Tag: farmer

  • ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ತುಮಕೂರು: ವಾಹನ ಖರೀದಿಗೆ ಮಹೀಂದ್ರಾ ಶೋ ರೂಂಗೆ ಬಂದು ಅವಮಾನಕ್ಕೊಳಗಾದ ರೈತನ ಮನೆಗೆ ಇದೀಗ ಮಹೀಂದ್ರ ಗೂಡ್ಸ್ ವಾಹನ ಬಂದಿದೆ. ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ಅವರು ಟ್ವೀಟ್ ಮಾಡಿ ರೈತನಿಗೆ ಶುಭ ಕೋರಿದ್ದಾರೆ.

    ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಈ ಕುರಿತು ಸ್ವತಃ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ರೈತ ಕೆಂಪೇಗೌಡರು ಮಹಿಂದ್ರಾ ಗೂಡ್ಸ್ ವಾಹನ ಖರೀದಿ ಮಾಡಿದ್ದಾರೆ. ಇಂದು ಮಹೀಂದ್ರಾ ಆಟೋಮೋಟಿವ್, ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದೆ. ಈ ಬಗ್ಗೆ ರೈತ ಕೆಂಪೇಗೌಡರ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ

    ಟ್ವೀಟ್‍ನಲ್ಲಿ ಏನಿದೆ?: ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.

    ನಡೆದಿದ್ದೇನು?: ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡ, ತುಮಕೂರಿನ ರಾಮನಪಾಳ್ಯದಲ್ಲಿ ಮಹೀಂದ್ರಾ ಶೋ ರೂಂಗೆ ವಾಹನ ಖರೀದಿಗೆ ಹೋಗಿದ್ದರು. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದರು. ಬೊಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ರೈತನಿಗೆ ಅವಮಾನ ಮಾಡಲಾಗಿತ್ತು.

    ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್, ಕೆಂಪೇಗೌಡರನ್ನು ಅವಮಾನಿಸಿದ್ದರು. ಅವಮಾನಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಆನಂದ್ ಮಹೀಂದ್ರಾ ಅವರು ಗೋಡ್ಸ್ ಗಾಡಿಯನ್ನು ರೈತನ ಮನೆಗೆ ತಲುಪಿಸಿದ್ದಾರೆ.

  • ಕೆಆರ್ ಪೇಟೆಯಲ್ಲಿ ಪೊಲೀಸರಿಂದ ರೈತರ ಮೇಲೆ ಲಾಠಿ ಚಾರ್ಜ್

    ಕೆಆರ್ ಪೇಟೆಯಲ್ಲಿ ಪೊಲೀಸರಿಂದ ರೈತರ ಮೇಲೆ ಲಾಠಿ ಚಾರ್ಜ್

    ಮಂಡ್ಯ: ದನದ ಜಾತ್ರೆ ನಡೆಸುವ ವಿಚಾರವಾಗಿ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಪೊಲೀಸರು ಒಂದಿಬ್ಬರೂ ರೈತರ ಮೇಲೆ ಲಾಠಿ ಚಾರ್ಜ್ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹೇಮಗಿರಿಯಲ್ಲಿ ಜರುಗಿದೆ.

    mandya

    ಹೇಮಗಿರಿಯಲ್ಲಿ ಪ್ರತಿವರ್ಷ ಹತ್ತು ದಿನಗಳ ಕಾಲ ದನದ ಜಾತ್ರೆ ನಡೆಯುತ್ತದೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣವಾಗಿ ಈ ಜಾತ್ರೆ ಜರುಗಿರಲಿಲ್ಲ. ಅದೇ ರೀತಿ ಈ ಬಾರಿಯೂ ಸಹ ಜಿಲ್ಲಾಡಳಿತ ಕೊರೊನಾ ಕಾರಣದಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿ ಯಾವುದೇ ಜಾತ್ರೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ರೈತರು ಕಳೆದ ಎರಡು ವರ್ಷದಿಂದ ಜಾತ್ರೆ ಮಾಡಿಲ್ಲ. ಈ ಬಾರಿಯಾದರೂ ಜಾತ್ರೆ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯನವ್ರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ ಪಕ್ಷಾಂತರವೋ: ಬಿಜೆಪಿ ವ್ಯಂಗ್ಯ

    mandya

    ಅದರಂತೆ ಇಂದು ಹೇಮಗಿರಿಗೆ ನೂರಾರು ರೈತರು ಸಾವಿರಾರು ಸಂಖ್ಯೆಯಲ್ಲಿ ದನಗಳನ್ನು ಕರೆತಂದಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಈ ಬಾರಿಯೂ ಸಹ ಜಾತ್ರೆ ನಡೆಸುವಂತಿಲ್ಲ. ಎಲ್ಲರೂ ತಮ್ಮ-ತಮ್ಮ ಊರುಗಳಿಗೆ ಹೊರಡಿ ಎಂದು ಹೇಳಿದ್ದಾರೆ. ಈ ವೇಳೆ ರೈತರು ರಾಜಕಾರಣಿಗಳು ಸಮಾವೇಶ, ಸಭೆ, ಸಮಾರಂಭಗಳನ್ನು ಮಾಡಬಹುದು, ಆಗ ಕೊರೊನಾ ನಿಯಮಗಳು ಬರುವುದಿಲ್ಲ. ರೈತರು ಎಂದಾಕ್ಷಣ ನಿಮಗೆ ಕೊರೊನಾ ನಿಯಮ ನೆನಪಿಗೆ ಬರುತ್ತದೆ ಎಂದು ಪೊಲೀಸರ ನಡುವೆ ಮಾತಿನ ಚಕಮಕಿಗೆ ನಡೆದಿದೆ.

    mandya

    ಪೊಲೀಸರು ಜಾತ್ರೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ರೈತರಿಗೆ ಹೇಳಿದ್ದಾರೆ. ಈ ಮಾತನ್ನು ರೈತರು ಒಪ್ಪಿಕೊಳ್ಳದ ಕಾರಣ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ ಒಂದಿಬ್ಬರು ರೈತರಿಗೆ ಗಾಯಗಳಾಗಿದೆ. ಈ ಕಾರಣಕ್ಕೆ ರೈತರು ಅಲ್ಲೇ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ರೈತರ ಆಕ್ರೋಶಕ್ಕೆ ಮಣಿದ ಪೊಲೀಸರು ಕೊರೋನಾ ನಿಯಮ ಪಾಲಿಸಕೊಂಡು ಜಾತ್ರೆ ನಡೆಸಿ ಎಂದು ಅನುಮತಿ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

  • ಶೋರೂಮ್‍ನಲ್ಲಿ ರೈತನಿಗೆ ಅವಮಾನ – ಆನಂದ್ ಮಹಿಂದ್ರಾ ಹೇಳಿದ್ದೇನು?

    ಶೋರೂಮ್‍ನಲ್ಲಿ ರೈತನಿಗೆ ಅವಮಾನ – ಆನಂದ್ ಮಹಿಂದ್ರಾ ಹೇಳಿದ್ದೇನು?

    ನವದೆಹಲಿ: ಇತ್ತೀಚೆಗೆ ಕರ್ನಾಟಕದ ರೈತನೊಬ್ಬ ಬೊಲೆರೋ ಪಿಕ್‍ಅಪ್ ಟ್ರಕ್ ಖರೀದಿಸಲು ಶೋರೂಮ್‍ಗೆ ಹೋಗಿದ್ದಾಗ ಅಲ್ಲಿನ ಸೇಲ್ಸ್‍ಮ್ಯಾನ್ ರೈತನಿಗೆ ಅವಮಾನ ಮಾಡಿದ್ದಾಗಿ ಸುದ್ದಿಯಾಗಿತ್ತು. ಇದೀಗ ಕೈಗಾರಿಕೋದ್ಯಮಿ ಆನಂದ್ ಮಹಿಂದ್ರಾ ಈ ವಿಚಾರವಾಗಿ ಸಂದೇಶ ನೀಡಿದ್ದಾರೆ.

    ಮಂಗಳವಾರ ಸಾರ್ವಜನಿಕ ಪ್ರತಿಕ್ರಿಯೆಯಲ್ಲಿ ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವ ಮಹತ್ವದ ಬಗ್ಗೆ ಆನಂದ್ ಮಹಿಂದ್ರಾ ಒತ್ತಿ ಹೇಳಿದ್ದಾರೆ. ಮಹಿಂದ್ರಾ ಕಂಪನಿಯ ಮುಖ್ಯ ಉದ್ದೇಶ ಸಮುದಾಯ ಹಾಗೂ ಎಲ್ಲಾ ಪಾಲುದಾರರನ್ನು ಹೆಚ್ಚಿಸಲು ಅನುವು ಮಾಡಿ ಕೊಡುವುದು. ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಒಂದು ಪ್ರಮುಖ ಮೌಲ್ಯವಾಗಿದೆ ಎಂದು ಮಹಿಂದ್ರಾ ಸಿಇಒ ವಿಜಯ್ ನಕ್ರಾ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಮಾ.28 ರಿಂದ ಆರಂಭ

    ಈ ಕುರಿತು ವಿಜಯ್ ನಕ್ರಾ, ಆನಂದ್ ಮಹಿಂದ್ರಾ ಅವರ ಸಂದೇಶವನ್ನು ತಿಳಿಸಿದ್ದು ಘಟನೆಯ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಕಳೆದ ವಾರ ತುಮಕೂರು ಮೂಲದ ರೈತನೊಬ್ಬ ಬೊಲೆರೋ ಪಿಕ್‍ಅಪ್ ಟ್ರಕ್ ಖರೀದಿಸಲು ಶೋರೂಮ್‍ಗೆ ತೆರಳಿದ್ದ. ಆದರೆ ಶೋರೂಮ್‍ನ ಸೇಲ್ಸ್‍ಮ್ಯಾನ್ 10 ಲಕ್ಷ ರೂ.ಯ ಕಾರ್ ಅನ್ನು ಖರೀದಿಸಲು 10 ರೂ. ನಿನ್ನ ಬಳಿ ಇಲ್ಲ ಎಂದು ವ್ಯಂಗ್ಯ ಮಾಡಿದ್ದ. ಇದನ್ನು ರೈತ ಸವಾಲಾಗಿ ತೆಗೆದುಕೊಂಡು ಕೇವಲ ಒಂದು ಗಂಟೆಯಲ್ಲಿ 10 ಲಕ್ಷ ರೂ. ಯೊಂದಿಗೆ ಶೋರೂಮ್‍ಗೆ ಮರಳಿದ್ದ. ಇದನ್ನೂ ಓದಿ: ಸಾಲ ವಸೂಲಿಯಲ್ಲೂ ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಎಎಪಿ ಆರೋಪ

    ಆಕ್ರೋಶಗೊಂಡಿದ್ದ ರೈತನ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಟ್ವಿಟ್ಟರ್‍ನಲ್ಲಿ ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹಿಂದ್ರಾಗೆ ಟ್ಯಾಗ್ ಮಾಡಲಾಗಿತ್ತು.

  • 8 ಲಕ್ಷ ಕೊಟ್ಟು ಎತ್ತು ತಂದ ಕಾಫಿನಾಡ ರೈತ- ಏನಿದರ ವಿಶೇಷತೆ..?

    8 ಲಕ್ಷ ಕೊಟ್ಟು ಎತ್ತು ತಂದ ಕಾಫಿನಾಡ ರೈತ- ಏನಿದರ ವಿಶೇಷತೆ..?

    ಚಿಕ್ಕಮಗಳೂರು: ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಲೆಂದೇ ತಾಲೂಕಿನ ತೇಗೂರು ಗ್ರಾಮದ ರೈತ ಮಂಜುನಾಥ್ ಒಂದೇ ಒಂದು ಎತ್ತಿಗೆ 8 ಲಕ್ಷ ಹಣ ನೀಡಿ ತಂದು ಇದು ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆ ಎಂದಿದ್ದಾರೆ.

    ನಾನು ಎಲ್ಲಿಗೆ ಹೋಗಿ ಜೋಡಿ ಎತ್ತಿನಗಾಡಿ ಸ್ಪರ್ಧೆಯಲ್ಲಿ ಗೆದ್ದರೂ ಚಿಕ್ಕಮಗಳೂರು ಹೆಸರು ಬರುತ್ತೆ ಅದೇ ನಮ್ಮ ಹೆಮ್ಮೆ ಎಂದಿದ್ದಾರೆ. ಕಳೆದೊಂದು ವರ್ಷದ ಹಿಂದೆ ಈ ಎತ್ತು ಇದೇ ಮಂಜುನಾಥ್‍ಗೆ ಮಾರಾಟವಾಗಿತ್ತು. ಆದರೆ ಕೊಟ್ಟ ಅಡ್ವಾನ್ಸ್ ಕೂಡ ವಾಪಸ್ ಬರಲಿಲ್ಲ. ಮೋಸ ಮಾಡಿದರು. ಬಳಿಕ ಅದೇ ಎತ್ತನ್ನ ತರಬೇಕು ಎಂದು ಅಂದಿನಿಂದ ಹಠಕ್ಕೆ ಬಿದ್ದ ಮಂಜುನಾಥ್, 10 ಲಕ್ಷವಾದರೂ ಪರವಾಗಿಲ್ಲ ಅದೇ ಎತ್ತು ಬೇಕೆಂದು ಎಂಟು ಲಕ್ಷ ಕೊಟ್ಟು ತಂದಿದ್ದಾರೆ. ಮೈಸೂರು ಜಿಲ್ಲೆಯಲ್ಲಿದ್ದ ಈ ಎತ್ತನ್ನ ತರಲು ಹೋಗುವಾಗ 10 ಲಕ್ಷದೊಂದಿಗೆ ಹೋಗಿದ್ದರು. 10 ಲಕ್ಷವಾದರೂ ಎತ್ತನ್ನ ತಂದೇ ತರಬೇಕು ಅಂತ. ಆದರೆ ಮಾತಿಗೆ ಕೂತಾಗ 7 ಲಕ್ಷದ 78 ಸಾವಿರಕ್ಕೆ ಮಾತುಕಥೆ ಮಾಡಿ ತಂದಿದ್ದಾರೆ. ಎತ್ತನ್ನ ಚಿಕ್ಕಮಗಳೂರಿಗೆ ತರುವಷ್ಟರಲ್ಲಿ 8 ಲಕ್ಷ ಖರ್ಚಾಗಿದೆ.

    ಈ ಎತ್ತಿನ ವೇಗಕ್ಕೆ ಬೆಲೆಕಟ್ಟಲಾಗಲ್ಲ:
    ಈ ಎತ್ತು ಹಳ್ಳಿಕಾರ್ ತಳಿಯದ್ದು. ಭಾರತೀಯ ರಾಸುಗಳ ತಳಿಗಳಲ್ಲೇ ಈ ತಳಿ ಶ್ರೇಷ್ಠವಾದ ತಳಿ, ಕೆಲಸಕ್ಕೂ ಸೈ. ಓಟಕ್ಕೂ ಸೈ. ದಣಿವರಿಯದೆ ದುಡಿಯುವ ಈ ಜಾತಿಯ ರಾಸುಗಳಿಗೆ ಭಾರೀ ಡಿಮ್ಯಾಂಡ್. ಆದರೆ ಈ ತಳಿಯ ರಾಸು ಈ ರೀತಿ 8 ಲಕ್ಷಕ್ಕೆ ಮಾರಾಟವಾಗಿರುವುದು ಇದೇ ಮೊದಲು. ಮಂಜುನಾಥ್, ಈ ರಾಸುವನ್ನ ಎಂಟು ಲಕ್ಷ ನೀಡಿ ತಂದಿರೋದು ದುಡ್ಸೋದಕ್ಕಲ್ಲ. ಬದಲಾಗಿ ರೇಸ್‍ಗಳಲ್ಲಿ ಓಡಿಸೋದಕ್ಕೆ. ಮಂಜುನಾಥ್‍ಗೆ ಜೋಡಿ ಎತ್ತಿನಗಾಡಿ ಸ್ಪರ್ಧೆ ಅಂದ್ರೆ ತುಂಬಾ ಇಷ್ಟ. ರಾಜ್ಯದಲ್ಲಿ ಎಲ್ಲೇ ಸ್ಪರ್ಧೆ ನಡೆದರೂ ಬಿಡುವುದಿಲ್ಲ. ಹೋಗಿ ಬರುತ್ತಾರೆ. ಹಾಗಾಗಿ ಎತ್ತಿನಗಾಡಿ ಸ್ಪರ್ಧೆಗೆಂದೇ ಮಂಜುನಾಥ್ ಈಗ 8 ಲಕ್ಷ ನೀಡಿ ಈ ರಾಸುವನ್ನ ತಂದು ಗಗನ್ ಎಂದು ಹೆಸರಿಟ್ಟಿದ್ದಾರೆ. ಊರಿನ ಜನ ತಮ್ಮ ಊರಿಗೆ ಬಂದ ನೂತನ ಅತಿಥಿಯ ಪಾದಪೂಜೆ ಮಾಡುವ ಮೂಲಕ ಊರಿಗೆ ಸ್ವಾಗತ ಕೋರಿದ್ದಾರೆ.

    ಗಗನ್ ಬುದ್ಧಿವಂತ ಎತ್ತು:
    ಈ ಗಗನ್ ಓಡೋದಕ್ಕೆ ನಿಂತರೆ ಕುದುರೆ-ಚಿರತೆ ಇದ್ದಂತೆ. ಈಗಾಗಲೇ ರಾಜ್ಯಾದ್ಯಂತ ಹತ್ತಾರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಕೂಡ ಗೆದ್ದಿದೆ. ಅದಕ್ಕಾಗೇ ಮಂಜುನಾಥ್ ಈ ಎತ್ತಿಗೆ ಎಂಟು ಲಕ್ಷ ನೀಡಿ ತಂದಿದ್ದಾರೆ. ಈ ಎತ್ತು ಸ್ಪರ್ಧೆಗಳಲ್ಲಿ ನಂಬರ್ ಒನ್ ಹೋರಿ. ಎಡಕ್ಕೆ ಕಟ್ಟಿದರೂ ಸೈ. ಬಲಕ್ಕೆ ಕಟ್ಟಿದರೂ ಸೈ. ಓಡುವಾಗ ಬೇರೆ ಎತ್ತುಗಳ ಗಾಡಿ ಅಡ್ಡ ಬಂದರೂ ಕ್ಷಣಾರ್ಧದಲ್ಲಿ ಪಥ ಬದಲಿಸಿ ಗುರಿ ಮುಟ್ಟುತ್ತೆ. ಇದರ ಮುಂದೆ ಬೇರೆ ಯಾವ ಎತ್ತುಗಳು ಓಡಲಾರವು. ಓಡುವಾಗಲೂ ಅಡ್ಡದಿಡ್ಡಿ ಓಡಲ್ಲ. ಒಂದೇ ಲೈನಲ್ಲಿ ಚಿರತೆಯಂತೆ ಓಡುತ್ತೆ. ದೇಶದಲ್ಲೇ ಹಳ್ಳಿಕಾರ್ ತಳಿಯ ಎತ್ತು ಎಂಟು ಲಕ್ಷಕ್ಕೆ ಮಾರಾಟವಾಗಿದ್ದು ಇದೇ ಮೊದಲು. ಲಕ್ಷಾಂತರ ರೂಪಾಯಿ ಹಣ ನೀಡಿ ಕಾರು ತಂದು ಶೆಡ್‍ನಲ್ಲಿ ನಿಲ್ಲಿಸುತ್ತೇವೆ. ಈ ಎತ್ತನ್ನ ನೋಡಲು ಡೈಲಿ 50 ಜನ ಮನೆಬಾಗಿಲಿಗೆ ಬರುತ್ತಾರೆ. ಇದು ಚಿಕ್ಕಮಗಳೂರಿನ ಹೆಮ್ಮೆ ಅಂತಾರೆ ಊರಿನ ಯುವಕರು.

  • BJP ಶಾಸಕ ಪಂಕಜ್ ಗುಪ್ತಗೆ ಕಪಾಳಮೋಕ್ಷ ಮಾಡಿದ ರೈತ

    BJP ಶಾಸಕ ಪಂಕಜ್ ಗುಪ್ತಗೆ ಕಪಾಳಮೋಕ್ಷ ಮಾಡಿದ ರೈತ

    ಲಕ್ನೋ: ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಉತ್ತರ ಪ್ರದೇಶದ ಸದರ್ ಕ್ಷೇತ್ರದ ಬಿಜೆಪಿ ಶಾಸಕ ಪಂಕಜ್ ಗುಪ್ತಗೆ ರೈತನೋರ್ವ ಸಾರ್ವಜನಿಕ ಸಭೆಯಲ್ಲೇ ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?: ವೇದಿಕೆ ಮೇಲೆ ಕುಳಿತಿದ್ದ ವೇಳೆ ಅಲ್ಲಿಗೆ ಬಂದ ವೃದ್ಧ ರೈತನೋರ್ವ ಪಂಕಜ್ ಗುಪ್ತ ಅವರ ಕೆನ್ನೆಗೆ ಹೊಡೆದಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆಯ ವೀಡಿಯೋ ಇದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!

    ರೈತನನ್ನು ಛತ್ರಪಾಲ್ ಎಂದು ಗುರುತಿಸಲಾಗಿದ್ದು, ಶಾಸಕರನ್ನು ವೇದಿಕೆಯ ಮೇಲೆ ಹೊಡೆದ ನಂತರ ಪೊಲೀಸರು ಆತನನ್ನು ಕರೆದುಕೊಂಡು ಹೋಗುತ್ತಿರುವುದನ್ನು ವೀಡಿಯೋ ತುಣುಕಿನಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ಆಸ್ಕರ್‌ ವಿಜೇತ ಮೊದಲ ಕಪ್ಪುವರ್ಣೀಯ ಸಿಡ್ನಿ ಪೊಯ್ಟಿಯರ್‌ ನಿಧನ

    ಶಾಸಕ ಪಂಕಜ್ ಗುಪ್ತ ಈ ಕುರಿತಾಗಿ ಮಾತನಾಡಿ, ಆ ವ್ಯಕ್ತಿ ನನ್ನ ಚಾಚಾ ಮಾಡಿದಂತೆ ಪ್ರೀತಿಯಿಂದ ಕೆನ್ನೆ ತಟ್ಟಿದ್ದಾರೆ ಎಂದು ಹೇಳಿದ್ದಾರೆ.

  • ವಿದ್ಯುತ್ ತಂತಿ ಕಟ್ ಆಗಿ ಶಾಕ್ ಹೊಡೆದು ರೈತ ಸಾವು

    ವಿದ್ಯುತ್ ತಂತಿ ಕಟ್ ಆಗಿ ಶಾಕ್ ಹೊಡೆದು ರೈತ ಸಾವು

    ದಾವಣಗೆರೆ: ವಿದ್ಯುತ್ ತಂತಿ ಕಟ್ ಆಗಿ ಶಾಕ್ ಹೊಡೆದು ರೈತರೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಆಲೂರು ಗ್ರಾಮದಲ್ಲಿ ನಡೆದಿದೆ.

    ಪೋಸ್ಟ್ ಬಸಪ್ಪ (67) ವರ್ಷದ ಮೃತ ದುರ್ದೈವಿ. ಅಡಿಕೆ ತೋಟದಲ್ಲಿ ನೀರಿನ ವಾಲ್ ತಿರುಗಿಸಲು ಹೋದಾಗ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ:  ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು: ಸಿ.ಟಿ.ರವಿ

    ವಿದ್ಯುತ್ ತಂತಿ ಕಟ್ ಆಗಿ ಬೇಲಿ ಮೇಲೆ ಬಿದ್ದಿತ್ತು. ತಂತಿಬೇಲಿ ಮುಟ್ಟುತ್ತಿದ್ದಂತೆ ಶಾಕ್ ಹೊಡೆದು ಸ್ಥಳದಲ್ಲಿಯೇ ಬಸಪ್ಪ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಕೆಇಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದ ದೇಗುಲಗಳಿಗೆ ಶೀಘ್ರ ಸ್ವಾತಂತ್ರ್ಯ- ಆದಾಯ ದೇವಾಲಯಗಳ ಅಭಿವೃದ್ಧಿಗೆ ಮೀಸಲು

    ಘಟನೆಯ ಕುರಿತು ದಾವಣಗೆರೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸಾಲಬಾಧೆ ತಾಳಲಾರದೆ ಕಾಲುವೆಗೆ ಬಿದ್ದು ರೈತ ಆತ್ಮಹತ್ಯೆ

    ಸಾಲಬಾಧೆ ತಾಳಲಾರದೆ ಕಾಲುವೆಗೆ ಬಿದ್ದು ರೈತ ಆತ್ಮಹತ್ಯೆ

    ಬಳ್ಳಾರಿ: ಸಾಲ ಬಾಧೆ ತಾಳದೆ ಕಾಲುವೆಗೆ ಬಿದ್ದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ತಾಲೂಕಿನ ಎಂ.ಗೋನಾಳ್ ಗ್ರಾಮದಲ್ಲಿ ನಡೆದಿದೆ.

    MONEY

    ಕರಿಬಸಪ್ಪ ಬಾರಿಕರ (34) ಆತ್ಮಹತ್ಯೆ ಮಾಡಿಕೊಂಡ ರೈತ. ಅಕಾಲಿಕ ಮಳೆಗೆ ಬೆಳೆ ನಾಶವಾದ ಹಿನ್ನಲೆ ಇವರು ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದರು. ಇದನ್ನೂ ಓದಿ: ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಎಸ್‍ಟಿಎಸ್ ಸೂಚನೆ

    ಮೆಣಸಿನಕಾಯಿ, ಭತ್ತ ಬೆಳೆದಿದ್ದ ರೈತ, ಅಕಾಲಿಕ ಮಳೆಗೆ ಬೆಳೆಯಲ್ಲ ನಾಶವಾಗಿದೆ. ಬೆಳೆ ನಾಶವಾದ ಹಿನ್ನಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ 20 ದಿನಗಳ ಅಂತರದಲ್ಲಿ 6 ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ನಂದಿನಿ ತುಪ್ಪದ ಜಾಲದ ಮೇಲೆ ಅಧಿಕಾರಿಗಳ ದಾಳಿ

  • ಟ್ರಾಕ್ಟರ್ ಕಾಲುವೆಗೆ ಬಿದ್ದು ರೈತ ಸಾವು

    ಟ್ರಾಕ್ಟರ್ ಕಾಲುವೆಗೆ ಬಿದ್ದು ರೈತ ಸಾವು

    ಗದಗ: ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಕಾಲುವೆಗೆ ಬಿದ್ದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದ ಬಳಿ ನಡೆದಿದೆ.

    ಚಿಕ್ಕನರಗುಂದ ಗ್ರಾಮದ ಶಿವಾನಂದ(22) ಯುವ ರೈತ ಜಮೀನು ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಇನ್ನೇನು ಮನೆಗೆ ಹೋಗಬೇಕು ಎಂದು ಕಡಲು ಮೇಲ್ಭಾಗದ ರಸ್ತೆಯಲ್ಲಿ ಟ್ರಾಕ್ಟರ್ ಚಲಾಯಿಸಿಕೊಂಡು ಬರುತ್ತಿದ್ದಂತೆ ಏಕಾಏಕಿ ನಿಯಂತ್ರಣ ಕಳೆದುಕೊಂಡ ಟ್ರಾಕ್ಟರ್ ಕಾಲುವೆಗೆ ಬಿದ್ದು ಪಲ್ಟಿಯಾಗಿದೆ. ಪರಿಣಾಮ ಶಿವಾನಂದ ಟ್ರಾಕ್ಟರ್ ಅಡಿ ಸಿಲುಕಿ ಮೃತ ಪಟ್ಟಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ- ಗೇಡೌನ್‌ ಮೇಲೆ ಅಧಿಕಾರಿಗಳ ದಾಳಿ

    ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದರು. ಬಳಿಕ ಜೆಸಿಬಿ ಮೂಲಕ ಟ್ರಾಕ್ಟರ್‌ ಮೇಲಕ್ಕೆತ್ತಲಾಯಿತು. ಶಿವಾನಂದರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಒಂದೇ ದಿನ 2 ಸರಕಳ್ಳತನ – ಆರೋಪಿಗಳು ಪರಾರಿ

  • ಸಾಲದ ಬಾಧೆ – ವಿಷ ಸೇವಿಸಿ ರೈತ ಆತ್ಮಹತ್ಯೆ

    ಸಾಲದ ಬಾಧೆ – ವಿಷ ಸೇವಿಸಿ ರೈತ ಆತ್ಮಹತ್ಯೆ

    ಗದಗ: ಸಾಲದ ಬಾಧೆಗೆ ಓರ್ವ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ನಡೆದಿದೆ.

    ಮಾನಪ್ಪ ಲಮಾಣಿ ಮೃತ ದುರ್ದೈವಿ. ಅಕಾಲಿಕ ಮಳೆಯಿಂದಾಗಿ ನಿರೀಕ್ಷೆಗಿಂತ ಕಡಿಮೆ ಬೆಳೆ ಬಂದ ಹಿನ್ನಲೆ ಸುಮಾರು ಎರಡೂವರೆ ಎಕರೆ ಜಮೀನಿನಲ್ಲಿ ರೈತ ಮೆಕ್ಕೆಜೋಳ ಬೆಳೆದಿದ್ದರು. ಹೀಗಾಗಿ ಸುಮಾರು 4 ಲಕ್ಷ ರೂ. ಸಾಲ ಮಾಡಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಎನ್‌ಸಿಎಯಲ್ಲಿ ಪಾಠ ಆರಂಭಿಸಿದ ಲಕ್ಷ್ಮಣ್

    ವಿಷ ಸೇವಿಸಿದ ಕೂಡಲೇ ಮಾನಪ್ಪರನ್ನು ಕುಟುಂಬಸ್ಥರು ಆಸ್ಪತ್ರೆಗೆ ರವಾನಿಸಿದ್ದು, ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ರೈತ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

    ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕೃಷಿ ಕಾಯ್ದೆ ಹೋರಾಟದಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ ಜೊತೆ ಉದ್ಯೋಗ ನೀಡಿ: ರಾಹುಲ್ ಗಾಂಧಿ

    ಕೃಷಿ ಕಾಯ್ದೆ ಹೋರಾಟದಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ ಜೊತೆ ಉದ್ಯೋಗ ನೀಡಿ: ರಾಹುಲ್ ಗಾಂಧಿ

    ನವದೆಹಲಿ: ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ಆಢಳಿತ ಪಕ್ಷಕ್ಕೆ ಒತ್ತಾಯ ಮಾಡಿದ್ದಾರೆ.

    ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 700 ರೈತರು ಸಾವನ್ನಪ್ಪಿದ್ದಾರೆ. ಪ್ರಧಾನಿಯವರು ದೇಶದ ರೈತರಲ್ಲಿ ಕ್ಷಮೆಯಾಚಿಸಿದ್ದಾರೆ. ತಾನು ತಪ್ಪು ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ. ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯೊಂದಿಗೆ ಸೇರಿ ಅಕ್ಕನನ್ನು ಕೊಂದ ತಮ್ಮ- ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ

    ಮೃತ ರೈತರಿಗೆ ಪರಿಹಾರ ನೀಡಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನವೆಂಬರ್ 30ರಂದು ಕೃಷಿ ಸಚಿವರಾದ ನರೇಂದ್ರ ತೋಮರ್ ಮಾತನಾಡಿ ಪ್ರತಿಭಟನೆಯಲ್ಲಿ ಎಷ್ಟು ರೈತರು ಪ್ರಾಣಕಳೆದುಕೊಂಡರು, ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಪಂಜಾಬ್ ಸರ್ಕಾರವು ಸುಮಾರು 400 ರೈತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿರುವುದನ್ನು ನೋಡಿದ್ದೇವೆ. ಇದರಲ್ಲಿ 152 ಮಂದಿಯ ಕುಟುಂಬಗಳಿಗೆ ಉದ್ಯೋಗ ನೀಡಿದೆ. ನನ್ನ ಬಳಿ ಪಟ್ಟಿ ಇದೆ ಎಂದಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

    ನಾವು ಹರಿಯಾಣದ 70 ರೈತರ ಮತ್ತೊಂದು ಪಟ್ಟಿಯನ್ನು ಮಾಡಿದ್ದೇವೆ. ಆದರೆ, ನೀವು ಮೃತ ರೈತರ ಮಾಹಿತಿ ಇಲ್ಲ ಎನ್ನುತ್ತಿದ್ದೀರಿ. ರೈತರಿಗೆ ಅವರ ಹಕ್ಕುಗಳನ್ನು ನೀಡಬೇಕು. ಅವರಿಗೆ ಪರಿಹಾರದ ಜೊತೆಗೆ ಅವರ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.  ಇದನ್ನೂ ಓದಿ: ತಾಯಿಯೊಂದಿಗೆ ಸೇರಿ ಅಕ್ಕನನ್ನು ಕೊಂದ ತಮ್ಮ- ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ