ಧಾರವಾಡ: ಹಾನಿಗೀಡಾದ ಮೆಣಸಿನಕಾಯಿ ಬೆಳೆ ಕೈಯಲ್ಲಿ ಹಿಡಿದುಕೊಂಡ ಪ್ರತಿಭಟನೆ ಮಾಡಿದ ರೈತರು ಬೆಳೆ ವಿಮೆಗೆ ಆಗ್ರಹಿಸಿರುವ ಘಟನೆ ಧಾರವಾಡದಲ್ಲಿ ಕಂಡುಬಂದಿದೆ.
ಅಕಾಲಿಕ ಮಳೆಯಿಂದಾಗಿ ರೈತ ಬೆಳೆದ ವಿವಿಧ ಬೆಳೆಗಳು ಹಾನಿಗೀಡಾಗಿದ್ದು, ಸರ್ಕಾರ ಕೂಡಲೇ ಬೆಳೆವಿಮೆ ಬಿಡುಗಡೆ ಮಾಡಿ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಯಕನೂರು ಗ್ರಾಮದ ರೈತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಐ ಡೋಂಟ್ ಕೇರ್, ಐ ಡೋಂಟ್ ಲೈಕ್ – ಲಸಿಕೆ ಬೇಡವೆಂದು ಹಠ ಹಿಡಿದ ವೃದ್ಧ
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಹಾನಿಗೀಡಾದ ಮೆಣಸಿನಕಾಯಿ ಬೆಳೆ ಕೈಯಲ್ಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ ರೈತರು, ಅಕಾಲಿಕ ಮಳೆಗೆ ಮೆಣಸಿನಕಾಯಿ, ಹತ್ತಿ, ಕಡಲೆ, ಗೋಧಿ, ಜೋಳದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಬಂದು ಬೆಳೆವಿಮೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ
ಅಕಾಲಿಕ ಮಳೆಯಿಂದ ಇಡೀ ರೈತ ಸಮುದಾಯ ಕಂಗೆಟ್ಟಿದ್ದು, ಸರ್ಕಾರದ ಮುಂದೆ ರೈತರು ಕೈಚಾಚುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ಕೂಡಲೇ ಸರ್ಕಾರ ರೈತರ ಪರಿಸ್ಥಿತಿ ಅರಿತು ಅವರ ನೆರವಿಗೆ ಬರಬೇಕಾಗಿದೆ ಎಂದು ರೈತ ರಾಜಶೇಖರಯ್ಯ ಹಿರೇಮಠ ಆಗ್ರಹಿಸಿದ್ದಾರೆ.
ಮುಂಬೈ: 1 ಟನ್ ಈರುಳ್ಳಿ ಮಾರಿದ ರೈತನಿಗೆ ಕೇವಲ 14 ರೂಪಾಯಿ ಉಳಿದಿದ್ದು, ರೈತ ಕಣ್ಣೀರು ಹಾಕಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.
ಕಳೆದೊಂದು 4ರಿಂದ 5 ತಿಂಗಳಿಂದ ದರ ಏರಿಕೆ ಮೂಲಕ ಗ್ರಾಹಕನ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಇದೀಗ ಬೆಳೆ ಬೆಳೆದ ರೈತನಿಗೆ ಕಣ್ಣೀರು ತರಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರ ರೈತನೊಬ್ಬನಿಗೆ ಆತ ಬೆಳೆದ 1.1 ಟನ್ ಈರುಳ್ಳಿ ಮಾರಾಟ ಮಾಡಿದ ಬಳಿಕ ಎಲ್ಲಾ ಖರ್ಚು-ವೆಚ್ಚವನ್ನು ಕಳೆದು ಕೇವಲ 14 ರೂಪಾಯಿ ಉಳಿದಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ
या १३ रूपयामधून सरकारचे १३ वा घालावे का ?
सोलापूर कृषी उत्पन्न बाजार समितीत काल बापू कावडे या शेतकर्यांने २४ पोते कांदे रूद्रेश पाटील या व्यापा-याला विक्री केले. जवळपास ११२३ किलो कांदे विकून pic.twitter.com/ZergTblfF0
ಈ ಕುರಿತು ಲೆಕ್ಕಾಚಾರದ ಪಟ್ಟಿಯನ್ನು ಮಾಜಿ ಸಂಸದ ರಾಜು ಶೆಟ್ಟಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ರೈತನಿಗೆ ಆಗುವ ಅನ್ಯಾಯದ ಕುರಿತಾಗಿ ಬೆಳಕು ಚೆಲ್ಲಿದ್ದಾರೆ. ಸೊಲ್ಲಾಪುರದ ಬಾಪು ಕವಾಡೆ 1665 ಕೆಜಿ ಈರುಳ್ಳಿ ಬೆಳೆದು ಮಾರಾಟಕ್ಕೆ ಕಳುಹಿಸಿದ್ದರು. ಆಗ 1 ರೂಪಾಯಿನಂತೆ ಈರುಳ್ಳಿ ಮಾರಾಟ ಮಾಡಿದ್ದಾರೆ. ದಲ್ಲಾಳಿ ಇವರಿಗೆ 1665 ರೂಪಾಯಿ ನೀಡಿದ್ದಾನೆ. ಈರುಳ್ಳಿ ಬೆಳೆಯಲು ಮಾಡಿದ ಕಾರ್ಮಿಕರ ವೆಚ್ಚ, ಸಾಗಣೆ ವೆಚ್ಚ, ಕಮಿಷನ್ ಎಲ್ಲಾ ಸೇರಿ ಕವಾಡೆಗೆ 1651 ರೂ ವೆಚ್ಚವಾಗಿತ್ತು. ಅಂದರೆ ಉಳಿದಿದ್ದು ಕೇವಲ 14 ರೂಪಾಯಿ ಮಾತ್ರ. ದಲ್ಲಾಳಿ ಅತಿ ಕಡಿಮೆ ಬೆಲೆ ನೀಡಿದ್ದನ್ನು ನಂಬಲಾಗುತ್ತಿಲ್ಲ ಎಂದು ರೈತ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ
ತರಕಾರಿಗಳ ಬೆಲೆ ಮಾತ್ರ ಗಗನಕ್ಕೆ ಏರಿದೆ. ಟೊಮೆಟೋ ಬೆಲೆ 150 ರೂಪಾಯಿಗೂ ಹೆಚ್ಚಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿತ್ತು. ಆದರೆ ಇರುಳ್ಳಿ ಬೆಲೆ ಮಾತ್ರ ಭಾರೀ ಕುಸಿತ ಕಂಡಿರುವುದು ರೈತರಿಗೆ ಕಣ್ಣೀರು ತರಿಸಿದೆ.
ಲಕ್ನೋ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಿತ್ತೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರಪ್ರದೇಶ ಚುನಾವಣೆಗೂ ಮುನ್ನವೇ ಮತದಾರರ ಮನಗೆಲ್ಲಲು ಸಮಾಜವಾದಿ ಪಕ್ಷ ದೊಡ್ಡ ಆಶ್ವಾಸನೆಯನ್ನು ನೀಡಿದೆ. ಅಧಿಕಾರಕ್ಕೆ ಬಂದರೆ ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿವರೆಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: OMICRON ಸೋಂಕಿಗೆ ಪ್ರತ್ಯೇಕ ಆಸ್ಪತ್ರೆ: ದೆಹಲಿ ಸರ್ಕಾರ
ರೈತ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ ಕೃಷಿ ಕಾಯಿದೆ ಜಾರಿಗೆ ತಂದಾಗ ಬಿಜೆಪಿ ನಿಲುವು ಏನಿತ್ತು ಮತ್ತು ಕಾನೂನು ಹಿಂಪಡೆದಾಗ ಅದು ರೈತರ ಪರವಾಗಿ ಹೇಗೆ ಆಯಿತು ಎನ್ನುವುದು ಕೇಂದ್ರ ಸರ್ಕಾರ ಹೆಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿಯಿಂದ ಜಾಗತಿಕ ಅಪಾಯ ಹೆಚ್ಚು-WHO
ಪ್ರತಿಭಟನೆ ವೇಳೆ ಮೃತ ರೈತ ಕುಟುಂಬಕ್ಕೆ ಯಾರು ಸಹಾಯ ಮಾಡಿದರು? ಹೀಗಾಗಿ ಸಮಾಜವಾದಿ ಪಕ್ಷ ನಿರ್ಧಾರ ಮಾಡಿದೆ ಉತ್ತರ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ರೈತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಲು. ಜನರಿಗೆ ಸೂಕ್ತ ಸರ್ಕಾರ ಬೇಕು, ಯೋಗಿ ಸರ್ಕಾರವಲ್ಲ ಎಂದು ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ನವದೆಹಲಿ: ಚರ್ಚೆಯಿಲ್ಲದೆ ಕೃಷಿ ಕಾನೂನುಗಳ ರದ್ದುಗೊಳಿಸಿರುವುದು ದುರಾದೃಷ್ಟಕರ ಸಂಗತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರ್ಚೆಯಿಲ್ಲದೆ ಉಭಯ ಸದನಗಳಲ್ಲಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರಗಳನ್ನು ತೆಗೆದುಕೊಂಡಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಯಾದಗಿರಿಯಲ್ಲಿ ಪೊಲೀಸರ ದೌರ್ಜನ್ಯಕ್ಕೆ ಬಡ ಜೀವ ಬಲಿ
ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಲಿದೆ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ಅದೇ ರೀತಿ ಕಾಯ್ದೆಯನ್ನು ರದ್ದುಪಡಿಸಿದೆ. ಆದರೆ ಚರ್ಚೆಯಿಲ್ಲದೆ ಕಾಯ್ದೆ ಹಿಂಪಡೆದುಕೊಂಡಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಚರ್ಚೆ ನಡೆಸಲು ಸರ್ಕಾರಕ್ಕೆ ಭಯವಿದೆ. ರೈತರು ಪ್ರತಿನಿಧಿಸುವ ಭಾರತೀಯ ಜನರ ಬಲವನ್ನು ಎದುರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಉತ್ತಮ ಕಾರ್ಯ ನಿರ್ವಹಣೆ: ನಿರಾಣಿ ಹೇಳಿಕೆ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಮಹಾಮಳೆಯಿಂದ ರಾಜ್ಯಾದ್ಯಂತ ಭಾರೀ ಪ್ರಮಾಣದ ಬೆಳೆ ಹಾನಿ ಆಗಿದೆ. ಹೀಗಾಗಿ ರೈತರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಸಾಲ ಮನ್ನಾದಿಂದ ಆತ್ಮಹತ್ಯೆಗಳು ಕಡಿಮೆಯಾಗಿದ್ದವು. ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆಗಳು ಈಗ ಹೆಚ್ಚಾಗುತ್ತಿವೆ. ರೈತರಿಗೆ ಖರ್ಚು ವೆಚ್ಚದ ಶೇ.75 ರಷ್ಟು ಬೆಳೆಹಾನಿ ಪರಿಹಾರ ನೀಡಿ. ಅಭಿವೃದ್ಧಿ ಕಾಮಗಾರಿ ಬೇಕಾದ್ರೆ ಮುಂದೂಡಿ ರೈತರಿಗೆ ಸೂಕ್ತ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಕುಟುಕಿದ ಕುಮಾರಸ್ವಾಮಿ, ನನ್ನ ವಿರುದ್ಧ ಮಾತನಾಡಲ್ಲ ಅಂತಲೇ ಸಿದ್ದರಾಮಯ್ಯ ಮಾತನಾಡುತ್ತಾರೆ. 2013 ರ ವಿಧಾನಸಭೆ ಚುನಾವಣೆಯೇ ನನ್ನ ಗುರಿ. ಜನರ ವಿಶ್ವಾಸ ಗಳಿಸುವ ಕಾರ್ಯಕ್ರಮ ರೂಪಿಸುವುದು ನನ್ನ ಗುರಿ. ಜೆಡಿಎಸ್ ಹಾಗೂ ನನ್ನ ಬಗ್ಗೆ ಯಾರೇ ಲಘುವಾಗಿ ಮಾತನಾಡಿದ್ರೂ ಪ್ರತಿಕ್ರಿಯಿಸಲ್ಲ ಎಂದು ಕಟುವಾಗಿ ಹೆಚ್‍ಡಿಕೆ ಹೇಳಿದರು.
ಬೆಂಗಳೂರು: ಬೆಂಗಳೂರು: ರಾಜ್ಯದ ಹಲವೆಡೆ ಅಕಾಲಿಕ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಅಪಾರ ಹಾನಿ ಆಗಿದೆ. ಇಲ್ಲಿಯವರೆಗೆ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
658 ಮನೆಗಳಿಗೆ ಸಂಪೂರ್ಣ ಹಾನಿ, 8,498 ಮನೆಗಳಿಗೆ ಭಾಗಶಃ ಹಾನಿ ಆಗಿದೆ. 191 ಜಾನುವಾರಗಳು ಸಾವನ್ನಪ್ಪಿವೆ. 5 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆನಾಶವಾಗಿದ್ದು, 30,114 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. 2,203 ಕಿಮೀ ರಸ್ತೆ ಹಾಳಾಗಿದ್ದು, 165 ಸೇತುವೆಗಳಿಗೆ ಹಾನಿ ಆಗಿದೆ. 1,225 ಶಾಲಾ ಕಟ್ಟಡಗಳು, 39 ಪ್ರಾಥಮಿಕ ಆರೋಗ್ಯ ಕೇಂದ್ರ, 1,674 ವಿದ್ಯುತ್ ಕಂಬಗಳು, 278 ವಿದ್ಯುತ್ ಟ್ರಾನ್ಸ್‌ಫರ್‌ಗಳಿಗೆ ಹಾನಿ ಆಗಿದೆ. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ವರದಿಯಾಗಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ 3.43 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಬಾಕಿ ಇದ್ದ 79 ಸಾವಿರ ರೈತರಿಗೆ 52 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವಂತೆ ಸಿಎಂ ಬೊಮ್ಮಾಯಿ ಸೂಚಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಹಾನಿ ಪರಿಹಾರ ಕಾರ್ಯಕ್ಕೆ ಪ್ರತಿ ವಲಯಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅನಾಹುತ – ರಾಜಕಾಲುವೆ ಒಡೆದು ರಸ್ತೆ, ಮನೆಗಳಿಗೆ ನುಗ್ಗಿದ ನೀರು
ಇನ್ನೂ ಕಳೆದ ರಾತ್ರಿ ಬೆಂಗಳೂರಿನಲ್ಲಿ ಸಹ ಭಾರೀ ಮಳೆಯಾಗಿದ್ದು, ಹಲವಾರು ರಸ್ತೆಗಳು ಜಲಾವೃತಗೊಂಡಿದೆ. ಮತ್ತೊಂದೆಡೆ ರಾಜಕಾಲುವೆವೊಂದು ಒಡೆದು ಅನೇಕ ಮನೆಗಳಿಗೆ ನೀರು ನುಗ್ಗಿದೆ. ಒಟ್ಟಾರೆ ಅಕಾಲಿಕ ಮಳೆಗೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಇದನ್ನೂ ಓದಿ: ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ
ಹಾಸನ: ದೇಶದ ರೈತರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೆದರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ಕೃಷಿ ಕಾಯ್ದೆ ಹಿಂಪಡೆದಿದ್ದು ಅವರಿಗೆ ಇದು ಎಚ್ಚರಿಕೆ ಗಂಟೆ ಆಗಿದೆ ಎಂದು ಶಾಸಕ ಕೆ.ಎಮ್.ಶಿವಲಿಂಗೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ದೇಶದಲ್ಲಿ ರೈತರನ್ನು ಬಿಟ್ಟು ಯಾರು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಕೃಷಿ ಕಾಯ್ದೆಯನ್ನು ಹಲವು ತಿಂಗಳುಗಳ ಹಿಂದೆಯೇ ಹಿಂಪಡೆಯಬೇಕಾಗಿತ್ತು. ಆದರೆ ಇದುವರೆಗೂ ರೈತರ ಬಲಿ ಪಡೆದಿರುವ ಬಿಜೆಪಿ ಸರ್ಕಾರ ರೈತ ವಿರೋಧಿ ಕೆಲಸ ಮಾಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಜನರ ಕಲಿಸಲಿದ್ದಾರೆ ಎಂದರು.
ಕೃಷಿ ಕಾಯ್ದೆ ಹಿಂಪಡೆಯುವಂತೆ ಹಲವು ತಿಂಗಳಿಂದ ಹೋರಾಟ ನಡೆಸುತ್ತಿರುವ ರೈತರನ್ನು ನರಮೇಧ ಮಾಡಿದ ಬಿಜೆಪಿ ಸರ್ಕಾರ, ಇದುವರೆಗೆ ಸುಮಾರು 700 ಜನ ರೈತರ ಪ್ರಾಣವನ್ನು ತೆಗೆದು ಕರಾಳ ಶಾಸನ ವಾಪಸ್ ಪಡೆದಿದ್ದಾರೆ. ವಿಳಂಬ ನೀತಿಯೇ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಲ್ವಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ
ಇದೀಗ ನರೇಂದ್ರ ಮೋದಿ ಬಿಜೆಪಿಯವರಿಗೆ ಬುದ್ಧಿ ಬಂದಿದ್ದು ಉತ್ತರ ಭಾರತದಲ್ಲಿ ಚುನಾವಣೆ ಬಂದಿದೆ ಎಂದು ಕರಾಳ ಶಾಸನ ವಾಪಸ್ ಪಡೆದಿದ್ದೀರಿ. ರೈತರನ್ನು ಏನೆಂದುಕೊಂಡಿದ್ದೀರಿ. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸುತ್ತೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಂಧ್ರದ ಕಡಪಾದಲ್ಲಿ ಪ್ರವಾಹ – ಮೂವರು ಸಾವು, 30 ಮಂದಿ ನಾಪತ್ತೆ
ಕಾಯ್ದೆ ಹಿಂಪಡೆದಿರುವುದು ಸ್ವಾಗತಾರ್ಹ ಆದರೆ ಇಷ್ಟು ದಿನ ಏನು ಮಾಡುತ್ತಿದ್ದೀರಿ. ನೀವು ರೈತರ ನರಮೇಧ ಮಾಡಿದ್ದೀರಿ ನಮ್ಮದು ರೈತರ ಪರವಾದ ಸರ್ಕಾರ ಈ ಕಾಯ್ದೆ ವಿರುದ್ಧ ನಾವು ಕೂಡ ಹೋರಾಟ ಮಾಡಿದ್ದೇವೆ ಎಂದು ಜೆಡಿಎಸ್ ಪಕ್ಷ ಈ ಹಿಂದೆ ನಡೆಸಿದ ಹೋರಾಟವನ್ನು ಶಿವಲಿಂಗೇಗೌಡರು ಸಮರ್ಥಿಸಿಕೊಂಡರು.
ನವದೆಹಲಿ: ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ವಿವಾಧಿತ ಕೃಷಿ ಕಾನೂನನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. 355ದಿನಗಳ ಸುದೀರ್ಘವಾದ ರೈತರ ಹೋರಾಟಕ್ಕೆ ಫಲ ಸಿಕ್ಕಿದೆ.
ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ವೇಳೆ ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುತ್ತಿದ್ದು, 3 ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರ ಒಳಿತಿಗಾಗಿಯೇ ಕೃಷಿ ಕಾಯ್ದೆ ಜಾರಿಗೆ ತಂದಿದ್ದೆವು. ಈ 3 ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿದ್ದವು. ರೈತರ ಹಿತ ದೃಷ್ಟಿಯಲ್ಲಿಟ್ಟುಕೊಂಡೇ ಕಾಯ್ದೆ ಜಾರಿ ಮಾಡಲಾಗಿತ್ತು ಎಂದಿದ್ದಾರೆ.
ಯೋಜನೆ ಬಗ್ಗೆ ರೈತರಿಗೆ ತಿಳಿಸುವಲ್ಲಿ ಸಾಕಷ್ಟು ಯತ್ನಿಸಿದ್ದೇವೆ. ಆದರೆ ಕೆಲವು ರೈತರು ಕಾಯ್ದೆಯನ್ನು ಅವರ ಸಲಹೆ ಒಪ್ಪಿಕೊಂಡಿದ್ದರೂ ವಿರೋಧಿಸುತ್ತಿದ್ದಾರೆ. ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.
#WATCH | We have also decided to implement Zero Budget Natural Farming…To make MSP more efficient & other issues…a committee to be formed which will comprise, Centre, State representatives, farmers, scientists, economists…Our govt will continue to work for farmers: PM Modi pic.twitter.com/Y27eKzUScy
ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶದಲ್ಲಿ 100ರಲ್ಲಿ 80 ಪ್ರತಿಶತ ರೈತರು ಸಣ್ಣ ಹಿಡುವಳಿ ರೈತರಾಗಿದ್ದು, 10 ಕೋಟಿಗಿಂತ ಹೆಚ್ಚು ಸಣ್ಣ ರೈತರಿದ್ದಾರೆ. ಅವರ ಸಮಸ್ಯೆಗಳನ್ನು ನಾನು ಅರಿತಿದ್ದೇನೆ. ಅದನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಬೀಜ, ವಿಮೆ, ಮಾರುಕಟ್ಟೆ, ಉಳಿತಾಯಕ್ಕೆ ಯೋಜನೆಗಳಿಗಾಗಿ ರೈತರಿಗೆ ಫಸಲ್ ಬಿಮಾ, ಪೆನ್ಷನ್ ಯೋಜನೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.
#WATCH | PM Narendra Modi says, “Whatever I did, I did for farmers. What I’m doing, is for the country. With your blessings, I never left out anything in my hard work. Today I assure you that I’ll now work even harder, so that your dreams, nation’s dreams can be realised.” pic.twitter.com/pTWTEAut4P
ಕೃಷಿ ಮಾರುಕಟ್ಟೆ ಆಧುನೀಕರಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ರೈತರು ಈಗ ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಬಹುದು. ಕೃಷಿ ಬಜೆಟ್ ಮೊದಲಿಗಿಂತ 5 ಪಟ್ಟು ಹೆಚ್ಚಿಸಿದ್ದೇವೆ. ರೈತರಿಗೆ 22 ಕೋಟಿ ಸಾಯಿಲ್ ಹೆಲ್ತ್ ಕಾರ್ಡ್ ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.
ಕೋಲಾರ: ಆತ ಸಮಗ್ರ ಕೃಷಿಯಲ್ಲಿ ಲಾಭದಾಯಕ ಕಸುಬನ್ನಾಗಿ ಮಾಡಿಕೊಂಡ ಪದವೀಧರ. ಸ್ವಾವಲಂಬಿ ಜೀವನ ನಡೆಸಲು ಶಿಕ್ಷಕ ವೃತ್ತಿಯನ್ನ ತೊರೆದು ಕುರಿ, ಕೋಳಿ ಸಾಕಾಣಿಕೆ ಮಾಡಿ ಯಶಸ್ವಿಯಾದ ಉಪನ್ಯಾಸಕ. ಕೊರೊನಾ ಸಂಕಷ್ಟದಿಂದ ಬೇಸತ್ತ ಆಸಕ್ತಿಯಿಂದ ಮಾಡಿದರೆ ಎಲ್ಲವೂ ಸಾಧ್ಯ ಅನ್ನೋದನ್ನ ತೋರಿಸಿದ್ದಾರೆ.
ಹೀಗೆ ತನಗಿರುವ ಮೂರುವರೆ ಎಕರೆ ಜಮೀನಿನಲ್ಲಿ ವಿವಿಧ ತಳಿಯ ಕುರಿ, ಕೋಳಿ ಸಾಕಾಣಿಕೆ ಮಾಡುತ್ತಿರುವ ಬಿಎಡ್ ಪದವೀಧರ, ತನ್ನ ಯಶಸ್ವಿ ಸಮಗ್ರ ಕೃಷಿ ಬಗ್ಗೆ ಇತರೆ ರೈತರಿಗೆ ಹೇಳಿಕೊಡುತ್ತಿರುವ ಉಪನ್ಯಾಸಕ, ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಕೋಲಾರ ತಾಲೂಕಿನ ನೆರ್ನಹಳ್ಳಿಯ ಗ್ರೀನ್‍ವುಡ್ ಫಾರಂನಲ್ಲಿ.
ಗ್ರಾಮದ ಉಪನ್ಯಾಸಕ ಸುರೇಶ್ ಬಾಬು ತಮಗಿರುವ ಮೂರುವರೆ ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಬೇಸಾಯವನ್ನು ಮಾಡಿ ಸೈ ಎನಿಸಿಕೊಳ್ಳುವ ಜೊತೆಗೆ ಕಡಿಮೆ ಹಣದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ. ಸುರೇಶ್ ಬಾಬು ಈ ಹಿಂದೆ ಖಾಸಗಿ ಶಾಲೆಯಲ್ಲಿ 10 ವರ್ಷಗಳ ಕಾಲ ಮೈಸೂರು, ಬಾಗೇಪಲ್ಲಿಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ
ಇವರಿಗೆ ಈ ಕೆಲಸದಲ್ಲಿ ಸಂತೃಪ್ತಿ ಸಿಗದ ಕಾರಣ ಹಾಗೂ ಕೊರೊನಾದಿಂದ ಬೇಸತ್ತು ಉದ್ಯೋಗಕ್ಕೆ ಸಲಾಂ ಹೊಡೆದು ಗ್ರಾಮದದತ್ತ ಹೆಜ್ಜೆ ಹಾಕಿದರು. ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿಯಲ್ಲಿ ನಾನಾ ರೀತಿಯ ಪ್ರಯೋಗ ಮಾಡುವ ಮೂಲಕ ಯಶಸ್ವಿ ರೈತನಾಗಿದ್ದಾನೆ. ತನಗಿರುವ 4 ಎಕರೆ ಜಮೀನಿನಲ್ಲಿ ಅರ್ಧ ಎಕರೆ ಕುರಿ ಸಾಕಾಣಿಕೆ ಶೆಡ್ ಮತ್ತು ಅದರ ಕೆಳಗೆ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ.
ಜೊತೆಗೆ ಪೈಟರ್ ಹುಂಜುಗಳನ್ನು ಸಾಕುತ್ತಿದ್ದು, ಕಡಿಮೆ ಆದಾಯದಲ್ಲಿ ಹೆಚ್ಚು ಲಾಭ ಮಾಡುವ ಸಮಗ್ರ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ ಮಾಜಿ ಉಪನ್ಯಾಸಕ ಕಮ್ ರೈತ ಸುರೇಶ್. ಸುರೇಶ್ ಬಾಬು ಅವರ ತಮ್ಮ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತಿರುವುದು ತಮ್ಮ ಸಹೋದರ ನರಸಿಂಹ ರೆಡ್ಡಿ. ತನ್ನ ತಮ್ಮನ ಕೃಷಿ ಅನುಭವವನ್ನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸಹೋದರರಿಬ್ಬರೆ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ:ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ
ವರ್ಷಕ್ಕೆ 8 ರಿಂದ 10 ಲಕ್ಷ ಆದಾಯ ಪಡೆಯುತ್ತಿರುವ ಸುರೇಶ್ ಬಾಬು ತಮ್ಮ ಜಮೀನಿನಲ್ಲಿ ಕುರಿ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಪೈಟರ್ ಹುಂಜುಗಳ ಸಾಕಾಣಿಕೆ, ಮೀನು ಸಾಕಾಣಿಕೆ, ಹೆಬ್ಬೇವು, ಶ್ರೀಗಂಧ, ರಕ್ತಚಂದನ ಹೀಗೆ ಸಮಗ್ರ ಕೃಷಿ ಮೂಲಕ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಕೇವಲ ಟಗರುಗಳನ್ನು ಮಾತ್ರ ಸಾಕಾಣಿಕೆ ಮಾಡುತ್ತಿದ್ದು, ಇವುಗಳನ್ನು ಚಿತ್ರದುರ್ಗ, ಮೈಸೂರಿನ ಕಿರಗವಲ್ಲು, ಬನ್ನೂರು ಹಾಗೂ ಆಂದ್ರಪ್ರದೇಶ ಪೆನ್ನಕೊಂಡ ಗ್ರಾಮಗಳಿಂದ ತಂದು ಸಾಕಾಣಿಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್
ಕುರಿ ಮತ್ತು ಕೋಳಿಗಳಿಗೆ ಬೇಕಾಗಿರುವ ಆಹಾರವನ್ನ ಸಾವಯವ ಆಹಾರವನ್ನ ತಯಾರಿ ಮಾಡಿಕೊಂಡು ಹೆಬೇವು, ಸುಬಾಬುಲ್ಲ, ಅಜೋಲಾವನ್ನು ಇವರೇ ಬೆಳೆದುಕೊಳ್ಳವುದರಿಂದ ಮೇವಿನ ಸಮಸ್ಯೆ ಇಲ್ಲ. ಹೆಚ್ಚೇಚ್ಚು ಬೇಡಿಕೆ ಇರುವ ರಾಜ್ಯದ ಬೇರೆ ಭಾಗಗಳ ತಳಿಗಳೆ ಹೆಚ್ಚು, ಇದ್ರಿಂದ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು, ಖಾಸಗಿ ಉದ್ಯೋಗಕ್ಕಿಂತ ಭೂಮಿಯನ್ನು ನಂಬಿದರೆ ಯಾವುದೇ ಮೋಸವಿಲ್ಲ ಎನ್ನುವುದು ರೈತನ ಮಾತು.
ಒಟ್ನಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕ ವೃತ್ತಿಯನ್ನ ತೊರೆದು ರೈತ ಶ್ರದ್ದಾ ಭಕ್ತಿಯಿಂದ ಮಾಡಿದ್ರೆ ಎಲ್ಲಾ ಒಲಿಯುತ್ತೆ ಅನ್ನೋದಕ್ಕೆ ಈತನೆ ಮಾದರಿ. ಕೆಲಸ ಯಾವುದೇ ಇರಲಿ ಆಸಕ್ತಯಿಂದ ಮಾಡಿದ್ರೆ ಯಶಸ್ವಿ ಕಾಣಬಹುದು ಅನ್ನುವ ಮೂಲಕ ಈಡೀ ನಿರುದ್ಯೋಗಿ ಪದವೀಧರ ಸಮುದಾಯಕ್ಕೆ ಮಾದರಿಯಾಗಿ ನಿಂತಿದ್ದಾರೆ ಈ ರೈತ.
ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಾಂತ ಧಾರಕಾರ ಮಳೆ ಒಂದೆಡೆಯಾದ್ರೆ ಮತ್ತೊಂದೆಡೆ ಎಚ್ ಎನ್ ವ್ಯಾಲಿ ಯೋಜನೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಆಗಿ ರೈತರು ಸಂಕಷ್ಟಕ್ಕಿಡಾಗುವಂತೆ ಮಾಡಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಚಲಕಾಯಲಪರ್ತಿ ಗ್ರಾಮದಲ್ಲಿ ನೂರಾರು ಎಕರೆ ಬೆಳೆಗಳು ಜಲಾವೃತವಾಗಿ ರೈತರು ಸಂಕಷ್ಟಕ್ಕೀಡಾಗುವಂತೆ ಮಾಡಿದೆ. ಗುಲಾಬಿ, ಸೇವಂತಿಗೆ, ಚೆಂಡು ಹೂ, ಆಲೂಗಡ್ಡೆ, ದ್ರಾಕ್ಷಿ, ಮಾವು, ರಾಗಿ ಸೇರಿದಂತೆ ತೋಟಗಾರಿಕಾ ಬೆಳೆಗಳು ಸಂಪೂರ್ಣ ಜಲಾವೃತವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಅಂದಹಾಗೆ ಚಲಕಾಯಲಪರ್ತಿ ಗ್ರಾಮದ ಸುತ್ತಮುತ್ತಲೂ ಮೂರು ಕೆರೆಗಳಿದ್ದು, ಮೂರು ಕೆರೆಗಳಿಗೆ ಮೊದಲು ಎಚ್ ಎನ್ ವ್ಯಾಲಿ ಯೋಜನೆಯಿಂದ ನೀರು ತುಂಬಿಸಲಾಗಿತ್ತು. ಇತ್ತೀಚೆಗೆ ಬೇರೆ ಧಾರಕಾರ ಮಳೆಯಾಗಿದೆ. ಮಳೆಯಾಗಿದ್ರೂ ಸಹ ಈಗಲೂ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಎಚ್ ಎನ್ ವ್ಯಾಲಿ ಯೋಜನೆಯ ನೀರನ್ನ ಹರಿಬಿಡಲಾಗುತ್ತಿದೆ. ಆದರೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸರಾಗವಾಗಿ ನೀರು ಸಾಗಲು ಸಮರ್ಪಕವಾದ ಕಾಲುವೆಗಳನ್ನ ಮಾಡಿಲ್ಲ. ಕಾಲುವೆಗಳನ್ನ ಮಾಡದೆ ಹಾಗೆ ಕೆರೆಗಳಿಗೆ ನೀರನ್ನ ಹರಿದುಬಿಡಲಾಗುತ್ತಿದ್ದು, ಇದರಿಂದ ಕಾಲುವೆ ಅಕ್ಕಪಕ್ಕದ ರೈತರ ಜಮೀನುಗಳು ಜಲಾವೃತವಾಗುತ್ತಿವೆ.
ಕೆರೆಗಳು ಸಹ ಮೈದುಂಬಿಕೊಂಡಿದ್ದು, ಗೊಳ್ಳು ಗ್ರಾಮಸ್ಥರು ತಮ್ಮೂರಿನ ಕೆರೆಯ ನೀರನ್ನ ಹೊರಗೆ ಬಿಡೋಕೆ ಅಡ್ಡಿಪಡಿಸುತ್ತಿದ್ದಾರೆ. ಕೆರೆಯ ಹಿಂಭಾಗಕ್ಕೆ ನೀರು ನುಗ್ಗುತ್ತಿದ್ದು, ಇದರಿಂದ ಹಿನ್ನೀರಿನ ಪ್ರದೇಶದಲ್ಲಿರೋ ರೈತರು ಜಮೀನುಗಳೆಲ್ಲವೂ ಮುಳುಗಡೆಯಾಗಿ ಬೆಳೆದ ಬೆಳೆಗಳೆಲ್ಲವೂ ಕೆರೆಯ ನೀರು ಪಾಲಾಗಿವೆ. ಇದರಿಂದ ಲಕ್ಷಾಂತರ ಬಂಡವಾಳ ಹೂಡಿ ಬೆಳೆದಿದ್ದ ಬೆಳೆಗಳೆಲ್ಲವೂ ಕಣ್ಣೆದುರೇ ಹಾಳಾಗುತ್ತಿದ್ದು, ರೈತರು ಏನೂ ಮಾಡಲಾಗದೆ ದಿಕ್ಕು ತೋಚದಂತಾಗಿದ್ದಾರೆ. ಹೀಗಾಗಿ ಅಧಿಕಾರಿಗಳು ಕೂಡಲೇ ಸೂಕ್ತ ಕಾಲುವೆಗಳ ನಿರ್ಮಾಣ ಮಾಡಿ, ಗೊಳ್ಳು ಗ್ರಾಮದ ಕೆರೆಯ ನೀರನ್ನ ಮುಂದಿನ ಕೆರೆಗೆ ಬಿಟ್ಟರೆ ಹಿನ್ನೀರಿನ ಪ್ರದೇಶದ ಬೆಳೆಗಳು ಉಳಿದುಕೊಳ್ಳಲಿವೆ ಅಂತ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬಸ್ಥರಿಂದ ಹಲ್ಲೆ ಪ್ರಕರಣ- ಮನೆ ಸೆಕ್ಯೂರಿಟಿ ಗಾರ್ಡ್ ಅರೆಸ್ಟ್
ಗ್ರಾಮದ ರೈತ ಗಂಗಾಧರ್ ಮಾತನಾಡಿ, ಮೊದಲಿಗೆ ಎಚ್ ಎನ್ ವ್ಯಾಲಿ ಯೋಜನೆಯ ಮೂಲಕ ನಮ್ಮೂರಿನ ಕೆರೆಗೆ ಕಟ್ಟೆಯನ್ನ ನಿರ್ಮಾಣ ಮಾಡಿದ್ದು ಅದು ಅವೈಜ್ಞಾನಿಕವಾಗಿದೆ. ಕೆರೆಗೆ ನೀರು ಹರಿಯುವ ಜಾಗಗಳನ್ನ ಮುಚ್ಚಿ ಹಾಕಿ ತಡೆಗೋಡೆ ಮಾಡಿದ್ದಾರೆ. ಇದರಿಂದ ಕೆರೆಗೆ ನೀರು ಹರಿಯದೆ ಮಳೆಯಾದಾಗ ರೈತರ ಜಮೀನುಗಳಲ್ಲೇ ಉಳಿದುಕೊಳ್ಳುತ್ತಿದೆ. ಕೆರೆಯ ತೂಬನ್ನ ಸಹ ತುಂಬಾ ಕೆಳಗೆ ಆಳವಡಿಸಿರೋದ್ರಿಂದ ಕೆರೆ ಸಂಪೂರ್ಣವಾಗಿ ತುಂಬದೆ ಮತ್ತೊಂದು ಕೆರೆಗೆ ಹೋಗುತ್ತಿದ್ದು, ಜಮೀನುಗಳನ್ನ ಜಲಾವೃತ ಮಾಡುತ್ತಿದೆ. ಎಚ್ ಎನ್ ವ್ಯಾಲಿ ಯೋಜನೆ ಅಧಿಕಾರಿಗಳು ಮಾಡಿರುವ ಎಡವಟ್ಟಿಗೆ ರೈತರು ಪರದಾಡುವಂತಾಗಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಇದೇ ರೀತಿ ಹಲವು ಗ್ರಾಮಗಳಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ಕೆರೆಯ ಅಕ್ಕ ಪಕ್ಕದ ಜಮೀನುಗಳೆಲ್ಲವೂ ಜಲಾವೃತವಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.
ಅಧಿಕಾರಿಗಳು ಹೇಳೋದು ಏನು…?
ಈ ಬಗ್ಗೆ ಪಬ್ಲಿಕ್ ಟಿವಿ ಗೆ ಪ್ರತಿಕ್ರಿಯಿಸಿರುವ ಎಚ್ ಎನ್ ವ್ಯಾಲಿ ಯೋಜನೆಯ ಎಇಇ ರವೀಂದ್ರನಾಥ್, ಕೆರೆಗಳಿಗೆ ಆದಷ್ಟು ಬೇಗ ನೀರು ತುಂಬಿಸುವ ಉದ್ದೇಶದಿಂದ ಕಳೆದ 1 ವರ್ಷದಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿತ್ತು. ಕೆರೆಯಿಂದ ಕೆರೆಗೆ ನೀರು ಹರಿಸಲು ಕಾಲುವೆಗಳನ್ನ ಮಾಡಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮಾಡಲಾಗಲಿಲ್ಲ. ಇರುವ ಕಾಲುವೆಗಳ ಮುಖಾಂತರವೇ ನೀರು ಹರಿಸಲಾಗುತ್ತಿತ್ತು. ಆದರೆ ಈಗ ಊಹಿಸದಂತಹ ಮಳೆಯಾದ ಪರಿಣಾಮ ಯಥೇಚ್ಛವಾದ ಮಳೆ ನೀರು ಬಂದಿದ್ದು, ಸಹಜವಾಗಿ ಬೆಳೆಗಳು ಜಲಾವೃತವಾಗಿವೆ. ಆದಷ್ಟು ಬೇಗ ಸಮರ್ಪಕ ಕಾಲುವೆಗಳನ್ನ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಅಂತ ಭರವಸೆ ನೀಡಿದ್ದಾರೆ.