆಚ್ಚು ಪ್ರಮಾಣದ ನೀರು ಬಂದಾಗಲೆಲ್ಲಾ ಇದೇ ಪರಸ್ಥಿತಿಯಿದ್ದು ನಡುಗಡ್ಡೆ ಜನರ ಗೋಳು ದೇವರಿಗೇ ಪ್ರೀತಿ ಎನ್ನುವಂತಾಗಿದೆ.

    ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸಣ್ಣ ಸಣ್ಣ ನಡುಗಡ್ಡೆಗಳ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿದ್ದ ಜನರಿಗೆ ಈಗ ಆತಂಕ ಹೆಚ್ಚಾಗಿದೆ. ಕೃಷ್ಣಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು ಹಿನ್ನೆಲೆ ಪರದಾಟ ಶುರುವಾಗಿದೆ. ಹೀಗಾಗಿ ರಭಸವಾಗಿ ಹರಿಯುವ ನೀರಿನಲ್ಲೇ ಜನ ಈಜಿ ಹೊರ ಬರುತ್ತಿದ್ದಾರೆ. ಮಕ್ಕಳನ್ನ ಹೆಗಲ ಮೇಲೆ ಹೊತ್ತು ಅಪಾಯದಲ್ಲೇ ನದಿ ದಾಟುತ್ತಿದ್ದಾರೆ.

    24ಕ್ಕೂ ಅಧಿಕ ಕುಟುಂಬಗಳು ಈ ರೀತಿ ಅಲ್ಲಲ್ಲಿ ಇರುವ ಎತ್ತರ ಪ್ರದೇಶಗಳಲ್ಲಿ ಉಳುಮೆ ಮಾಡುತ್ತಾ ನಡುಗಡ್ಡೆಯಲ್ಲೇ ವಾಸ ಮಾಡುತ್ತಿದ್ದಾರೆ. ಪ್ರವಾಹದಿಂದಾಗಿ ಜೀವ ಕೈಯಲ್ಲಿಡಿದು ನದಿ ದಾಟಿ ಬರುತ್ತಿದ್ದಾರೆ. ಇವರ ಜಾನುವಾರುಗಳು, ಕುರಿ, ಎಮ್ಮೆ ನಡುಗಡ್ಡೆಯಲ್ಲೇ ಬಿಟ್ಟು ಬಂದಿದ್ದಾರೆ. ಇಷ್ಟೆಲ್ಲಾ ಕಷ್ಟ ಪಡುತ್ತಿದ್ದರೂ ತಮ್ಮ ಸಹಾಯಕ್ಕೆ ಅಧಿಕಾರಿಗಳು ಬರುತ್ತಿಲ್ಲ ಅಂತ ನಡುಗಡ್ಡೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸುಮಲತಾ ಹೋರಾಟಕ್ಕೆ ರೈತ ಸಂಘದಿಂದ ಸಂಪೂರ್ಣ ಬೆಂಬಲ: ಚಾಮರಸ ಮಾಲಿಪಾಟೀಲ್

    ಸುಮಲತಾ ಹೋರಾಟಕ್ಕೆ ರೈತ ಸಂಘದಿಂದ ಸಂಪೂರ್ಣ ಬೆಂಬಲ: ಚಾಮರಸ ಮಾಲಿಪಾಟೀಲ್

    ರಾಯಚೂರು: ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಹೋರಾಟಕ್ಕೆ ರಾಜ್ಯ ರೈತ ಸಂಘದಿಂದ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಚಾಮರಸ ಮಾಲಿಪಾಟೀಲ್‍ರವರು, ರಾಜ್ಯದ ಹಲವೆಡೆ ಅಕ್ರಮ ಕಲ್ಲುಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ಬೇಬಿಬೆಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅದೂ ಕೆಆರ್‍ಎಸ್ ನಿಂದ 5-6 ಕಿ.ಮೀನಲ್ಲಿ ಗಣಿಗಾರಿಕೆ ನಡೆಯುತ್ತಿದೆ. 20 ಕಿ.ಮೀ ಒಳಗೆ ಗಣಿಗಾರಿಕೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಈ ಹಿಂದೆ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘ ಹೋರಾಟ ಮಾಡಿದಾಗ ಬಂದ್ ಆಗಿತ್ತು ಎಂದಿದ್ದಾರೆ.

    ಕೆಲವರು ಕನ್ನಂಬಾಡಿ ಕಟ್ಟೆ ಬಿರುಕು ಬಿಟ್ಟಿದೆ ಅಂತ ಹೇಳಬಹುದು, ಕೆಲವರು ಇಲ್ಲ ಎನ್ನಬಹುದು. ಆದರೆ ಅಣೆಕಟ್ಟಿನ ಅಯುಷ್ಯ ಮಾತ್ರ ಖಂಡಿತ ಕಡಿಮೆಯಾಗುತ್ತದೆ. 100 ವರ್ಷದ ಆಯುಷ್ಯ 50 ವರ್ಷಕ್ಕೆ ಮುಗಿಯುತ್ತದೆ. ರೈತ ಸಂಘ ಹಿಂದೆ ಮಾಡಿದ ಹೋರಾಟವನ್ನು ಈಗ ಸುಮಲತಾ ಮಾಡುತ್ತಿದ್ದಾರೆ, ಸುಮಲತಾ ಹೋರಾಟಕ್ಕೆ ರೈತ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ.

    ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಆಗಿ ಜವಾಬ್ದಾರಿಯಿಂದ ಮಾತನಾಡಬೇಕು. ಒಬ್ಬ ಮಹಿಳಾ ಸಂಸದರ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕು. ಕುಮಾರಸ್ವಾಮಿ ತಮ್ಮ ಮಾತನ್ನು ವಾಪಸ್ ಪಡೆಯಬೇಕು. ಸಣ್ಣ ಮಾತುಗಳನ್ನು ಆಡಿ ಸಣ್ಣತನ ಪ್ರದರ್ಶನ ಮಾಡಬಾರದು ಅಂತ ಚಾಮರಸ ಮಾಲಿಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ:‘ಏನಯ್ಯಾ ದರ್ಶನ್‍ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ’

  • ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

    ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

    ರಾಯಚೂರು: ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.  

    ಬಸ್ಸಯ್ಯ (55) ಆತ್ಮಹತ್ಯೆಗೆ ಶರಣಾಗಿರುವ ರೈತರಾಗಿದ್ದಾರೆ. ಸಾಲಭಾದೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿರವಾರ ತಾಲೂಕಿನ ಸಣ್ಣ ಹೊಸೂರು ಗ್ರಾಮದ ನಿವಾಸಿಯಾಗಿದ್ದಾರೆ. ಇದನ್ನೂ ಓದಿ: ಬೈಕ್,ಕಾರ್ ನಡುವೆ ಅಪಘಾತ- ಕೆಲಸಕ್ಕೆ ಹೋರಟವ ಸಾವು

    ಬಸ್ಸಯ್ಯ ಅವರು ಸಹಕಾರಿ ಬ್ಯಾಂಕಿನಲ್ಲಿ 1ಲಕ್ಷ ರೂಪಾಯಿ ಹಾಗೂ ಖಾಸಗಿಯಾಗಿ 4ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಾರದೇ ಸಾಲದ ಹೊರೆ ಹೆಚ್ಚಾಗಿತ್ತು. ಈ ವರ್ಷವೂ ಉತ್ತಮ ಇಳುವರಿಯ ನಿರೀಕ್ಷೆ ಇಲ್ಲದೆ ಸಾಲಕ್ಕೆ ಹೆದರಿದ್ದರು. ಹಳೆಯ ಸಾಲವನ್ನ ತೀರಿಸಲಾಗದೇ, ಸಾಲಗಾರರ ಕಾಟಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ್ದಾರೆ. ಘಟನೆ ಹಿನ್ನೆಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ – ಆಹ್ವಾನ ಪತ್ರಿಕೆ ಪ್ರಿಂಟ್ ಬಳಿಕ ವಿವಾಹ ಕ್ಯಾನ್ಸಲ್

  • ಹಳ್ಳದಲ್ಲಿ ಕೊಚ್ಚಿ ಹೋದ ರೈತ ಶವವಾಗಿ ಪತ್ತೆ

    ಹಳ್ಳದಲ್ಲಿ ಕೊಚ್ಚಿ ಹೋದ ರೈತ ಶವವಾಗಿ ಪತ್ತೆ

    ವಿಜಯಪುರ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರೈತನ ಶವವಿಂದು ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.  

    ಬಸವಂತರಾಯ ಅಂಬಾಗೋಳ (55) ಮೃತರಾಗಿದ್ದಾರೆ. ಹಳ್ಳ ದಾಟಿ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಕಳೆದ ನಾಲ್ಕು ದಿನಗಳಿಂದ ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ – ಮೂವರ ವಿರುದ್ಧ ಎಫ್‍ಐಆರ್

    ಕಳೆದ 4 ದಿನಗಳ ಹಿಂದೆ ಜಮೀನಿನಿಂದ ಮನೆಗೆ ಹಳ್ಳ ದಾಟಿ ಬರುವಾಗ ಹಳ್ಳದ್ದಲ್ಲಿ ರೈತ ಬಸವಂತರಾಯ ಅಂಬಾಗೋಳ ಕೊಚ್ಚಿ ಹೋಗಿದ್ದರು. ನಿರಂತರ 4 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಸಿಂದಗಿ ತಾಲೂಕಾಡಳಿತವಿಂದು ರೈತನ ಶವವನ್ನು ಪತ್ತೆ ಹಚ್ಚಿದೆ. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

    ಹಳ್ಳದ ಪಕ್ಕದ ಜಮೀನಿನಲ್ಲೆ ಶವ ಪತ್ತೆಯಾಗಿದ್ದು, ಶವ ಪತ್ತೆಗಾಗಿ ಡ್ರೋಣ್, ನಾಡದೋಣಿ ಬಳಸಲಾಗಿತ್ತು. ಜುಲೈ 7ರಂದು ರಾತ್ರಿ ಹಳ್ಳ ದಾಟುವಾಗವ ರೈತ ಬಸವಂತರಾಯ ಕೊಚ್ಚಿ ಹೋಗಿದ್ದ. ಸದ್ಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಹೆಸರಿನಲ್ಲಿ ವಂಚನೆಗೆ ಯತ್ನ – ಮಹಿಳೆಯ ವಿರುದ್ಧ ಯಜಮಾನ ದೂರು

  • ಚಿಕ್ಕಮಗಳೂರು, ಬೀದರ್‌ನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು, ಬೀದರ್‌ನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತ

    – ಮಲೆನಾಡಿನಲ್ಲಿ 10 ದಿನಗಳ ನಂತರ ಮತ್ತೆ ವರುಣನ ಅಬ್ಬರ

    ಚಿಕ್ಕಮಗಳೂರು/ಬೀದರ್: ಶುಕ್ರವಾರ ಚಿಕ್ಕಮಗಳೂರು ಮತ್ತು ಬೀದರ್ ಜಿಲ್ಲೆಯ ಔರಾದ್ ನಲ್ಲಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೀದರ್ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಜಾಗರಣೆ ಮಾಡುವಂತಾಗಿತ್ತು. ಇತ್ತ ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಸಂತಸದ ಜೊತೆ ಆತಂಕ ಸಹ ಹೆಚ್ಚಾಗಿದೆ.

    ಮುಂಗಾರು ಮಳೆ ಆಶಾದಾಯಕವಾಗಿ ಆರಂಭವಾಗಿದ್ದರೂ ಕೂಡ ಕಳೆದ ಹತ್ತು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿತ್ತು. ಆದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಡೀ ದಿನ ಆಗಾಗ್ಗೆ ಭಾರೀ ಮಳೆ ಸುರಿದಿದೆ.

    ಮಲೆನಾಡಿಗರಿಗೆ ಸಂತಸದ ಜೊತೆ ಆತಂಕ:
    ಕಡುಗಟ್ಟಿದ ಮೋಡ, ಭಾರೀ ಗಾಳಿಯಿಂದ ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಕಳಸ, ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಹಾಗೂ ಬಾಳೆಹೊನ್ನೂರು ಭಾಗದಲ್ಲಿ ಮಳೆಯಾಗಿದೆ. ಆದರೆ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬೈರಾಪುರ, ಚಾರ್ಮಾಡಿಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಇದರಿಂದ ಮಲೆನಾಡಿಗರು ಮತ್ತೆ ಆತಂಕಗೊಂಡಿದ್ದಾರೆ. ಜಿಲ್ಲೆಗೆ ಈ ಮಳೆ ಅಗತ್ಯವಿತ್ತು. ಬಯಲುಸೀಮೆ ಹಾಗೂ ಮಲೆನಾಡು ಭಾಗಕ್ಕೂ ಮಳೆ ತೀರಾ ಅವಶ್ಯಕವಿತ್ತು. ಮಲೆನಾಡು ಭಾಗದಲ್ಲಿ ಭತ್ತ ಬೆಳೆದಿದ್ದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಭತ್ತದ ಸಿಸಿ ಮಡಿ ಬಿಸಿಲಿಗೆ ಬಾಡುವಂತಾಗಿತ್ತು. ಆದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಡೀ ದಿನ ಆಗಾಗ್ಗೆ ಸಮೃದ್ಧ ಮಳೆಯಾಗಿರೋದು ಕಾಫಿ ಬೆಳೆಗಾರರರು ಹಾಗೂ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.

    ಮಳೆ ಮಲೆನಾಡಿಗರಿಗೆ ಸಂತಸ ತಂದರೂ ಅದಕ್ಕಿಂತ ಹೆಚ್ಚು ಆತಂಕ ತರುತ್ತಿದೆ. ಏಕೆಂದರೆ, ಕಳೆದ ಎರಡು ವರ್ಷದಲ್ಲಿ ಅಳಿದುಳಿದ ಬದುಕು ಎಲ್ಲಿ ಈ ಬಾರಿ ಕೊಚ್ಚಿ ಹೋಗುತ್ತೋ ಎಂದು ಮಲೆನಾಡಿಗರು ಮಳೆ ಬಂದರೆ ಖುಷಿಯ ಮಧ್ಯೆಯೂ ಕಂಗಾಲಾಗುತ್ತಿದ್ದಾರೆ. ಕಳೆದ ಎರಡು ವರ್ಷದ ಹಿಂದೆ, ಮಳೆಗಾಲದಲ್ಲಿ ಆದ ಅನಾಹುತಕ್ಕೆ ಪರಿಹಾರ ಸಿಕ್ಕಿಲ್ಲ. ಈ ವರ್ಷ ಮಳೆರಾಯ ಏನೇನು ಅವಾಂತರ ಸೃಷ್ಟಿಸುತ್ತಾನೋ, ಸರ್ಕಾರ ಸೂಕ್ತ ಪರಿಹಾರ ಕೊಡುತ್ತೋ ಅಥವಾ ಆಶ್ವಾಸನೆಯಲ್ಲೇ ಕಾಲ ಕಳೆಯುತ್ತೋ ಎಂದು ಜನ ಮಳೆ-ಸರ್ಕಾರ ಎರಡರ ಬಗ್ಗೆಯೂ ಚಿಂತೆಗೀಡಾಗಿದ್ದಾರೆ. 2019ರಲ್ಲಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ 6 ಕುಟುಂಬಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು. ಅಲ್ಲಿಯ ಜನರಿಗೆ ಇಂದಿಗೂ ಸೂಕ್ತ ಹಾಗೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ಮಲೆನಾಡಿಗರಿಗೆ ಮಳೆ ಅಂದರೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

    ಜಮೀನು, ಮನೆಗೆ ನುಗ್ಗಿದ ನೀರು:
    ಬೀದರ್‌ನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಔರಾದ್ ತಾಲೂಕಿನ ಬೋರ್ಗಿ ಗ್ರಾಮದ ಜಗದೇವಿ ಎಂಬವರ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾವಿರಾರು ಮೌಲ್ಯದ ದವಸ ಧಾನ್ಯಗಳು ನೀರು ಪಾಲಾಗಿವೆ.

    ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಡರಾತ್ರಿ ಮನೆಗೆ ನೀರು ನುಗ್ಗಿ ನೀರು ಹೊರ ಹಾಕಲು ಕುಟುಂಬಸ್ಥರು ರಾತ್ರಿಯಿಡಿ ಹರಸಾಹಸ ಪಟ್ಟಿದ್ದಾರೆ. ಜೊತೆಗೆ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನ ಜಮೀನುಗಳು ಜಲಾವೃತವಾಗಿ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿವೆ. ಅಲ್ಲದೇ ಸುರಿದ ಧಾರಾಕಾರ ಮಳೆಗೆ ಜೋಜನಾ ಬಳಿ ಇರುವ ಹಳ್ಳ ತುಂಬಿ ಜೋಜನಾ ಟು ಲಿಂಗದ ಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂದು ಕೂಡಾ ದಟ್ಟ ಮೋಡ ಕವಿದ ವಾತಾವರಣವಿದ್ದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಹೀಗಾಗಿ ಜಿಲ್ಲೆಯಲ್ಲಿ 10 ರಿಂದ 13ರ ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಧಾರಕಾರ ಮಳೆಗೆ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ, ಧಾನ್ಯಗಳು ನೀರು ಪಾಲಾಗಿದೆ. ಒಳಚರಂಡಿ ವ್ಯವಸ್ಥೆ ಸೇರಿ ಮೂಲಭೂತ ಸೌಕರ್ಯ ಒದಗಿಸಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ, ಸ್ಪಂದಿಸಿಲ್ಲ ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಳೆಯ ಅವಾಂತರದಿಂದಾಗಿ ನೊಂದವರು ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ಯುವತಿ ನೇಣಿಗೆ ಶರಣು, ಯುವಕನ ಮನೆಗೆ ಬೆಂಕಿ – ಪತಿಯನ್ನ ಬಿಟ್ಟು ಇನಿಯನ ಜೊತೆ ಮದ್ವೆ

  • ನರೇಗಾ ಯೋಜನೆಯಡಿ ಗುಲಾಬಿ ಬೆಳೆದು 5 ಲಕ್ಷ ರೂ. ಆದಾಯ

    ನರೇಗಾ ಯೋಜನೆಯಡಿ ಗುಲಾಬಿ ಬೆಳೆದು 5 ಲಕ್ಷ ರೂ. ಆದಾಯ

    ಧಾರವಾಡ: ಜಿಲ್ಲೆಯ ಮನಸೂರು ಗ್ರಾಮದ ರೈತರಾದ ಶಂಕ್ರಪ್ಪ ಸಿದ್ದಪ್ಪ ಅಂಗಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನೆರವು ಪಡೆದು ತಮ್ಮ ಒಂದು ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆದು ಸುಮಾರು 5 ಲಕ್ಷ ರೂ ಗಳಿಗೂ ಅಧಿಕ ಆದಾಯ ಗಳಿಸಿದ್ದಾರೆ.

    ಶಂಕ್ರಪ್ಪ ಸಿದ್ದಪ್ಪ ಅಂಗಡಿ ಅವರು, ತೋಟಗಾರಿಕೆ ಇಲಾಖೆ ಮೂಲಕ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020-21 ನೇ ಸಾಲಿನಲ್ಲಿ ಹೊಸ ತೋಟ ನಿರ್ಮಿಸಿಕೊಳ್ಳಲು 1 ಲಕ್ಷದ 55 ಸಾವಿರ ರೂಪಾಯಿ ಕೂಲಿ ವೆಚ್ಚ ಹಾಗೂ ಸಾಮಗ್ರಿ ಮೊತ್ತವಾಗಿ 43 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಆ ಬಳಿಕ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಲು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 45,349 ರೂಪಾಯಿ ಅನುದಾನವನ್ನು ಪಡೆದು ಗುಲಾಬಿ ಬೆಳೆದು ಜೀವನವನ್ನು ರೂಪಿಸಿಕೊಂಡು ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ಪರಿಸರ ಪ್ರೇಮ – ಬೀಟ್‍ಗೊಂದು ಮರ ಅಭಿಯಾನ

    ಇಲ್ಲಿಯವರೆಗೆ ಪ್ರತಿ ದಿನಕ್ಕೆ 2000 ರಿಂದ 2,500 ಹೂಗಳನ್ನು ಕಟಾವು ಮಾಡಿರುವ ಶಂಕ್ರಪ್ಪ ಸಿದ್ದಪ್ಪ ಅಂಗಡಿಯವರು, ಅದರಲ್ಲಿ ಸುಮಾರು 6 ಲಕ್ಷ ರೂ. ಮೌಲ್ಯದ ಉತ್ಪನ್ನ ಪಡೆದಿದ್ದಾರೆ. ಮೊದಲನೇ ವರ್ಷದ ಖರ್ಚು ತೆಗೆದರೂ ಸುಮಾರು 5 ಲಕ್ಷ ರೂ ನಿವ್ವಳ ಆದಾಯ ಪಡೆದಿರುವ ರೈತನನ್ನು ನೋಡಿ, ಇದೇ ಗ್ರಾಮದ ಹಲವು ರೈತರು, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗುಲಾಬಿ ಪ್ರದೇಶ ವಿಸ್ತರಣೆಗೆ ಸಹಾಯಧನವನ್ನು ಪಡೆದುಕೊಂಡಿದ್ದಾರೆ.

  • ಲಿಂಬೆ ಅಭಿವೃದ್ಧಿ ಮಂಡಳಿ ಉತ್ತೇಜನಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ತೋಟಗಾರಿಕೆ ಸಚಿವರಿಗೆ ಮನವಿ

    ಲಿಂಬೆ ಅಭಿವೃದ್ಧಿ ಮಂಡಳಿ ಉತ್ತೇಜನಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ತೋಟಗಾರಿಕೆ ಸಚಿವರಿಗೆ ಮನವಿ

    ವಿಜಯಪುರ: ಇಂಡಿಯಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವತಂತ್ರವಾದ ಕಟ್ಟಡ (ಟ್ರೈನಿಂಗ್ ಸೆಂಟರ್, ಮಾರ್ಕೆಟಿಂಗ್, ಮಣ್ಣು ನೀರು ಪರಿಶೀಲನಾ ಲ್ಯಾಬೋರೆಟರಿ ಕೇಂದ್ರ) ನಿರ್ಮಿಸಲು 5 ಕೋಟಿ ಅನುದಾನ ನೀಡಲು ಹಾಗೂ ಇನ್ನಿತರ ಬೇಡಿಕೆಗಳ ಬಗ್ಗೆ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಶೋಕ್ ಎಸ್ ಅಲ್ಲಾಪೂರ್ ಅವರು ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಆರ್. ಶಂಕರ ಅವರಿಗೆ ಬುಧವಾರ ಬೆಂಗಳೂರನಲ್ಲಿ ಮನವಿ ಸಲ್ಲಿಸಿದ್ದಾರೆ.

    ಭಾರತವು ಲಿಂಬೆ ಹಣ್ಣಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ 3ನೇ ಸ್ಥಾನ ಪಡೆದಿದ್ದು, ಮೊದಲನೇ ಸ್ಥಾನದಲ್ಲಿ ಚೈನಾ ಇದ್ದರೆ, ಎರಡನೇ ಸ್ಥಾನದಲ್ಲಿ ಮೆಕ್ಸಿಕೊ ಇದೆ. ಕರ್ನಾಟಕವು ದೇಶದ ಲಿಂಬೆ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದ್ದು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳು ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಸುಮಾರು 21,660 ಹೆಕ್ಟೆರ್ ಪ್ರದೇಶದಲ್ಲಿ ಲಿಂಬೆ ಬೆಳೆಯನ್ನು ಬೆಳೆಯುತ್ತಿದ್ದು, ಲಿಂಬೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ.

    ಕರ್ನಾಟಕದಲ್ಲಿ ಬೆಳೆಯುವ ಲಿಂಬೆ ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ‘ಖಾಗಜಿ’ ತಳಿಯ ಲಿಂಬೆಯು ಉತ್ತರ ಭಾರತ ಹಾಗೂ ಗಲ್ಫ್ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಲಿಂಬೆ ಬೆಳೆಗಾರರಿಗೆ ಮಾರುಕಟ್ಟೆಯ ಅನಿಶ್ಚಿತ ದರದಿಂದ ಮಧ್ಯವರ್ತಿಗಳ ಹಾವಳಿಯಿಂದ ಹಾಗೂ ನೀರಿನ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದನ್ನೆಲ್ಲ ಮನಗೊಂಡ ಘನತೆಯುಕ್ತ ಕರ್ನಾಟಕ ಸರಕಾರ 2017 ರಲ್ಲಿ ಲಿಂಬೆ ಬೆಳೆಗಾರರಿಗೆ ಅನುಕೂಲವಾಗಲು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯನ್ನು ಇಂಡಿಯಲ್ಲಿ ಸ್ಥಾಪಿಸಿದ್ದು, ಸದರಿ ಮಂಡಳಿಯ ಬೇಡಿಕೆಗಳು ಈ ಕೆಳಗಿನಂತೆ ಮಾನ್ಯ ಸಚಿವರ ಗಮನಕ್ಕೆ ತಂದಿದ್ದಾರೆ.

    * ಲಿಂಬೆ ಹಣ್ಣನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಿ, ಲಿಂಬೆ ಬೆಳೆಗಾರರನ್ನು ಪ್ರೋತ್ಸಾಹಿಸಬೇಕು.
    * ಇಂಡಿ, ಸಿಂಧಗಿ ಮತ್ತು ಬಿಜಾಪುರ ತಾಲ್ಲೂಕಿಗೆ ಒಂದರಂತೆ ಪ್ರತ್ಯೇಕವಾಗಿ ಮೂರು ಶಿಥಲ ಘಟಕಗಳನ್ನು ನಿರ್ಮಿಸುವುದು.
    * ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಹಾಪ್‍ಕಾಮ್ಸ್ ಮಳಿಗೆಗಳನ್ನು ಸ್ಥಾಪಿಸುವುದು.
    * ಇಂಡಿಯಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವತಂತ್ರವಾದ ಕಟ್ಟಡ (ಟ್ರೈನಿಂಗ್ ಸೆಂಟರ್, ಮಾರ್ಕೆಟಿಂಗ್, ಮಣ್ಣು ನೀರು ಪರಿಶೀಲನಾ ಲ್ಯಾಬೋರೆಟರಿ ಕೇಂದ್ರ) ನಿರ್ಮಿಸಲು 5.00 ಕೋಟಿ ಅನುದಾನ ನೀಡುವುದು.
    * ಇಂಡಿ, ಸಿಂಧಗಿ ಮತ್ತು ವಿಜಯಪುರ ತಾಲೂಕಿಗಳಿಗೆ ಪ್ರೋಸೆಸಿಂಗ್ ಘಟಕಗಳನ್ನು ನಿರ್ಮಿಸಲು ತಲಾ 20 ಎಕರೆಯಂತೆ ಸರ್ಕಾರದ ಜಮೀನು ನೀಡುವುದು.
    * ವಿಜಯಪುರ ಜಿಲ್ಲೆಯ ಲಿಂಬೆ ಹಣ್ಣು ವಿಶೇಷ ಗುಣವನ್ನು ಹೊಂದಿದ್ದು, ಕೆಲವೇ ದಿನಗಳಲ್ಲಿ ಜಿ.ಐ. ಟ್ಯಾಗ್ ಹೊಂದಲಿದ್ದು, ವಿಶ್ವವ್ಯಾಪ್ತಿ ಪರಿಚಯಿಸಲಿದೆ. ಇದರ ಉಪ ಉತ್ಪನ್ನಗಳ ಮೌಲವರ್ದಿತ ಬೆಲೆ ಸಿಗಲು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಬಿಸಿಯೂಟ, ಶಾಲಾಕಾಲೇಜುಗಳ ಹಾಸ್ಟೆಲ್ ಹಾಗೂ ರಾಜ್ಯದ ರೇಷನ್ ಪಡಿತರಿದಾರರಾದ ಎ.ಪಿ.ಎಲ್, ಹಾಗೂ ಬಿ.ಪಿ.ಎಲ್. ಕಾರ್ಡ್‍ದಾರರಿಗೆ ಪಿಕಲ್ ಇಂಡಸ್ಟ್ರೀಸ್‍ಗಳನ್ನು ನಿರ್ಮಿಸಿ, ಇಂದಿನ ಕೊರೊನಾಗೆ ಔಷಧಿಯ ಬೂಸ್ಟರ್ ರೀತಿಯಲ್ಲಿ ಬಳಸಿ, ಲಿಂಬೆ ಬೆಳೆಗಾರರಿಗೆ ಲಾಭ ಸಿಗುವಂತೆ ತಕ್ಷಣವೇ ಕ್ರಮಕೈಗೊಳ್ಳುವುದು.
    * ರಬ್ಬರ್, ಕಾಫಿ, ತೆಂಗು, ಮಾವು, ಸಾಂಬರ್ ಅಭಿವೃದ್ಧಿ ಮಂಡಳಿಯಂತೆ ಸಮಾನ ಸ್ಥಾನಮಾನವನ್ನು ನೀಡಿ, ಕಂಪನಿ ಆಕ್ಟ್ ನಲ್ಲಿ ರಿಜಿಸ್ಟರ್ ಮಾಡಿಸಿ, ಪ್ರತ್ಯೇಕ ಕಾಯ್ದೆಯನ್ನು ಪಾಸ್ ಮಾಡಿಸಿ, ವಿಶೇಷ ಸೌಲಭ್ಯಗಳನ್ನು ದೊರಕುವಂತೆ ಆಗಬೇಕು.
    * ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ (ODOP) ಒಂದು ಜಿಲ್ಲೆ ಒಂದು ಬೆಳೆ ಕಿರು ಉದ್ದಿಮೆದಾರರಿಗೆ, ಸಣ್ಣ ಗುಡಿಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಿ ಸರ್ಕಾರದಿಂದಲೂ ಆರ್ಥಿಕ ಸಹಾಯ ನೀಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು.
    * ಪ್ರಸ್ತುತ ವರ್ಷ 2021-22ನೇ ಸಾಲಿಗೆ 500 ಲಕ್ಷಗಳ ಅನುದಾನ ನೀಡಿದ್ದಲ್ಲಿ, ಲಿಂಬೆ ಬೆಳೆಗಾರರಿಗೆ KSOCA ಸಂಸ್ಥೆ ವತಿಯಿಂದ ಸಾವಯವ ಪ್ರಮಾಣೀಕರಣ ಪತ್ರ, ಸಹಾಯಧನ ರೂಪದಲ್ಲಿ Citrus Special, ಸಣ್ಣ ಪ್ರಮಾಣದ ಸತ್ಯೋತ್ಪಾದನೆ ಘಟಕಗಳು, FPO ಗಳ ರಚನೆ, ಯಾಂತ್ರಿಕರಣ, ಲಿಂಬೆ ಬೆಳೆಯ ಪ್ರಾತ್ಯಕ್ಷತೆ, ಪ್ರಾಥಮಿಕ ಸಂಸ್ಕರಣಾ ಘಟಕ / ಮೌಲ್ಯವರ್ಧನಾ ಘಟಕ ನಿರ್ಮಿಸಿಕೊಳ್ಳುವವರಿಗೆ ಸಹಾಯಧನ, ಲಿಂಬೆ ಖರೀದಿದಾರರ ಮತ್ತು ಮಾರಾಟಗಾರರ ಮೇಳ, ರೈತರಿಗೆ ಒಳ ರಾಜ್ಯ ಮತ್ತು ಹೊರ ರಾಜ್ಯ ಪ್ರವಾಸ ಹಾಗೂ ಲಿಂಬೆ ಬೆಳೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಧನಸಹಾಯ ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವುದು ಎಂದು ಅಶೋಕ್.ಎಸ್ ಅಲ್ಲಾಪೂರ್ ಅವರು ಮನವಿ ಮೂಲಕ ಕೋರಿದ್ದಾರೆ.

    ಇಂಡಿ ನಿಂಬೆಹಣ್ಣಿನ ವಿಶೇಷತೆ ಏನು?
    ಇಂಡಿ ತಾಲೂಕಿನಲ್ಲಿ ಬೆಳೆಯಲಾಗುತ್ತಿರುವ ನಿಂಬೆ ಹಣ್ಣಲ್ಲಿ ರಸ ಹೆಚ್ಚು. ವಾರಗಟ್ಟಲೆ ಇಟ್ಟರೂ ಒಣಗುವುದಿಲ್ಲ ಮತ್ತು ಹಾಳಾಗುವುದಿಲ್ಲ. ಈ ನಿಂಬೆಯನ್ನು ಬೇರೆ ಕಡೆ ಬೆಳೆದರೂ ಇಲ್ಲಿನ ಗುಣಮಟ್ಟ, ವಿಶೇಷತೆ ಇರುವುದಿಲ್ಲ. ಈ ಪರಿಸರದ ಮಣ್ಣು ಮತ್ತು ಹವಾಗುಣದಿಂದ ಗುಣಮಟ್ಟದ ನಿಂಬೆ ಬೆಳೆಯಲಾಗುತ್ತದೆ. ಇದನ್ನೂ ಓದಿ:ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

     

  • ಜಮೀನಿನಲ್ಲಿ ಕುಂಟೆ ಎಳೆದ ರೈತ ಹುಡುಗಿಯರು -ಎತ್ತುಗಳನ್ನು ಕೊಡುಗೆ ನೀಡಿದ ನಾಗರಾಜ್ ಛಬ್ಬಿ

    ಜಮೀನಿನಲ್ಲಿ ಕುಂಟೆ ಎಳೆದ ರೈತ ಹುಡುಗಿಯರು -ಎತ್ತುಗಳನ್ನು ಕೊಡುಗೆ ನೀಡಿದ ನಾಗರಾಜ್ ಛಬ್ಬಿ

    ಹುಬ್ಬಳ್ಳಿ: ಎತ್ತುಗಳಿಲ್ಲದೇ ತನ್ನ ಇಬ್ಬರು ಹೆಣ್ಣು ಮಕ್ಕಳ ಕೈಯಲ್ಲಿ ಕುಂಟೆ ಎಳೆಸಿದ್ದ ರೈತನಿಗೆ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‍ಸಿ ನಾಗರಾಜ್ ಛಬ್ಬಿ ಎತ್ತುಗಳನ್ನು ಕೊಡುಗೆ ನೀಡುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ. ಇದನ್ನೂ ಓದಿ:  ಟೋಕಿಯೋ ಒಲಿಂಪಿಕ್ಸ್‌ಗೆ ರೈಲ್ವೇ ಕಲೆಕ್ಟರ್ ಆಯ್ಕೆ

    ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಕಲ್ಲಪ್ಪ ಜಾವೂರ ಎಂಬುವರಿಗೆ ಎತ್ತುಗಳನ್ನು ಸಿದ್ದಾರೂಢ ಮಠದ ಆವರಣದಲ್ಲಿ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎತ್ತುಗಳು ಇಲ್ಲದ್ದಕ್ಕೆ ಕಲ್ಲಪ್ಪ ತನ್ನ ಇಬ್ಬರು ಹೆಣ್ಣು ಮಕ್ಕಳ ಹೆಗಲ ಮೇಲೆ ಕುಂಟೆ ಹಾಕಿ ಹೊಲವನ್ನು ಹರಗಿ ಜಮೀನು ಹದಗೊಳಿಸುವ ದೃಶ್ಯ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ನನ್ನ ಗಮನಕ್ಕೆ ಬಂದಿತು. ಕೃಷಿಕನಿಗೆ ಎತ್ತುಗಳನ್ನು ಕೊಡಿಸಬೇಕೆಂದು ನಿರ್ಧಾರ ಮಾಡಿ ಕಾರ್ಯಕರ್ತರ ಮೂಲಕ ಕಲ್ಲಪ್ಪನಿಗೆ ತಿಳಿಸಲಾಯಿತು. ಅದಕ್ಕೆ ಅವರ ಕುಟುಂಬದವರು ಸಹಮತ ವ್ಯಕ್ತಪಡಿಸಿದರು. ಆ ಹಿನ್ನೆಲೆಯಲ್ಲಿ ಸಿದ್ದಾರೂಢರ ಸನ್ನಿದಾನದಲ್ಲಿ ಎತ್ತುಗಳನ್ನು ಕೊಡಬೇಕೆಂದು ಸಂಕಲ್ಪ ಮಾಡಿಕೊಳ್ಳಲಾಗಿತ್ತು. ಅದರಂತೆ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಅವರ ಮೂಲಕ ರೈತನಿಗೆ ಎತ್ತುಗಳನ್ನ ಕೊಡುಗೆ ನೀಡಲಾಗಿದೆ ಎಂದು ಮಾಜಿ ಶಾಸಕ ನಾಗರಾಜ್ ಛಬ್ಬಿ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಮುಖಂಡರಾದ ಅನಿಲ ಪಾಟೀಲ್, ಅಲ್ತಾಫ ಹಳ್ಳೂರ, ನಾಗರಾಜ ಗೌರಿ, ದೀಪಾ ಗೌರಿ, ಕಿರಣ ಪಾಟೀಲ್, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಸೇರಿದಂತೆ ಹಲವರು ಇದ್ದರು.

  • ಬಾವಿ ಕಳೆದಿದೆ – ದೂರು ದಾಖಲಿಸಿದ ರೈತ

    ಬಾವಿ ಕಳೆದಿದೆ – ದೂರು ದಾಖಲಿಸಿದ ರೈತ

    ಚಿಕ್ಕೋಡಿ: ಹಣ, ಬಂಗಾರ ಸೇರಿದಂತೆ ವಿವಿಧ ವಸ್ತುಗಳು ಕಳೆದುಕೊಂಡರೆ ಅಥವಾ ಕಳ್ಳತನವಾದರೇ ಜನರು ನಮ್ಮ ಅಮೂಲ್ಯ ವಸ್ತುಗಳನ್ನ ಹುಡುಕಿಕೊಡಿ ಎಂದು ಪೊಲೀಸರಲ್ಲಿ ದೂರು ಸಲ್ಲಿಸುವದು ಸಾಮಾನ್ಯ. ಆದರೆ ಇಲ್ಲೊಂದು ರೈತ ಕುಟುಂಬ ನಮ್ಮ ಜಮೀನಿನಲ್ಲಿನ ಬಾವಿ ಕಳೆದು ಹೋಗಿದೆ ಹುಡುಕಿಕೊಡುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಾವಿನಹೊಂಡ ಗ್ರಾಮದಲ್ಲಿ ಬಾವಿ ಕಳೆದು ಹೋಗಿದೆ ಎಂದು ಗ್ರಾಮದ ರೈತ ಮಲ್ಲಪ್ಪ ಕುಲಗೋಡೆ ದೂರು ನೀಡಿದ್ದಾರೆ. ಜಮೀನಿನಲ್ಲಿ ಬಾವಿ ತೋಡದೆ ರಾಯಬಾಗ ತಾಲೂಕಿನ ಬೆಂಡಿವಾಡ ಗ್ರಾಮ ಪಂಚಾಯತಿಯ ಅಧಿಕಾರಿಗಳು ನಕಲಿ ಬಿಲ್ ತೆಗೆದಿದ್ದಾರೆ. ಇದರಿಂದ ಮಾಹಿತಿ ತಿಳಿದ ರೈತ ಫೇಕ್ ಬಿಲ್ ಹಚ್ಚಿ ತೆಗೆದಿರುವ ಬಾವಿಯನ್ನ ಹುಡುಕಿಕೊಡುವಂತೆ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.

    ರೈತ ಮಲ್ಲಪ್ಪ ಕುಲಗುಡೆ ಗದ್ದೆಯ ಸರ್ವೆ ನಂಬರ್ 21/1 ರಲ್ಲಿ 77 ಸಾವಿರ ರೂ. ಖರ್ಚಿನಲ್ಲಿ ಬಾವಿ ತೋಡಿದ್ದಾಗಿ ಮಹಾತ್ಮಾ ಗಾಂದಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಕಾರ್ಮಿಕರ ಹೆಸರಿನಲ್ಲಿ ಹಣ ಪೀಕಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೇ 40 ವರ್ಷದ ಹಿಂದೆಯೇ ಈ ಜಮೀನಿನಲ್ಲಿ ಬಾಸವಿ ತೋಡಲಾಗಿತ್ತು. ಆದರೆ ಈಗ ಮನರೇಗಾ ಯೋಜನೆಯಲ್ಲಿ ಎಪ್ರಿಲ್ 30 ರಂದು ಹೊಸ ಕಾಮಗಾರಿ ಎಂದು ಕೈಗೆತ್ತಿಕೊಂಡು ಮೇ 13 ರ ವರೆಗೆ ಕಾಮಗಾರಿ ನಡೆಸಲಾಗಿದೆ ಎಂದು ಬಿಲ್ ತೆಗೆಯಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ನಟ ದುನಿಯಾ ವಿಜಯ್ ತಾಯಿ ಆರೋಗ್ಯ ಗಂಭೀರ

    ನಕಲಿ ಬಿಲ್ ತೆಗೆದು ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಕೆಲವು ಮಧ್ಯವರ್ತಿಗಳು ಹಣವನ್ನ ಲೂಟಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಇಲ್ಲಿನ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನ ಕೇಳಿದರೇ ನಾನು ಈ ಪಂಚಾಯತಿಗೆ ಬಂದು ಸ್ವಲ್ಪ ದಿನಗಳಾದವು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಅಂತಾರೆ. ಅಧಿಕಾರಿಗಳ ಲಂಚಬಾಕತನಕ್ಕೆ ಬೇಸತ್ತು ಹೋದ ಮಲ್ಲಪ್ಪ ಕುಲಗುಡೆ ಎಂಬ ರೈತ ಈಗ ಸದ್ಯ ತನ್ನ ಜಮೀನಿನಲ್ಲಿ ನಕಲಿಯಾಗಿ ನಿರ್ಮಿಸಿರುವ ಕಳೆದು ಹೋದ ಬಾವಿ ಹುಡುಕಿ ಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ ಎನ್ನುವುದೇ ರೈತರ ಆಗ್ರಹವಾಗಿದೆ. ಇದನ್ನೂ ಓದಿ: ಈ ದ್ವೇಷ ಹಿಂದುತ್ವದ ಕೊಡುಗೆ: ಭಾಗವತ್ ಹೇಳಿಕೆಗೆ ಓವೈಸಿ ಕಿಡಿ

  • ಮಗನ ಸೈಕಲಿನಲ್ಲೇ ಹೊಲ ಉಳುಮೆ ಮಾಡಿದ ರೈತ

    ಮಗನ ಸೈಕಲಿನಲ್ಲೇ ಹೊಲ ಉಳುಮೆ ಮಾಡಿದ ರೈತ

    ಚೆನ್ನೈ: ಕೊರೊನಾ ವೈರಸ್ ನಿಂದ ದೇಶದಲ್ಲಿ ರೈತರು ಕೂಡ ನಷ್ಟ ಅನುಭವಿಸಿದ್ದಾರೆ. ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಕೂಡ ತಮ್ಮ ಆದಾಯ ಕಳೆದುಕೊಂಡಿದ್ದಾರೆ. ಇದಕ್ಕೆ ತಮಿಳುನಾಡಿನ ತಿರುಥಾನಿ ಜಿಲ್ಲೆಯ ಅಗೂರ್ ಗ್ರಾಮದ ರೈತ ಸಾಕ್ಷಿ.

    ಹೌದು. ರೈತ ತನ್ನ ಹೊಲದಲ್ಲಿ ಉಳುಮೆ ಮಾಡಲು ಮಗನ ಸೈಕಲನ್ನು ಬಳಸುವ ಮೂಲಕ ಸುದ್ದಿಯಾಗಿದ್ದಾರೆ. ಈ ರೈತ ತನ್ನ ಮಗನ ಸೈಕಲ್ ಅನ್ನು ನೇಗಿಲನ್ನಾಗಿ ಪರಿವರ್ತಿಸಿ ತನ್ನ ಹೊಲವನ್ನು ಉಳುಮೆ ಮಾಡಿದ್ದಾರೆ.

    ನಾಗರಾಜ್ (37) ಮತ್ತು ಅವರ ಸಹೋದರ ತಮ್ಮ ತಂದೆಯ ಹೊಲವನ್ನು ನೋಡಿಕೊಳ್ಳುತ್ತಿದ್ದಾರೆ. ಭತ್ತವನ್ನು ಬೆಳೆಸಿದ ನಂತರ ಅವರು ನಷ್ಟ ಅನುಭವಿಸಿದರು. ಹೀಗಾಗಿ ದೇವಾಲಯಗಳಲ್ಲಿ ಅರ್ಪಣೆಗಾಗಿ ಬಳಸುವ ಸಮ್ಮಂಗಿ ಹೂಗಳನ್ನು ಬೆಳೆಯಲು ನಿರ್ಧರಿಸಿದರು.

    ಕುಟುಂಬವು ಸಾಲವನ್ನು ತೆಗೆದುಕೊಂಡು ಆರು ತಿಂಗಳ ಕಾಲ ಯಾವುದೇ ಇಳುವರಿ ಇಲ್ಲದೆ ಕೆಲಸ ಮಾಡಿತು. ಸಸ್ಯಗಳು ಪಕ್ವವಾಗಲು ಕಾಯುತ್ತಿದ್ದವು. ಈ ಮಧ್ಯೆ ಸುಗ್ಗಿಯ ಸಮಯದಲ್ಲಿ ಕೋವಿಡ್ -19 ಹರಡುವುದನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಲಾಕ್‍ಡೌನ್ ವಿಧಿಸಲಾಯಿತು. ಈ ಹಿನ್ನೆಲೆಯಲ್ಲಿ ಮದುವೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದ ನಾಗರಾಜ್ ಮತ್ತು ಅವರ ಕುಟುಂಬಕ್ಕೆ ನಷ್ಟ ಉಂಟಾಯಿತು.

    ಜೀವನ ನಡೆಸಲು ಕುಟುಂಬವು ಒಂದು ವರ್ಷಕ್ಕೂ ಹೆಚ್ಚು ಕಾಲ ಕಷ್ಟಪಟ್ಟಿತು. ಎಲ್ಲಾ ಉಳಿತಾಯವನ್ನು ಬರಿದಾಗಿತ್ತು. ತನ್ನ ತಂದೆಯ ಜಮೀನನ್ನು ಹೊರತುಪಡಿಸಿ ಜೀವನ ಸಾಗಿಸಲು ಬೇರೇನೂ ಆದಾಯದ ಮೂಲ ಇಲ್ಲ. ಹೀಗಾಗಿ ನಾಗರಾಜ್ ಮತ್ತೆ ಸಮ್ಮಂಗಿಯನ್ನು ಬೆಳೆಸಲು ನಿರ್ಧರಿಸಿದರು. ತಮಿಳುನಾಡು ಸರ್ಕಾರ ನೀಡಿದ ಮಗನ ಸೈಕಲ್ ಅನ್ನು ನೇಗಿಲಿನಂತೆ ಪರಿವರ್ತಿಸಿದರು.

    ನಾನು ನನ್ನ ಮಗನ ಸೈಕಲ್ ಅನ್ನು ಬಳಸುತ್ತಿದ್ದೇನೆ. ನನಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಆದ್ದರಿಂದ ನಾನು ಇದನ್ನು ಮಾಡಬೇಕಾಗಿತ್ತು ಎಂದು ನಾಗರಾಜ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆನ್‍ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ 11 ವರ್ಷದ ಮಗ ತಮ್ಮ ತಂದೆ ಮತ್ತು ಅಜ್ಜನಂತೆ ಕೃಷಿಯನ್ನು ಇಷ್ಟಪಡುತ್ತಾನೆ. ತಂದೆ ಅಥವಾ ಚಿಕ್ಕಪ್ಪನ ಜೊತೆ ಕೆಲಸದಲ್ಲಿ ಕೈ ಜೋಡಿಸುತ್ತಾನೆ ಎಂದರು. ಇದನ್ನೂ ಓದಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಆಸ್ಪತ್ರೆಗೆ ದಾಖಲು

    ನಾವು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಈ ವಿಧಾನವನ್ನು ಕಂಡುಹಿಡಿದಿದ್ದೇವೆ. ಲಾಕ್ ಡೌನ್ ಸಮಯದಲ್ಲಿ, ನಾವು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೇವೆ. ಈ ಭೂಮಿ ಈಗ ನಮ್ಮಲ್ಲಿದೆ. ಆದ್ದರಿಂದ ನಾವು ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ನಾಗರಾಜ್ ಸಹೋದರ ಪಾಂಡಿಯಾ ಹೇಳಿದರು.