Tag: farmer

  • ಗಾಂಜಾ ಬೆಳೆಗೆ ಅನುಮತಿ ಕೋರಿದ ರೈತ

    ಗಾಂಜಾ ಬೆಳೆಗೆ ಅನುಮತಿ ಕೋರಿದ ರೈತ

    ಮುಂಬೈ: ಗಾಂಜಾ ಬೆಳೆಗೆ ಅನುಮತಿ ಕೋರಿದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮೋಹಲ್ ತೆಹ್ಸಿಲ್‍ನ ಕೃಷಿಕರೊಬ್ಬರು ಸಖತ್ ಸುದ್ದಿಯಲ್ಲಿದ್ದಾರೆ.

    ಕೃಷಿಯ ಅನಿಲ್ ಪಾಟೀಲ್ ಇಂತಹ ಒಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಕಾರಣ ಮಾತ್ರ ವಿಚಿತ್ರವಾಗಿದೆ. ಯಾವುದೇ ಬೆಳೆಗೆ ನಿಗದಿತ ಬೆಲೆಯಿಲ್ಲ. ರೈತರು ಭಾರೀ ನಷ್ಟದಲ್ಲಿದ್ದಾರೆ. ಮಾದಕ ದ್ರವ್ಯ ಗಾಂಜಾ ಬೆಳೆಗೆ ಉತ್ತಮ ಬೆಲೆಯಿದೆ. ಅದನ್ನು ಬೇಳೆಯಲು ಅನುಮತಿ ಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:  ಕಾಬೂಲ್ ದಾಳಿಯ ಹೊಣೆ ಹೊತ್ತ ISKP ಸಂಘಟನೆ

    ಅನುಮತಿ ನೀಡಲು ಸೆ.15ರವರೆಗೆ ಸಮಯವನ್ನು ಕೊಡುತ್ತೇನೆ. ಕೊಡಲಿಲ್ಲವಾದರೆ ಸೆ.16ರಂದು ಗಾಂಜಾ ಕೃಷಿಯನ್ನು ಆರಂಭಿಸುತ್ತೇನೆ. ಮುಂದಿನ ಘಟನೆಗಳಿಗೆ ನಾನು ಹೊಣೆಗಾರನಲ್ಲ ಎಂದು ಹೇಳಿದ್ದಾರೆ. ಈ ಅರ್ಜಿಯನ್ನು ಜಿಲ್ಲಾಡಳಿತ ಪೊಲೀಸರಿಗೆ ತಲುಪಿಸಿದೆ. ಪೊಲೀಸರು ಈ ಪ್ರಕರಣವನ್ನು ಜನಪ್ರಿಯತೆಗೆಗಾಗಿ ಮಾಡಿರುವ ನಾಟಕವಾಗಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಗಾಂಜಾವನ್ನು ಬೆಳೆಯಲು ನಿಷೇಧವಿದೆ.

  • ರೈತರಿಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ಒದಗಿಸಲಾಗುವುದು: ಮುನಿರತ್ನ

    ರೈತರಿಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ಒದಗಿಸಲಾಗುವುದು: ಮುನಿರತ್ನ

    ಕೋಲಾರ: ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಸಾಗಾಣಿಕೆಗೆ ಕಡಿಮೆ ವೆಚ್ಚದಲ್ಲಿ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ರೈತರಿಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ತೋಟಗಾರಿಕೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು.

    ಇಂದು ಶ್ರೀನಿವಾಸಪುರ ನಗರದ ಪುರಸಭಾ ಕಾರ್ಯಾಲಯ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದ ಅವರು, ಕೋಲಾರ ಬೆಂಗಳೂರಿಗೆ ಸಮೀಪದ ಜಿಲ್ಲೆಯಾಗಿರುವುದರಿಂದ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಪಡಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಹೆಚ್ಚಿನ ಕೊಡುಗೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾವಂತರು ಇದ್ದಾರೆ. ವಿದ್ಯಾಭ್ಯಾಸಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಮಹತ್ವವಿದೆ. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಇಬ್ಬರು ವಿದ್ಯಾರ್ಥಿನಿಯರಾದ ಪೂರ್ವಿ.ಕೆ ಬೈರೇಶ್ವರ ವಿದ್ಯಾನಿಕೇತನ ಶಾಲೆ ಮತ್ತು ವರ್ಷಿಣಿ. ಸೆಂಟ್ ತೇರಿಸಾ ಶಾಲೆ ರಾಬರ್ಟ್‍ಸನ್ ಪೇಟೆ ಅವರಿಗೆ ಸಚಿವರು ಲ್ಯಾಬ್ ಟ್ಯಾಪ್‍ಗಳನ್ನು ನೀಡಿದರು.  ಇದನ್ನೂ ಓದಿ: ಗೃಹ ಸಚಿವರ ಮೇಲೆ ರೇಪ್ ಮಾಡಿರುವವರನ್ನು 376 ಸೆಕ್ಷನ್ ಕೇಸ್ ಹಾಕಿ ಬಂಧಿಸಲಿ: ಡಿ.ಕೆ ಶಿವಕುಮಾರ್

    ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆಯನ್ನು ಎದುರಿಸಲು ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಮ್ಲಜನಕದ ಕೊರತೆಯನ್ನು ನೀಗಿಸಲು ನಗರ ಪ್ರದೇಶದಲ್ಲಿ ಹೆಚ್ಚಿನ ಮರಗಳನ್ನು ಬೆಳಸಬೇಕು. ಕನಿಷ್ಠ ಮನೆಗೆ 2 ಮರ ಬೆಳಸಬೇಕು. ರಸ್ತೆ, ಚರಂಡಿಗಳನ್ನು ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.

    ಶ್ರೀನಿವಾಸಪುರ ತಾಲೂಕು ಮಾವಿನ ಹಣ್ಣಿಗೆ ವಿಶ್ವ ಪ್ರಸಿದ್ಧಿಯಾಗಿದೆ. ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರ 10 ಸಾವಿರ ಎಫ್.ಇ.ಓ ಸ್ಥಾಪಿಸುವ ಉದ್ದೇಶ ಹೊಂದಿದೆ. ರೈತರು ಬೆಳೆದ ಟೊಮೊಟೊ ಮತ್ತು ಮಾವಿನ ಹಣ್ಣುಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ

    ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಆರ್.ರಮೇಶ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಾಲೋಚನೆಯಿಂದ ನಗರದಲ್ಲಿ ಆಸ್ಪತ್ರೆ. ಶಾಲೆ, ಕಾಲೇಜು, ಬಸ್ ನಿಲ್ದಾಣ, ಮಾರುಕಟ್ಟೆ, ಒಳಚರಂಡಿ ವ್ಯವಸ್ಥೆ, ಕಟ್ಟಡಗಳು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕ್ರೀಡಾಂಗಣದಲ್ಲಿ ಈಜುಕೊಳ, ಅಥ್ಲೆಟಿಕ್ ಹಾಗೂ ವಿವಿಧ ಕ್ರೀಡೆಗೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತಿದೆ ಎಂದರು.

    ಮಾಂಸದ ಮಾರುಕಟ್ಟೆ ವಿದೇಶದ ಮಾದರಿಯಲ್ಲಿ ಏರ್ ಕಂಡೀಷನ್ ಮಾರುಕಟ್ಟೆ ನಿರ್ಮಿಸಲಾಗುತ್ತದೆ. ದೇವಸ್ಥಾನ, ಸ್ಮಶಾನ, ಪ್ರಾರ್ಥನಾ ಮಂದಿರಗಳು ಹಾಗೂ ಬಡವರಿಗೆ ಮನೆಗಳನ್ನು ನಿರ್ಮಿಸಲಾಗಿದೆ. ಇಂದಿರಾ ನಗರದ ಲೇಔಟ್‍ನಲ್ಲಿ ಒಂದು ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ – ಕ್ಷಮೆಯಾಚಿಸಿದ ಗೃಹ ಸಚಿವ

    ನಗರ ಪ್ರದೇಶದಲ್ಲಿ ಉನ್ನತ ಮಟ್ಟದ ರಸ್ತೆಗಳನ್ನು ನಿರ್ಮಿಸಲು ಅನುದಾನ ನೀಡುವಂತೆ ಸಚಿವರಲ್ಲಿ ಶಾಸಕರು ಮನವಿ ಮಾಡಿದರು. ಪೌರಕಾರ್ಮಿಕರಿಗೆ ಹಾಗೂ ನಿವೃತ್ತಿ ಹೊಂದಿದ ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.

  • ಮೇಕೆ ಮೇಲೆ ಮೊಸಳೆ ದಾಳಿ – ಗ್ರಾಮಸ್ಥರಲ್ಲಿ ಆತಂಕ

    ಮೇಕೆ ಮೇಲೆ ಮೊಸಳೆ ದಾಳಿ – ಗ್ರಾಮಸ್ಥರಲ್ಲಿ ಆತಂಕ

    ಮಂಡ್ಯ: ಮೊಸಳೆ ದಾಳಿಯಿಂದ ಮೇಕೆ ಸಾವನ್ನಪ್ಪಿದ್ದು ರೈತರಲ್ಲಿ ಆತಂಕ ಮೂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಸಮೀಪದ ವಿರಿಜಾ ನಾಲೆಯ ಬಳಿ ಜರುಗಿದೆ.

    CROCODILE

    ಪಾಲಹಳ್ಳಿ ಗ್ರಾಮದ ಚಿಕ್ಕಣ್ಣ ಎಂಬ ರೈತರಿಗೆ ಸೇರಿದ ಮೇಕೆಯ ಮೇಲೆ ಇಂದು ಬೆಳಗ್ಗೆ ಮೊಸಳೆ ದಾಳಿ ನಡೆಸಿದೆ. ಈ ವೇಳೆ ಅಕ್ಕ-ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಮೊಸಳೆಗೆ ದೊಣ್ಣೆಯಿಂದ ಹೊಡೆದು ಮೇಕೆಯನ್ನು ಬಿಡಿಸಿದ್ದಾರೆ. ನಂತರ ಮೊಸಳೆ ವಿರಿಜಾ ನಾಲೆಯ ಒಳ ಭಾಗಕ್ಕೆ ಹೊರಟು ಹೋಗಿದೆ. ಇದನ್ನೂ ಓದಿ:ಶತಕ ಸಿಡಿಸದೇ 50 ಇನ್ನಿಂಗ್ಸ್ ಕಳೆದ ವಿರಾಟ್ ಬ್ಯಾಟ್

    ಮೊಸಳೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮೇಕೆ ಸಾವನ್ನಪ್ಪಿದ್ದೆ. ಕಳೆದ ಎರಡು ದಿನಗಳ ಹಿಂದೆಯೂ ಇದೇ ಮೊಸಳೆ ಚಿಕ್ಕಣ್ಣ ಅವರ ಒಂದು ಮೇಕೆಯನ್ನು ತಿಂದು ಹಾಕಿತ್ತು. ಇದೀಗ ಮತ್ತೊಂದು ಮೇಕೆಯ ಮೇಲೆ ಮೊಸಳೆ ದಾಳಿ ನಡೆಸಿರುವುದು ಸಾಕಷ್ಟು ಆತಂಕ ಉಂಟುಮಾಡಿದೆ. ರಂಗನತಿಟ್ಟು ಪಕ್ಷಿಧಾಮದಿಂದ ಈ ಮೊಸಳೆ ಬಂದಿರುವ ಶಂಕೆಯನ್ನು ರೈತರು ವ್ಯಕ್ತಪಡಿಸುತ್ತಿದ್ದು, ಶೀಘ್ರವೇ ಮೊಸಳೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ರೈತರು ಆಗ್ರಹಿಸುತ್ತಿದ್ದಾರೆ.ಇದನ್ನೂ ಓದಿ:ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಪಂಚಮಸಾಲಿ ಸಮುದಾಯ

  • ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವವರು ರೈತರಲ್ಲ, ಮಧ್ಯವರ್ತಿಗಳು: ಶೋಭಾ ಕರಂದ್ಲಾಜೆ

    ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವವರು ರೈತರಲ್ಲ, ಮಧ್ಯವರ್ತಿಗಳು: ಶೋಭಾ ಕರಂದ್ಲಾಜೆ

    ಚಾಮರಾಜನಗರ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರೇ ಅಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

    ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಚಾಮರಾಜನಗರದಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಹಲವು ತಿಂಗಳಿಂದ ಹೋರಾಟ ಮಾಡುತ್ತಿರುವವರೆಲ್ಲಾ ಮದ್ಯವರ್ತಿಗಳೇ ಹೊರತು ರೈತರಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನ ಭಯೋತ್ಪಾದಕರ ಕೈಗೆ ಹೋಗುವುದು ಒಳ್ಳೆಯದಲ್ಲ: ಶೋಭಾ ಕರಂದ್ಲಾಜೆ

    ಎಪಿಎಂಸಿ ಲಾಭಿಯ ಮದ್ಯವರ್ತಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ, ಎಪಿಎಂಸಿಗಳಲ್ಲಿ ಯಾರಿಗೆ ಲಾಭ ಸಿಗುತ್ತಿತ್ತೋ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಪಂಜಾಬ್ ಮತ್ತು ಹರಿಯಾಣ ರಾಜ್ಯ ಗಳಲ್ಲಿ ಯಾರು ಹೆಚ್ಚು ಕಮಿಷನ್ ಹೊಡೆಯುತ್ತಿದ್ದಾರೋ ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

    ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರ್ನಾಟಕದಲ್ಲೂ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ ಎಂದು ಆರೋಪಿಸಿದ ಅವರು ಪ್ರತಿಭಟನೆ ಮಾಡುತ್ತಿರುವವರು ಹೇಳುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ,

  • ಕಿಸಾನ್ ಸಮ್ಮಾನ್ – ರಾಜ್ಯದ 51.19 ಲಕ್ಷ ರೈತರಿಗೆ 1,023 ಕೋಟಿ ಬಿಡುಗಡೆ

    ಕಿಸಾನ್ ಸಮ್ಮಾನ್ – ರಾಜ್ಯದ 51.19 ಲಕ್ಷ ರೈತರಿಗೆ 1,023 ಕೋಟಿ ಬಿಡುಗಡೆ

    ಬೆಂಗಳೂರು: ಪ್ರಸಕ್ತ ಸಾಲಿನ ಕಿಸಾನ್ ಸಮ್ಮಾನ್ ಯೋಜನೆಯಡಿ ಸೋಮವಾರ ಎರಡನೇ ಕಂತಿನಲ್ಲಿ ಕರ್ನಾಟಕ ರಾಜ್ಯದ 51.19 ಲಕ್ಷ ರೈತರಿಗೆ 1,023 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದ್ದು, ಎರಡನೇ ಕಂತಿನಲ್ಲಿ ಬಿಡುಗಡೆಯಾದ ಹಣವನ್ನು ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ.

    ಕರ್ನಾಟಕ ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಫೆ.1 2019 ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರ ವಾರ್ಷಿಕವಾಗಿ 6 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಈ ಅನುದಾನವನ್ನು 2 ಸಾವಿರ ರೂ.ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

    ಇಲ್ಲಿಯವರೆಗೆ 55.06 ಲಕ್ಷ ರೈತ ಕುಟುಂಬಗಳು 1 ಕಂತು ಪಡೆಯುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದು, 2019ರ ಮಾರ್ಚ್ ನಿಂದ ಜುಲೈ 2021 ರವರೆಗೆ ಕೇಂದ್ರ ಸರ್ಕಾರದಿಂದ ಒಟ್ಟು 6,940.07 ಕೋ.ರೂಗಳ ಆರ್ಥಿಕ ಸಹಾಯಧನವನ್ನು ನೀಡಲಾಗಿರುತ್ತದೆ. ಇದನ್ನೂ ಓದಿ : ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ: ಅರಗ ಜ್ಞಾನೇಂದ್ರ

    2021 ಪ್ರಸಕ್ತ ವರ್ಷದ ಎರಡನೇ ಕಂತಿನಲ್ಲಿ 51.19 ಲಕ್ಷ ರೈತರಿಗೆ 1,023 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಅನುಮೋದಿಸಲ್ಪಟ್ಟ ರೈತರಿಗೆ ಎರಡು ಕಂತುಗಳಲ್ಲಿ ವರ್ಷಕ್ಕೆ 4 ಸಾವಿರ ರೂ.ನಂತೆ ಆರ್ಥಿಕ ನೆರವು ವರ್ಗಾವಣೆಗೆ ಆದೇಶ ಹೊರಡಿಸಲಾಗಿದ್ದು, ಇಲ್ಲಿಯವರೆಗೆ 2,849.16 ಕೋಟಿ ರೂ.ಗಳ ಆರ್ಥಿಕ ಸಹಾಯಧನವನ್ನು ನೀಡಲಾಗಿರುತ್ತದೆ  ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

    ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಪಾವತಿ ಮಾಡಲಾಗುತ್ತಿದ್ದು, ದೇಶದಲ್ಲಿ ಎಲ್ಲಾ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯವು ಅತಿಹೆಚ್ಚು ಶೇಕಡಾವಾರು ಆಧಾರ್ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರಿಂದ 2020-21 ರಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿಯೂ ದೊರೆತಿದೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

  • ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿ- ರೈತನಿಗೆ ಗಂಭೀರ ಗಾಯ

    ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿ- ರೈತನಿಗೆ ಗಂಭೀರ ಗಾಯ

    ಹಾವೇರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿ ಮಾಡಿದ್ದು, ರೈತ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಡಶಿ ಗ್ರಾಮದ ಬಳಿ ನಡೆದಿದೆ.

    ಗಾಯಗೊಂಡ ರೈತನನ್ನು ಮಹಾವೀರ ಧರ್ಮಪ್ಪ ದಿಪ್ಪಣ್ಣನವರ (55) ಎಂದು ಗುರುತಿಸಲಾಗಿದೆ. ರೈತನ ಮುಖ, ತಲೆ, ಮೈ ಮೇಲೆ ಮನಬಂದಂತೆ ಕಚ್ಚಿ ಕರಡಿ ಗಂಭೀರವಾಗಿ ಗಾಯಗೊಳಿಸಿದೆ. ಜಮೀನಿನಲ್ಲಿ ಕೆಲಸಕ್ಕೆ ಹೋದ ವೇಳೆ ದಾಳಿ ನಡೆಸಿ ಗಾಯಗೊಳಿಸಿದೆ.

    ಕೂಡಲೇ ಗಾಯಾಳು ರೈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೈತನ ಸ್ಥಿತಿ ಗಂಭೀರವಾಗಿದೆ.

  • ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವು

    ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವು

    ಯಾದಗಿರಿ: ಜೆಸ್ಕಾಂ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವನ್ನಪ್ಪಿರುವ ಘಟನೆ ಶೇಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

    ತಾಲ್ಲೂಕಿನ ಶೇಟ್ಟಿಗೇರಿ ಗ್ರಾಮದಲ್ಲಿ ಭೀಮರಾಯ ಜಿನಿಕೇರಿ ರೈತ ಹೊಲದಲ್ಲಿ ಉಳುಮೆ ಮಾಡಿ ಸಂಜೆ ಎತ್ತುಗಳನ್ನು ಬಿಳು ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ 11ಕೆ,ವಿ ವಿದ್ಯುತ್ ಕಂಬ ತಂತಿ ಹರಿದು ಬಿದ್ದ ಪರಿಣಾಮ ಜೋಡೆತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇದನ್ನೂ ಓದಿ: 45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಸುಮಾರು ಎರಡು ತಿಂಗಳ ಹಿಂದೆ ಭೀಮರಾಯ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಸಾಲ ಮಾಡಿ ಎರಡು ಎತ್ತಗಳನ್ನು ಖರೀದಿ ಮಾಡಿದ್ದರು. ರೈತ ಮೊದಲೇ ಕೊರೊನಾದಿಂದ ತತ್ತರಿಸಿ ಕೈಸಾಲ ಮಾಡಿ ಎತ್ತು ಖರೀದಿಸಿ ಕೃಷಿ ಮಾಡಲು ಮುಂದಾಗಿದ್ದರು. ಈಗ ಜೆಸ್ಕಾಂ ಅಧಿಕಾರ ನಿರ್ಲಕ್ಷ್ಯದಿಂದ ರೈತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮನೆಯ ಹಿರಿಮಕ್ಕಳಂತಿದ್ದ ಎತ್ತುಗಳನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • 1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ

    1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ

    – ದಿಲ್ ಖುಷ್ ಕೆಜಿಗೆ 90 ರೂ. ಮಾರಾಟ

    ಚಿಕ್ಕಬಳ್ಳಾಪುರ: ಕೊರೊನಾ ಲಾಕ್‍ಡೌನ್‍ಗೆ ಸಿಲುಕಿ ದ್ರಾಕ್ಷಿಗೆ ಸೂಕ್ತ ಬೆಲೆಯಿಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಬೆಳೆದ ದ್ರಾಕ್ಷಿ ಹಣ್ಣನ್ನು ತಿಪ್ಪೆಗುಂಡಿಗೆ ಸುರಿದು ಮಣ್ಣು ಪಾಲು ಮಾಡಿದ್ದರು. ಆದ್ರೆ ಈಗ ಲಾಕ್‍ಡೌನ್ ಸಡಿಲಿಕೆ ನಂತರ ಜನ ಜೀವನ ಯಥಾಸ್ಥಿತಿಗೆ ಮರಳುತ್ತಿದ್ದಂತೆ, 1 ಕೆಜಿ ದ್ರಾಕ್ಷಿ ಹಣ್ಣಿನ ಬೆಲೆ ಹೆಚ್ಚಾಗಿದೆ. ಇದರಿಂದ ದ್ರಾಕ್ಷಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಚಿಕ್ಕಬಳ್ಳಾಪುರ ಬರದನಾಡಾದ್ರೂ ಇಲ್ಲಿನ ರೈತರು ವಿನೂತನ ತಂತ್ರಜ್ಞಾನ ಹಾಗೂ ಬುದ್ದಿವಂತಿಕೆಯನ್ನು ಬಳಸಿಕೊಂಡು, ತರೇವಾರಿ ಹಣ್ಣು, ತರಕಾರಿ ಹೂ ಬೆಳೆಯುವುದರಲ್ಲಿ ದೇಶದಲ್ಲೇ ಹೆಸರುವಾಸಿ. ಇನ್ನೂ ದ್ರಾಕ್ಷಿ ಬೆಳೆದು ದೇಶ ವಿದೇಶಕ್ಕೆ ರಪ್ತು ಮಾಡುವುದರಲ್ಲಿ ಚಿಕ್ಕಬಳ್ಳಾಪುರ ರೈತರದ್ದು ಎತ್ತಿದ ಕೈ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೆ ಬರೋಬ್ಬರಿ ಎರಡು ಸಾವಿರದ ಐನೂರು ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಕಳೆದೊಂದು ವರ್ಷದಿಂದ ಕೊರೊನಾ ಲಾಕ್‍ಡೌನ್ ಗೆ ಸಿಲುಕಿಗೆ ಬೆಳೆದ ದ್ರಾಕ್ಷಿಗೆ ಸೂಕ್ತ ಬೆಲೆ ಸಿಗದೆ ದ್ರಾಕ್ಷಿಯನ್ನು ತಿಪ್ಪೆಗುಂಡಿಗೆ ಸುರಿಯುಂತಾಗಿತ್ತು.

    ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ರೈತ ಕೆ.ಆರ್.ರೆಡ್ಡಿ ಎಂಬುವವರು 5 ಎಕರೆ ಪ್ರದೇಶದದಲ್ಲಿ ರೆಡ್ ಗ್ಲೋಬ್ ತಳಿ ದ್ರಾಕ್ಷಿಯನ್ನು ಬೆಳೆದಿದ್ದು, ಈ ಬಾರಿ ಉತ್ತಮ ಇಳುವರಿ ಬಂದಿದೆ. ವರ್ತಕರು ತೋಟಕ್ಕೆ ಬಂದು 1 ಕೆ.ಜಿ ದ್ರಾಕ್ಷಿಗೆ 145 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. 5 ಎಕರೆಯಲ್ಲಿ ಸರಿಸುಮಾರು 50 ಟನ್ ದ್ರಾಕ್ಷಿ ಬೆಳೆದಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ಹರಿದುಬಂದಿದೆ. ಇದರಿಂದ ರೈತ ಕೆ ಆರ್ ರೆಡ್ಡಿಯವರು ಸಂತಸಗೊಂಡಿದ್ದಾರೆ.

    ಕಳೆದ ಎರಡು ವರ್ಷಗಳಿದ ಉತ್ತಮ ಬೆಲೆ ಇಲ್ಲದೆ ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ಕಂಡು ಕೇಳರಿಯದ ಬೆಲೆ ಸಿಕ್ಕಿದ್ದು ಸಾಕಷ್ಟು ಸಂತಸ ತಂದಿದೆ ಅಂತ ರೈತ ಕೆ ಆರ್ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಸಂತಸ ಹಂಚಿಕೊಂಡಿದ್ದಾರೆ. ಇನ್ನೂ ರೆಡ್ ಗ್ಲೋಬ್ ದ್ರಾಕ್ಷಿ 145 ರೂಪಾಯಿ ಆದ್ರೆ ದಿಲ್ ಖುಷ್ ಬೆಲೆಯೂ ಸಹ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಆಂಜನೇಯರೆಡ್ಡಿಯವರು ಸಹ ಎರಡು ಎಕರೆ ಪ್ರದೇಶದಲ್ಲಿ ದಿಲ್ ಕುಶ್ ದ್ರಾಕ್ಷಿ ಬೆಳೆದಿದ್ದು ಎರಡು ಎಕರೆಗೆ ಬರೋಬ್ಬರಿ ಸರಿಸುಮಾರು 40 ಟನ್ ದ್ರಾಕ್ಷಿ ಆಗೊ ನಿರೀಕ್ಷೆಯಿದೆ. ಈಗಾಗಲೇ ಮುಕ್ಕಾಲು ಭಾಗ ತೋಟವನ್ನು ವರ್ತಕರು ಕಟಾವು ಮಾಡಿದ್ದು ಕೆ.ಜಿ ಗೆ 90 ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ.

    ಸದ್ಯ ಈಗ ದ್ರಾಕ್ಷಿ ಬೆಳೆಯಲು ಸಿಜನ್ ಅಲ್ಲ, ಅನ್ ಸೀಜನ್. ಸ್ವಾಭಾವಿಕವಾಗಿ ಈಗ ದ್ರಾಕ್ಷಿ ಬೆಳೆಯಲ್ಲ, ಆದ್ರೆ ಚಿಕ್ಕಬಳ್ಳಾಪುರದ ಕೆಲವು ಬುದ್ದಿವಂತ ರೈತರು, ತೋಟಗಾರಿಕೆ ಇಲಾಖೆ ಮಾರ್ಗದರ್ಶನದಲ್ಲಿ ಅಕಾಲಿಕವಾಗಿ ದ್ರಾಕ್ಷಿ ಫಸಲು ಬರುವ ಹಾಗೆ ತಂತ್ರಜ್ಞಾನ ಬಳಸಿಕೊಂಡು ದ್ರಾಕ್ಷಿ ಬೆಳೆದಿದ್ದಾರೆ. ಇದರಿಂದ ದ್ರಾಕ್ಷಿಗೆ ಬೆಲೆ ಬಂದಿದೆ ರೈತರಂತೂ ಸಖತ್ ಖುಷಿಯಾಗಿದ್ದಾರೆ. ಇನ್ನೂ ಈ ದ್ರಾಕ್ಷಿ ಈಶಾನ್ಯ ರಾಜ್ಯಗಳು ಸೇರಿ ನೆರೆಯ ದೇಶಗಳಾದ ನೇಪಾಳ, ಬಾಂಗ್ಲಾದೇಶ ಸೇರಿ ಇತರೆ ದೇಶಗಳಿಗೆ ರಫ್ತಾಗಲಿದೆ.

  • ಜಮೀನಿನಲ್ಲಿದ್ದ ರೈತನನ್ನು ಬಲಿ ತೆಗೆದುಕೊಂಡ ಕಾಡು ಪ್ರಾಣಿ

    ಜಮೀನಿನಲ್ಲಿದ್ದ ರೈತನನ್ನು ಬಲಿ ತೆಗೆದುಕೊಂಡ ಕಾಡು ಪ್ರಾಣಿ

    ಮಂಡ್ಯ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡು ಪ್ರಾಣಿಯೊಂದು ದಾಳಿ ನಡೆಸಿ, ದೇಹವನ್ನು ಬಗೆದು ಕೊಂದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದಲ್ಲಿ ಜರುಗಿದೆ.

    ರಾಮೇಗೌಡ (65)ಮೃತ ನಾಗಿದ್ದಾನೆ. ನೆಲಮನೆ ಗ್ರಾಮದ ನಿವಾಸಿಯಾದ ರಾಮೇಗೌಡ ತನ್ನ ಜಮೀನಿನಲ್ಲಿ ಕೆಲಸ ಮಾಡಲು ಹೋದ ಸಂದರ್ಭದಲ್ಲಿ ಕಾಡು ಪ್ರಾಣಿಯೊಂದು ದಾಳಿ ನಡೆಸಿ ಹೊಟ್ಟೆಯನ್ನು ಬಗೆದು ಸಾಯಿಸಿದೆ. ರಾಮೇಗೌಡರು ತುಂಬಾ ಸಮಯ ಜಮೀನಿನಿಂದ ಮನೆಗೆ ಬಾರದ ಕಾರಣ ಮನೆಯವರು ಜಮೀನಿಗೆ ತೆರಳಿ ನೋಡಿದ ಸಂದರ್ಭದಲ್ಲಿ ರಾಮೇಗೌಡ ಸಾವನ್ನಪ್ಪಿರುವ ದೃಶ್ಯ ಕಂಡಿದೆ. ಇದನ್ನೂ ಓದಿ: ಬಿಎಸ್‍ವೈ ಮಾತನ್ನೇ ಬಿಜೆಪಿ ಹೈಕಮಾಂಡ್ ಕೇಳಲಿಲ್ಲ, ಜನತಾದಳ ಮೂಲದ ಬೊಮ್ಮಾಯಿ ಮಾತು ಕೇಳುತ್ತಾರ? – ಸಿದ್ದರಾಮಯ್ಯ ಟೀಕೆ

    ರಾಮೇಗೌಡನನ್ನು ಸಾಯಿಸಿರುವ ಪ್ರಾಣಿಯ ಗುರುತುಗಳು ಪತ್ತೆಯಾಗದ ಕಾರಣ ಯಾವ ಪ್ರಾಣಿಯಿಂದ ರಾಮೇಗೌಡರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿಲ್ಲ. ಹಲ್ಲೆ ಮಾಡಿರುವ ರೀತಿ ನೋಡಿದರೆ ಚಿರತೆ ಅಥವಾ ಕಾಡು ಹಂದಿ ಹಲ್ಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೃಷ್ಣಾ ಪ್ರವಾಹಕ್ಕೆ ರೈತರು ತತ್ತರ- ಲಕ್ಷಾಂತರ ರೂ. ಬೆಳೆ ಹಾನಿ

    ಕೃಷ್ಣಾ ಪ್ರವಾಹಕ್ಕೆ ರೈತರು ತತ್ತರ- ಲಕ್ಷಾಂತರ ರೂ. ಬೆಳೆ ಹಾನಿ

    ರಾಯಚೂರು: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹದ ಹೊಡೆತವು ಹೆಚ್ಚಾಗುತ್ತಿದೆ. ಹೀಗಾಗಿ ರಾಯಚೂರಿನ ರೈತರು ಕಂಗಾಲಾಗಿದ್ದಾರೆ.

    ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ. ನದಿ ಪಾತ್ರದ ಗ್ರಾಮಗಳ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆಹಾನಿಯಾಗಿದೆ. ಇದನ್ನೂ ಓದಿ:  ಇದು Unexpected ಎಂದು ಭಾವುಕರಾದ ಶಮಂತ್

    ನಾರಾಯಣಪುರ ಜಲಾಶಯದಿಂದ 4.20 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ರಾಯಚೂರು ತಾಲೂಕಿನ ಕಾಡ್ಲೂರು, ಗುರ್ಜಾಪುರದಲ್ಲಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಭತ್ತದ ಬೆಳೆ ಸಂಪೂರ್ಣ ಹಾನಿಯಾಗಿದೆ. ಪಂಪ್ ಸೆಟ್ ಉಳಿಸಿಕೊಳ್ಳಲು ರೈತರ ಹರಸಾಹಸ ಪಡುತ್ತಿದ್ದಾರೆ. ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ರಾಯಚೂರು, ಯಾದಗಿರಿ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಅಭಿಷೇಕ್ ಅಂಬರೀಶ್