Tag: farmer

  • ಹೂ ಬೆಲೆಯಲ್ಲಿ ಭಾರೀ ಕುಸಿತ – ಟ್ರ್ಯಾಕ್ಟರ್ ಲೋಡ್ ರೋಸ್ ಬಿಸಾಡಿದ ರೈತ

    ಹೂ ಬೆಲೆಯಲ್ಲಿ ಭಾರೀ ಕುಸಿತ – ಟ್ರ್ಯಾಕ್ಟರ್ ಲೋಡ್ ರೋಸ್ ಬಿಸಾಡಿದ ರೈತ

    ಚಿಕ್ಕಬಳ್ಳಾಪುರ: ಪಿತೃ ಪಕ್ಷದ ಹಿನ್ನಲೆ ಹೂ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿ ರೈತರೊಬ್ಬರು ಟ್ರ್ಯಾಕ್ಟರ್ ಲೋಡ್ ರೋಸ್ ಹೂವನ್ನು ಬಿಸಾಡಿ ಹೋಗಿದ್ದಾರೆ.

    rose

    ಮೇರಾಬುಲ್ ರೋಸ್ ಹೂವಿನ ಬೆಲೆ ಒಂದು ಕೆಜಿಗೆ 5 ರೂಪಾಯಿಗೆ ಬಿಕರಿಯಾಗಿದೆ. ಇದರಿಂದ ನೊಂದ ರೈತ ಹೂವನ್ನು ಬಿಸಾಡಿದ್ದಾರೆ. ಅಂದಹಾಗೆ ಪಿತೃಪಕ್ಷ ಆರಂಭವಾದ ನಂತರ ಹೂ ಕೇಳುವವರಿಲ್ಲ. ಮಾರ್ಕೆಟ್ ಗೆ ತೆಗೆದುಕೊಂಡು ಹೋದರೂ ವರ್ತಕರು ಖರೀದಿ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರ ತಾಲೂಕಿನ ಹಲವೆಡೆ ಸಾವಿರಾರು ಎಕರೆಯಲ್ಲಿ ರೈತರು ಗುಲಾಬಿ, ಚೆಂಡು ಹೂ ಸೇರಿದಂತೆ ಸೇವಂತಿಗೆ ಬೆಳೆಯುತ್ತಾರೆ. ಇದನ್ನೂ ಓದಿ: ರೇಪ್ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು

    rose

    ಇಲ್ಲಿನ ಹೂ ದೇಶದ ವಿವಿಧ ರಾಜ್ಯಗಳಿಗೂ ರಫ್ತಾಗುತ್ತದೆ. ಆದರೀಗ ಪಿತೃ ಪಕ್ಷದಿಂದ ಯಾವುದೇ ಶುಭ ಸಮಾರಂಭಗಳಿಲ್ಲ. ಮದುವೆ ಕಾರ್ಯಕ್ರಮಗಳು ಇಲ್ಲದಂತಾಗಿದೆ. ಹೀಗಾಗಿ ಹೂವಿಗೆ ಬೇಡಿಕೆ ಕಡಿಮೆಯಾಗಿದ್ದು, ಬೇರೆ, ಬೇರೆ ರಾಜ್ಯಗಳಿಗೆ ಎಕ್ಸ್‌ಪೋರ್ಟ್‌ ಆಗುತ್ತಿಲ್ಲ. ಚೆಂಡು ಹೂ ಸಹ ಕೆಜಿಗೆ 5 ರೂಪಾಯಿಯಾಗಿದೆ. ಸೇವಂತಿಗೆ 10 ರೂಪಾಯಿಯಾಗಿದೆ. ಹೀಗಾಗಿ ಪಿತೃ ಪಕ್ಷದ ಎಫೆಕ್ಟ್‌ನಿಂದ ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಮತಾಂತರವೇ ಮಾಡಲ್ಲ ಅನ್ನೋ ಬಿಷಪ್‍ಗಳು ಯಾಕೆ ಸಿಎಂ ಬಳಿ ಓಡಿ ಬಂದಿದ್ದಾರೆ: ಪ್ರತಾಪ್ ಸಿಂಹ ಪ್ರಶ್ನೆ

  • ಆನೆ ಓಡಿಸಲು ಹೋದ ವ್ಯಕ್ತಿ ನಾಪತ್ತೆ-ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

    ಆನೆ ಓಡಿಸಲು ಹೋದ ವ್ಯಕ್ತಿ ನಾಪತ್ತೆ-ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

    ಚಿಕ್ಕಮಗಳೂರು: ಜಮೀನಿಗೆ ಬಂದ ಆನೆಯನ್ನು ಓಡಿಸಲು ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ.

    ಬೈರಾಪುರ ಗ್ರಾಮದ ನಿವಾಸಿ ಯಶವಂತ್(50) ನಾಪತ್ತೆಯಾಗಿರುವ ವ್ಯಕ್ತಿ. ಕಳೆದ ರಾತ್ರಿ ಕಾಡಾನೆ ಬೈರಾಪುರ ಗ್ರಾಮದ ಅಂಚಿಗೆ ಬಂದಿತ್ತು. ಹೊಲ-ಗದ್ದೆಗಳ ಮೇಲೆ ದಾಳಿಗೆ ಮುಂದಾಗಿತ್ತು. ಈ ವೇಳೆ ಯಶವಂತ್ ಗ್ರಾಮದ ಹರೀಶ್ ಎಂಬವರ ಜೊತೆ ಆನೆಯನ್ನು ಓಡಿಸಲು ಹೋಗಿದ್ದರು. ಈ ವೇಳೆ ಆನೆ ಅಟ್ಟಿಸಿಕೊಂಡು ಬಂದ ಹಿನ್ನೆಲೆ ಹರೀಶ್ ಗ್ರಾಮದತ್ತ ಓಡಿ ಬಂದಿದ್ದಾರೆ. ಆದರೆ ಕತ್ತಲಲ್ಲಿ ಯಶವಂತ್ ಯಾವ ಕಡೆ ಹೋಗಿದ್ದಾರೆ ಎಂದು ಗೊತ್ತಾಗಿಲ್ಲ. ಇಂದು ಮಧ್ಯಾಹ್ನವಾದರೂ ಯಶವಂತ್ ಪತ್ತೆಯಾಗಿಲ್ಲ. ಇದನ್ನೂ ಓದಿ: ಶಿವಾಜಿ ರೀತಿ ಕತ್ತಿ, ಭಜರಂಗಿ ರೀತಿ ಗದೆ ಹಿಡಿದು ಹೋರಾಟ: ಭಜರಂಗದಳ

    ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದರೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ, ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಲೆನಾಡಿನ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಮೂಡಿಗೆರೆ ತಾಲೂಕಿನ ಗುತ್ತಿ, ಬೈರಾಪುರ, ಕೋಗಿಲೆ, ಸಾರಗೋಡು, ಮೂಲರಹಳ್ಳಿ, ಗೌಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಆನೆ ಹಾವಳಿಯಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇದನ್ನೂ ಓದಿ: ಕಳೆದ ಮೊಬೈಲ್ ಹುಡುಕಿಸಿ ಕೊಡುವಂತೆ ಸಿಎಂಗೆ ಪತ್ರ

    ಎನ್.ಆರ್.ಪುರ ತಾಲೂಕಿನ ಬೈರಾಪುರ, ಮುತ್ತಿನಕೊಪ್ಪ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ರೈತರು ಭತ್ತ, ಬಾಳೆ, ಅಡಿಕೆ ಸೇರಿದಂತೆ ಬೆಳೆಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ರೈತರು ತಮ್ಮ ಬೆಳೆಗಳನ್ನು ತಾವೇ ಉಳಿಸಿಕೊಳ್ಳವಂತಹಾ ಸ್ಥಿತಿ ನಿರ್ಮಾಣವಾಗಿದೆ. ಬೆಳೆ ಉಳಿಸಿಕೊಳ್ಳಲು ಹೋದ ರೈತನೇ ಇಂದು ನಾಪತ್ತೆಯಾಗಿದ್ದಾರೆ. ಅರಣ್ಯ ಇಲಾಖೆ ಆನೆಗಳು ಹೊಲಗದ್ದೆ, ತೋಟಗಳಿಗೆ ಹೋಗದಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಟ್ರಂಚ್ ನಿರ್ಮಿಸಿ ಆನೆಗಳು ಗ್ರಾಮ ಹಾಗೂ ಹೊಲಗದ್ದೆ-ತೋಟಗಳಿಗೆ ಬಾರದಂತೆ ಕ್ರಮಕೈಗೊಳ್ಳಬಹುದಿತ್ತು. ಆದರೆ, ಅರಣ್ಯ ಇಲಾಖೆ ಟ್ರಂಚ್ ನಿರ್ಮಿಸಿಲ್ಲ ಎಂದು ಆರೋಪಿಸುತ್ತಿರುವ ಸ್ಥಳೀಯರು ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದಲೇ ಇಂದು ಈ ದುರ್ಘಟನೆ ಸಂಭವಿಸಿದೆ ಕಿಡಿಕಾರಿದ್ದಾರೆ.

  • ಜಮೀನಿನಲ್ಲಿ ಗಾಂಜಾ ಬೆಳೆದ ಮೂವರು ರೈತರ ಬಂಧನ

    ಜಮೀನಿನಲ್ಲಿ ಗಾಂಜಾ ಬೆಳೆದ ಮೂವರು ರೈತರ ಬಂಧನ

    ಹುಬ್ಬಳ್ಳಿ: ಜಮೀನಿನಲ್ಲಿ ಗಾಂಜಾ ಬೆಳೆದ ಕುಂದಗೋಳ ತಾಲೂಕಿನ ಮೂವರು ರೈತರನ್ನು ಪೊಲೀಸರು ಬಂಧಿಸಿದ್ದಾರೆ.

    ಗುಡಗೇರಿ ಠಾಣೆಯ ಸಿಬ್ಬಂದಿಗೆ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬುಕೊಪ್ಪ ಗ್ರಾಮದ ಸರಹದ್ದಿನಲ್ಲಿ ಮೂವರು ರೈತರು ಹೊಲದಲ್ಲಿ ಗಾಂಜಾ ಬೆಳೆ ಬೆಳೆದಿದ್ದರು. ಇದನ್ನೂ ಓದಿ:  ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

    ಖಚಿತ ಮಾಹಿತಿ ಮೇರೆಗೆ ಬುಕೊಪ್ಪ ಗ್ರಾಮದ ಸರಹದ್ದಿನ ಮಾಲತೇಶಪ್ಪ ನಿಂಗಪ್ಪ ಕಿತ್ತೂರ್ ಅವರ ಹೊಲದಲ್ಲಿ 31 ಕೆ.ಜಿ. ಮತ್ತು ರುದ್ರಪ್ಪ ಅಡಿವೆಪ್ಪ ಪೂಜಾರ್ ಅವರ ಹೊಲದಲ್ಲಿ 20 ಕೆ.ಜಿ ಮತ್ತು ನಿಂಗಪ್ಪ ಕುಬೇರಪ್ಪ ಕರಿಕೆಣ್ಣವರ ಹೊಲದಲ್ಲಿ 8.30 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್

    ಪಿಎಸ್‍ಐ ಸವಿತಾ ಮುನ್ಯಾಳ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸಿಬ್ಬಂದಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶೋಕ್ ಶಿಗ್ಗಾಂವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • ಬಡ ರೈತನ ಸಂಕಷ್ಟಕ್ಕೆ ಮಿಡಿದ ಜ್ಯೋತಿಷಿ ಹೃದಯ- ಎತ್ತುಗಳ ಕೊಡುಗೆ

    ಬಡ ರೈತನ ಸಂಕಷ್ಟಕ್ಕೆ ಮಿಡಿದ ಜ್ಯೋತಿಷಿ ಹೃದಯ- ಎತ್ತುಗಳ ಕೊಡುಗೆ

    – ಅಜ್ಜನಿಗೆ ಉಳುಮೆಯಲ್ಲಿ ಸಹಾಯ ಮಾಡಲು ಹೆಗಲು ಕೊಟ್ಟಿದ್ದ ಮೊಮ್ಮಕ್ಕಳು

    ಮಂಡ್ಯ: ಅಜ್ಜನಿಗೆ ಎತ್ತುಗಳನ್ನು ಕೊಳ್ಳಲು ಕಷ್ಟವಾಗಿರುವ ಕಾರಣ ಇಬ್ಬರು ಮೊಮ್ಮಕ್ಕಳು ನೊಗಕ್ಕೆ ಹೆಗಲು ಕೊಟ್ಟು ವ್ಯವಸಾಯ ಮಾಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಮದಲ್ಲಿ ಜರುಗಿತ್ತು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಈ ಸುದ್ದಿ ನೋಡಿದ ಜ್ಯೋತಿಷಿ ಕಮಲಾಕರ ಭಟ್ ಅವರು ಬಡ ರೈತನಿಗೆ ಎತ್ತುಗಳನ್ನು ನೀಡಲು ಮುಂದೆ ಬಂದಿದ್ದಾರೆ.

    ಎತ್ತುಗಳಿಲ್ಲದ ಕಾರಣ ಅಜ್ಜನಿಗೆ ಕಷ್ಟವಾಗಬಾರದು ಎಂದು ಮೊಮ್ಮಕ್ಕಳು ನೋಗವನ್ನು ಹೊತ್ತು ಹೊಲ ಉಳುಮೆ ಮಾಡುವ ಮೂಲಕ ಸಹಾಯವಾಗಿದ್ದರು. ಈ ಕುರಿತು ಬುಧವಾರ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ವರದಿಯನ್ನು ನೋಡಿದ ಜ್ಯೋತಿಷಿ ಕಮಲಾಕರ ಭಟ್ ಅವರು ಅಜ್ಜನಿಗೆ ಎತ್ತುಗಳನ್ನು ಕೊಡಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ನಮ್ಮನ್ನೇ ಸ್ಥಳಾಂತರಿಸಿ- ಸರ್ಕಾರಕ್ಕೆ ಮಲೆನಾಡಿಗರ ಆಗ್ರಹ

    ಬಳಘಟ್ಟ ಗ್ರಾಮದ ರೈತ ಸಣ್ಣಸ್ವಾಮಿ ಅವರು 1.5 ಎಕರೆ ಜಮೀನು ಹೊಂದಿದ್ದು, ಬೇಸಾಯ ಮಾಡಲು ಇವರ ಬಳಿ ಎತ್ತುಗಳಿಲ್ಲ. ಕೂಲಿ ಕೊಟ್ಟು ಉಳುಮೆ ಮಾಡಿಸಲು ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲ. ಹೀಗಾಗಿ ಸಣ್ಣಸ್ವಾಮಿ ಅವರಿಗೆ ಅವರ ಮೊಮ್ಮಕ್ಕಳಾದ ವರ್ಷಿತಾ, ಅಂಕಿತ ಹೆಗಲು ಕೊಟ್ಟು ಸಹಾಯ ಮಾಡುತ್ತಿದ್ದಾರೆ.

    ಎತ್ತುಗಳ ರೀತಿ ನೊಗ ಹೊತ್ತು ಈ ಇಬ್ಬರು ಹೆಣ್ಣು ಮಕ್ಕಳು ಹೊಲದಲ್ಲಿ ನೆಟ್ಟಿರುವ ರಾಗಿಗೆ ಉಳಿಮೆ ಮಾಡಲು ಸಹಾಯಕರಾಗಿದ್ದಾರೆ. ಕಾಲೇಜಿಗೆ ಹೋಗುವ ಈ ಇಬ್ಬರು ಹೆಣ್ಣು ಮಕ್ಕಳು, ಬಿಡುವಿನ ವೇಳೆ ಜಮೀನಿಗೆ ಬಂದು ಅಜ್ಜನ ಜೊತೆ ಇದೇ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ನಮ್ಮ ಬಳಿ ಎತ್ತುಗಳಿಲ್ಲ ಅದಕ್ಕಾಗಿ ಈ ಪರಿಸ್ಥಿತಿ ಬಂದಿದೆ. ಕೂಲಿ ಕೊಟ್ಟು ವ್ಯವಸಾಯ ಮಾಡುವಷ್ಟು ಶಕ್ತಿ ನಮಗೆ ಇಲ್ಲ. ಯಾರಾದರೂ ಎತ್ತುಗಳನ್ನು ಕೊಡಿಸಿದರೆ ಸಹಾಯವಾಗುತ್ತದೆ ಎಂದು ಅಜ್ಜ ಹಾಗೂ ಮೊಮ್ಮಕ್ಕಳು ಕೇಳಿಕೊಂಡಿದ್ದರು.

  • ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಚಿಕ್ಕಮಗಳೂರು: ಗಣಪತಿ ಹಬ್ಬದಂದು ರೈತನೊಬ್ಬ ಜೀವಂತ ಇಲಿಯರ್ಣಣೂ ಗಣೇಶನಿಗೆ ನೀಡಿ, ಬೆಳೆಗಳನ್ನು ಉಳಿಸು ಎಂದು ಬೇಡಿಕೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ.

    ಮರ್ಕಲ್ ಗ್ರಾಮದ ರೈತ ನಿತಿನ್ ಅವರ ಹೊಲದಲ್ಲಿ ಇಲಿಗಳ ಕಾಟ ಯತೇಚ್ಛವಾಗಿತ್ತು. ಯಾವುದೇ ಔಷಧಿ ಇಟ್ಟರೂ, ಏನೇ ಮಾಡಿದರೂ ಇಲಿಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಯೂ ಇಲಿ ಹಾಗೂ ಮಣ್ಣು ಪಾಲಾಗುತ್ತಿತ್ತು. ಇದರಿಂದ ಮನನೊಂದ ರೈತ ನಿನ್ನ ವಾಹನದಿಂದ ನಮ್ಮ ಬೆಳೆಗಳು ನಾಶವಾಗುತ್ತವೆ, ಬೆಳೆಗಳನ್ನ ಉಳಿಸಿಕೊಳ್ಳುವುದೇ ಕಷ್ಟವಾಗಿದೆ ಎಂದು ಗಣಪತಿ ಹಬ್ಬವಾದ ಇಂದು, ತಮ್ಮ ಹೊಲದಲ್ಲಿ ಜೀವಂತ ಇಲಿಯನ್ನು ಹಿಡಿದು ಗ್ರಾಮದಲ್ಲಿ ಕೂರಿಸಿದ್ದ ಗಣೇಶನಿಗೆ ನೀಡಿ ಬೆಳೆ ಉಳಿಸು ಎಂದು ಬೇಡಿಕೊಂಡಿದ್ದಾನೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.57ಕ್ಕೆ ಇಳಿಕೆ- ರಾಜ್ಯದಲ್ಲಿಂದು 967 ಹೊಸ ಕೊರೊನಾ ಕೇಸ್, 10 ಸಾವು

    ತಮ್ಮ ಹೊಲದಲ್ಲಿ ಹಿಡಿದ ಗಣೇಶನನ್ನ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡು ಬಂದು ಗಣೇಶನ ಮುಂದೆ ಬಿಟ್ಟಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಪ್ಲಾಸ್ಟಿಕ್ ಕವರ್ ನಲ್ಲಿ ಬಂಧಿಯಾಗಿದ್ದ ಮೂಷಿಕ ಕೆಳಗೆ ಬಿಡುತ್ತಿದ್ದಂತೆ ಬದುಕಿತು ಬಡ ಜೀವ ಎಂದು ಎದ್ನೋ-ಬಿದ್ನೋ ಅಂತ ಅಲ್ಲಿಂದ ಓಡಿದೆ.

  • ಚೌತಿಯಂದು ನೇಗಿಲು ಹಿಡಿದು ರೈತರಾದ ಸಿ.ಟಿ.ರವಿ

    ಚೌತಿಯಂದು ನೇಗಿಲು ಹಿಡಿದು ರೈತರಾದ ಸಿ.ಟಿ.ರವಿ

    -ಹೊಲದಲ್ಲಿ ಉಳುಮೆ ಮಾಡಿ ಸಿ.ಟಿ.ರವಿ ಹಬ್ಬ ಆಚರಣೆ

    ಚಿಕ್ಕಮಗಳೂರು: ಗಣೇಶ ಚತುರ್ಥಿ ದಿನದಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೊಲದಲ್ಲಿ ಉಳುಮೆ ಮಾಡುವ ಮೂಲಕ ರೈತರ ಯೋಗಕ್ಷೇಮ ವಿಚಾರಿಸಿ ವಿನೂತನವಾಗಿ ಹಬ್ಬ ಆಚರಿಸಿದ್ದಾರೆ.

    ಇಂದು ತಾಲೂಕಿನ ಹಿರೇಮಗಳೂರು ಬಳಿ ನಡೆಯುತ್ತಿದ್ದ ಕೆರೆ ಏರಿ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು, ಇದೇ ವೇಳೆ ಸಗನೀಪುರ ಗ್ರಾಮದ ಹೊಲದಲ್ಲಿ ರೈತರು ಉಳುಮೆ ಮಾಡುತ್ತಿರುವುದ್ದನ್ನು ಕಂಡು ಹೊಲಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಹಬ್ಬದ ದಿನ ಉಳುಮೆ ಮಾಡುತ್ತಿದ್ದೀರಾ, ಬನ್ನಿ ನಿಮ್ಮ ಜೊತೆ ನಾನು ಸೇರಿಕೊಳ್ಳುತ್ತೇನೆ ಅಂತ ರೈತರಿಂದ ಎತ್ತುಗಳನ್ನು ಪಡೆದು ಹೊಲದಲ್ಲಿ ಉಳುಮೆ ಮಾಡಿದ್ದಾರೆ. ಇದನ್ನೂ ಓದಿ:  ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಉಳುಮೆ ಮಾಡುವಾಗ ರೈತರಂತೆ ನೇಗಲನ್ನು ಕಾಲಿನಲ್ಲಿ ಮೆಟ್ಟಿ ಉಳುಮೆ ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ. ಸಿ.ಟಿ. ರವಿ ಉಳುಮೆ ಶೈಲಿಯನ್ನು ಕಂಡು ರೈತರು ಕೂಡ ಆಶ್ಚರ್ಯಗೊಂಡಿದ್ದಾರೆ. ಭಾಷಣಗಳಲ್ಲಿ ಆಗಾಗ ನಾನು ರೈತರ ಮಗ ಎಂದು ಹೇಳುತ್ತಿದ್ದ ಅವರು, ಹಬ್ಬದಂದೇ ರೈತರ ಹೊಲದಲ್ಲಿ ಉಳುಮೆ ಮಾಡಿ ಹೊಲದಲ್ಲಿ ಹಬ್ಬ ಆಚರಿಸಿ, ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಳಿಕ ರೈತರ ಯೋಗಕ್ಷೇಮ ವಿಚಾರಿಸಿ, ರೈತರಿಗೆ ಗಣಪತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ತಾಲೂಕಿನ ಕುರುವಂಗಿ, ಸಗನೀಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ರೌಂಡ್ ಹಾಕಿ ರೈತರ ಆರೋಗ್ಯ, ಬೇಕು-ಬೇಡಗಳನ್ನು ವಿಚಾರಿಸಿದ್ದಾರೆ. ಇದನ್ನೂ ಓದಿ:  ಹಾಸನದಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ – ಮಷಿನ್‍ ಸಂಪೂರ್ಣ ಜಖಂ

  • ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಚಿಕ್ಕೋಡಿ: ಸಾಲಬಾಧೆ ತಾಳದೆ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.

    ಸತ್ತಿ ಗ್ರಾಮದ ಬಾಬು ಯಮನಪ್ಪ ಮಾದರ(43) ಆತ್ಮಹತ್ಯೆ ಮಾಡಿಕೊಂಡ ರೈತ. ರಡ್ಡೇರಹಟ್ಟಿ ಗ್ರಾಮದ ದಳವಾಯಿ ತೋಟದ ವಸತಿ ಪ್ರದೇಶದಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2 ಎಕರೆ 20 ಗುಂಟೆ ಜಮೀನು ಹೊಂದಿದ್ದ ಯಮನಪ್ಪ ಸತ್ತಿಯ ಕೆನರಾ ಬ್ಯಾಂಕ್ ನಲ್ಲಿ 3 ಲಕ್ಷ ಮತ್ತು ಇತರ 2 ಲಕ್ಷ ಸೇರಿ ಒಟ್ಟು 5 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:  ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

    ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಸಾಲವನ್ನು ತುಂಬಲಾಗದೆ ಮನನೊಂದ ರೈತ, ಭರಮಪ್ಪ ದಳವಾಯಿ ಎಂಬವರ ಗದ್ದೆಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಹೀರಣ್ಯಕೇಶಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ – ಆತಂಕದಲ್ಲಿ ನದಿ ತೀರದ ಜನ

    ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಡಿಲು ಬಡಿದು ಜೋಡಿ ಎತ್ತುಗಳು ಸಾವು

    ಸಿಡಿಲು ಬಡಿದು ಜೋಡಿ ಎತ್ತುಗಳು ಸಾವು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಐದಬಾವಿ ಗ್ರಾಮದಲ್ಲಿ ಸಿಡಿಲು ಬಡಿದು ಜೋಡಿ ಎತ್ತುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

    ನಿನ್ನೆ ರಾತ್ರಿ ಸಿಡಿಲು ಬಡಿದ ಹಿನ್ನೆಲೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳು ಸಾವಿಗೀಡಾಗಿವೆ. ಗ್ರಾಮದ ರೈತ ನಿಂಗಪ್ಪ ಎಂಬವವರಿಗೆ ಸೇರಿದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ.

    ಜಮೀನಿನಲ್ಲೇ ಗುಡಿಸಲು ಹಾಕಿಕೊಂಡಿದ್ದ ರೈತ ಕುಟುಂಬ, ಎತ್ತುಗಳಿಗೆ ಹೊಲದಲ್ಲಿ ಕೊಟ್ಟಿಗೆ ನಿರ್ಮಿಸಿದ್ದರು. ರಾತ್ರಿ ವೇಳೆ ಸಿಡಿಲು ಬಡಿದು ಎತ್ತುಗಳು ಸಾವನ್ನಪ್ಪಿದ್ದು, ರೈತ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರ Connecting People ಆಗಿದೆ: ಹೆಚ್. ವಿಶ್ವನಾಥ್

    ತಲಾ ಒಂದು ಲಕ್ಷ ಬೆಲೆ ಬಾಳುವ ಎರಡು ಎತ್ತುಗಳನ್ನ ಕಳೆದುಕೊಂಡು ರೈತ ನಿಂಗಪ್ಪ ಕಂಗಾಲಾಗಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಎತ್ತುಗಳು ಸಾವನ್ನಪ್ಪಿದ್ದರಿಂದ ಇಡೀ ಕುಟುಂಬ ಕಣ್ಣೀರಿಟ್ಟಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಅನ್ನದಾತನ ಅನ್ನಕ್ಕೆ ಕನ್ನ ಹಾಕಿದ ಕಿಡಿಗೇಡಿಗಳು-ಪಂಪ್‍ಸೆಟ್ ಕೇಬಲ್ ಕಟ್

    ಅನ್ನದಾತನ ಅನ್ನಕ್ಕೆ ಕನ್ನ ಹಾಕಿದ ಕಿಡಿಗೇಡಿಗಳು-ಪಂಪ್‍ಸೆಟ್ ಕೇಬಲ್ ಕಟ್

    ಯಾದಗಿರಿ: ಹೊರವಲಯದಲ್ಲಿರುವ ಭೀಮಾನದಿ ತೀರದ ರೈತರಿಗೆ ಈಗ ಕೇಬಲ್ ಕಂಟಕ ಶುರುವಾಗಿದೆ. ರೈತರು ಭೀಮಾನದಿ ತೀರದಿಂದ ತಮ್ಮ ಜಮೀನುಗಳಿಗೆ ನೀರು ಹರಿಸಲು, ಸಾವಿರಾರು ರೂಪಾಯಿ ಖರ್ಚು ಮಾಡಿ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಂಡಿದ್ದಾರೆ.  

    ಈ ಪಂಪ್‍ಸೆಟ್‍ಗಳಿಗೆ ವಿದ್ಯುತ್ ನೀಡುವ ಸಲುವಾಗಿ ನೂರಾರು ಮೀಟರ್ ದೂರದಿಂದ ಬೆಲೆ ಬಾಳುವ ಕೇಬಲ್‍ಗಳನ್ನು ಹಾಕಿ ಕನೆಕ್ಷನ್ ನೀಡಿದ್ದಾರೆ. ಇದನ್ನೆ ನಂಬಿಕೊಂಡು ಭತ್ತ ನಾಟಿಮಾಡಿದ್ದಾರೆ. ಈಗ ಭತ್ತಕ್ಕೆ ನೀರಿನ ಅವಶ್ಯಕತೆ ಬಹಳಷ್ಟಿದೆ. ಇಂತಹ ಹೊತ್ತಿನಲ್ಲಿ ಅಪರಿಚಿತ ಕೇಡಿಗಳು ಪಂಪ್‍ಸೆಟ್‍ಗಳ ಕೇಬಲ್ ಕಟ್ ಮಾಡಿ ಪರಾರಿ ಆಗುತ್ತಿದ್ದಾರೆ. ಇದರಿಂದಾಗಿ ಸಕಾಲಕ್ಕೆ ಬೆಳೆಗೆ ನೀರು ಸೀಗದೆ ನೂರಾರು ಎಕರೆ ಬೆಳೆ ಒಣಗುತ್ತಿದೆ. ಇದನ್ನೂ ಓದಿ: ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ

    ವಾರಕ್ಕೆ ಎರಡು,ಮೂರು ಭಾರಿ ಇದೇ ತರಹ ಮಾಡುತ್ತಿರುವ ಕೀಡಿಗೇಡಿಗಳು ರೈತರಿಗೆ ವಿಪರೀತ ಕಾಟ ನೀಡುತ್ತಿದ್ದಾರೆ. ಕಟ್ ಮಾಡಿದ ಕೇಬಲ್ ಜೋಡಿಸಿ ರೈತರು ಮನೆಗೆ ತೆರಳುತ್ತಿದ್ದಂತೆ, ರಾತ್ರಿ ಪದೇ ಪದೇ ಕೇಬಲ್ ಕಟ್ ಆಗುತ್ತಿವೆ. ಇಲ್ಲಿಯವರೆಗೆ ಏನಿಲ್ಲವೆಂದರೂ ಸುಮಾರು ಐದಾರು ಬಾರಿ ಈ ರೀತಿ ಕೇಬಲ್ ಕಟ್ ಆಗುತ್ತಿವೆ. ಒಂದು ಸಲದ ಕೇಬಲ್ ಜೋಡಣೆಗೆ 15 ರಿಂದ 20 ಸಾವಿರ ಖರ್ಚು ಬರುತ್ತದೆ. ಬೆಳೆದ ಬೆಳೆಯ ಲಾಭವೆಲ್ಲಾ ಈ ಕೇಬಲ್ ಮರುಜೋಡಣೆಗೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ. ಇದರಿಂದಾಗಿ ಅಸಹಾಯಕ ಸ್ಥಿತಿಯಲ್ಲಿದ್ದಾರೆ ರೈತರು.

  • ಕೊತ್ತಂಬರಿ ಸೊಪ್ಪು ಬೆಳೆದು 32 ದಿನದಲ್ಲಿ 13 ಸಾವಿರ ಲಾಭ ಗಳಿಸಿದ ರೈತ

    ಕೊತ್ತಂಬರಿ ಸೊಪ್ಪು ಬೆಳೆದು 32 ದಿನದಲ್ಲಿ 13 ಸಾವಿರ ಲಾಭ ಗಳಿಸಿದ ರೈತ

    ನೆಲಮಂಗಲ: ಅಲ್ಪಾವಧಿಯ ಕೃಷಿಯಲ್ಲಿ ಲಾಭ ಬರುವುದಿಲ್ಲ ಎನ್ನುವವರ ಸಂಖ್ಯೆ ಹೆಚ್ಚು. ಆದರೆ ಇಲ್ಲಿನ ಕೃಷಿಕರೊಬ್ಬರು 32 ದಿನದಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು 13 ಸಾವಿರ ಲಾಭಗಳಿಸಿ ಯಶೋಗಾಥೆ ಮೆರೆದಿದ್ದಾರೆ.

    ಹೌದು. ನೆಲಮಂಗಲ ಗ್ರಾಮಾಂತರ ಭಾಗದ ಕುಲುವನಹಳ್ಳಿ ಗ್ರಾಮ ಪಂಚಾಯ್ತಿಯ ಬಿಲ್ಲಿನಕೋಟೆ ಗ್ರಾಮದ ರೈತ ರಂಗಸ್ವಾಮಿ, ತನ್ನ 2 ಗುಂಟೆ ಜಮೀನಿನಲ್ಲಿ ಕಳೆದ ಇಪ್ಪತ್ತು ದಿನಗಳ ಹಿಂದೆ ಎರಡು ಸಾವಿರ ಕೊತ್ತಂಬರಿ ಬೀಜ ಚೆಲ್ಲಿ ಲಾಭಗಳಿಸಿದ್ದಾರೆ.

    ಕೃಷಿಯಲ್ಲಿ ಸದಾ ಆಸಕ್ತಿ ಹೊಂದಿರುವ ರಂಗಸ್ವಾಮಿ, ತಮ್ಮ ಕುಟುಂಬದ ಸಹಕಾರದಿಂದ 2 ಎಕರೆ 30 ಗುಂಟೆ ಜಾಗದ ಅಂಚಿನಲ್ಲಿ ಮೂರು ಸಾವಿರ ಬಂಡವಾಳ ಹೂಡಿ 16 ಸಾವಿರ ಕೊತ್ತಂಬರಿ ಬೆಳೆ ಮಾರಾಟವಾಗಿದೆ, 13 ಸಾವಿರ ಲಾಭ ಬಂದಿದೆ, ಕುಟುಂಬದ ಸದಸ್ಯರಾದ ಅಣ್ಣ ಗೋವಿಂದರಾಜು, ಅತ್ತಿಗೆ ತಾಯಮ್ಮ ಹೆಂಡತಿ ಶಾರಾದಮ್ಮರ ಸಹಕಾರ ಪಡೆದು ಸಮಗ್ರ ಕೃಷಿ ಮಾಡಿದ್ದಾರೆ, ಉಳಿದ ಜಮೀನಿನಲ್ಲಿ ಕೋಸು, ಮೆಣಸಿನಕಾಯಿ, ಜೋಳ ಬೆಳೆದಿದ್ದೇವೆ, ಕುಟುಂಬದ ಸಹಕಾರ ಕೃಷಿ ಸಾಧನೆಗೆ ಅನುಕೂಲವಾಗಿದೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ: ಸುಮಲತಾ

    ಕೊತ್ತಂಬರಿಯ ಹೊಸ ತಳಿಯ ಬೀಜವನ್ನು ತಂದು ಉಳುಮೆಯನ್ನು ಮಾಡಿ, ಬಿತ್ತನೆ ಮಾಡಿದ್ದೇವೆ, ಕಡಿಮೆ ಬೇಸಾಯ ಕ್ರಮಗಳಿಂದ ಅಧಿಕ ಇಳುವರಿ ಮಾಡಿದ್ದೇವೆ, ಜೊತೆಗೆ ರಾಸಾಯನಿಕ ಗೊಬ್ಬರ ಹಾಕದೆ ದನದ ಕೊಟ್ಟಿಗೆ ಗೊಬ್ಬರ ಹಾಕಿ ಸಂಪೂರ್ಣ ಸಾವಯವ ಮಾಡಿದ್ದೇವೆ ಎಂದು ರಂಗಸ್ವಾಮಿ ತಿಳಿಸಿದರು.